Tag: ಕ್ಯಾಮರೂನ್ ಗ್ರೀನ್

  • ಸ್ಫೋಟಕ ಶತಕ ಸಿಡಿಸಿ ಗ್ರೀನ್‌ ವಿಶೇಷ ಸಾಧನೆ – 19 ವರ್ಷಗಳ ಬಳಿಕ ಆಸೀಸ್‌ 2ನೇ ಗರಿಷ್ಠ ಮೊತ್ತ

    ಸ್ಫೋಟಕ ಶತಕ ಸಿಡಿಸಿ ಗ್ರೀನ್‌ ವಿಶೇಷ ಸಾಧನೆ – 19 ವರ್ಷಗಳ ಬಳಿಕ ಆಸೀಸ್‌ 2ನೇ ಗರಿಷ್ಠ ಮೊತ್ತ

    – ಅಗ್ರ ಮೂವರು ಬ್ಯಾಟರ್‌ಗಳಿಂದಲೂ ಸಿಡಿದ ಸೆಂಚುರಿ

    ಮೆಕೆ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ತಂಡ ಅಬ್ಬರಿಸಿ ಬೊಬ್ಬರಿದಿದೆ. ಅಕ್ರಮಾಂಕದ ಮೂವರು ಬ್ಯಾಟರ್‌ಗಳು ಶತಕ ಸಿಡಿಸುವ ಮೂಲಕ ಹರಿಣರ ಮೇಲೆ ಸವಾರಿ ಮಾಡಿದರು. ಭರ್ಜರಿ ಆಟದಲ್ಲಿ ಆಸೀಸ್‌ ಪರ ಒಟ್ಟು 18 ಸಿಕ್ಸರ್‌ ಹಾಗೂ 36 ಬೌಂಡರಿಗಳು ದಾಖಲಾದವು.

    ಆಸ್ಟ್ರೇಲಿಯಾ‌ದ ಮೆಕೆಯಲ್ಲಿರುವ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ ಕ್ರೀಡಾಂಗಣದಲ್ಲಿಂದು ನಡೆದ ಕೊನೇ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 431 ರನ್‌ ಗಳಿಸಿದೆ. ಇದು 19 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನ (ODI Cricket) ಇನ್ನಿಂಗ್ಸ್‌ವೊಂದರಲ್ಲಿ ಆಸೀಸ್‌ ಗಳಿಸಿದ‌ 2ನೇ ಗರಿಷ್ಠ ರನ್‌ ಆಗಿದೆ. 2006ರಲ್ಲಿ ದಕ್ಷಿಣ ಆಫಿಕಾ ವಿರುದ್ಧವೇ ಆಸ್ಟ್ರೇಲಿಯಾ 434 ರನ್‌ ಸಿಡಿಸಿತ್ತು. ಆದ್ರೆ ಆ ಪಂದ್ಯದಲ್ಲಿ ಸೋಲು ಕಂಡಿತ್ತು. ಇಂದಿಗೂ ಇದೊಂದು ಐತಿಹಾಸಿಕ ಪಂದ್ಯವಾಗಿದೆ. ಇದನ್ನೂ ಓದಿ: Retirement | ಎಲ್ಲ ಮಾದರಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ಗುಡ್‌ಬೈ

    ಆಸ್ಟ್ರೇಲಿಯಾ ಅತಿಹೆಚ್ಚು ರನ್‌ ಗಳಿಸಿದ ಟಾಪ್‌-5 ಇನ್ನಿಂಗ್ಸ್‌
    * 434 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – 2006 ರಲ್ಲಿ
    * 431 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – 2025 ರಲ್ಲಿ
    * 417 ರನ್‌ – ಅಫ್ಘಾನಿಸ್ತಾನದ ವಿರುದ್ಧ – 2015ರಲ್ಲಿ
    * 399 ರನ್‌ – ನೆದರ್ಲೆಂಡ್‌ ವಿರುದ್ಧ – 2023 ರಲ್ಲಿ
    * 392 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – 2023 ರಲ್ಲಿ

    ಗ್ರೀನ್‌ ಶೈನ್‌
    ಇನ್ನೂ ಆಸೀಸ್‌ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಕ್ಯಾಮರೂನ್‌ ಗ್ರೀನ್‌ (Cameron Green) ಕೇವಲ 47 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ಇದು ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ 2ನೇ ವೇಗದ ಶತಕದವೂ ಆಗಿದೆ. 2023ರಲ್ಲಿ ನೆದರ್ಲೆಂಡ್‌ ವಿರುದ್ಧ 40 ಎಸೆತಗಳಲ್ಲಿ ಶತಕ ಸಿಡಿಸಿದ ಮ್ಯಾಕ್ಸ್‌ವೆಲ್‌ ಅಗ್ರ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಲ್ಲ: ಸಚಿವ ಮನ್ಸುಖ್ ಮಾಂಡವಿಯಾ

    ಅಬ್ಬರಿಸಿ ಬೊಬ್ಬಿರಿದ ಆಸೀಸ್‌
    ಮೊದಲು ಬ್ಯಾಟಿಂಗ್‌ ಆರಂಭಿಸಿದ ಆಸೀಸ್‌ ಪರ ಟ್ರಾವಿಸ್‌ ಹೆಡ್‌ ಹಾಗೂ ಮಿಚೆಲ್‌ ಮಾರ್ಷ್‌ ಜೋಡಿ ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿತು. ಹೆಡ್‌ 103 ಎಸೆತಗಳಲ್ಲಿ 142 ರನ್‌ (5 ಸಿಕ್ಸರ್‌, 17 ಬೌಂಡರಿ) ಚಚ್ಚಿದ್ರೆ, ಮಾರ್ಷ್‌ 106 ಎಸೆತಗಳಲ್ಲಿ 100 ರನ್‌ (5 ಸಿಕ್ಸರ್‌, 6 ಬೌಂಡರಿ) ಬಾರಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಗ್ರೀನ್‌ ಕೇವಲ 47 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದರು. ಒಟ್ಟು 55 ಎಸೆತಗಳಲ್ಲಿ 118 ರನ್‌ (8 ಸಿಕ್ಸರ್‌, 6 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ಇದರೊಂದಿಗೆ ಅಲೆಕ್ಸ್‌ ಕ್ಯಾರಿ 37 ಎಸೆತಗಳಲ್ಲಿ ಅಜೇಯ 50 ರನ್‌ ಗಳಿಸಿ ಮಿಂಚಿದರು.

    ಸರಣಿ ಗೆದ್ದ ಆಫ್ರಿಕಾ
    ಆಸೀಸ್‌ ನೀಡಿದ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆಸೀಸ್‌ 135 ರನ್‌ ಗಳಿಗೆ 7 ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ಆದರೆ ಮೂರು ಪಂದ್ಯಗಳ ಸರಣಿಯಲ್ಲಿ ಆರಂಭಿಕ 2 ಪಂದ್ಯಗಳನ್ನ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಇದನ್ನೂ ಓದಿ: ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಅರ್ಜೆಂಟಿನಾದ ಫುಟ್‌ಬಾಲ್ ಆಟಗಾರ ಮೆಸ್ಸಿ

  • T20 ವಿಶ್ವಕಪ್‌ಗೆ ಕಾಂಗರೂ ಪಡೆ ಸಿದ್ಧ – ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವಕ್ಕೆ ಕೊಕ್‌

    T20 ವಿಶ್ವಕಪ್‌ಗೆ ಕಾಂಗರೂ ಪಡೆ ಸಿದ್ಧ – ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವಕ್ಕೆ ಕೊಕ್‌

    – ಆರ್‌ಸಿಬಿ ಸ್ಟಾರ್ಸ್‌ ಗ್ರೀನ್‌, ಮ್ಯಾಕ್ಸಿ ಇನ್‌, ಸ್ವೀವ್‌ ಸ್ಮಿತ್‌ ಔಟ್‌, ಮೆಕ್‌ಗಾರ್ಕ್‌ಗೂ ಸ್ಥಾನವಿಲ್ಲ

    ಕ್ಯಾನ್ಬೆರಾ: ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ (T20 World Cup 2024) ಟೂರ್ನಿಗೆ ಇನ್ನು ಒಂದು ತಿಂಗಳು ಮಾತ್ರವೇ ಬಾಕಿಯಿದೆ. ಎಲ್ಲಾ ದೇಶದ ಕ್ರಿಕೆಟ್‌ ಮಂಡಳಿಗಳು ಬಲಿಷ್ಠ ಆಟಗಾರರ ತಂಡಗಳನ್ನ ಪ್ರಕಟಿಸುತ್ತಿವೆ. ಈ ಬಾರಿ ವಿಶ್ವಕಪ್‌ನಲ್ಲಿ ಹೊಸ ಮುಖಕ್ಕೆ ನಾಯಕತ್ವದ ಮಣೆ ಹಾಕಿರುವ ಆಸ್ಟ್ರೇಲಿಯಾ ಮಂಡಳಿ ಬಲಿಷ್ಠ ತಂಡವನ್ನು (Australia Squad) ಪ್ರಕಟಿಸಿದೆ. ಅಲ್ಲದೇ ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವಕ್ಕೆ ಕೊಕ್‌ ನೀಡಿದೆ.

