Tag: ಕ್ಯಾಬ್

  • ಕ್ಯಾಬ್‍ನಿಂದ ಹೊರ ಎಳೆದು ನಟಿಗೆ ಬೆದರಿಕೆ – ಚಾಲಕ ಬಂಧನ

    ಕ್ಯಾಬ್‍ನಿಂದ ಹೊರ ಎಳೆದು ನಟಿಗೆ ಬೆದರಿಕೆ – ಚಾಲಕ ಬಂಧನ

    ಕೋಲ್ಕತ್ತಾ: ಕ್ಯಾಬ್‍ನಿಂದ ಹೊರ ಎಳೆದು ಚಾಲಕನೊಬ್ಬ ಬಂಗಾಲಿ ಕಿರುತೆರೆ ನಟಿಗೆ ಬೆದರಿಕೆ ಹಾಕಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

    ಸ್ವಸ್ತಿಕ ದತ್ತ ಬೆಂಗಾಲಿಯ ಖ್ಯಾತ ಕಿರುತೆರೆ ನಟಿಯಾಗಿದ್ದು, ಬುಧವಾರ ಚಿತ್ರೀಕರಣಕ್ಕಾಗಿ ಕ್ಯಾಬ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಕ್ಯಾಬ್ ಚಾಲಕ ಜಮ್‍ಶೇದ್ ಏಕಾಏಕಿ ಕಾರ್ ನಿಲ್ಲಿಸಿ ನಟಿಗೆ ಇಳಿಯುವಂತೆ ಹೇಳಿದ್ದಾನೆ. ಇದಕ್ಕೆ ನಟಿ ಒಪ್ಪದಿದ್ದಕ್ಕೆ ಆಕೆಯನ್ನು ಎಳೆದು ಹೊರ ಹಾಕಿದ್ದಾನೆ. ಸ್ವಸ್ತಿಕ ಈ ಬಗ್ಗೆ ತಮ್ಮ ಫೇಸ್‍ಬುಕ್‍ನಲ್ಲಿ ಚಾಲಕ ಫೋಟೋ, ಆತನ ಫೋನ್ ನಂಬರ್ ಹಾಗೂ ಕಾರಿನ ನಂಬರ್ ಹಾಕಿ ಘಟನೆಯ ಬಗ್ಗೆ ವಿವರಿಸಿ ಪೋಸ್ಟ್ ಪ್ರಕಟಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಬುಧವಾರ ಕೋಲ್ಕತ್ತಾದ ರಾನಿಯಾದಲ್ಲಿ ಶೂಟಿಂಗ್‍ಗೆ ಹೋಗಲು ನಾನು ಕ್ಯಾಬ್ ಬುಕ್ ಮಾಡಿದೆ. ಬಳಿಕ ಕ್ಯಾಬ್‍ನಲ್ಲಿ ಹೋಗುತ್ತಿದ್ದಾಗ ಚಾಲಕ ನಡುರಸ್ತೆಯಲ್ಲಿ ನನ್ನ ಪ್ರಯಾಣವನ್ನು ಕ್ಯಾನ್ಸಲ್ ಮಾಡಿ ಕಾರಿನಿಂದ ಇಳಿಯಲು ಹೇಳಿದ. ಆದರೆ ನಾನು ಕಾರಿನಿಂದ ಇಳಿಯಲು ಒಪ್ಪಲಿಲ್ಲ. ಆಗ ಚಾಲಕ ಕಾರಿನಲ್ಲಿ ತನ್ನ ಏರಿಯಾ ಕಡೆ ನನಗೆ ಕರೆದುಕೊಂಡು ಹೋಗಿ ನಿಂದಿಸಿದ್ದಾನೆ. ಅಲ್ಲದೆ ಆತ ಕಾರಿನಿಂದ ಇಳಿದು ಡೋರ್ ಓಪನ್ ಮಾಡಿ ನನ್ನನ್ನು ಹೊರ ಎಳೆದಿದ್ದಾನೆ. ಇದರಿಂದ ಕೋಪಗೊಂಡು ನಾನು ಹೆಲ್ಪ್ ಮೀ ಎಂದು ಕಿರುಚಲು ಶುರು ಮಾಡಿದೆ. ಆಗ ಚಾಲಕ ನನಗೆ ಬೆದರಿಕೆ ಹಾಕಿ ತನ್ನ ಹುಡುಗರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಚಾಲಕ ಬೆಂಗಾಲಿಯಲ್ಲಿ, “ನಿನಗೆ ಏನೂ ಬೇಕು ಅದನ್ನು ನೀನು ಮಾಡ್ಕೋ. ನೀನು ಏನೂ ಮಾಡುತ್ತೀಯಾ ಎಂದು ನಾನು ನೋಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ನಾನು ಶೂಟಿಂಗ್‍ಗೆ ಲೇಟ್ ಹೋಗಿದ್ದೆ. ಅಲ್ಲದೆ ನನ್ನ ತಂಡ ನನಗಾಗಿ ಕಾಯುತಿತ್ತು. ಹಾಗಾಗಿ ನಾನು ಸ್ಥಳದಿಂದ ಶೂಟಿಂಗ್ ಸೆಟ್‍ಗೆ ಹೋದೆ. ಬಳಿಕ ನನ್ನ ತಂದೆಗೆ ಈ ವಿಷಯವನ್ನು ತಿಳಿಸಿದೆ. ಅವರು ಕಾನೂನು ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ” ಎಂದು ನಟಿ ಸ್ವಸ್ತಿಕ ತಿಳಿಸಿದ್ದಾರೆ.

