Tag: ಕ್ಯಾಮೆರಾಮೆನ್

  • ತೆಲುಗು ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ಕನ್ನಡದ ನಟ ಚಂದನ್‍ಗೆ ಕಪಾಳ ಮೋಕ್ಷ..!

    ತೆಲುಗು ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ಕನ್ನಡದ ನಟ ಚಂದನ್‍ಗೆ ಕಪಾಳ ಮೋಕ್ಷ..!

    ನ್ನಡ ಕಿರುತೆರೆಯ ಸ್ಟಾರ್ ನಟ ಚಂದನ್ ಕುಮಾರ್‌ಗೆ ತೆಲುಗು ತಂತ್ರಜ್ಞರು ಕಪಾಳಮೋಕ್ಷ ಮಾಡಿರುವ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಕನ್ನಡ ಮಾತ್ರವಲ್ಲದೇ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಚಂದನ್ ಕುಮಾರ್ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಹೈದರಾಬಾದ್‍ನಲ್ಲಿ ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿಯ ಶೂಟಿಂಗ್ ನಡೆಯುತ್ತಿತ್ತು. ಈ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಚಂದನ್ ಕುಮಾರ್ ಅಭಿನಯಿಸುತ್ತಿದ್ದಾರೆ. ಈ ಧಾರವಾಹಿ ಶೂಟಿಂಗ್ ಸೆಟ್‍ನಲ್ಲಿ ಅಲ್ಲಿನ ತಂತ್ರಜ್ಞರು ನಟ ಚಂದನ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ವಸತಿ ಶಾಲೆಯಲ್ಲಿ ‘ವಿಕ್ರಾಂತ್ ರೋಣ ‘ ಪೈರಸಿ ಸಿನಿಮಾ ವೀಕ್ಷಣೆ : ಕ್ರಮಕ್ಕೆ ಒತ್ತಾಯ

    ಶೂಟಿಂಗ್ ವೇಳೆ ಕ್ಯಾಮೆರಾಮೆನ್ ಹಾಗೂ ತಂತ್ರಜ್ಞರ ಜೊತೆ ಚಂದನ್ ಕುಮಾರ್ ಕಿರಿಕ್ ಮಾಡಿಕೊಂಡಿದ್ದು, ಕ್ಯಾಮೆರಾ ಅಸಿಸ್ಟೆಂಟ್‍ಗೆ ಮೊದಲು ಚಂದನ್ ಅವರೇ ಹಲ್ಲೆ ಮಾಡಿದ್ದಾರೆ ಎಂಬ ಆರೋಪಿಸಲಾಗಿದ್ದು, ಬಳಿಕ ತೆಲುಗು ತಂತ್ರಜ್ಞರು ಒಟ್ಟಾಗಿ ಚಂದನ್‍ಗೆ ನಿಂದಿಸಿದ್ದಾರೆ. ಸೀರಿಯಲ್ ತಂತ್ರಜ್ಞರ ಜೊತೆ ಮಾತಿಗೆ ಮಾತು ಬೆಳೆದು ಕನ್ನಡ ನಟ ಚಂದನ್‍ಗೆ ಅವರು ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಹಲ್ಲೆ ನಡೆದಿದ್ದು, ಇದೀಗ ಈ ವೀಡಿಯೋ ವೈರಲ್ ಆಗಿದೆ.

    ಚಂದನ್ ಹಿಂದೆ ಲಕ್ಷ್ಮೀ ಬಾರಮ್ಮ, ‘ರಾಧಾ ಕಲ್ಯಾಣ’, ‘ಸರ್ವ ಮಂಗಳ ಮಾಂಗಲ್ಯೇ’ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಲವ್ ಯು ಅಲಿಯಾ, ಅರ್ಜುನ್ ಸರ್ಜಾ ನಿರ್ದೇಶನದ “ಪ್ರೇಮ ಬರಹ” ಸೇರಿ ಕನ್ನಡದ ಕೆಲವು ಸಿನಿಮಾಗಳಲ್ಲೂ ಚಂದನ್ ಬಣ್ಣಹಚ್ಚಿದ್ದಾರೆ. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ’ ಮರಳಿ ಮನಸಾಗಿದೆ, ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ನಾಡದೇವಿ ಚಾಮುಂಡೇಶ್ವರಿ ಹಬ್ಬಕ್ಕೆ ದಿನಗಣನೆ – ಮೈಸೂರು ದಸರಾಕ್ಕೆ ಬಹಿಷ್ಕಾರ ಹಾಕಿದ ಮಾವುತ ಕಾವಾಡಿಗಳು

