Tag: ಕ್ಯಾಲೆಂಡರ್

  • ದೇಶ, ವಿದೇಶಿ ಕನ್ನಡಿಗರ ಮನ ಗೆದ್ದಿದೆ ಗದಗ ಕ್ಯಾಲೆಂಡರ್‌, ಪಂಚಾಂಗಗಳು!

    ದೇಶ, ವಿದೇಶಿ ಕನ್ನಡಿಗರ ಮನ ಗೆದ್ದಿದೆ ಗದಗ ಕ್ಯಾಲೆಂಡರ್‌, ಪಂಚಾಂಗಗಳು!

    ಗದಗ: ವರ್ಷ ಬರುತ್ತಿದ್ದಂತೆ ಮುದ್ರಣ ಕಾಶಿಯಲ್ಲಿ ತಯಾರಾಗುವ ಕ್ಯಾಲೆಂಡರ್, ಮಿನಿಡೈರಿ ಹಾಗೂ ತೂಗು ಪಂಚಾಂಗಗಳಿಗೆ ಎಲ್ಲಿಲ್ಲದ ಬೇಡಿಕೆ. ರಾಜ್ಯದಲ್ಲೇ ಅತಿ ಹೆಚ್ಚು ಮುದ್ರಣಾಲಯಗಳನ್ನು ಹೊಂದಿದ ಮುದ್ರಣ ಕಾಶಿ (Mudrana Kashi) ಎಂದೇ ಹೆಗ್ಗಳಿಕೆ ಗದಗ ಜಿಲ್ಲೆ ಪಡೆದುಕೊಂಡಿದೆ.

    ಜಿಲ್ಲೆಯಲ್ಲಿ ಸುಮಾರು ನೂರಾರು ಮುದ್ರಣಾಲಯಗಳು ಹಾಗೂ ಪ್ರಕಾಶನಗಳಿವೆ. ಸ್ವಾತಂತ್ರ್ಯ ಪೂರ್ವದಿಂದಲೂ ಅನೇಕ ಪ್ರಿಂಟಿಂಗ್ ಪ್ರೆಸ್‌ಗಳು (Printing Press) ಇಲ್ಲಿ ಸ್ಥಾಪನೆಯಾಗಿದ್ದವು. ಈ ಪರಂಪರೆ ಈಗಲೂ ಮುಂದುವರಿದಿದ್ದು ನೂರಾರು ಪ್ರಿಂಟಿಂಗ್‌ ಪ್ರೆಸ್‌ಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಂಕೇಶ್ವರ ಪ್ರಿಂಟಿಂಗ್‌ ಪ್ರೆಸ್ (Sankeshwar Printing Press) ಮಾಲಿಕ ಬಿ.ಎಂ ಸಂಕೇಶ್ವರ್‌, ಕ್ಯಾಲೆಂಡರ್, ಮಿನಿಡೈರಿ, ತೂಗು ಪಂಚಾಂಗಗಳಿಗೆ ಗದಗ ಜಿಲ್ಲೆ ಪ್ರಸಿದ್ಧಿ ಪಡೆದಿದೆ. ಹೊಸವರ್ಷ ಬರುವ ಮೂರು ತಿಂಗಳ ಮೊದಲೇ ಇಲ್ಲಿ ಕ್ಯಾಲೆಂಡರ್‌ ಹಾಗೂ ಪಂಚಾಂಗಗಳು ಪ್ರಿಂಟ್ ಆಗುತ್ತವೆ. ರಾಜ್ಯದ ನಾನಾ ಜಿಲ್ಲೆಗಳಿಗೆ ಅಷ್ಟೇ ಅಲ್ಲದೇ ದೇಶ ವಿದೇಶಿ ಕನ್ನಡಿಗರ ಮನೆಗಳಲ್ಲಿ ಗದಗ ಜಿಲ್ಲೆ ಕ್ಯಾಲೆಂಡರ್‌ಗಳು (Calendar) ಮನೆಮಾತಾಗಿವೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್‌ ಸೇನಾ ಕಾರ್ಯಾಚರಣೆ – ಎರಡು ದಿನದಲ್ಲಿ 22 ಉಗ್ರರ ಹತ್ಯೆ, 6 ಯೋಧರ ಸಾವು

