Tag: ಕ್ಯಾಮೆರಾ

  • ಹೈಟೆಕ್ ಸಮವಸ್ತ್ರ ಪಡೆದ ಜಮ್ಮು ಕಾಶ್ಮೀರ ಪೊಲೀಸರು

    ಹೈಟೆಕ್ ಸಮವಸ್ತ್ರ ಪಡೆದ ಜಮ್ಮು ಕಾಶ್ಮೀರ ಪೊಲೀಸರು

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸಹಾಯವಾಗಲು ಪೊಲೀಸರಿಗೆ ಹೈಟೆಕ್ ತಂತ್ರಜ್ಞಾನದ ಕ್ಯಾಮೆರಾ ಹೊಂದಿರುವ ಸಮವಸ್ತ್ರ ನೀಡಲಾಗಿದೆ.

    ಜುಲೈ 20 ರಂದು ಜಮ್ಮು ಕಾಶ್ಮೀರ ಎಸ್‍ಪಿ ವೈದ್ಯ ಅವರು ಪೊಲೀಸರಿಗೆ ಹೊಸ ತಂತ್ರಜ್ಞಾನದ ಕ್ಯಾಮೆರಾ ಅಳವಡಿಸಿದ ಸಮವಸ್ತ್ರ ನೀಡುವುದಾಗಿ ತಿಳಿಸಿದ್ದರು. ಸದ್ಯ ಸರ್ಕಾರ ಕೈಗೊಂಡಿರುವ ಈ ಕ್ರಮ ಪೊಲೀಸರ ಮೇಲೆ ಮಾಡುತ್ತಿದ್ದ ಆಧಾರ ರಹಿತ ಆರೋಪಗಳಿಗೆ ತಕ್ಕ ಉತ್ತರ ನೀಡಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

    https://www.instagram.com/p/Bls44-unPDP/?utm_source=ig_embed&utm_campaign=embed_loading_state_control

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‍ಪಿ ವೈದ್ಯ ಅವರು, ಪೊಲೀಸರಿಗೆ ನೀಡಿರುವ ಹೈಟೆಕ್ ಕ್ಯಾಮೆರಾಗಳಿಂದ ಭದ್ರತೆಯನ್ನು ಹೆಚ್ಚಿಸಲು ಹಾಗೂ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲು ಸಹಾಯಕವಾಗಲಿದೆ. ನಾಗರಿಕರು ಪೊಲೀಸರ ಮೇಲೆ ಲಂಚ ಅಥವಾ ಬೇರೆಯಾವುದೇ ಆರೋಪ ಮಾಡಿದರು ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳು ಪ್ರಮುಖ ಸಾಕ್ಷಿಯಾಗಲಿದೆ. ಈ ಕ್ರಮ ಪೊಲೀಸ್ ಇಲಾಖೆಯಲ್ಲಿ ಮತ್ತಷ್ಟು ಪಾರದರ್ಶಕತೆಯನ್ನು ತರಲಿದೆ ಎಂದು ಹೇಳಿದ್ದಾರೆ. ಇದನ್ನು ಓದಿ: ಸಂಚಾರಿ ಪೊಲೀಸರ ಲಂಚಕ್ಕೆ ಬ್ರೇಕ್: ಇಲಾಖೆಗೆ ಬಾಡಿ ಕ್ಯಾಮೆರಾಗಳು ಎಂಟ್ರಿ!

    ಪೊಲೀಸರಿಗೆ ಇವುಗಳ ಬಳಕೆ ಮಾಡುವ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ. ಅಂದಹಾಗೇ ಕಳೆದ ಒಂದು ವರ್ಷದಿಂದ ಜಮ್ಮು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಆರ್ ಪಿಎಫ್ ಯೋಧರು ಕ್ಯಾಮೆರಾ ಹೊಂದಿರುವ ಸಮವಸ್ತ್ರ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೈಟೆಕ್ ಸಮವಸ್ತ್ರ ನೀಡಿರುವುದರಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವ ವೇಳೆ ದಾಖಲಾದ ದೃಶ್ಯಗಳು ಮತ್ತೊಂದು ಕಾರ್ಯಾಚರಣೆ ನಡೆಸುವ ವೇಳೆ ಪ್ಲಾನ್ ಮಾಡಲು ಸಹಾಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

  • ವಿಶ್ವದ ಮೊದಲ 3ಡಿ ಕಲರ್ ಎಕ್ಸ್ ರೇ ಪ್ರಯೋಗ ಯಶಸ್ವಿ: ಏನಿದರ ವಿಶೇಷತೆ?

    ವಿಶ್ವದ ಮೊದಲ 3ಡಿ ಕಲರ್ ಎಕ್ಸ್ ರೇ ಪ್ರಯೋಗ ಯಶಸ್ವಿ: ಏನಿದರ ವಿಶೇಷತೆ?

