Tag: ಕ್ಯಾಬ್

  • ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಕ್ಯಾಬ್, ಟ್ಯಾಕ್ಸಿಗಳಿಗೆ ಪ್ರವೇಶ ದರ ನಿಗದಿ

    ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಕ್ಯಾಬ್, ಟ್ಯಾಕ್ಸಿಗಳಿಗೆ ಪ್ರವೇಶ ದರ ನಿಗದಿ

    – ಭಾರೀ ವಿರೋಧ ವ್ಯಕ್ತವಾಗ್ತಿದ್ದಂತೆ ತಾತ್ಕಾಲಿಕ ಬ್ರೇಕ್

    ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport, Bengaluru) ಕ್ಯಾಬ್ ಮತ್ತು ಟ್ಯಾಕ್ಸಿಗಳಿಗೆ ಪ್ರವೇಶ ದರ ನಿಗದಿ ಮಾಡಿದೆ. ಏರ್‌ಪೋರ್ಟ್ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.

    ಹೌದು. ಪ್ರಯಾಣಿಕರನ್ನ ಪಿಕಪ್ ಮಾಡಲು ಪ್ರವೇಶ ದರ 07 ನಿಮಿಷಕ್ಕೆ 150 ರೂ. ಪಾವತಿಸಬೇಕು. ಇನ್ನು 07 ನಿಮಿಷಕ್ಕಿಂತ ಹೆಚ್ಚು ಕಾಲ ನಿಂತರೆ 300 ರೂ. ಪಾವತಿ ಮಾಡಬೇಕು. ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಕಳೆದ ಭಾನುವಾರ ಈ ಹೊಸ ನಿಯಮವನ್ನ ಜಾರಿ ಮಾಡಿತ್ತು. ಇದನ್ನೂ ಓದಿ: ಜಾಮೀನು ಸಿಕ್ಕರೂ ರೇವಣ್ಣಗೆ ತಪ್ಪಿಲ್ಲ ಸಂಕಷ್ಟ- ಹೈಕೋರ್ಟ್ ಮೆಟ್ಟಿಲೇರಿದ ಎಸ್‍ಐಟಿ

    ಆಡಳಿತ ಮಂಡಳಿಯ ದರ ನಿಗದಿ ಕ್ರಮಕ್ಕೆ ಯಲ್ಲೋ ಹಾಗೂ ವೈಟ್ ಬೋರ್ಡ್ ಚಾಲಕರು ಕಂಗಾಲಾಗಿದ್ದರು. ಅಲ್ಲದೇ ದರ ನಿಗದಿ ವಿರೋಧಿಸಿ ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರು ಸೋಮವಾರ ಪ್ರತಿಭಟನೆ ಮಾಡುವ ಮೂಲಕ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಟ್ತಾಕ್ಸಿ ಮತ್ತು ಕ್ಯಾಬ್ ಚಾಲಕರು (Taxi anf Cab Drivers) ನಿನ್ನೆ ಪ್ರತಿಭಟನೆ ಮಾಡಿದ್ದ ಪರಿಣಾಮ ದರ ನಿಗದಿ ಸಂಗ್ರಹಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.

    ಇತ್ತ ಸದ್ಯಕ್ಕೆ ಬ್ರೇಕ್ ಹಾಕಿರುವ ಆಡಳಿತ ಮಂಡಳಿಯವರು ಮತ್ತೆ ಶುರು ಮಾಡುತ್ತಾರೆ ಎಂದು ಏರ್‌ಪೋರ್ಟ್ ಟ್ಯಾಕ್ಸಿ ಚಾಲಕರು ಇಂದು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನ ಭೇಟಿ ಮಾಡಲು ಮುಂದಾಗಿದ್ದಾರೆ.

  • ಹೊರ ರಾಜ್ಯದ ನೋಂದಣಿ ಕ್ಯಾಬ್‌ಗಳಿಗಿಲ್ಲ ದೆಹಲಿ ಪ್ರವೇಶ

    ಹೊರ ರಾಜ್ಯದ ನೋಂದಣಿ ಕ್ಯಾಬ್‌ಗಳಿಗಿಲ್ಲ ದೆಹಲಿ ಪ್ರವೇಶ

    ನವದೆಹಲಿ: ಇತರ ರಾಜ್ಯಗಳಲ್ಲಿ ನೋಂದಾಯಿಸಲಾದ (Registration) ಅಪ್ಲಿಕೇಶನ್ ಆಧಾರಿತ ಕ್ಯಾಬ್‌ಗಳ (Cab) ಪ್ರವೇಶವನ್ನು ನಿಷೇಧಿಸುವುದಾಗಿ ಬುಧವಾರ ದೆಹಲಿ ಸರ್ಕಾರ ಘೋಷಿಸಿದೆ. ದೆಹಲಿ ಸಾರಿಗೆ ಇಲಾಖೆಯಿಂದ ನಿಷೇಧವು ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಕುರಿತು ಪ್ರತ್ಯೇಕ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಹೇಳಿದೆ.

    ಮಾಲಿನ್ಯಕ್ಕೆ (Pollution) ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಈ ಆದೇಶ ಹೊರಡಿಸಿದೆ. ದೆಹಲಿ ಸರ್ಕಾರದ ಆದೇಶದ ಪ್ರಕಾರ, ದೆಹಲಿಯ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕ್ಯಾಬ್‌ಗಳನ್ನು ಮಾತ್ರ ನಗರದೊಳಗೆ ಓಡಿಸಲು ಅನುಮತಿಸಲಾಗುವುದು. ಇದನ್ನೂ ಓದಿ: ಮಹಿಳೆಯರ ಕುರಿತು ವಿವಾದಿತ ಹೇಳಿಕೆ – ಕ್ಷಮೆ ಕೇಳಿದ ನಿತೀಶ್ ಕುಮಾರ್

