Tag: ಕ್ಯಾಮೆರಾ

  • ಜೀವಿತಾವಧಿ ಮುಗಿದ ವಾಹಗಳನ್ನ ANPR ಕ್ಯಾಮೆರಾ ಹೇಗೆ ಪತ್ತೆ ಹಚ್ಚುತ್ತೆ?

    ಜೀವಿತಾವಧಿ ಮುಗಿದ ವಾಹಗಳನ್ನ ANPR ಕ್ಯಾಮೆರಾ ಹೇಗೆ ಪತ್ತೆ ಹಚ್ಚುತ್ತೆ?

    ದೆಹಲಿಯಲ್ಲಿ ಆಗಾಗ್ಗೆ ಉಂಟಾಗುವ ವಾಯುಮಾಲಿನ್ಯ (Air Pollution) ತಡೆಯಲು ಬಿಜೆಪಿ ನೇತೃತ್ವದ ದೆಹಲಿ ರಾಜ್ಯ ಸರ್ಕಾರ (Delhi Government) ಇತ್ತೀಚೆಗೆ ಹೊಸ ಆದೇಶವೊಂದನ್ನ ಪ್ರಕಟಿಸಿತ್ತು. 10 ವರ್ಷ ಮೇಲ್ಪಟ್ಟ ಡೀಸೆಲ್‌ 15 ವರ್ಷ ಹಳೆಯದಾದ ಪೆಟ್ರೋಲ್‌ ವಾಹನಗಳಿಗೆ ಇಂಧನ ನಿಷೇಧಿಸುವಂತೆ ಆದೇಶ ಹೊರಡಿಸಿತ್ತು. ಅದಕ್ಕಾಗಿ ಹಳೆಯ ವಾಹನಗಳನ್ನು ಗುರುತಿಸಿ ಪೆಟ್ರೋಲ್‌ ಬಂಕ್‌ಗಳಿಗೆ (Petrol Pumps) ಸಂದೇಶ ಕಳುಹಿಸಲು ಸೆಂಟ್ರಲ್‌ ಡೇಟಾಬೇಸ್‌ ವ್ಯವಸ್ಥೆ ರೂಪಿಸಲಾಗಿತ್ತು. ಜೊತೆಗೆ ದೆಹಲಿಯ 498 ಬಂಕ್‌ಗಳಿಗೆ ಸುತ್ತೋಲೆ ರವಾನಿಸಿದ್ದ ಸರ್ಕಾರ, 15 ವರ್ಷದ ಹಳೆಯ ಪೆಟ್ರೋಲ್‌, 10 ವರ್ಷದ ತುಂಬಿದ ಡೀಸೆಲ್‌ ವಾಹನಗಳಿಗೆ ಇಂಧನ ಪೂರೈಸಬಾರದು ಎಂದು ಸೂಚಿಸಿತ್ತು.

    ದೆಹಲಿಯಲ್ಲಿ ಶೇ.50ರಷ್ಟು ವಾಯು ಮಾಲಿನ್ಯ ವಾಹನಗಳಿಂದ ಉಂಟಾಗುತ್ತಿದೆ ಎಂದು ಅಂದಾಜಿಸಿ, ವಾಯು ಗುಣಮಟ್ಟ ಕಾಪಾಡುವ ಉದ್ದೇಶದಿಂದ ವಾಯುಗುಣ ಮಟ್ಟ ನಿರ್ವಹಣಾ ಆಯೋಗ ಇಂಧನ ನಿರ್ಬಂಧಿಸುವ ಆದೇಶ ಹೊರಡಿಸಿತ್ತು. ಕಾರು, ದ್ವಿಚಕ್ರ ವಾಹನ, ಟ್ರಕ್‌, ವಿಂಟೇಜ್‌ ಆಟೋಮೊಬೈಲ್ಸ್‌ ಸೇರಿದಂತೆ ಸುಮಾರು 62 ಲಕ್ಷ ವಾಹನಗಳನ್ನು ಹಳೆಯ ವಾಹನಗಳ (Old Vehicles) ಪಟ್ಟಿಗೆ ಸೇರಿಸಲಾಗಿತ್ತು. ಇದಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ಹಾವಿನ ದ್ವೇಷ 12 ವರುಷ – ಹಾಗೇ ಪ್ರೀತಿಯೂ ಪುರಾಣದಿಂದಲೇ ಹುಟ್ಟಿದ್ದಾ?

    ʻಹಸಿರು ನೀತಿ’ (ಗ್ರೀನ್‌ ಪಾಲಿಸಿ) ಹೆಸರಿನಲ್ಲಿ ಸರ್ಕಾರ ಹೊಸ ವಾಹನ ಖರೀದಿಗೆ ಪರೋಕ್ಷವಾಗಿ ಒತ್ತಡ ಹಾಕುತ್ತಿದೆ. ಹೊಸ ಕಾರು ಖರೀದಿಸಿದ್ರೆ ಸಾಮಾನ್ಯ ಜನತೆ ಶೇ.45ರಷ್ಟು ಜಿಎಸ್‌ಟಿ ಪ್ಲಸ್‌ ಸೆಸ್‌ ತೆರಬೇಕಾಗುತ್ತದೆ. ಹಾಗಾಗಿ ಇದು ಹಿಂಬಾಗಿಲ ಮೂಲಕ ಸರ್ಕಾರದ ಖಜಾನೆ ತುಂಬಿಸಿಕೊಳ್ಳಲು ಪ್ರಯತ್ನವಾಗಿದೆ ಎಂದು ವಾಹನ ಮಾಲೀಕರು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಯೋಗಿ ಮಾತಿಗೂ ಕಿಮ್ಮತ್ತಿಲ್ಲ – ವಿದ್ಯಾರ್ಥಿನಿಗೆ ಶುಲ್ಕ ವಿನಾಯ್ತಿ ಕೊಡಲು ನಿರಾಕರಿಸಿ‌ದ RSS ಮೂಲದ ಶಿಕ್ಷಣ ಸಂಸ್ಥೆ

    ಜನಾಕ್ರೋಶ ಹೆಚ್ಚಾದ ಬೆನ್ನಲ್ಲೇ ಆದೇಶವನ್ನು ಹಿಂಪಡೆಯಲಾಗಿದೆ. ಈ ಬೆನ್ನಲ್ಲೇ ʻತಾಂತ್ರಿಕ ಸವಾಲುಗಳು, ಸಂಕೀರ್ಣ ವ್ಯವಸ್ಥೆಗಳಿಂದ ಇಂಧನ ನಿರ್ಬಂಧಿಸುವ ಆದೇಶ ಜಾರಿಗೊಳಿಸುವುದು ಕಷ್ಟವಾಗಿದೆ. ಹೀಗಾಗಿ ಮಾಲಿನ್ಯಕ್ಕೆ ದಾರಿ ಮಾಡಿಕೊಡುವ ಕಳಪೆ ನಿರ್ವಹಣೆಯ ವಾಹನಗಳನ್ನು ಜಪ್ತಿ ಮಾಡುವ ವ್ಯವಸ್ಥೆ ರೂಪಿಸಲಾಗುವುದುʼ ಎಂದು ಪರಿಸರ ಸಚಿವ ಮಂಜಿಂದರ್‌ ಸಿಂಗ್‌ ಸಿರ್ಸಾ ಹೇಳಿದ್ದರು. ಇದಕ್ಕೆ ಪೂರಕವಾಗಿ ಒಂದಿಷ್ಟು ಕೆಲಸಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಮತ್ತೆ ಈ ಆದೇಶ ಸಕ್ರೀಯವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: PSI ಪರೀಕ್ಷೆಯಲ್ಲಿ ಫೇಲ್‌, ಆದ್ರೂ 2 ವರ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದ ಐನಾತಿ ಮಹಿಳೆ ಅಂದರ್‌