    ಬುಧವಾರ ಬೆಳಗ್ಗೆ 8.15ಕ್ಕೆ ಶುರುವಾದ ಜಗಳ 8.45 ವರೆಗೂ ನಡೆದಿದೆ. ಈ ಘಟನೆ ಕೋಲ್ಕತ್ತಾದ ಇಎಂ ಬೈಪಾಸ್‍ನ ರೆಸ್ಟೋರೆಂಟ್ ಮುಂಭಾಗದಲ್ಲಿ ನಡೆದಿದೆ ಎಂದು ನಟಿ ಸ್ವಸ್ತಿಕ ದತ್ತ ಹೇಳಿದ್ದಾರೆ.

  • ಆಯೋಗದಿಂದ ಹೊಸ ಪ್ಲಾನ್ – ವಿಕಲಚೇತನರಿಗೆ ಸಿಗಲಿದೆ ಕ್ಯಾಬ್‍ನಿಂದ ಪಿಕ್ ಅಪ್ ಡ್ರಾಪ್

    ಆಯೋಗದಿಂದ ಹೊಸ ಪ್ಲಾನ್ – ವಿಕಲಚೇತನರಿಗೆ ಸಿಗಲಿದೆ ಕ್ಯಾಬ್‍ನಿಂದ ಪಿಕ್ ಅಪ್ ಡ್ರಾಪ್

    – ಬೆಂಗಳೂರು ಸ್ಪೇಷಲ್ ವೊಟರ್ಸ್‍ ಗೆ ಬಂಪರ್

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಹೊಸ ಪ್ಲಾನ್ ಮಾಡಿದೆ. ಬೆಂಗಳೂರಿನ ವಿಕಲಚೇತನರಿಗೆ ವಿಶೇಷ ಸೌಲಭ್ಯ ನೀಡಲು ಚಿಂತನೆ ನಡೆದಿದೆ.

    ಹೌದು. ತಪ್ಪದೇ ಮತದಾನ ಮಾಡಿ, ನಿಮಗೆ ಮತ ಹಾಕಲು ಆಸೆಯಿದ್ದರೂ ಮತಗಟ್ಟೆಗೆ ಬರಲು ಕಷ್ಟವಿರುವ ವಿಕಲಚೇತನರಿಗಾಗಿ ಹೊಸ ಸವಲತ್ತು ರೆಡಿ ಇದೆ. ಮತದಾನ ಮಾಡಲು ನಿಮ್ಮನ್ನು ಕರೆದೊಯ್ಯಲು ಮನೆ ಬಾಗಿಲಿಗೆ ಕ್ಯಾಬ್ ಬರುತ್ತದೆ. ನಂತರ ಮತಗಟ್ಟೆ ಕರೆದುಕೊಂಡು ಮತ ಹಾಕಿಸುತ್ತಾರೆ. ಇದು ಚುನಾವಣಾ ಆಯೋಗದ ಹೊಸ ಐಡಿಯಾವಾಗಿದೆ.

    ಈ ರೀತಿಯ ಪ್ಲಾನ್ ಗೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಖಾಸಗಿ ಕ್ಯಾಬ್ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಈ ಪ್ರಕಾರ ಉಚಿತವಾಗಿ ವಿಕಲಚೇತರನ್ನ ಮನೆಯಿಂದಲೇ ಕರೆದುಕೊಂಡು ಮತಗಟ್ಟೆಯಲ್ಲಿ ಮತದಾನ ಮಾಡಿ ಮತ್ತೆ ಮನೆಗೆ ವಾಪಸ್ಸು ಬಿಡಲು ಒಪ್ಪಂದ ಆಗಿದೆ. ಇದಕ್ಕಾಗಿ ಮತದಾರರು ಯಾವುದೇ ಹಣ ವೆಚ್ಚ ಮಾಡುವಂತಿಲ್ಲ. ಮತದಾನ ಪ್ರಮಾಣ ಹೆಚ್ಚಿಸಲು ಈ ನೂತನ ಐಡಿಯಾ ಮಾಡಲಾಗಿದೆ. ಖಾಸಗಿ ಕ್ಯಾಬ್ ಕಂಪನಿ ಮತದಾನ ಪ್ರಮಾಣ ಹೆಚ್ಚಿಸಲು ಈ ವಾಹನ ಸೇವೆ ಪ್ರಸ್ತಾವನೆ ನೀಡಿತು. ಇರದ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

    ಹೊಸ ಸೌಲಭ್ಯ ಪಡೆಯಬೇಕಾದ್ರೆ ಹೀಗೆ ಮಾಡಿ:
    ಮೊದಲಿಗೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ನಂತರ ವಿಕಲಚೇತನ ವಾಹನ ಸೇವೆ ಬಳಸಲು ರಿಜಿಸ್ಟಾರ್ ಮಾಡಿಸಿಕೊಳ್ಳಿ. ಬಳಿಕ ಮತದಾನ ಬೂತ್ ಹಾಗೂ ಸಮಯವನ್ನ ಖಾತ್ರಿ ಪಡಿಸಿ. ಆಗ ವಿಶೇಷ ಸೇವೆ ಖಾತ್ರಿಗಾಗಿ ವಿಕಲಚೇತನರಿಗೆ ಎಸ್‍ಎಂಎಸ್ ಬರಲಿದೆ. ಅಷ್ಟೇ ಅಲ್ಲದೆ ಮತಗಟ್ಟೆ ಬಳಿ ವ್ಹೀಲ್‍ಚೇರ್ ಸೇವೆ ಕೂಡ ಇದೆ. ನಿಮ್ಮನ್ನ ಪಿಕ್ ಮಾಡಿ ಮತ್ತೆ ಡ್ರಾಪ್ ಮಾಡುತ್ತವೆ.

    ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರಬಾರದು. ನಿಗದಿತ ಪಕ್ಷಕ್ಕೆ ಮತ ಹಾಕುವಂತೆ ಒತ್ತಾಯ ಮಾಡುವಂತಿಲ್ಲ. ಈ ಕ್ಯಾಬ್ ಸೇವೆ ನೀಡುವ ಸಂಸ್ಥೆ ಮತದಾನ ಹೆಚ್ಚಿಸುವ ದೃಷ್ಟಿಯನ್ನ ಮಾತ್ರ ಹೊಂದಿರಬೇಕು. ಹೀಗೆ ಹತ್ತಾರು ಷರತ್ತುಗಳನ್ನ ಹಾಕಿ ಖಾಸಗಿ ಕ್ಯಾಬ್ ಸೇವೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

  • ಕ್ಯಾಬ್‍ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

    ಕ್ಯಾಬ್‍ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

    ಚಂಡೀಗಢ: ಕ್ಯಾಬ್‍ಗಾಗಿ ಕಾಯುತ್ತಿದ್ದ ದೆಹಲಿ ಮೂಲದ 27 ವರ್ಷದ ಮಹಿಳೆಯನ್ನು ಇಬ್ಬರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ.

    ಶನಿವಾರ ಈ ಘಟನೆ ನಡೆದಿದ್ದು, ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸಂತ್ರಸ್ತೆ ತಮ್ಮ ಮನೆಗೆ ತೆರಳಲು ಸುಮಾರು ರಾತ್ರಿ 1 ಗಂಟೆಯ ಸಮಯದಲ್ಲಿ ಇಫ್ಕೊ ಚೌಕ್ ಬಳಿ ಕ್ಯಾಬ್ ಗಾಗಿ ಕಾಯುತ್ತಿದ್ದರು. ನಂತರ ಒಬ್ಬ ವ್ಯಕ್ತಿ ಫೋನ್ ಮಾಡಿ ಸಮೀಪದ ಬಸ್ ನಿಲ್ದಾಣಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದಾನೆ. ಈ ವೇಳೆ ಆತ ತಾನು ರಷೀದ್ ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೆಲವು ನಿಮಿಷಗಳ ನಂತರ ಮೂವರು ಇಫ್ಕೊ ಚೌಕ್ ನಲ್ಲಿ ಬಿಳಿ ಮಾರುತಿ ಸ್ವಿಫ್ಟ್ ನಲ್ಲಿ ಬಂದರು. ಅವರು ಸಂತ್ರಸ್ತೆಯ ಸಮೀಪ ಬಂದು ದೆಹಲಿಯ ಆಜಾದ್ಪುರದ ನಿವಾಸದಲ್ಲಿ ಬಿಡುವುದಾಗಿ ಹೇಳಿ ಸಂತ್ರಸ್ತೆಯನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಆದರೆ ಚಾಲಕನು ಸೆಕ್ಟರ್ 65 ರ ಕಡೆಗೆ ಕಾರನ್ನು ಓಡಿಸಿಕೊಂಡು ಹೋಗಿದ್ದಾನೆ. ಆದರೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಇಬ್ಬರು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸಂತ್ರಸ್ತೆ ಅಲ್ಲಿನ ಮಾರ್ಗ, ರಸ್ತೆಯ ಬಗ್ಗೆ ತಿಳಿಯದ ಕಾರಣ ಆಕೆಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಗೊತ್ತಾಗಿಲ್ಲ. ಆಕೆಯನ್ನು ಅತ್ಯಾಚಾರ ಮಾಡಿದವರನ್ನು ಗುರುತಿಸಲು ಸಾಧ್ಯವಾಗಿಲ್ಲ. ಆದರೆ ಈ ಪ್ರಕರಣದಲ್ಲಿ ಕ್ಯಾಬ್ ಡ್ರೈವರ್ ನ ಯಾವುದೇ ಪಾತ್ರವಿಲ್ಲ ಎಂದು ಪೊಲೀಸ್ ಸಹಾಯಕ ಕಮೀಷನರ್ ಶಮ್ಶೇರ್ ಸಿಂಗ್ ಹೇಳಿದ್ದಾರೆ.