    ಪ್ಯಾರಿಸ್: ಇಲ್ಲಿಯವರೆಗೆ ಕಪ್ಪು ಬಿಳುಪಿನಲ್ಲಿ ಹೊರ ಬರುತ್ತಿದ್ದ ಎಕ್ಸ್ ರೇ ಚಿತ್ರಗಳು ಇನ್ನು ಮುಂದೆ ಕಲರ್ ನಲ್ಲಿ ಬರಲಿದೆ. ವಿಶ್ವದ ಮೊದಲ 3ಡಿ ಕಲರ್ ಎಕ್ಸ್ ರೇ ಯಂತ್ರದ ಪ್ರಯೋಗವನ್ನು ನ್ಯೂಜಿಲೆಂಡ್ ವಿಜ್ಞಾನಿಗಳು ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.

    ಯುರೋಪ್ ಪರಮಾಣು ಸಂಶೋಧನಾ ಕೇಂದ್ರ(ಸಿಇಆರ್ ಎನ್) ಭೌತಸಾಸ್ತ್ರದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ ಯಂತ್ರದಲ್ಲಿ ಮಾನವನ ದೇಹದ ಕಲರ್ ಎಕ್ಸ್ ರೇ ಮಾಡಿಸಲಾಗಿದ್ದು ಯಶಸ್ವಿಯಾಗಿ ಮೂಡಿ ಬಂದಿದೆ.

    ಹೊಸ ಕಲರ್ ಎಕ್ಸ್ ರೇ ವೈದ್ಯಕೀಯ ಸೇವೆ ಉತ್ತಮ ಪಡಿಸಲು ನೆರವಾಗಲಿದೆ. 3ಡಿ ಕಲರ್ ಎಕ್ಸ್ ರೇ ಲಭ್ಯವಾಗುವುದರಿಂದ ಸ್ಪಷ್ಟ ಹಾಗೂ ಹೆಚ್ಚು ನಿಖರ ಚಿತ್ರಗಳು ಲಭ್ಯವಾಗಲಿದ್ದು, ವೈದ್ಯರು ರೋಗಿಯ ಅನಾರೋಗ್ಯಕ್ಕೆ ನಿಖರ ಕಾರಣ ತಿಳಿಯಲು ಸಹಾಯಕವಾಗಲಿದೆ. ಅಲ್ಲದೇ ಚಿತ್ರದಲ್ಲಿ ಮಾಂಸಖಂಡ, ಮೂಳೆ ಹಾಗೂ ಸಣ್ಣ ಗಾತ್ರದ ಮೂಳೆಯ ನಡುವಿನ ವ್ಯತ್ಯಾಸದ ಬಗ್ಗೆ ಖಚಿತ ಮಾಹಿತಿ ನೀಡುತ್ತದೆ ಎಂದು ಸಿಇಆರ್ ಎನ್ ವಿಜ್ಞಾನಿಗಳು ತಿಳಿಸಿದ್ದಾರೆ.

    ವಿಶ್ವ ಸೃಷ್ಟಿಗೆ ಕಾರಣವಾದ ಈ ಫೋಟಾನ್(ದೇವಕಣ) ಹೆಚ್ಚಿನ ಅಧ್ಯಯನಕ್ಕೆ 2012 ರ ಜುಲೈನಲ್ಲಿ ಸಿಇಆರ್‍ಎನ್ ಸ್ವಿಟ್ಜರ್‍ಲೆಂಡ್ – ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, 100 ಮೀಟರ್ ಆಳದಲ್ಲಿ, 27 ಕಿಮೀ ಉದ್ದದ ಸುರಂಗದಲ್ಲಿ ಕೊಳವೆ ಹಾಕಿ ಮಹಾಸ್ಪೋಟದ ಸಮಯದಲ್ಲಿ ಆದ ಕ್ರಿಯೆಯ ಅಧ್ಯಯನ ಮಾಡಿದ್ದರು. ಈ ಫೋಟಾನ್ ಗಳನ್ನು ಅಧ್ಯಯನಕ್ಕಾಗಿ ಸಿಇಆರ್‍ಎನ್ ಪಿಕ್ಸೆಲ್ ಪತ್ತೆ ಮಾಡಲು ಮೆಡಿಪಿಕ್ಸ್ ಅಭಿವೃದ್ಧಿ ಪಡಿಸಿತ್ತು. ಕ್ಯಾಮೆರಾದಂತೆ ಕೆಲಸ ಮಾಡುವ ಈ ಮೆಡಿಪಿಕ್ಸ್ ಶಟರ್ ತೆರೆದಾಗ ದೇಹದ ಹೈ ರೆಸಲ್ಯೂಶನ್ ಚಿತ್ರವನ್ನು ಸೆರೆಯಾಗುತ್ತದೆ.

    ಈ ತಂತ್ರಜ್ಞಾನದಲ್ಲಿ ಬಳಕೆ ಮಾಡಲಾಗಿರುವ ಸಣ್ಣ ಹಾಗೂ ಹೆಚ್ಚು ರೆಸಲ್ಯೂಶನ್ ಇರುವ ಇಮೇಜಿಂಗ್ ಉಪಕರಣವನ್ನು ಬಳಕೆ ಮಾಡಲಾಗಿದ್ದು, ಈ ಮೂಲಕ ಪಡೆಯುವ ಚಿತ್ರಗಳನ್ನು ಇತರೇ ಯಾವುದೇ ಟೂಲ್ ಬಳಸಿ ಪಡೆಯಲು ಸಾಧ್ಯವಿಲ್ಲ ಎಂದು ಕ್ಯಾಂಟರ್ಬರಿ ವಿಶ್ವ ವಿದ್ಯಾಲಯದ ಫಿಲ್ ಬಟ್ಲರ್ ಹೇಳಿದ್ದಾರೆ.

