Tag: ಕ್ಯಾಬ್ ಚಾಲಕ

  • ಸಾಯುವ ಮುನ್ನ ಅನಾಥ ಚಾಲಕ ನೀಡಿದ್ದ ದೇಣಿಗೆಯೇ ಆತನ ಅಂತ್ಯಕ್ರಿಯೆಗೆ ಉಪಯೋಗವಾಯ್ತು

    ಸಾಯುವ ಮುನ್ನ ಅನಾಥ ಚಾಲಕ ನೀಡಿದ್ದ ದೇಣಿಗೆಯೇ ಆತನ ಅಂತ್ಯಕ್ರಿಯೆಗೆ ಉಪಯೋಗವಾಯ್ತು

    ಹೈದರಾಬಾದ್: ಆತ್ಮಹತ್ಯೆಗೆ ಶರಣಾಗುವ ಎರಡು ದಿನದ ಹಿಂದೆ ಸರ್ಕಾರೇತರ ಸಂಸ್ಥೆಗೆ(ಎನ್‍ಜಿಒ) ಅನಾಥ ಕ್ಯಾಬ್ ಚಾಲಕನೊಬ್ಬ ದೇಣಿಗೆ ನೀಡಿದ್ದನು. ಚಾಲಕನ ಸಾವಿನ ಸುದ್ದಿ ತಿಳಿದು ದುಃಖಪಟ್ಟ ಎನ್‍ಜಿಒ ಸದಸ್ಯರು ಅದೇ ದೇಣಿಗೆ ಹಣದಿಂದ ಆತನ ಅಂತ್ಯಕ್ರಿಯೆ ಮಾಡಿದ್ದಾರೆ.

    ಹೈದರಾಬಾದಿನಲ್ಲಿ ಈ ಘಟನೆ ನಡೆದಿದೆ. ಹೈದರಾಬಾದಿನ ವಿಜಯ್ ಆತ್ಮಹತ್ಯೆಗೆ ಶರಣಾದ ಕ್ಯಾಬ್ ಚಾಲಕ. ವಿಜಯ್ ಓರ್ವ ಅನಾಥನಾಗಿದ್ದು, ಹೈದರಾಬಾದಿನಲ್ಲಿ ಕ್ಯಾಬ್ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಆದರೆ ಆತನಿಗೆ ತನ್ನಂಥೆ ಅನಾಥರಾಗಿರುವವರಿಗೆ ಸಹಾಯ ಮಾಡಬೇಕೆಂಬ ಆಸೆ ಇತ್ತು. ಆದ್ದರಿಂದ ವಿಜಯ್ ‘ಸರ್ವೇ ನೀಡಿ’ ಎಂಬ ಎನ್‍ಜಿಒಗೆ ತನ್ನ ದುಡಿಮೆಯಿಂದ 6 ಸಾವಿರ ರೂಪಾಯಿ ಹಣವನ್ನು ದೇಣಿಗೆ ನೀಡಿದ್ದನು.

    ಕ್ಯಾಬ್ ಓಡಿಸಿಕೊಂದು ಅದರಿಂದ ಬರುವ ಹಣದಲ್ಲಿ ಜೀವನ ನಡೆಸುವುದೇ ಕಷ್ಟ. ಆದರೆ ಬೇರೆ ಅವರಿಗೆ ಸಹಾಯವಾಗಲಿ ಎಂದು ವಿಜಯ್ ತನ್ನ ದುಡಿಮೆಯನ್ನು ಎನ್‍ಜಿಒಗೆ ಕೊಟ್ಟಿದ್ದನ್ನು ಎಲ್ಲರು ಮೆಚ್ಚಿದ್ದರು. ವಿಜಯ್ ದೇಣಿಗೆ ನೀಡುತ್ತಿದ್ದ ವೇಳೆ ಎನ್‍ಜಿಒ ನಡೆಸುತ್ತಿದ್ದ ಗೌತಮ್ ಅವರ ಜೊತೆ ಇದ್ದ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದನು. ವಿಜಯ್ ಸಹಾಯ ಗುಣವನ್ನು ಗೌತಮ್ ಅವರು ಕೂಡ ಹಾಡಿ ಹೊಗಳಿದ್ದರು.

    https://www.facebook.com/vijju.vijju.338/videos/pcb.2435042530105141/2435031023439625

    ಆದರೆ ಇದಾದ ಎರಡು ದಿನಗಳ ಬಳಿಕ ವಿಜಯ್ ಶವ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿತ್ತು. ಅಲ್ಲದೆ ಅಲ್ಲಿಯೇ ಒಂದು ಡೆತ್ ನೋಟ್ ಕೂಡ ಪತ್ತೆಯಾಗಿತ್ತು. ಅದರಲ್ಲಿ ನಾನು ಅನಾಥ, ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿತ್ತು. ವಿಜಯ್ ಸಾವಿನ ಬಗ್ಗೆ ತಿಳಿದು ಗೌತಮ್ ಹಾಗೂ ಎನ್‍ಜಿಒದ ಇತರೆ ಸದಸ್ಯರು ದುಃಖಿಸಿದ್ದರು. ಇತರರಿಗೆ ಒಳ್ಳೆದನ್ನ ಬಯಸಿದ್ದ ವಿಜಯ್ ಅಂತ್ಯಸಂಸ್ಕಾರ ಅನಥವಾಗಿಯೇ ನಡೆಯೋದು ಬೇಡವೆಂದು, ತಮ್ಮ ಎನ್‍ಜಿಒಗೆ ವಿಜಯ್ ಕೊಟ್ಟಿದ್ದ ಹಣದಿಂದಲೇ ಬುಧವಾರ ಆತನ ಅಂತ್ಯಕ್ರಿಯೆ ಮಾಡಿ, ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

