Tag: ಕ್ಯಾಮೆರಾಮನ್

  • ಬದುಕಿನ ಶೂಟಿಂಗ್ ಮುಗಿಸಿದ ಕ್ಯಾಮೆರಾಮನ್

    ಬದುಕಿನ ಶೂಟಿಂಗ್ ಮುಗಿಸಿದ ಕ್ಯಾಮೆರಾಮನ್

    – 10 ದಿನಗಳ ಹಿಂದಷ್ಟೇ ಮದ್ವೆಯಾಗಿದ್ರು

    ಚಿತ್ರದುರ್ಗ: ಕಳೆದ ಹತ್ತು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ಖಾಸಗಿ ವಾಹಿನಿಯ ಚಿತ್ರದುರ್ಗ ಜಿಲ್ಲೆ ಕ್ಯಾಮೆರಾಮನ್ ವಿನಾಯಕ ತೀವ್ರ ಉಸಿರಾಟದ ತೊಂದರೆಯಿಂದಾಗಿ ಸಾವಿಗೀಡಾಗಿದ್ದಾರೆ.

    ತೀವ್ರ ಉಸಿರಾಟದ ತೊಂದರೆ ಕಾರಣ ರಾತ್ರಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಗೆ ಕಳುಹಿಸಲಾಗಿತ್ತು. ಆದರೆ ಕ್ರೂರ ವಿಧಿಯು ಕಡೆಗೂ ಬಿಡದೇ ಬೆನ್ನತ್ತೇ ಇಹಲೋಕಕ್ಕೆ ಕರೆದುಕೊಂಡು ಹೋಗಿದೆ. ದಾಂಪತ್ಯ ಜೀವನದ ಕನಸು ಹೊತ್ತು ಬಾಳಸಂಗಾತಿಯಾಗಿ ಕೈಹಿಡಿದಿದ್ದ ಆ ಹೆಣ್ಣು ಮಗುವಿಗೆ ದೇವರೇ ದಿಕ್ಕು ತೋಚದಂತಾಗಿದೆ. ಎಲ್ಲಾ ಪರೀಕ್ಷೆಗಳ ಬಳಿಕ ಕೋವಿಡ್ ದೃಢವಾಗಿದೆ. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದೂ, ಇತ್ತೀಚೆಗೆ ಹೊಸ ಮನೆ ಕಟ್ಟಿ, ಹೊಸ ಬಾಳಿಗೆ ಕಾಲಿಟ್ಟಿದ್ದರು.

    ಚಿತ್ರದುರ್ಗ ತಾಲೂಕಿನ ಅನ್ನೇಹಾಳ್ ಗ್ರಾಮದ ವರಾದ ವಿನಾಯಕ ಚಿತ್ರದುರ್ಗದ ದವಳಗಿರಿ ಬಡಾವಣೆಯಲ್ಲಿ ವಾಸವಾ ಗಿದ್ದರು. ಚಿತ್ರದುರ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ರು. ಪ್ರಸ್ತುತ ಖಾಸಗಿ ವಾಹಿನಿಯೊಂದರಲ್ಲಿ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಚಿತ್ರದುರ್ಗ ಸಿಟಿ ಕೇಬಲ್, ಕ್ಯಾಮೆರಾ ಮೆನ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಮದುವೆಯಾಗಿ ಕೇವಲ ಹತ್ತು ದಿನ ಕಳೆದಿದ್ದು, ಮನೆ ಮುಂದೆ ಮದುವೆಗಾಗಿ ಹಾಕಲಾಗಿದ್ದ ಚಪ್ಪರ ಬಿಚ್ಚುವ ಮುನ್ನವೇ ಇಂದು ಬೆಳಗ್ಗಿನ ಜಾವ ವಿನಾಯಕ ಇಹಲೋಕ ತ್ಯಜಿಸಿದ್ದಾರೆ.

  • ಚಿಕಿತ್ಸೆ ಫಲಿಸದೆ ಹಸೆಮಣೆ ಏರುವ ಮುನ್ನವೇ ಖಾಸಗಿ ವಾಹಿನಿಯ ಕ್ಯಾಮೆರಾಮನ್ ಸಾವು

    ಚಿಕಿತ್ಸೆ ಫಲಿಸದೆ ಹಸೆಮಣೆ ಏರುವ ಮುನ್ನವೇ ಖಾಸಗಿ ವಾಹಿನಿಯ ಕ್ಯಾಮೆರಾಮನ್ ಸಾವು

    ಹುಬ್ಬಳ್ಳಿ: ಅಪಘಾತದಲ್ಲಿ ತ್ರೀವವಾಗಿ ಗಾಯಗೊಂಡಿದ್ದ ಖಾಸಗಿ ವಾಹಿನಿ (ಪವರ್ ಟಿವಿ) ಕ್ಯಾಮೆರಾಮನ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಸುನೀಲ್ ಮೃತ ಕ್ಯಾಮೆರಾಮನ್. ಸೆಪ್ಟೆಂಬರ್ 30 ರಂದು ರಾತ್ರಿ ಹುಬ್ಬಳ್ಳಿ ಚಾಟ್ನಿ ಕಾಂಪ್ಲೆಕ್ಸ್ ಬಳಿ ಎರಡು ಬೈಕ್‍ಗಳು ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಹುಬ್ಬಳ್ಳಿಯ ಅಪ್ತಾಬ್ ಎಂಬಾತ ತ್ರೀವಗಾಗಿ ಗಾಯಗೊಂಡಿದ್ದ. ತಕ್ಷಣವೇ ಗಾಯಾಳುವನ್ನ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದನು.

    ಜೊತೆಗೆ ಖಾಸಗಿ ವಾಹಿನಿ ಕ್ಯಾಮೆರಾಮನ್ ಸುನೀಲ್‍ಗೂ ಸಹ ಗಂಭೀರವಾಗಿ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುನೀಲ್ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಕ್ಯಾಮೆರಾಮನ್ ಸುನೀಲ್ ಮೃತಪಟ್ಟಿದ್ದಾರೆ.

    ಸದಾ ಚುರುಕಿನಿಂದಲೇ ಕೆಲಸ ಮಾಡುತ್ತಿದ್ದ ಸುನೀಲ್‍ಗೆ ಡಿಸೆಂಬರ್‌ನಲ್ಲಿ ವಿವಾಹ ಕೂಡ ನಿಗದಿಯಾಗಿತ್ತು. ಆದರೆ ಹಸೆಮಣೆ ಏರುವ ಮುನ್ನವೇ ಕ್ಯಾಮೆರಾಮನ್ ಸಾವನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಕ್ಯಾಮೆರಾಮನ್ ಸಾವಿಗೆ ಧಾರವಾಡ ಜಿಲ್ಲಾ ಪತ್ರಕರ್ತರು ಸಂಘ ಕಂಬನಿ ಮಿಡಿದಿದ್ದು, ಮೃತನ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಈ ಘಟನೆಯ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.