    ಈ ಬಾರಿ ಟಿ20 ವಿಶ್ವಕಪ್‌ಗೆ ಮಿಚೆಲ್‌ ಮಾರ್ಷ್‌ (Mitchell Marsh) ಅವರಿಗೆ ಆಸೀಸ್‌ ನಾಯಕತ್ವದ ಹೊಣೆ ನೀಡಲಾಗಿದೆ. ಪ್ಯಾಟ್‌ ಕಮ್ಮಿನ್ಸ್‌ ಕೂಡ ತಂಡದಲ್ಲಿದ್ದು ಪ್ಲೇಯರ್‌ ಆಗಿ ಕಣಕ್ಕಿಳಿಯಲಿದ್ದಾರೆ. ಅಲ್ಲದೇ ಈ ಬಾರಿ ಆಸೀಸ್‌ ತಂಡದ ಮಾಜಿ ನಾಯಕ ಸ್ವೀವ್‌ ಸ್ಮಿತ್‌ (Steve Smith), ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಸ್ಫೋಟಕ ಪದರ್ಶನ ನೀಡುತ್ತಿರುವ ಫ್ರೇಸರ್‌ ಮೆಕ್‌ಗಾರ್ಕ್‌ ಅವರನ್ನೂ ಕೈಬಿಟ್ಟು ಆಶ್ಟನ್ ಅಗರ್ ಅವರಂತಹ ಹೊಸ ಮುಖಕ್ಕೆ ಮಣೆಹಾಕಿರುವುದು ಗಮನಾರ್ಹವಾಗಿದೆ.

    ನಾಯಕತ್ವದ ಹೊಣೆ ಹೊತ್ತಿರುವ ಮಿಚೆಲ್‌ ಮಾರ್ಷ್‌ ಐಪಿಎಲ್‌ ಮೂಲಕ ಟಿ20 ಯಲ್ಲಿ ಆಲ್‌ರೌಂಡರ್‌ ಅನುಭವ ಪಡೆದುಕೊಂಡಿದ್ದಾರೆ. ಅಲ್ಲದೇ ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಆಡಿರುವ ಮಿಚೆಲ್‌ ಮಾರ್ಷ್‌, ಭಾರತ ಸೇರಿದಂತೆ ಹಲವು ದೇಶಗಳೊಂದಿಗೆ ಏಕದಿನ, ಟಿ20 ಹಾಗೂ ಟೆಸ್ಟ್‌ ಸರಣಿಯನ್ನು ಆಡಿದ ಅನುಭವ ಹೊಂದಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾ ಪ್ರಕಟ – ಯಾರಿಗೆಲ್ಲ ಸ್ಥಾನ?

    ಆಸೀಸ್‌ ತಂಡದಲ್ಲಿ ಯಾರೆಲ್ಲಾ ಇದ್ದಾರೆ?
    ಆಶ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮರೂನ್‌ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್‌, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಮತ್ತು ಆಡಮ್ ಝಂಪಾ. ಇದನ್ನೂ ಓದಿ: ಟಿ20 ವಿಶ್ವಕಪ್‌ಗೆ ಕಿವೀಸ್‌ ಬಲಿಷ್ಠ ತಂಡ ರೆಡಿ – ವಿಲಿಯಮ್ಸನ್‌ ಕ್ಯಾಪ್ಟನ್‌, ಕನ್ನಡಿಗ ರಚಿನ್‌ಗೂ ಸ್ಥಾನ

    ಅಖಾಡದಲ್ಲಿ ಹೆಡ್:‌
    ಕಳೆದ ವರ್ಷ ಏಕದಿನ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ 137 ರನ್‌ ಸಿಡಿಸುವ ಜೊತೆಗೆ ಭಾರತದ ವಿಶ್ವಕಪ್‌ ಕನಸನ್ನು ಭಗ್ನಗೊಳಿಸಿದ್ದ ಟ್ರಾವಿಸ್‌ ಹೆಡ್‌ ಅವರಿಗೂ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ನೀಡಲಾಗಿದೆ. ಸದ್ಯ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಟ್ರಾವಿಸ್‌ ಹೆಡ್‌ ಸ್ಫೋಟಕ ಪ್ರದರ್ಶನವನ್ನೇ ನೀಡುತ್ತಿದ್ದು, ಇದು ಆಸೀಸ್‌ ತಂಡಕ್ಕೆ ಭಾರೀ ನಿರೀಕ್ಷೆ ಹೆಚ್ಚಿಸಿದೆ. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಕೃನಾಲ್‌ ಪಾಂಡ್ಯ ಪತ್ನಿ

  • RCB ಖರೀದಿಸಿದ ದುಬಾರಿ ಆಟಗಾರನಿಗೆ ದೀರ್ಘಕಾಲದ ಕಿಡ್ನಿ ಕಾಯಿಲೆ – ಸತ್ಯ ಬಹಿರಂಗಪಡಿಸಿದ ಗ್ರೀನ್‌

    RCB ಖರೀದಿಸಿದ ದುಬಾರಿ ಆಟಗಾರನಿಗೆ ದೀರ್ಘಕಾಲದ ಕಿಡ್ನಿ ಕಾಯಿಲೆ – ಸತ್ಯ ಬಹಿರಂಗಪಡಿಸಿದ ಗ್ರೀನ್‌

    ಕ್ಯಾನ್ಬೆರಾ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಫ್ರಾಂಚೈಸಿಯು ಟ್ರೇಡ್‌ ವಿಂಡೋ (T) ನಿಯಮದ ಮೂಲಕ 17.5 ಕೋಟಿ ರೂ.ಗೆ ಖರೀದಿಸಿದ ದೈತ್ಯ ಆಸೀಸ್‌ ಆಟಗಾರ ಕ್ಯಾಮರೂನ್‌ ಗ್ರೀನ್‌ (Cameron Green) ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ (Chronic Kidney Disease) ಬಳಲುತ್ತಿರುವ ಸತ್ಯ ಬಹಿರಂಗವಾಗಿದೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಹುಟ್ಟಿನಿಂದಲೇ ಗ್ರೀನ್‌ ಅವರಿಗೆ ಈ ಕಾಯಿಲೆ ಇದೆ. ಗ್ರೀನ್‌ ತಾಯಿ ಬೀ ಟ್ರೇಸಿ ಅವರು 19 ವಾರಗಳ ಗರ್ಭಿಣಿಯಾಗಿದ್ದಾಗ ಸ್ಕ್ಯಾನಿಂಗ್ ವೇಳೆಯೇ ಈ ಸಮಸ್ಯೆ ಗೊತ್ತಾಗಿತ್ತು ಎಂದು ಗ್ರೀನ್ ತಿಳಿಸಿದ್ದಾರೆ.

    ಆಸೀಸ್‌ ತಂಡದ ಕಾಯಂ ಪ್ಲೇಯರ್‌ ಆಗಿರುವ ಗ್ರೀನ್‌, ಐಪಿಎಲ್‌ನಲ್ಲೂ (IPL) ಮಿಂಚುತ್ತಿದ್ದಾರೆ. 2023ರಲ್ಲಿ ಐಪಿಎಲ್‌ ಪ್ರವೇಶಿಸಿದ ಗ್ರೀನ್‌ ಮುಂಬೈ ಇಂಡಿಯನ್ಸ್‌ (Mumbai Indians) ತಂಡಕ್ಕೆ ಸೇರ್ಪಡೆಯಾಗಿದ್ದರು. ಆದ್ರೆ ತಮ್ಮ 2ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಇದನ್ನೂ ಓದಿ: RCB ಸೇರಿದ ದೈತ್ಯ ಆಸೀಸ್‌ ಆಟಗಾರ – ರಾಯಲ್‌ ಚಾಲೆಂಜರ್ಸ್‌ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?