    ಸದ್ಯ ಒಟಾಗೋ ಹಾಗೂ ಕ್ಯಾಂಟರ್ಬರಿ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸುವ ಈ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನ್ಯೂಜಿಲೆಂಡ್ ಮಾರ್ಸ್ ಬಯೋ ಸಂಸ್ಥೆಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

     

  • ಮೋಡಗಳ ಮರೆಯಲ್ಲಿ ಹಂಪಿ ಕಂಡು ಬಂದಿದ್ದು ಹೀಗೆ

    ಮೋಡಗಳ ಮರೆಯಲ್ಲಿ ಹಂಪಿ ಕಂಡು ಬಂದಿದ್ದು ಹೀಗೆ

    ಬಳ್ಳಾರಿ: ಕಣ್ಣು ಇದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು ಅನ್ನೋ ನಾಣ್ಣುಡಿಯಿದೆ. ವಿಶ್ವ ವಿಖ್ಯಾತ ಹಂಪಿಯನ್ನು ನೋಡುವುದೇ ಒಂದು ವೈಶಿಷ್ಟ್ಯ.

    ವಿಶ್ವ ವಿಖ್ಯಾತ ಹಂಪಿಯನ್ನು ನೋಡಲು ಎರಡು ಕಣ್ಣು ಸಾಲದೂ ಅಂತಾರೆ. ಆದರೆ ಮೋಡಗಳ ಮರೆಯಲ್ಲಿ ನಿಮಿಷ ನಿಮಿಷಕ್ಕೂ ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ನೋಡುವುದೇ ಒಂದು ಹಬ್ಬವಾಗಿದೆ. ಛಾಯಾ ಚಿತ್ರಗ್ರಾಹಕ ಮತ್ತು ಪತ್ರಕರ್ತ ಅವರು ತಮ್ಮ ಕ್ಯಾಮೆರಾದಲ್ಲಿ ಮೋಡಗಳ ಚೆಲ್ಲಾಟಗಳ ಮಧ್ಯೆ ಹಂಪಿಯ ಕೆಲವು ಸ್ಥಳಗಳನ್ನು ಸೆರೆ ಹಿಡಿದಿದ್ದಾರೆ.

    ಕಮಲಾಪುರದ ನಿವಾಸಿ ರಾಚಯ್ಯ ತಮ್ಮ ಕ್ಯಾಮೆರಾಗಳಲ್ಲಿ ಮೋಡಗಳ ಚೆಲ್ಲಾಟಗಳ ಮಧ್ಯೆ ಹಂಪಿ ಹೇಗೆ ಬಿಂಬಿಸುತ್ತವೆ ಅನ್ನೋ ವಿಶೇಷವಾದ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

    ವಿಜಯ ವಿಠ್ಠಲ ದೇವಾಲಯ ಹಾಗೂ ಹಂಪಿಯ ಕಲ್ಲಿನ ರಥದ ಮೇಲೆ ಮೋಡಗಳು ಹಾಯ್ದು ಹೋಗುವ ವೇಳೆ ಈ ಚಿತ್ರಗಳನ್ನು ರಾಚಯ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ಮನೋಜ್ಞವಾಗಿ ಮೂಡಿಬಂದಿದೆ.

  • ಈ ವ್ಯಕ್ತಿಗಾಗಿ ಮತ್ತೆ ಕ್ಯಾಮೆರಾ ಮುಂದೆ ಬಂದ ಬಿ. ಸರೋಜಾದೇವಿ

    ಈ ವ್ಯಕ್ತಿಗಾಗಿ ಮತ್ತೆ ಕ್ಯಾಮೆರಾ ಮುಂದೆ ಬಂದ ಬಿ. ಸರೋಜಾದೇವಿ

    ಬೆಂಗಳೂರು: ಹಿರಿಯ ನಟಿ ಬಿ. ಸರೋಜಾದೇವಿ ಅವರು ಚಿತ್ರರಂಗದಿಂದ ಕೆಲವು ವರ್ಷ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಈಗ ಪುನೀತ್ ರಾಜ್‍ಕುಮಾರ್ ಗಾಗಿ ಮತ್ತೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ.