    ದಿನಾಂಕ, ತಿಥಿ, ನಕ್ಷತ್ರ, ವಾರ, ರಾಶಿ ಭವಿಷ್ಯ, ಗ್ರಹಣ, ಶುಭ, ಅಶುಭ ಫಲಗಳು, ಮಳೆ, ಜಾತ್ರೆ, ಉತ್ಸವಗಳು, ಜಯಂತಿಗಳು ಸೇರಿದಂತೆ ಇತರೇ ದಿನಚರಿಗಳ ಬಗ್ಗೆ ಅನುಭವಿ ಜೋತಿಷ್ಯರಿಂದ ಮಾಹಿತಿ ಪಡೆದು ಪ್ರಿಂಟ್ ಮಾಡಿಸುತ್ತಾರೆ. ಗದಗ ನಗರದಲ್ಲಿ ಹೆಚ್ಚು ಕಾರ್ಮಿಕರು ಕೆಲಸ ಮಾಡುವುದು ಪ್ರಿಂಟಿಂಗ್‌ ಪ್ರೆಸ್‌ಗಳಲ್ಲಿ ಮಾತ್ರ. ಸಾವಿರಾರು ಕುಟುಂಬಗಳು ಇಲ್ಲಿಯ ಪ್ರಿಂಟಿಂಗ್ ಪ್ರೆಸ್ ಕೆಲಸದಿಂದಲೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲೇ ಮೊದಲ ಬಾರಿಗೆ ಪಂಚಾಂಗ ಮತ್ತು ತೂಗು ಪಂಚಾಂಗ ತಯಾರಾಗಿದ್ದು ಗದಗ ಜಿಲ್ಲೆಯಲ್ಲಿ. ಎಲ್ಲಾ ಜಾತಿ, ಧರ್ಮ, ವರ್ಗದವರಿಗೂ ಪೂರಕವಾಗುವಂತಹ ಪಂಚಾಂಗಗಳು ತಯಾರಾಗುತ್ತವೆ. ದೇಶ ವಿದೇಶಗಳಲ್ಲೂ ಗದಗ ಜಿಲ್ಲೆಯ ಪಂಚಾಂಗಗಳು ಮನೆಮಾತಾಗಿರುವುದು ಹೆಮ್ಮೆಯ ವಿಷಯ ಎನ್ನುತ್ತಿದ್ದಾರೆ ಕೆಲಸಗಾರರು.

    ಗದಗ ಜಿಲ್ಲೆಯಿಂದ ಪ್ರತಿಹೊಸ ವರ್ಷದ ವೇಳೆ ಸುಮಾರು 45 ರಿಂದ 50 ಲಕ್ಷ ರೂ.ವರೆಗೆ ಕ್ಯಾಲೆಂಡರ್ ಹಾಗೂ ಪಂಚಾಂಗ ಮಾರಾಟವಾಗುತ್ತವೆ. ಇಲ್ಲಿಯ ಮುದ್ರಣಾಲಯಗಳಲ್ಲಿ ಕ್ಯಾಲೆಂಡರ್ ಹಾಗೂ ಪಂಚಾಂಗವಷ್ಟೇ ಅಲ್ಲ ಶಾಲಾ-ಕಾಲೇಜುಗಳ ಪಠ್ಯ ಪುಸ್ತಕಗಳು ತಯಾರಾಗುತ್ತವೆ. ಒಟ್ಟಿನಲ್ಲಿ ಗದಗ ಜಿಲ್ಲೆಯಿಂದ ತಯಾರದ ಕ್ಯಾಲೆಂಡರ್, ಪಂಚಾಂಗಗಳು ದೇಶ, ವಿದೇಶಿ ಕನ್ನಡಿಗರ ಮನೆಗಳಲ್ಲಿ ರಾರಾಜಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

  • ಏಕೆ ಬಾಸ್-ಬಾಸ್ ಅಂತಾ ಒದ್ದಾಡ್ತಿರಾ? – ಅಭಿಮಾನಿಗಳಿಗೆ ಬುದ್ಧಿ ಹೇಳಿದ ಶಿವಣ್ಣ

    ಏಕೆ ಬಾಸ್-ಬಾಸ್ ಅಂತಾ ಒದ್ದಾಡ್ತಿರಾ? – ಅಭಿಮಾನಿಗಳಿಗೆ ಬುದ್ಧಿ ಹೇಳಿದ ಶಿವಣ್ಣ

    ಮೈಸೂರು: ನಗರದಲ್ಲಿ ಜ್ವಾಲಾಮುಖಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ (Rajkumar Fans Association) ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ನಟ ಡಾ.ಶಿವರಾಜ್ ಕುಮಾರ್ (Shivarajkumar) 2023ರ ನೂತನ ವರ್ಷದ ಕ್ಯಾಲೆಂಡರ್ (Calendar 2023) ಬಿಡುಗಡೆಗೊಳಿಸಿದರು.

