Tag: ಕ್ಯಾಲಿಫೋರ್ನಿಯಾ

  • ನಗುಮುಖದಲ್ಲಿ ಕ್ಯಾಪ್ಸುಲ್‌ನಿಂದ ಹೊರಬಂದು ಕೈಬೀಸಿದ ಶುಭಾಂಶು ಶುಕ್ಲಾ

    ನಗುಮುಖದಲ್ಲಿ ಕ್ಯಾಪ್ಸುಲ್‌ನಿಂದ ಹೊರಬಂದು ಕೈಬೀಸಿದ ಶುಭಾಂಶು ಶುಕ್ಲಾ

    ಕ್ಯಾಲಿಫೋರ್ನಿಯಾ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ISS) ಯಶಸ್ವಿಯಾಗಿ ತಲುಪಿ ಇತಿಹಾಸ ಸೃಷ್ಟಿಸಿರುವ ಭಾರತೀಯ ಗಗನಯಾತ್ರಿ, ಐಎಎಫ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubanshu Shukla) ಸೇರಿ ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್ ಆಗಿದ್ದಾರೆ. ನಗುಮುಖದಲ್ಲಿ ಕ್ಯಾಪ್ಸುಲ್‌ನಿಂದ ಹೊರಬಂದು ಶುಭಾಂಶು ಶುಕ್ಲಾ ಕೈಬೀಸಿದರು.

    ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 3ಕ್ಕೆ ಕ್ಯಾಲಿಫೋರ್ನಿಯಾ (California) ಕರಾವಳಿಯಲ್ಲಿ ಯಶಸ್ವಿಯಾಗಿ ಸ್ಪ್ಯಾಷ್‌ ಡೌನ್ ಮಾಡಲಾಯಿತು. ಬಳಿಕ ಕ್ಯಾಪ್ಸುಲ್‌ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಿದ ಬಳಿಕ ಕೆಳಗಡೆ ಇರುವ ಬಾಗಿಲು(ಹ್ಯಾಚ್) ತೆರೆಯಲಾಯಿತು. ಈ ಬಾಗಿಲಿನ ಮೂಲಕ ಯಾನಿಗಳನ್ನು ಸ್ಪೇಸ್ ಎಕ್ಸ್ ಸಿಬ್ಬಂದಿ ಹೊರಗೆ ನಿಧಾನವಾಗಿ ಎಳೆದು ಕೈಹಿಡಿದು ಕರೆದುಕೊಂಡು ಹೋದರು. ಈ ವೇಳೆ ಎರಡನೇಯದಾಗಿ ಹೊರಬಂದ ಶುಭಾಂಶು ಶುಕ್ಲಾ ನಗುಮುಖದಿಂದ ಕೈಬೀಸಿ ಸಂತೋಷ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಭುವಿಗೆ ಶುಭಾಂಶು ಶುಕ್ಲಾ – ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಸ್ಪ್ಲ್ಯಾಷ್‌ ಡೌನ್

    ಕ್ಯಾಪ್ಸುಲ್‌ನಿಂದ ಹೊರಬಂದ ಬಳಿಕ ವೈದ್ಯಕೀಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಗಗನಯಾತ್ರಿಗಳಿಗೆ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು 7 ದಿನಗಳ ವಿಶ್ರಾಂತಿಯ ಅವಶ್ಯಕತೆಯಿರುತ್ತದೆ. ಇನ್ನೂ ಯಶಸ್ವಿ ಲ್ಯಾಂಡಿಂಗ್ ಬಳಿಕ ಶುಭಾಂಶು ಶುಕ್ಲಾ ಕುಟುಂಬಸ್ಥರು ಸಂಭ್ರಮಿಸಿದ್ದಾರೆ.

    ಪ್ರಕ್ರಿಯೆ ಹೇಗಿತ್ತು?
    ಸೋಮವಾರ (ಜು.14) ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಡ್ರ್ಯಾಗನ್‌ ಕ್ಯಾಪ್ಸುಲ್ ಪ್ರವೇಶಿಸಿ, ಸಂಜೆ 4:35ಕ್ಕೆ ಅನ್‌ಡಾಕಿಂಗ್ (ಬೇರ್ಪಡಿಸುವಿಕೆ) ಪ್ರಕ್ರಿಯೆ ಯಶಸ್ವಿಯಾಗಿತ್ತು. ಒಟ್ಟು 22.5 ಗಂಟೆಗಳ ಪ್ರಯಾಣ ಬಳಿಕ ಇಂದು ಮಧ್ಯಾಹ್ನ 3ಕ್ಕೆ ಪೆಸಿಫಿಕ್ ಮಹಾಸಾಗರದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ 4 ಪ್ಯಾರಾಚೂಟ್‌ಗಳು ಕ್ಯಾಪ್ಸುಲ್ ವೇಗವನ್ನು ತಗ್ಗಿಸಿತ್ತು. ಯಶಸ್ವಿ ಸ್ಪ್ಯಾಷ್‌ ಡೌನ್ ಬಳಿಕ ಸುರಕ್ಷಿತವಾಗಿ ಶುಭಾಂಶು ಶುಕ್ಲಾ ಹಾಗೂ ಇನ್ನುಳಿದ ಮೂವರು ಗಗನಯಾತ್ರಿಗಳು ಭೂಮಿಗೆ ಬಂದಿಳಿದಿದ್ದಾರೆ.

