Tag: ಕ್ಯಾರಿ ಬ್ಯಾಗ್

  • ಕೇಂದ್ರ ಪರಿಸರ ಸಚಿವಾಲಯದಿಂದ ಪ್ಲಾಸ್ಟಿಕ್ ಬಳಕೆ ಮೇಲೆ ಹೊಸ ರೂಲ್ಸ್

    ಕೇಂದ್ರ ಪರಿಸರ ಸಚಿವಾಲಯದಿಂದ ಪ್ಲಾಸ್ಟಿಕ್ ಬಳಕೆ ಮೇಲೆ ಹೊಸ ರೂಲ್ಸ್

    ನವದೆಹಲಿ: ಕೇಂದ್ರ ಪರಿಸರ ಸಚಿವಾಲಯವು 2022ರ ಒಳಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ತಿದ್ದುಪಡಿ ನಿಯಮಗಳನ್ನು ಜಾರಿಗೊಳಿಸಿದ್ದು, ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದೆ.

    ಹೊಸ ಅಧಿಸೂಚನೆಯ ಪ್ರಕಾರ, 2021ರ ಸೆಪ್ಟೆಂಬರ್ 30ರಿಂದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳ ಗಾತ್ರವನ್ನು 50 ರಿಂದ 75 ಮೈಕ್ರಾನ್‍ಗಳಿಗೆ ಮತ್ತು 120 ಮೈಕ್ರಾನ್‍ಗಳಿಗೆ ಹೆಚ್ಚಿಸಲಾಗುತ್ತಿದೆ. ಪ್ಲಾಸ್ಟಿಕ್ ಬ್ಯಾಗ್‍ಗಳ ಗಾತ್ರವನ್ನು ಹೆಚ್ಚಿಸುವುದರಿಂದ ಅವುಗಳನ್ನು ಮರು ಬಳಸಬಹುದು ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.

    ಪಾಲಿಸ್ಟೈರಿನ್ ಸೇರಿದಂತೆ ಕೆಲವು ಸಿಂಗಲ್ ಯೂಸ್ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು 2022ರ ಜುಲೈ 1ರಿಂದ ನಿಷೇಧಿಸಲಾಗುತ್ತಿದ್ದು, ಪ್ಲಾಸ್ಟಿಕ್ ಇಯರ್ ಬಡ್ಸ್, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಸ್ಟಿಕ್, ಐಸ್ ಕ್ರೀಮ್ ಸ್ಟಿಕ್, ಪ್ಲೇಟ್, ಕಪ್, ಗ್ಲಾಸ್, ಫೋರ್ಕ್‍ಗಳು, ಸ್ಪೂನ್‍ಗಳು, ಚಾಕು, ಸ್ಟ್ರಾ, ಟ್ರೇಗಳು, ಸ್ವೀಟ್ ಬಾಕ್ಸ್, ಆಹ್ವಾನ ಪತ್ರಿಕೆಗಳು ಮತ್ತು ಸಿಗರೇಟ್ ಪ್ಯಾಕ್, ಪಿವಿಸಿ ಬ್ಯಾನರ್‍ಗಳಲ್ಲಿ 100 ಮೈಕ್ರಾನ್‍ಗಿಂತ ಕಡಿಮೆ ಪ್ಲಾಸ್ಟಿಕ್‍ಗಳನ್ನು ಬಳಸಲಾಗುತ್ತದೆ.  ಇದನ್ನೂ ಓದಿ:ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿ ಪಕ್ಕದ ರಸ್ತೆಯಲ್ಲೇ ಕಿಡಿಗೇಡಿಗಳ ಓಡಾಟ!