    ಕಳೆದ ಐದು ದಿನಗಳ ಬಳಿಕ ವಾಯು ಮಾಲಿನ್ಯವು ತೀವ್ರ ಕಳಪೆಯಿಂದ ಕಳಪೆ ಗುಣಮಟ್ಟಕ್ಕೆ ಮರಳಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಅಂಕಿಅಂಶಗಳ ಪ್ರಕಾರ, ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (IQA) ಬೆಳಗ್ಗೆ 7 ಗಂಟೆಗೆ 421ಕ್ಕೆ ದಾಖಲಾಗಿದೆ. ಇದನ್ನೂ ಓದಿ: ಕೆಲಸವಿಲ್ಲದ ನಿರುದ್ಯೋಗಿ ನಾಯಕರಿಂದ ಚಪಲಕ್ಕೆ ಆಪರೇಷನ್ ಕಮಲದ ಪ್ರಯತ್ನ: ಡಿಕೆಶಿ ವಾಗ್ದಾಳಿ

    ಅಪಾಯಕಾರಿ ಗಾಳಿಯ ಗುಣಮಟ್ಟದ ದೃಷ್ಟಿಯಿಂದ ಜಿಆರ್‌ಎಪಿ ಹಂತದ ಐವಿ ಅಡಿಯಲ್ಲಿ ನಿರ್ಬಂಧಗಳನ್ನು ಹೊಂದಿದ್ದರೂ ಮಾಲಿನ್ಯಕಾರಕ ವಾಹನಗಳು ಮುಕ್ತವಾಗಿ ನಗರವನ್ನು ಪ್ರವೇಶಿಸುತ್ತಿವೆ ಮತ್ತು ಗಡಿಗಳಲ್ಲಿ ಸರಿಯಾದ ತಪಾಸಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಇದನ್ನೂ ಓದಿ: ಬೆಂಗಳೂರು ಕುಡಿಯುವ ನೀರಿಗೆ ಕಾವೇರಿಯಿಂದ 24 ಟಿಎಂಸಿ ಬಳಕೆ: ಡಿಕೆಶಿ

    ದೆಹಲಿಯಲ್ಲಿನ ಮಾಲಿನ್ಯ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್ ಬಹಳ ನಿಕಟವಾಗಿ ಗಮನಿಸುತ್ತಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಪರಿಸರ ಮತ್ತು ಸಾರಿಗೆ ಆಯುಕ್ತರಿಗೆ ನಿರ್ದೇಶನಗಳನ್ನು ನೀಡಿದೆ. ಇದನ್ನೂ ಓದಿ: ಅಮಿತ್‌ ಶಾ ರಥಕ್ಕೆ ಕರೆಂಟ್‌ ಶಾಕ್‌ – ಅಪಾಯದಿಂದ ಪಾರು

  • ಶಕ್ತಿ ಯೋಜನೆಯಿಂದ ಲಾಸ್ – ಜು.27ಕ್ಕೆ ಆಟೋ, ಕ್ಯಾಬ್, ಖಾಸಗಿ ಬಸ್ ಸಂಚಾರ ಬಂದ್

    ಶಕ್ತಿ ಯೋಜನೆಯಿಂದ ಲಾಸ್ – ಜು.27ಕ್ಕೆ ಆಟೋ, ಕ್ಯಾಬ್, ಖಾಸಗಿ ಬಸ್ ಸಂಚಾರ ಬಂದ್

    ಬೆಂಗಳೂರು: ಜು.27 ರಂದು ಆಟೋ (Auto), ಕ್ಯಾಬ್ ಹಾಗೂ ಖಾಸಗಿ ಬಸ್‍ಗಳ (Private Bus) ಮಾಲೀಕರು ಹಾಗೂ ಚಾಲಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದರಿಂದಾಗಿ ಜು.26ರ ಮಧ್ಯರಾತ್ರಿ 12 ರಿಂದ 27ರ ಮಧ್ಯರಾತ್ರಿಯ ವರೆಗೂ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್‍ಗಳು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ.

    ರಾಜ್ಯ ಸರ್ಕಾರದ ಕೆಲವು ನೀತಿಗಳಿಂದ ಖಾಸಗಿ ಸಾರಿಗೆಗೆ ನಷ್ಟವಾಗುತ್ತಿದೆ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಖಾಸಗಿ ಸಾರಿಗೆ ವಾಹನಗಳ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಶಕ್ತಿ ಯೋಜನೆ (Shakti Scheme), ವೈಟ್ ಬೋರ್ಡ್ ವಾಹನವನ್ನ ವಾಣಿಜ್ಯ ವಾಹನವಾಗಿ ಉಪಯೋಗಿಸುತ್ತಿರುವುದು, ದ್ವಿಚಕ್ರ ವಾಹನಗಳಿಗೆ ಮುಕ್ತ ಪರವಾನಿಗೆ ನೀಡುತ್ತಿರುವುದು ಸೇರಿದಂತೆ ಹಲವು ಯೋಜನೆಗಳಿಂದ ಖಾಸಗಿ ಸಾರಿಗೆ ನೆಲ ಕಚ್ಚಿ ಹೋಗಿದೆ ಎಂದು ಖಾಸಗಿ ಸಾರಿಗೆ ಮಾಲೀಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಆಟೋ ಚಾಲಕರ ನಿರ್ಲಕ್ಷ್ಯ ಆರೋಪ- ಬೇಡಿಕೆಗಳ ಈಡೇರಿಕೆಗೆ ಬಂದ್ ಎಚ್ಚರಿಕೆ ಕೊಟ್ಟ ಒಕ್ಕೂಟ

    ಸರ್ಕಾರದ ಈ ನೀತಿಗಳಿಂದ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್ ಚಾಲಕರು ಸಾಲ, ವಿಮೆ ಕಟ್ಟಲು ಮತ್ತು ಜೀವನ ಸಾಗಿಸಲು ಕಷ್ಟಪಡುವಂತಾಗಿದೆ. ಇದರಿಂದ ರಾಜ್ಯದ 23 ಸಾರಿಗೆ ಸಂಘಟನೆಗಳು ಸೇರಿ ಪ್ರತಿಭಟನೆಗೆ ಮುಂದಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ – ಸುಪ್ರೀಂಕೋರ್ಟ್ ಅಸಮಾಧಾನ, ಸ್ವಯಂ ದೂರು ದಾಖಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾಬ್‌ ಬುಕ್‌ ಮಾಡಿದ್ರು; ಪಿಕಪ್‌ ಮಾಡಲು ಬಂದ ಚಾಲಕನನ್ನೇ ಎಳೆದು ಹಾಕಿ ಕ್ಯಾಬ್‌ ಕದ್ದೊಯ್ದರು!