    ನಾಲ್ವರು ಗಗನಯಾತ್ರಿಗಳು ಭೂಮಿಗೆ ಮರಳುವ ಮುನ್ನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾವನಾತ್ಮಕ ಬೀಳ್ಕೊಡುಗೆ ಸಿಕ್ಕಿತು. ಶುಭಾಂಶು ಶುಕ್ಲಾ ಸಾರೇ ಜಹಾನ್ ಸೆ ಅಚ್ಚಾ ಎಂದು ಬಾಹ್ಯಾಕಾಶದಲ್ಲಿ ಭಾರತವನ್ನು ಭಾವನಾತ್ಮಕವಾಗಿ ಹೊಗಳಿದರು. ಈ ವೇಳೆ ರಾಕೇಶ್ ಶರ್ಮಾ 41 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಸಮಯವನ್ನು ನೆನಪಿಸಿಕೊಂಡು, ಅಲ್ಲಿಂದ ಭಾರತ ಹೇಗೆ ಕಾಣುತ್ತದೆ ಎಂದು ವಿವರಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಧ್ವಜ ಹಾರಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದ ಶುಭಾಂಶು ಶುಕ್ಲಾ ಸ್ವಾಗತಿಸಲು ಭಾರತೀಯರು ಉತ್ಸುಕರಾಗಿದ್ದಾರೆ.

    ಜೂ.25ರಂದು ಆಕ್ಸಿಯಂ-4 ಮಿಷನ್ ಮೂಲಕ ಭಾರತದ ಶುಭಾಂಶು ಶುಕ್ಲಾ, ಅಮೆರಿಕ ಮಹಿಳಾ ಗಗನಯಾತ್ರಿ ಪೆಗ್ಗಿ ವಿಟ್ಸನ್, ಹಂಗೇರಿಯ ಟಿಬೋರ್ ಕಾಪು ಹಾಗೂ ಪೋಲೆಂಡ್ ಗಗನಯಾತ್ರಿ ಸ್ಲಾವೋಸ್ಜ್ ಉಜ್ನಾನ್‌ಸ್ಕಿ ನಾಲ್ವರು ಗಗನಯಾತ್ರಿಗಳು ಅಂತರಿಕ್ಷ ಯಾನಕ್ಕೆ ತೆರಳಿದ್ದರು. ಬಾಹ್ಯಾಕಾಶದಲ್ಲಿ 18 ದಿನಗಳ ಕಾಲ ಉಳಿದು ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ಮಾಡಿದ್ದರು.ಇದನ್ನೂ ಓದಿ: ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನ ಪತ್ನಿ ನದಿಗೆ ತಳ್ಳಿದ ಆರೋಪ ಕೇಸ್‌ – ಪರಸ್ಪರ ವಿಚ್ಛೇದನಕ್ಕೆ ಮುಂದಾದ ದಂಪತಿ

  • ಮನೆಗೆ ಡಿಕ್ಕಿ ಹೊಡೆದು ಸಣ್ಣ ವಿಮಾನ ಪತನ – ಪೈಲಟ್‌ ಸಾವು

    ಮನೆಗೆ ಡಿಕ್ಕಿ ಹೊಡೆದು ಸಣ್ಣ ವಿಮಾನ ಪತನ – ಪೈಲಟ್‌ ಸಾವು

    ವಾಷಿಂಗ್ಟನ್‌: ಸಿಮಿ ಕಣಿವೆಯ ಬಳಿ ಸಣ್ಣ ವಿಮಾನವೊಂದು ಪತನಗೊಂಡಿದ್ದು, ಪೈಲಟ್‌ ಸಾವಿಗೀಡಾಗಿರುವ ಘಟನೆ ನಡೆದಿದೆ. ಅವಘಡದಲ್ಲಿ 2 ಮನೆಗಳಿಗೆ ಹಾನಿಯಾಗಿದೆ.

    ಲಾಸ್ ಏಂಜಲೀಸ್‌ನ ವಾಯುವ್ಯಕ್ಕೆ ಸುಮಾರು 80.47 ಕಿಲೋಮೀಟರ್ ದೂರದಲ್ಲಿರುವ ಸಿಮಿ ಕಣಿವೆಯ ವುಡ್ ರಾಂಚ್ ವಿಭಾಗದ ಒಂದು ಮನೆಯ ಛಾವಣಿಯಿಂದ ಹೊಗೆ ಬರುತ್ತಿರುವುದು ಕಂಡುಬಂದಿತ್ತು. ಅಲ್ಲಿ ಪರಿಶೀಲಿಸಿದಾಗ ವಿಮಾನ ಪತನಗೊಂಡಿರುವುದು ಗೊತ್ತಾಯಿತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 2ನೇ ಬಾರಿಗೆ ಆಸ್ಟ್ರೇಲಿಯಾ ಪ್ರಧಾನಿಯಾಗಿ ಅಲ್ಬನೀಸ್‌ ಆಯ್ಕೆ – ಮೋದಿ ವಿಶ್‌

    ಎರಡು ಮನೆಗಳಲ್ಲಿ ವಿಮಾನದ ಅವಶೇಷಗಳು ಬಿದ್ದಿವೆ. ನಿವಾಸಿಗಳು ಎರಡೂ ಮನೆಗಳ ಒಳಗೆ ಇದ್ದರು. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದೆ. ಎರಡೂ ಮನೆಗಳಿಗೆ ಹಾನಿಯಾಗಿದೆ. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆ ಬೆಂಕಿ ಹೊತ್ತಿ ಉರಿದಿತ್ತು.