    ಕ್ಯಾಮರೂನ್‌ ಗ್ರೀನ್‌ 12 ವರ್ಷ ದಾಟಿದಾಗ ಬದುಕುಳಿಯುತ್ತಾರೆ ಅನ್ನುವ ಬಗ್ಗೆ ಅನುಮಾನವಿತ್ತು ಎಂದು ತಂದೆ ಗ್ಯಾರಿ ಹೇಳಿಕೊಂಡಿದ್ದಾರೆ. ಹೀಗಿದ್ದೂ ಗ್ರೀನ್‌ ಕ್ರಿಕೆಟ್‌ ವೃತ್ತಿ ಬದುಕನ್ನು ರೂಪಿಸುವಲ್ಲಿ ಅವರ ಪಾತ್ರ ಅಪಾರವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

    2022ರಲ್ಲಿ ಆಸೀಸ್‌ ಟಿ20 ತಂಡದ ಭಾಗವಾಗಿದ್ದ ಗ್ರೀನ್‌ ಒಂದು ವರ್ಷದಲ್ಲೇ ಬ್ಯಾಟಿಂಗ್‌, ಬೌಲಿಂಗ್‌ ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗುರುತಿಸಿಕೊಂಡರು. ಬಳಿಕ ಭಾರತದ ವಿರುದ್ಧವೇ ನಡೆದ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಟ್ರೋಫಿ ಸರಣಿಯ ತಮ್ಮ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಸಾಧನೆ ಮಾಡಿದರು. ಇದರಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಫೈನಲ್‌ನಲ್ಲೂ ಆಡುವ ಅವಕಾಶ ಪಡೆದುಕೊಂಡರು. ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲೂ ಅವರು ಸ್ಥಾನ ಪಡೆದುಕೊಂಡಿದ್ದರು. ಮುಂದೆ ಪಾಕ್‌ ವಿರುದ್ಧ ನಡೆಯಲಿರುವ ಟೆಸ್ಟ್‌ ತಂಡಕ್ಕೂ ಆಯ್ಕೆಯಾಗಿದ್ದಾರೆ.

    ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಗ್ರೀನ್‌, ನನಗೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇದೆ ಎಂದು ನನ್ನ ಹೆತ್ತವರಿಗೆ ನಾನು ಹುಟ್ಟಿದಾಗಲೇ ವೈದ್ಯರು ಹೇಳಿದ್ದರು. ಆರಂಭದಲ್ಲಿ ಯಾವುದೇ ರೋಗಲಕ್ಷಣಗಳಿರಲಿಲ್ಲ. ಅಲ್ಟ್ರಾಸೌಂಡ್ ಮೂಲಕ ಇದು ತಿಳಿದುಬಂತು. ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯು ಮೂತ್ರಪಿಂಡದ ಆರೋಗ್ಯ ಕಾರ್ಯದ ಮೇಲೆ ಪ್ರಭಾವ ಬೀರುವ ಕಾಯಿಲೆಯಾಗಿದೆ. ದುರದೃಷ್ಟವಶಾತ್, ನನ್ನ ಕಿಡ್ನಿ ರಕ್ತವನ್ನು ಫಿಲ್ಟರ್ ಮಾಡುವುದಿಲ್ಲ. ಸದ್ಯ ನನಗೆ 2ನೇ ಸ್ಟೇಜ್‌ನಲ್ಲಿ ಕಾಯಿಲೆ ಇದ್ದು, ಸಮಸ್ಯೆಯೊಂದಿಗೆ ಕ್ರಿಕೆಟ್‌ ಬದುಕನ್ನು ಸಾಗಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 89 ಸಾವಿರ ಕೋಟಿ ತಲುಪಿತು ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ- ಯಾವ ತಂಡದ್ದು ಎಷ್ಟು?

    ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಲ್ಲಿ 5 ಹಂತಗಳಿವೆ. ಮೊದಲ ಹಂತವು ಕಡಿಮೆ ತೀವ್ರತೆಯದ್ದು. ಐದನೇ ಹಂತವು ಕಿಡ್ನಿ ಕಸಿ ಅಥವಾ ಡಯಾಲಿಸಿಸ್ ಮಾಡುವಂಥದ್ದು. ಅದೃಷ್ಟವಶಾತ್, ನನ್ನದು 2ನೇ ಹಂತದಲ್ಲಿದೆ. ನಾನು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತಿರಲಿಲ್ಲ, ಆಹಾರ ಸೇವಿಸುತ್ತಿರಲಿಲ್ಲ. ಅಲ್ಲದೇ ಆಟದ ಸಮಯದಲ್ಲೂ ನನ್ನ ಆರೋಗ್ಯ ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತ ಅನ್ನಿಸುತ್ತೆ. ಕಾಲಾನಂತರದಲ್ಲಿ ನಿಧಾನವಾಗಿ ನಾನು ಎಲ್ಲವನ್ನೂ ಸರಿಯಾಗಿ ಅನುಸರಿಸುತ್ತಿದ್ದೇನೆ. ಆದರೂ ನನಗೆ ಅದರ ಸೆಳೆತವಿದೆ ಎಂದಿದ್ದಾರೆ.

  • IPL 2023 Finals: ಗಿಲ್‌ ಅಬ್ಬರಕ್ಕೆ ಮುಂಬೈ ಬರ್ನ್‌ – 2ನೇ ಬಾರಿಗೆ ಗುಜರಾತ್‌ ಟೈಟಾನ್ಸ್‌ ಫೈನಲ್‌ಗೆ

    IPL 2023 Finals: ಗಿಲ್‌ ಅಬ್ಬರಕ್ಕೆ ಮುಂಬೈ ಬರ್ನ್‌ – 2ನೇ ಬಾರಿಗೆ ಗುಜರಾತ್‌ ಟೈಟಾನ್ಸ್‌ ಫೈನಲ್‌ಗೆ

    ಅಹಮದಾಬಾದ್‌: ಶುಭಮನ್‌ ಗಿಲ್‌ ಸ್ಫೋಟಕ ಶತಕದ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ಗುಜರಾತ್‌ ಟೈಟಾನ್ಸ್‌ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ 62 ರನ್‌ಗಳ ಭರ್ಜರಿ ಜಯದೊಂದಿಗೆ ಸತತ 2ನೇ ಬಾರಿಗೆ ಐಪಿಎಲ್‌ನಲ್ಲಿ ಫೈನಲ್‌ ಪ್ರವೇಶಿಸಿದೆ. ಇನ್ನೂ 5 ಬಾರಿ ಚಾಂಪಿಯನ್ಸ್‌ ಪಟ್ಟಕ್ಕೇರಿದ್ದ ಮುಂಬೈ ಇಂಡಿಯನ್ಸ್‌ ಸೋಲಿನೊಂದಿಗೆ 2023ರ ಐಪಿಎಲ್‌ ಆವೃತ್ತಿಗೆ ವಿದಾಯ ಹೇಳಿದೆ.

    2022ರ ಆವೃತ್ತಿಯಲ್ಲಿ ಐಪಿಎಲ್‌ ಪ್ರವೇಶಿಸಿದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ತಂಡ ಸತತ 2ನೇ ಬಾರಿಗೆ ಐಪಿಎಲ್‌ನಲ್ಲಿ ಫೈನಲ್‌ ತಲುಪಿದೆ. ಸೂಪರ್‌ ಸಂಡೇನಲ್ಲಿ (ಮೇ 28) ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೆಣಸಲಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 20 ಓವರ್‌ಗಳಲ್ಲಿ 233 ರನ್‌ ಗಳಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ 18.2 ಓವರ್‌ಗಳಲ್ಲಿ 171 ರನ್‌ಗಳಿಗೆ ಸರ್ವಪತನ ಕಂಡಿತು.

    ಚೇಸಿಂಗ್‌ ಆರಂಭಿಸಿದ ಮುಂಬೈ ಇಂಡಿಯನ್ಸ್‌ ಆರಂಭದಲ್ಲೇ ರೋಹಿತ್‌ ಶರ್ಮಾ ಹಾಗೂ ನೆಹಾಲ್‌ ವಧೇರಾ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ನಂತರ ಕಣಕ್ಕಿಳಿದ ‌14 ಎಸೆತಗಳಲ್ಲಿ ವರ್ಮಾ 307.14 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ ಸ್ಫೋಟಕ 43 ರನ್‌ (5 ಬೌಂಡರಿ, 3 ಸಿಕ್ಸರ್‌) ಚಚ್ಚಿ ತಂಡಕ್ಕೆ ಚೇತರಿಕೆ ತಂದರು.

