Tag: ಕ್ಯಾಬ್ ಚಾಲಕ

  • ಮಹಿಳೆ ಮೇಲೆ ಊಬರ್ ಚಾಲಕನಿಂದ ಹಲ್ಲೆ

    ಮಹಿಳೆ ಮೇಲೆ ಊಬರ್ ಚಾಲಕನಿಂದ ಹಲ್ಲೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಮೇಲೆ ಊಬರ್ ಚಾಲಕ (Uber Driver) ಹಲ್ಲೆ ಮಾಡಿದ ಘಟನೆ ನಡೆದಿದೆ.

    ಬೆಳ್ಳಂದೂರು (Bellandur) ಬಳಿಯ ಬೋಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಹಿಳೆ ತನ್ನ ಮಗನನ್ನು ಅಸ್ಪತ್ರೆಗೆ ಕರೆದೊಯ್ಯಲು ಕ್ಯಾಬ್ ಬುಕ್ ಮಾಡಿದ್ದರು. ಅಂತೇಯೇ ಬುಕ್ ಮಾಡಿದ್ದ ಸ್ಥಳಕ್ಕೆ ಮತ್ತೊಂದು ಕ್ಯಾಬ್ ಬಂದಿದೆ. ಆದರೆ ಇದನ್ನು ಗಮನಿಸಿದ ಮಹಿಳೆ ಮತ್ತು ಮಗ ಕ್ಯಾಬ್ ಹತ್ತಿ ಕುಳಿತರು. ಈ ವೇಳೆ ಇದು ಬೇರೆ ಕ್ಯಾಬ್ ಎಂದು ಹೇಳಿ ಇಬ್ಬರು ವಾಹನದಿಂದ ಇಳಿಯಲು ಯತ್ನಿಸಿದ್ದಾರೆ.

    ಮಹಿಳೆ ಮತ್ತು ಮಗ ಇಳಿಯುತ್ತಿದ್ದಂತೆಯೇ ಚಾಲಕ ಕ್ಯಾಬ್ ಚಲಾಯಿಸಲು ಮುಂದಾಗಿದ್ದಾನೆ. ಆಗ ಕ್ಯಾಬ್ ಚಾಲಕ ಮತ್ತು ಮಹಿಳೆಯ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಚಾಲಕ ಕ್ಯಾಬ್ ನಿಲ್ಲಿಸಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ಕೊಲೆ ಆರೋಪಿಯನ್ನು ಬಂಧಿಸಲು ಸಹಾಯ ಮಾಡಿದ ತಾರಾಗೆ ಭಾರೀ ಮೆಚ್ಚುಗೆ

    ಅಪಾರ್ಟ್‍ಮೆಂಟ್ ಮುಂಭಾಗದಲ್ಲಿಯೇ ಮಹಿಳೆ ಮೇಲೆ ಹಲ್ಲೆ ಮಾಡಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ನಿವಾಸಿಗಳು ಮಹಿಳೆಯನ್ನ ರಕ್ಷಿಸಿದ್ದಾರೆ. ನಂತರ ಅಪಾರ್ಟ್‍ಮೆಂಟ್ ನಿವಾಸಿಗಳು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.

    ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾಬ್ ಚಾಲಕನಿಗೆ ಚಾಕುವಿನಿಂದ ಇರಿದ ವಿದೇಶಿ ಮಹಿಳೆ

    ಕ್ಯಾಬ್ ಚಾಲಕನಿಗೆ ಚಾಕುವಿನಿಂದ ಇರಿದ ವಿದೇಶಿ ಮಹಿಳೆ

    ಚಂಡೀಗಢ: ಕ್ಯಾಬ್ ಚಾಲಕನಿಗೆ ಮಹಿಳೆಯೊಬ್ಬಳು ಚಾಕುವಿನಿಂದ ಇರಿದ ಘಟನೆ ಗುರುಗ್ರಾಮದಲ್ಲಿ ನಡೆದಿದ್ದು, ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

    ಮಹಿಳೆ ಬುರ್ಕಾ ಧರಿಸಿ ಬೆಳಗ್ಗೆ 11 ಗಂಟೆ ಸುಮಾರಿಗೆ ಗುರುಗ್ರಾಮದ ಸೈಬರ್ ಸಿಟಿ ಪ್ರದೇಶದಿಂದ ಕ್ಯಾಬ್ ಹತ್ತಿದ್ದಾಳೆ. ನಂತರ ಚಾಲಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾಳೆ. ಆದರೆ ಮಹಿಳೆಯನ್ನು ಪಿಸಿಆರ್ ಪೊಲೀಸರು ಹಿಂಬಾಲಿಸಿ ಬಂಧಿಸಿದ್ದಾರೆ. ಇದನ್ನೂ ಓದಿ: ಹಿಜಬ್‍ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರ ಮನವೊಲಿಸಿದ ಅಧಿಕಾರಿಗಳು

    ನಂತರ ಆಕೆಯನ್ನು ವಿಚಾರಣೆ ನಡೆಸಿದ ವೇಳೆ ಮಹಿಳೆಗೆ 30 ವರ್ಷದವಳಾಗಿದ್ದು, ಈಜಿಪ್ಟ್ ಮೂಲದವಳಾಗಿದ್ದಾಳೆ ಎಂಬ ಸತ್ಯ ಬಹಿರಂಗಗೊಂಡಿದೆ ಮತ್ತು ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಅನುವಾದಕರನ್ನು ಕರೆಸಲಾಗಿತ್ತು. ಮಹಿಳೆ ಹೇಳಿಕೆ ದಾಖಲಿಸಿಕೊಂಡ ಬಳಿಕ ಘಟನೆಯ ಹಿಂದಿನ ಕಾರಣ ತಿಳಿದುಬಂದಿದೆ. ಸದ್ಯ ಕ್ಯಾಬ್ ಚಾಲಕನನ್ನು ಸ್ಥಳೀಯ ಗುರುಗ್ರಾಮ್‍ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ರೈಲಿಗೆ ಡಿಕ್ಕಿ – ನಾಲ್ವರ ಸಾವು

  • ಯುವತಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಕ್ಯಾಬ್ ಡ್ರೈವರ್ – ಎಚ್ಚರಗೊಂಡು ಕಿರುಚಿದಾಗ ಕ್ಷಮೆ

    ಯುವತಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಕ್ಯಾಬ್ ಡ್ರೈವರ್ – ಎಚ್ಚರಗೊಂಡು ಕಿರುಚಿದಾಗ ಕ್ಷಮೆ

    – ಕೃತ್ಯದ ವೇಳೆ ಹಿಂಬದಿ ಸೀಟ್‍ನಲ್ಲಿಟ್ಟಿದ್ದ ಮೊಬೈಲ್

    ಬೆಂಗಳೂರು: ಭೀಮಾನಗರ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿ ಕ್ಯಾಬ್ ಚಾಲಕ ದೇವರಾಜು ಅತ್ಯಾಚಾರವೆಸಗಿ ಪರಾರಿಯಾಗುವ ಭರದಲ್ಲಿ ತನ್ನ ಮೊಬೈಲ್ ಬಿಟ್ಟು ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬೇಗನೆ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾದರು.

    ಹೌದು. ಆರೋಪಿಯು ನಿದ್ದೆಯಲ್ಲಿದ್ದ ಯುವತಿ ಜೊತೆಗೆ ತನ್ನ ಮೊಬೈಲ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ನಂತರ ಆಕೆಯ ಮನೆ ಮುರುಗೇಶ್ ಪಾಳ್ಯ ಸಮಿಪವೇ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಎಚ್ಚರಗೊಂಡ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದರಿಂದ ಕಂಗಾಲಾದ ಆರೋಪಿ ಕಾರಿನಿಂದ ಹೊರಬಂದಿದ್ದಾನೆ. ಅಲ್ಲದೆ ಯುವತಿ ಜೊತೆ ಸಾರಿ ಕೇಳಿದ್ದಾನೆ.

    ಇತ್ತ ಚಾಲಕನ ಕೃತ್ಯದಿಂದ ಗಾಬರಿಗೊಂಡ ಯುವತಿ, ತಾನು ಕುಳಿತಿದ್ದ ಸೀಟ್ ನಲ್ಲಿದ್ದ ಮೊಬೈಲ್ ಅನ್ನು ಬ್ಯಾಗ್ ನಲ್ಲಿ ಹಾಕಿಕೊಂಡು ಬಟ್ಟೆ ಸರಿಮಾಡುತ್ತಾ ಕಾರಿನಿಂದ ಇಳಿದು ಮನೆಗೆ ಓಡಿದ್ದಾಳೆ. ಯುವತಿ ಮನೆಯತ್ತ ತೆರಳುತ್ತಿದ್ದಂತೆಯೇ ಇತ್ತ ಚಾಲಕ ತನ್ನ ಕಾರಿನೊಂದಿಗೆ ಎಸ್ಕೇಪ್ ಆಗಿದ್ದಾನೆ.

    ಎಸ್ಕೇಪ್ ಅಗಿ ಐದು ನಿಮಿಷಗಳ ಬಳಿಕ ಆರೋಪಿ ಮತ್ತೆ ಸ್ಪಾಟ್‍ಗೆ ಬಂದಿದ್ದಾನೆ. ತನ್ನ ಮೊಬೈಲ್ ಹುಡುಕಿಕೊಂಡು ಮತ್ತೆ ಘಟನಾ ಸ್ಥಳಕ್ಕೆ ಬಂದು ಎಲ್ಲಾ ಕಡೆ ಹುಡುಕಾಡಿದ್ದಾನೆ. ಆದರೆ ಆತನಿಗೆ ಎಲ್ಲೂ ಮೊಬೈಲ್ ಸಿಕ್ಕಿರಲಿಲ್ಲ. ಹೀಗಾಗಿ ಅಲ್ಲಿಂದ ವಾಪಸ್ ಆಗಿದ್ದಾನೆ. ಅರೋಪಿ ದೇವರಾಜ್ ಮೊಬೈಲ್, ಸಂತ್ರಸ್ತೆ ಜೊತೆ ಇದ್ದ ಕಾರಣ ಊಬರ್ ಟ್ರಿಪ್ ಸಹ ಎಂಡ್ ಅಗಿರಲಿಲ್ಲ. ಇದನ್ನೂ ಓದಿ:  ಜೀವನ್‍ಭೀಮಾ ನಗರ ರೇಪ್‍ಕೇಸ್‍ಗೆ ಟ್ವಿಸ್ಟ್ – ಕ್ಯಾಬ್‍ನಲ್ಲಿ ರೇಪ್ ಮಾಡಿರೋದು ಬೆಳಕಿಗೆ

    ಮನೆಗೆ ಬಂದ ಬಳಿಕ ಯುವತಿ ಬೆಳಗ್ಗಿನ ಜಾವ 112 ಗೆ ಕರೆಮಾಡಿ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಪೊಲೀಸರು ಯುವತಿ ಮನೆಗೆ ಹೋಗಿ ಮಾಹಿತಿ ಪಡೆದಿದ್ದಾರೆ. ನಂತರ ಮಹಿಳಾ ಅಧಿಕಾರಿ ಕರೆಸಿ ಠಾಣೆಗೆ ಯುವತಿ ಕರೆದುಕೊಂಡು ಹೋಗಿದ್ದಾರೆ. 7 ಗಂಟೆಗೆ ಎಫ್ ಐ ಆರ್ ದಾಖಲು ಮಾಡಲಾಗಿದೆ. ಅರೋಪಿ ಮೊಬೈಲ್ ಮತ್ತು ಕಾರ್ ನಂಬರ್ ಊಬರ್ ರಿಜಿಸ್ಟರ್ ಅನ್ವಯ ಹುಡುಕಿದ್ದಾರೆ. ಘಟನೆ ಬಳಿಕ ಅವಲಹಳ್ಳಿಯ ತನ್ನ ರೂಮ್ ನಲ್ಲಿದ್ದ ಅರೋಪಿಯನ್ನು 11 ಗಂಟೆ ಸುಮಾರಿಗೆ ಪೊಲೀಸರು ವಶಕ್ಕೆ ಪಡೆದರು. ನಂತರ ವಿಚಾರಣೆ ಬಳಿಕ ಮಧ್ಯಾಹ್ನ 2 ಗಂಟೆಗೆ ಆರೋಪಿಯನ್ನು ಬಂಧಿಸಲಾಗಿದೆ.