    ಸುಮಾರು 40 ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಮನೆ ದುರಸ್ತಿ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಇದನ್ನೂ ಓದಿ: ಚೆನ್ನೈಗೆ ಬಂದು ಶ್ರೀಲಂಕಾಗೆ ಹೋದ್ರಾ ಪಹಲ್ಗಾಮ್ ಉಗ್ರರು? – ಶ್ರೀಲಂಕಾ ಏರ್‌ಪೋರ್ಟಲ್ಲಿ ತಪಾಸಣೆ

  • ಕ್ಯಾಲಿಫೋರ್ನಿಯಾದ ಅತಿದೊಡ್ಡ ಹಿಂದೂ ದೇವಾಲಯ ವಿರೂಪ, ದ್ವೇಷದ ಬರಹ

    ಕ್ಯಾಲಿಫೋರ್ನಿಯಾದ ಅತಿದೊಡ್ಡ ಹಿಂದೂ ದೇವಾಲಯ ವಿರೂಪ, ದ್ವೇಷದ ಬರಹ

    ವಾಷಿಂಗ್ಟನ್‌: ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾದ ಬಿಎಪಿಎಸ್‌ ಶ್ರೀ ಸ್ವಾಮಿನಾರಾಯಣ್‌ ಮಂದಿರವನ್ನು ವಿರೂಪಗೊಳಿಸಲಾಗಿದೆ.

    ಭಾರತ ವಿರೋಧಿ ಸಂದೇಶಗಳೊಂದಿಗೆ ದೇವಾಲಯವನ್ನು ಅಪವಿತ್ರಗೊಳಿಸಲಾಯಿತು. ಕಳೆದ ಕೆಲವು ತಿಂಗಳುಗಳಲ್ಲಿ ಯುಎಸ್‌ನಲ್ಲಿ ಇಂತಹ ಮತ್ತೊಂದು ಘಟನೆ ನಡೆದಿದೆ.

    ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್‌ನಲ್ಲಿರುವ ದೇವಾಲಯವನ್ನು, ಹಿಂದೂ ಸಮುದಾಯದ ವಿರುದ್ಧ ದ್ವೇಷದ ಬರಹದೊಂದಿಗೆ ಅಪವಿತ್ರಗೊಳಿಸಲಾಗಿದೆ ಎಂದು ಬಿಎಪಿಎಸ್ ತಿಳಿಸಿವೆ. ಸಮುದಾಯವು ದ್ವೇಷವನ್ನು ಬೇರೂರಲು ಎಂದಿಗೂ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

    ಈ ಘಟನೆಯ ಬಗ್ಗೆ ಚಿನೋ ಹಿಲ್ಸ್ ಪೊಲೀಸ್ ಇಲಾಖೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ನಡೆದ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ್‌ ಮಂದಿರವನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಧ್ವಂಸಗೊಳಿಸಲಾಗಿತ್ತು. ದ್ವೇಷದ ಸಂದೇಶಗಳನ್ನು ದೇವಾಲಯದ ಚಿಹ್ನೆಯ ಮೇಲೆ ಬರೆಯಲಾಗಿದೆ.

    ಸ್ಯಾಕ್ರಮೆಂಟೊ ಘಟನೆಗೆ ಸುಮಾರು 10 ದಿನಗಳ ಮೊದಲು, ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ ಮತ್ತೊಂದು ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ್ ಮಂದಿರವನ್ನು ದ್ವೇಷದ ಸಂದೇಶಗಳಿಂದ ವಿರೂಪಗೊಳಿಸಲಾಗಿತ್ತು.

    ನ್ಯೂಯಾರ್ಕ್‌ನ ಭಾರತದ ಕಾನ್ಸುಲೇಟ್ ಜನರಲ್ ಈ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ. ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

  • ಕ್ಯಾಲಿಫೋರ್ನಿಯಾದಲ್ಲಿ ಕಟ್ಟಡಕ್ಕೆ ಡಿಕ್ಕಿಯಾಗಿ ವಿಮಾನ ಪತನ; 2 ಸಾವು

    ಕ್ಯಾಲಿಫೋರ್ನಿಯಾದಲ್ಲಿ ಕಟ್ಟಡಕ್ಕೆ ಡಿಕ್ಕಿಯಾಗಿ ವಿಮಾನ ಪತನ; 2 ಸಾವು

    ಸ್ಯಾಕ್ರಮೆಂಟೊ: ವಿಮಾನವೊಂದು ವಾಣಿಜ್ಯ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ (Southern California) ನಡೆದಿದೆ.

    ಗುರುವಾರ ಮಧ್ಯಾಹ್ನ ಲಾಸ್ ಏಂಜಲೀಸ್‌ನ (Los Angeles) ಆಗ್ನೇಯಕ್ಕೆ ಸುಮಾರು 25 ಮೈಲಿ ದೂರದ ಫುಲ್ಲರ್‌ಟನ್ ಮುನ್ಸಿಪಲ್ ಏರ್‌ಪೋರ್ಟ್ ಬಳಿ ಈ ಅಪಘಾತ ಸಂಭವಿಸಿದೆ. ಆರ್‌ವಿ-10 ಎಂದು ಗುರುತಿಸಲಾದ ವಿಮಾನವು ಫರ್ನಿಚರ್ ತಯಾರಿಕಾ ಕಂಪನಿಯ ಮೇಲ್ಛಾವಣಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಟ್ಟಡ ಗೋಡೆಯಲ್ಲಿ ರಂಧ್ರ ನಿರ್ಮಾಣವಾಗಿ, ಅವ್ಯವಸ್ಥೆ ಉಂಟಾಯಿತು.ಇದನ್ನೂ ಓದಿ: BBK 11: 2ನೇ ಮಗುವಿನ ಬಗ್ಗೆ ಮಾತನಾಡಿದ ಧನರಾಜ್‌- ನಾಚಿ ನೀರಾದ ಪತ್ನಿ

    ಈ ಕುರಿತು ಅಧಿಕಾರಿಗಳು ಮಾತನಾಡಿ, ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಇನ್ನೂ ಕಟ್ಟಡದೊಳಗಿದ್ದ ಜನರನ್ನು ತಕ್ಷಣವೇ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಯಿತು ಎಂದು ತಿಳಿಸಿದ್ದಾರೆ.

