Tag: ಕ್ಯಾಲಿಫೋರ್ನಿಯಾ

  • ಡಿವೈಡರ್‍ಗೆ ಡಿಕ್ಕಿಯಾಗಿ ಗಾಳಿಯಲ್ಲಿ ಹಾರಿ ಕಟ್ಟಡದ 2ನೇ ಮಹಡಿಯ ಗೋಡೆಯಲ್ಲಿ ಸಿಲುಕಿದ ಕಾರು!

    ಡಿವೈಡರ್‍ಗೆ ಡಿಕ್ಕಿಯಾಗಿ ಗಾಳಿಯಲ್ಲಿ ಹಾರಿ ಕಟ್ಟಡದ 2ನೇ ಮಹಡಿಯ ಗೋಡೆಯಲ್ಲಿ ಸಿಲುಕಿದ ಕಾರು!

    ವಾಷಿಂಗ್ಟನ್: ಅಪಘಾತಗಳು ನಡೆದಾಗ ವಾಹನಗಳು ನಜ್ಜುಗುಜ್ಜಾಗಿರೋದನ್ನ, ತಲೆಕೆಳಗಾಗಿ ಬಿದ್ದಿರೋದನ್ನ ನೋಡಿರ್ತೀರ. ಆದ್ರೆ ಇಲ್ಲೊಂದು ಕಾರ್ ಅಪಘಾತಕ್ಕೀಡಾದ ನಂತರ ಗಾಳಿಯಲ್ಲಿ ಹಾರಿ ಕಟ್ಟಡದ 2ನೇ ಮಹಡಿಯ ಗೋಡೆಯಲ್ಲಿ ಸಿಲುಕಿದೆ.

    ಭಾನುವಾರದಂದು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದೆ. ಡಿವೈಡರ್‍ಗೆ ಡಿಕ್ಕಿ ಹೊಡೆದ ಕಾರು ಮೇಲೆ ಗಾಳಿಯಲ್ಲಿ ಹಾರಿ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಡೆಂಟಿಸ್ಟ್ ಕಚೇರಿಯ ಗೋಡೆಯಲ್ಲಿ ಸಿಲುಕಿದೆ. ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಇದರ ಫೋಟೋಗಳನ್ನ ಕ್ಲಿಕ್ಕಿಸಿದ್ದು, ಬಿಳಿ ಬಣ್ಣದ ಕಾರು ಗೋಡೆಯಲ್ಲಿ ಸಿಲುಕಿ, ಹಿಂದಿನ ಭಾಗ ಹೊರಚಾಚಿಕೊಂಡಿರೋದನ್ನ ಕಾಣಬಹುದು.

    ಕ್ಯಾಲಿಫೋರ್ನಿಯಾದ ಸಾಂಟಾ ಅನಾದಲ್ಲಿ ಕಾರು ಅಪಘಾತಕ್ಕೀಡಾಗಿರುವ ಬಗ್ಗೆ ಬೆಳಗ್ಗೆ ಸುಮಾರು 5.30ರ ವೇಳೆಯಲ್ಲಿ ಕರೆ ಬಂತು. ಕಾರು ತುಂಬಾ ವೇಗವಾಗಿ ಚಲಿಸುತ್ತಿದ್ದು, ಡಿವೈಡರ್‍ಗೆ ಡಿಕ್ಕಿಯಾಗಿದೆ. ಕಾರ್ ಚಾಲಕ ಡಿವೈಡರ್ ಪಕ್ಕದ ರಸ್ತೆಯಲ್ಲಿ ಬರುತ್ತಿರಲಿಲ್ಲ. ಬದಲಿಗೆ ಮತ್ತೊಂದು ರಸ್ತೆಯಿಂದ ಬಂದು, ಟಿ- ಬೋನ್ ಕ್ರಾಶ್ ರೀತಿಯಲ್ಲಿ ಅಪಘಾತಕ್ಕೀಡಾಗಿದೆ ಎಂದು ಆರೇಂಜ್ ಕೌಂಟಿ ಫೈರ್ ಅಥಾರಿಟಿಯ ಅಧಿಕಾರಿ ಸ್ಟೀಫನ್ ಹಾರ್ನರ್ ಹೇಳಿದ್ದಾರೆ.