    ಬಳಿಕ ಮಾತನಾಡಿದ ಅವರು, ಎಲ್ಲರಿಗೂ ಬಾಸ್ ಒಬ್ಬರೇ ಅದು ದೇವರು. ಏಕೆ ಬಾಸ್-ಬಾಸ್ ಅಂತಾ ಒದ್ದಾಡ್ತೀರಾ? ಎಂದು ಹೇಳಿದ್ದಾರೆ. ಇದನ್ನೂ ಓದಿ: `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್

    ಎಲ್ಲರ ಮನೆಯಲ್ಲೂ ಒಬ್ಬೊಬ್ಬ ಬಾಸ್ ಇರುತ್ತಾನೆ. ಎಲ್ಲರ ಹೃದಯದಲ್ಲೂ ಒಬ್ಬ ಬಾಸ್ ಇರ್ತಾನೆ. ಅಲ್ಲಿಗೆ ಅವನೇ ಬಾಸ್ ಆಗಿರ್ತಾನೆ. ಅದು ಬಿಟ್ಟು ನಾನೊಬ್ಬ ಬಾಸ್, ಇನ್ನೊಬ್ಬ ಬಾಸ್ ಅನ್ನೋದಲ್ಲ ಎಂದು ಅಭಿಮಾನಿಗಳಿಗೆ ತಿಳುವಳಿಕೆ ನೀಡಿದ್ದಾರೆ. ಇದನ್ನೂ ಓದಿ: `ಕಾಂತಾರ’ ನಮ್ಮ ಕನ್ನಡದ ಹೆಮ್ಮೆ ಎಂದ ಭರಾಟೆ ಬ್ಯೂಟಿ ಶ್ರೀಲೀಲಾ

    ಕಾರ್ಯಕ್ರಮ ಆಯೋಜಕರಾಗಿದ್ದ ಮೈಸೂರು ರಿಫ್ರೆಶ್‌ಮೆಂಟ್ ಮಾಲೀಕ ವಿಶ್ವ ಅವರನ್ನು ನಮ್ಮ ಬಾಸ್ ಅಂದ ಯುವಕನಿಗೆ ಸಲಹೆ ನೀಡುತ್ತಾ, ಅಭಿಮಾನಿಗಳಿಗೂ ಬುದ್ದಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಾಸಕ ಡಿ.ಸುಧಾಕರ್ ಯುಗಾದಿ ಹಬ್ಬಕ್ಕೆ ವಿತರಿಸಿದ್ದ ಸೀರೆ, ಪಂಚೆಗೆ ಗ್ರಾಮಸ್ಥರಿಂದ ಬೆಂಕಿ

    ಶಾಸಕ ಡಿ.ಸುಧಾಕರ್ ಯುಗಾದಿ ಹಬ್ಬಕ್ಕೆ ವಿತರಿಸಿದ್ದ ಸೀರೆ, ಪಂಚೆಗೆ ಗ್ರಾಮಸ್ಥರಿಂದ ಬೆಂಕಿ

    ಚಿತ್ರದುರ್ಗ: ಹಿರಿಯೂರಿನ ಶಾಸಕ ಡಿ.ಸುಧಾಕರ್ ಚುನಾವಣೆಗೂ ಮುನ್ನವೇ ಮತದಾರರನ್ನು ಓಲೈಸಲು ಯುಗಾದಿ ಹಬ್ಬದ ಉಡುಗೊರೆಯಾಗಿ ನೀಡಿರೋ ಸೀರೆ, ಪಂಚೆಗಳಿಗೆ ಗ್ರಾಮಸ್ಥರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಧಾಕರ್ ಅವರ ಭಾವಚಿತ್ರ ಹಾಗೂ ಕ್ಯಾಲೆಂಡರ್‍ವುಳ್ಳ ಬ್ಯಾಗ್‍ಗಳಲ್ಲಿ ಸೀರೆ, ಪಂಚೆ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕ್ಷೇತ್ರದ ಎಲ್ಲಾ ಹಳ್ಳಿಗಳ ಮತದಾರರಿಗೂ ಕಳೆದ ಒಂದು ತಿಂಗಳಿಂದ ಹಂಚುತ್ತಿದ್ದಾರೆ.

    ಗುರುವಾರ ಸಂಜೆ ಪಿಟ್ಲಾಲಿ ಗ್ರಾಮದಲ್ಲಿ ಈ ಉಡುಗೊರೆಗಳನ್ನು ಮನೆಮನೆಗೂ ಸುಧಾಕರ್ ಬೆಂಬಲಿಗರು ತಲುಪಿಸಿದ್ರು. ಆದ್ರೆ ಗೆದ್ದ ಮೇಲೆ ಇಲ್ಲಿಯವರೆಗೂ ಈ ಗ್ರಾಮದತ್ತ ಸುಳಿಯದೇ ನಿರ್ಲಕ್ಷ್ಯ ತೋರಿರೋ ಶಾಸಕರ ವಿರುದ್ಧ ಆಕ್ರೋಶಗೊಂಡಿರೋ ಜನರು, ತಮಗೆ ನೀಡಿದ್ದ ಉಡುಗೊರೆಗಳನ್ನು ಗ್ರಾಮದ ನಡುರಸ್ತೆಯಲ್ಲಿ ರಾಶಿ ಹಾಕಿ ಬೆಂಕಿಯಲ್ಲಿ ಸುಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.