    ನಂತರ 4ನೇ ವಿಕೆಟ್‌ಗೆ ಜೊತೆಯಾದ ಕ್ಯಾಮರೂನ್‌ ಗ್ರೀನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಜೋಡಿ 32 ಎಸೆತಗಳಲ್ಲಿ 52 ರನ್‌ ಜೊತೆಯಾಟ ನೀಡಿತ್ತು. ಅಷ್ಟರಲ್ಲೇ 20 ಎಸೆತಗಳಲ್ಲಿ 30 ರನ್‌ (2 ಸಿಕ್ಸರ್‌, 2 ಬೌಂಡರಿ) ಗಳಿಸಿದ್ದ ಗ್ರೀನ್‌ ವಿಕೆಟ್‌ ಕೈಚೆಲ್ಲಿ ನಿರಾಸೆ ಮೂಡಿಸಿದರು. ಇನ್ನೂ ಅರ್ಧಶತಕ ಗಳಿಸಿ ಸ್ಫೋಟಕ ಬ್ಯಾಟಿಂಗ್‌ ಮಾಡುತ್ತಿದ್ದ ಸೂರ್ಯಕುಮಾರ್‌ ಯಾದವ್‌, ತಂಡಕ್ಕೆ ಗೆಲುವು ತಂದುಕೊಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದ್ರೆ ಬೇಡದ ಶಾಟ್‌ ಹೊಡೆಯಲು ಯತ್ನಿಸಿ ಸೂರ್ಯ ಕ್ಲೀನ್‌ ಬೌಲ್ಡ್‌ ಆಗಿ ತಂಡದ ಗೆಲುವಿನ ಕನಸನ್ನ ನುಚ್ಚು ನೂರು ಮಾಡಿದರು.

    ಸೂರ್ಯಕುಮಾರ್‌ ಯಾದವ್‌ 61 ರನ್‌ (38 ಎಸೆತ, 7 ಬೌಂಡರಿ, 2 ಸಿಕ್ಸರ್‌) ಗಳಿಸಿ ಔಟಾಗುತ್ತಿದ್ದಂತೆ ವಿಷ್ಣು ವಿನೋದ್‌ 5 ರನ್‌ ಗಳಿಸಿ ಔಟಾದರು. ಕೊನೆಯಲ್ಲಿ ಟಿಮ್‌ ಡೇವಿಡ್‌ 2 ರನ್‌, ಕ್ರಿಸ್‌ ಜೋರ್ಡಾನ್‌ 2 ರನ್‌ ಗಳಿಸಿದರೆ ಪಿಯೂಷ್‌ ಚಾವ್ಲಾ ಶೂನ್ಯಕ್ಕೆ ನಿರ್ಗಮಿಸಿದರು. ಕುಮಾರ್‌ ಕಾರ್ತಿಕೇಯನ್‌ 6 ರನ್‌ ಗಳಿಸಿ ಔಟಾದರೆ, ಜೇಸನ್ ಬೆಹ್ರೆನ್ಡಾರ್ಫ್ 3 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದರೂ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಬೃಹತ್‌ ಮೊತ್ತ ದಾಖಲಿಸಿತು. 6.3 ಓವರ್‌ಗಳಲ್ಲಿ 54 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡರು. 2ನೇ ವಿಕೆಟ್‌ಗೆ 16.5 ಓವರ್‌ಗಳಲ್ಲಿ ತಂಡದ ಮೊತ್ತ 192ಕ್ಕೆ ಏರಿತ್ತು.

    ಶುಭಮನ್‌ ಗಿಲ್‌ ಸ್ಫೋಟಕ ಶತಕದಾಟಕ್ಕೆ ಮುಂಬೈ ಬೌಲರ್‌ಗಳು ಕಂಗಾಲಾಗಿದ್ದರು. ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ ಜೋಡಿ 64 ಎಸೆತಗಳಲ್ಲಿ 138 ರನ್‌ ಗಳಿಸಿತ್ತು. ಮೊದಲ 32 ಎಸೆತಗಳಲ್ಲಿ 50 ರನ್‌ ಗಳಿಸಿದ್ದ ಗಿಲ್‌, ಮುಂದಿನ 17 ಎಸೆತಗಳಲ್ಲಿ 50 ರನ್‌ ಚಚ್ಚಿ ಶತಕ ಪೂರೈಸಿದರು. ಕೊನೆಗೆ 60 ಎಸೆತಗಳನ್ನು ಎದುರಿಸಿ 10 ಭರ್ಜರಿ ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 129 ರನ್‌ ಗಳಿಸಿ ಔಟಾದರು.

    ಈ ನಡುವೆ ಸಾಯಿ ಸುದರ್ಶನ್‌ 43 ರನ್‌ (‌ 31 ಎಸೆತ, 5 ಬೌಂಡರಿ, 1 ಸಿಕ್ಸರ್), ವೃದ್ಧಿಮಾನ್‌ ಸಾಹಾ 18 ರನ್‌, ಹಾರ್ದಿಕ್‌ ಪಾಂಡ್ಯ ಅಜೇಯ 28 ರನ್‌, ರಶೀದ್‌ ಖಾನ್‌ ಅಜೇಯ 5 ರನ್‌ ಗಳಿಸಿದರು.

    ಮುಂಬೈ ಪರ ಆಕಾಶ್‌ ಮಧ್ವಾಲ್‌, ಪಿಯೂಷ್‌ ಚಾವ್ಲಾ ತಲಾ ಒಂದೊಂದು ವಿಕೆಟ್‌ ಪಡೆದರು.

  • ಗ್ರೀನ್‌ ಸ್ಫೋಟಕ ಶತಕ, ಮುಂಬೈಗೆ 8 ವಿಕೆಟ್‌ಗಳ ಭರ್ಜರಿ ಜಯ – RCB ಗೆದ್ದರಷ್ಟೇ ಪ್ಲೇ ಆಫ್‌ಗೆ

    ಗ್ರೀನ್‌ ಸ್ಫೋಟಕ ಶತಕ, ಮುಂಬೈಗೆ 8 ವಿಕೆಟ್‌ಗಳ ಭರ್ಜರಿ ಜಯ – RCB ಗೆದ್ದರಷ್ಟೇ ಪ್ಲೇ ಆಫ್‌ಗೆ

    ಮುಂಬೈ: ಕ್ಯಾಮರೂನ್‌ ಗ್ರೀನ್‌ (Cameron Green) ಸ್ಪೋಟಕ ಶತಕ, ರೋಹಿತ್‌ ಶರ್ಮಾ (Rohit Sharma) ಅರ್ಧಶತಕ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್‌ ತಂಡವು ಕೊನೆಯ ಲೀಗ್‌ ಪಂದ್ಯದಲ್ಲಿ ಸೋತು 2023 ಐಪಿಎಲ್‌ ಆವೃತ್ತಿಗೆ ವಿದಾಯ ಹೇಳಿದೆ.

    ಅಂದುಕೊಂಡಂತೆ ಮುಂಬೈ ಇಂಡಿಯನ್ಸ್‌ ನಿರೀಕ್ಷಿತ ಓವರ್‌ಗಳಲ್ಲಿ ರನ್‌ ಕಲೆಹಾಕದಿದ್ದರೂ ಹೈದರಾಬಾದ್‌ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಐಪಿಎಲ್‌ ಲೀಗ್‌ ಹಂತದಲ್ಲಿ ಆರ್‌ಸಿಬಿ (RCB) ಹಾಗೂ ಗುಜರಾತ್‌ ಟೈಟಾನ್ಸ್‌ (GT) ನಡುವೆ ಇನ್ನೊಂದು ಪಂದ್ಯ ಬಾಕಿಯಿದ್ದು, ಆರ್‌ಸಿಬಿ ಗೆದ್ದರಷ್ಟೇ ಪ್ಲೇ ಆಫ್‌ ತಲುಪಲಿದೆ. 14 ಪಂದ್ಯಗಳಲ್ಲಿ 8ರಲ್ಲಿ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್‌ -0.044 ರನ್‌ರೇಟ್‌ನೊಂದಿಗೆ 16 ಅಂಕ ಪಡೆದು 4ನೇ ಸ್ಥಾನಕ್ಕೇರಿದೆ. ಆದ್ರೆ ಆರ್‌ಸಿಬಿ 7 ಪಂದ್ಯ ಗೆದ್ದು +0.180 ರನ್‌ರೇಟ್‌ ನೊಂದಿಗೆ 14 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ಒಂದು ವೇಳೆ ಗುಜರಾತ್‌ ಟೈಟಾನ್ಸ್‌ ವಿರುದ್ಧ ಪಂದ್ಯದಲ್ಲಿ ಉತ್ತಮ ಜಯ ಸಾಧಿಸುವಲ್ಲಿ ಯಶಸ್ವಿಯಾದರೆ ಆರ್‌ಸಿಬಿ ಖಚಿತವಾಗಿ ಪ್ಲೇ ಆಫ್‌ ತಲುಪಲಿದೆ. ಪ್ರಬಲ ಪೈಪೋಟಿ ನೀಡಿದರೂ ಆರ್‌ಸಿಬಿಗೆ ಪ್ಲೇ ಆಫ್‌ ತಲುಪುವ ಅವಕಾಶವಿದೆ.