    ಎಸಿಪಿ ಹಲಸೂರು ಕುಮಾರ್ ಗೆ ಮುಂದಿನ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇಂದು ಆರೋಪಿಯನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡೆಸಲಿದ್ದಾರೆ. ವಿಚಾರಣೆಗೆ ಮತ್ತೆ ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ. ಇತ್ತ ಇಬ್ಬರಿಗೂ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಅತ್ಯಾಚಾರ ನಡೆದಿರುವ ಬಗ್ಗೆ ವೈದ್ಯರು ಮೌಕಿಕವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

  • ಜೀವನ್‍ಭೀಮಾ ನಗರ ರೇಪ್‍ಕೇಸ್‍ಗೆ ಟ್ವಿಸ್ಟ್ – ಕ್ಯಾಬ್‍ನಲ್ಲಿ ರೇಪ್ ಮಾಡಿರೋದು ಬೆಳಕಿಗೆ

    ಜೀವನ್‍ಭೀಮಾ ನಗರ ರೇಪ್‍ಕೇಸ್‍ಗೆ ಟ್ವಿಸ್ಟ್ – ಕ್ಯಾಬ್‍ನಲ್ಲಿ ರೇಪ್ ಮಾಡಿರೋದು ಬೆಳಕಿಗೆ

    – ಆರೋಪಿ ಅರೆಸ್ಟ್, ಬಟ್ಟೆಗಳು ಸೀಜ್..!

    ಬೆಂಗಳೂರು: ಜೀವನ್ ಭೀಮಾನಗರದಲ್ಲಿ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ. ಕ್ಯಾಬ್ ನಲ್ಲಿ ಚಾಲಕ ರೇಪ್ ಮಾಡಿರುವುದು ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ ಇಬ್ಬರ ಬಟ್ಟೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಫ್ರೆಂಡ್ ಮನೆಗೆ ಹೋಗಿದ್ದ ಯುವತಿ ವಾಪಸ್ ಕ್ಯಾಬ್ ನಲ್ಲಿ ಬಂದಿದ್ದಾರೆ. ಹೆಚ್‍ಎಸ್‍ಆರ್ ಲೇಔಟ್ ನಿಂದ 3:20ಕ್ಕೆ ಕ್ಯಾಬ್ ಬುಕ್ ಮಾಡಿ ಮರುಗೇಶ್ ಪಾಳ್ಯಕ್ಕೆ ಬಂದಿದ್ದಾರೆ. ಅಲ್ಲಿಂದ ಇಪ್ಪತ್ತು ನಿಮಿಷಕ್ಕೆ ಸ್ಪಾಟ್ ಗೆ ಬಂದಿದ್ದು, ಬೆಳಗ್ಗಿನ ಜಾವ 3.40ರ ಸುಮಾರಿಗೆ ಅತ್ಯಾಚಾರ ನಡೆದಿದೆ. ಮನೆ ಹತ್ತಿರ ಬಂದಾಗ ಚಾಲಕ ದೇವರಾಜು ಅಲಿಯಾಸ್ ದೇವರಾಜುಲು, ನಿದ್ದೆಯಲ್ಲಿದ್ದ ಯುವತಿಯನ್ನು ಎಬ್ಬಿಸಲು ಹೋಗಿದ್ದಾನೆ. ಹೀಗೆ ಹೋದಾಗ ಆತ ಯುವತಿಯ ಮೈ ಮೇಲೆ ಬಿದ್ದಿದ್ದಾನೆ. ಆಗ ಆತ ಮುಂದುವರಿದು ಆಕೆಯ ಬಟ್ಟೆ ಬಿಚ್ಚಿದ್ದಾನೆ, ನಂತರ ತನ್ನ ಮೇಲೆ ತ್ಯಾಚಾರ ಮಾಡಿದ್ದಾನೆ ಎಂಬುದಾಗಿ ವಿಚಾರಣೆ ವೇಳೆ ಯುವತಿ ತಿಳಿಸಿದ್ದಾರೆ.

    ಮೊದಲು ಅವನು ಅವನ ಬಟ್ಟೆ ಬಿಚ್ಚಿದ್ದ, ನಂತರ ನನ್ನ ಬಟ್ಟೆಯನ್ನು ಬಿಚ್ಚಿದ್ದ. ಬಳಿಕ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಯುವತಿ ದೂರಿನ ಹಿನ್ನೆಲೆಯಲ್ಲಿ ಸದ್ಯ ಇಬ್ಬರ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಅರೋಪಿ ಸಹ ಪೊಲೀಸರು ವಶಕ್ಕೆ ಪಡೆಯುವಾಗ ಅದೇ ಬಟ್ಟೆಯಲ್ಲಿ ಇದ್ದ, ಇತ್ತ ಆಕೆಯೂ ಅದೇ ಬಟ್ಟೆಯಲ್ಲಿ ಇದ್ದಳು. ನಂತರ ಇಬ್ಬರ ಬಟ್ಟೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಭಿಕ್ಷೆ ಬೇಡುವಾಗ ತಿಂಡಿ ಆಸೆ ತೋರಿಸಿ 14ರ ಬಾಲಕಿ ಮೇಲೆ ಅತ್ಯಾಚಾರ