    ಮಾಲಿನ್ಯ ತಡೆಗೆ ಮುಂದಾಗಿರುವ ದೆಹಲಿ ಸರ್ಕಾರ ವಾಹನಗಳ ವಯೋಮಿತಿಗಳನ್ನು ತಿಳಿಯಲು ಮತ್ತು ಅನುಷ್ಠಾನಕ್ಕೆ ತರಲು ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಾದ್ಯಂತ (ಎನ್‌ಸಿಆರ್‌) ಟೋಲ್‌ ಬೂತ್‌ಗಳು ಮತ್ತು ಪೆಟ್ರೋಲ್‌ ಪಂಪ್‌ಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಶುರು ಮಾಡಿದೆ. ಈ ಹೈಟೆಕ್‌ ಕ್ಯಾಮೆರಾ 15 ವರ್ಷಕ್ಕಿಂತ ಮೇಲ್ಪಟ್ಟ ಹಳೆಯದಾದ ಪೆಟ್ರೋಲ್‌ ವಾಹನ ಮತ್ತು 10 ವರ್ಷ ಮೇಲ್ಪಟ್ಟ ಡೀಸೆಲ್‌ ವಾಹನಗಳನ್ನ ಗುರುತಿಸಲು ಸಹಾಯ ಮಾಡುತ್ತದೆ. ಬಳಿಕ ಅವುಗಳ ವಯೋಮಿಯನ್ನು ಗುರುತಿಸಿ ಸ್ಕ್ರಾಪ್‌ಪಿಂಗ್‌ಗೆ ರವಾನಿಸಲು ಅನುಕೂಲವಾಗುತ್ತದೆ. ಇದನ್ನೂ ಓದಿ: ಆರ್ಥಿಕ ನೆರವು, ವಿವಾಹದ ಭರವಸೆ ನೀಡಿ ಹಿಂದೂಗಳನ್ನ ಇಸ್ಲಾಂಗೆ ಮತಾಂತರ – ಮಾಸ್ಟರ್‌ ಮೈಂಡ್‌ ಸೇರಿ ಇಬ್ಬರು ಅರೆಸ್ಟ್‌

    ಸದ್ಯ ANPR ಕ್ಯಾಮೆರಾಗಳನ್ನು ದೆಹಲಿಯ 500 ಪೆಟ್ರೋಲ್‌ ಪಂಪ್‌ಗಳಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗುರಗಾಂವ್‌ನಲ್ಲಿರುವ ಪಂಪ್‌ಗಳಲ್ಲೂ ಈ ಕ್ಯಾಮೆರಾಗಳ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ಇದರಲ್ಲಿನ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR) ತಂತ್ರಜ್ಞಾನವನ್ನು ಬಳಸಿಕೊಂಡು, ಕ್ಯಾಮೆರಾಗಳು ನಂಬರ್ ಪ್ಲೇಟ್ ಡೇಟಾವನ್ನು ಡಿಜಿಟಲ್ ಮಾಹಿತಿಯಾಗಿ ಪರಿವರ್ತಿಸುತ್ತವೆ. ಜೊತೆಗೆ ದೆಹಲಿಯಲ್ಲಿ ನೋಂದಣಿಯಾದ ವಾಹನದ ವಿವರಗಳು ಮತ್ತು ಬಳಕೆಯ ಅವಧಿಯನ್ನ ತಕ್ಷಣವೇ ಬಹಿರಂಗಪಡಿಸುತ್ತವೆ. ಇದರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಅನುಕೂಲವಾಗುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇಷ್ಟೇ ಅಲ್ಲ ANPR ಕ್ಯಾಮೆರಾಗಳು ಹಳೆಯ ವಾಹನಗಳನ್ನು ಪತ್ತೆಹಚ್ಚುವ ಜೊತೆಗೆ ಇತರ ಕೆಲಸಗಳಿಗೂ ಉಪಯೋಗವಾಗಲಿದೆ ಅದೇನೆಂಬುದನ್ನು ತಿಳಿಯಲು ಮುಂದೆ ಓದಿ…

    ANPR ಕ್ಯಾಮೆರಾದ ಬೆಲೆ ಎಷ್ಟು?

    ಭಾರತದಲ್ಲಿ ANPR ಕ್ಯಾಮೆರಾಗಳ ಬೆಲೆ 20,000 ರೂ. ನಿಂದ 50,000 ರೂ.ವರೆಗೆ ಇದೆ. ಆದಾಗ್ಯೂ, ಹೆಚ್ಚಿನ ರೆಸಲ್ಯೂಶನ್ ಅಥವಾ ಮುಂದುವರಿದ ಮಾದರಿಗಳು ಇನ್ನೂ ದುಪ್ಪಟ್ಟು ವೆಚ್ಚವಾಗಬಹುದು.

    ಈ ಕ್ಯಾಮೆರಾಗಳು ಯಾವುದಕ್ಕೆಲ್ಲ ಅನುಕೂಲ?

    * ಸಂಚಾರ ನಿರ್ವಹಣೆ: ಪ್ರತಿ ವಾಹನದ ಸ್ಪೀಡ್‌ ಅಂದಾಜಿಸಲು, ಸಿಗ್ನಲ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ಹಾಗೂ ವಾಹನ ದಟ್ಟಣೆ ಮಾದರಿಯನ್ನ ವಿಶ್ಲೇಷಣೆ ಮಾಡಲು ಬಳಸಲಾಗುತ್ತದೆ.
    * ಕಾನೂನು ಮತ್ತು ಸುವ್ಯವಸ್ಥೆ: ಕದ್ದ ವಾಹನಗಳನ್ನು ಗುರುತಿಸಲು, ಶಂಕಿತರನ್ನು ಪತ್ತೆಹಚ್ಚಲು ಮತ್ತು ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸಲು ಅನುಕೂಲವಾಗುತ್ತದೆ.
    * ಪಾರ್ಕಿಂಗ್ ನಿರ್ವಹಣೆ: ವಾಹನ ಪ್ರವೇಶ ಮತ್ತು ನಿರ್ಗಮನ ದಾಖಲಿಸಲು ಮತ್ತು ಸ್ವಯಂಚಾಲಿತ ಪಾರ್ಕಿಂಗ್ ಶುಲ್ಕ ಸಂಗ್ರಹ ಸಕ್ರಿಯಗೊಳಿಸಲು ಅನುಕೂಲ.
    * ಟೋಲ್ ಸಂಗ್ರಹ: ಟೋಲ್ ಪ್ಲಾಜಾಗಳಲ್ಲಿ ವಾಹನ ಸಂಖ್ಯೆ ಫಲಕಗಳನ್ನು ರೀಡ್‌ ಮಾಡುವ ಮೂಲಕ ಸ್ವಯಂಚಾಲಿತ ಟೋಲ್ ಕಡಿತಕ್ಕಾಗಿ ಬಳಸಲಾಗುತ್ತದೆ.
    * ಭದ್ರತೆ: ನಿರ್ಬಂಧಿತ ಅಥವಾ ಸೂಕ್ಷ್ಮ ಪ್ರದೇಶಗಳಲ್ಲಿ ಅನಧಿಕೃತ ವಾಹನಗಳನ್ನು ಪತ್ತೆಹಚ್ಚಲು ಮತ್ತು ಕಣ್ಗಾವಲು ಹೆಚ್ಚಿಸಲು ಸುಲಭವಾಗುತ್ತದೆ.

    ಕ್ಯಾಮೆರಾಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?

    * ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾ ವಾಹನದ ನಂಬರ್ ಪ್ಲೇಟನ್ನು ಸುಲಭ ಮತ್ತು ಸ್ಪಷ್ಟವಾಗಿ ರೀಡ್‌ ಮಾಡುತ್ತದೆ.
    * ಇದರಲ್ಲಿನ OCR (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ಸಾಫ್ಟ್‌ವೇರ್ ಇಮೇಜ್‌ನಿಂದ ಆಲ್ಫಾನ್ಯೂಮರಿಕ್ ಕೋಡನ್ನು (ನಂಬರ್‌ ಪ್ಲೇಟ್‌ನಲ್ಲಿರುವ ಸಂಖ್ಯೆಗಳು)‌ ರೀಡ್‌ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಹೊರತೆಗೆಯುತ್ತದೆ.
    * ಕೇಂದ್ರ ಡೇಟಾಬೇಸ್‌ನೊಂದಿಗೆ ಕ್ರಾಸ್-ಚೆಕ್ ಮಾಡುವ ಮೂಲಕ ನೋಂದಣಿ ಯಂತಹ ವಾಹನ ವಿವರ ಹಾಗೂ ನಿಜವಾದ ಮಾಲೀಕರನ್ನು ಪತ್ತೆ ಮಾಡುತ್ತದೆ.
    * ಈ ಡೇಟಾಗಳನ್ನು ಅಪರಾಧ ಪತ್ತೆ, ಸಂಚಾರ ನಿಯಮ ಉಲ್ಲಂಘನೆ ಇನ್ನಿತರ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ.

    ಇದರ ಅನುಕೂಲ ಮತ್ತು ಅನಾನುಕೂಲಗಳೇನು?

    * ಸಮಯ ಉಳಿತಾಯದೊಂದಿಗೆ ಕಾರ್ಯದಕ್ಷತೆಯನ್ನು ಹೆಚ್ಚಿಸುತ್ತದೆ.
    * ವಾಹನ ಗುರುತಿಸುವಿಕೆಯಲ್ಲಿ ಮಾನವ ದೋಷದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅಂದ್ರೆ ಮನುಷ್ಯನಿಂದ ಆಗುವ ದೋಷಗಳನ್ನು ಇದು ಮಾಡುವುದಿಲ್ಲ.
    * ದಿನದ 24 ಗಂಟೆಯೂ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಹೊಂದಿದೆ.
    * ವಾಹನ ಮತ್ತು ಮಾಲೀಕರ ಮಾಹಿತಿಯನ್ನು ಸಂಗ್ರಹಿಸುವ ಜೊತೆಗೆ ಸಂಗ್ರಹಿಸಿದ ಮಾಹಿತಿಯನ್ನ ಗೌಪ್ಯವಾಗಿಡಲು ಸಹಾಯಕವಾಗುತ್ತದೆ.
    * ಇದರ ಅನಾನುಕೂಲವೆಂದರೆ ಕಳಪೆ ಹವಾಮಾನ ಪರಿಸ್ಥಿತಿ ಅಥವಾ ಕಡಿಮೆ ಬೆಳಕಿನ ವಾತಾವರಣ ಇರುವಾಗ ನಿಖರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರಲಿದೆ.

    ಪೆಟ್ರೋಲ್‌ ಪಂಪ್‌ಗಳಲ್ಲಿ ಈ ಕ್ರಮ ಏಕೆ?

    ಪೆಟ್ರೋಲ್‌ ಪಂಪ್‌ಗಳಲ್ಲಿ ANPR ಕ್ಯಾಮೆರಾಗಳನ್ನು ಅಳವಡಿಸುವ ಮುಖ್ಯ ಉದ್ದೇಶವೇ ವಾಯುಮಾಲಿನ್ಯ ತಡೆಯುವುದು. ಮಾಲಿನ್ಯಕಾರಕ ವಾಹನಗಳನ್ನು ಗುರುತಿಸಿದ್ರೆ, ಅವುಗಳ ವಯೋಮಿತಿ ಗಮನಿಸಿ ಬಳಿಕ ಅವುಗಳನ್ನು ನಿಷೇಧಿಸುವ ಕೆಲಸಕ್ಕೆ ಮುಂದಾಬಹುದು ಅನ್ನೋದು ಸರ್ಕಾರದ ಚಿಂತನೆ.

  • ಪ್ರೀ ವೆಡ್ಡಿಂಗ್‌ಗೆ ಫೋಟೋಗ್ರಾಫರ್ ಕರೆಸಿ 8 ಲಕ್ಷ ಮೌಲ್ಯದ ಕ್ಯಾಮೆರಾ ಕದ್ದ ಅಸಾಮಿ

    ಪ್ರೀ ವೆಡ್ಡಿಂಗ್‌ಗೆ ಫೋಟೋಗ್ರಾಫರ್ ಕರೆಸಿ 8 ಲಕ್ಷ ಮೌಲ್ಯದ ಕ್ಯಾಮೆರಾ ಕದ್ದ ಅಸಾಮಿ

    ಮೈಸೂರು: ಪ್ರೀ ವೆಡ್ಡಿಂಗ್ ಶೂಟ್‌ಗೆ (Pre Wedding Shoot)ಕರೆಸಿದ ವ್ಯಕ್ತಿ 8 ಲಕ್ಷ ರೂ. ಮೌಲ್ಯದ ಕ್ಯಾಮೆರಾ ಕದ್ದು ಪರಾರಿಯಾದ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣೆ (Devaraja Police Station) ವ್ಯಾಪ್ತಿಯಲ್ಲಿ ನಡೆದಿದೆ.

    ನಿಮ್ಮ ಇನ್‌ಸ್ಟಾಗ್ರಾಮ್‌ ಫ್ರೋಪೈಲ್ ನೋಡಿದ್ದೇನೆ ಮೈಸೂರಿನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಬೇಕು ಎಂದು ಗಣೇಶ್ ಎಂಬ ವ್ಯಕ್ತಿ ಮೈಸೂರಿನ ಸಾಲಿಗ್ರಾಮದ ಭಾರ್ಗವ್ ಎನ್ನುವ ಫೋಟೋ ಗ್ರಾಫರ್‌ಗೆ ಕರೆ ಮಾಡಿದ್ದಾನೆ. ಬಳಿಕ 75,000 ರೂ.ಗೆ ಫೋಟೋ ಶೂಟ್ ಅಗ್ರಿಮೆಂಟ್ ಮಾಡಿಕೊಂಡು ಇದಕ್ಕೆ 2,000 ಹಣವನ್ನು ಆನ್‌ಲೈನ್‌ನಲ್ಲಿ ಗಣೇಶ್ ವರ್ಗಾವಣೆ ಸಹ ಮಾಡಿದ್ದಾನೆ. ದನ್ನೂ ಓದಿ: ಕ್ರಿಸ್‌ಮಸ್‌ ಸಂಭ್ರಮ – ನೀವೂ ವಿಶ್‌ ಮಾಡ್ಬೇಕಾ? ವಾಟ್ಸಪ್‌ ಸ್ಟೇಟಸ್‌ಗೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

    ಮೈಸೂರಿಗೆ ಫೋಟೋಗ್ರಾಫರ್ ಭಾರ್ಗವ್‌ನನ್ನ ಕರೆಸಿದ ಗಣೇಶ್‌ ತಾನೇ ಬುಕ್ ಮಾಡಿದ ಲಾಡ್ಜ್‌ನಲ್ಲಿ ಉಳಿಯುವಂತೆ ಹೇಳಿದ್ದಾನೆ. ಬಳಿಕ ನಮ್ಮ ಕಡೆಯವರು ದೇವರಾಜ ಮಾರುಕಟ್ಟೆ ಬಳಿ ಇದ್ದಾರೆ, ಅವರ ಜೊತೆ ಊಟ ಮಾಡಿಕೊಂಡು ಬನ್ನಿ. ಫೋಟೋ ಶೂಟ್‌ಗೆ ಅವರಿಗೆ ಲೊಕೇಷನ್ ತೋರಿಸಿ ಎಂದು ಭಾರ್ಗವ್ ನನ್ನು ಹೊರಗಡೆ ಕಳುಹಿಸಿದ ಗಣೇಶ್‌ನಂತರ ಕೆಲಹೊತ್ತಿನ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಆಗ ಭಾರ್ಗವ್ ರೂಂ ನಲ್ಲಿ ಬಂದು ನೋಡಿದಾಗ ತನ್ನ ಕ್ಯಾಮೆರಾ ಅಲ್ಲಿ ಇರಲಿಲ್ಲ. ಸದ್ಯ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದನ್ನೂ ಓದಿ: ʻಸಾಂತಾಕ್ಲಾಸ್‌ʼನಲ್ಲಿ ವರ್ಷಪೂರ್ತಿ ಕ್ರಿಸ್‌ಮಸ್‌ ಸಂಭ್ರಮ – ವಿಲೇಜ್‌ ಇರೋದಾದ್ರೂ ಎಲ್ಲಿ?

  • ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ

    ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ

    ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ಕೊಳವೆ ಬಾವಿಗೆ (Borewell) ಬಿದ್ದ 2 ವರ್ಷದ ಸಾತ್ವಿಕ್‌ ರಕ್ಷಣೆಗಾಗಿ ಅಹೋರಾತ್ರಿಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದು, ಕ್ಯಾಮೆರಾದಲ್ಲಿ ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆಯಾಗಿದೆ.

    400 ಅಡಿ ಆಳದ ಕೊಳವೆ ಬಾವಿ ಇದಾಗಿದ್ದು ಕಳೆದ 13 ಗಂಟೆಯಿಂದ ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬೆಳಗಾವಿ, ಕಲಬುರಗಿಯಿಂದ ಎಸ್‌ಡಿಆರ್‌ಎಫ್‌ (NDRF), ಹೈದರಾಬಾದ್‌ನಿಂದ ಎನ್‌ಡಿಆರ್‌ಎಫ್‌ (NDRF) ತಂಡ ರಾತ್ರಿಯೇ ಸ್ಥಳಕ್ಕೆ ಬಂದಿದೆ. ಸ್ಥಳೀಯ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಜೊತೆಗೂಡಿದ್ದು ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಸುತ್ತಿದೆ.

     

    20 ಅಡಿ ಆಳದಲ್ಲಿ ಬಾಲಕ ಸಿಲುಕಿದ್ದು ಕೊಳವೆಬಾವಿ ಪಕ್ಕದಲ್ಲಿ ಸಮಾನಾಂತರವಾಗಿ 2 ಜೆಸಿಬಿ ಬಳಸಿ ಗುಂಡಿಯನ್ನು ತೋಡಿ ಮಣ್ಣನ್ನು ಹೊರತೆಗೆದು ಮಗುವಿರುವ ಸ್ಥಳದ ಬಳಿಗೆ ರಕ್ಷಣಾ ತಂಡ ಸಮೀಪಿಸುತ್ತಿದೆ. ಇನ್ನೊಂದು ಅಡಿ ಕೊರೆದರೆ ಮಗುವಿನ ಬಳಿಗೆ ರಕ್ಷಣಾ ತಂಡ ತಲುಪಲಿದೆ. ಕೊಳವೆ ಬಾವಿಗೆ ಕ್ಯಾಮೆರಾ ಇಳಿಬಿಟ್ಟು ಬಾಲಕನ ಚಲನವಲನ ಗಮನಿಸಲಾಗುತ್ತಿದೆ.  ಜಿಲ್ಲಾಡಳಿತ ಪೈಪ್‌ ಮೂಲಕ ಆಕ್ಸಿಜನ್‌ ಕಳುಹಿಸಿದ್ದು, ಕ್ಯಾಮೆರಾದಲ್ಲಿ ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆಯಾಗಿದ್ದರಿಂದ ಬಿರುಸಿನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಬಂದ ದಾರಿಗಿಲ್ಲ ಸುಂಕ – ಅಮಿತ್‌ ಶಾರನ್ನು ಭೇಟಿಯಾಗದೇ ಬರಿಗೈಯಲ್ಲಿ ಈಶ್ವರಪ್ಪ ವಾಪಸ್‌

    ಕಾರ್ಯಾಚರಣೆಗೆ ಬಂಡೆ ಕಲ್ಲುಗಳು ಅಡ್ಡಿಯಾಗುತ್ತಿದ್ದು, ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ ಪಿ ಋಷಿಕೇಶ ಸೋನಾವಣೆ, ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆ ಗಮನಿಸುತ್ತಿದ್ದಾರೆ.

    ಸತೀಶ್-ಪೂಜಾ ದಂಪತಿಗೆ ನಾಲ್ಕು ಎಕರೆ ಜಮೀನಿದ್ದು, ನಿಂಬೆ ಮತ್ತು ಕಬ್ಬಿಗೆ ನೀರಿನ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ಕೊಳವೆ ಬಾವಿ ಕೊರೆಸಿದ್ದರು. ನೀರು ಸಿಕ್ಕಿದ ಹಿನ್ನೆಲೆಯಲ್ಲಿ ಅದನ್ನು ಹಾಗೆಯೇ ಬಿಟ್ಟಿದ್ದರು.

     

  • ಬೆಳಗಾವಿಯಲ್ಲಿ ಪತ್ತೆಯಾಗಿದ್ದು ಚಿರತೆಯಲ್ಲ, ಅದು ಕಿರುಬ ಬೆಕ್ಕು!

    ಬೆಳಗಾವಿಯಲ್ಲಿ ಪತ್ತೆಯಾಗಿದ್ದು ಚಿರತೆಯಲ್ಲ, ಅದು ಕಿರುಬ ಬೆಕ್ಕು!

    ಬೆಳಗಾವಿ: ಮೂಡಲಗಿ ತಾಲೂಕಿನ ಖಾನಟ್ಟಿ-ಶಿವಾಪುರ ಗ್ರಾಮದಲ್ಲಿ ಚಿರತೆ (Leopard) ಓಡಾಡಿಲ್ಲ. ಅಲ್ಲಿ ಓಡಾಡಿದ್ದು ಕಿರುಬ ಬೆಕ್ಕು (Hyenas) ಎನ್ನುವುದು ಕ್ಯಾಮೆರಾದಿಂದ ದೃಢಪಟ್ಟಿದೆ.

    ಎರಡು ದಿನಗಳ ಹಿಂದೆ ಕಬ್ಬಿನ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ ವಿಡಿಯೋ ವೈರಲ್‌ ಆಗಿತ್ತು. ಚಿರತೆ ಬಂದಿದೆ ಎಂಬ ಸುದ್ದಿ ಪ್ರಕಟವಾದ ಬೆನ್ನಲ್ಲೇ ಮೂಡಲಗಿ ಅರಣ್ಯ ಇಲಾಖೆ (Forest Deapartment) ಅಧಿಕಾರಿಗಳು ಮೂರು ಟ್ರ್ಯಾಪ್ ಕ್ಯಾಮೆರಾ ಅಳವಡಿಕೆ ಮಾಡಿದ್ದರು. ಇದನ್ನೂ ಓದಿ: ಕಾರವಾರ ನೌಕಾನೆಲೆಯಲ್ಲಿ ಬೋಟ್ ಇಂಜಿನ್‍ಗೆ ಬೆಂಕಿ – ತಪ್ಪಿದ ಅನಾಹುತ

    ಈ ಕ್ಯಾಮೆರಾದಲ್ಲಿ ಚಿರತೆ ಬದಲು ಕಿರುಬ ಬೆಕ್ಕು ಸೆರೆಯಾಗಿದೆ. ಚಿರತೆಯಲ್ಲ ಅದು ಕಿರುಬ ಬೆಕ್ಕು ಎಂದು ತಿಳಿದು ಬಂದಿದ್ದರಿಂದ ಜನ ಈಗ ನಿಟ್ಟುಸಿರು ಬಿಟ್ಟಿದ್ದಾರೆ.

    ಚಿರತೆ ಇದೆ ಎಂಬುದನ್ನು ತಿಳಿದು ಖಾನಟ್ಟಿ-ಶಿವಾಪುರ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಖಾನಟ್ಟಿ-ಶಿವಾಪುರ ಭಾಗದಲ್ಲಿ ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾರಿವಾಳದ ಕಾಲಿನಲ್ಲಿ ಕ್ಯಾಮೆರಾ – ಬೇಹುಗಾರಿಕೆ ಶಂಕೆ

    ಪಾರಿವಾಳದ ಕಾಲಿನಲ್ಲಿ ಕ್ಯಾಮೆರಾ – ಬೇಹುಗಾರಿಕೆ ಶಂಕೆ

    ಭುವನೇಶ್ವರ್: ಒಡಿಶಾದ (Odisha) ಜಗತ್‍ಸಿಂಗ್‍ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಮೈಕ್ರೋ ಕ್ಯಾಮೆರಾ ಅವಳವಡಿಸಿದ್ದ ಪಾರಿವಾಳವನ್ನು (Pigeon) ಸೆರೆ ಹಿಡಿದಿದ್ದು, ಬೇಹುಗಾರಿಕೆಗೆ (Spy) ಬಳಸಿರುವುದಾಗಿ ಎಂದು ಪೊಲೀಸರು ಶಂಕಿಸಿದ್ದಾರೆ.

    ಒಡಿಶಾದ ಜಗತ್‍ಸಿಂಗ್‍ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಮೀನುಗಾರರು ಕೆಲವು ದಿನಗಳ ಹಿಂದೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ ಆ ಮೀನುಗಾರರ ದೋಣಿಯ ಮೇಲೆ ಒಂದು ಪಾರಿವಾಳ ಕುಳಿತಿರುವುದನ್ನು ಮೀನುಗಾರರು ಗಮನಿಸಿದ್ದಾರೆ. ಅಷ್ಟೇ ಅಲ್ಲದೇ ಆ ಪಾರಿವಾಳದ ಕಾಲಿಗೆ ಮೈಕ್ರೊ ಕ್ಯಾಮೆರಾವನ್ನು (Camera) ಬಳಸಿರುವುದನ್ನು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಎಚ್ಚೆತ್ತುಕೊಂಡ ಮೀನುಗಾರರು ತಮ್ಮ ಟ್ರಾಲರ್‌ನಲ್ಲಿ ಪಾರಿವಾಳವನ್ನು ಸೆರೆ ಹಿಡಿದರು. ನಂತರ ಅದನ್ನು ಮೆರೈನ್ ಪೊಲೀಸರಿಗೆ ಒಪ್ಪಿಸಿದರು.

    ಇದಾದ ಬಳಿಕ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಜಗತ್‍ಸಿಂಗ್‍ಪುರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿಆರ್ ಮಾತನಾಡಿ, ಪಶುವೈದ್ಯರು ಪಾರಿವಾಳವನ್ನು ಪರೀಕ್ಷಿಸುತ್ತಿದ್ದಾರೆ. ಅದರ ಕಾಲುಗಳಿಗೆ ಜೋಡಿಸಲಾದ ಸಾಧನಗಳನ್ನು ಪರೀಕ್ಷಿಸಲು ರಾಜ್ಯ ವಿಧಿವಿಜ್ಞಾನ ಪ್ರಯೋಗಾಯಲಯದ ಸಹಾಯವನ್ನು ಪಡೆಯುತ್ತೇವೆ ಎಂದು ತಿಳಿಸಿದರು.

    ಪಾರಿವಾಳದ ರೆಕ್ಕೆಗೆಳ ಮೇಲೆ ಏನೋ ಬರೆಯಲಾಗಿದ್ದು, ಬೇರೆ ಭಾಷೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ತಜ್ಞರ ಸಹಾಯವನ್ನು ಪಡೆಯಲಾಗುವುದು ಎಂದು ಎಸ್ಪಿ ತಿಳಿಸಿದರು. ಇದನ್ನೂ ಓದಿ: ಪೋಷಕರೇ ಎಚ್ಚರ- ಮಕ್ಕಳಲ್ಲಿ ಹೆಚ್ಚಾಗ್ತಿದೆ ಆಡಿನೋ ವೈರಸ್..!

    ಈ ಪಾರಿವಾಳವನ್ನು ಹಿಡಿದ ಮೀನುಗಾರ ಸಾರಥಿ ಎಂಬಾತ ಮಾತನಾಡಿ, ಪಾರಿವಾಳ ದೋಣಿಯ ಮೇಲೆ ಕುಳಿತಿರುವುದನ್ನು ನೋಡಿದೆ. ಈ ವೇಳೆ ಆ ಪಾರಿವಾಳದ ಕಾಲುಗಳಿಗೆ ಕೆಲವು ಸಾಧನಗಳನ್ನು ಕಟ್ಟಿರುವುದನ್ನು ಗಮನಿಸಿದೆ. ಅಷ್ಟೇ ಅಲ್ಲದೇ ಅದರ ರೆಕ್ಕೆ ಮೇಲೆ ಏನೋ ಬರೆಯಲಾಗಿತ್ತು. ಆದರೆ ಅದು ಓಡಿಶಾ ಅಲ್ಲದ್ದರಿಂದ ಅರ್ಥವಾಗಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಾರ್ಚ್ 11ಕ್ಕೆ ಇಡಿ ಮುಂದೆ ಹಾಜರಾಗಲಿದ್ದಾರೆ KCR ಪುತ್ರಿ ಕವಿತಾ

  • ರಾಪರ್ ಆಗಲು ಕದ್ದ- ತನಿಖೆ ವೇಳೆ ರಾಪ್ ಸಾಂಗ್ ಹಾಡಿದ!

    ರಾಪರ್ ಆಗಲು ಕದ್ದ- ತನಿಖೆ ವೇಳೆ ರಾಪ್ ಸಾಂಗ್ ಹಾಡಿದ!

    ಡೆಹ್ರಾಡೂನ್: ಪೊಲೀಸರು ತನಿಖೆ ನಡೆಸುವಾಗ ಕಳ್ಳನೊಬ್ಬ ತನ್ನ ತಪ್ಪನ್ನು ರಾಪ್ ಸಾಂಗ್ ಮೂಲಕ ವಿಶಿಷ್ಟ ರೀತಿಯಲ್ಲಿ ಒಪ್ಪಿಕೊಂಡಿರುವ ಘಟನೆ ಉತ್ತರಾಖಂಡದಲ್ಲಿ (Uttarakhand) ನಡೆದಿದೆ.

    ಚಮೋಲಿಯ (Chamoli) ಅಂಗಡಿಯೊಂದರಲ್ಲಿ ಮೊಬೈಲ್ (mobile) ಹಾಗೂ ಕ್ಯಾಮೆರಾ (Camera) ಕಳವು ಮಾಡಿದ ಆರೋಪದ ಮೇರೆಗೆ ಸುಮಿತ್ ಖತ್ರಿ (19) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನಿಖೆ ನಡೆಸುವ ವೇಳೆ ಈ ಪ್ರಸಂಗ ನಡೆದಿದೆ. ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಧರ್ಮೇಂದ್ರ, ಅಮಿತಾಭ್, ಅಂಬಾನಿ ಮನೆಯಲ್ಲಿ ಬಾಂಬ್: ಪೊಲೀಸರಿಂದ ಶೋಧ

    KILLING CRIME

    ರಾಪರ್ ಆಗುವ ಆಸೆಯಿಂದ ಹಣವಿಲ್ಲದೆ ಖತ್ರಿ ಕಳ್ಳತನವೆಸಗಿದ್ದಾನೆ. ತನಿಖೆ ಸಂದರ್ಭದಲ್ಲಿ ತನ್ನ ತಪ್ಪಿಗೆ ಮರುಕಪಟ್ಟಿದ್ದಾನೆ.

    ಫೆ. 19 ರಂದು ಮಂದಿರ ಮಾರ್ಗದ (Mandir Marg) ಸಂಜಯ್ ಸಿಂಗ್ ಎಂಬವರಿಗೆ ಸೇರಿದ್ದ ಅಂಗಡಿಯ ಬೀಗ ಒಡೆದು 3.5 ಲಕ್ಷ ರೂ ಮೌಲ್ಯದ ಐದು ಮೊಬೈಲ್‍ಗಳನ್ನು ಹಾಗೂ ಒಂದು ಕ್ಯಾಮೆರಾವನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಅಂಗಡಿಯ ಮಾಲೀಕ ಗೋಪೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆರೋಪಿಯಂದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡು ಸಂಜಯ್ ಸಿಂಗ್‍ಗೆ ಮರಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅನುಷ್ಕಾಳೇ ನನ್ನ ಸ್ಫೂರ್ತಿ ಎಂದು ಪತ್ನಿಯನ್ನು ಹಾಡಿ ಹೊಗಳಿದ ವಿರಾಟ್ ಕೊಹ್ಲಿ

  • ಚಲಿಸುತ್ತಿದ್ದ ಕಾರಿನಲ್ಲೇ ಪತ್ನಿಯೊಂದಿಗೆ ಸೆಕ್ಸ್ – ಸೀಟ್‌ಬೆಲ್ಟ್ ಧರಿಸದಿದ್ದಕ್ಕೆ ಬಿತ್ತು ದಂಡ

    ಚಲಿಸುತ್ತಿದ್ದ ಕಾರಿನಲ್ಲೇ ಪತ್ನಿಯೊಂದಿಗೆ ಸೆಕ್ಸ್ – ಸೀಟ್‌ಬೆಲ್ಟ್ ಧರಿಸದಿದ್ದಕ್ಕೆ ಬಿತ್ತು ದಂಡ

    ಕ್ಯಾನ್ಬೆರಾ: ಚಲಿಸುತ್ತಿದ್ದ ಕಾರಿನಲ್ಲೇ (Car) ಪತ್ನಿಯೊಂದಿಗೆ (Wife) ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯ ಕ್ಯಾಮೆರಾದಲ್ಲಿ (Camera) ಸೆರೆಯಾಗಿದ್ದು, ಸೀಟ್ ಬೆಲ್ಟ್ ಧರಿಸಿಲ್ಲದ ಕಾರಣ ವ್ಯಕ್ತಿಯೊಬ್ಬನಿಗೆ ಪೊಲೀಸರು (Police) ದಂಡದ ಬಿಸಿ ಮುಟ್ಟಿಸಿರುವ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಹೆದ್ದಾರಿಯಲ್ಲಿ (National Highway) ನಡೆದಿದೆ.

    ವ್ಯಕ್ತಿಯು ಚಲಿಸುವ ಕಾರಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯಾವಳಿ ರಸ್ತೆ ಬದಿಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಕಂಡ ಅಧಿಕಾರಿಗಳು ಆತನಿಗೆ 1,087 ಡಾಲರ್ ಅಂದರೆ ಸುಮಾರು 89 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸದ್ಯ ಪತಿ-ಪತ್ನಿ ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಇದನ್ನೂ ಓದಿ: ‘ಗಂಧದ ಗುಡಿ’ ನೋಡಿ ಗರ್ವ ಬಂತು: ಸುಧಾಮೂರ್ತಿ ಫಸ್ಟ್ ರಿಯಾಕ್ಷನ್

    ಇಬ್ಬರೂ ಪೆಸಿಫಿಕ್ ಮೋಟಾರು ಮಾರ್ಗದಲ್ಲಿ ಹಾದು ಹೋಗುತ್ತಿದ್ದಾಗ ಕ್ಯಾಮೆರಾ ಅವರ ಲೈಂಗಿಕ ಕ್ರಿಯೆ ದೃಶ್ಯವನ್ನು ಸೆರೆಹಿಡಿದಿದೆ. ಸಾರಿಗೆ ಮತ್ತು ಮುಖ್ಯ ರಸ್ತೆಗಳ ಇಲಾಖೆಯ ವಕ್ತಾರರು ಘಟನೆಯನ್ನು ದೃಢಪಡಿಸಿದ್ದು, ಇದನ್ನು ಚಾಲಕನ ಅಪಾಯಕಾರಿ ನಡವಳಿಕೆ ಎಂದು ಗುರುತಿಸಿ ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ‘ಗಂಧದ ಗುಡಿ’ ಚಿತ್ರದಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಇದ್ದಾರೆ

    ದಂಡ ವಿಧಿಸಿದ ಬಳಿಕ ಪ್ರತಿಕ್ರಿಯಿಸಿದ ದಂಪತಿ ನಾವು ಸೀಟ್ ಬೆಲ್ಟ್ ಧರಿಸಿದ್ದೇವೆ. ಆದರೆ ಅದು ಸ್ವಲ್ಪ ಮೇಲ್ಬಾಗಕ್ಕೆ ಬಂದಿದೆ. ಅದು ಕ್ಯಾಮೆರಾದಲ್ಲೂ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಸಮರ್ಥನೆ ನೀಡಲು ಮುಂದಾದರು. ಇದಕ್ಕೆ ಉತ್ತರಿಸಿದ ಪೊಲೀಸ್ ಅಧಿಕಾರಿಗಳು, ಪ್ರಯಾಣಿಕರ ವರ್ತನೆಯಿಂದಾಗಿ ಸೀಟ್‌ಬೆಲ್ಟ್ ಧರಿಸದೇ ಇದ್ದಾಗ ಅಥವಾ ತಪ್ಪಾಗಿ ಧರಿಸಿದಾಗ ಅದು ನಿಯಮ ಉಲ್ಲಂಘನೆಯಾಗುತ್ತದೆ ಎಂಬ ಕಾರಣ ನೀಡಿ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರೀಯ ಭದ್ರತಾ ಸಮೂಹಕ್ಕೆ `ಡ್ರೋನ್ ಸಮೂಹ’ ಸೇರ್ಪಡೆ – ಏನಿದರ ವಿಶೇಷತೆ?

    ರಾಷ್ಟ್ರೀಯ ಭದ್ರತಾ ಸಮೂಹಕ್ಕೆ `ಡ್ರೋನ್ ಸಮೂಹ’ ಸೇರ್ಪಡೆ – ಏನಿದರ ವಿಶೇಷತೆ?

    ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಾಂಶವೂ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ `ಡ್ರೋನ್‌ಗಳ ಸಮೂಹ’ ವನ್ನು ಸಶಸ್ತ್ರ ಪಡೆಗಳಿಗೆ ಸೇರಿಸಲಾಗುತ್ತಿದೆ.

    ನಿರ್ದಿಷ್ಟ ಗುರಿಯನ್ನು ನಿಖರವಾಗಿ ಗುರುತಿಸಿ, ಧ್ವಂಸ ಮಾಡಲು ಈ ಡ್ರೋನ್‌ಗಳಲ್ಲಿನ ಕೃತಕ ಬುದ್ಧಿಮತ್ತೆ ತಂತ್ರಾಂಶ ನೆರವಾಗಲಿದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ನಿಶ್ಚಿತಾರ್ಥ ವರನಿಗೆ ಯುವತಿಯ ಅಶ್ಲೀಲ ಫೋಟೋ ಕಳುಹಿಸಿದ ನೆರೆಮನೆಯವ – ವಧು ಆತ್ಮಹತ್ಯೆ

    ಹೆಸರೇ ಹೇಳುವಂತೆ `ಡ್ರೋನ್‌ಗಳ ಸಮೂಹ’ವು ನಿರ್ದಿಷ್ಟ ಸಂಖ್ಯೆಯ ಡ್ರೋನ್‌ಗಳನ್ನು ಒಳಗೊಂಡಿರುತ್ತದೆ. ಈ `ಡ್ರೋನ್ ಸಮೂಹ’ವನ್ನು ಒಂದೇ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ. ಯಾವುದೇ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ವಿವಿಧ ಕಾರಣಗಳಿಂದಾಗಿ ಕೆಲವು ಡ್ರೋನ್‌ಗಳು ಕಾರ್ಯ ನಿಲ್ಲಿಸಿದರೂ, `ಸಮೂಹ’ವು ತನ್ನ ಕಾರ್ಯವನ್ನು ಪೂರ್ಣಗೊಳಿಸಿ ಹಿಂದಿರುಗುತ್ತದೆ’ ಎಂದು ಸೇನೆಯ ಸಾರ್ವಜನಿಕ ಮಾಹಿತಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶನಾಲಯ ಇಂದು ಟ್ವೀಟ್ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಮಸೀದಿಗಳ ಮುಂದೆ ಕ್ಯಾಮೆರಾ ಅಳವಡಿಸುವಂತೆ ಓವೈಸಿ ಕರೆ

    ಮಸೀದಿಗಳ ಮುಂದೆ ಕ್ಯಾಮೆರಾ ಅಳವಡಿಸುವಂತೆ ಓವೈಸಿ ಕರೆ

    ಹೈದರಾಬಾದ್: ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ಇತ್ತೀಚೆಗಷ್ಟೇ ನಡೆದ ಕೋಮು ಗಲಭೆಗಳ ನಡುವೆ ಮಸೀದಿಗಳ ಮುಂದೆ ಕ್ಯಾಮೆರಾಗಳನ್ನು ಅಳವಡಿಸುವಂತೆ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕರೆ ನೀಡಿದ್ದಾರೆ.

    mosque-loudspeakers

    ದೆಹಲಿಯ ಜಹಾಂಗೀರ್‍ಪುರಿ ಮತ್ತು ಸಂಸದ ಖಾರ್ಗೋನ್‍ನಲ್ಲಿ ನಡೆದ ಕೋಮು ಹಿಂಸಾಚಾರದ ಘಟನೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಧಾರ್ಮಿಕ ಮೆರವಣಿಗೆಗಳನ್ನು ರೆಕಾರ್ಡ್ ಮಾಡಲು ಮಸೀದಿಗಳ ಬಳಿ ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳನ್ನು ಅಳವಡಿಸಬೇಕು. ಇದರಿಂದ ಯಾರು ಕಲ್ಲು ತೂರಾಟ ನಡೆಸುತ್ತಿದ್ದಾರೆಂದು ಜನರು ತಿಳಿಯಬಹುದು ಎಂದಿದ್ದಾರೆ.

    ಈ ಮುನ್ನ ಶನಿವಾರ ಹೈದರಾಬಾದ್‍ನಲ್ಲಿ ಮಾತನಾಡಿದ ಅಸಾದುದ್ದೀನ್ ಓವೈಸಿ ಅವರು, ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ಕೆಲವು ಪ್ರದೇಶಗಳನ್ನು ಸಮೀಕ್ಷೆ ನಡೆಸುವಂತೆ ವಾರಣಾಸಿ ನ್ಯಾಯಾಲಯವು ಇತ್ತೀಚಿಗೆ ನೀಡಿದೆ ಆದೇಶವನ್ನು ಖಂಡಿಸಿದ್ದರು. ಈ ಆದೇಶವು ರಥಯಾತ್ರೆಯ ರಕ್ತಪಾತ ಮತ್ತು 1980-1990ರ ಮುಸ್ಲಿಂ ವಿರೋಧಿ ಹಿಂಸಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವಿವಾದವನ್ನು ಹುಟ್ಟು ಹಾಕಿರುವ ಬಿಜೆಪಿ ಮತ್ತುಆರ್‌ಎಸ್‍ಎಸ್ ಉಭಯ ಕೋಮಿನಲ್ಲಿ ದ್ವೇಷವನ್ನು ಮೂಡಿಸುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮಸೀದಿಗಳ ಮೈಕ್ ತೆರವಿಗೆ ನಾಳೆಯೇ ಡೆಡ್‍ಲೈನ್ – ದೇಗುಲಗಳಲ್ಲಿ 3 ಬಾರಿ ಮಂತ್ರ ಘೋಷ

    ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ-1991ರ ಪ್ರಕಾರ ಧಾರ್ಮಿಕ ಕೇಂದ್ರಗಳಿಗೆ ಯಾವುದೇ ತೊಂದರೆ ಉಂಟು ಮಾಡಬಾರದು ಎಂದು ಹೇಳಿದೆ. ಇದನ್ನು ಭಾರತ ಸರ್ಕಾರ ಕೂಡ ಅಂಗೀಕರಿಸಿದೆ. ಈ ಬಗ್ಗೆ ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕಡಬೇಕಿತ್ತು. ಆದರೆ, ಬಿಜೆಪಿ ಸರ್ಕಾರ ಇದರಲ್ಲಿ ಮೌನ ವಹಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿಯ ನಮ್ಮ ಮನೆ ಎಕ್ಸ್‌ಪೋಗೆ ಸಖತ್ ಸ್ಪಂದನೆ – ಇಂದೇ ಕಡೇ ದಿನ, ತಪ್ಪದೇ ಬನ್ನಿ

  • ಸ್ಟೈಲಿಶ್ ಲುಕ್‍ನಲ್ಲಿ ಕ್ಯಾಮೆರಾಗೆ ಕಾರ್ತಿಕ್ ಆರ್ಯನ್ ಪೋಸ್

    ಸ್ಟೈಲಿಶ್ ಲುಕ್‍ನಲ್ಲಿ ಕ್ಯಾಮೆರಾಗೆ ಕಾರ್ತಿಕ್ ಆರ್ಯನ್ ಪೋಸ್

    ಶಿಮ್ಲಾ: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರು ಹಿಮಾಚಲ ಪ್ರದೇಶದ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

    Karthik Aryan

    ಕಾರಿನಿಂದ ವಿಮಾನ ನಿಲ್ದಾಣಕ್ಕೆ ಲಗೇಜ್ ಸಮೇತ ಬಂದಿಳಿದ ಕಾರ್ತಿಕ್ ಆರ್ಯನ್, ವೈಟ್ ಕಲರ್ ಟೀ ಶರ್ಟ್, ಬ್ಲಾಕ್ ಕಲರ್ ಜಾಕೆಟ್ ಹಾಗೂ ವೈಟ್ ಕಲರ್ ಮಾಸ್ಕ್ ಧರಿಸಿ ಸಖತ್ ಸ್ಟೈಲಿಶ್ ಆಗಿ ಮಿಂಚಿದರು. ಇದನ್ನೂ ಓದಿ: ಚಿರಂಜೀವಿ, ರಾಮ್ ಚರಣ್ ಭೇಟಿಯಾದ ಪ್ರಶಾಂತ್ ನೀಲ್ – ಕಾರಣವೇನು ಗೊತ್ತಾ

    Karthik Aryan

    ವಿಮಾನ ನಿಲ್ದಾಣದ ಪ್ರವೇಶ ದ್ವಾರದತ್ತ ಆಗಮಿಸುತ್ತಿದ್ದಂತೆಯೇ ಮುಖದಿಂದ ಮಾಸ್ಕ್ ತೆರೆದು ಕ್ಯಾಮೆರಾಗಳಿಗೆ ಪೋಸ್ ನೀಡಿದರು. ನಂತರ ಧನ್ಯವಾದ ತಿಳಿಸಿ ನಗುಮುಖದಿ ಮುಂದೆ ಸಾಗಿದರು.

    Karthik Aryan

    ನಂತರ ವಿಮಾನ ನಿಲ್ದಾಣದ ಒಳಗೆ ಹೋಗುವ ಮುನ್ನ ಮತ್ತೊಮ್ಮೆ ಕ್ಯಾಮೆರಾದತ್ತ ಮುಖ ಮಾಡಿ ಫೋಟೋಗೆ ಪೋಸ್ ನೀಡಿ ಬಾಯ್ ಹೇಳುತ್ತಾ ಒಳ ನಡೆದರು. ಇದನ್ನೂ ಓದಿ: ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

    Karthik Aryan

    ಬಾಲಿವುಡ್ ಯುವ ಸ್ಟಾರ್ ನಟರಲ್ಲಿ ಕಾರ್ತಿಕ್ ಆರ್ಯನ್ ಕೂಡ ಒಬ್ಬರಾಗಿದ್ದು, ಸೋನು ಕೆ ಟಿಟು ಕಿ ಸ್ವೀಟಿ, ಲುಕಾ ಚುಪ್ಪಿ, ‘ಪತಿ, ಪತ್ನಿ ಔರ್ ವೋ’, ಲವ್ ಆಜ್ ಕಲ್-2 ಸೇರಿದಂತೆ ಹಲವಾರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    Karthik Aryan

    ಸದ್ಯ ಕಾರ್ತಿಕ್ ಆರ್ಯನ್ ಅಭಿನಯದ ಧಮಾಕ ಚಿತ್ರ ದೀಪಾವಳಿಯಂದು ಬಿಡುಗಡೆಗೊಳ್ಳಲಿದೆ. ನಂತರ ಕಾರ್ತಿಕ್ ಆರ್ಯನ್ ಅವರ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ಬೋಲ್ ಬುಲಾಯ ಮುಂದಿನ ವರ್ಷ ತೆರೆಕಾಣಲಿದೆ. ಇದನ್ನೂ ಓದಿ:  ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ: ಸುದೀಪ್

    ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ, ಸಾರಾ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್ ಇಬ್ಬರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಕೆಲವು ತಿಂಗಳಿನಿಂದ ಜೋರಾಗಿ ಹರಿದಾಡುತ್ತಿದೆ. ಲವ್ ಆಜ್ ಕಲ್-2 ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್‍ಗೆ ಸಾರಾ ಅಲಿ ಖಾನ್ ಜೋಡಿಯಾಗಿ ಅಭಿನಯಿಸಿದ್ದಾರೆ.

    https://www.youtube.com/watch?v=mBSEXAoFrTE