    ಸಂತ್ರಸ್ತೆ ನಂತರ ಪಿಸಿಆರ್ ವ್ಯಾನ್ ಮೂಲಕ ಸೆಕ್ಟರ್ 65ರ ಪೊಲೀಸ್ ಠಾಣೆಗೆ ಬಂದು ಅಪರಿಚಿತ ಆರೋಪಿಗಳ ವಿರುದ್ಧ ದೂರನ್ನು ದಾಖಲಿಸಿದ್ದರು. ಭಾನುವಾರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆಂದು ಗುರುಗ್ರಾಮ್ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಸದ್ಯಕ್ಕೆ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದಲ್ಲೇ ಫಸ್ಟ್, ಸಿಲಿಕಾನ್ ಸಿಟಿಯಲ್ಲಿ ಶ್ವಾನಗಳಿಗೂ ಕ್ಯಾಬ್!

    ದೇಶದಲ್ಲೇ ಫಸ್ಟ್, ಸಿಲಿಕಾನ್ ಸಿಟಿಯಲ್ಲಿ ಶ್ವಾನಗಳಿಗೂ ಕ್ಯಾಬ್!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಾಮಾನ್ಯವಾಗಿ ಜನರ ಓಡಾಟಕ್ಕೆ ಓಲಾ, ಉಬರ್, ಕ್ಯಾಬ್ ನೋಡಿರಬಹುದು. ಆದರೆ ಬೆಂಗಳೂರಿನಲ್ಲಿ ನಾಯಿಗಳಿಗೆ ಕ್ಯಾಬ್ ಓಪನ್ ಆಗತ್ತಿದೆ.

    ಹೌದು ಶ್ವಾನಗಳಿಗೂ ಕ್ಯಾಬ್ ಸೌಲಭ್ಯ ಸಿಕ್ಕಿದೆ. ಡೊಗ್ಗೂರು ಅಮೃತ್ ಸಂಸ್ಥೆ ಅವರು ಶ್ವಾನ ಮತ್ತು ಇತರೆ ಸಾಕು ಪ್ರಾಣಿಗಳಿಗಾಗಿ ಈ ವ್ಯವಸ್ಥೆಯನ್ನು ಮಾಡಿದೆ. ಓಡಾಡುವುದಕ್ಕೆ ಮಾತ್ರವಲ್ಲದೇ ಶ್ವಾನಗಳಲ್ಲಿ ಆರೋಗ್ಯ ಸಮಸ್ಯೆಯಾದಾಗ ಹತ್ತಿರದ ಆಸ್ಪತ್ರೆಗೆ ಸಾಗಿಸಲು ಈ ವ್ಯವಸ್ಥೆ ಮಾಡಲಾಗಿದೆ.

    ದೇಶದಲ್ಲೇ ಮೊದಲ ಬಾರಿಗೆ ಆಪ್ ಆಧಾರಿತ ಶ್ವಾನಗಳ ಕ್ಯಾಬ್ ಬೆಂಗಳೂರಿನಲ್ಲಿ ಶುರುವಾಗಿದೆ. Pawcab ಹೆಸರಿನಲ್ಲಿ ಶ್ವಾನ ಕ್ಯಾಬ್ ಆರಂಭವಾಗಿದ್ದು, ನೀವು ಇದನ್ನ ಡೌನ್ಲೋಡ್ ಮಾಡಿಕೊಂಡರೆ ಸಾಕು. ನಿಮ್ಮ ಶ್ವಾನಕ್ಕೆ ಆರೋಗ್ಯ ಸಮಸ್ಯೆ ಕಂಡು ಬಂದಾಗ ನಿಮಗೆ ಹತ್ತಿರದಲ್ಲಿರೋ ಡಾಗ್ ಕೇರ್ ಸೆಂಟರ್ ಯಾವುದು ಎಂಬ ಮಾಹಿತಿ ನೀಡುವುದರ ಜೊತೆಗೆ ಹತ್ತಿರದ ಆಸ್ಪತ್ರೆಗೆ ತಲುಪಿಸಲು ಸಹಾಯ ಮಾಡುತ್ತದೆ. ಜೊತೆಗೆ ಬೀದಿ ನಾಯಿಗಳಿಗೆ ಅಪಾಯವಾದ ಸಂದರ್ಭ ಉಚಿತ ಚಿಕಿತ್ಸೆ ಮಾಡುವುದರ ಜೊತೆಗೆ ಅವುಗಳು ಮರಣ ಹೊಂದಿದ ಸಂದರ್ಭದಲ್ಲಿ ಸಿಬ್ಬಂದಿಯೇ ಸಂಸ್ಕಾರ ಸ್ಥಳಕ್ಕೆ ಸಾಗಿಸಲು ಸಹಾಯ ಮಾಡುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥ ಅಮೃತ್ ಅವರು ಹೇಳಿದರು.

    ಬೀದಿ ನಾಯಿಗಳು ಎಲ್ಲೆಂದರಲ್ಲಿ ಸಾವನ್ನಪ್ಪಿ ಕೊಳೆಯುತ್ತಾ ಇರುವುದನ್ನು ನೋಡಿದಾಗ ಇದು ಒಂದೊಳ್ಳೆ ಯೋಜನೆ ಎನ್ನುವ ಅಭಿಪ್ರಾಯ ಈಗ ವ್ಯಕ್ತವಾಗಿದೆ.

    ಆಂಡ್ರಯ್ಡ್ ಆಪ್ ಡೌನ್‍ಲೋಡ್ ಮಾಡಲು ಕ್ಲಿಕ್ ಮಾಡಿ: Pawcab

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐಎಎಸ್ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಕೊಟ್ರು ಶಾಕಿಂಗ್ ನ್ಯೂಸ್!