    ಬೆಳಗ್ಗಿನ ಜಾವ 112 ಗೆ ಕರೆಮಾಡಿ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಯುವತಿ ಮನೆಗೆ ಹೋಗಿ ಮಾಹಿತಿ ಪಡೆದಿದ್ದಾರೆ. ನಂತರ ಮಹಿಳಾ ಅಧಿಕಾರಿ ಕರೆಸಿ ಠಾಣೆಗೆ ಯುವತಿ ಕರೆದುಕೊಂಡು ಹೋಗಿದ್ದಾರೆ. 7 ಗಂಟೆಗೆ ಎಫ್ ಐ ಆರ್ ದಾಖಲು ಮಾಡಲಾಗಿದೆ. ಅರೋಪಿ ಮೊಬೈಲ್ ಮತ್ತು ಕಾರ್ ನಂಬರ್ ಊಬರ್ ರಿಜಿಸ್ಟರ್ ಅನ್ವಯ ಹುಡುಕಿದ್ದಾರೆ. ಘಟನೆ ಬಳಿಕ ಅವಲಹಳ್ಳಿಯ ತನ್ನ ರೂಮ್ ನಲ್ಲಿದ್ದ ಅರೋಪಿಯನ್ನು 11 ಗಂಟೆ ಸುಮಾರಿಗೆ ಪೊಲೀಸರು ವಶಕ್ಕೆ ಪಡೆದರು. ನಂತರ ವಿಚಾರಣೆ ಬಳಿಕ ಮಧ್ಯಾಹ್ನ 2 ಗಂಟೆಗೆ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಅತ್ಯಾಚಾರ ಆರೋಪ – ಕ್ಯಾಬ್ ಚಾಲಕ ಪೊಲೀಸ್ ವಶಕ್ಕೆ

    ಎಸಿಪಿ ಹಲಸೂರು ಕುಮಾರ್ ಗೆ ಮುಂದಿನ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇಂದು ಆರೋಪಿಯನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡೆಸಲಿದ್ದಾರೆ. ವಿಚಾರಣೆಗೆ ಮತ್ತೆ ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ. ಇತ್ತ ಇಬ್ಬರಿಗೂ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಅತ್ಯಾಚಾರ ನಡೆದಿರುವ ಬಗ್ಗೆ ವೈದ್ಯರು ಮೌಕಿಕವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

  • ಅತ್ಯಾಚಾರ ಆರೋಪ – ಕ್ಯಾಬ್ ಚಾಲಕ ಪೊಲೀಸ್ ವಶಕ್ಕೆ

    ಅತ್ಯಾಚಾರ ಆರೋಪ – ಕ್ಯಾಬ್ ಚಾಲಕ ಪೊಲೀಸ್ ವಶಕ್ಕೆ

    ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕ್ಯಾಬ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾಬ್ ಚಾಲಕನನ್ನು ದೇವರಾಜ್ ಎಂದು ಗುರುತಿಸಲಾಗಿದ್ದು, ಈತ ಆಂಧ್ರ ಮೂಲದವನು. ಬೆಳಗ್ಗಿನ ಜಾವ ಸುಮಾರು 4 ಗಂಟೆಯ ವೇಳೆ ಘಟನೆ ನಡೆದಿದೆ. ಯುವತಿ ಗೆಳತಿಯ ಮನೆಗೆ ಹೋಗಿ ಬರುವಾಗ ಘಟನೆ ನಡೆದಿದೆ. ಸದ್ಯ ಸಂತ್ರಸ್ತೆಯನ್ನು ಮೆಡಿಕಲ್ ಟೆಸ್ಟ್ ಗೆ ಕರೆದುಕೊಂಡು ಹೋಗಲಾಗಿದೆ.

    ಈ ಸಂಬಂಧ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಇಬ್ಬರ ನಡುವೆ ಮಾತುಕತೆ ನಡೆದಿದೆ. ಬಳಿಕ ಯುವತಿ ಈತನನ್ನ ತಳ್ಳಿ ಹೊರಟಿದ್ದಾಳೆ. ಮೊಬೈಲ್ ನಲ್ಲಿ ಕ್ಯಾಬ್ ರೇಟ್ ತೋರಿಸಿದ್ದಾರೆ. ಆ ಬಳಿಕ ಮೊಬೈಲ್ ಕಿತ್ತುಕೊಂಡು ಯುವತಿ ಹೋಗಿದ್ದಾರೆ. ಕ್ಯಾಬ್ ಹಣವನ್ನ ಯುವತಿಯಿಂದ ಚಾಲಕ ಪಡೆದಿಲ್ಲ. ಯುವತಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಾರೆ. ಆ ಬಳಿಕ ಇಬ್ಬರ ನಡುವೆ ಏನಾಗಿದೆ ಗೊತ್ತಿಲ್ಲ. ಚಾಲಕ ರೇಪ್ ಮಾಡಿಲ್ಲ ಅಂತಿದ್ದಾನೆ. ವಿಚಾರಣೆ ನಡೆಯುತ್ತಿದೆ. ಸತ್ಯಾಂಶ ಪರಿಶೀಲನೆ ನಡೆಸುತ್ತಿದ್ದೇವೆ. ಘಟನೆ ಸಂಬಂಧ ಇನ್ನೂ ಎಫ್‍ಐಆರ್ ದಾಖಲಾಗಿಲ್ಲ. ವಿಚಾರಣೆ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ತಿಳಿಸಿದ್ದಾರೆ.

    ಜೀವನ್ ಭೀಮಾನಗರ ಠಾಣೆಗೆ ಸಂತ್ರಸ್ತ ಮಹಿಳೆ ದೂರಿನ ಮೇರೆಗೆ ದೂರು ದಾಖಲಾಗಿದೆ. ತಕ್ಷಣ ಪೊಲೀಸ್ ಕಾರ್ಯಪ್ರವೃತ್ತರಾಗಿದ್ದಾರೆ. ಮೂರು ತಂಡ ರಚಿಸಿ ಆರೋಪಿ ಪತ್ತೆ ಕೆಲಸ ಮಾಡಲಾಗಿದೆ. ಕಂಪ್ಲೆಂಟ್ ಬಂದಿದೆ ಐಪಿಸಿ ಸಿಆರ್ ಪಿಸಿ ಅಡಿ ತನಿಖೆ ನಡೆಸಲಾಗುತ್ತೆ. ತನಿಖೆ ನಡೆಸಿದ ನಂತ್ರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ತನಿಖೆ ಆದ ನಂತ್ರ ಕೆಲವು ವಿಷಯಗಳು ಗೊತ್ತಾಗಲಿದೆ ಎಂದರು. ಸದ್ಯ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ಯಾಬ್ ಚಾಲಕನನ್ನು ಡಿಸಿಪಿ ಶರಣಪ್ಪ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಫೋಟೋ ಪಾಲಿಟಿಕ್ಸ್-ಮೋದಿ ಭಾವಚಿತ್ರ ಅಳವಡಿಕೆಗೆ ಜೆಡಿಎಸ್ ವಿರೋಧ

    ಏನಿದು ಘಟನೆ..?
    ಕ್ಯಾಬ್ ಚಾಲಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಈ ಘಟನೆ ಹೆಚ್ ಎಸ್ ಆರ್ ಲೇಔಟ್‍ನ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ. ಆರೋಪ ಮಾಡಿರುವ ಯುವತಿ ಜೀವನ್ ಭೀಮಾನಗರದಲ್ಲಿ ಕೆಲಸ ಮಾಡುತ್ತಿದ್ದಾಳೆ. ನಿನ್ನೆ ರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳಲು ಈಕೆ ಕ್ಯಾಬ್ ಬುಕ್ ಮಾಡಿದ್ದಳಂತೆ. ಹೀಗೆ ಕ್ಯಾಬ್ ಬಂದು ಯುವತಿ ಮುಂದೆ ಬಂದು ನಿಂತಿದ್ದು, ಆಕೆಯ ಕ್ಯಾಬ್ ಏರಿದ್ದಾಳೆ. ನಂತರ ಆಕೆ ಚಾಲಕನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾಳೆ.

    ಇತ್ತ ಕ್ಯಾಬ್ ಚಾಲಕ, ಯುವತಿ ಕುಡಿದ ಮತ್ತಿನಲ್ಲಿದ್ದಳು. ಅರೆಪ್ರೆಜ್ಞೆ ಅವಸ್ಥೆಯಲ್ಲಿದ್ದ ಯುವತಿ, ಮನೆ ಜಾಗ ಬಂದರೂ ಇಳಿಯಲಿಲ್ಲ. ಹೀಗಾಗಿ ಆಕೆಯನ್ನು ಇಳಿಸಲು ಹೋದೆ. ಆಗ ಆಕೆ ನನ್ನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ಸದ್ಯ ಘಟನೆ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

  • ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನ ವಿರುದ್ಧ ಯುವತಿ ಅತ್ಯಾಚಾರ ಆರೋಪ!

    ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನ ವಿರುದ್ಧ ಯುವತಿ ಅತ್ಯಾಚಾರ ಆರೋಪ!

    ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ದಿನಾ ಬೆಳಗಾದರೆ ಅತ್ಯಾಚಾರದಂತಹ ಸುದ್ದಿಗಳನ್ನು ಕೇಳುತ್ತಿದ್ದೇವೆ. ಅದೇ ರೀತಿ ಇದೀಗ ಮತ್ತೊಂದು ಇಂತದ್ದೇ ಆರೋಪವೊಂದು ಕ್ಯಾಬ್ ಚಾಲಕನ ವಿರುದ್ಧ ಕೇಳಿಬಂದಿದೆ.

    ಹೌದು. ಕ್ಯಾಬ್ ಚಾಲಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಈ ಘಟನೆ ಹೆಚ್ ಎಸ್ ಆರ್ ಲೇಔಟ್‍ನ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ.

    ಆರೋಪ ಮಾಡಿರುವ ಯುವತಿ ಜೀವನ್ ಭೀಮಾನಗರದಲ್ಲಿ ಕೆಲಸ ಮಾಡುತ್ತಿದ್ದಾಳೆ. ನಿನ್ನೆ ರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳಲು ಈಕೆ ಕ್ಯಾಬ್ ಬುಕ್ ಮಾಡಿದ್ದಳಂತೆ. ಹೀಗೆ ಕ್ಯಾಬ್ ಬಂದು ಯುವತಿ ಮುಂದೆ ಬಂದು ನಿಂತಿದ್ದು, ಆಕೆಯ ಕ್ಯಾಬ್ ಏರಿದ್ದಾಳೆ. ನಂತರ ಆಕೆ ಚಾಲಕನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾಳೆ. ಇದನ್ನೂ ಓದಿ: ಸೆಸ್ ಸಂಸ್ಥೆಯಲ್ಲಿರುವವರೆಲ್ಲ RSSನವರು: ಸಿದ್ದರಾಮಯ್ಯ

    ಇತ್ತ ಕ್ಯಾಬ್ ಚಾಲಕ ಈ ಬಗ್ಗೆ ಪ್ರತಿಕ್ರಿಯಿಸಿ, ಯುವತಿ ಕುಡಿದ ಮತ್ತಿನಲ್ಲಿದ್ದಳು. ಅರೆಪ್ರೆಜ್ಞೆ ಅವಸ್ಥೆಯಲ್ಲಿದ್ದ ಯುವತಿ, ಮನೆ ಜಾಗ ಬಂದರೂ ಇಳಿಯಲಿಲ್ಲ. ಹೀಗಾಗಿ ಆಕೆಯನ್ನು ಇಳಿಸಲು ಹೋದೆ. ಆಗ ಆಕೆ ನನ್ನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ಸದ್ಯ ಘಟನೆ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ:  ಮಸೀದಿಗಳಿಗಾಗಿ ಕೆಡವಿದ ದೇವಸ್ಥಾನಗಳ ಮರು ನಿರ್ಮಾಣ: ಸಂಗೀತ್ ಸೋಮ್

  • ಫೋನ್ ಪೇ ಮೂಲಕ ಲಂಚ ಪಡೆದ ಪಿಎಸ್‍ಐ ಅಮಾನತು

    ಫೋನ್ ಪೇ ಮೂಲಕ ಲಂಚ ಪಡೆದ ಪಿಎಸ್‍ಐ ಅಮಾನತು

    ತುಮಕೂರು: ಫೋನ್ ಪೇ ಮೂಲಕ ಲಂಚ ಪಡೆದ ಜಿಲ್ಲೆಯ ಗುಬ್ಬಿ ಟೌನ್ ಠಾಣೆಯ ಪಿಎಸ್ ಐ ಜ್ಞಾನಮೂರ್ತಿಯನ್ನು ಅಮಾನತುಗೊಳಿಸಿ ಎಸ್‍ಪಿ ಆದೇಶಿಸಿದ್ದಾರೆ.

    ಕಳೆದ ವಾರ ವಿನಾಕಾರಣ ಮ್ಯಾಕ್ಸಿಕ್ಯಾಬ್ ವೊಂದನ್ನು ತಡೆದು ಚಾಲಕನಿಗೆ ಕಿರುಕುಳ ನೀಡಿದ ಆರೋಪವನ್ನು ಪಿಎಸ್‍ಐ ಎದುರಿಸುತ್ತಿದ್ದರು. ಕ್ಯಾಬ್ ಚಾಲಕನಿಂದ 7 ಸಾವಿರ ರೂ. ಲಂಚವನ್ನು ಫೋನ್ ಪೇ ಮೂಲಕ ಪಿಎಸ್‍ಐ ಪಡೆದುಕೊಂಡಿದ್ದರು. ಜೀಪ್ ಚಾಲಕ ಕರಿಯಪ್ಪರ ಮೊಬೈಲ್ ನಂಬರಿಗೆ ಪಿಎಸ್‍ಐ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡದ್ದರು. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಪಿಎಸ್‍ಐ ದೌರ್ಜನ್ಯ ಖಂಡಿಸಿ ಚಾಲಕರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್‍ಐ ಜ್ಞಾನಮೂರ್ತಿಯನ್ನು ಅಮಾನತ್ತು ಮಾಡಿ ತುಮಕೂರು ಎಸ್‍ಪಿ ರಾಹುಲ್ ಕುಮಾರ್ ಶಹಾಪುರ್ ಆದೇಶಿಸಿದ್ದಾರೆ.

  • ಕ್ಯಾಬ್ ಚಾಲಕನಿಗೆ ಥಳಿಸಿದ್ದ ಮಹಿಳೆ ವಿರುದ್ಧ ಎಫ್‍ಐಆರ್

    ಕ್ಯಾಬ್ ಚಾಲಕನಿಗೆ ಥಳಿಸಿದ್ದ ಮಹಿಳೆ ವಿರುದ್ಧ ಎಫ್‍ಐಆರ್

    ಲಕ್ನೋ: ನಡು ರಸ್ತೆಯಲ್ಲಿಯೇ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಮಹಿಳೆ ವಿರುದ್ಧ ಇದೀಗ ಎಫ್‍ಐಆರ್ ದಾಖಲಾಗಿದೆ.

    ಲಕ್ನೋ ಟ್ರಾಫಿಕ್ ಸಿಗ್ನಲ್‍ನಲ್ಲಿ ಕ್ಯಾಬ್ ಚಾಲಕನಿಗೆ ಹಿಂದೆ-ಮುಂದೆ ನೋಡದೇ ಮಹಿಳೆ ಹಿಗ್ಗಾಮುಗ್ಗ ಥಳಿಸಿದ್ದ ವೀಡಿಯೋ ಸಿಸಿಟಿವಿ ಫೋಟೇಜ್‍ನಲ್ಲಿ ಸೆರೆಯಾಗಿತ್ತು. ಅಲ್ಲದೇ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

    ಇದೀಗ ರಸ್ತೆಯಲ್ಲಿ ಕ್ಯಾಬ್ ಡ್ರೈವರ್ ಗೆ ಕಪಾಳಮೋಕ್ಷ ಮಾಡಿದ ಮಹಿಳೆ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರಾದ (ಡಿಸಿಪಿ) ಚಿರಂಜೀವ್ ನಾಥ್ ಸಿನ್ಹಾ ತಿಳಿಸಿದ್ದಾರೆ. ವೀಡಿಯೋದಲ್ಲಿ ಹಲ್ಲೆಗೊಳಗಾದ ವ್ಯಕ್ತಿಯಿಂದ ನಾವು ದೂರು ಸ್ವೀಕರಿಸುತ್ತಿದ್ದು, ಕೃಷ್ಣ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