    ಕ್ಯಾಬ್‌ ಬುಕ್‌ ಮಾಡಿದ್ರು; ಪಿಕಪ್‌ ಮಾಡಲು ಬಂದ ಚಾಲಕನನ್ನೇ ಎಳೆದು ಹಾಕಿ ಕ್ಯಾಬ್‌ ಕದ್ದೊಯ್ದರು!

    ಉತ್ತರ ಪ್ರದೇಶ: ಅಗ್ರಿಗೇಟರ್ ಆ್ಯಪ್ ಮೂಲಕ ಕ್ಯಾಬ್ (Cab) ಬುಕ್ ಮಾಡಿದ್ದ ನಾಲ್ವರು, ತಮ್ಮನ್ನು ಕರೆದೊಯ್ಯಲು ಬಂದ ಟ್ಯಾಕ್ಸಿ ಚಾಲಕನನ್ನೇ ಎಳೆದು ಹಾಕಿ ವಾಹನ ಕದ್ದು ಎಸ್ಕೇಪ್‌ ಆಗಿರುವ ಘಟನೆ , ಗುರುಗ್ರಾಮ್‌ನಲ್ಲಿ (Gurugram) ನಡೆದಿದೆ.

    ಕ್ಯಾಬ್ ಚಾಲಕ ಹರೀಶ್ ಕುಮಾರ್ ರಾತ್ರಿ 11 ಗಂಟೆ ಸುಮಾರಿಗೆ ಕ್ಯಾಬ್ ಅಗ್ರಿಗೇಟರ್ ಆ್ಯಪ್‌ನಲ್ಲಿ ಬುಕಿಂಗ್ ಸ್ವೀಕರಿಸಿ ಪಿಕಪ್ ಪಾಯಿಂಟ್ ತಲುಪಿದ್ದರು. ಬುಕ್‌ ಮಾಡಿದ್ದ ನಾಲ್ವರು ಕ್ಯಾಬ್‌ಗಾಗಿ ಕಾದಿದ್ದರು. ಕ್ಯಾಬ್‌ ಹತ್ತಿರ ಬಂದು ಚಾಲಕ ಬುಕಿಂಗ್‌ ಖಚಿತಪಡಿಸಿಕೊಳ್ಳಲು ಮುಂದಾಗಿದ್ದ. ಈ ವೇಳೆ ಚಾಲಕನನ್ನು ಎಳೆದು ಹಾಕಿ ನಾಲ್ವರು ಕಿಡಿಗೇಡಿಗಳು ಕ್ಯಾಬ್‌ ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 12 ಸಾವಿರ ಕೋಟಿ ಮೌಲ್ಯದ 2.5 ಟನ್ ಡ್ರಗ್ಸ್ ಜಪ್ತಿ – ಪಾಕ್ ಆರೋಪಿಯ ಬಂಧನ

    ಚಾಲಕನ ಮೊಬೈಲ್ ಫೋನ್ ಕೂಡ ಕ್ಯಾಬ್ ಒಳಗೆ ಇತ್ತು. ಘಟನೆಗೆ ಸಂಬಂಧಿಸಿದಂತೆ ಸೆಕ್ಟರ್ 10 ಎ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗುರುಗ್ರಾಮ್‌ನಲ್ಲಿ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಪ್ರತಿದಿನ ಸುಮಾರು 9 ವಾಹನ ಕಳ್ಳತನ ಪ್ರಕರಣ ವರದಿಯಾಗುತ್ತಿವೆ. 2022 ರಲ್ಲಿ ಅಕ್ಟೋಬರ್ ವರೆಗೆ 2,893 ವಾಹನಗಳು ಕಳ್ಳತನವಾಗಿವೆ. 2021 ರಲ್ಲಿ 3,014 ವಾಹನಗಳನ್ನು ಕಳವು ಮಾಡಲಾಗಿದೆ. ಇದನ್ನೂ ಓದಿ: CBI ನಿರ್ದೇಶಕರ ಆಯ್ಕೆ ಪಟ್ಟಿಯಲ್ಲಿ ಕರ್ನಾಟಕದ ಡಿಜಿಪಿ ಪ್ರವೀಣ್‌ ಸೂದ್‌ ಹೆಸರು

  • ಕಿರುಕುಳ ವಿರೋಧಿಸಿದ್ದಕ್ಕೆ ತಾಯಿ ಮಗುವನ್ನು ಹೊರದೂಡಿದ ಕ್ಯಾಬ್ ಚಾಲಕ- ಮಗು ಸಾವು

    ಕಿರುಕುಳ ವಿರೋಧಿಸಿದ್ದಕ್ಕೆ ತಾಯಿ ಮಗುವನ್ನು ಹೊರದೂಡಿದ ಕ್ಯಾಬ್ ಚಾಲಕ- ಮಗು ಸಾವು

    ಮುಂಬೈ: ತಾಯಿ (Mother) -ಮಗುವನ್ನು (Baby) ಕ್ಯಾಬ್‍ನಿಂದ (Cab) ತಳ್ಳಿದ ಹಿನ್ನೆಲೆಯಲ್ಲಿ ಮಗು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ (Maharashtra) ಪಾಲ್ಘರ್ ಜಿಲ್ಲೆಯ ಮುಂಬೈ – ಹೆದ್ದಾರಿಯಲ್ಲಿ ನಡೆದಿದೆ.