    ನಟನೆಯಿಂದ ಕೆಲವು ವರ್ಷ ಬ್ರೇಕ್ ತೆಗೆದುಕೊಂಡಿದ್ದ ಬಿ. ಸರೋಜದೇವಿ ಈಗ ಪುನೀತ್ ಅವರಿಗಾಗಿ ಮತ್ತೆ ಸಿನಿಮಾದಲ್ಲಿ ನಟಿಸಲಿದ್ದಾರೆ. ಬಿ. ಸರೋಜಾದೇವಿ ಅವರು ಡಾ. ರಾಜ್‍ಕುಮಾರ್ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಬಾಲನಟನಾಗಿ ಪುನೀತ್ ಅಭಿನಯಿಸಿದ್ದ ‘ಯಾರಿವನು’ ಚಿತ್ರದಲ್ಲಿ ನಟಿಸಿದ್ದ ಬಿ. ಸರೋಜದೇವಿ ಈಗ ಅಪ್ಪು ನಾಯಕನಾಗಿ ಅಭಿನಯಿಸಲಿರುವ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.

    ಬಿ. ಸರೋಜದೇವಿ ಪುನೀತ್ ರಾಜ್‍ಕುಮಾರ್ ಜೊತೆ ನಟಿಸುವುದು ಅಧಿಕೃತವಾಗಿದ್ದು, ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿದ್ದು, ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ.

    ಈಗ ಫ್ಯಾಮಿಲಿ ಶೋನಲ್ಲಿ ಪುನೀತ್ ರಾಜ್‍ಕುಮಾರ್ ಬ್ಯುಸಿಯಾಗಿದ್ದು, ಚಿತ್ರದ ಶೂಟಿಂಗ್ ಮಾರ್ಚ್ 5 ರಿಂದ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಕ್ಕೆ ನಾಯಕಿಯಾಗಿ ವಿಜಯ್ ದೇವರಕೊಂಡ ಜೊತೆ ನಟಿಸಿದ್ದ ಪ್ರಿಯಾಂಕ ಜಾವಲ್‍ಕರ್ ಆಯ್ಕೆ ಆಗಿದ್ದಾರೆ.

  • ಸಿಲಿಕಾನ್ ಸಿಟಿ ಮಹಿಳೆಯರೇ ಹುಷಾರ್- ಬಾತ್‍ರೂಂ ನಲ್ಲಿ ಕ್ಯಾಮೆರಾ ಇಟ್ಟ ಪಕ್ಕದ್ಮನೆ ಅಂಕಲ್

    ಸಿಲಿಕಾನ್ ಸಿಟಿ ಮಹಿಳೆಯರೇ ಹುಷಾರ್- ಬಾತ್‍ರೂಂ ನಲ್ಲಿ ಕ್ಯಾಮೆರಾ ಇಟ್ಟ ಪಕ್ಕದ್ಮನೆ ಅಂಕಲ್

    ಬೆಂಗಳೂರು: ಬಾತ್ ರೂಂನಲ್ಲಿ ಪಕ್ಕದ ಮನೆಯವನು ಸಿಕ್ರೇಟ್ ಕ್ಯಾಮೆರಾ ಇಟ್ಟು ರೆಕಾರ್ಡ್ ಮಾಡಿದ ಘಟನೆ ಬೆಂಗಳೂರಿನ ಮೈಕೋ ಲೇಔಟ್‍ನಲ್ಲಿ ನಡೆದಿದೆ.

    ಜೀವನ್ ಸೇಠ್ ಕ್ಯಾಮೆರಾ ಇಟ್ಟ ಆರೋಪಿ. ಜೀವನ್ ಸ್ವಲವೂ ಅನುಮಾನ ಬಾರದಂತೆ ಸ್ನಾನದ ಕೋಣೆಯಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ರೆಕಾರ್ಡ್ ಮಾಡಿದ್ದಾನೆ. ಸ್ನಾನದ ವೇಳೆ ಮಹಿಳೆ ಕಣ್ಣಿಗೆ ಕ್ಯಾಮೆರಾ ಕಂಡುಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಪಕ್ಕದ ಮನೆಯ ವ್ಯಕ್ತಿಯೇ ಬಾತ್ ರೂಮ್ ಕಿಟಕಿಗೆ ಕ್ಯಾಮೆರಾ ಫಿಕ್ಸ್ ಮಾಡಿರೋದು ಬೆಳಕಿಗೆ ಬಂದಿದೆ.

    ನಂತರ ಮಹಿಳೆ ಪಕ್ಕದ ಮನೆಯ ಆರೋಪಿ ಜೀವನ್ ಸೇಠ್ ವಿರುದ್ಧ ದೂರು ನೀಡಿದ್ದು, ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ಆರೋಪಿಯನ್ನ ಬಂಧಿಸಿದ್ದಾರೆ.

    ಆರೋಪಿ ಜೀವನ್ ಸೇಠ್ ಗೆ ಈಗಾಗಲೇ ಮದುವೆಯಾಗಿ, ಒಂದು ಮಗು ಕೂಡ ಇದೆ ಎಂದು ತಿಳಿದು ಬಂದಿದೆ.

  • ಆಗಸದಲ್ಲಿ ಮೂಡಿತು ಸಮುದ್ರದ ಅಲೆಗಳು!

    ಆಗಸದಲ್ಲಿ ಮೂಡಿತು ಸಮುದ್ರದ ಅಲೆಗಳು!