  • ರಾನು ನಂತ್ರ ಇಂಟರ್‌ನೆಟ್‌ ಸ್ಟಾರ್ ಆದ ಕ್ಯಾಬ್ ಡ್ರೈವರ್: ವಿಡಿಯೋ

    ರಾನು ನಂತ್ರ ಇಂಟರ್‌ನೆಟ್‌ ಸ್ಟಾರ್ ಆದ ಕ್ಯಾಬ್ ಡ್ರೈವರ್: ವಿಡಿಯೋ

    ಲಕ್ನೋ: ಸಾಮಾಜಿಕ ಜಾಲತಾಣದಲ್ಲಿ ರಾನು ಮೊಂಡಲ್ ನಂತರ ಕ್ಯಾಬ್ ಚಾಲಕ ಇಂಟರ್‌ನೆಟ್‌ ಸ್ಟಾರ್ ಆಗಿದ್ದಾರೆ. ಸದ್ಯ ಚಾಲಕ ಹಾಡು ಹಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಉಬರ್ ಕ್ಯಾಬ್‍ನಲ್ಲಿ ಹೋಗುತ್ತಿದ್ದ ಪ್ರಯಾಣಿಕ ಚಾಲಕನಿಗೆ ಹಾಡು ಹಾಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಚಾಲಕ 1990ರಲ್ಲಿ ಬಿಡುಗಡೆಯಾದ ‘ಆಶಿಕಿ’ ಚಿತ್ರದ ‘ನಜರ್ ಕೀ ಸಾಮನೇ’ ಹಾಡನ್ನು ಹಾಡಿದ್ದಾರೆ. ಚಾಲಕ ಹಾಡು ಹಾಡುತ್ತಿರುವಾಗ ಪ್ರಯಾಣಿಕ ಇದನ್ನು ವಿಡಿಯೋ ಮಾಡಿದ್ದಾರೆ.

    https://twitter.com/crowngaurav/status/1172899827979452416?ref_src=twsrc%5Etfw%7Ctwcamp%5Etweetembed%7Ctwterm%5E1172899827979452416&ref_url=https%3A%2F%2Fwww.indiatoday.in%2Ftrending-news%2Fstory%2Fuber-driver-sings-kumar-sanu-hit-nazar-ke-saamne-on-rider-s-request-in-lucknow-viral-video-1599642-2019-09-16

    ಪ್ರಯಾಣಿಕ ಈ ವಿಡಿಯೋವನ್ನು ತನ್ನ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, ಉಬರ್ ಇಂಡಿಯಾ ಚಾಲಕ ವಿನೋದ್ ಅವರನ್ನು ಭೇಟಿ ಮಾಡಿದೆ. ಅವರು ಅದ್ಭುತ ಗಾಯಕ ಹಾಗೂ ನಾನು ಕ್ಯಾಬ್‍ನಲ್ಲಿ ಪ್ರಯಾಣಿಸಿದ ನಂತರ ಅವರಿಗೆ ಒಂದು ಹಾಡು ಹಾಡಲು ಹೇಳಿದೆ. ಇದಕ್ಕಿಂದ ಹೆಚ್ಚಾಗಿ ಇನ್ನೇನು ಬೇಕು” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

    ಈ ವೈರಲ್ ವಿಡಿಯೋ ಇದುವರೆಗೂ 7 ಸಾವಿರಕ್ಕೂ ಹೆಚ್ಚು ವ್ಯೂ ಹಾಗೂ 400ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ ಈ ವಿಡಿಯೋ ನೋಡಿ ಕೆಲವರು ‘ತುಂಬಾ ಚೆನ್ನಾಗಿದೆ’, ‘ನಿಮ್ಮ ಧ್ವನಿ ಅದ್ಭುತವಾಗಿದೆ’ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಕತ್ತಿನ ಮೇಲಿದ್ದ ಟ್ಯಾಟೂನಿಂದ ಮಾಡೆಲ್ ಹತ್ಯೆ ಕೇಸ್ ಭೇದಿಸಿದ ಬೆಂಗ್ಳೂರು ಪೊಲೀಸರು

    ಕತ್ತಿನ ಮೇಲಿದ್ದ ಟ್ಯಾಟೂನಿಂದ ಮಾಡೆಲ್ ಹತ್ಯೆ ಕೇಸ್ ಭೇದಿಸಿದ ಬೆಂಗ್ಳೂರು ಪೊಲೀಸರು

    ಬೆಂಗಳೂರು: ಕತ್ತಿನ ಮೇಲಿದ್ದ ಟ್ಯಾಟೂನಿಂದ ಮಾಡೆಲ್ ಪೂಜಾ ಹತ್ಯೆ ಪ್ರಕರಣವನ್ನು ಬೆಂಗ್ಳೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

    ಜುಲೈ 31ರಂದು ಬಾಗಲೂರಿನ ಕಾಡಯರಪನಹಳ್ಳಿ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಪತ್ತೆಯಾದಾಗ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಬಾಗಲೂರು ಪೊಲೀಸರು ಕೊಲೆಯಾದ ಸ್ಥಳದಲ್ಲಿ ಕಾರ್ಯನಿರ್ವಹಿಸಿದ್ದ ಕರೆಗಳನ್ನು ಪರಿಶೀಲಿಸಿದ್ದಾರೆ. ಆಗ ಪೂಜಾ ಬಳಸುತ್ತಿದ್ದ ಫೋನ್ ನಂಬರ್ ಪತ್ತೆಯಾಗಿದೆ.

    ಪೂಜಾಳ ಕತ್ತು ಕುಯ್ದು, ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದು, ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿತ್ತು. ಹೀಗಾಗಿ ಆಕೆಯ ದೇಹದ ಗುರುತು ಬೇಗ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮೊದಲು ಪೊಲೀಸರು ಪೂಜಾಳ ಪತಿ ಸೌದೀಪ್ ದೇಗೆ ಫೋಟೋ ಕಳುಹಿಸಿದ್ದರು. ಆಗ ಸೌದೀಪ್ ತನ್ನ ಪತ್ನಿಯ ದೇಹವನ್ನು ಗುರುತಿಸಿರಲಿಲ್ಲ. ಬಳಿಕ ಸೌದೀಪ್ ತನ್ನ ಪತ್ನಿಯ ದೇಹದ ಮೇಲಿದ್ದ ಟ್ಯಾಟೂ ನೋಡಿ ನನ್ನ ಪತ್ನಿ ಪೂಜಾ ಸಿಂಗ್ ದೇ ಎಂದು ಗುರುತಿಸಿದ್ದರು.