    ಮಹಿಳೆ ಮತ್ತು ಅವಳ ಮಗಳು ಪೆಲ್ಹಾರ್‌ನಿಂದ ವಾಡಾ ತಹಸಿಲ್‍ನ ಪೊಶೆರೆಗೆ ಕ್ಯಾಬ್‍ನಲ್ಲಿ ಹಿಂತಿರುಗುತ್ತಿದ್ದರು. ಕ್ಯಾಬ್‍ನಲ್ಲಿ ಮಹಿಳೆಯು, ಇತರ ಕೆಲವು ಪ್ರಯಾಣಿಕರೊಂದಿಗೆ ಎಂಬುದನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತಾಯಿ ಮತ್ತು 2 ವರ್ಷದ ಮಗು ಕ್ಯಾಬ್‍ನಲ್ಲಿ ಚಲಿಸುತ್ತಿದ್ದಾಗ, ಸಹ ಪ್ರಯಾಣಿಕ ಹಾಗೂ ಚಾಲಕ ಮಹಿಳೆಗೆ ಕಿರುಕುಳ ನೀಡಿದ್ದಾರೆ.

    CRIME COURT

    ಆದರೆ ಮಹಿಳೆಯೂ ಇದನ್ನು ವಿರೋಧಿಸಿದ್ದಾಳೆ. ಈ ವೇಳೆ ಸಹಪ್ರಯಾಣಿಕ ಮಹಿಳೆಯನ್ನು ಮತ್ತು ಆಕೆಯ ಮಗುವನ್ನು ಕಾರ್‍ನಿಂದ ಹೊರಗೆ ದೂಡಿದ್ದಾನೆ. ಇದರ ಪರಿಣಾಮವಾಗಿ ಮಹಿಳೆ ಹಾಗೂ ಮಗು ಚಲಿಸುತ್ತಿದ್ದ ಕ್ಯಾಬ್‍ನಿಂದ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹೆಣ್ಣು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಇದನ್ನೂ ಓದಿ: ನೀರು ತುಂಬಿದ್ದ ಬಕೆಟ್‌ಗೆ ಬಿದ್ದು 10 ತಿಂಗಳ ಕಂದಮ್ಮ ಸಾವು

    ಘಟನೆಗೆ ಸಂಬಂಧಿಸಿದಂತೆ ಮಾಂಡವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಹುಡುಕುತ್ತಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಆರೋಪ – ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿ 7 ಮಂದಿ ವಿರುದ್ಧ FIR

    Live Tv
    [brid partner=56869869 player=32851 video=960834 autoplay=true]

  • ಒಟಿಪಿ ವಿಚಾರಕ್ಕೆ ಗ್ರಾಹಕನನ್ನೇ ಕೊಂದ ಒಲಾ ಕ್ಯಾಬ್ ಡ್ರೈವರ್

    ಒಟಿಪಿ ವಿಚಾರಕ್ಕೆ ಗ್ರಾಹಕನನ್ನೇ ಕೊಂದ ಒಲಾ ಕ್ಯಾಬ್ ಡ್ರೈವರ್

    ಚೆನ್ನೈ: ಒಟಿಪಿ ಕೊಡುವಾಗ ತಡ ಮಾಡಿದ ವಿಚಾರಕ್ಕೆ ಓಲಾ ಕ್ಯಾಬ್ ಡ್ರೈವರ್ ಪ್ರಯಾಣಿಕನನ್ನು ಹೊಡೆದು ಕೊಂದಿರುವ ಘಟನೆ ಚೆನ್ನೈನ ಹಳೆ ಮಹಾಬಳಿಪುರಂ ರಸ್ತೆಯಲ್ಲಿ ನಡೆದಿದೆ. ಗುಡುವಂಚೇರಿಯ ಉಮೇಂದರ್ ಕೊಲೆಯಾದ ವ್ಯಕ್ತಿ.

    ಕೊಯಮತ್ತೂರಿನಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡಿಕೊಂಡಿದ್ದ ಉಮೇಂದರ್ ತನ್ನ ಪತ್ನಿ, ಇಬ್ಬರು ಮಕ್ಕಳು, ನಾದಿನಿ ಹಾಗೂ ಅವರ ಇಬ್ಬರು ಮಕ್ಕಳೊಂದಿಗೆ ನವಲೂರಿನ ಮಾಲ್‌ಗೆ ತೆರಳಿದ್ದರು. ಚಲನಚಿತ್ರ ವೀಕ್ಷಣೆ ಬಳಿಕ ಮನೆಗೆ ವಾಪಸ್ ಆಗಲು ಉಮೇಂದರ್ ಪತ್ನಿ ಓಲಾ ಕ್ಯಾಬ್ ಬುಕ್ ಮಾಡಿದ್ದರು.

     

    crime

    ಕ್ಯಾಬ್ ಅವರಿದ್ದ ಸ್ಥಳಕ್ಕೆ ಬರುತ್ತಿದ್ದಂತೆ ಎಲ್ಲರೂ ಕ್ಯಾಬ್ ಹತ್ತಿ ಕುಳಿತಿದ್ದಾರೆ. ಇದರಿಂದ ಕೋಪಗೊಂಡ ಕ್ಯಾಬ್ ಡ್ರೈವರ್ ರವಿ, ಒಟಿಪಿ ದೃಢಪಡಿಸಿದ ಬಳಿಕವೇ ಕಾರಿನೊಳಗೆ ಕುಳಿತುಕೊಳ್ಳುವಂತೆ ಆವಾಜ್ ಹಾಕಿದ್ದ. ಇದನ್ನೂ ಓದಿ: ಊಟದ ಬಿಲ್ ಕೇಳಿದ್ದಕ್ಕೆ ಬಾಟಲ್‍ನಿಂದ ತಲೆಗೆ ಹೊಡೆದ್ರು – ಅಧಿಕಾರದ ಮದದಿಂದ ಡಾಬಾ ಧ್ವಂಸ

    ಇದರಿಂದ ಸಿಟ್ಟಾದ ಉಮೇಂದರ್, ಕ್ಯಾಬ್‌ನಿಂದ ಕೆಳಗಿಳಿದು ಬಾಗಿಲನ್ನು ಬಲವಾಗಿ ಮುಚ್ಚಿದ್ದಾರೆ. ಬಳಿಕ ಇನ್ನೊಂದು ಕ್ಯಾಬ್ ಬುಕ್ ಮಾಡಲು ಹೊರಟಿದ್ದು, ಚಾಲಕ ಹಾಗೂ ಉಮೇಂದರ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರವಿ ಉಮೆಂದರ್ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದು, ಇದರಿಂದ ಉಮೇಂದರ್ ಮೂರ್ಛೆತಪ್ಪಿದ್ದರು. ಬಳಿಕ ಉಮೇಂದರ್‌ನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.