    ಫುಲ್ಲರ್ಟನ್ ಪೊಲೀಸ್ ಇಲಾಖೆಯ ವಕ್ತಾರರಾದ ಕ್ರಿಸ್ಟಿ ವೆಲ್ಸ್ ಮಾತನಾಡಿ, 10 ಜನರನ್ನು ಕೂಡಲೇ ಸ್ಥಳೀಯ ಆಸ್ಪತ್ರಗೆ ಕರೆದೊಯ್ಯಲಾಯಿತು. ಸಣ್ಣಪುಟ್ಟ ಗಾಯಗೊಂಡವರಿಗೆ ಘಟನಾ ಸ್ಥಳದಲ್ಲಿ ಚಿಕಿತ್ಸೆ ನೀಡಲಾಯಿತು ಹಾಗೂ ಘಟನೆಯಲ್ಲಿ ಸಾವನ್ನಪ್ಪಿದ್ದವರು ವಿಮಾದಲ್ಲಿದ್ದವರಾ? ಅಥವಾ ಕಟ್ಟಡದ ಸುತ್ತಮುತ್ತಲಿನವರಾ? ಎಂದು ತನಿಖೆಯ ಮೂಲಕ ತಿಳಿಯಬೇಕಿದೆ ಎಂದರು.

    ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ದಟ್ಟವಾದ ಹೊಗೆ ಆವರಿಸುವುದು ಕಂಡು ಬಂದಿದೆ. ಸದ್ಯ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಅಪಘಾತದ ನಿಖರ ಕಾರಣಕ್ಕಾಗಿ ತನಿಖೆಯನ್ನು ಪ್ರಾರಂಭಿಸಿದೆ.ಇದನ್ನೂ ಓದಿ: ಬೇರೆ ರೂಟ್‌ಗೆ ಕರೆದೊಯ್ದ ಚಾಲಕ – ಭಯಗೊಂಡು ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ

     

  • ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು – ಮನೆಗಳೂ ಬೆಂಕಿಗಾಹುತಿ, 10,000 ಮಂದಿ ಸ್ಥಳಾಂತರ

    ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು – ಮನೆಗಳೂ ಬೆಂಕಿಗಾಹುತಿ, 10,000 ಮಂದಿ ಸ್ಥಳಾಂತರ

    ವಾಷಿಂಗ್ಟನ್‌: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು (California Wildfire) ಸಂಭವಿಸಿದೆ. ಭಾರಿ ಗಾಳಿ ಕಾರಣ ಬೆಂಕಿ ವೇಗವಾಗಿ ಹಬ್ಬುತ್ತಿದೆ ಎಂದು ವರದಿಗಳು ತಿಳಿಸಿವೆ.

    5 ಗಂಟೆಯಲ್ಲಿ 62 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಆವರಿಸಿದ್ದು, ಹಲವು ಮನೆಗಳನ್ನು ಆಪೋಷನ ಮಾಡಿದೆ. ಇದನ್ನೂ ಓದಿ: ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಕಾಣಿಸಿಕೊಂಡ ಮಸ್ಕ್ – ಟ್ರಂಪ್ ಪತ್ನಿ ಮೆಲಾನಿಯಾ ಮಿಸ್ಸಿಂಗ್

    ಮೂರು ಸಾವಿರಕ್ಕೂ ಹೆಚ್ಚು ಕಟ್ಟಡಗಳನ್ನು ಬೆಂಕಿ ಆವರಿಸುವ ಸಂಭವ ಇದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಲಾಸ್ ಏಂಜಲೀಸ್ ಸಮೀಪದ 10,000ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇದನ್ನೂ ಓದಿ: US Election: ಗೆಲುವಿನ ಸನಿಹದಲ್ಲಿ ಟ್ರಂಪ್‌ – ಸ್ವಿಂಗ್‌ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ಗೆ ಹಿನ್ನಡೆ

    ಬೆಂಕಿ ವ್ಯಾಪಿಸುತ್ತಿದ್ದಂತೆ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾಗಿವೆ. ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

  • ‘ಗೋ ಬ್ಯಾಕ್ ಹಿಂದೂ’: ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನ ಆವರಣದಲ್ಲಿ ಆಕ್ಷೇಪಾರ್ಹ ಬರವಣಿಗೆ

    ‘ಗೋ ಬ್ಯಾಕ್ ಹಿಂದೂ’: ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನ ಆವರಣದಲ್ಲಿ ಆಕ್ಷೇಪಾರ್ಹ ಬರವಣಿಗೆ

    ಸ್ಯಾಕ್ರಮೆಂಟೊ: ಅಮೆರಿಕದಲ್ಲಿರುವ (America) ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನಗಳನ್ನು (BAPS Swaminarayana Temple) ನಿರಂತರವಾಗಿ ಗುರಿಯಾಗಿಸಿಕೊಂಡಿದ್ದು, ಹಿಂದೂ ವಿರೋಧಿ ಹೇಳಿಕೆಯನ್ನು ಬರೆಯಲಾಗುತ್ತಿದೆ. ನ್ಯೂಯಾರ್ಕ್ (NewYork) ಘಟನೆ ಬೆನ್ನಲ್ಲೆ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ ಶ್ರೀ ಸ್ವಾಮಿನಾರಾಯಣ ದೇವಾಲಯವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ದೇವಸ್ಥಾನದ ಹೊರಭಾಗದಲ್ಲಿರುವ ಬೋರ್ಡ್ ಮೇಲೆ ಹಿಂದೂ ವಿರೋಧಿ ಹೇಳಿಕೆಗಳನ್ನು ಬರೆಯಲಾಗಿದೆ.

    ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ದೇವಸ್ಥಾನವು ರಾಂಚೋ ಕಾರ್ಡೋವಾ ಪ್ರದೇಶದಲ್ಲಿ ಆರ್ಮ್ಸ್ಟ್ರಾಂಗ್ ಅವೆನ್ಯೂದಲ್ಲಿದೆ. ಇದು ಸ್ಯಾಕ್ರಮೆಂಟೊ ಮಾಥರ್ ವಿಮಾನ ನಿಲ್ದಾಣದ ಉತ್ತರ ಭಾಗದಲ್ಲಿದೆ. ದೇವಸ್ಥಾನದ ಹೊರಗಿರುವ ಬೋರ್ಡ್ ಮೇಲೆ ‘ಗೋ ಬ್ಯಾಕ್ ಹಿಂದೂ’ ಎಂದು ಬರೆಯಲಾಗಿದ್ದು, ಸ್ಯಾಕ್ರಮೆಂಟೊ ಕೌಂಟಿಯ ಪೊಲೀಸ್ ಅಧಿಕಾರಿಗಳು ‘ದ್ವೇಷ ಅಪರಾಧ’ವನ್ನು ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: ತಮಿಳುನಾಡು ಮಾಜಿ ಸಚಿವ ಸೆಂಥಿಲ್ ಬಾಲಾಜಿಗೆ ಸುಪ್ರೀಂ ಜಾಮೀನು

    ಪಾರ್ಕಿಂಗ್ ಲಾಟ್ ಮುಂಭಾಗದ ಸೈನ್ ಬೋರ್ಡ್‌ನಲ್ಲಿ ಭಾರತ ಸರ್ಕಾರ ಎಂದು ನಮೂದಿಸಿ ಈ ಹೇಳಿಕೆ ಬರೆಯಲಾಗಿದೆ. ದಾಳಿಕೋರರು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನೀರಿನ ಮಾರ್ಗವನ್ನೂ ಕಡಿತಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ (Narendra Modi) ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ದಾಳಿಗಳು ನಡೆದಿವೆ.

    ಇದಕ್ಕೂ ಮೊದಲು ಸೆ.17 ರಂದು ನ್ಯೂಯಾರ್ಕ್‌ನ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ವಿಧ್ವಂಸಕ ಘಟನೆ ನಡೆದಿತ್ತು. ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕೂಡ ಶ್ರೀ ಸ್ವಾಮಿನಾರಾಯಣ ದೇವಸ್ಥಾನದ ವಿಧ್ವಂಸಕತೆಯನ್ನು ಖಂಡಿಸಿದರು ಮತ್ತು ಅದನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು: ಕಾಂಗ್ರೆಸ್ ನಾಯಕ ಕೆ.ಬಿ.ಕೋಳಿವಾಡ

    ದೇಶದಲ್ಲಿ ಪದೇ ಪದೇ ದ್ವೇಷ ಮತ್ತು ಹಿಂಸಾಚಾರದ ಘಟನೆಗಳ ಬಗ್ಗೆ ಕಾಂಗ್ರೆಸ್ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತೀಯ-ಅಮೆರಿಕನ್ ಶಾಸಕ ಥಾನೇದಾರ್ ಅವರು ಈ ಹೇಯ ಕೃತ್ಯವನ್ನು ಬಲವಾಗಿ ಖಂಡಿಸಿದರು ಮತ್ತು ಇಂತಹ ‘ವಿಧ್ವಂಸಕ, ಧರ್ಮಾಂಧತೆ ಮತ್ತು ದ್ವೇಷದ’ ಕೃತ್ಯಗಳನ್ನು ಕೂಲಂಕಷವಾಗಿ ತನಿಖೆ ಮಾಡಬೇಕು ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಬಿಜೆಪಿ ನಾಯಕನ ಪತ್ನಿ ವಿರುದ್ಧ ಮಾನಹಾನಿ ಹೇಳಿಕೆ – ಸಂಜಯ್ ರಾವತ್‍ಗೆ 15 ದಿನಗಳ ಜೈಲು!

  • ಹಾರಾಟದ ವೇಳೆ ಓಪನ್ ಆದ ವಿಮಾನದ ಡೋರ್!

    ಹಾರಾಟದ ವೇಳೆ ಓಪನ್ ಆದ ವಿಮಾನದ ಡೋರ್!

    ವಾಷಿಂಗ್ಟನ್: ವಿಮಾನವೊಂದು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅದರ ಬಾಗಿಲು ಆಕಾಶದಲ್ಲಿ ತೆರೆದುಕೊಂಡ ಘಟನೆ ಪೋರ್ಟ್‌ಲ್ಯಾಂಡ್‌ನಲ್ಲಿ (Portland) ನಡೆದಿದೆ.