    ಬಾಗಲೂರು ಪೊಲೀಸರು ಯಾವುದೇ ಸುಳಿವು ಇಲ್ಲದಿದ್ದರೂ ಕೇವಲ ಟ್ಯಾಟೂ ಮೇಲೆ ಪ್ರಕರಣ ಭೇದಿಸಿದ್ದಾರೆ. ಆರೋಪಿ ನಾಗೇಶ್ ಹತ್ಯೆ ವೇಳೆ ಪೂಜಾಸಿಂಗ್ ಗೆ 15 ರಿಂದ 20 ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

    ಆಗಿದ್ದೇನು?
    ಪೂಜಾ ಸಿಂಗ್ ಕೋಲ್ಕತ್ತಾದಲ್ಲಿ ಮಾಡೆಲಿಂಗ್ ಜೊತೆಗೆ ಈವೆಂಟ್ ಮ್ಯಾನೇಜ್ ಮೆಂಟ್ ಮಾಡುತ್ತಿದ್ದರು. ಜುಲೈ 30ರಂದು ಕೆಲಸಕ್ಕಾಗಿ ಸಿಲಿಕಾನ್ ಸಿಟಿಗೆ ಬಂದಿದ್ದಳು. ಹೀಗೆ ಬಂದವಳು ಕೆಲಸ ಮುಗಿಸಿ ಓಲಾ ಕ್ಯಾಬ್ ಮಾಡಿಕೊಂಡು ತಾನು ಉಳಿದುಕೊಂಡಿದ್ದ ಪರಪ್ಪನ ಆಗ್ರಹಾರ ಹೋಟೆಲಿಗೆ ಹೋಗಿದ್ದಾಳೆ. ಮಾರನೇ ದಿನ ಮುಂಜಾನೆ ನಾಲ್ಕು ಗಂಟೆಗೆ ತೆರಳಬೇಕಿದೆ. ಹಾಗಾಗಿ ಅದೇ ಕ್ಯಾಬ್ ಚಾಲಕನಿಗೆ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಹೇಳಿದ್ದಾಳೆ. ನಾಗೇಶ್ ಬೆಳಗ್ಗೆ ವಿಮಾನ ನಿಲ್ದಾಣದ ಕಡೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಈಕೆಯ ಬಳಿ ಹಣ ಇರಬಹುದು ಎನ್ನುವ ಆಸೆಗೆ ಬಿದ್ದು ಆಕೆಯನ್ನು ಕೊಲೆ ಮಾಡಿದ್ದಾನೆ.

    ಹಣದ ಆಸೆಗೆ ಬಿದ್ದು ಕೊಲೆ ಮಾಡಿದ ನಾಗೇಶನಿಗೆ ಕೇವಲ 500 ರೂ. ಹಾಗೂ ಎರಡು ಮೊಬೈಲ್ ಸಿಕ್ಕಿದೆ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.

  • ಜೆಎನ್‍ಯು ವಿದ್ಯಾರ್ಥಿನಿ ರೇಪ್‍ಗೈದು, ರಸ್ತೆ ಮೇಲೆ ಎಸೆದ ಕ್ಯಾಬ್ ಚಾಲಕ

    ಜೆಎನ್‍ಯು ವಿದ್ಯಾರ್ಥಿನಿ ರೇಪ್‍ಗೈದು, ರಸ್ತೆ ಮೇಲೆ ಎಸೆದ ಕ್ಯಾಬ್ ಚಾಲಕ

    – ವರದಿ ನೀಡುವಂತೆ ಪೊಲೀಸರಿಗೆ ದೆಹಲಿ ಮಹಿಳಾ ಆಯೋಗದಿಂದ ನೋಟಿಸ್

    ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‍ಯು) ವಿದ್ಯಾರ್ಥಿನಿಯ ಮೇಲೆ ಕ್ಯಾಬ್ ಚಾಲಕನೊಬ್ಬ ಅತ್ಯಾಚಾರ ಎಸಗಿ, ಐಐಟಿ ರಸ್ತೆ ಬಳಿ ಎಸೆದು ಹೋದ ಘಟನೆ ದೆಹಲಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಸಂತ್ರಸ್ತೆಯು 20 ವರ್ಷದವಳಾಗಿದ್ದು, ಜೆಎನ್‍ಯುನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ದೆಹಲಿಯ ಪಂಚಕುಯಾನ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಸ್ನೇಹಿತ ಆಯೋಜಿಸಿದ್ದ  ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ಮನೆ ಮರಳುತ್ತಿದ್ದಾಗ ಘಟನೆ ನಡೆದಿದೆ.

    ಪಾರ್ಟಿ ಮುಗಿಸಿಕೊಂಡು ಕ್ಯಾಬ್ ಹತ್ತಿದ ವಿದ್ಯಾರ್ಥಿನಿ ಮೇಲೆ ಚಾಲಕ ಅತ್ಯಾಚಾರ ಎಸಗಿ, ಬಳಿಕ ಐಐಟಿ ಬಳಿ ಎಸೆದು ಪರಾರಿಯಾಗಿದ್ದಾನೆ. ಕ್ಯಾಬ್‍ನಿಂದ ಬಿದ್ದ ಪರಿಣಾಮ ವಿದ್ಯಾರ್ಥಿನಿ ಪ್ರಜ್ಞೆ ಕಳೆದುಕೊಂಡಿದ್ದಳು. ರಸ್ತೆಯ ಮೇಲೆ ಬಿದ್ದಿದ್ದ ವಿದ್ಯಾರ್ಥಿನಿಯನ್ನು ನೋಡಿದ ಕೆಲವರು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ವಿದ್ಯಾರ್ಥಿನಿ ಬಳಿ ಇದ್ದ ಐಡಿ ಕಾರ್ಡ್ ಸಹಾಯದಿಂದ ಗುರುತು ಪತ್ತೆಹಚ್ಚಿ ಚಿಕಿತ್ಸೆಯ ನಂತರ ಜೆಎನ್‍ಯು ಕ್ಯಾಂಪಸ್‍ಗೆ ಸೇರಿಸಿದ್ದಾರೆ.

    ಸಂತ್ರಸ್ತೆಯು ಹಾಸ್ಟೆಲ್ ವಾರ್ಡನ್ ಮತ್ತು ಸ್ನೇಹಿತರಿಗೆ ಘಟನೆಯ ಬಗ್ಗೆ ವಿವರಿಸಿದ್ದು, ಈ ಸಂಬಂಧ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ವಿದ್ಯಾರ್ಥಿನಿಯು ಪಂಚಕುಯಾನ್ ಪ್ರದೇಶದಿಂದ ಕ್ಯಾಬ್ ಹತ್ತಿದ್ದಳು. ಹೀಗಾಗಿ ಅಲ್ಲಿನ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ತನಿಖೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.