    ಇತ್ತ ಕ್ಯಾಬ್ ಡ್ರೈವರ್ ರವಿ ಪರಾರಿಯಾಗಲು ಯತ್ನಿಸಿದ್ದ. ಆದರೆ ಹಲ್ಲೆ ನಡೆಸಿದ ಸಮಯ ನೆರೆದಿದ್ದವರ ಕೈಗೆ ಆತ ಸಿಕ್ಕಿ ಬಿದ್ದಿದ್ದಾನೆ. ಘಟನೆ ಬಗ್ಗೆ ಕೆಲಂಬಾಕ್ಕಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪದಡಿ ರವಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಕತ್ತಿ ಹಿಡಿದು ಕುಳಿತ ಪತ್ನಿ

    Live Tv
    [brid partner=56869869 player=32851 video=960834 autoplay=true]

  • 100 ರೂ.ಗೆ ಉಗಾಂಡ ಪ್ರಜೆಗಳ ಕಿರಿಕ್ – ಕ್ಯಾಬ್ ಚಾಲಕನಿಗೆ ಅಂಗಾಂಗ ತೋರಿಸಿ ಯುವತಿಯರ ವಿಕೃತಿ

    100 ರೂ.ಗೆ ಉಗಾಂಡ ಪ್ರಜೆಗಳ ಕಿರಿಕ್ – ಕ್ಯಾಬ್ ಚಾಲಕನಿಗೆ ಅಂಗಾಂಗ ತೋರಿಸಿ ಯುವತಿಯರ ವಿಕೃತಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉಗಾಂಡ ಪ್ರಜೆಗಳ ಅಟ್ಟಹಾಸ ಇನ್ನೂ ನಿಂತಿಲ್ಲ. ಜಿಸಿ ನಗರದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಬಳಿಕ ಸೈಲೆಂಟ್ ಆಗಿದ್ದ ಉಗಾಂಡ ಪ್ರಜೆಗಳು ಶನಿವಾರ ಕ್ಯಾಬ್ ಚಾಲಕನಿಗೆ ಚಪ್ಪಲಿ ತೋರಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಮಹಿಳೆಯರು ಖಾಸಗಿ ಅಂಗಾಂಗ ತೋರಿಸಿ ವಿಕೃತಿ ಮೆರೆದಿದ್ದಾರೆ.

    ರಾತ್ರಿ ಕಾಲೇಜು ಒಂದರ ಕಾರ್ಯಕ್ರಮದ ನಿಮಿತ್ತ ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್‍ನಲ್ಲಿ ಉಗಾಂಡ ಪ್ರಜೆಗಳು ಸೇರಿದ್ದರು. 10 ಗಂಟೆಗೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಶ್ರೀಕಾಂತ್ ಅವರು ಪ್ಯಾಸೆಂಜರ್ ಬಳಿ ಓಟಿಪಿ ಪಡೆದು ಓಕೆ ಮಾಡಿದ್ದಾರೆ.

    ಕ್ಯಾಬ್ ಬುಕ್ ಮಾಡುವಾಗ 4 ಮಂದಿ ಮಾತ್ರ ಸ್ಥಳದಲ್ಲಿ ಇದ್ದರು. ಕಾರು ಬಂದ ಬಳಿಕ ಮತ್ತೊಬ್ಬ ಬಂದಿದ್ದಾನೆ. ಐವರು ಇರುವುದನ್ನು ನೋಡಿ ಕಾರಿನಲ್ಲಿ 5 ಮಂದಿಯನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಶ್ರೀಕಾಂತ್ ಹೇಳಿದ್ದಾರೆ.

    4 ಮಂದಿ ಬರುವುದಿದ್ದರೆ ಮಾತ್ರ ನಾನು ಕಾರಿನಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ. ಇದಕ್ಕೆ ಅವರು ಒಪ್ಪದೇ ಟ್ರಿಪ್ ಕ್ಯಾನ್ಸಲ್ ಮಾಡಿದ್ದಾರೆ. ಇದನ್ನು ಕಂಡು ಟ್ರಿಪ್ ರದ್ದು ಮಾಡಿದ್ದಕ್ಕೆ 100 ರೂ. ಚಾರ್ಜ್ ಕೇಳಿದ್ದಾರೆ. ಇದಕ್ಕೆ ರಾದ್ಧಾಂತವೇ ನಡೆದಿದ್ದು, ಕೆರಳಿ ನಿಂತ ಉಗಾಂಡ ಯುವತಿಯರು ಮನಬಂದಂತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಂಗಾಂಗ ತೋರಿಸಿ ವಿಕೃತಿ ಮರೆದಿದ್ದಾರೆ.

    ಹೋಟೆಲ್ ಆವರಣದಲ್ಲಿ ಮತ್ತಷ್ಟು ಉಗಾಂಡ ಪ್ರಜೆಗಳು ಜಮಾಯಿಸಿದ್ದಾರೆ. ಕ್ಯಾಬ್ ಚಾಲಕ ಶ್ರೀಕಾಂತ್ ಅವರನ್ನು ಹಿಗ್ಗಾಮುಗ್ಗ ಎಳೆದಾಡಿದ್ದಾರೆ. ಮಹಿಳೆಯರು ಚಪ್ಪಲಿಯಿಂದ ಥಳಿಸಿದ್ದಾರೆಂದು ಶ್ರೀಕಾಂತ್ ಆರೋಪಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಕ್ಯಾಬ್ ಚಾಲಕ ಶ್ರೀಕಾಂತ್ ಅವರ ಸ್ನೇಹಿತರು ಕೂಡ ಅಲ್ಲಿಗೆ ಬಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್ 

    ಘಟನೆಗೆ ಸಂಬಂಧ ಪಟ್ಟಂತೆ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಿರಿಕ್ ಮಾಡಿದ್ದ ಉಗಾಂಡ ಪ್ರಜೆ ಲುಬೆಗಾ ರೇಮಂಡ್ ನನ್ನು ವಶಕ್ಕೆ ಪಡೆಯಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲುಬೆಗಾ ರೇಮಂಡ್ ನನ್ನು  ವಶಕ್ಕೆ ಪಡೆದ ವಿಚಾರ ತಿಳಿದ ಆಫ್ರಿಕನ್ ವಿದ್ಯಾರ್ಥಿಗಳ ಮುಖಂಡ ಪೊಲೀಸ್ ಠಾಣೆಗೆ ಆಗಮಿಸಿದ್ದ. ಇದನ್ನೂ ಓದಿ: ಪಂಜಾಬ್ ಸಿಎಂ ರೇಸ್‍ನಲ್ಲಿ ಅಚ್ಚರಿಯ ಹೆಸರು?

    ಘಟನೆಯಲ್ಲಿ ಭಾಗಿಯಾಗಿದ್ದ ಯುವತಿಯರನ್ನ ಇಂದು 10 ಗಂಟೆಗೆ ಠಾಣೆಗೆ ವಿಚಾರಣೆಗೆ ಕರೆತರುವಂತೆ ಉಗಾಂಡ ವಿದ್ಯಾರ್ಥಿಗಳ ಮುಖಂಡನಿಗೆ ಪೊಲೀಸರು ನೋಟಿಸ್ ಕೊಟ್ಟು ಕಳಿಸಿದ್ದಾರೆ.

  • ಆಟೋ, ಕ್ಯಾಬ್ ಚಾಲಕರಿಗೆ 5 ಸಾವಿರ ರೂಪಾಯಿ ನೆರವು – ಕೇಜ್ರಿವಾಲ್ ಘೋಷಣೆ

    ಆಟೋ, ಕ್ಯಾಬ್ ಚಾಲಕರಿಗೆ 5 ಸಾವಿರ ರೂಪಾಯಿ ನೆರವು – ಕೇಜ್ರಿವಾಲ್ ಘೋಷಣೆ

    ನವದೆಹಲಿ: ಲಾಕ್‍ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವ ಆಟೋ, ರಿಕ್ಷಾ, ಇ ರಿಕ್ಷಾ, ಕ್ಯಾಬ್ ಚಾಲಕರ ನೆರವಿಗೆ ನಿಂತಿರುವ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

    ರಿಕ್ಷಾ, ಆಟೋ, ಇ ರಿಕ್ಷಾ ಚಾಲಕರು, ಕ್ಯಾಬ್ ಚಾಲಕರಿಗೆ 5,000 ರೂಪಾಯಿಗಳ ನೆರವು ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಅವರು ಘೋಷಣೆ ಮಾಡಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಲಾಕ್‍ಡೌನ್ ಹಿನ್ನೆಲೆ ಆಟೋ ರಿಕ್ಷಾ ಚಾಲಕರಿಗೆ ಸಂಕಷ್ಟ ಎದುರಾಗಿದ್ದು, ಇವರ ನೆರವಿಗೆ ಸರ್ಕಾರ ನಿಲ್ಲಲಿದೆ ಎಂದರು.

    ಪ್ರತಿ ಚಾಲಕನಿಗೆ 5,000 ನೀಡಲು ಸರ್ಕಾರ ನಿರ್ಧರಿಸಿದ್ದು, ಮುಂದಿನ 7ರಿಂದ 10 ದಿನಗಳಲ್ಲಿ ಚಾಲಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಕೇಜ್ರಿವಾಲ್ ಹೇಳಿದರು. ಚಾಲಕರ ಬ್ಯಾಂಕ್ ಖಾತೆಗಳ ಮಾಹಿತಿ ಸರ್ಕಾರದ ಬಳಿ ಇಲ್ಲ. ಹೀಗಾಗಿ ಚಾಲಕರ ಮಾಹಿತಿ ಪಡೆದು ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಪ್ರತಿ ನಿತ್ಯ 6 ಲಕ್ಷಕ್ಕೂ ಅಧಿಕ ಜನರಿಗೆ ಊಟ ಮತ್ತು ರಾತ್ರಿ ಭೋಜನ ನೀಡಲಾಗುತ್ತಿದೆ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

    ದೆಹಲಿಯಲ್ಲಿ ಈವರೆಗೂ 209 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಪೈಕಿ 108 ಮಂದಿ ನಿಜಾಮುದ್ದೀನ್ ಮರ್ಕಜ್‍ನಿಂದ ಬಂದವರಾಗಿದ್ದಾರೆ. ನಿಜಾಮುದ್ದೀನ್ ಮರ್ಕಜ್‍ನಲ್ಲಿದ್ದ 2,346 ಮಂದಿ ಪೈಕಿ 1,810 ಮಂದಿಯನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದ್ದು, 536 ಮಂದಿಯನ್ನು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಈವರೆಗೆ 4 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಇಬ್ಬರು ಮರ್ಕಜ್‍ನೊಂದಿಗೆ ಸಂಪರ್ಕ ಇದ್ದವರು ಎಂದು ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

  • ಪಾರ್ಟಿ ಮುಗಿಸಿ ಮನೆಗೆ ಹೋಗ್ತಿದ್ದ ಸಿಎ ವಿದ್ಯಾರ್ಥಿನಿಗೆ ಬಲವಂತವಾಗಿ ಮುತ್ತಿಟ್ಟ

    ಪಾರ್ಟಿ ಮುಗಿಸಿ ಮನೆಗೆ ಹೋಗ್ತಿದ್ದ ಸಿಎ ವಿದ್ಯಾರ್ಥಿನಿಗೆ ಬಲವಂತವಾಗಿ ಮುತ್ತಿಟ್ಟ

    ಮುಂಬೈ: ಪಾರ್ಟಿ ಮುಗಿಸಿ ಕ್ಯಾಬ್‍ನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಸಿಎ (ಚಾರ್ಟರ್ಡ್ ಅಕೌಂಟೆಂಟ್) ವಿದ್ಯಾರ್ಥಿನಿಗೆ ಬಲವಂತವಾಗಿ ಮುತ್ತು ಕೊಟ್ಟ ಯುವಕನನ್ನು ಮಹಾರಾಷ್ಟ್ರದ ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ನವೆಂಬರ್ 9ರಂದು ನಡೆದಿದ್ದು, ಪೊಲೀಸರು ಆರೋಪಿಗಳನ್ನು ಶನಿವಾರ ಮುಂಬೈನ ಲೋಖಂಡ್ವಾಲಾದಲ್ಲಿ ಬಂಧಿಸಿದ್ದಾರೆ. ಪಾರ್ಟಿ ಮುಗಿಸಿ ಕ್ಯಾಬ್‍ನಲ್ಲಿ ಮನೆಗೆ ಹೋಗುವ ವೇಳೆ ಯುವಕ ಬಲವಂತವಾಗಿ ಮುತ್ತು ನೀಡಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ವರದಿಗಳ ಪ್ರಕಾರ, ಆರೋಪಿ ಅಂಧೇರಿಯ ವೀರಾ ದೇಸಾಯಿ ರೋಡಿನಲ್ಲಿರುವ ಬಾರಿನಲ್ಲಿ ನಡೆದ ಪಾರ್ಟಿಯಲ್ಲಿ ವಿದ್ಯಾರ್ಥಿನಿಯನ್ನು ಭೇಟಿ ಮಾಡಿದ್ದನು. ವಿದ್ಯಾರ್ಥಿನಿ ತನ್ನ ಸ್ನೇಹಿತರ ಜೊತೆಯಲ್ಲಿ ಆ ಪಾರ್ಟಿಗೆ ಆಗಮಿಸಿದ್ದಳು.

    ಮಧ್ಯರಾತ್ರಿ ಸುಮಾರು 1.30ಗೆ ಪಾರ್ಟಿ ಮುಗಿದಿದ್ದು, ವಿದ್ಯಾರ್ಥಿನಿ ತನ್ನ ಸ್ನೇಹಿತರ ಜೊತೆಗೆ ಮನೆಗೆ ಹೋಗಲು ನಿರ್ಧರಿಸಿದ್ದಳು. ಈ ವೇಳೆ ಆಕೆಯ ಮೊಬೈಲ್ ಕೆಲಸ ಮಾಡದ ಕಾರಣ ಆರೋಪಿಯ ಮೊಬೈಲಿನಲ್ಲಿಯೇ ಕ್ಯಾಬ್ ಬುಕ್ ಮಾಡಿದ್ದರು. ಆರೋಪಿ ಯುವತಿಯರಿಗೆ ತಮ್ಮ ಮನೆವರೆಗೂ ಬಿಡುವುದಾಗಿ ಹೇಳಿ ಕಾರಿನ ಮುಂಭಾಗದಲ್ಲಿರುವ ಸೀಟಿನಲ್ಲಿ ಕುಳಿತಿದ್ದನು. ಆದರೆ ವಿದ್ಯಾರ್ಥಿನಿ ತನ್ನ ಜೊತೆ ಬರದಂತೆ ಆರೋಪಿಗೆ ಹೇಳುತ್ತಾಳೆ. ಆದರೆ ಆರೋಪಿ ಆಕೆಯ ಮಾತನ್ನು ನಿರ್ಲಕ್ಷ್ಯಿಸಿದ್ದನು.

    ವಿದ್ಯಾರ್ಥಿನಿಯ ಸ್ನೇಹಿತೆ ನಿದ್ದೆಗೆ ಜಾರಿದ್ದನ್ನು ನೋಡಿದ ಆರೋಪಿ ಹಿಂಬದಿ ಸೀಟಿನಲ್ಲಿ ಬಂದು ಕೂರುತ್ತಾನೆ. ಈ ವೇಳೆ ವಿದ್ಯಾರ್ಥಿನಿಗೆ ಬಲವಂತವಾಗಿ ಮುತ್ತು ಕೊಟ್ಟಿದ್ದಾನೆ. ಆರೋಪಿಯ ವರ್ತನೆಯಿಂದ ಭಯಗೊಂಡ ವಿದ್ಯಾರ್ಥಿನಿ ಕ್ಯಾಬ್ ನಿಲ್ಲಿಸಲು ಹೇಳಿ ಅಲ್ಲಿಂದ ಆಟೋದಲ್ಲಿ ತನ್ನ ಮನೆಗೆ ತಲುಪಿದ್ದಾಳೆ. ಈ ಘಟನೆಯಿಂದ ವಿದ್ಯಾರ್ಥಿನಿ ಗಾಬರಿಗೊಂಡಿದ್ದು, ಆ ಆಘಾತದಿಂದ ಆಕೆಗೆ ಹೊರಬರಲು ಆಗಲಿಲ್ಲ. ಬಳಿಕ ನ. 23ರಂದು ಅಂಬೋಲಿ ಪೊಲೀಸ್ ಠಾಣೆಗೆ ಹೋಗಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಳು.

    ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354(ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.

  • ಟ್ರಿಪ್ ಕ್ಯಾನ್ಸಲ್ ಮಾಡದ್ದಕ್ಕೆ ಊಬರ್ ಚಾಲಕನಿಂದ ಟೆಕ್ಕಿ ಮೇಲೆ ಹಲ್ಲೆ

    ಟ್ರಿಪ್ ಕ್ಯಾನ್ಸಲ್ ಮಾಡದ್ದಕ್ಕೆ ಊಬರ್ ಚಾಲಕನಿಂದ ಟೆಕ್ಕಿ ಮೇಲೆ ಹಲ್ಲೆ

    ಬೆಂಗಳೂರು: ಶುಲ್ಕದ ಬಗ್ಗೆ ವಿವಾದ ನಡೆದು ಊಬರ್ ಚಾಲಕನೋರ್ವ 23 ವರ್ಷದ ಸಾಫ್ಟ್‍ವೇರ್ ಎಂಜಿನಿಯರ್ ಮೇಲೆ ಹಲ್ಲೆ ಮಾಡಿದ ಪ್ರಕರಣ ನಗರದ ಹೊರ ವಲಯದಲ್ಲಿ ನಡೆದಿದೆ.

    ನಗರದ ಟೆಕ್ಕಿಯೊಬ್ಬರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್ ಬುಕ್ ಮಾಡಿದ್ದು, ಬುಕ್ ಮಾಡಿದ್ದಕ್ಕಿಂತ ಹೆಚ್ಚಿನ ಶುಲ್ಕವನ್ನು ಡ್ರೈವರ್ ಕೇಳಿದ್ದನ್ನು ಪ್ರಶ್ನಿಸಿದ್ದಾರೆ. ಇದೇ ವಿವಾದವಾಗಿ ಬೆಳೆದು ಚಾಲಕನು ಎಂಜಿನಿಯರ್‍ಗೆ ರಕ್ತ ಬರುವಂತೆ ಮೂಗಿಗೆ ಗುದ್ದಿದ್ದಾನೆ. ಈ ಕುರಿತು ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 323(ಹಲ್ಲೆ), 341(ಸಂಯಮ ಕಳೆದುಕೊಂಡಿರುವುದು), 504(ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುವುದು) ಅಡಿ ಎಫ್‍ಐಆರ್ ದಾಖಲಾಗಿದೆ.

    ಡ್ರೈವರ್ ಟ್ರಿಪ್ ಕ್ಯಾನ್ಸಲ್ ಮಾಡುವಂತೆ ಕೇಳಿಕೊಂಡಿದ್ದು, ಆಗ ಗ್ರಾಹಕ ಎಂಜಿನಿಯರ್ ಕ್ಯಾನ್ಸಲ್ ಮಾಡುವುದಿಲ್ಲ. ನೀವು ಇದಕ್ಕೆ ದಂಡ ಹಾಕುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಆಗ ವಿವಾದ ಸೃಷ್ಟಿಯಾಗಿದೆ. ನಂತರ ಕಾರ್ ಡ್ರೈವರ್ ಹಿಂದೆ ಹೋಗಿ ಡಿಕ್ಕಿಯಲ್ಲಿದ್ದ ಎಂಜಿನಿಯರ್ ಬ್ಯಾಗ್ ಹಾಗೂ ವಸ್ತುಗಳನ್ನು ನೆಲದ ಮೇಲೆ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಈ ರೀತಿ ವರ್ತಿಸಿದರೆ ಸ್ಮಾರ್ಟ್‍ಫೋನ್‍ನ ಆ್ಯಪ್‍ನಲ್ಲಿ ಚಾಲಕ ಅಶಿಸ್ತಿನಿಂದ ವರ್ತಿಸಿದ್ದಾನೆ ಎಂದು ದೂರು ನೀಡುತ್ತೇನೆ ಎಂದು ಗ್ರಾಹಕ ಎಚ್ಚರಿಸಿದ್ದಾರೆ. ಇಷ್ಟಕ್ಕೆ ಕೋಪಿತನಾದ ಡ್ರೈವರ್ ಗ್ರಾಹಕನ ಮೂಗಿಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಗ್ರಾಹಕನ ಮೂಗಿನ ಮೂಳೆ ಸರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದುರ್ಗಾ ಪೂಜೆಗಾಗಿ ಕೋಲ್ಕತ್ತಾಗೆ ಹೊರಟಿದ್ದಾಗ ಈ ಘಟನೆ ನಡೆದಿದ್ದರಿಂದ ತಡವಾಗಿದೆ. ಕ್ಯಾಬ್ ಡ್ರೈವರ್ ಇಳಿಸಿದ ನಂತರ ಇನ್ನೊಂದು ಕ್ಯಾಬ್ ಬುಕ್ ಮಾಡಿಕೊಂಡು ಹೋದರೂ ಸಹ ವಿಮಾನ ತಪ್ಪಿ ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಆರೋಪಿಯನ್ನು ಹರೀಶ್.ಕೆ.ಎಸ್. ಎಂದು ಗುರುತಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಚಾಲಕನನ್ನು ಇನ್ನೂ ಪತ್ತೆ ಹಚ್ಚಿಲ್ಲ. ಆದರೆ ದೂರಿನ ಆಧಾರದ ಮೇಲೆ ಆರೋಪಿಯನ್ನು ಆನ್‍ಲೈನ್ ವೇದಿಕೆಯಿಂದ ಅಮಾನತುಗೊಳಿಸಲಾಗಿದೆ. ಈ ಕುರಿತು ಕ್ಯಾಬ್ ಅಗ್ರಿಗೇಟರ್ ಖಚಿತಪಡಿಸಿದ್ದಾರೆ.

    ನಮಗೆ ಸವಾರರ ಸುರಕ್ಷತೆ ಅತ್ಯುನ್ನತವಾದದ್ದು, ಈ ಘಟನೆ ಕುರಿತು ತಿಳಿದ ನಂತರ ಚಾಲಕನನ್ನು ಪಾಲುದಾರಿಕೆಯ ಅಪ್ಲಿಕೇಶನ್‍ನಿಂದ ತೆಗೆದು ಹಾಕಿದ್ದೇವೆ ಎಂದು ಉಬರ್ ವಕ್ತಾರರು ದೃಢಪಡಿಸಿದ್ದಾರೆ.