    ಡಿವೈಡರ್‍ಗೆ ಡಿಕ್ಕಿಯಾದ ರಭಸಕ್ಕೆ ಕಾರ್ ಮೇಲೆ ಗಾಳಿಯಲ್ಲಿ ಹಾರಿದ್ದು, ಕಟ್ಟಡದ ಸಣ್ಣ ಕಚೇರಿಯ ಗೋಡೆಯಲ್ಲಿ ತೂರಿಕೊಂಡಿದೆ. ಘಟನೆಯಿಂದ ಸಣ್ಣ ಪ್ರಮಾಣದ ಬೆಂಕಿ ಹೊತ್ತಿಕೊಂಡಿತ್ತು. ಅದನ್ನ ಕೂಡಲೇ ಆರಿಸಲಾಯ್ತು ಎಂದು ಹಾರ್ನರ್ ತಿಳಿಸಿದ್ದಾರೆ.

     

    ಕಾರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಒಬ್ಬರು ಹೊರಗೆ ಬರುವಲ್ಲಿ ಯಶಸ್ವಿಯಾಗಿದ್ದರು. ಮತ್ತೊಬ್ಬರು ಸುಮಾರು 1 ಗಂಟೆ ಕಾಲ ಕಾರಿನೊಳಗೆ ಸಿಲುಕಿದ್ದರು. ಭಾರೀ ಗಾತ್ರದ ಸಾಧನವನ್ನ ಬಳಸಿ ವಾಹನವನ್ನ ಸಮತೋಲನಕ್ಕೆ ತರಲಾಯಿತು. ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು ಎಂದು ಅವರು ಹೇಳಿದ್ದಾರೆ.

     

    ನನಗೆ ಕಾರಿನಲ್ಲಿದ್ದವರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಹಾರ್ನರ್ ಹೇಳಿದ್ದಾರೆ. ಆದ್ರೆ ಸಾಂಟಾ ಆನಾ ಪೊಲೀಸರು ಪ್ರತಿಕ್ರಿಯಿಸಿ, ಚಾಲಕ ಮಾದಕದ್ರವ್ಯ ಸೇವನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆಂದು ತಿಳಿಸಿದ್ದಾರೆ.

    ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಬಳಸಿ ಕಾರನ್ನ ಕಡ್ಡಡದಿಂದ ಎಳೆದು ಕೆಳಗೆ ತಂದಿದ್ದಾರೆ. ಫೈಲ್‍ಗಳನ್ನ ಇಡಲು ಬಳಸಾಗ್ತಿದ್ದ ಕಟ್ಟಡದ ಎರಡನೇ ಮಹಡಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಹಾರ್ನರ್ ತಿಳಿಸಿದ್ದಾರೆ.

  • ಧಗಧಗನೆ ಉರಿಯುತ್ತಿದ್ದ ಕಾಳ್ಗಿಚ್ಚಿನಿಂದ ಮೊಲವನ್ನು ರಕ್ಷಿಸಿದ ವ್ಯಕ್ತಿ: ವಿಡಿಯೋ ವೈರಲ್

    ಧಗಧಗನೆ ಉರಿಯುತ್ತಿದ್ದ ಕಾಳ್ಗಿಚ್ಚಿನಿಂದ ಮೊಲವನ್ನು ರಕ್ಷಿಸಿದ ವ್ಯಕ್ತಿ: ವಿಡಿಯೋ ವೈರಲ್

    ಕ್ಯಾಲಿಫೋರ್ನಿಯಾ: ತನ್ನ ಪ್ರಾಣವನ್ನು ಲೆಕ್ಕಿಸದೇ ವ್ಯಕ್ತಿಯೊಬ್ಬ ಧಗಧಗನೆ ಉರಿಯುತ್ತಿದ್ದ ಕಾಳ್ಗಿಚ್ಚಿನಿಂದ ಮೊಲವನ್ನು ರಕ್ಷಿಸಿದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

    ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡಿರೋ ಕಾಳ್ಗಿಚ್ಚಿನಿಂದಾಗಿ ಮೊಲವೊಂದು ದಾರಿ ತಪ್ಪಿದ್ದು, ಬೆಂಕಿಯ ಕಡೆಗೆ ಓಡಿ ಹೋಗುತ್ತಿತ್ತು. ಆಗ ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿ ಮೊಲವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ನ್ಯಾಷನಲ್ ಜಿಯೋಗ್ರಫಿ ಟ್ವಿಟ್ಟರ್ ಖಾತೆಯಲ್ಲಿ ಗುರುವಾರದಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ 35 ಸೆಕೆಂಡ್ ವಿಡಿಯೋದಲ್ಲಿ ವ್ಯಕ್ತಿ ಆ ಚಿಕ್ಕ ಪ್ರಾಣಿಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂಬುದು ಸೆರೆಯಾಗಿದೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋ ಸುಮಾರು 6,000 ಬಾರಿ ರೀಟ್ವೀಟ್ ಆಗಿದ್ದು, 13,000ಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

    ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 4 ದಿನಗಳಿಂದ ಕಾಳ್ಗಿಚ್ಚು ಆವರಿಸಿದೆ. ಈ ಬೆಂಕಿಯಿಂದ ನೂರಾರು ಮನೆಗಳಿಗೆ ಹಾನಿಯಾಗಿದೆ. ಅಷ್ಟೇ ಅಲ್ಲದೇ ಲಾಸ್-ಏಂಜಲೀಸ್ ನಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. 2 ಲಕ್ಷಗಿಂತ ಹೆಚ್ಚು ನಿವಾಸಿಗಳನ್ನ ಸ್ಥಳಾಂತರಿಸಲಾಗಿದೆ.

  • ಪಾಸ್‍ವರ್ಡ್ ಬೇಡ, ಮುಖ ತೋರಿಸಿದ್ರೆ ಓಪನ್ ಆಗುತ್ತೆ ಫೇಸ್‍ಬುಕ್

    ಪಾಸ್‍ವರ್ಡ್ ಬೇಡ, ಮುಖ ತೋರಿಸಿದ್ರೆ ಓಪನ್ ಆಗುತ್ತೆ ಫೇಸ್‍ಬುಕ್

    ಕ್ಯಾಲಿಫೋರ್ನಿಯಾ: ಇನ್ನು ಮುಂದೆ ನೀವು ಫೇಸ್ ಬುಕ್ ನಲ್ಲಿ ಪಾಸ್‍ವರ್ಡ್ ಗಳನ್ನು ಒತ್ತಿ ಖಾತೆಯನ್ನು ಓಪನ್ ಮಾಡುವ ಅಗತ್ಯ ಇಲ್ಲ. ಬದಲಾಗಿ ಕಂಪ್ಯೂಟರ್/ಮೊಬೈಲ್ ಮುಂದೆ ನೀವು ಮುಖವನ್ನು ತೋರಿಸಿದರೆ ನಿಮ್ಮ ಖಾತೆ ಓಪನ್ ಆಗುತ್ತದೆ.

    ಹೌದು. ವಿಶ್ವದ ನಂಬರ್ ಒನ್ ಸಾಮಾಜಿಕ ಜಾಲತಾಣವಾಗಿರುವ ಫೇಸ್‍ಬುಕ್‍ಫೇಸ್‍ಲಾಕ್ ಮೂಲಕ ಬಳಕೆದಾರರ ಖಾತೆ ಓಪನ್ ಆಗುವಂತಹ ವಿಶೇಷತೆಯನ್ನು ಪರೀಕ್ಷೆ ಮಾಡುತ್ತಿದ್ದು, 2018ರ ಮೇ ತಿಂಗಳ ಅಂತ್ಯದಲ್ಲಿ ಈ ಸೇವೆ ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆಯಿದೆ.

    ಟೆಕ್ ಸುದ್ದಿಗಳನ್ನು ಪ್ರಕಟಿಸುವ ಟೆಕ್‍ಕ್ರಂಚ್ ವೆಬ್‍ಸೈಟ್, ನಮ್ಮ ಕಂಪನಿಯು ಕೋಟ್ಯಾಂತರ ಬಳಕೆದಾರನ್ನು ಹೊಂದಿದೆ. ದಿನೇ ದಿನೇ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇದೆ. ಹೀಗಾಗಿ ನಮ್ಮ ಕಂಪನಿಯ ಬಳಕೆದಾರರ ಖಾತೆಗೆ ಮತ್ತಷ್ಟು ಸುರಕ್ಷೆ ನೀಡಲು ಹೊಸ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತಿದೆ ಎಂದು ಫೇಸ್‍ಬುಕ್ ತಿಳಿಸಿದೆ ಎಂದು ವರದಿ ಮಾಡಿದೆ.