    ವೀಡಿಯೋದಲ್ಲಿ ಬಿಳಿ ಶರ್ಟ್ ಧರಿಸಿದ್ದ ಮಹಿಳೆ ಜೀಬ್ರಾ ಕ್ರಾಸಿಂಗ್ ಮಧ್ಯೆ ನಿಂತು ಕ್ಯಾಬ್ ಚಾಲಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿ ಟ್ರಾಫಿಕ್ ಜಾಮ್ ಆಗಿದೆ. ಈ ವಿಚಾರವಾಗಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಜಗಳವನ್ನು ತಪ್ಪಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೂ ಮಹಿಳೆ ಬಿಡದೇ ಚಾಲಕನನ್ನು ಎಳೆದಾಡಿಕೊಂಡು ಕಪಾಳಕ್ಕೆ ಹೊಡೆಯುತ್ತಲೇ ಇರುತ್ತಾರೆ. ಈ ವೇಳೆ ಚಾಲಕನ ಮೊಬೈಲ್‍ನನ್ನು ಮಹಿಳೆ ಒಡೆದು ಹಾಕಿದ್ದಾರೆ. ಆಗ ಮಹಿಳಾ ಪೊಲೀಸ್ ಠಾಣೆಗೆ ಕರೆ ಮಾಡುವಂತೆ ಕ್ಯಾಬ್ ಚಾಲಕ ಸ್ಥಳೀಯರಿಗೆ ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ:ನಡು ರಸ್ತೆಯಲ್ಲಿ ಕ್ಯಾಬ್ ಡ್ರೈವರ್​​​ಗೆ ಹಿಗ್ಗಾಮುಗ್ಗ ಥಳಿಸಿದ ಯುವತಿ

  • ಕೊರೊನಾ ಭೀತಿ – ಚಾಲಕನಿಂದ ಪ್ರಯಾಣಿಕರಿಗೆ ಉಚಿತ ಮಾಸ್ಕ್ ವಿತರಣೆ

    ಕೊರೊನಾ ಭೀತಿ – ಚಾಲಕನಿಂದ ಪ್ರಯಾಣಿಕರಿಗೆ ಉಚಿತ ಮಾಸ್ಕ್ ವಿತರಣೆ

    ಬೆಂಗಳೂರು: ಕೊರೊನಾದಿಂದ ತಪ್ಪಿಸಿಕೊಳ್ಳಲು ನಗರದ ಕ್ಯಾಬ್ ಚಾಲಕರೊಬ್ಬರು ಪ್ರಯಾಣಿಕರಿಗೆ ಉಚಿತ ಮಾಸ್ಕ್ ಹಂಚುತ್ತಿದ್ದಾರೆ.

    ಆಜಂ ಖಾನ್ ವೃತ್ತಿಯಲ್ಲಿ ಡ್ರೈವರ್ ಆಗಿದ್ದು, ತಮ್ಮ ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ಮಾಸ್ಕ್ ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಯಾಣಿಕರೊಬ್ಬರು ಆಜಂ ಖಾನ್ ಅವರಿಗೆ ಮಾಸ್ಕ್ ಉಡುಗೊರೆಯನ್ನಾಗಿ ನೀಡಿದ್ದರು. ಇದಾದ ಬಳಿಕ ಆಜಂ ತಾವು ಕೂಡ ಮಾಸ್ಕ್ ನೀಡುವ ಮೂಲಕ ಜನರಿಗೆ ಅರಿವು ಮೂಡಿಸಲು ನಿರ್ಧರಿಸಿದ್ದರು.

    ಪ್ರತಿದಿನ ಆಜಂ ಖಾನ್ 10ಕ್ಕೂ ಹೆಚ್ಚು ಮಾಸ್ಕ್ ಗಳನ್ನು ಖರೀದಿಸುತ್ತಾರೆ. ಒಂದು ಮಾಸ್ಕ್ ನ ಬೆಲೆ 30ರಿಂದ 40 ರೂ. ಇರುತ್ತದೆ. ಆಜಂ ಪ್ರಯಾಣಿಕರಿಗೆ ಮೊದಲು ಅವರ ಬಳಿ ಮಾಸ್ಕ್ ಇದೆಯಾ ಎಂದು ಕೇಳುತ್ತಾರೆ. ಅವರ ಇಲ್ಲ ಎಂದರೆ ಮಾತ್ರ ಮಾಸ್ಕ್ ಅನ್ನು ನೀಡುತ್ತಾರೆ. ಅಲ್ಲದೆ ಕ್ಯಾಬ್‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಎಸಿ ಆಫ್ ಇರಲಾ ಅಥವಾ ಆನ್ ಇರಲಾ ಎಂಬುದನ್ನು ಕೇಳುತ್ತಿರುತ್ತಾರೆ.

    ಈ ಬಗ್ಗೆ ಮಾತನಾಡಿದ ಆಜಂ ಖಾನ್, ಕ್ಯಾಬ್‍ನಲ್ಲಿ ಎಲ್ಲ ತರಹದ ಜನರು ಪ್ರಯಾಣಿಸುತ್ತಾರೆ. ಕ್ಯಾಬ್ ಕೂಡ ಪಬ್ಲಿಕ್ ಪ್ಲೇಸ್‍ನಂತೆ, ಇಲ್ಲಿ ಎಲ್ಲಾ ರೀತಿಯ ಪ್ರಯಾಣಿಕರು ಬರುತ್ತಾರೆ. ಕೆಲವು ಬಾರಿ ನಾನು ಏರ್ ಪೋರ್ಟ್‍ಗೂ ಹೋಗುತ್ತೇನೆ. ಈ ವೈರಸ್ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಬಹಳ ಮುಖ್ಯ. ನಾನು ಅದನ್ನು ತೆಗೆದುಕೊಂಡು ಜನರಿಗೆ ಅದರ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಸೋಮವಾರ ಮಾರುಕಟ್ಟೆಯಲ್ಲಿ ಮಾಸ್ಕ್ ಗಳು ಖಾಲಿ ಆಗಿದ್ದವು. ಆದರೂ ಕೆಲ ಪ್ರಯಾಣಿಕರಿಗೆ ಮಾಸ್ಕ್ ಹಂಚುತ್ತೇನೆ ಎಂದರು.