    ವಿದ್ಯಾರ್ಥಿನಿ ಕ್ಯಾಬ್ ಹತ್ತಿದ ಬಳಿಕ ಆರೋಪಿ ಡ್ರಗ್ಸ್ ಇಂಜೆಕ್ಟ್ ಮಾಡಿದ್ದಾರೆ. ಹೀಗಾಗಿ ಕ್ಯಾಬ್‍ನಲ್ಲಿ ಯಾರು ಇದ್ದರು, ಏನಾಯಿತು ಅಂತ ಆಕೆಗೆ ನೆನಪಿಗೆ ಬರುತ್ತಿಲ್ಲ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿ ಕ್ಯಾಬ್ ಹತ್ತಿದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ಪೊಲೀಸರು ಪರಿಶೀಲನೆ ಮಾಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

    ಈ ಬೆನ್ನಲ್ಲೇ ಪ್ರಕರಣದ ಕುರಿತು ವರದಿ ನೀಡುವಂತೆ ಪೊಲೀಸರಿಗೆ ದೆಹಲಿ ಮಹಿಳಾ ಆಯೋಗವು ನೋಟಿಸ್ ಜಾರಿ ಮಾಡಿದೆ.

  • ಅಚ್ಚ ಸಂಸ್ಕೃತ ಮಾತನಾಡಿ ಎಲ್ಲರ ಮನಗೆದ್ದ ಬೆಂಗ್ಳೂರಿನ ಕ್ಯಾಬ್ ಡ್ರೈವರ್: ವಿಡಿಯೋ

    ಅಚ್ಚ ಸಂಸ್ಕೃತ ಮಾತನಾಡಿ ಎಲ್ಲರ ಮನಗೆದ್ದ ಬೆಂಗ್ಳೂರಿನ ಕ್ಯಾಬ್ ಡ್ರೈವರ್: ವಿಡಿಯೋ

    ಬೆಂಗಳೂರು: ನಗರದ ಕ್ಯಾಬ್ ಚಾಲಕರೊಬ್ಬರು ಅಚ್ಚ ಸಂಸ್ಕೃತ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    45 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಚಾಲಕ ಪ್ರಯಾಣಿಕರ ಜೊತೆ ಸಂಸ್ಕೃತದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋವನ್ನು ಗಿರೀಶ್ ಭಾರದ್ವಾಜ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಗಿರೀಶ್ ಭಾರದ್ವಾಜ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಾಕಿ ಅದಕ್ಕೆ, “ಬೆಂಗಳೂರಿನಲ್ಲಿ ಸಂಸ್ಕೃತ ಮಾತನಾಡುವ ಕ್ಯಾಬ್ ಡ್ರೈವರ್” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೆಂಗ್ಳೂರು ಬಾಲೆಗೆ ಫಿದಾ ಆದ್ರು ಪ್ರಧಾನಿ ಮೋದಿ

    ಈ ವಿಡಿಯೋ ನೋಡಿ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದುವರೆಗೂ ಈ ವಿಡಿಯೋಗೆ 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 2 ಸಾವಿರಕ್ಕೂ ಹೆಚ್ಚು ರೀ-ಟ್ವೀಟ್ ಬಂದಿದೆ. ಕೆಲವರು ಈ ವಿಡಿಯೋ ನೋಡಿ, ನೀವು ನನಗೆ ಸ್ಫೂರ್ತಿ ನೀಡಿದ್ದೀರಾ. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ರೀ-ಟ್ವೀಟ್ ಮಾಡಿದ್ದಾರೆ.

    https://twitter.com/Vrishnivansh/status/1138804014261215232?ref_src=twsrc%5Etfw%7Ctwcamp%5Etweetembed%7Ctwterm%5E1138804014261215232%7Ctwgr%5E393039363b74776565745f6d65646961&ref_url=https%3A%2F%2Fwww.indiatoday.in%2Ftrending-news%2Fstory%2Fbengaluru-cab-driver-bowls-internet-over-with-fluent-sanskrit-watch-viral-video-1548301-2019-06-13

  • ಕ್ಯಾಬ್ ಚಾಲಕನ ಮೇಲೆ ಯುವತಿ ಹಲ್ಲೆ- ಠಾಣೆ ಮೆಟ್ಟಿಲೇರಿದ್ರೆ ಚಾಲಕರ ಮೇಲೆಯೇ ಬಿತ್ತು ಕೇಸ್

    ಕ್ಯಾಬ್ ಚಾಲಕನ ಮೇಲೆ ಯುವತಿ ಹಲ್ಲೆ- ಠಾಣೆ ಮೆಟ್ಟಿಲೇರಿದ್ರೆ ಚಾಲಕರ ಮೇಲೆಯೇ ಬಿತ್ತು ಕೇಸ್

    ಬೆಂಗಳೂರು: ಜೂಮ್ ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಬಂದು ಓಲಾ ಕಾರಿಗೆ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಲಕರ ವಿರುದ್ಧ ಕೇಸ್ ದಾಖಲಾಗಿದ್ದನ್ನು ಖಂಡಿಸಿ ಚಾಲಕರು ಬೆಳ್ಳಂದೂರು ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

    ಚಾಲಕರ ಆರೋಪ ಏನು?
    ಶುಕ್ರವಾರ ಕುಡಿದ ಮತ್ತಿನಲ್ಲಿದ್ದ ಯುವತಿ ಜೂಮ್ ಕಾರಿನಲ್ಲಿ ಸೆಲ್ಫ್ ಡ್ರೈವ್ ಮಾಡಿಕೊಂಡು ಓಲಾ ಕಾರಿಗೆ ಬೆಳ್ಳಂದೂರಿನಲ್ಲಿ ಡಿಕ್ಕಿ ಹೊಡೆದಿದ್ದಾಳೆ. ಡಿಕ್ಕಿ ಹೊಡೆದಿದ್ದು ಯಾಕೆ ಎಂದು ಕ್ಯಾಬಿನ ಚಾಲಕರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಯುವತಿಯರು ತಮ್ಮ ಸ್ನೇಹಿತರನ್ನು ಕರೆಸಿ ಚಾಲಕರ ಮೇಲೆ ರಾದ್ಧಾಂತ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಯುವತಿ ನಡುರಸ್ತೆಯಲ್ಲಿ ರಾದ್ಧಾಂತ ಸೃಷ್ಟಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾಳೆ.

    ಯುವತಿ ಹಲ್ಲೆ ಮಾಡಿದಕ್ಕೆ ಚಾಲಕ ನ್ಯಾಯ ಕೇಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ ಚಾಲಕರ ಮೇಲೆಯೇ ಬೆಳ್ಳಂದೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪೊಲೀಸರು 10ಕ್ಕೂ ಹೆಚ್ಚು ಚಾಲಕರ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಸುರೇಶ್, ಶಂಕರ್, ಲಿಂಗಣ್ಣಗೌಡ ಸೇರಿದಂತೆ ಎಂಟು ಚಾಲಕರನ್ನು ಬಂಧಿಸಿದ್ದಾರೆ.