    ಮುಂಬೈ ತವರು ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 200 ರನ್‌ ಪೇರಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಮುಂಬೈ 18 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ಕೊನೆಯಲ್ಲಿ ರಿಂಕು 6,4,6 – ಹೋರಾಡಿ ಸೋತ KKR – 1 ರನ್‌ನಿಂದ ಗೆದ್ದು ಪ್ಲೇ ಆಫ್‌ಗೆ ಹಾರಿದ ಲಕ್ನೋ

    ಚೇಸಿಂಗ್‌ ಆರಂಭಿಸಿದ ಮುಂಬೈ ಉತ್ತಮ ಆರಂಭ ಪಡೆಯದಿದ್ದರೂ 2ನೇ ವಿಕೆಟ್‌ ಅಂತ್ಯಕ್ಕೆ ಕ್ಯಾಮರೂನ್‌ ಗ್ರೀನ್‌ ಹಾಗೂ ನಾಯಕ ರೋಹಿತ್‌ ಶರ್ಮಾ ಜೋಡಿ 1.3.1 ಓವರ್‌ಗಳಲ್ಲಿ 148 ರನ್‌ ಸಿಡಿಸಿತ್ತು. ಇವರಿಬ್ಬರ ಹೊಡಿ-ಬಡಿ ಆಟಕ್ಕೆ ಹೈದರಾಬಾದ್‌ ತಂಡದ ಬೌಲರ್‌ಗಳು ಸುಸ್ತಾಗಿದ್ದರು. ಕ್ಯಾಮರೂನ್‌ ಗ್ರೀನ್‌ 47 ಎಸೆತಗಳಲ್ಲಿ 100 ರನ್‌ (8 ಸಿಕ್ಸ್‌, 8 ಬೌಂಡರಿ), ರೋಹಿತ್‌ ಶರ್ಮಾ 56 ರನ್‌ (37 ಎಸೆತ, 8 ಬೌಂಡರಿ, 1 ಸಿಕ್ಸ್‌), ಸೂರ್ಯಕುಮಾರ್‌ ಯಾದವ್‌ 16 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 25 ರನ್‌ ಹಾಗೂ ಇಶಾನ್‌ ಕಿಶನ್ ‌14 ರನ್‌ ಗಳಿಸಿ ತಂಡದ ಗೆಲುವಿಗೆ ನೆರವಾದರು.

    ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ತಂಡ ಉತ್ತಮ ಆರಂಬ ಪಡೆದುಕೊಂಡಿತು. ಮೊದಲ ವಿಕೆಟ್‌ ಪತನಕ್ಕೆ ವಿವ್ರಿಂತ್ ಶರ್ಮಾ ಹಾಗೂ ಮಯಾಂಕ್‌ ಅಗರ್ವಲ್‌ ಜೋಡಿ 13.5 ಓವರ್‌ಗಳಲ್ಲಿ 140 ರನ್‌ ಸಿಡಿಸಿತ್ತು. ಬಳಿಕ ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಾ ಹೋದಂತೆ ರನ್‌ ಹೊಳೆಯೂ ಹರಿಯಿತು. ಅಂತಿಮವಾಗಿ ಹೈದರಾಬಾದ್‌ 200 ರನ್‌ ಕಲೆಹಾಕಿತು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮಳೆ ಆರ್ಭಟ – ಇಂದಿನ RCB ಮ್ಯಾಚ್ ರದ್ದಾಗುತ್ತಾ?

    ತಂಡದ ಪರ ವಿವ್ರಿಂತ್ ಶರ್ಮಾ 69 ರನ್‌ (47 ಎಸೆತ, 2 ಸಿಕ್ಸ್‌, 9 ಬೌಂಡರಿ), ಮಯಾಂಕ್‌ ಅಗರ್ವಾಲ್‌ 83 ರನ್‌ (46 ಎಸೆತ, 8 ಬೌಂಡರಿ, 4 ಸಿಕ್ಸರ್‌), ಹೆನ್ರಿಚ್‌ ಕ್ಲಾಸೆನ್‌ 18 ರನ್‌, ಏಡನ್‌ ಮಾರ್ಕ್ರಮ್‌ 13 ರನ್‌ ಬಾರಿಸಿದರು.

    ಮುಂಬೈ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಆಕಾಶ್ ಮಧ್ವಲ್, 4 ಓವರ್‌ಗಳಲ್ಲಿ 39 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ಕ್ರಿಸ್ ಜೋರ್ಡಾನ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಂಡ ಮುಂಬೈ – 6 ವಿಕೆಟ್‌ಗಳ ಭರ್ಜರಿ ಜಯ

    ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಂಡ ಮುಂಬೈ – 6 ವಿಕೆಟ್‌ಗಳ ಭರ್ಜರಿ ಜಯ

    ಮೊಹಾಲಿ: ಇಶಾನ್‌ ಕಿಶನ್‌ (Ishan Kishan) ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav) ಭರ್ಜರಿ ಅರ್ಧ ಶತಕಗಳ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌, ಕಿಂಗ್ಸ್‌ ಪಂಜಾಬ್‌ ತಂಡದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಗೆಲುವಿಗೆ 215 ರನ್‌ ಗುರಿ ಪಡೆದ ಮುಂಬೈ ಆಕ್ರಮಣ ಕಾರಿ ಬ್ಯಾಟಿಂಗ್‌ ನಿಂದ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 216 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿದೆ. ಕಳೆದ ಪಂದ್ಯದಲ್ಲಿ ಮುಂಬೈ ತನ್ನ ತವರಿನಲ್ಲಿ ಅನುಭವಿಸಿದ ವಿರೋಚಿತ ಸೋಲಿಗೆ ಸೇಡುತೀರಿಸಿಕೊಂಡಿದ್ದು, ಪಾಯಿಂಟ್ಸ್‌ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದೆ.

    ಚೇಸಿಂಗ್‌ ಆರಂಭಿಸಿದ ಮುಂಬೈ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದರೂ, 2ನೇ ವಿಕೆಟ್‌ ಜೊತೆಯಾಟಕ್ಕೆ 6 ಓವರ್‌ಗಳಲ್ಲಿ 54 ರನ್‌ ಕಲೆಹಾಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ (Suryakumar Yadav) ಹಾಗೂ ಇಶಾನ್ ‌ಕಿಶನ್‌ (Ishan Kishan) ಬ್ಯಾಟಿಂಗ್‌ ನೆರವಿನಿಂದ ಮುಂಬೈ ತಂಡ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

    ಪಂಜಾಬ್‌ ಬೌಲರ್‌ಗಳನ್ನು ಚೆಂಡಾಡಿದ ಈ ಜೋಡಿ ಕೇವಲ 55 ಎಸೆತಗಳಲ್ಲಿ ಬರೋಬ್ಬರಿ 116 ರನ್‌ ಸಿಡಿಸಿತ್ತು. ಕೊನೆಯಲ್ಲಿ ಕಣಕ್ಕಿಳಿದ ಟಿಮ್‌ ಡೇವಿಡ್‌ ಹಾಗೂ ತಿಲಕ್‌ ವರ್ಮಾ ಸ್ಫೋಟಕ ಬ್ಯಾಟಿಂಗ್‌ ತಂಡಕ್ಕೆ ಇನ್ನಷ್ಟು ನೆರವಾಯಿತು. ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 91 ರನ್‌ ಗಳಿಸಿದ್ದ ಮುಂಬೈಗೆ ಇನ್ನೂ 60 ಎಸೆತಗಳಲ್ಲಿ 124 ರನ್‌ಗಳ ಅಗತ್ಯವಿತ್ತು. ಆದರೆ ಮುಂಬೈ 18.5 ಓವರ್‌ಗಳಲ್ಲೇ 216 ರನ್‌ ಸಿಡಿಸಿ ಗೆದ್ದು ಬೀಗಿತು.