    ಅಲಾಸ್ಕಾ ಏರ್‌ಲೈನ್ಸ್‌ನ (Alaska Airlines) ಬೋಯಿಂಗ್ 737-9 ಮ್ಯಾಕ್ಸ್ ವಿಮಾನ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲಿ ಅದರ ಒಂದು ಬಾಗಿಲು ತೆರೆದುಕೊಂಡಿದೆ. ಕೂಡಲೇ ವಿಮಾನವನ್ನು ಪೋರ್ಟ್‌ಲ್ಯಾಂಡ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ (Emergency Landing) ಮಾಡಲಾಗಿದೆ. ವಿಮಾನವು ಒರೆಗಾನ್‍ನ ಪೋರ್ಟ್‌ಲ್ಯಾಂಡ್‌ನಿಂದ ಕ್ಯಾಲಿಫೋರ್ನಿಯಾದ (California) ಒಂಟಾರಿಯೊಗೆ ತೆರಳುತ್ತಿತ್ತು. ಈ ವೇಳೆ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಇಸ್ರೋದಿಂದ ದಿಟ್ಟ ಹೆಜ್ಜೆ – ಇಂದು ನಿಗದಿತ ಕಕ್ಷೆಗೆ ಸೇರಲಿದೆ ಆದಿತ್ಯ ಎಲ್1

    ವಿಮಾನದಲ್ಲಿ 171 ಪ್ರಯಾಣಿಕರು ಮತ್ತು 6 ಸಿಬ್ಬಂದಿಗಳಿದ್ದರು. ಅವರರೆಲ್ಲ ಸುರಕ್ಷಿವಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಯಾಣಿಕರು ತೆಗೆದ ವೀಡಿಯೋಗಳಲ್ಲಿ ಮಧ್ಯ-ಕ್ಯಾಬಿನ್‍ನ ನಿರ್ಗಮನ ಬಾಗಿಲು ವಿಮಾನದಿಂದ ಸಂಪೂರ್ಣವಾಗಿ ಬೇರ್ಪಟ್ಟಿರುವುದು ಕಾಣಿಸುತ್ತದೆ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್‌ ಶಾಕ್‌

  • ಮೀನು ತಿಂದು ದೇಹದ ಅಂಗಾಂಗ ಕಳೆದುಕೊಂಡ ಮಹಿಳೆ!

    ಮೀನು ತಿಂದು ದೇಹದ ಅಂಗಾಂಗ ಕಳೆದುಕೊಂಡ ಮಹಿಳೆ!

    ನ್ಯೂಯಾರ್ಕ್: ಮಹಿಳೆಯೊಬ್ಬರು ಮೀನು ತಿಂದು ತನ್ನ ದೇಹದ ನಾಲ್ಕು ಅಂಗಗಳನ್ನು ಕಳೆದುಕೊಂಡಿರುವ ದಾರುಣ ಘಟನೆಯೊಂದು ಕ್ಯಾಲಿಫೋರ್ನಿಯಾದಲ್ಲಿ (California) ನಡೆದಿದೆ.

    ಲಾರಾ ಬರಾಜಾಸ್ (40) ಅವರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

    ಬ್ಯಾಕ್ಟೀರಿಯಾ ಸೋಂಕಿನಿಂದ ಮಹಿಳೆ‌ (Woman lost Limbs) ಅಂಗಾಂಗ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಬ್ಯಾಕ್ಟೀರಿಯಾದ ಮಾರಣಾಂತಿಕ ಸ್ಟ್ರೈನ್‍ನಿಂದ ಕಲುಷಿತಗೊಂಡಿರುವ ಕಡಿಮೆ ಬೇಯಿಸಿದ ತಿಲಾಪಿಯಾ ಮೀನಿನ (Fish) ಸೇವನೆಯಿಂದ ಉಂಟಾಗುತ್ತದೆ ಎನ್ನಲಾಗಿದೆ. ಇದನ್ನೂ ಓದಿ;

    ಬರಾಜಸ್ ಅವರು ಸ್ಥಳೀಯ ಮಾರುಕಟ್ಟೆಯಲ್ಲಿ ಮೀನು ಖರೀದಿಸಿದ್ದಾರೆ. ಆ ಮೀನಿನ ಸಾಂಬರ್ ತಿಂದ ಬಳಿಕ ಅವರು ಅಸ್ವಸ್ಥಗೊಂಡಿದ್ದಾರೆ. ಬಹುತೇಕ ಪ್ರಾಣವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದ ಬರಾಜಸ್ ನನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇಡಲಾಗಿತ್ತು. ಕ್ರಮೇಣ ಅವರ ಬೆರಳುಗಳು, ಪಾದಗಳು, ತುಟಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತಾ ಬಂದವು. ಮೂತ್ರಪಿಂಡಗಳು ಸಂಪೂರ್ಣ ವಿಫಲವಾಗಿವೆ ಎಂದು ಮೆಸ್ಸಿನಾ ಮಾಹಿತಿ ನೀಡಿದ್ದಾರೆ.

