Tag: ಕ್ಯಾಬ್

  • ಬೈಕ್ ಗೆ ಡಿಕ್ಕಿ ಹೊಡೆದ ಓಲಾ ಚಾಲಕನಿಗೆ ಮಚ್ಚಿನೇಟು

    ಬೈಕ್ ಗೆ ಡಿಕ್ಕಿ ಹೊಡೆದ ಓಲಾ ಚಾಲಕನಿಗೆ ಮಚ್ಚಿನೇಟು

    ಬೆಂಗಳೂರು: ಕೇವಲ ಗಾಡಿ ಟಚ್ ಆಗಿದ್ದಕ್ಕೆ ಓಲಾ ಕ್ಯಾಬ್ ಚಾಲಕನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ನಡೆದಿದೆ.

    ಎಂಜಿ ರೋಡ್‍ನಲ್ಲಿ ಉತ್ತರಹಳ್ಳಿ ನಿವಾಸಿ ರಾಜೇಶ್ ಅವರ ಕಾರು ಬೈಕ್ ಗೆ ಟಚ್ ಆಗಿದೆ. ಇದೇ ಕಾರಣಕ್ಕೆ ಆಕ್ಟೀವಾ ಮತ್ತು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ರಾಜೇಶ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.

    ಮಚ್ಚಿನೇಟಿಗೆ ಓಲಾ ಕ್ಯಾಬ್ ಚಾಲಕ ರಾಜೇಶ್ ಕೈಗೆ ಗಂಭೀರ ಗಾಯವಾಗಿದೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಅಪ್ಪ-ಅಮ್ಮನ ಎದುರೇ ಕ್ಯಾಬ್ ಚಾಲಕನಿಂದ ಲೈಂಗಿಕ ಕಿರುಕುಳ: ಕಾಮುಕ ಅರೆಸ್ಟ್

    ಅಪ್ಪ-ಅಮ್ಮನ ಎದುರೇ ಕ್ಯಾಬ್ ಚಾಲಕನಿಂದ ಲೈಂಗಿಕ ಕಿರುಕುಳ: ಕಾಮುಕ ಅರೆಸ್ಟ್

    ಬೆಂಗಳೂರು: ನಗರದ ಯುವತಿಯೊಬ್ಬಳ ಜೊತೆ ಪೋಷಕರ ಎದುರೇ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. 40 ವರ್ಷದ ಮಹಮ್ಮದ್ ಸಲೀಂ ಬಂಧಿತ ಕಾಮುಕ.

    ನಡೆದಿದ್ದೇನು?: ಬೆಂಗಳೂರಿನ ಯುವತಿ ತನ್ನ ಪೋಷಕರ ಜೊತೆ ಹೈದರಾಬಾದ್‍ಗೆ ಪ್ರವಾಸಕ್ಕೆ ತೆರಳಿದ್ದಳು. ಅಂತೆಯೇ ಅಲ್ಲಿ ಆಕೆ ಟ್ರಾವೆಲ್ ಏಜೆಂಟ್ ಮೂಲಕ ಕ್ಯಾಬ್ ಬುಕ್ ಮಾಡಿದ್ದಳು. ಈ ವೇಳೆ ಕ್ಯಾಬ್ ಚಾಲಕ ಅಪ್ಪ ಅಮ್ಮ- ಬಂಧುಗಳ ಸಮ್ಮುಖದಲ್ಲೇ ಯುವತಿಗೆ ಕಿರುಕುಳ ನೀಡಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಕಡೆಯವರು ದಾರಿ ಮಧ್ಯೆ ಕಾರ್ ನಿಲ್ಲಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದ್ರೆ ಚಾಲಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇತ್ತ ಬೆಂಗಳೂರು ಸೇರಲು ಟ್ರೈನ್ ಮಿಸ್ ಆಗತ್ತೆ ಅಂತಾ ಯುವತಿ ತನ್ನ ಪೋಷಕರೊಂದಿಗೆ ಬೆಂಗಳೂರಿಗೆ ಮರಳಿದ್ದಾಳೆ. ಬಳಿಕ ವಾಟ್ಸಾಪ್ ಮೂಲಕ ಹೈದರಾಬಾದ್ ಪೊಲೀಸ್ ವೆಬ್ ಸೈಟ್ ಷೀ-ಟೀಮ್‍ಗೆ ಘಟನೆಯ ಬಗ್ಗೆ ದೂರು ನೀಡಿದ್ದಾಳೆ.

    ಯುವತಿಯ ವಾಟ್ಸಾಪ್ ದೂರಿಗೆ ಸ್ಪಂದಿಸಿದ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.