    ಐಎಎಸ್ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಕೊಟ್ರು ಶಾಕಿಂಗ್ ನ್ಯೂಸ್!

    ಬೆಂಗಳೂರು: ಸರ್ಕಾರಿ ವಾಹನಗಳು ಖಾಸಗಿ ಕಾರ್ಯಕ್ರಮಗಳಿಗೆ ಬಳಕೆ ಆಗುತ್ತಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಶಾಕಿಂಗ್ ನ್ಯೂಸ್ ನೀಡಿದ್ದಾರೆ.

    ಕಚೇರಿಗಳಿಗೆ ಬರುವ ಅಧಿಕಾರಿಗಳು ಓಲಾ, ಊಬರ್‍ನಂತಹ ಆ್ಯಪ್ ಆಧಾರಿತ ಟ್ಯಾಕ್ಸಿಗಳ ಸೇವೆಯನ್ನು ಯಾಕೆ ಬಳಸಬಾರದು. ಇದರ ಸಾಧಕ ಬಾಧಕಗಳ ಬಗ್ಗೆ ವರದಿ ನೀಡಿ ಅಂತ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಒಂದು ವೇಳೆ ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿಯವರ ಈ ನಿರ್ಧಾರವನ್ನ ಒಪ್ಪಿದ್ರೆ ಮುಂದಿನ ತಿಂಗಳನಿಂದಲೇ ಐಎಎಸ್ ಅಧಿಕಾರಿಗಳು ಓಲಾ, ಊಬರ್ ಬುಕ್ ಮಾಡಲು ರೆಡಿಯಾಗಿರಬೇಕು.

    ಮಿತವ್ಯಯ ಸರ್ಕಾರಕ್ಕಾಗಿ ಈ ಕುರಿತು ಆಲೋಚಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಒಂದು ಕಡೆ ಅಧಿಕಾರಿಗಳು ತಮ್ಮ ಖಾಸಗಿ ಕೆಲಸಗಳಿಗೂ ಸರ್ಕಾರಿ ವಾಹನ ಬಳಕೆ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಸಲಹೆ ಕೇಳಿ ಪತ್ರ ಬರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಿಳಾ ಟೆಕ್ಕಿಯನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋದ ಊಬರ್ ಚಾಲಕ!

    ಮಹಿಳಾ ಟೆಕ್ಕಿಯನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋದ ಊಬರ್ ಚಾಲಕ!

    ಬೆಂಗಳೂರು: ಮಹಿಳಾ ಟೆಕ್ಕಿಯ ಜೊತೆ ಊಬರ್ ಚಾಲಕ ಅನುಚಿತವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಎಚ್‍ಎಸ್‍ಆರ್ ಲೇಔಟ್ ನಿಂದ ಬೆಳ್ಳಂದೂರಿನ ಕಂಪನಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಂಪನಿಯಿಂದ ಹೋಗುವ ವೇಳೆ ಚಾಲಕ ಮಾರ್ಗ ಬದಲಾವಣೆ ಮಾಡಿದ್ದಾನೆ. ಮಾರ್ಗ ಬದಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಟೆಕ್ಕಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ.

    ಈ ಕ್ಷಣವೇ ಟ್ರಿಪ್ ರದ್ದು ಪಡಿಸುತ್ತೇನೆ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಚಾಲಕ ತನ್ನ ದುಂಡಾವರ್ತನೆ ತೋರಿದ್ದಾನೆ. ಅಲ್ಲದೇ ಚಾಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿ ಟೆಕ್ಕಿಯನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋಗಿದ್ದಾನೆ.

    ಮಹಿಳಾ ಟೆಕ್ಕಿ ಊಬರ್ ಕ್ಯಾಬ್ ಕೆಎ 42, ಎ 4692 ಇಟಿಯೋಸ್ ಕಾರಿನಲ್ಲಿ ಕಂಪನಿಗೆ ತೆರಳುತ್ತಿದ್ದರು. ಸದ್ಯ ಟೆಕ್ಕಿ ಟ್ವಿಟರ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಹಿಂದೆ ಜೀವನ್‍ಭೀಮಾನಗರ ಹಾಗೂ ಚಿಕ್ಕಜಾಲದಲ್ಲಿಯೂ ಇಂತದೇ ಎರಡು ಪ್ರಕರಣಗಳು ಬೆಳಕಿಗೆ ಬಂದಿತ್ತು.

  • ನಾವಿಬ್ರೂ ಫ್ರೆಂಡ್ಸ್, ನಿನ್ನ ಮೊಬೈಲ್ ನಂಬರ್ ಕೊಡು ಅಂದ ಕ್ಯಾಬ್ ಡ್ರೈವರ್!

    ನಾವಿಬ್ರೂ ಫ್ರೆಂಡ್ಸ್, ನಿನ್ನ ಮೊಬೈಲ್ ನಂಬರ್ ಕೊಡು ಅಂದ ಕ್ಯಾಬ್ ಡ್ರೈವರ್!

    ನವದೆಹಲಿ: 19 ವರ್ಷದ ಯುವತಿ ಚಲಿಸುತ್ತಿದ್ದ ಕ್ಯಾಬ್‍ನಿಂದ ಜಿಗಿದಿರುವ ಘಟನೆ ಭಾನುವಾರ ನೈಋತ್ಯ ದೆಹಲಿಯ ಕಂಟೋನ್ಮೆಂಟ್ ಏರಿಯಾದಲ್ಲಿ ನಡೆದಿದೆ.