    ಫೇಸ್‍ಬುಕ್ ಖಾತೆಯನ್ನು ಇಷ್ಟು ದಿನ ಪಾಸ್‍ವರ್ಡ್ ಮೂಲಕ ತೆರೆಯಬೇಕಾಗಿತ್ತು. ಈ ವೇಳೆ ಅನೇಕರು ತಮ್ಮ ಪಾಸ್‍ವರ್ಡ್‍ನ್ನು ನಕಲು ಮಾಡುವ ಸಂಭವವಿತ್ತು. ಹೀಗಾಗಿ ಖಾತೆದಾರರ ಮುಖವೇ ಪಾಸ್‍ವರ್ಡ್ ಮಾಡಲಾಗುತ್ತಿರುವ ಪ್ರಯತ್ನ ಸದ್ಯ ಅನ್ವೇಷಣೆ ಹಂತದಲ್ಲಿದ್ದು, ಪ್ರಯೋಗಾತ್ಮಕ ಪರೀಕ್ಷೆ ನಡೆಯುತ್ತಿದೆ. ಫೇಸ್‍ಬುಕ್ ಖಾತೆದಾರರಿಗೆ ಸುಲಭವಾಗಿ ಬಳಕೆ ಮಾಡುವ ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.

    ವರದಿ ಹೇಳುವಂತೆ, ಕೆಲವು ಸಂದರ್ಭಗಳಲ್ಲಿ ಬಳಕೆದಾರರ ಖಾತೆಯನ್ನು ಅನ್‍ಲಾಕ್ ಮಾಡುವ ವೇಳೆ ಬಳಕೆದಾರರ ಗುರುತು ಕೇಳುತ್ತದೆ. ಬಳಕೆದಾರರ ಕೋಡ್‍ನ್ನು ಸ್ವೀಕರಿಸಿ ವಿಶ್ವಾಸಾರ್ಹ ಸ್ನೇಹಿತರನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. ಇಷ್ಟೆ ಅಲ್ಲದೇ ಬಳಕೆದಾರರ ಮುಖವನ್ನು ಗುರುತಿಸಲು ವಿಡಿಯೋ ಚಾಟ್ ತರಲು ಫೇಸ್‍ಬುಕ್ ಮುಂದಾಗುತ್ತಿದೆ ಎಂದು ಹೇಳಿದೆ.

  • ಮೋದಿ ವಿರುದ್ಧ ವಾಗ್ದಾಳಿ, ಅಮೆರಿಕದಲ್ಲಿ ವಂಶ ರಾಜಕಾರಣದ ಬಗ್ಗೆ ರಾಹುಲ್ ಮಾತು

    ಮೋದಿ ವಿರುದ್ಧ ವಾಗ್ದಾಳಿ, ಅಮೆರಿಕದಲ್ಲಿ ವಂಶ ರಾಜಕಾರಣದ ಬಗ್ಗೆ ರಾಹುಲ್ ಮಾತು

    ಕ್ಯಾಲಿಫೋರ್ನಿಯಾ: ನಾನು ಮಾಡುವ ಕೆಲಸವನ್ನು ವಂಶ ರಾಜಕಾರಣದ ಡಿಎನ್‍ಎ ಮೂಲಕ ಗುರುತಿಸುವ ಪ್ರವೃತ್ತಿ ಅಂತ್ಯವಾಗಬೇಕು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಅಮೇರಿಕ ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಬರ್ಕ್‍ಲೇ ವಿಶ್ವವಿದ್ಯಾಲಯದಲ್ಲಿ ‘ಪ್ರಚಲಿತ ಭಾರತ ಮತ್ತು ವಿಶ್ವದ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರದ ಮುಂದಿನ ಹಾದಿ’ ವಿಚಾರದ ಬಗ್ಗೆ ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

    ಭಾರತದಲ್ಲಿ ವಂಶ ರಾಜಕಾರಣ ಹೆಚ್ಚು ಪ್ರಚಲಿತದಲ್ಲಿದೆ. ಉದಾಹರಣೆ ಅಖಿಲೇಶ್ ಯಾದವ್ (ಮುಲಾಯಂ ಸಿಂಗ್ ಯಾದವ್ ಅವರ ಮಗ ಸಮಾಜವಾದಿ ಪಕ್ಷದ ಮುಖ್ಯಸ್ಥರು), ಎಂಕೆ ಸ್ಟಾಲಿನ್ (ಕರುಣಾನಿಧಿ ಅವರ ಮಗ ಡಿಎಂಕೆ ಪಕ್ಷದ ಮುಖ್ಯಸ್ಥ), ಅಭಿಷೇಕ್ ಬಚ್ಚನ್ (ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಅವರ ಮಗ), ಮುಖೇಶ್ ಮತ್ತು ಅನಿಲ್ (ಉದ್ಯಮಿ ಅಂಬಾನಿ ಮಕ್ಕಳು) ಹೀಗೆ ಭಾರತ ದೇಶವು ಸಾಗುತ್ತಿದೆ ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