    ಯುವತಿ ರಾದ್ಧಾಂತದ ಬಗ್ಗೆ ಸಾಕ್ಷಿ ಸಮೇತ ದೂರು ಕೊಟ್ಟರೂ ಚಾಲಕರದ್ದೇ ತಪ್ಪು ಎಂದು ಪೊಲೀಸರು ಹೇಳುತ್ತಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯ ಎಎಸ್ ಐ ಮಂಜುನಾಥ್ ನಮ್ಮ ಮೇಲೆ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಕ್ಯಾಬ್ ಚಾಲಕರು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

  • ಕ್ಯಾಬ್ ಚಾಲಕನನ್ನು ತುಂಡು ತುಂಡಾಗಿ ಕತ್ತರಿಸಿ ಕಾರಿನೊಂದಿಗೆ ಪರಾರಿಯಾದ ದಂಪತಿ!

    ಕ್ಯಾಬ್ ಚಾಲಕನನ್ನು ತುಂಡು ತುಂಡಾಗಿ ಕತ್ತರಿಸಿ ಕಾರಿನೊಂದಿಗೆ ಪರಾರಿಯಾದ ದಂಪತಿ!

    ನವದೆಹಲಿ: ಪ್ರಯಾಣಿಕರ ಸೋಗಿನಲ್ಲಿ ಬಂದ ದಂಪತಿ ಉಬರ್ ಕ್ಯಾಬ್ ಚಾಲಕನನ್ನು ದರೋಡೆ ಮಾಡಿ ಆತನನ್ನು ತುಂಡು ತುಂಡಾಗಿ ಕತ್ತರಿಸಿ ಬಳಿಕ ಚರಂಡಿಯಲ್ಲಿ ಮೃತದೇಹವನ್ನು ಎಸೆದು ಕಾರಿನೊಂದಿಗೆ ಪರಾರಿಯಾದ ಅಮಾನವೀಯ ಘಟನೆ ನವದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಪೂರ್ವ ಭಾಗದ ಶಾಖಾಪುರ ಪ್ರದೇಶದ ಕ್ಯಾಬ್ ಚಾಲಕ ರಾಮ್ ಗೋವಿಂದ್ ಮೃತ ದುರ್ದೈವಿ. ಆರೋಪಿಗಳನ್ನು ಫಾರ್ಹತ್ ಅಲಿ(34) ಹಾಗೂ ಆತನ ಪತ್ನಿ ಸೀಮ ಶರ್ಮಾ(30) ಎಂದು ಗುರುತಿಸಲಾಗಿದೆ. ಮೂಲತಃ ಉತ್ತರ ಪ್ರದೇಶದವರಾಗಿರುವ ದಂಪತಿ ನವದೆಹಲಿಯಲ್ಲಿ ವಾಸವಾಗಿದ್ದರು. ದಂಪತಿ ಜನವರಿ 29ರಂದು ಎಂಜಿ ರೋಡ್‍ನಿಂದ ಘಾಜಿಯಾಬಾದ್‍ಗೆ ಉಬರ್ ಕ್ಯಾಬ್ ಬುಕ್ ಮಾಡಿದ್ದರು.

    ರಾಮ್ ಗೋವಿಂದ್ ದಂಪತಿ ಬುಕ್ ಮಾಡಿದ ಕ್ಯಾಬ್‍ಗೆ ಚಾಲಕನಾಗಿ ಬಂದಿದ್ದನು. ಕ್ಯಾಬ್‍ನಲ್ಲಿ ಪ್ರಯಾಣಿಸುತ್ತಿರುವಾಗ ದಾರಿ ಮಧ್ಯೆ ದಂಪತಿ ದರೋಡೆ ಮಾಡಲು ಪ್ಲಾನ್ ಮಾಡಿದ್ದಾರೆ. ಬಳಿಕ ಚಾಲಕನನ್ನು ಟೀ ಕುಡಿಸುವ ನೆಪದಲ್ಲಿ ಮನೆಗೆ ಕರೆದೊಯ್ದು ಆತನ ಬಳಿ ಇದ್ದ ಹಣವನ್ನು ದರೋಡೆ ಮಾಡಿದ್ದಾರೆ. ನಂತರ ಆತನನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ಕಟ್ಟಿ ನೋಯ್ಡಾ ಬಳಿ ಇರುವ ಚರಂಡಿಯಲ್ಲಿ ಮೃತದೇಹವನ್ನು ಎಸೆದು ಕಾರಿನ ಜೊತೆಗೆ ಪರಾರಿಯಾಗಿದ್ದಾರೆ.

    ಕೆಲಸಕ್ಕೆ ಹೋದ ಕ್ಯಾಬ್ ಚಾಲಕ ಮನೆಗೆ ಬಾರದೇ ಇದ್ದಾಗ, ಆತನ ಪತ್ನಿ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಚಾಲಕ ಮೃತಪಟ್ಟ ಸಂಗತಿ ಬೆಳಕಿಗೆ ಬಂದಿದೆ. ಪೊಲೀಸರು ರಾಮ್ ಗೋವಿಂದ್ ಓಡಿಸುತ್ತಿದ್ದ ಕಾರಿನ ಜಿಪಿಆರ್‍ಎಸ್ ಅನ್ನು ಟ್ರಾಕ್ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕಾರು ಹಾಗೂ ಅವರ ಬಳಿ ಇದ್ದ ಮೋಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಹಿಳಾ ಟೆಕ್ಕಿಗೆ ಕ್ಯಾಬ್ ಚಾಲಕನಿಂದ ಕಿರುಕುಳ- 7 ಕಿ.ಮೀ ದೂರ ಹಿಂಬಾಲಿಸಿ ಕಾಟಕೊಟ್ಟ!

    ಮಹಿಳಾ ಟೆಕ್ಕಿಗೆ ಕ್ಯಾಬ್ ಚಾಲಕನಿಂದ ಕಿರುಕುಳ- 7 ಕಿ.ಮೀ ದೂರ ಹಿಂಬಾಲಿಸಿ ಕಾಟಕೊಟ್ಟ!