    ಬಿಗ್ ಬಾಸ್‍ನಲ್ಲೂ ಕಾಣಿಸಿಕೊಂಡಿದ್ದ ಚಂದು, ನಟಿ ಕವಿತಾ ಗೌಡರನ್ನು ವಿವಾಹವಾಗಿದ್ದಾರೆ. ಚಂದನ್ ಕುಮಾರ್ ಒಡೆತನದಲ್ಲಿ ಬಿರಿಯಾನಿ ಹೋಟೆಲ್ ಕೂಡ ಇದ್ದು, ಇದರ ಜೊತೆಗೆ ಪ್ರೋಟೀನ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿತ್ರದುರ್ಗದ ಪಬ್ಲಿಕ್ ಟಿವಿ ಕ್ಯಾಮೆರಾಮನ್ ಕೊರೊನಾಗೆ ಬಲಿ

    ಚಿತ್ರದುರ್ಗದ ಪಬ್ಲಿಕ್ ಟಿವಿ ಕ್ಯಾಮೆರಾಮನ್ ಕೊರೊನಾಗೆ ಬಲಿ

    – ಪಬ್ಲಿಕ್ ಟಿವಿ ಆಡಳಿತ ಮಂಡಳಿಯಿಂದ ಕುಟುಂಬಕ್ಕೆ ಪರಿಹಾರ

    ಚಿತ್ರದುರ್ಗ: ಕೊರೊನಾ ಮಹಾಮಾರಿಗೆ ಪಬ್ಲಿಕ್ ಟಿವಿ ಕ್ಯಾಮೆರಾಮನ್ ಬಸವರಾಜ ಕೋಟಿ(43) ತುತ್ತಾಗಿದ್ದಾರೆ.

    ಕಳೆದ 5 ವರ್ಷಗಳಿಂದ ಚಿತ್ರದುರ್ಗದಲ್ಲಿ ಪಬ್ಲಿಕ್ ಟಿವಿ ಕ್ಯಾಮಾರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಕೋಟಿ, ಕೋವಿಡ್ ಎರಡನೇ ಅಲೆಗೆ ಬಲಿಯಾಗಿದ್ದಾರೆ.

    ಕಳೆದ ಹದಿನೈದು ದಿನಗಳಿಂದ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಟಿ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮೃತ ಬಸವರಾಜ ಕೋಟಿ ಅವರಿಗೆ ಹತ್ತು ವರ್ಷದ ಓರ್ವ ಪುತ್ರ ಮತ್ತು ಹನ್ನೆರಡು ವರ್ಷದ ಖುಷಿ ಎಂಬ ಇಬ್ಬರು ಪುಟಾಣಿ ಮಕ್ಕಳು, ಪತ್ನಿಯಾದ ಶಾಂತ ಸೇರಿದಂತೆ ಹೆತ್ತವರು ಹಾಗೂ ಅಪಾರ ಬಂಧಗಳನ್ನು ಅಗಲಿದ್ದಾರೆ.

    ಬಸವರಾಜ್ ಅಗಲಿಕೆಗೆ ಪಬ್ಲಿಕ್ ಟಿವಿ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಅಲ್ಲದೆ ಮೃತ ಬಸವರಾಜ್ ಕುಟುಂಬಕ್ಕೆ ಪಬ್ಲಿಕ್ ಟಿವಿ ಆಡಳಿತ ಮಂಡಳಿ 10 ಲಕ್ಷ ರೂ. ಪರಿಹಾರ ಘೋಷಿಸಿದೆ.

  • ಕೇವಲ ವಧುವಿನ ಫೋಟೋ ಮಾತ್ರ ಕ್ಲಿಕ್ – ರೊಚ್ಚಿಗೆದ್ದ ವರ, ಕ್ಯಾಮೆರಾಮೆನ್ ಕಪಾಳಕ್ಕೆ ಏಟು

    ಕೇವಲ ವಧುವಿನ ಫೋಟೋ ಮಾತ್ರ ಕ್ಲಿಕ್ – ರೊಚ್ಚಿಗೆದ್ದ ವರ, ಕ್ಯಾಮೆರಾಮೆನ್ ಕಪಾಳಕ್ಕೆ ಏಟು

    ಬೆಂಗಳೂರು: ಕೇವ ವಧುವಿನ ಫೋಟೋವನ್ನು ಮಾತ್ರ ಕ್ಲಿಕ್ ಮಾಡುತ್ತಿದ್ದ ಕ್ಯಾಮೆರಾಮ್ಯಾನ್‍ಗೆ ವರನೊಬ್ಬ ರೊಚ್ಚಿಗೆದ್ದು ಕಪಾಳಕ್ಕೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ವರ ಕ್ಯಾಮೆರಾಮ್ಯಾನ್‍ಗೆ ಬಾರಿಸುತ್ತಿದ್ದಂತೆ ವಧು ನಗೆಯಲ್ಲಿ ತೇಲಿದ್ದು, ನಗು ತಡೆಯಲಾಗದೆ ವಧು ನೆಲಕ್ಕೆ ಬಿದ್ದು ಹೊರಳಾಡುತ್ತಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ವಧುವನ್ನು ತುಂಬಾ ಇಷ್ಟ ಪಟ್ಟೆ ಎಂದೆಲ್ಲ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.