    ನೆಲಮಂಗಲ: ಆಕಾಶದಲ್ಲಿ ಮೋಡಗಳು ಸಮುದ್ರದ ಅಲೆಗಳ ರೂಪದಲ್ಲಿ ಕಾಣುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂದು ಸಂಜೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಈ ದೃಶ್ಯಗಳು ಆಗಸದಲ್ಲಿ ಕಂಡು ಬಂದಿದೆ.

    ನೆಲಮಂಗಲ

    ಸೂರ್ಯಾಸ್ತದ ವೇಳೆ ಪದರಪದರ ರೂಪದಲ್ಲಿ ಮೋಡಗಳ ನಡುವಿನ ಬೆಳಕು, ನೋಡುಗರಲ್ಲಿ ವಿಸ್ಮಯಕಾರಿ ಆಕರ್ಷಿಸಿತ್ತು. ಈ ಆಗಸದಲ್ಲಿನ ಚಮತ್ಕಾರ ಹಾಗೂ ಪ್ರಕೃತಿಯ ಸೋಜಿಗವನ್ನು ಸಾರ್ವಜನಿಕರು ಒಂದು ಕ್ಷಣ ನಿಂತು ಕಣ್ತುಂಬಿಕೊಂಡರು.

    ನೆಲಮಂಗಲ ಮಾತ್ರವಲ್ಲದೇ ಬೆಂಗಳೂರಿನ ಹಲವು ಕಡೆ ಆಕಾಶದಲ್ಲಿ ಈ ದೃಶ್ಯ ಕಂಡುಬಂದಿದ್ದು ಜನ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸಿ ಸಂತಸ ಪಟ್ಟರು.

    ಹೊರಮಾವು
    ಹೊರಮಾವು
    ಹೊರಮಾವು
    ಯಶವಂತಪುರ
    ಬೈಯಪ್ಪನಹಳ್ಳಿ
    ಬೈಯಪ್ಪನಹಳ್ಳಿ
    ಬೈಯಪ್ಪನಹಳ್ಳಿ
  • ಚಪ್ಪಲಿಯಲ್ಲಿ ಕ್ಯಾಮೆರಾ ಇಟ್ಕೊಂಡು ಮಹಿಳೆಯರ ಫೋಟೋ ತೆಗೆಯುತ್ತಿದ್ದ ವಿಕೃತಕಾಮಿ ಅರೆಸ್ಟ್

    ಚಪ್ಪಲಿಯಲ್ಲಿ ಕ್ಯಾಮೆರಾ ಇಟ್ಕೊಂಡು ಮಹಿಳೆಯರ ಫೋಟೋ ತೆಗೆಯುತ್ತಿದ್ದ ವಿಕೃತಕಾಮಿ ಅರೆಸ್ಟ್

    ತಿರುವಂತನಪುರಂ: ತನ್ನ ಪಾದರಕ್ಷೆಯಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟುಕೊಂಡು ಮಹಿಳೆಯರ ಫೋಟೋ ತೆಗೆಯುತ್ತಿದ್ದ ಕಾಮುಕನೊಬ್ಬನನ್ನು ಪೊಲೀಸರ ಅತಿಥಿಯಾಗಿದ್ದಾನೆ.

    ಕೇರಳದ ಬಿಜು ಬಂಧಿತ ಆರೋಪಿ. ಈತ ತ್ರಿಶೂರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಲೋಲ್‍ಸವಂ(ರಾಜ್ಯ ಕಲಾ ಹಬ್ಬ) ಕಾರ್ಯಕ್ರಮದಲ್ಲಿ ಮಹಿಳೆಯರ ಫೋಟೋ ತೆಗೆಯಲು ಯತ್ನಿಸುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ.

    ಪಾದರಕ್ಷೆಯಲ್ಲಿ ಕ್ಯಾಮೆರಾ ಹೀಗಿತ್ತು:
    ಪಾದರಕ್ಷೆಯಲ್ಲಿ ಒಂದು ಸಣ್ಣ ರಂಧ್ರ ಮಾಡಿದ್ದ. ಈ ರಂಧ್ರಕ್ಕೆ ಕ್ಯಾಮೆರಾ ಬರುವಂತೆ ಫೋನನ್ನು ಜೋಡಿಸಿದ್ದ. ಈ ಮೂಲಕ ಆತ ಮಹಿಳೆಯರ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದ. ಒಂದು ವೇಳೆ ಬೇರೆಯವರು ತನ್ನ ಪಾದರಕ್ಷೆಯ ಮೇಲೆ ಕಾಲಿಟ್ಟರೆ ಫೋನಿಗೆ ಹಾನಿ ಆಗಬಾರದೆಂದು ಮುಂಜಾಗೃತವಾಗಿ ವಿಶೇಷ ಸ್ಟೀಲ್ ಕವರ್ ಕೂಡಾ ಅಳವಡಿಸಿಕೊಂಡಿದ್ದ.