    – ಸಮ್ ಒನ್ ಪ್ಲೀಸ್ ಹೆಲ್ಪ್ ಮಿ ಹೆಲ್ಪ್ ಮಿ ಗೋಗರೆದ ಯುವತಿ
    – ಬೆಂಗಳೂರು ಪೊಲೀಸರಿಗೆ ಫೇಸ್‍ಬುಕ್‍ನಲ್ಲಿ ದೂರು

    ಬೆಂಗಳೂರು: ಕ್ಯಾಬ್ ಚಾಲಕನೊಬ್ಬ ಕಿರುಕುಳ ನೀಡಿ 7 ಕಿ.ಮೀ ದೂರ ಹಿಂಬಾಲಿಸಿ ಮಹಿಳಾ ಟೆಕ್ಕಿಗೆ ಕಿರುಕುಳ ಕೊಟ್ಟ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಮಹಿಳಾ ಟೆಕ್ಕಿ ಕಳೆದ 4ರಂದು ಎಲೆಕ್ಟ್ರಾನಿಕ್ ಸಿಟಿಯ ತನ್ನ ಕಚೇರಿಗೆ ತೆರಳುತ್ತಿದರು. ಈ ವೇಳೆ ಮಹಿಳಾ ಟೆಕ್ಕಿ ಕಾರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಕ್ಯಾಬ್ ಡ್ರೈವರ್ ದುಂಡಾವರ್ತನೆ ತೋರಿದ್ದಾನೆ. ಸಿಲ್ಕ್ ಬೊರ್ಡ್ ಜಂಕ್ಷನ್ ನಲ್ಲಿ ಯುವತಿಯ ಕಾರು ಕ್ಯಾಬ್ ಗೆ ತಾಗಿದೆ. ಘಟನೆಯಲ್ಲಿ ಕ್ಯಾಬ್ ಡ್ರೈವರ್ ಹಾಗೂ ಯುವತಿಯ ಕಾರಿಗೆ ಯಾವುದೇ ಹಾನಿಯಾಗಿಲ್ಲ.

    ಕಾರು ತಾಗಿದ ನಂತರ ಐ ಯಾಮ್ ಸಾರಿ ಸರ್ ಅಂತ ಮಹಿಳಾ ಟೆಕ್ಕಿ ಕ್ಷಮೆ ಕೋರಿದರು. ಯುವತಿ ಕ್ಷಮೆ ಕೇಳಿದರೂ ಸುಮ್ಮನಾಗದ ಕ್ಯಾಬ್ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕ್ಯಾಬ್ ಡ್ರೈವರ್ ವರ್ತನೆಯಿಂದ ಗಾಬರಿಗೊಂಡ ಯುವತಿ ಕಾರಿನಿಂದ ಕೆಳಗಡೆ ಇಳಿದಿಲ್ಲ. ಯುವತಿ ಸಿಗ್ನಲ್ ಬಿಟ್ಟ ನಂತರ ತನ್ನ ಕಾರನ್ನು ಸಿಲ್ಕ್ ಬೊರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ನತ್ತ ಚಲಾಯಿಸಿದ್ದಾರೆ.

    ಕ್ಯಾಬ್ ಡ್ರೈವರ್ ಹಿಂಬದಿಯಿಂದ ಯುವತಿಯ ಕಾರನ್ನು ಹಿಂಬಾಲಿಸಿಕೊಂಡು ಬಂದು ರ‍್ಯಾಶ್ ಡ್ರೈವ್ ಮಾಡಿ ಸಿಲ್ಕ್ ಬೋರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‍ವರೆಗೂ ಕಾಟ ಕೊಟ್ಟಿದ್ದಾನೆ. ಚಾಲಕ ರಸ್ತೆಯಲ್ಲಿ ಮೂರು ಬಾರಿ ಯುವತಿಯ ಕಾರನ್ನು ಅಡ್ಡಗಟ್ಟಿ ವಿಕೃತಿ ಮೆರೆದಿದ್ದಾನೆ.

    ಕ್ಯಾಬ್ ಡ್ರೈವರ್ ನ ಕಾಟಕ್ಕೆ ಯುವತಿ ಕಾರನ್ನು ನಿಲ್ಲಿಸದೇ, ಡ್ರೈವ್ ಮಾಡುತ್ತಲೇ ವಾಹನ ಸವಾರರ ಸಹಾಯ ಚಾಚಿದ್ದಾರೆ. ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ವರೆಗೂ ಯುವತಿ ಕಣ್ಣಿರಿಡುತ್ತಾ ಸಮ್ ಒನ್ ಪ್ಲೀಸ್ ಹೆಲ್ಪ್ ಮಿ ಹೆಲ್ಪ್ ಮಿ ಗೋಗರೆದಿದ್ದಾರೆ.

    ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಸಮಿಪಿಸುತ್ತಿದ್ದಂತೆ ಕಿರಾತಕ ಕ್ಯಾಬ್ ಡ್ರೈವರ್ ಪರಾರಿಯಾಗಿದ್ದಾನೆ. ನೊಂದ ಯುವತಿ ಈ ಬಗ್ಗೆ ಬೆಂಗಳೂರು ಸಿಟಿ ಪೊಲೀಸ್ ಪೇಜ್ ನಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಕೆಎ-01-ಎಜಿ 6553 ಸಂಖ್ಯೆಯ ಕಂದು ಬಣ್ಣದ ಕ್ಯಾಬ್ ಎಂದು ಉಲ್ಲೇಖಿಸಿದ್ದಾರೆ. ಸದ್ಯ ಆರೋಪಿ ಕ್ಯಾಬ್ ಡ್ರೈವರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಟೆಕ್ಕಿ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರು ಹಾರರ್ – ಓಲಾ ಚಾಲಕನನ್ನು ಅಪಹರಿಸಿ ಬಿಡುಗಡೆಗಾಗಿ ಪತ್ನಿಯನ್ನು ಬೆತ್ತಲೆಗೊಳಿಸಿದ ಕಾಮುಕರು!

    ಬೆಂಗ್ಳೂರು ಹಾರರ್ – ಓಲಾ ಚಾಲಕನನ್ನು ಅಪಹರಿಸಿ ಬಿಡುಗಡೆಗಾಗಿ ಪತ್ನಿಯನ್ನು ಬೆತ್ತಲೆಗೊಳಿಸಿದ ಕಾಮುಕರು!

    ಸಾಂಧರ್ಬಿಕ ಚಿತ್ರ

    ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದ ಕಾಮುಕರು ಓಲಾ ಚಾಲಕನನ್ನು ಅಪಹರಿಸಿ ಬಿಡುಗಡೆಗಾಗಿ ಆತನ ಪತ್ನಿಯ ಬೆತ್ತಲೆ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಅಮಾನವೀಯ ಘಟನೆ ರಾಜಧಾನಿಯಲ್ಲಿ ನಡೆದಿದೆ.