    ಮುಂಬೈ ಪರ ಇಶಾನ್‌ ಕಿಶನ್‌ 75 ರನ್‌ (41 ಎಸೆತ 4 ಸಿಕ್ಸರ್‌, 7 ಬೌಂಡರಿ), ಸೂರ್ಯಕುಮಾರ್‌ ಯಾದವ್‌ 66 ರನ್‌ (31 ಎಸೆತ, 8 ಬೌಂಡರಿ, 2 ಸಿಕ್ಸರ್‌), ಟಿಮ್‌ ಡೇವಿಡ್‌ 19 ರನ್‌ (10 ಎಸೆತ, 3 ಬೌಂಡರಿ), ತಿಲಕ್‌ ವರ್ಮಾ ಸ್ಫೋಟಕ 26 ರನ್‌ (10 ಎಸೆತ, 1 ಬೌಂಡರಿ, 3 ಸಿಕ್ಸರ್)‌ ಚಚ್ಚಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ಸಹ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತ್ತು. ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 78 ರನ್‌ ಗಳಿಸಿತ್ತು. ಬಳಿಕ ಮುರಿಯದ 4ನೇ ವಿಕೆಟ್‌ಗೆ ಒಂದಾದ ಲಿಯಾಮ್‌ ಲಿವಿಂಸ್ಟೋನ್‌ (Liam Livingstone) ಹಾಗೂ ಜಿತೇಶ್‌ ಶರ್ಮಾ (Jitesh Sharma) 53 ಎಸೆತಗಳಲ್ಲಿ 119 ರನ್‌ ಸಿಡಿಸುವ ಮೂಲಕ ತಂಡದ ಮೊತ್ತ 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಕಿಂಗ್ಸ್‌ ಪಂಜಾಬ್‌ ಪರ ಶಿಖರ್‌ ಧವನ್‌ 30 ರನ್‌, ಮ್ಯಾಥಿವ್‌ ಶಾರ್ಟ್‌ 27 ರನ್‌, ಲಿಯಾಮ್‌ ಲಿವಿಂಗ್ಸ್ಟನ್‌ ಭರ್ಜರಿ 82 ರನ್‌ (42 ಎಸೆತ, 7 ಬೌಂಡರಿ, 4 ಸಿಕ್ಸರ್‌), ಜಿತೇಶ್‌ ಶರ್ಮಾ 49 ರನ್‌ (27 ಎಸೆತ, 5 ಬೌಂಡರಿ, 2 ಸಿಕ್ಸರ್‌) ಚಚ್ಚಿದರು.

  • ಒಂದೇ ಓವರ್‌ನಲ್ಲಿ 31 ರನ್‌ ಕೊಟ್ಟ ಅರ್ಜುನ್‌ ತೆಂಡೂಲ್ಕರ್‌; ಹರ್ಷ ತಂದ ಅರ್ಷ್‌ದೀಪ್‌ – ಪಂಜಾಬ್‌ಗೆ 13 ರನ್‌ಗಳ ಜಯ

    ಒಂದೇ ಓವರ್‌ನಲ್ಲಿ 31 ರನ್‌ ಕೊಟ್ಟ ಅರ್ಜುನ್‌ ತೆಂಡೂಲ್ಕರ್‌; ಹರ್ಷ ತಂದ ಅರ್ಷ್‌ದೀಪ್‌ – ಪಂಜಾಬ್‌ಗೆ 13 ರನ್‌ಗಳ ಜಯ

    ಮುಂಬೈ: ‌ಅರ್ಷ್‌ದೀಪ್‌ ಸಿಂಗ್‌ (Arshdeep Singh) ಬೆಂಕಿ ಬೌಲಿಂಗ್‌ ದಾಳಿ ಹಾಗೂ ನಾಯಕ ಸ್ಯಾಮ್‌ ಕರ್ರನ್‌ (Sam Curran) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಪಂಜಾಬ್‌ ಕಿಂಗ್ಸ್‌ (Punjab Kings), ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ 13 ರನ್‌ಗಳ ಜಯ ಸಾಧಿಸಿದೆ.

    ಕೊನೆಯ 6 ಎಸೆತಗಳಲ್ಲಿ ಮುಂಬೈಗೆ 16 ರನ್‌ ಗಳ ಅಗತ್ಯವಿತ್ತು. ಈ ವೇಳೆ ಮೊದಲ ಎಸೆತದಲ್ಲಿ ಟಿಮ್‌ ಡೇವಿಡ್‌ 1 ರನ್‌ ಕದ್ದರು. ನಂತರ ಕ್ರೀಸ್‌ಗೆ ಬಂದ ತಿಲಕ್‌ ವರ್ಮಾ 2ನೇ ಎಸೆತದಲ್ಲಿ ರನ್‌ ಗಳಿಸಲು ವಿಫಲರಾಗಿ, 3ನೇ ಎಸೆತದಲ್ಲೇ ಕ್ಲೀನ್‌ ಬೌಲ್ಡ್‌ ಆದರು. ಅರ್ಷ್‌ದೀಪ್‌ ಎಸೆದ ಬೌಲಿಂಗ್‌ ವೇಗಕ್ಕೆ ವಿಕೆಟ್‌ ಮುರಿದೇ ಹೋಯಿತು. 4ನೇ ಎಸೆತದಲ್ಲೂ ವಿಕೆಟ್‌ ಕಬಳಿಸಿದ ಅರ್ಷ್‌ದೀಪ್‌ ತಂಡದ ಗೆಲುವಿಗೆ ಆಸರೆಯಾದರು. 5ನೇ ಎಸೆತದಲ್ಲಿ ಯಾವುದೇ ರನ್‌ ನೀಡದೇ 6ನೇ ಎಸೆತದಲ್ಲಿ ಕೇವಲ ಒಂದು ರನ್‌ ನೀಡಿ ಪಂಜಾಬ್‌ ಗೆಲುವಿಗೆ ಕಾರಣರಾದರು.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 214 ರನ್‌ ಗಳಿಸಿತ್ತು. 215 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿ ತವರಿನಲ್ಲಿ ವಿರೋಚಿತ ಸೋಲನುಭವಿಸಿತು. ಇದನ್ನೂ ಓದಿ: ಪಾಂಡ್ಯ ಪರಾಕ್ರಮದ ಮುಂದೆ ಮಂಡಿಯೂರಿದ ರಾಹುಲ್‌ ಪಡೆ – ಗುಜರಾತ್‌ಗೆ 7 ರನ್‌ಗಳ ರೋಚಕ ಜಯ

    ರೋಹಿತ್‌, ಗ್ರೀನ್‌, ಸೂರ್ಯನ ಅಬ್ಬರ ವ್ಯರ್ಥ: ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ 2ನೇ ಓವರ್‌ನಲ್ಲೇ 8 ರನ್‌ಗಳಿಗೆ ಇಶಾನ್‌ ಕಿಶನ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಜೊತೆಗೂಡಿದ ಕ್ಯಾಮರೂನ್‌ ಗ್ರೀನ್‌ (Cameron Green) ಹಾಗೂ ರೋಹಿತ್‌ ಶರ್ಮಾ (Rohit Sharma) ಜೋಡಿ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದರು. ಭರ್ಜರಿ ಸಿಕ್ಸರ್‌ ಬೌಂಡರಿ ಆಟವಾಡಿದ ಈ ಜೋಡಿ 50 ಎಸೆತಗಳಲ್ಲಿ 76 ರನ್‌ ಸಿಡಿಸಿತ್ತು. ಅತ್ತ ರೋಹಿತ್‌ ಶರ್ಮಾ 44 ರನ್‌ (27 ಎಸೆತ, 4 ಬೌಂಡರಿ, 3 ಸಿಕ್ಸರ್‌) ಬಾರಿಸಿ ಔಟಾಗುತ್ತಿದ್ದಂತೆ, ಪಂಜಾಬ್‌ ಬೌಲರ್‌ಗಳನ್ನ ಚೆಂಡಾಡಿದ ಗ್ರೀನ್‌, ಸೂರ್ಯಕುಮಾರ್‌ ಯಾದವ್‌ (Suryakumar Yadav) ಜೋಡಿ, 36 ಎಸೆತಗಳಲ್ಲಿ ಬರೋಬ್ಬರಿ 75 ರನ್‌ ಸಿಡಿಸಿತು. ಇದು ತಂಡದ ಗೆಲುವಿಗೆ ಹೆಚ್ಚು ಸಹಕಾರಿಯಾಯಿತು. ಕ್ಯಾಮರೂನ್‌ ಗ್ರೀನ್‌ 67 ರನ್‌ (43 ಎಸೆತ, 6 ಬೌಂಡರಿ, 3 ಸಿಕ್ಸರ್‌) ಗಳಿಸಿದರೆ, 219.23 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸೂರ್ಯಕುಮಾರ್‌ ಯಾದವ್‌ 26 ಎಸೆತಗಳಲ್ಲಿ 57 ರನ್‌ ಸಿಡಿಸಿ ಮಿಂಚಿದರು.