    ಮೆಸ್ಸಿನಾ ಅವರ ಪ್ರಕಾರ, ಸಾಮಾನ್ಯವಾಗಿ ಸಮುದ್ರದ ನೀರಿನಲ್ಲಿ ಕಂಡುಬರುವ ಸಂಭಾವ್ಯ ಮಾರಣಾಂತಿಕ ಬ್ಯಾಕ್ಟೀರಿಯ ‘ವಿಬ್ರಿಯೊ ವಲ್ನಿಫಿಕಸ್’ ಬರಜಾಸ್ ಅವರ ಸಮಸ್ಯೆಗೆ ಕಾರಣವಾಗಿದೆ ಎಂದಿದ್ದಾರೆ. ಇಂತಹ ತೀವ್ರತರವಾದ ಆರೋಗ್ಯದ ಅಪಾಯಗಳನ್ನು ತಪ್ಪಿಸಲು ಸಮುದ್ರಾಹಾರ, ಮೀನುಗಳನ್ನು ಸರಿಯಾಗಿ ತಯಾರಿಸುವ ಮತ್ತು ಸೇವಿಸುವ ಬಗ್ಗೆ ಜಾಗೃತಿ ವಹಿಸಬೇಕು. ಕಲುಷಿತವಾಗಿರುವ ಏನನ್ನಾದರೂ ತಿನ್ನುವ ಮೂಲಕ ಅಥವಾ ಬ್ಯಾಕ್ಟೀರಿಯಾ ಹೊಂದಿರುವ ನೀರು ಕುಡಿಯುವ ಮೂಲಕ ಇಂತಹ ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಾಗಿದೆ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ. ನತಾಶಾ ಸ್ಪಾಟ್ಟಿಸ್ವುಡ್ ಕ್ರೋನ್‍ಗೆ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಜಡ್ಜ್

    ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಜಡ್ಜ್

    ಸ್ಯಾಕ್ರಮೆಂಟೊ: ನ್ಯಾಯಾಧೀಶರೊಬ್ಬರು (Judge )ತನ್ನ ಹೆಂಡತಿಯನ್ನು ಗುಂಡು ಹಾರಿಸಿ ಕೊಂದ ಘಟನೆ ಕ್ಯಾಲಿಫೋರ್ನಿಯಾದಲ್ಲಿ (California) ನಡೆದಿದೆ. ಕೊಂದ ಬಳಿಕ ತನ್ನ ಸಹದ್ಯೋಗಿಯೊಬ್ಬರಿಗೆ `ನಾನು ನಾಳೆ ಕೋರ್ಟ್‍ಗೆ ಬರುವುದಿಲ್ಲ, ಕಸ್ಟಡಿಯಲ್ಲಿರುತ್ತೇನೆ’ ಎಂದು ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನ್ಯಾಯಾಧೀಶ ಜೆಫ್ರಿ ಫರ್ಗುಸನ್ (72) ಎಂಬಾತ ಪತ್ನಿಯನ್ನು ಕೊಲೆಗೈದ ಆರೋಪಿ. ಆತನ ಮನೆಯಲ್ಲಿ ಪರವಾನಿಗೆ ಹೊಂದಿದ್ದ ಸುಮಾರು 47 ಬಂದೂಕುಗಳು ಮತ್ತು 26,000 ಸಜೀವ ಮದ್ದುಗುಂಡುಗಳು ಪತ್ತೆಯಾಗಿವೆ. ಪೊಲೀಸರು ತೆರಳಿದ್ದಾಗ ಎದೆಗೆ ಗುಂಡೇಟು ಬಿದ್ದು ಆತನ ಪತ್ನಿ ಮೃತಪಟ್ಟಿದ್ದಳು. ಈ ವೇಳೆ ಆತ ವಿಪರೀತವಾಗಿ ಕುಡಿದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆ ನಂತರ ನೀರು ಬಿಸಿ ಮಾಡಿದ್ದು ಬಿಟ್ಟು ಬೇರೆ ಅಡುಗೆ ಮಾಡಿಲ್ವಂತೆ- ಕಿಯಾರಾ ಅಡ್ವಾಣಿ

    ಆ.3 ರಂದು ಫರ್ಗುಸನ್ ಮತ್ತು ಅವರ ಪತ್ನಿ ಶೆರಿಲ್ ಅನಾಹೈಮ್ ನಗರದ ರೆಸ್ಟೋರೆಂಟ್‍ನಲ್ಲಿ ಜಗಳ ಪ್ರಾರಂಭಿಸಿದ್ದರು. ಬಳಿಕ ಮನೆಗೆ ತೆರಳಿದ್ದ ಅವರು ಗುಂಡು ಹಾರಿಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ಕರೆ ಮಾಡಿ ತನ್ನ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಅಂತ ಹೇಳಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಲಾಸ್ ಏಂಜಲೀಸ್‍ನ (Los Angeles) ನ್ಯಾಯಾಲಯವು (Court) ವಿಚಾರಣೆ ನಡೆಸಿದ್ದು, ಆರೋಪಿ ಕೊಲೆ ಮಾಡಿರುವುದನ್ನು ನಿರಾಕರಿಸಿದ್ದಾನೆ. ಆತನ ವಕೀಲ ಇದು ಆಕಸ್ಮಿಕ ಘಟನೆ. ಉದ್ದೇಶಿತ ಕೊಲೆ ಅಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಆರೋಪಿ ಫರ್ಗುಸನ್‍ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಕುಡಿಯದಂತೆ ನ್ಯಾಯಾಲಯ ಆದೇಶಿಸಿದೆ. ಅಕ್ಟೋಬರ್ 30 ರಂದು ಮತ್ತೆ ನ್ಯಾಯಾಲಯ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಲಿವ್ ಇನ್ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯಕರನ ಅಪ್ರಾಪ್ತ ಮಗನ ಹತ್ಯೆ – ಖತರ್‌ನಾಕ್‌ ಲೇಡಿ ಅಂದರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಾನ ಮಾಡಿದ್ರೆ ನನ್ನ ನಗ್ನ ಚಿತ್ರ ಬಹುಮಾನ ಕೊಡ್ತೀನಿ – ಫ್ಯಾನ್ಸ್‌ಗೆ ಬಂಪರ್ ಆಫರ್ ಕೊಟ್ಟ ನೀಲಿ ತಾರೆ