    ಯುವತಿ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕ ನಾವಿಬ್ಬರೂ ಫ್ರೆಂಡ್ಸ್ ಆಗೋಣ.. ನಿನ್ನ ನಂಬರ್ ಕೊಡು ಅಂತ ಬಲವಂತ ಮಾಡಿದ್ದಾನೆ. ಚಾಲಕನ ವರ್ತನೆಯಿಂದ ಭಯಬೀತಳಾದ ಯುವತಿ ಚಲಿಸುತ್ತಿದ್ದ ಕ್ಯಾಬ್‍ನಿಂದ ಜಂಪ್ ಮಾಡಿದ್ದಾರೆ.

    ರಂಗಭೂಮಿ ಕಲಾವಿದೆಯಾಗಿರುವ ಯುವತಿ ನಗರದ ಮಂದಿ ಹೌಸ್ ಬಳಿ ಕ್ಯಾಬ್ ಹತ್ತಿದ್ದಾರೆ. ಕಾಪಶೇರಾ ಹತ್ತಿರ ಬರುತ್ತಿದ್ದಂತೆ ಚಾಲಕ ಫೋನ್ ನಂಬರ್ ನೀಡುವಂತೆ ಕಿರುಕುಳ ನೀಡಿದ್ದಾನೆ. ಧೌಲ್ ಕೌನ್ ಬಸ್ ನಿಲ್ದಾಣ ಬರುತ್ತಿದ್ದಂತೆಯೇ ತನ್ನನ್ನು ಕಾಪಾಡಿಕೊಳ್ಳಲು ಯುವತಿ ಕ್ಯಾಬ್‍ನಿಂದ ಜಿಗಿದಿದ್ದಾರೆ.

    ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಆಂಜನೇಯನ ಭಾವಚಿತ್ರ ಹಾಕಿಕೊಂಡ ಕ್ಯಾಬ್‍ನವರು ರೇಪಿಸ್ಟ್ ಗಳು, ಅವುಗಳಲ್ಲಿ ಪ್ರಯಾಣಿಸಬೇಡಿ : ರಶ್ಮಿ ನಾಯರ್

    ಆಂಜನೇಯನ ಭಾವಚಿತ್ರ ಹಾಕಿಕೊಂಡ ಕ್ಯಾಬ್‍ನವರು ರೇಪಿಸ್ಟ್ ಗಳು, ಅವುಗಳಲ್ಲಿ ಪ್ರಯಾಣಿಸಬೇಡಿ : ರಶ್ಮಿ ನಾಯರ್

    ಬೆಂಗಳೂರು: ನಗರದಲ್ಲಿ ಆಂಜನೇಯನ ಭಾವಚಿತ್ರವುಳ್ಳ ಉಬರ್ ಕ್ಯಾಬ್ ಗಳನ್ನು ಹತ್ತಬೇಡಿ. ಇದೆಲ್ಲ ಹಿಂದುತ್ವ ಸಂಕೇತವಾಗಿದ್ದು, ಇಂತಹ ಭಾವಚಿತ್ರ ಹಾಕಿಕೊಂಡವರು ರೇಪಿಸ್ಟ್ ಗಳು ಅಂತಾ ವಿವಾದತ್ಮಾಕ ಪೋಸ್ಟ್ ಹಾಕಿಕೊಂಡು ರಶ್ಮಿ ಅಯ್ಯರ ಸುದ್ದಿಯಾಗಿದ್ದಾರೆ.