    ಇದರಿಂದ ಮುಂಬೈ ತಂಡ ಖಚಿತವಾಗಿ ಗೆಲ್ಲುವ ಭರವಸೆ ಹೊಂದಿತ್ತು. ಆದರೆ ಕೊನೆಯಲ್ಲಿ ತಿಲಕ್‌ ವರ್ಮಾ ಬ್ಯಾಟಿಂಗ್‌ ವಿಫಲತೆಯಿಂದ ಮುಂಬೈ ಇಂಡಿಯನ್ಸ್‌ಗೆ ವಿರೋಚಿತ ಸೋಲಾಯಿತು. ಕೊನೆಯಲ್ಲಿ 192.30 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಟಿಮ್‌ ಡೇವಿಡ್‌ 13 ಎಸೆತಗಳಲ್ಲಿ 25 ರನ್‌ ಗಳಿಸಿದರೆ, ಜೋಫ್ರಾ ಆರ್ಚರ್‌ 1 ರನ್‌ ಗಳಿಸಿ ಅಜೇಯರಾಗುಳಿದರು. ತಿಲಕ್‌ ವರ್ಮಾ 3 ರನ್‌ ಗಳಿಸಿ ಔಟಾದರು.

    ಪಂಜಾಬ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಅರ್ಷ್‌ದೀಪ್‌ ಸಿಂಗ್‌ 4 ಓವರ್‌ಗಳಲ್ಲಿ 29 ರನ್‌ ನೀಡಿ ಪ್ರಮುಖ 4 ವಿಕೆಟ್‌ ಕಿತ್ತರೆ, ನಾಥನ್‌ ಎಲ್ಲಿಸ್‌ ಹಾಗೂ ಲಿಯಾಮ್‌ ಲಿವಿಂಗ್ಸ್ಟನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ:  7 ಸಾವಿರ ರನ್‌ ಪೂರೈಸಿದ ರಾಹುಲ್‌ – ಕೊಹ್ಲಿ, ರೋಹಿತ್‌ ಸೇರಿ ಹಲವರ ದಾಖಲೆ ಉಡೀಸ್‌

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ ಆರಂಭದಲ್ಲಿ ಮುಂಬೈ ಬೌಲರ್‌ಗಳ ದಾಳಿಗೆ ತುತ್ತಾದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಸ್ವರೂಪ ರೌದ್ರಾವತಾರ ತಾಳಿತು. ಆದರೆ ಕೊನೆಯ 6 ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ ತಂಡ ಮುಂಬೈಗೆ 215 ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡುವಲ್ಲಿ ಯಶಸ್ವಿಯಾಯಿತು.

    ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಈ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದಿ ನಾಯಕ ಸ್ಯಾಮ್ ಕರ್ರನ್‌ 29 ಎಸೆತಗಳಲ್ಲಿ 55 ರನ್‌ (4 ಸಿಕ್ಸರ್‌, 5 ಬೌಂಡರಿ) ಬಾರಿಸಿದ ದೊಡ್ಡ ಮೊತ್ತದತ್ತ ದಾಪುಗಾಲಿಕ್ಕಲು ಕಾರಣವಾದರು. ಇದರೊಂದಿಗೆ ಹರ್ಪ್ರೀತ್‌ ಸಿಂಗ್‌ ಭಾಟಿಯಾ 28 ಎಸೆತಗಳಲ್ಲಿ 41 ರನ್‌ (2 ಸಿಕ್ಸರ್‌, 4 ಬೌಂಡರಿ) ಬಾರಿಸಿದರೆ ಜಿತೇಶ್ ಶರ್ಮಾ ಕೇವಲ 7 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್‌ನೊಂದಿಗೆ 25 ರನ್ ಚಚ್ಚಿದರು.

    ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕೊನೆಯ 6 ಓವರ್‌ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿಕೊಂಡಿತು. ಮೊದಲ 14 ಓವರ್‌ಗಳ ಅಂತ್ಯಕ್ಕೆ 105 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಪಂಜಾಬ್‌ 150 ರನ್‌ಗಳ ಗುರಿ ತಲುಪುವುದೇ ಕಷ್ಟವಾಗಿತ್ತು. ಮುಂಬೈ ತವರಿನಲ್ಲಿ ಪಂಜಾಬ್ ಸುಲಭ ಗುರಿ ಮುಂದಿಡಲಿದೆ ಎಂದೇ ಬಹುತೇಕ ಅಭಿಮಾನಿಗಳು ಭಾವಿಸಿದ್ದರು. 15ನೇ ಓವರ್‌ನಿಂದ ಅಬ್ಬರಿಸಲು ಶುರು ಮಾಡಿದ ಪಂಜಾಬ್‌ ಬ್ಯಾಟ್ಸ್‌ಮ್ಯಾನ್‌ಗಳು ಮುಂಬೈ ಬೌಲರ್‌ಗಳನ್ನು ಚೆಂಡಾಡಿದರು. ಅರ್ಜುನ್ ತೆಂಡೂಲ್ಕರ್ ಎಸೆತ 16ನೇ ಓವರ್‌ನಲ್ಲಿ 31 ರನ್ ಹರಿದು ಬಂದಿದ್ದರೇ ಕ್ಯಾಮರೂನ್ ಗ್ರೀನ್ ಎಸೆದ 18ನೇ ಓವರ್‌ನಲ್ಲಿ 25 ರನ್ ಹರಿದು ಬಂದಿತು. ಇದು ತಂಡದ ಬೃಹತ್‌ ಮೊತ್ತಕ್ಕೆ ಕಾರಣವಾಯಿತು.

  • IPL 2023: ಕಳೆ ಹೆಚ್ಚಿಸಿದ ಗ್ರೀನ್‌ – ಮುಂಬೈಗೆ ಹ್ಯಾಟ್ರಿಕ್‌ ಜಯ

    IPL 2023: ಕಳೆ ಹೆಚ್ಚಿಸಿದ ಗ್ರೀನ್‌ – ಮುಂಬೈಗೆ ಹ್ಯಾಟ್ರಿಕ್‌ ಜಯ

    ಹೈದರಾಬಾದ್‌: ಕ್ಯಾಮರೂನ್‌ ಗ್ರೀನ್‌ ಭರ್ಜರಿ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್‌, ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ 14 ರನ್‌ ಗಳ ಜಯ ಸಾಧಿಸಿದೆ. ಈ ಮೂಲಕ 16ನೇ ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ಜಯ ಸಾಧಿಸಿದೆ.

    ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್‌ ಗಳಿಸಿತು. 193 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಹೈದರಾಬಾದ್‌ ತಂಡ 19.5 ಓವರ್‌ಗಳಲ್ಲೇ 178 ರನ್‌ ಗಳಿಗೆ ಸರ್ವಪತನಕಂಡಿತು.

    ಆರಂಭಿಕರಾಗಿ ಕಣಕ್ಕಿಳಿದ ಹ್ಯಾರಿ ಬ್ರೂಕ್‌ ಹಾಗೂ ಮಯಾಂಕ್‌ ಅಗರ್ವಾಲ್‌ ಜೋಡಿ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾಯಿತು.  ಬ್ರೂಕ್‌ 9 ರನ್‌ ಗಳಿಸಿ ಔಟಾಗುತ್ತಿದ್ದಂತೆ, 3ನೇ ಕ್ರಮಾಂಕದಲ್ಲಿ ಬಂದ ರಾಹುಲ್‌ ತ್ರಿಪಾಠಿ ಸಹ 7 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ನಡುವೆ ಮಯಾಂಕ್‌ ಅಗರ್ವಾಲ್‌, ನಾಯಕ ಏಡನ್‌ ಮಾರ್ಕ್ರಮ್‌ 46 ರನ್‌ಗಳ (36 ಎಸೆತ) ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿಯ ವಿಕೆಟ್‌ ಬಿದ್ದ ನಂತರ ಹೆನ್ರಿಕ್ ಕ್ಲಾಸೆನ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು 16 ಎಸೆತಗಳಲ್ಲಿ ಸ್ಫೋಟಕ 36 ರನ್‌ (2 ಸಿಕ್ಸರ್‌, 4 ಬೌಂಡರಿ) ಚಚ್ಚಿದರು.

    ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಮುಂದುವರಿಸಿದ್ದ ಮಾರ್ಕೊ ಜಾನ್ಸೆನ್ 13 ರನ್‌ (6 ಎಸೆತ, 3 ಬೌಂಡರಿ) ಗಳಿಸಿ ಔಟಾದರೆ, ವಾಷಿಂಗ್ಟನ್‌ ಸುಂದರ್‌ 10 ರನ್‌ (6 ಎಸೆತ, 2 ಬೌಂಡರಿ) ಗಳಿಸಿ ಪೆವಿಲಿಯನ್‌ ಸೇರಿದರು. ಕೊನೆಯಲ್ಲಿ ಅಬ್ದುಲ್‌ ಸಮದ್‌ 9 ರನ್‌, ಭುವನೇಶ್ವರ್‌ ಕುಮಾರ್‌, ಮಯಾಂಕ್‌ ಮಾರ್ಕಂಡೆ ತಲಾ 2 ರನ್‌ ಗಳಿಸಿದರು. ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳ ವೈಫಲ್ಯದಿಂದ ಹೈದರಾಬಾದ್‌ ತಂಡ ಸೋಲನುಭವಿಸಲು ಕಾರಣವಾಯಿತು.

    ಮುಂಬೈ ಪರ ಜೇಸನ್ ಬೆಹ್ರೆನ್ಡಾರ್ಫ್, ರಿಲೆ ಮೆರೆಡಿತ್, ಪಿಯೂಷ್ ಚಾವ್ಲಾ ತಲಾ 2 ವಿಕೆಟ್‌ ಕಿತ್ತರೆ, ಕ್ಯಾಮರೂನ್‌ ಗ್ರೀನ್‌ ಹಾಗೂ ಅರ್ಜುನ್‌ ತೆಂಡೂಲ್ಕರ್‌ ತಲಾ 1 ವಿಕೆಟ್‌ ಪಡೆದು ಮಿಂಚಿದರು.

    ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಬೃಹತ್ ಮೊತ್ತ ಕಲೆಹಾಕಿತು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭದ ಭರವಸೆ ನೀಡಿದರಾದರೂ 28 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಇಶಾನ್ ಕಿಶನ್ ಹಾಗೂ ಕ್ಯಾಮರೂನ್ ಗ್ರೀನ್ ಜೋಡಿ ಅದ್ಭುತ ಜೊತೆಯಾಟ ನೀಡಿ ಮಿಂಚಿದರು.

    ಇಶಾನ್ ಕಿಶನ್ 38 ರನ್‌ (31 ಎಸೆತ, 3 ಬೌಂಡರಿ, 2 ಸಿಕ್ಸರ್‌) ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಸೂರ್ಯಕುಮಾರ್ ಯಾದವ್ ಮತ್ತೆ ಕೇವಲ 7 ರನ್‌ ಗಳಿಸಿ ನಿರಾಸೆ ಅನುಭವಿಸಿದರು. ನಂತರ ಕ್ಯಾಮರೂನ್ ಗ್ರೀನ್‌ಗೆ ಜೊತೆಯಾದ ತಿಲಕ್ ವರ್ಮಾ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ 28 ಎಸೆತಗಳಲ್ಲಿ 56 ರನ್‌ ಸಿಡಿಸುವ ಮೂಲಕ ರನ್ ವೇಗ ಹೆಚ್ಚಿಸುವಲ್ಲಿ ಯಶಸ್ವಿಯಾದರು.

    ತಿಲಕ್ ವರ್ಮಾ ಕೇವಲ 17 ಎಸೆತಗಳಲ್ಲಿ 37 ರನ್‌ಗಳಿಸಿ (4 ಸಿಕ್ಸರ್‌, 2 ಬೌಂಡರಿ) ಮುಂಬೈ ಪರ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದರೆ, ಕೊನೆಯವರೆಗೂ ಕ್ರೀಸ್‌ನಲ್ಲಿದ್ದ ಗ್ರೀನ್ 40 ಎಸೆತಗಳಲ್ಲಿ 64 ರನ್ (40 ಎಸೆತ, 4 ಬೌಂಡರಿ, 2 ಸಿಕ್ಸರ್‌) ಬಾರಿಸಿದರು. ಟಿಮ್ ಡೇವಿಡ್ 16 ರನ್‌ ಗಳಿಸಿದರು. ಅಂತಿಮವಾಗಿ ಮುಂಬೈ ಈ ಪಂದ್ಯದಲ್ಲಿ 5 ವಿಕೆಟ್‌ ಕಳೆದುಕೊಂಡು 192 ರನ್‌ ಗಳಿಸಿತ್ತು.

  • ರಾಹುಲ್ ಸ್ಟಂಪ್ ಹಿಂದೆ ಹೇಳಿದ್ದನ್ನು ನಾನೆಂದೂ ಮರೆಯಲ್ಲ: ಕ್ಯಾಮರೂನ್ ಗ್ರೀನ್

    ರಾಹುಲ್ ಸ್ಟಂಪ್ ಹಿಂದೆ ಹೇಳಿದ್ದನ್ನು ನಾನೆಂದೂ ಮರೆಯಲ್ಲ: ಕ್ಯಾಮರೂನ್ ಗ್ರೀನ್

    ಕ್ಯಾನ್ಬೆರಾ: ಆತ ಸ್ಟಂಪ್ ಹಿಂದೆ ಹೇಳಿದ್ದನ್ನು ನಾನೆಂದೂ ಮರೆಯಲ್ಲ ಎಂದು ಹೇಳುವ ಮೂಲಕ ಆಸ್ಟ್ರೇಲಿಯಾದ ಯುವ ಆಟಗಾರ ಕ್ಯಾಮರೂನ್ ಗ್ರೀನ್ ಭಾರತದ ವಿಕೆಟ್ ಕೀಪರ್, ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಹಾಡಿಹೊಗಳಿದ್ದಾರೆ.

    ಬುಧವಾರ ಕ್ಯಾನ್ಬೆರಾದಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನು ಭಾರತ ತಂಡ 13ರನ್‍ಗಳ ಅಂತರದಿಂದ ಗೆದ್ದುಕೊಂಡಿದೆ. ಆದರೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರೆಡು ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯಾ ತಂಡ ಸರಣಿಯನ್ನು ವಶಪಡಿಸಿಕೊಂಡಿದೆ. ಮೂರನೇ ಏಕದಿನ ಸರಣಿಯಲ್ಲಿ ಆಸೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಕ್ಯಾಮರೂನ್ ಗ್ರೀನ್ ಪಾದಾರ್ಪಣೆ ಮಾಡಿದ್ದಾರೆ.

    ಪಂದ್ಯ ಮುಗಿದ ಬಳಿಕ ಮಾತನಾಡಿರುವ ಗ್ರೀನ್, ನಾನು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಹೋದಾಗ ರಾಹುಲ್ ವಿಕೆಟ್ ಕೀಪಿಂಗ್‍ನಲ್ಲಿ ನಿಂತಿದ್ದರು. ಈ ವೇಳೆ ರಾಹುಲ್ ಅವರು ನರ್ವಸ್ ಆಗಿದ್ದೀಯಾ ಎಂದು ಪ್ರಶ್ನೆ ಮಾಡಿದರು. ನಾನು ಆಗ ಹೌದು ಸ್ವಲ್ಪ ನರ್ವಸ್ ಆಗಿದ್ದೇನೆ ಎಂದು ಹೇಳಿದೆ. ಆಗ ರಾಹುಲ್ ಅವರು ತಕ್ಷಣ ಏನೂ ಆಗಲ್ಲ ಚೆನ್ನಾಗಿ ಆಡು ಯಂಗ್ ಸ್ಟಾರ್ ಎಂದರು. ಅವರು ಹೇಳಿದ ಮಾತನ್ನು ನಾನು ಯಾವತ್ತು ಮರೆಯಲ್ಲ ಎಂದು ಹೇಳಿದ್ದಾರೆ.

    ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾದ ಪರವಾಗಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿದ 230ನೇ ಆಟಗಾರ ಎನಿಸಿಕೊಂಡಿದ್ದಾರೆ. ಭಾರತ ವಿರುದ್ಧ ಮೂರನೇ ಏಕದಿನದೊಂದು ಆಸೀಸ್‍ನ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರಿಂದ ಕ್ಯಾಪ್ ಪಡೆದ ಗ್ರೀನ್, ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೇ 27 ರನ್ ನೀಡಿದ್ದರು. ಇದೇ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಗ್ರೀನ್, 27 ಬಾಲಿಗೆ 21 ರನ್ ಹೊಡೆದು ಔಟ್ ಆಗಿದ್ದರು.