    ವಾಷಿಂಗ್ಟನ್: ವೀಕೆಂಡ್ ಬಂತೆಂದರೆ ಸಾಕು ಮಾರುಕಟ್ಟೆಗಳಲ್ಲಿ ಗ್ರಾಹಕರಿಗಾಗಿ ಅಂಗಡಿಯವರು ಭರ್ಜರಿ ಆಫರ್‌ಗಳನ್ನ ಕೊಡ್ತಾರೆ. ಆದ್ರೆ ಅಮೆರಿಕದ (USA) ನೀಲಿ ತಾರೆಯೊಬ್ಬಳು ಸಮಾಜ ಸೇವೆ ಮಾಡಲು ಮುಂದಾಗಿದ್ದು ತನ್ನ ಅಭಿಮಾನಿಗಳಿಗೆ ಬೇರೆ ರೀತಿಯ ಆಫರ್ ಒಂದನ್ನ ಘೋಷಣೆ ಮಾಡಿದ್ದಾಳೆ.

    ಹೌದು. ಕ್ಯಾಲಿಫೋರ್ನಿಯಾದ ಕ್ಯಾಥೋಲಿಕ್ ಶಾಲೆಯ ಮಾಜಿ ಶಿಕ್ಷಕಿಯೂ ಆಗಿದ್ದ ನೀಲಿ ತಾರೆ ಕರ್ಟ್ನಿ ಟಿಲಿಯಾ (Courtney Tillia) ಸಾಗರ ಸಸ್ತನಿ ಕೇರ್ ಸೆಂಟರ್‌ಗೆ ದೇಣಿಗೆ ನೀಡಿದವರಿಗೆ ತನ್ನ ನಗ್ನ ಚಿತ್ರಗಳನ್ನ ಉಡುಗೊರೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾಳೆ. ಇದನ್ನೂ ಓದಿ: Rafale Deal: 90,000 ಕೋಟಿ ವೆಚ್ಚ, 26 ರಫೇಲ್‌ ಖರೀದಿಸಲು ಭಾರತ ಸರ್ಕಾರ ಮೆಗಾ ಪ್ಲ್ಯಾನ್‌!

    ಕ್ಯಾಲಿಫೋರ್ನಿಯಾದಲ್ಲಿ ತುಂಬಾ ಅನಾರೋಗ್ಯದಿಂದ ಬಳಲುತ್ತಿರುವ ಸಮುದ್ರ ಜೀವಿಗಳಿಗೆ ಸಹಾಯ ಮಾಡಲು ದೇಣಿಗೆ ನೀಡುವ ಪ್ರತಿಯೊಬ್ಬರಿಗೂ ನಾನು ನಗ್ನ ಫೋಟೋವನ್ನ ಉಡುಗೊರೆಯಾಗಿ ಕಳುಹಿಸುತ್ತೇನೆ ಎಂದು 36 ವರ್ಷದ ನೀಲಿ ತಾರೆ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ನಿಧನಕ್ಕೂ ಮುನ್ನ 33 ವರ್ಷದ ಗೆಳತಿಯ ಹೆಸರಲ್ಲಿ 900 ಕೋಟಿ ಆಸ್ತಿ ಬರೆದಿಟ್ಟ ಇಟಲಿ ಮಾಜಿ ಪ್ರಧಾನಿ

    ಕನಿಷ್ಠ 50 ಡಾಲರ್ (4,104 ರೂ.) ಅಥವಾ ಅದಕ್ಕಿಂತಲೂ ಹೆಚ್ಚಿನ ದೇಣಿಗೆ ನೀಡುವವರಿಗೆ ನಗ್ನ ಉಡುಗೊರೆ ನೀಡುತ್ತೇನೆ ನನ್ನ ಅಭಿಮಾನಿಗಳ ಪುಟಕ್ಕೆ ಉಚಿತ ಲಿಂಕ್‌ಗಳನ್ನೂ ಸಹ ನೀಡುತ್ತೇನೆ. ಪ್ರತಿ ದೇಣಿಗೆಗೂ ನಾನು ನಿಮಗೆ ನಗ್ನ ಉಡುಗೊರೆ ಕಳಿಸ್ತೀನಿ. ನೀವು ದೇಣಿಗೆ ನೀಡಿ, ಅದರ ಸ್ಕ್ರೀನ್ ಶಾಟ್‌ನೊಂದಿಗೆ ನನಗೆ ಡಿಎಂ ಕಳುಹಿಸಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

    ಈ ಹಿಂದೆ ಲಂಡನ್ನಿನ `ಓನ್ಲಿ ಫ್ಯಾನ್ಸ್’ ಸೈಟ್‌ನ ಕೇಂದ್ರಬಿಂದುವಾಗಿದ್ದ ಟಿಲಿಯಾ ತಿಂಗಳಿಗೆ 1 ಲಕ್ಷ ಡಾಲರ್ (82,10,535 ರೂ.) ಸಂಪಾದಿಸುತ್ತಿದ್ದರು. ಇದೀಗ ಸಮಾಜ ಸೇವೆಗೂ ಮುಂದಾಗಿರುವ ಟಿಲಿಯಾ ಸ್ವಯಂ ಘೋಷಿತ ಪ್ರಾಣಿ ಪ್ರಿಯರಿಗೆ ಸಹಾಯ ಮಾಡುತ್ತಿದ್ದಾರೆ. ಜೊತೆಗೆ ಸಮುದ್ರ ಜೀವಿಗಳ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸಿಕೊಡುವುದಕ್ಕಾಗಿ ಹಣ ಸಂಗ್ರಹಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]