  • ಎಲ್ಲೆಂದರಲ್ಲಿ ಭಿಕ್ಷೆ ಬೇಡದೆ ಇತರರಿಗೆ ಮಾದರಿಯಾದ ತೃತೀಯ ಲಿಂಗಿ

    ಎಲ್ಲೆಂದರಲ್ಲಿ ಭಿಕ್ಷೆ ಬೇಡದೆ ಇತರರಿಗೆ ಮಾದರಿಯಾದ ತೃತೀಯ ಲಿಂಗಿ

    ಭುವನೇಶ್ವರ್: ತೃತೀಯ ಲಿಂಗಿ ರಾಣಿ ಕಿಣ್ಣರ್ ದೇಶದ ಮೊದಲ ಉಬರ್ ಕ್ಯಾಬ್ ಡ್ರೈವರ್ ಆಗಿದ್ದು, ಸದ್ಯ ಉಬರ್ ಕಂಪನಿಯ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಣಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಫುಟ್ ಪಾತ್ ನಲ್ಲಿ ಭಿಕ್ಷೆ ಬೇಡುವುದನ್ನು ನಿರಾಕರಿಸಿದ್ದಾರೆ. ಹೀಗಾಗಿ ಸಮಾಜದಲ್ಲಿ ಧೈರ್ಯವಾಗಿ ಮೆಟ್ಟಿ ನಿಂತು ಇತರರಿಗೆ ಮಾದರಿಯಾಗಿದ್ದಾರೆ.

    ರಾಣಿ 2016ರಲ್ಲಿ ಆಟೋ ರಿಕ್ಷಾ ತೆಗೆದುಕೊಂಡು ಆ ಮೂಲಕ ತಮ್ಮ ಜೀವನ ನಡೆಸಿಕೊಳ್ಳಲು ಆರಂಭಿಸಿದ್ದರು. ಆದರೆ ರಾಣಿ ತೃತೀಯ ಲಿಂಗಿ ಎಂಬ ಕಾರಣಕ್ಕೆ ಯಾರೂ ಅವರ ಆಟೋವನ್ನು ಬಳಸಿಕೊಂಡಿರಲಿಲ್ಲ. ಸಮಾಜದಲ್ಲಿ ತನಗೆ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಬೇಸರಗೊಂಡ ರಾಣಿ, ಪುರಿ ಪವಿತ್ರ ರಥ ಯಾತ್ರೆಯ ಸಂದರ್ಭದಲ್ಲಿ ಅಂಬುಲೆನ್ಸ್ ಡ್ರೈವರ್ ಆಗುವ ಮೂಲಕ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.

    2016ರಲ್ಲಿ ನಾನು ಆಟೋ ಮೂಲಕ ಚಾಲಕ ವೃತ್ತಿಯನ್ನು ಆರಂಭಿಸಿದೆ. ಆದರೆ ಆ ಕೆಲಸ ನನ್ನ ಕೈ ಹಿಡಿಯಲಿಲ್ಲ. ಯಾಕೆಂದರೆ ಜನರು ನನ್ನ ಆಟೋವನ್ನು ಬಳಸಿಕೊಂಡಿಲ್ಲ. ನಂತರ 2017ರಲ್ಲಿ ಪುರಿ ರಥಯಾತ್ರೆಯ ಸಂದರ್ಭದಲ್ಲಿ ಅಂಬ್ಯುಲೆನ್ಸ್ ನಲ್ಲಿ ಕೆಲಸ ಮಾಡಿದೆ ಎಂದು ರಾಣಿ ತಿಳಿಸಿದ್ದಾರೆ.

    ಮಾಜಿ ಕ್ಯಾಬ್ ಚಾಲಕರೊಬ್ಬರು ಉಬರ್ ಕಂಪನಿಗೆ ರಾಣಿಯನ್ನು ಪರಿಚಯ ಮಾಡಿಸಿಕೊಟ್ಟರು. ಅಲ್ಲದೆ ಈ ಮೂಲಕ ತಮ್ಮ ಪಾರ್ಟ್ನರ್  ಆಗಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದರು. ಅಂತೆಯೇ ಕಂಪನಿ ನಡೆಸಿದ ಸಂದರ್ಶನದಲ್ಲಿ ಪಾಸಾದ ರಾಣಿ, ನಂತರ ತಾನೇ ಕಾರೊಂದನ್ನು ಖರೀದಿಸಿದರು.

    ಸದ್ಯ ರಾಣಿ ಅವರು ಇತರ ತೃತೀಯ ಲಿಂಗಿಗಳಿಗೆ ಮಾದರಿಯಾಗಿ ನಿಂತಿದ್ದಾರೆ. ಕೇವಲ ಬೀದಿಯಲ್ಲಿ ಭಿಕ್ಷೆ ಬೇಡದೇ ಧೈರ್ಯವಾಗಿ ಮುನ್ನುಗ್ಗಿ, ಸಮಾಜದಲ್ಲಿ ತಮಗೆ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತರೆ ನಾವು ಕೂಡ ಇತರರಂತೆ ಜೀವನ ನಡೆಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.

    ರಾಣಿ ಮೇಡಂ ಅವರನ್ನು ನೋಡಿ, ಆಕೆಯ ಅಭಿಮಾನಿಯಾಗಿದ್ದೇನೆ. ಅಲ್ಲದೆ ನಾನು ಕೂಡ ಓರ್ವ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೇನೆ. ಈ ಮೂಲಕ ನನಗೆ ಅವರು ಸ್ಫೂರ್ತಿಯಾಗಿದ್ದಾರೆ. ಪುರುಷ ಚಾಲಕರಿಗೆ ಹೋಲಿಸಿದರೆ ವಿಶೇಷವಾಗಿ ರಾತ್ರಿ ಹೊತ್ತು ಪ್ರಯಾಣ ಮಾಡುವ ಹುಡುಗಿಯರು ಸುರಕ್ಷತೆಯ ದೃಷ್ಟಿಯಿಂದ ನನ್ನ ಕ್ಯಾಬನ್ನೇ ಆಯ್ಕೆ ಮಾಡುತ್ತಾರೆ ಎಂದು ಒಡಿಶಾದ ಮತ್ತೊಬ್ಬ ತೃತೀಯ ಲಿಂಗಿ ಸ್ನೇಹಶ್ರೀ ಹೇಳಿದ್ದಾರೆ.