    ನೋಟು ನಿಷೇಧದಿಂದಾಗಿ ದೇಶದ ಅಭಿವೃದ್ಧಿ ದರ ಕಡಿಮೆಯಾಗಿದೆ. ಅವೈಜ್ಞಾನಿಕವಾಗಿ ಜಾರಿ ಮಾಡಿದ ಜಿಎಸ್‍ಟಿಯಿಂದಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು 9 ವರ್ಷಗಳ ಕಾಲ ಯುಪಿಎ ಸರ್ಕಾರ ಮಾಡಿದ್ದ ಕೆಲಸವನ್ನು ಈಗಿನ ಮೋದಿ ಕೇವಲ 30 ದಿನಗಳಲ್ಲಿ ಹಾಳುಗೆಡವಿದೆ ಎಂದು ಹೇಳುವ ಮೂಲಕ ಟೀಕಿಸಿದರು.

    ಕಾಂಗ್ರೆಸ್ ಸರ್ಕಾರ ಯಾವುದೇ ಯೋಜನೆ ಆರಂಭಿಸುವ ಮೊದಲು ಚರ್ಚಿಸುತಿತ್ತು. ಆದರೆ ಮೋದಿ ಸರ್ಕಾರ ಚರ್ಚೆ ನಡೆಸದೇ ಮೂಗಿನ ನೇರಕ್ಕೆ ಯೋಚಿಸಿ ಯೋಜನೆಗಳು ಆರಂಭಿಸುತ್ತಿದೆ ಎಂದು ಹೇಳುವ ಮೂಲಕ ವಾಗ್ದಳಿ ನಡೆಸಿದರು.

    ಮೋದಿ ನನಗಿಂತ ಉತ್ತಮ ಮಾತುಗಾರ ಎನ್ನುವುದರಲ್ಲಿ ಸಂದೇಹ ಇಲ್ಲ. ಆದರೆ ಸುಮ್ಮನೆ ಮಾತನಾಡಿದರೆ ಏನು ಪ್ರಯೋಜನವಿಲ್ಲ. ಜನರ ಜೊತೆ ಸೇರಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

     

  • ಸ್ಪೀಡ್ ರೈಡಿಂಗ್: ಶೇಕ್ ಆಗಿ ತಿರುಗಿ, ತಿರುಗಿ ಬೈಕ್ ಪಲ್ಟಿ! ವಿಡಿಯೋ ನೋಡಿ

    ಸ್ಪೀಡ್ ರೈಡಿಂಗ್: ಶೇಕ್ ಆಗಿ ತಿರುಗಿ, ತಿರುಗಿ ಬೈಕ್ ಪಲ್ಟಿ! ವಿಡಿಯೋ ನೋಡಿ

    ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಬೈಕ್ ಸವಾರನೊಬ್ಬ ವೇಗವಾಗಿ ರೈಡ್ ಮಾಡುವ ವೇಳೆ ರಸ್ತೆಯಲ್ಲಿ ಬೀಳುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ.

    ಕ್ಯಾಲಿಫೋರ್ನಿಯಾ ಸಕ್ರಾಮೆಂಟೊ ಎಂಬಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದು ಈಗ ಯೂಟ್ಯೂಬ್‍ಗೆ ಅಪ್ಲೋಡ್ ಮಾಡಿದ್ದಾರೆ.

    ಕಾರನ್ನು ಹಿಂದಿಕ್ಕಿ ವೇಗವಾಗಿ ಹೋಗುತ್ತಿರಬೇಕಾದರೆ ಬೈಕ್ ಅಲುಗಾಡಿದೆ. ಅಲುಗಾಡುತ್ತಿದ್ದಾಗ ಸವಾರ ಬೈಕನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾನೆ. ಓವರ್ ಸ್ಪೀಡ್ ಇದ್ದ ಕಾರಣ ನಿಯಂತ್ರಣಕ್ಕೆ ಸಿಗದ ಬೈಕ್ ತಿರುಗಿ ತಿರುಗಿ ರಸ್ತೆಗೆ ಪಲ್ಟಿಯಾಗಿದೆ.