    ವರ ಹೊಡೆಯುತ್ತಿದ್ದಂತೆ ವಧು ಜೋರಾಗಿ ನಕ್ಕಿದ್ದು, ವರನ ಅಸಹಜ ವರ್ತನೆಯನ್ನು ಕಂಡ ನೆಟ್ಟಿಗರು ಇದೊಂದು ಪ್ರಾಂಕ್ ವಿಡಿಯೋ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ವಧು ಸಂದರ್ಭವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಇಂದು ನನ್ನ ನಗುವಿಗೆ ಕಾರಣರಾಗಿದ್ದಾರೆ ಎಂದೆಲ್ಲ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ತರಹೇವಾರಿ ಕಮೆಂಟ್‍ಗಳ ಮೂಲಕ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • ಫೋಟೋ ಕ್ಲಿಕ್ಕಿಸುತ್ತಿದ್ದ ಕ್ಯಾಮೆರಾಮೆನ್‍ಗೆ ಮಲೈಕಾ ಸನ್ನೆ: ವಿಡಿಯೋ

    ಫೋಟೋ ಕ್ಲಿಕ್ಕಿಸುತ್ತಿದ್ದ ಕ್ಯಾಮೆರಾಮೆನ್‍ಗೆ ಮಲೈಕಾ ಸನ್ನೆ: ವಿಡಿಯೋ

    ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಫೋಟೋಗಳು ಹಾಗೂ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗೆಯೇ ಅವರು ಜಿಮ್‍ಗೆ ಹೋಗುವ ವೇಳೆ ಸೆರೆ ಹಿಡಿಯಲಾಗಿದ್ದ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.

    ಮಲೈಕಾ ಅವರ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಲೈಕಾ ಕಾರಿನಿಂದ ಇಳಿದು ಜಿಮ್‍ಗೆ ಬೇಗ ಬೇಗ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ ಛಾಯಗ್ರಾಹಕರು ಅವರ ಫೋಟೋವನ್ನು ಕ್ಲಿಕ್ಕಿಸುತ್ತಿರುತ್ತಾರೆ. ಈ ವೇಳೆ ಮಲೈಕಾ ಹಿಂದೆ ತಿರುಗಿ ಫೋಟೋಗ್ರಾಫರ್ ಗಳಿಗೆ ಮಾಸ್ಕ್ ಧರಿಸಿ ಎಂದು ಸನ್ನೆ ಮಾಡುತ್ತಾರೆ.

     

    View this post on Instagram

     

    #malaikaarora snapped at divayoga today #viralbhayani @viralbhayani

    A post shared by Bollywood Pap (@bollywoodpap) on

    ಸದ್ಯ ವಿಶ್ವಾದ್ಯಂತ ಕೊರೊನಾ ವೈರಸ್ ಹರಡುತ್ತಿದೆ. ಭಾರತದಲ್ಲಿ ಕೊರೊನಾ ವೈರಸ್‍ಗೆ ಇಬ್ಬರು ಬಲಿಯಾಗಿದ್ದಾರೆ. ಹೀಗಿರುವಾಗ ಮಲೈಕಾ ಫೋಟೋಗ್ರಾಫರ್ ಗಳಿಗೆ ಮಾಸ್ಕ್ ಧರಿಸಿ ಎಂದು ಸನ್ನೆ ಮಾಡಿದ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

    ಮಲೈಕಾ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅವರು ತಮ್ಮ ಪ್ರಿಯಕರ, ನಟ ಅರ್ಜುನ್ ಕಪೂರ್ ಅವರ ಕೈ ಹಿಡಿದುಕೊಂಡು ಹೋಗುತ್ತಿದ್ದಾರೆ. ಸದ್ಯ ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

     

    View this post on Instagram

     

    #arjunkapoor #malaikaarora

    A post shared by Anil Nalawade (@anil_nalawade) on

    ಸದ್ಯ ಮಲೈಕಾ ಈಗ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್’ ಕಾರ್ಯಕ್ರಮದಲ್ಲಿ ತೀರ್ಪುಗಾರ್ತಿ ಆಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಲೈಕಾ ಜೊತೆ ಕೊರಿಯೋಗ್ರಫರ್ ಗಳಾದ ಗೀತಾ ಕಪೂರ್ ಹಾಗೂ ಟೆರೆನ್ಸ್ ಲೂಯಿಸ್ ಕೂಡ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

  • ಚೆಂಡು ವಿರೂಪಗೊಳಿಸಿದ ಆಸೀಸ್ ಕಳ್ಳಾಟ ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ!