    ಹೌದು, ನಗರದ ಬೊಮ್ಮಸಂದ್ರ ಏರಿಯಾದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಓಲಾ ಕ್ಯಾಬ್ ಚಾಲಕನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿದ್ದಾರೆ. ಬಳಿಕ ಆತನ ಹೆಂಡತಿಗೆ ಕರೆ ಮಾಡಿ ಹೆದರಿಸಿ, ಆಕೆಯ ಬೆತ್ತಲೆ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ.

    ಏನಿದು ಪ್ರಕರಣ?
    ಕಳೆದ ಶುಕ್ರವಾರ ರಾತ್ರಿ ಬೊಮ್ಮಸಂದ್ರದಿಂದ ಕ್ಯಾಬ್ ಚಾಲಕನಿಗೆ ಪ್ರಯಾಣಿಕರನ್ನು ಪಿಕ್‍ಅಪ್ ಮಾಡಿಕೊಳ್ಳಲು ಕರೆ ಬಂದಿತ್ತು. ಕೂಡಲೇ ಚಾಲಕ ನಿಗಧಿತ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಕ್ಯಾಬ್‍ಗಾಗಿ ಕಾಯುತ್ತಿದ್ದ 4 ಮಂದಿ, ಕಾರು ಬರುತ್ತಿದ್ದಂತೆ ಹತ್ತಿ ಕುಳಿತಿದ್ದಾರೆ. ಈ ವೇಳೆ ಚಾಲಕ ಎಲ್ಲಿಗೆ ಹೋಗಬೇಕು ಎಂದು ಕೇಳಿದಾಗ, ಏಕಾಏಕಿ ನಾಲ್ವರು ಹಲ್ಲೆ ಮಾಡಿದ್ದಾರೆ. ಅಲ್ಲದೇ ಬಲವಂತವಾಗಿ ಚಾಲಕನ್ನು ಹಿಂಬದಿ ಸೀಟಿಗೆ ಹಾಕಿ, ಮತ್ತೊಬ್ಬ ಕಾರು ಚಾಲನೆಗೆ ಮುಂದಾಗಿದ್ದನು.

    ಈ ವೇಳೆ ಕಾರನ್ನು ರಾಮನಗರ ಕಡೆ ಚಲಾಯಿಸಿದ್ದರು. ಅಲ್ಲದೇ ಕಾರು ಚಾಲಕನ ವಾಲೆಟ್ ನಲ್ಲಿದ್ದ 9 ಸಾವಿರ ರೂಪಾಯಿಯನ್ನು ನೋಡಿ ಹೆಚ್ಚಿನ ಹಣಕ್ಕಾಗಿ ಚಾಲಕನಿಗೆ ಚಿತ್ರಹಿಂಸೆ ನೀಡಿದ್ದಾರೆ. ಈ ವೇಳೆ ಚಾಲಕ ತನ್ನ ಅಳಿಯನಿಗೆ ಕರೆಮಾಡಿ 22 ಸಾವಿರ ರೂಪಾಯಿಯನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಖಾತೆಗೆ ಹಣ ಬರುತ್ತಿದ್ದಂತೆ ದುಷ್ಕರ್ಮಿಗಳು ಹತ್ತಿರದ ಎಟಿಎಂನಲ್ಲಿ ಹಣ ಡ್ರಾ ಮಾಡಿಸಿದ್ದಾರೆ. ನಂತರ ಮೈಸೂರು ಮಾರ್ಗವಾಗಿ ತೆರಳಿ, ಚನ್ನಪಟ್ಟಣದ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿ ಚಾಲಕನನ್ನು ಕೂಡಿ ಹಾಕಿದ್ದಾರೆ.

    ಇಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಳು, ಚಾಲಕನ ಫೋನ್ ಪಡೆದು ಪತ್ನಿಗೆ ವಿಡಿಯೋ ಕಾಲ್ ಮಾಡಿ ಬೆತ್ತಲೆಯಾಗಿ ನಿಲ್ಲುವಂತೆ ಹೆದರಿಸಿದ್ದಾರೆ. ಅಲ್ಲದೇ ನಮ್ಮ ಬೇಡಿಕೆಯನ್ನು ಈಡೇರಿಸದೇ ಇದ್ದರೆ ನಿನ್ನ ಪತಿಯನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ. ಪತಿಯ ಪ್ರಾಣಕ್ಕಾಗಿ ಪತ್ನಿ ಬೆತ್ತಲಾಗಿದ್ದಾಳೆ. ಬಳಿಕ ಈ ವಿಡಿಯೋವನ್ನು ಇಟ್ಟುಕೊಂಡು ನಮಗೆ ಹಣ ಬೇಕು ಇಲ್ಲದಿದ್ದರೇ, ನಿನ್ನ ಹೆಂಡತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ದುಷ್ಕರ್ಮಿಗಳ ಕೈಗೆ ಸಿಕ್ಕು ನಲುಗಿದ್ದ ಚಾಲಕ ಶನಿವಾರ ಮಧ್ಯಾಹ್ನ ಶೌಚಾಲಯದ ಕಿಟಕಿ ಒಡೆದು ಅವರಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಚಾಲಕ ತಪ್ಪಿಸಿಕೊಳ್ಳುತ್ತಿದ್ದಂತೆ ಹೆದರಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

    ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಚಾಲಕ ನೇರವಾಗಿ ಚನ್ನಪಟ್ಟಣ ಪೊಲೀಸರ ಬಳಿ ಹೋಗಿದ್ದಾನೆ. ಆದರೆ ದೂರು ದಾಖಲಿಸಿಕೊಳ್ಳುವ ಬದಲು ಪೊಲೀಸರು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ನೀನು ಬೆಂಗಳೂರಿಗೆ ಹೋಗಿ ದೂರು ನೀಡೆಂದು ಪೊಲೀಸರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದರು. ಈ ವೇಳೆ ನಡೆದ ಎಲ್ಲಾ ಘಟನೆಯನ್ನು ಪೊಲೀಸರ ಮುಂದೆ ಚಾಲಕ ತೋಡಿಕೊಂಡಿದ್ದಾನೆ.