    ರಸ್ತೆಗೆ ಬಿದ್ದ ಸವಾರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಜೂನ್ 30 ರಂದು ಈ ವಿಡಿಯೋ ಅಪ್ಲೋಡ್ ಆಗಿದ್ದು, ಇದೂವರೆಗೂ 7 ಲಕ್ಷ ಕ್ಕೂ ಅಧಿಕ ವ್ಯೂ ಆಗಿದೆ.

  • ಅಮೆರಿಕದಲ್ಲಿ ಮಂಗಳೂರು ದಂಪತಿಯ ಬರ್ಬರ ಹತ್ಯೆ

    ಅಮೆರಿಕದಲ್ಲಿ ಮಂಗಳೂರು ದಂಪತಿಯ ಬರ್ಬರ ಹತ್ಯೆ

    – ಮಗಳ ಮಾಜಿ ಪ್ರಿಯಕರನಿಂದ ಗುಂಡು
    – ಪೊಲೀಸ್ ಕಾರ್ಯಾಚರಣೆಯಲ್ಲಿ ಆರೋಪಿ ಬಲಿ

    ಮಂಗಳೂರು: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಂಗಳೂರಿನ ಬಜ್ಪೆ ಮೂಲದ ದಂಪತಿಯನ್ನು ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ.

    ಸಿಲಿಕಾನ್ ವ್ಯಾಲಿಯ ಟೆಕ್ ಎಕ್ಸಿಕ್ಯೂಟಿವ್, ನರೇನ್ ಪ್ರಭು ಮತ್ತು ರಾಯನ್ ಸಿಕ್ವೇರಾ ಪ್ರಭು ಎನ್ನುವ ದಂಪತಿಯನ್ನು ಪುತ್ರಿ ರಾಶೇಲ್‍ಳ ಮಾಜಿ ಪ್ರಿಯಕರ ಮಿರ್ಜಾ ಟಾಟ್ಲರ್ ಶೂಟ್ ಮಾಡಿ ಕೊಂದಿದ್ದಾನೆ.

    ನಡೆದಿದ್ದೇನು?: ಮೂಲತಃ ಮಂಗಳೂರಿನ ಬಜ್ಪೆ ನಿವಾಸಿ ರಾಯನ್ ಸಿಕ್ವೇರಾ ಕುಟುಂಬ ಮುಂಬೈನ ಬಾಂದ್ರಾದಲ್ಲಿ ನೆಲೆಸಿತ್ತು. ಆದ್ರೆ ಮಗಳು ಅಮೆರಿಕಾದಲ್ಲಿದ್ದಳು. ಹೀಗಾಗಿ ಮಗಳನ್ನು ನೋಡಲೆಂದು ನರೇನ್ ಪ್ರಭು ಹಾಗೂ ರಾಯನ್ ಸಿಕ್ವೇರಾ ಅಮೆರಿಕಕ್ಕೆ ತೆರಳಿದ್ದರು. ಅಂತೆಯೇ ಸ್ಯಾನ್ ಜೋಸ್‍ನಲ್ಲಿರುವ ಮನೆಯಲ್ಲಿದ್ದ ವೇಳೆ ಮನೆಗೆ ನುಗ್ಗಿದ ಮಿರ್ಜಾ ಟಾಟ್ಲರ್, ಮೊದಲು ರಾಶೆಲ್ ತಂದೆ ಮೇಲೆ ಗುಂಡು ಹಾರಿಸಿದ್ದು, ಬಳಿಕ ಹೊರ ಬಂದ ತಾಯಿಯ ಮೇಲೂ ಗುಂಡು ಹಾರಿಸಿ ಕೊಲೆಗೈದಿದ್ದಾನೆ. ಅಲ್ಲದೇ ಅಲ್ಲೆ ಇದ್ದ ರಾಶೆಲ್‍ಳ 13 ವರ್ಷದ ತಮ್ಮನನ್ನು ಒತ್ತೆಯಾಳಾಗಿ ಇರಿಸಿಕೊಂಡ. ಬಳಿಕ ತಮ್ಮನ ಫೋನ್‍ನಿಂದ ಮಾಜಿ ಪ್ರಿಯತಮೆ ರಾಶೆಲ್‍ಗೆ ಫೋನ್ ಮಾಡಿದ್ದನು.

    ಇದರಿಂದ ಆತಂಕಗೊಂಡ ರಾಶೆಲ್ ಪೊಲಿಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಬಂದ ಸಂದರ್ಭ ಪೊಲೀಸರಿಗೂ ಗುಂಡು ಹಾರಿಸಲು ಯತ್ನಿಸಿದ್ದ. ಆರೋಪಿ ಸುಮಾರು 2 ಗಂಟೆ ಪೊಲೀಸರನ್ನು ಸತಾಯಿಸಿದ್ದಾನೆ. ಕೊನೆಗೆ ಶರಣಾಗಲು ಒಪ್ಪದ ಮಿರ್ಜಾ ಟಾಟ್ಲರ್‍ನನ್ನು ಕಿಟಕಿ ಮೂಲಕ ಶೂಟ್ ಮಾಡಿ ಪೊಲೀಸರು ಹತ್ಯೆ ಮಾಡಿದ್ದಾರೆ. ಸದ್ಯ ರಾಯನ್ ಸಿಕ್ವೇರಾ ಅವರ ತಾಯಿಯ ಮನೆ ಮಂಗಳೂರಿನಲ್ಲಿ ಸಾವಿನ ಸುದ್ದಿ ಇಂದು ಗೊತ್ತಾಗಿ ನೀರಸ ಮೌನ ಆವರಿಸಿದೆ.

    ಪೊಲೀಸರ ಪ್ರಕಾರ ಮಿರ್ಜಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಮೇ ನಾಲ್ಕರಂದು ಈ ಘಟನೆ ನಡೆದಿದ್ದು, ಈ ವೇಳೆ ಮನೆಯಲ್ಲಿ ರಾಶೆಲ್ ಇರಲಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ.

  • ಸೆಲ್ಫಿ ತೆಗೆಯುವಾಗ ಬ್ರಿಡ್ಜ್ ನಿಂದ 60 ಅಡಿ ಕೆಳಗೆ ಬಿದ್ರೂ ಮಹಿಳೆ ಪಾರು

    ಸೆಲ್ಫಿ ತೆಗೆಯುವಾಗ ಬ್ರಿಡ್ಜ್ ನಿಂದ 60 ಅಡಿ ಕೆಳಗೆ ಬಿದ್ರೂ ಮಹಿಳೆ ಪಾರು

    ವಾಷಿಂಗ್ಟನ್: ಮಹಿಳೆಯೊಬ್ಬರು ಸೆಲ್ಫಿ ತೆಗೆಯುವ ವೇಳೆ ಅಮೆರಿಕದ ಅತ್ಯಂತ ಎತ್ತರದ ಬ್ರಿಡ್ಜ್ ಗಳಲ್ಲಿ ಒಂದಾದ ಫಾರೆಸ್ಟ್ ಹಿಲ್ ಬ್ರಿಡ್ಜ್ ನಿಂದ ಕೆಳಗೆ ಬಿದ್ದರೂ ಬದುಕುಳಿದಿದ್ದಾರೆ.

    ಕ್ಯಾಲಿಫೋರ್ನಿಯಾದ ಅಬರ್ನ್ ಬಳಿ ಇರುವ ಈ ಬ್ರಿಡ್ಜ್ ಮೇಲೆ ಮಹಿಳೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಬ್ರಿಡ್ಜ್‍ನಿಂದ 60 ಅಡಿ ಕೆಳಗೆ ಕಾಲುದಾರಿಯ ಮೇಲೆ ಬಿದ್ದಿದ್ದಾರೆ.

    ಫೋಟೋ ಕ್ಲಿಕ್ಕಿಸುತ್ತಿದ್ದ ವೇಳೆ ಮಹಿಳೆ ಬ್ರಿಡ್ಜ್ ಮೇಲೆ ಹಾಕಲಾಗಿದ್ದ ಬೋಲ್ಟ್ ಮೇಲೆ ಕಾಲಿಟ್ಟಿದ್ದಾರೆ. ಈ ವೇಳೆ ಸಮತೋಲನ ಕಳೆದುಕೊಂಡು ಕೆಳಗಿ ಬಿದ್ದಿದ್ದಾಗಿ ಮಹಿಳೆಯ ಸ್ನೇಹಿತರಾದ ಪಾಲ್ ಗೊನ್ಚಾರುಕ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ನಂತರ ಆಕೆಯನ್ನು ಏರ್‍ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬ್ರಿಜ್ಡ್ ನಿಂದ ಕೆಳಗೆ ಬಿದ್ದ ನಂತರ ಮಹಿಳೆ ಪ್ರಜ್ಞೆ ತಪ್ಪಿದ್ದರು. ಆಕೆಯ ಮೂಳೆ ಮುರಿದಿದ್ದು, ಸರ್ಜರಿ ಮಾಡಬೇಕಿದೆ ಎಂದು ಪಾಲ್ ಹೇಳಿದ್ದಾರೆ.

    730 ಅಡಿ ಉದ್ದವಿರುವ ಫಾರೆಸ್ಟ್ ಹಿಲ್ ಸೇತುವೆ ಅಮೆರಿಕದ ಅತ್ಯಂತ ಎತ್ತರದ ಸೇತುವೆಗಳಲ್ಲಿ ಒಂದಾಗಿದೆ. ಇನ್ನು ಘಟನೆ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರೋ ಕ್ಯಾಲಿಫೋರ್ನಿಯಾ ಪೊಲೀಸರು ಒಂದು ಸೆಲ್ಫಿಗಾಗಿ ಪ್ರಾಣವನ್ನೇ ಕಳೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ.

  • ವಿಡಿಯೋ: 100ರ ಸಂಭ್ರಮದಲ್ಲಿ ಅಜ್ಜಿ ಸಖತ್ ಸ್ಟೆಪ್ ಹಾಕಿದ್ರು!

    ವಿಡಿಯೋ: 100ರ ಸಂಭ್ರಮದಲ್ಲಿ ಅಜ್ಜಿ ಸಖತ್ ಸ್ಟೆಪ್ ಹಾಕಿದ್ರು!

    ವಾಷಿಂಗ್ಟನ್: ಹೆಚ್ಚಾಗಿ ವಯಸ್ಸಾದಂತೆ ಜನರು ಹುಟ್ಟುಹಬ್ಬ ಆಚರಿಸಲು ಹಿಂದೇಟು ಹಾಕ್ತಾರೆ. ಆದ್ರೆ ಇದಕ್ಕೆ ಅಪವಾದವೆಂಬಂತೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಅಜ್ಜಿಯೊಬ್ಬರು 100 ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ.

    ಫೆಬ್ರವರಿ 26ರಂದು ಎಲಿಜಬೆತ್ ಕೊಕ್ರೆಲ್ ಎಂಬ ಅಜ್ಜಿ 100 ರ ಸಂಭ್ರಮದಲ್ಲಿ ತನ್ನ ಗೆಳೆಯರ ಹಾಗೂ ಕುಟುಂಬದವರ ಮುಂದೆ ಸಖತ್ ಸ್ಟೆಪ್ ಹಾಕುವ ಮೂಲಕ ಯುವಜನತೆಯನ್ನೇ ನಾಚುವಂತೆ ಮಾಡಿದ್ದಾರೆ. ಅಜ್ಜಿಯ ಈ ಡ್ಯಾನ್ಸನ್ನು ಮೊರೆನೊ ವಾಲಿ ಎಂಬಾಕೆ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿದ್ದು, ಇದೀಗ ವೈರಲ್ ಆಗಿದೆ.

    ಟ್ರೆಸರ್ ಮರ್ನೆ ಎಂಬಾಕೆ ತನ್ನ ಇನ್‍ಸ್ಟಾಗ್ರಾಂ ಈ ವಿಡಿಯೋವನ್ನು ಅಪ್‍ಲೋಡ್ ಮಾಡಿದ್ದು, ಇದನ್ನ 20 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 269 ಮಂದಿ ಕಮೆಂಟ್ಸ್ ಹಾಕಿದ್ದಾರೆ. ಅಜ್ಜಿಯ ಈ ಡ್ಯಾನ್ಸ್ ನೋಡಿದ ಮಂದಿ 100 ರ ಸಂಭ್ರದಲ್ಲಿ ಅಜ್ಜಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಐ ಲವ್ ದಿಸ್ ವಿಡಿಯೋ ಅಂತಾ ಕೆಲವರು ಹೇಳಿದ್ರೆ ಇನ್ನು ಕೆಲವರು, ಅಜ್ಜಿಯಾದ್ರೂ ಪರವಾಗಿಲ್ಲ ನನಗಿಂತ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಅಂತಾ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

    https://www.instagram.com/p/BQ9ZJSGA4xh/