    ಬಿಜು ಫೋನ್ ಹಾಕಿದ ಪಾದರಕ್ಷೆ ಹಾಕಿಕೊಂಡು ಜನಸಮೂಹದ ಮಧ್ಯೆ ಹೋಗುತ್ತಿದ್ದ. ಅಲ್ಲಿ ಹುಡುಗಿಯರು ಮತ್ತು ಮಹಿಳೆಯರ ಕೆಳಗಿನಿಂದ ಫೋಟೋಗಳನ್ನು ತೆಗೆದುಕೊಳುತ್ತಿದ್ದ. ಅಥವಾ ಜನಸಂದಣಿ ಇರುವ ಕಡೆ ಪಾದರಕ್ಷೆಗಳನ್ನ ಬಿಟ್ಟು, ದೂರದಲ್ಲಿ ನಿಂತು ನೋಡುತ್ತಿದ್ದ. ಒಂದು ವೇಳೆ ಫೋನ್ ಬ್ಯಾಟರಿ ಖಾಲಿಯಾದ್ರೂ ತನ್ನ ಈ ಕೆಲಸಕ್ಕೆ ಅಡ್ಡಿಯಾಗಬಾರದೆಂದು ಎರಡನೇ ಫೋನ್ ಬಳಸುತ್ತಿದ್ದ.

    ಸಿಕ್ಕಿಬಿದ್ದಿದ್ದು ಹೇಗೆ?
    ಕೆಲ ದಿನದ ಹಿಂದೆ ಪೊಲೀಸರು ಬಿಜು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಿಧನವಾಗಿ ಕಾಲುಗಳನ್ನೇ ನೋಡುತ್ತಾ ಮುಂದಕ್ಕೆ ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಇದರಿಂದ ಅನುಮಾನುಗೊಂಡು ಪೊಲೀಸರು ವಿಚಾರಣೆ ನಡೆಸಿದಾಗ ಈತನ ಖತರ್ನಾಕ್ ಕೆಲಸ ಬಯಲಾಗಿದೆ.

    ಆದ್ರೆ ಈ ರೀತಿಯ ಘಟನೆ ನಡೆದಿರೋದು ಇದೇ ಮೊದಲೇನಲ್ಲ. 2015 ರಲ್ಲಿ, ಶೂನಲ್ಲಿ ಕ್ಯಾಮೆರಾವನ್ನು ಬಳಸಿಕೊಂಡು ಮಹಿಳೆಯರ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ವಕೀಲನನ್ನ ದೆಹಲಿಯಲ್ಲಿ ಬಂಧಿಸಲಾಗಿತ್ತು. ಇಂಗ್ಲೆಂಡಿನ ಉದ್ಯಮಿಯೊಬ್ಬ ಇದೇ ರೀತಿಯ ಆರೋಪದ ಮೇಲೆ ಬಂಧಿತನಾಗಿದ್ದ. 2014 ರಲ್ಲಿ ಜಪಾನ್ ನಲ್ಲೂ ಫೋಟೋಗಳನ್ನು ತೆಗೆದುಕೊಳ್ಳಲು ‘ಶೂ ಕ್ಯಾಮೆರಾ’ ವನ್ನು ವಿನ್ಯಾಸಗೊಳಿಸಿದ್ದ ಪ್ರಕರಣ ಬಯಲಾಗಿತ್ತು.

     

  • ಬಾಡಿಗೆಗೆ ಮನೆ ಕೊಟ್ಟು ಕ್ಯಾಮೆರಾ ಇಟ್ಟ- ಗಂಡ, ಹೆಂಡ್ತಿ ಬೆತ್ತಲೆ ವಿಡಿಯೋ ವೆಬ್‍ಸೈಟ್‍ಗೆ ಹಾಕಿದ ಕಾಮುಕ

    ಬಾಡಿಗೆಗೆ ಮನೆ ಕೊಟ್ಟು ಕ್ಯಾಮೆರಾ ಇಟ್ಟ- ಗಂಡ, ಹೆಂಡ್ತಿ ಬೆತ್ತಲೆ ವಿಡಿಯೋ ವೆಬ್‍ಸೈಟ್‍ಗೆ ಹಾಕಿದ ಕಾಮುಕ

    ಬೆಂಗಳೂರು: ವ್ಯಕ್ತಿಯೊಬ್ಬ ದಂಪತಿಯ ಬೆಡ್‍ರೂಮ್ ಗೆ ಕ್ಯಾಮೆರಾ ಇಟ್ಟು ವಿಕೃತಿ ಮೆರೆದಿರೋ ಘಟನೆ ಕೋರಮಂಗಲದಲ್ಲಿ ನಡೆದಿದೆ.

    ಕೊರಮಂಗಲದ ಅಂಜನ್ ಎಂಬಾತ ಈ ವಿಕೃತ ಕೆಲಸ ಮಾಡಿದ್ದಾನೆ. ಅಂಜನ್ ಮನೆಯಲ್ಲಿ ದಂಪತಿ ಬಾಡಿಗೆಗೆ ವಾಸವಾಗಿದ್ದರು. ದಂಪತಿಯ ರೂಮಿಗೆ ಕ್ಯಾಮೆರಾ ಇಟ್ಟ ಅಂಜನ್, ಅವರ ಖಾಸಗಿ ದೃಶ್ಯಗಳನ್ನ ಸೆರೆಹಿಡಿದು ಅಶ್ಲೀಲ ವೆಬ್‍ಸೈಟ್ ಗೆ ಅಪ್ಲೋಡ್ ಮಾಡಿದ್ದಾನೆ.

    ದಂಪತಿಯ ಸ್ನೇಹಿತರೊಬ್ಬರು ಈ ದೃಶ್ಯವನ್ನ ವೆಬ್‍ಸೈಟ್ ನಲ್ಲಿ ಗಮನಿಸಿದ್ದರು. ತನ್ನ ಸ್ನೇಹಿತ ಮತ್ತು ಆತನ ಹೆಂಡತಿಯ ವಿಡಿಯೋ ನೋಡಿ ಶಾಕ್ ಆಗಿದ್ರು. ಬಳಿಕ ತನ್ನ ಸ್ನೇಹಿತನಿಗೆ ಕರೆ ಮಾಡಿ ವೆಬ್ ಸೈಟ್ ನಲ್ಲಿ ವಿಡಿಯೋ ಇದ್ದ ಬಗ್ಗೆ ಮಾಹಿತಿ ನೀಡಿದ್ದರು.

    ತಮ್ಮ ಖಾಸಗಿ ದೃಶ್ಯವನ್ನ ಯಾರು ರೆಕಾರ್ಡ್ ಮಾಡಿದ್ದಾರೆಂದು ಪರೀಶಿಲಿಸಿದಾಗ ಮನೆ ಮಾಲೀಕನ ಮಗನ ಕೈವಾಡ ಬಯಲಾಗಿದೆ. ಮನೆಯ ನಕಲಿ ಕೀ ಬಳಿಸಿ ದಂಪತಿ ಇಲ್ಲದೆ ಇದ್ದಾಗ ಅಂಜನ್ ಕ್ಯಾಮೆರಾ ಅಳವಡಿಸಿದ್ದ ಎಂಬುದು ಗೊತ್ತಾಗಿದೆ.

    ಸದ್ಯ ದಂಪತಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

  • ಡ್ರೋನ್‍ನಲ್ಲಿ ಮೈಸೂರು ದಸರಾ ಶೂಟಿಂಗ್‍ಗೆ ಬ್ರೇಕ್

    ಡ್ರೋನ್‍ನಲ್ಲಿ ಮೈಸೂರು ದಸರಾ ಶೂಟಿಂಗ್‍ಗೆ ಬ್ರೇಕ್

    ಮೈಸೂರು: ವಿಶ್ವವಿಖ್ಯಾತ ದಸರಾವನ್ನು ಡ್ರೋನ್ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಖಾಸಗಿಯವರು ಹಾಗೂ ಮಾಧ್ಯಮಗಳು ಡ್ರೋನ್ ಕ್ಯಾಮೆರಾ ಬಳಸುವಂತಿಲ್ಲ. ಭದ್ರತೆಯ ದೃಷ್ಟಿಯಿಂದ ಒಂದು ಡ್ರೋನ್ ಕ್ಯಾಮೆರಾವನ್ನು ಬಳಸಲು ಪೊಲೀಸ್ ಇಲಾಖೆ ಮುಂದಾಗಿದೆ ಎಂದು ಅವರು ತಿಳಿಸಿದರು.

    ದಸರಾ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ 720 ರೌಡಿಶೀಟರ್, ಹಳೆಯ ಪಿಕ್ ಪ್ಯಾಕೇಟರ್‍ಗಳನ್ನು ವಶಕ್ಕೆ ಪಡೆಯಲಾಗುವುದು. 40 ಮೊಬೈಲ್ ಪ್ಯಾಟ್ರೋಲ್ ಹಾಗೂ 100ಕ್ಕೂ ಹೆಚ್ಚು ಮಫ್ತಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

    ಸೆ. 22 ರಿಂದ 24ರ ವರೆಗೆ ಹಾಗೂ ಸೆ. 28ರಿಂದ ಅಕ್ಟೋಬರ್ 2ರವರೆಗೆ ಬೆಳಗ್ಗೆ 6 ರಿಂದ ರಾತ್ರಿ 9.30 ರವರೆಗೆ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಮಹಲ್ ಹೆಲಿಪ್ಯಾಡ್‍ನಿಂದ ಉಚಿತ ಸಾರಿಗೆ ಬಸ್‍ಗಳ ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಲಲಿತಮಹಲ್ ಹೆಲಿಪ್ಯಾಡ್ ಬಳಿ ನಿಲುಗಡೆಗೆಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

  • ಫೋಟೋಗ್ರಾಫರ್‍ಗಳಿಗಾಗಿ ಮಾರುಕಟ್ಟೆಗೆ ಬಂದಿದೆ ವಾಟರ್‍ಪ್ರೂಫ್ ಬೀನ್‍ಬ್ಯಾಗ್

    ಫೋಟೋಗ್ರಾಫರ್‍ಗಳಿಗಾಗಿ ಮಾರುಕಟ್ಟೆಗೆ ಬಂದಿದೆ ವಾಟರ್‍ಪ್ರೂಫ್ ಬೀನ್‍ಬ್ಯಾಗ್

    ಬೆಂಗಳೂರು: ಜೀಪಿನ ಮೇಲೆ, ನದಿಯಲ್ಲಿ ಕುಳಿತು ಸುಲಭವಾಗಿ ಚೆನ್ನಾಗಿ ಫೋಟೋ ತೆಗೆಯುವುದು ತುಸು ಕಷ್ಟ. ಈ ಕಷ್ಟ ನಿವಾರಣೆಗಾಗಿ ವೈಲ್ಡ್ ಲೈಫ್ ಫೋಟೋಗ್ರಾಫರ್‍ಗಳಿಗಾಗಿ ವಿಲ್ಡ್‍ವೋಯಾಜರ್ ಕಂಪೆನಿ ಬೀನ್ ಬ್ಯಾಗನ್ನು ಮಾರುಕಟ್ಟೆಗೆ ಪರಿಚಯಿಸಿದೆ.

    ವಾಟರ್ ಪ್ರೂಫ್ ಮತ್ತು ಸ್ಪಿಲ್ ಪ್ರೂಫ್ ಬೀನ್ ಬ್ಯಾಗ್ ಇದಾಗಿದ್ದು ದೀರ್ಘ ಕಾಲ ಬಾಳಿಕೆ ಬರಲು ಮಿಲಿಟರಿ ಟೆಂಟ್ ದರ್ಜೆಯ ಕಚ್ಚಾವಸ್ತುಗಳನ್ನು ಬಳಸಿ ತಯಾರಿಸಲಾಗಿದೆ.

    ಈ ಬೀನ್ ಬ್ಯಾಗ್ ಗಾತ್ರ ದೊಡ್ಡದು ಅಲ್ಲ, ತೀರಾ ಚಿಕ್ಕದೂ ಅಲ್ಲ, ಮಾಧ್ಯಮ ಗಾತ್ರವನ್ನು ಹೊಂದಿದ್ದು ಫೋಟೋಗ್ರಾಫರ್ ಗಳಿಗೆ ಹೇಳಿ ಮಾಡಿಸಿದ್ದಾಗಿದೆ ಎಂದು ಕಂಪೆನಿ ತಿಳಿಸಿದೆ.

     

    ವಾಟರ್ ಪ್ರೂಫ್ ಬೀನ್ ಬ್ಯಾಗ್ ಹೆಸರನ್ನು ಹೇಳಿಕೊಂಡು ಕೆಲ ಬೀನ್‍ಬ್ಯಾಗ್ ಗಳು ಗ್ರಾಹಕರನ್ನು ವಂಚಿಸುತ್ತದೆ. ಆದರೆ ಇದರಲ್ಲಿ ಒಂದು ಚೂರು ನೀರು ಒಳಗಡೆ ಹೋಗುವುದಿಲ್ಲ. 400 ಎಂಎಂ, 500 ಎಂಎಂ, 600 ಎಂಎಂ ಮತ್ತು 800 ಎಂಎಂ ಕ್ಯಾಮೆರಾ ಲೆನ್ಸ್ ಬಳಸುವ ಫೋಟೋಗ್ರಾಫರ್ ಗಳಿಗೆ ಇದು ಸಹಕಾರಿಯಾಗಲಿದೆ ಎಂದು ವಿಲ್ಡ್‍ವೋಯಾಜರ್ ತಿಳಿಸಿದೆ. ಈ ಬೀನ್ ಬ್ಯಾಗ್ ಬೆಲೆ 1,100 ರೂ. ಆಗಿದ್ದು, ಖರೀದಿಸಲು ಇಲ್ಲಿ ಕ್ಲಿಕ್ ಮಾಡಬಹುದು: wildvoyager.com

    ಕ್ಯಾಮೆರಾ ರೇನ್, ಡಸ್ಟ್ ಕವರ್

    ಬೀನ್ ಬ್ಯಾಗ್ ಅಲ್ಲದೇ ಕ್ಯಾಮೆರಾ ರೇನ್, ಡಸ್ಟ್ ಕವರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಮಾಲ್, ಮೀಡಿಯಂ, ಲಾರ್ಜ್, ಎಕ್ಸ್‍ಟ್ರಾ ಲಾರ್ಜ್ ಸೈಜ್‍ನಲ್ಲಿ ಲಭ್ಯವಿದೆ. ಇವುಗಳ ಬೆಲೆ  900 ರೂ.ನಿಂದ. 1,200 ರೂ. ಇದ್ದು ಖರೀದಿಸಲು ಕ್ಲಿಕ್ ಮಾಡಿ: camera rain dust cover

    ಮಾಸ್ಕ್:

    ಇಷ್ಟೇ ಅಲ್ಲದೇ ಮುಖವನ್ನು ಮುಚ್ಚುವ ಮಾಸ್ಕ್ ಬಿಡುಗಡೆ ಮಾಡಿದ್ದು, ಇದಕ್ಕೆ 600 ರೂ. ನಿಗದಿ ಪಡಿಸಿದೆ. ಖರೀದಿಸಲು ಕ್ಲಿಕ್ ಮಾಡಿ: camouflage face mask