    ಚೆಂಡು ವಿರೂಪಗೊಳಿಸಿದ ಆಸೀಸ್ ಕಳ್ಳಾಟ ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ!

    ಕೇಪ್‍ಟೌನ್: ಆಸೀಸ್ ಆಟಗಾರರ ಬ್ಯಾನ್ ಕ್ರಾಪ್ಟ್ ಚೆಂಡು ವಿರೂಪಗೊಳಿಸುತ್ತಿದ್ದ ದೃಶ್ಯಗಳನ್ನು ಸೆರೆ ಹಿಡಿದ ಕ್ಯಾಮೆರಾಮೆನ್ ಗೆ ಪ್ರಶಂಸೆಯ ಸುರಿಮಳೆ ವ್ಯಕ್ತವಾಗಿದೆ.

    ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂದು ಆಸ್ಟ್ರೇಲಿಯಾ ಆಟಗಾರ ಬ್ರಾಕ್ ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ ದೃಶ್ಯಗಳನ್ನು ಜೋಟಾನಿ ಅಸ್ಕರ್ ತನ್ನ ಕ್ಯಾಮರಾ ಮೂಲಕ ಸೆರೆ ಹಿಡಿದಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಸ್ಕರ್, ತಾನು ತನ್ನ ಕೆಲಸವನ್ನು ಅಷ್ಟೇ ಮಾಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಘಟನೆ ಕುರಿತು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದ ದಕ್ಷಿಣ ಆಫ್ರಿಕಾದ ವಿಕ್ಷಣಾ ವಿವರಣೆಗಾರ ನೀಲ್ ಮ್ಯಾಂಥಾರ್ಪ್ ಪಂದ್ಯದ ವೇಳೆ ಆಟಗಾರರ ವರ್ತನೆ ಅನುಮಾನಸ್ಪದವಾಗಿ ಕಂಡು ಬಂದಿತ್ತು. ಈ ಕೃತ್ಯವನ್ನು ಬಯಲಿಗೆ ತಂದ ಶ್ರೇಯಸ್ಸು ಕ್ಯಾಮೆರಾಮೆನ್ ಗೆ ಸಲ್ಲುತ್ತದೆ. ಅನುಚಿತ ಘಟನೆ ನಡೆಯುವ ಕುರಿತು ಅವರು ಗ್ರಹಿಸಿದ್ದರು ಎಂದು ಹೇಳಿ ಶ್ಲಾಘಿಸಿದ್ದಾರೆ.

    ಘಟನೆಯನ್ನು ಮೈದಾನದ ಸ್ಟ್ಯಾಂಡ್ ನಲ್ಲಿ ಕುಳಿತು ಗ್ರಹಿಸಲು ಸಾಧ್ಯವಿಲ್ಲ. ಅಲ್ಲದೇ ಸಮಾನ್ಯ ಟೆಲಿವಿಷನ್‍ಗಳಲ್ಲೂ ಇದನ್ನು ಗಮನಿಸಲು ಸಾಧ್ಯವಿಲ್ಲ. ಕ್ಯಾಮರಾ ಮೆನ್ ಗಳು ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ. ಸರಿಯಾದ ಸಮಯದಲ್ಲಿ ದೃಶ್ಯಗಳನ್ನು ಸೆರೆ ಹಿಡಿಯುವ ಕೌಶಲ್ಯವನ್ನು ಹೊಂದಿದ್ದರಿಂದ ಪ್ರಕರಣ ಬಯಲಾಗಿದೆ ಎಂದರು. ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ನಾಯಕತ್ವ ಸ್ಥಾನದಿಂದ ಸ್ಮಿತ್ ಔಟ್ – ರಹಾನೆಗೆ ಪಟ್ಟ

    ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾನ್ ಕ್ರಾಫ್ಟ್ ಹಾಗೂ ನಾಯಕ ಸ್ಮಿತ್ ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದರು. ಸದ್ಯ ಅಸೀಸ್ ನಾಯಕ ಸ್ಮಿತ್, ಉಪನಾಯಕ ವಾರ್ನರ್ ಒಂದು ವರ್ಷದ ನಿಷೇಧಕ್ಕೆ ಒಳಪಡುವ ಸಾಧ್ಯತೆಗಳಿವೆ. ಇದನ್ನೂ ಓದಿ:  ಚೆಂಡು ವಿರೂಪಗೊಳಿಸಿದ್ದಕ್ಕೆ ಸ್ಮಿತ್, ವಾರ್ನರ್ ಗೆ ಒಂದು ವರ್ಷ ನಿಷೇಧ?