    ಈ ಹಿಂದೆ ಕಿಸ್ ಆಫ್ ಲವ್ ಆಯೋಜನೆ ಮಾಡಿ ಸುದ್ದಿಯಾಗಿ, ಕೇರಳದಲ್ಲಿ ಸೆಕ್ಸ್ ರ‍್ಯಾಕೆಟ್ ಸಿಕ್ಕಿಬಿದ್ದಿದ್ದ ರಶ್ಮಿ ನಾಯರ್ ಈಗ ವಿವಾದಾತ್ಮಕ ಪೋಸ್ಟ್ ಹಾಕಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?: ನಾನು ಬೆಂಗಳೂರಿನ ಉಬರ್ ಕ್ಯಾಬ್ ಬಳಸುತ್ತಿರುವ ಗ್ರಾಹಕಿಯಾಗಿದ್ದು, ಹಲವು ಬಾರಿ ನಾನೊಬ್ಬಳೆ ಉಬರ್ ಪ್ರಯಾಣ ಮಾಡುತ್ತಿರುತ್ತೇನೆ. ನಾನೊಬ್ಬಳಲ್ಲದೇ ನನ್ನ ಜೊತೆ ಕೆಲಸ ಮಾಡಿಕೊಂಡಿರುವ ಹಲವು ಮಹಿಳಾ ಸಹದ್ಯೋಗಿಗಳು ಸಹ ಉಬರ್ ಕ್ಯಾಬ್ ನಲ್ಲಿ ಒಬ್ಬೊಬ್ಬರೆ ಸಂಚರಿಸುತ್ತಾರೆ. ಕೆಲವು ಕ್ಯಾಬ್ ಗಳ ಮೇಲೆ ಹಿಂದುತ್ವದ ಸಂಕೇತವುಳ್ಳ ರುದ್ರ ಹನುಮಾನ್ ಮುಂತಾದ ಭಾವಚಿತ್ರಗಳನ್ನು ಹಾಕಲಾಗುತ್ತದೆ. ಸಾಕಷ್ಟು ಹಿಂದುತ್ವ ಸಂಘಟನೆಗಳು ಮತ್ತು ಮುಖಂಡರು ಕಥುವಾದಲ್ಲಿ ನಡೆದ ರೇಪ್ ಪ್ರಕರಣದ ಆರೋಪಿಗಳ ಪರವಾಗಿ ವಾದಿಸುತ್ತಾರೆ. ನಾನು ಮತ್ತು ನನ್ನ ಸಹದ್ಯೋಗಿಗಳು ಈ ರೀತಿಯ ಹಿಂದುತ್ವದ ಸಂಕೇತವುಳ್ಳ ಉಬರ್ ಕ್ಯಾಬ್ ನಲ್ಲಿ ಪ್ರಯಾಣಿಸಲು ಭಯವಾಗುತ್ತಿದೆ. ಹಾಗಾಗಿ ಹಿಂದುತ್ವದ ಸಂಕೇತ, ಭಾವಚಿತ್ರ ಮತ್ತು ಚಿಹ್ನೆವುಳ್ಳ ಕ್ಯಾಬ್‍ಗಳಲ್ಲಿ ಇನ್ನ್ಮುಂದೆ ಸಂಚರಿಸಲ್ಲ. ಈ ರೀತಿಯ ಕ್ಯಾಬ್‍ಗಳು ಬಂದರೆ ನನ್ನ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಕೊಳ್ಳುತ್ತೇನೆ. ರೇಪಿಸ್ಟ್ ಗಳಿಗೆ ಮತ್ತು ಅದನ್ನು ಬೆಂಬಲಿಸುವರಿಗೆ ನನ್ನ ಹಣವನ್ನಿ ನೀಡಲು ಇಷ್ಟಪಡುವುದಿಲ್ಲ ಅಂತಾ ಬರೆದುಕೊಂಡು ರುದ್ರ ಹನುಮಾನ್ ಭಾವಚಿತ್ರವುಳ್ಳ ಕ್ಯಾಬ್ ಫೋಟೋ ಹಾಕಿಕೊಂಡಿದ್ದಾರೆ.

    ರಶ್ಮಿ ತಮ್ಮ ಫೇಸ್ ಬುಕ್ ನಲ್ಲಿ ಈ ರೀತಿಯ ಪೋಸ್ಟ್ ಹಾಕಿಕೊಂಡಿದ್ದಕ್ಕೆ, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಇತ್ತ ಸಂಸದ ಪ್ರತಾಪ್ ಸಿಂಹ  ಸೇರಿದಂತೆ ಹಿಂದುತ್ವವಾದಿಗಳು ರಶ್ಮಿ ವಿರುದ್ಧ ಕೆಂಡಕಾರಿದ್ದಾರೆ.

  • ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಬೆಂಗಳೂರು: ಸಿನಿಮಾ ಅವಕಾಶ ಇಲ್ಲದೆ ಊಬರ್ ಕ್ಯಾಬ್ ಓಡಿಸುತ್ತಿರುವ ಹಿರಿಯ ನಟ ಕೆ.ಎಸ್.ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

    ಶಂಕರ್ ಅಶ್ವಥ್ ಕ್ಯಾಬ್ ಡ್ರೈವರ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸುದ್ದಿ ತಿಳಿದ ಬಳಿಕ ಕನ್ನಡ ಚಿತ್ರರಂಗದ ಕೆಲವರು ಶಂಕರ್ ಸಹಾಯಕ್ಕೆ ಮುಂದಾಗಿದ್ದರು. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶಂಕರ್ ಅಶ್ವಥ್ ಕುಟುಂಬಕ್ಕೆ ಪರೋಕ್ಷವಾಗಿ ನೆರವಾಗಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!

    ಸದ್ಯ ಚಾಲೆಂಜಿಂಗ್ ಸ್ಟಾರ್ ಅಭಿನಯಿಸುತ್ತಿರುವ ಯಜಮಾನ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೂ ಸಿನಿಮಾದಲ್ಲಿ ಅವಕಾಶ ನೀಡಿ ಎಂದು ದರ್ಶನ್ ಚಿತ್ರತಂಡದ ಹತ್ತಿರ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಶಂಕರ್ ಅಶ್ವಥ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೇನೆ: ಶಂಕರ್ ಅಶ್ವಥ್

    ಯಜಮಾನ ಚಿತ್ರದಲ್ಲಿ ನನಗೂ ಅವಕಾಶ ನೀಡುವಂತೆ ದರ್ಶನ್ ಚಿತ್ರತಂಡಕ್ಕೆ ಹೇಳಿದ್ದಾರೆ ಎಂದು ಸ್ವತಃ ಶಂಕರ್ ಅಶ್ವಥ್ ತಮ್ಮ ಫೇಸ್ ಬುಕ್‍ನಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಶಂಕರ್ ಅಶ್ವಥ್ ಅವರಿಗೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಇದನ್ನೂ ಓದಿ: ಶಂಕರ್ ಅಶ್ವಥ್‍ರನ್ನು ಭೇಟಿ ಮಾಡಿದ ಪ್ರಥಮ್