    ಆಡಗೋಡಿ ಪೊಲೀಸರ ಆರೋಪಿಗಳ ವಿರುದ್ಧ ಅಪಹರಣ, ದರೋಡೆ ಮತ್ತು ಬೆದರಿಕೆ ದೂರನ್ನು ದಾಖಲಿಸಿಕೊಂಡಿದ್ದಾರೆ. ಕೂಡಲೇ ಕಾರ್ಯಪ್ರವೃತರಾಗಿ ರಾಬಿನ್ ಮತ್ತು ಅರುಣ್ ಬೆತ್ನಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನುಳಿದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಇವರಿಬ್ಬರ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.

    ಈ ಕುರಿತು ಮಾಧ್ಯಮಕ್ಕೆ ಪತ್ರಿಕ್ರಿಯಿಸಿರುವ ಚಾಲಕ, ಪತ್ನಿಯ ಬೆತ್ತಲೆ ವಿಡಿಯೋ ಮಾಡಿರುವುದು ಕುಟುಂಬದ ಮಾನದ ಪ್ರಶ್ನೆ ಎಂದು ಪೊಲೀಸರು ಹೇಳಿದ್ದರು. ಹೀಗಾಗಿ ನಾನು ಆರೋಪಿಗಳ ವಿರುದ್ಧ ಅಪಹರಣ, ದರೋಡೆ ಮತ್ತು ಬೆದರಿಕೆಯ ದೂರನ್ನು ದಾಖಲಿಸಿದ್ದೇನೆಂದು ಹೇಳಿದ್ದಾರೆ.

    ಘಟನೆ ಬಗ್ಗೆ ಒಲಾ ವಕ್ತಾರು ಪ್ರತಿಕ್ರಿಯಿಸಿ, ಇದೊಂದು ದುರದೃಷ್ಟಕರ ಘಟನೆ, ಚಾಲಕ ಮತ್ತು ಅವರ ಕುಟುಂಬದವರು ಎದುರಿಸಿದ ಪರಿಸ್ಥಿತಿ ನಿಜಕ್ಕೂ ಆಘಾತಕಾರಿ. ಇಂತಹ ಕೃತ್ಯವನ್ನು ನಾವು ಖಂಡಿಸುತ್ತೇವೆ. ಘಟನೆ ಬೆಳಕಿಗೆ ಬಂದ ಕೂಡಲೇ ಆ ಪ್ರಯಾಣಿಕರ ಒಲಾ ಖಾತೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದೇವೆ. ಈ ಮಧ್ಯೆ ಚಾಲಕನಿಗೆ ಮುಂದಿನ ತನಿಖೆ ವೇಳೆ ಎಲ್ಲಾ ರೀತಿಯಲ್ಲಿಯೂ ಸಹಕರಿಸುವುದಾಗಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖ್ಯಾತ ಗಾಯಕಿ ವಸುಂದರಾ ದಾಸ್‍ಗೆ ನಡುರಸ್ತೆಯಲ್ಲೇ ಕ್ಯಾಬ್ ಚಾಲಕನಿಂದ ಅವಾಜ್

    ಖ್ಯಾತ ಗಾಯಕಿ ವಸುಂದರಾ ದಾಸ್‍ಗೆ ನಡುರಸ್ತೆಯಲ್ಲೇ ಕ್ಯಾಬ್ ಚಾಲಕನಿಂದ ಅವಾಜ್

    ಬೆಂಗಳೂರು: ಖ್ಯಾತ ನಟಿ, ಗಾಯಕಿ ವಸುಂದರಾ ದಾಸ್ ಅವರಿಗೆ ಕ್ಯಾಬ್ ಚಾಲಕನೊಬ್ಬ ಅಡ್ಡಗಟ್ಟಿ ನಿಂದನೆ ಮಾಡಿರುವ ಘಟನೆ ನಗರದ ಮಲ್ಲೇಶ್ವರಂ ಮಾರ್ಗೋಸಾ ರಸ್ತೆಯಲ್ಲಿ ನಡೆದಿದೆ.

    ವಸುಂದರಾ ದಾಸ್ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕ್ಯಾಬ್ ಚಾಲಕ ತನ್ನ ಕಾರಿಗೆ ದಾರಿ ನೀಡಲಿಲ್ಲ ಎಂದು ಕೋಪಗೊಂಡು ನಿಂದಿಸಿದ್ದಾರೆ. ಈ ಕುರಿತು ವಸುಂದರಾ ದಾಸ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ನಡೆದಿದ್ದೇನು?
    ಆ.29 ರಂದು ನಗರದ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿ ಘಟನೆ ನಡೆದಿದ್ದು, ಸಂಜೆ 4.30 ರ ಸಮಯದಲ್ಲಿ ವಸುಂದರಾ ದಾಸ್ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಇಟಿಯೋಸ್ ಕಾರಿನ ಚಾಲಕ ಸಿಗ್ನಲ್ ನಲ್ಲಿ ನಿರಂತರ ಹಾರ್ನ್ ಮಾಡಿದ್ದಾನೆ. ಭಾಷ್ಯಂ ಸರ್ಕಲ್ ಸಿಗ್ನಲ್‍ನಿಂದ ಹಿಂಬಾಲಿಸಿ ಬಳಿಕ ಅವರ ಕಾರನ್ನು ಅಡ್ಡಗಟ್ಟಿ ನಿಂದನೆ ಮಾಡಿದ್ದಾನೆ. ಈ ವೇಳೆ ಕಾರಿನ ಡೋರ್ ತೆಗೆಯಲು ಯತ್ನಿಸಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಈ ಕುರಿತು ವಸುಂದರಾ ದಾಸ್ ಅವರು ದೂರು ದಾಖಲಿಸಿದ್ದು, ಕಾರ್ ನಂಬರ್ ಕೆಎ-05 ಇ-3933 ನ ಕ್ಯಾಬ್ ಚಾಲಕನಿಂದ ಕೃತ್ಯ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಕ್ಯಾಬ್ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 509, 341, 354 ಮತ್ತು 504ರ ಅಡಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಕಾರು ಚಾಲಕನಿಗಾಗಿ ಶೋಧ ನಡೆಸಿದ್ದಾರೆ. ವಾಹನ ಸಂಖ್ಯೆಯನ್ನು ಪರಿವಾಹನ್ ಪೋರ್ಟಲ್ ನಲ್ಲಿ ಪರಿಶೀಲನೆ ನಡೆಸಿದ ವೇಳೆ ಕಾರು ಅಮ್ಜದ್ ಪಾಷಾ ಎಂಬವರ ಹೆಸರಲ್ಲಿ ನೋಂದಣಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv