Tag: ಕ್ಯಾರೆಟ್ ದೋಸೆ

  • ಕ್ಯಾರೆಟ್ ದೋಸೆ ತಿಂದ್ರೆ ಮತ್ತೆ ಕೇಳುತ್ತೀರಾ.. ಅಷ್ಟೊಂದು ಟೇಸ್ಟ್- ಒಮ್ಮೆ ಮಾಡಿ ಸವಿಯಿರಿ

    ಕ್ಯಾರೆಟ್ ದೋಸೆ ತಿಂದ್ರೆ ಮತ್ತೆ ಕೇಳುತ್ತೀರಾ.. ಅಷ್ಟೊಂದು ಟೇಸ್ಟ್- ಒಮ್ಮೆ ಮಾಡಿ ಸವಿಯಿರಿ

    ದೋಸೆಯಲ್ಲಿಯೇ ಹಲವಾರು ವಿಧಗಳಿವೆ. ಮನೆಯಲ್ಲಿಯೇ ಅಕ್ಕಿ, ಉದ್ದಿನಬೇಳೆಯನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ರುಬ್ಬುವ ಮೂಲಕ ಹೆಚ್ಚಿನ ಕಷ್ಟವಿಲ್ಲದೇ ರುಚಿಕರ ದೋಸೆ ತಯಾರಿಸಬಹುದು. ಸೆಟ್ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ ತಿಂದು ಬೇಸರವಾಗಿದ್ರೆ ರುಚಿಯಾದ ಕ್ಯಾರೆಟ್ ದೋಸೆಯನ್ನು ಮಾಡಿ ಸವಿಯಬಹುದು.

    ಬೇಕಾಗುವ ಸಾಮಗ್ರಿಗಳು:
    * ಕ್ಯಾರೆಟ್- 1 ಕಪ್
    * ರುಬ್ಬಿದ ದೋಸೆ ಹಿಟ್ಟು – 2 ಕಪ್
    * ಈರುಳ್ಳಿ – 1
    * ಅಡುಗೆ ಎಣ್ಣೆ- ಅರ್ಧ ಕಪ್
    * ಜೀರಿಗೆ – 1 ಚಮಚ
    * ಬೆಳ್ಳುಳ್ಳಿ- 3
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಮೆಣಸಿನ ಪುಡಿ – 1 ಚಮಚ
    * ಹಸಿಮೆಣಸು – 2
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಕ್ಯಾರೆಟ್‍ನ್ನು ಬೇಯಿಸಿಕೊಳ್ಳಬೇಕು.
    * ನಂತರ ಬಾಣಲೆಯಲ್ಲಿ ಅಡುಗೆ ಎಣ್ಣೆ, ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನ ಪುಡಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಹುರಿದುಕೊಂಡು, ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಇದನ್ನೂ ಓದಿ:  ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ

    * ಈಗ ಬೇಯಿಸಿದ ಕ್ಯಾರೆಟ್‍ನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ನಂತರ ಮಸಾಲೆಗಳ ಪೇಸ್ಟ್‌ಗೆ ಈ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿ.
    * ದೋಸೆ ಹಿಟ್ಟಗೆ ರುಬ್ಬಿದ ಮಸಾಲೆ ಮಿಶ್ರಣ, ಉಪ್ಪು ಸೇರಿಸಿ ಇನ್ನಷ್ಟು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

    * ನಂತರ ದೋಸೆ ಕಾವಲಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಚ್ಚಿ ದೋಸೆ ಹಾಕಿ ಬೇಯಿಸಿದರೆ ರುಚಿಯಾದ ಕ್ಯಾರೆಟ್‌ ದೋಸೆ ಸವಿಯಲು ಸಿದ್ಧವಾಗುತ್ತದೆ.