  • ಡಿವೈಡರ್ ಗೆ ಡಿಕ್ಕಿಯಾಗಿ ಎದುರಿನ ಕಾರಿಗೆ ಅಪ್ಪಳಿಸಿದ ಕ್ಯಾಬ್: 9 ಜನರ ಸಾವು

    ಡಿವೈಡರ್ ಗೆ ಡಿಕ್ಕಿಯಾಗಿ ಎದುರಿನ ಕಾರಿಗೆ ಅಪ್ಪಳಿಸಿದ ಕ್ಯಾಬ್: 9 ಜನರ ಸಾವು

    ಹೈದರಾಬಾದ್: ಭೀಕರ ಅಪಘಾತವೊಂದರಲ್ಲಿ 9 ಜನರ ಸಾವನ್ನಪ್ಪಿರುವ ಘಟನೆ ತೆಲಂಗಾಣದ ವಣಪರ್ತಿ ಜಿಲ್ಲೆಯ ಕೊತ್ತಕೋಟ ತಾಲೂಕಿನ ಕಣಿಮೆಟ್ಟ ಗ್ರಾಮದಲ್ಲಿ ನಡೆದಿದೆ.

    ಬುಧವಾರ ಬೆಳಗ್ಗೆ 8 ಗಂಟೆಗೆ ಈ ಅಪಘಾತ ನಡೆದಿದೆ. ಕರ್ನೂಲ್ ನಗರದಿದಂದ ಬರುತ್ತಿದ್ದ ಕ್ಯಾಬ್ ಕಣಿಮೆಟ್ಟ ಗ್ರಾಮದ ಬಳಿ ಡಿವೈಡರ್‍ಗೆ ಡಿಕ್ಕಿ ಹೊಡೆದು, ಎದುರುಗಡೆ ಬರ್ತಿದ್ದ ಮತ್ತೊಂದು ಕಾರಿಗೆ ಅಪ್ಪಳಿಸಿದೆ. ಕ್ಯಾಬ್ ಡ್ರೈವರ್ ನಿದ್ದೆಯ ಮಂಪರಿನಲ್ಲಿ ಇದ್ದಿದ್ದರಿಂದ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ 9 ಜನರು ಸಾವನ್ನಪ್ಪಿದ್ರೆ, ಇಬ್ಬರು ಬದುಕುಳಿದಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕ್ಯಾಬ್ ನಲ್ಲಿಯ ತಾಂತ್ರಿಕ ದೋಷದಿಂದಾಗ ಅಪಘಾತ ನಡೆದಿದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಲು ರಸ್ತೆ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ಗಾಯಾಳುಗಳು ಸಹ ಅಪಘಾತಕ್ಕೆ ಕಾರಣ ಏನು ಅಂತಾ ಸರಿಯಾದ ಮಾಹಿತಿಯನ್ನು ಇದೂವರೆಗೂ ನೀಡುತ್ತಿಲ್ಲ ಎಂದು ಕೊತ್ತಕೋಟ ಸಬ್ ಇನ್ಸ್ ಪೆಕ್ಟರ್ ರವಿ ಕುಮಾರ್ ತಿಳಿಸಿದ್ದಾರೆ.

    ಅಪಘಾತದ ಒಂದು ಗಂಟೆಯ ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಎರಡು ವಾಹನಗಳಿಂದ 7 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನೂ ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮೃತರೆಲ್ಲರನ್ನೂ ಹೈದರಾಬಾದ್, ವಣಪರ್ತಿ ಮತ್ತು ಕರ್ನೂಲ್ ಜಿಲ್ಲೆಯ ನಿವಾಸಿಗಳೆಂದು ಗುರುತಿಸಲಾಗಿದೆ.

    ಕ್ಯಾಬ್ ನಲ್ಲಿ ಒಟ್ಟು ಆರು ಜನ ಪ್ರಯಾಣಿಸುತ್ತಿದ್ದರು. ಇನ್ನೊಂದು ವಾಹನದಲ್ಲಿದ್ದ ಬಂಗಾರಪೇಟೆಯ ಹೊರವಲಯದಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಕ್ಯಾಬ್‍ನಲ್ಲಿದ್ದವರನ್ನ ಅಜ್ಜಕೊಲ್ಲು ನಿವಾಸಿ ರಾಜು, ಮಸ್ತಪಿಯೂರ್ ನಿವಾಸಿ ಮಲ್ಲೇಶ್, ಬನ್ನಿಯ ನಿವಾಸಿಗಳಾದ ವೀರೇಶ್ ಹಾಗೂ ನರೇಶ್ ಎಂದು ಗುರುತಿಸಲಾಗಿದೆ. ಇನ್ನೊಂದು ವಾಹನದಲ್ಲಿದ್ದವರನ್ನು ಸೂರಿ ಬಾಬು, ಪತ್ನಿ ಸುನಿತಾ, ಮಗಳು ಪ್ರಸುನಾ ಮತ್ತು ಅತ್ತೆ ರಾಜೇಶ್ವರಿ ಎಂದು ಗುರುತಿಸಿದ್ದು, ಒಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಕ್ಯಾಬ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.