Tag: ಕ್ಯಾಬಿನೆಟ್ ಸಭೆ

  • ಓಸಿ, ಸಿಸಿ ಇಲ್ಲದೆ ವಿದ್ಯುತ್ ಸಂಪರ್ಕ – ಅ.9ರಂದು ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ

    ಓಸಿ, ಸಿಸಿ ಇಲ್ಲದೆ ವಿದ್ಯುತ್ ಸಂಪರ್ಕ – ಅ.9ರಂದು ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ

    ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಾಗೂ ರಾಜ್ಯದ ಇತರೆ ಕಡೆಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸಲು ಇರುವ ಸಮಸ್ಯೆಗಳ ಕುರಿತಂತೆ ಮಹತ್ವದ ಸಭೆ ನಡೆಯಿತು.

    ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಿತು. 2024ರ ಡಿ.17ರಂದು ಸರ್ವೋಚ್ಛ ನ್ಯಾಯಾಲಯದ ಆದೇಶದ ನಂತರ ಗ್ರೇಟರ್ ಬೆಂಗಳೂರು ಸೇರಿದಂತೆ ರಾಜ್ಯ ವ್ಯಾಪ್ತಿಯಲ್ಲಿ ಸಿಸಿ ಮತ್ತು ಓಸಿ ಇಲ್ಲದೇ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸಮಸ್ಯೆ ಉಂಟಾಗಿರುವ ಬಗ್ಗೆ ಚರ್ಚೆ ನಡೆಸಲಾಯಿತು.ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್- ನೇಮಕಾತಿಗಳಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ

    ಸುಪ್ರೀಂಕೋರ್ಟ್ನ ಆದೇಶ ಭಾರತದ ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತಿದ್ದೂ, ಎಲ್ಲ ರಾಜ್ಯಗಳೂ ಆದೇಶವನ್ನು ಅನುಷ್ಠಾನಗೊಳಿಸುತ್ತಿವೆಯೇ? ಪರಿಶೀಲಿಸಲು ಮುಖ್ಯಮಂತ್ರಿಗಳು ಸೂಚಿಸಿದರು ಎನ್ನಲಾಗಿದೆ. ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಅನುಮತಿ ನೀಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಸಲಾಗಿದ್ದು, ನಿರ್ಮಾಣಗೊಂಡಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಸಾಧ್ಯವಿಲ್ಲ. ಸರ್ಕಾರದ ನಿರ್ಧಾರದಿಂದ ಜನರಿಗೆ ಅನುಕೂಲವಾಗಬೇಕು. ಸೂಕ್ತ ಅನುಮತಿಗಳಿಲ್ಲದೇ ಈಗಾಗಲೇ ಮನೆ ನಿರ್ಮಿಸಿ ವಾಸವಿದ್ದಾರೆ. ಅಂತಹವರಿಗೆ ಒಂದು ಬಾರಿಗೆ ಅನ್ವಯವಾಗುವಂತೆ ನಿಯಮಿತಗೊಳಿಸಲು ಕಾನೂನಿನಲ್ಲಿ ಅವಕಾಶವಿರುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

    ಸುಪ್ರೀಂಕೋರ್ಟ್ ಆದೇಶ ಅನುಷ್ಠಾನಗೊಳ್ಳುವ ಮುಂಚೆ ಸಲ್ಲಿಕೆಯಾಗಿರುವ ಮಾರ್ಚ್ 2025ರವರೆಗಿನ ಅರ್ಜಿಗಳನ್ನು ಪರಿಗಣಿಸಿ ಒಸಿ ಮತ್ತು ಸಿಸಿಯಿಂದ ವಿನಾಯ್ತಿಗೊಳಿಸಿ, ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡುವ ಬಗ್ಗೆ ಕಾನೂನಿನ ಸಾಧ್ಯತೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಬೇಕು. ಹೀಗಾಗಿ ಅ.8ರಂದು ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಸಂಬಂಧಪಟ್ಟ ಇಲಾಖಾ ಸಚಿವರು, ಸರ್ಕಾರದ ಅಡ್ವೋಕೇಟ್ ಜನರಲ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದಾದ ಬಳಿಕ ಅ.9ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ ಪ್ರಕಟಿಸಲು ರಾಜ್ಯ ಸರ್ಕಾರ ಮುಂದಾಗಿದೆ.ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಜಟಾಪಟಿ – ಡಿಕೆಶಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ

  • ಜಾತಿಗಣತಿಗೆ ಡಿಕೆಶಿ ಸೇರಿ ಹಲವು ಸಚಿವರ ಆಕ್ಷೇಪ, ನನಗೆ ಮೇಲ್ವರ್ಗದ ವಿರೋಧಿ ಅಂತಾ ಪಟ್ಟ ಕಟ್ಟುತ್ತಾರೆ: ಸಿಎಂ

    ಜಾತಿಗಣತಿಗೆ ಡಿಕೆಶಿ ಸೇರಿ ಹಲವು ಸಚಿವರ ಆಕ್ಷೇಪ, ನನಗೆ ಮೇಲ್ವರ್ಗದ ವಿರೋಧಿ ಅಂತಾ ಪಟ್ಟ ಕಟ್ಟುತ್ತಾರೆ: ಸಿಎಂ

    ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಕಿಚ್ಚು ಜೋರಾಗಿ ಏರುಧ್ವನಿಯಲ್ಲಿ ಮಾತುಕತೆ ಆಗಿದೆ ಎನ್ನಲಾಗಿದೆ. ಜಾತಿ ಮುಂದೂಡಿಕೆಗೆ ಸಚಿವರಿಂದ ಒತ್ತಡ ಹೆಚ್ಚಾಗಿದ್ದು, ಹೊಸದಾಗಿ 331 ಜಾತಿಗಳ ಸೇರ್ಪಡೆಗೂ ಆಕ್ಷೇಪ ವ್ಯಕ್ತವಾಗಿದೆ. ಡಿಸಿಎಂ ಡಿಕೆಶಿ ಸೇರಿದಂತೆ ಹಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿ, ಜಾತಿಗಣತಿ (Caste Census) ಮುಂದೂಡಿಕೆಗೆ ಒತ್ತಡ ಹಾಕಿದ್ದಾರೆ. ಈಗ ಜಾತಿಗಣತಿ ನಡೆದರೆ ಸರ್ಕಾರಕ್ಕೆ ತೊಂದರೆ, ಡ್ಯಾಮೇಜ್ ಆಗುತ್ತೆ, ಮುಂದೂಡೋಣ ಎಂದು ಡಿಕೆಶಿ ಪ್ರಸ್ತಾಪಿಸಿದ್ದಾರೆ.

    ಇನ್ನು ಕೆಲವು ಸಚಿವರು ಮಾತನಾಡಿ, ಜಾತಿಗಣತಿಯಲ್ಲಿ ಹಲವು ಗೊಂದಲಗಳು ಇವೆ, ಗೊಂದಲಗಳನ್ನ ಸರಿಪಡಿಸದ ಹೊರತು ಜಾತಿಗಣತಿ ಬೇಡ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಂತಾ ಜನರಿಗೆ ಮನವರಿಕೆ ಮಾಡಿ ಕೊಡಲು ಆಗುತ್ತಾ ಎಂದು ಸಚಿವರು ಆಕ್ಷೇಪ ಎತ್ತಿದ್ದಾರೆ. ಇದನ್ನೂ ಓದಿ: ಮತಗಳ್ಳತನ ಸಂಬಂಧ ತೀರ್ಪಿನ ಬಳಿಕವೇ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ: ಛಲವಾದಿ ನಾರಾಯಣಸ್ವಾಮಿ

    ಇದೇ ವೇಳೆ ಸಿಎಂ ಸಿದ್ದರಾಮಯ್ಯ (Siddaramaiah) ಕೂಡ ಜಾತಿಗಣತಿ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದು, ಜಾತಿ ಗಣತಿ ನಡೆದರೂ, ನಡೆಯದಿದ್ದರೂ ನನ್ನ ಮೇಲ್ವರ್ಗದ ವಿರೋಧಿ ಅಂತಾರೆ, ಪಟ್ಟ ಕಟ್ಟಿದ್ದಾರೆ, ಅಹಿಂದ ಪರ ಅಂತಾರೆ ಎಂದು ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ. ಹಾಗಾಗಿ ಸಚಿವರು ವಿಶೇಷ ಸಭೆ ನಡೆಸಿ ವರದಿ ಕೊಡಿ ಎಂದು ಸಿಎಂ ಸೂಚಿಸಿ ಚರ್ಚೆ ಮುಗಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಳಂದ ಫೈಲ್ಸ್ ಕೇಸ್ ತನಿಖೆಗೆ ಎಸ್‌ಐಟಿ ರಚನೆಗೆ ಕ್ಯಾಬಿನೆಟ್ ಒಲವು

  • ಲಿಂಗಾಯತರನ್ನು ತುಂಡು ತುಂಡು ಮಾಡಲು ಹೇಳಿದ್ಯಾರು- ಪೇಪರ್‌ ಎಸೆದು ಕ್ಯಾಬಿನೆಟ್‌ ಸಭೆಯಲ್ಲಿ ಎಂಬಿಪಿ ರೋಷಾವೇಶ

    ಲಿಂಗಾಯತರನ್ನು ತುಂಡು ತುಂಡು ಮಾಡಲು ಹೇಳಿದ್ಯಾರು- ಪೇಪರ್‌ ಎಸೆದು ಕ್ಯಾಬಿನೆಟ್‌ ಸಭೆಯಲ್ಲಿ ಎಂಬಿಪಿ ರೋಷಾವೇಶ

    – ಎಂಬಿ ಪಾಟೀಲ್‌ ಆಕ್ರೋಶಕ್ಕೆ ದಂಗಾದ ಸಚಿವರು
    – ಜಾತಿ ಗಣತಿಗೆ ಲಿಂಗಾಯತರಿಂದ ಭಾರೀ ವಿರೋಧ

    ಬೆಂಗಳೂರು: “ಲಿಂಗಾಯತರನ್ನು (Lingayat) ತುಂಡು ತುಂಡು ಮಾಡ್ತಾ ಇದ್ದೀರಿ? ಈ ರೀತಿ ಸಮೀಕ್ಷೆ ಮಾಡಲು ಹೇಳಿದವರು ಯಾರು? ಕುಲಶಾಸ್ತ್ರೀಯ ಅಧ್ಯಯನ ಯಾರು ಮಾಡೋದು?” – ಇದು ಸಚಿವ ಎಂಬಿ ಪಾಟೀಲ್‌ (MB Patil) ಆಕ್ರೋಶ ವ್ಯಕ್ತಪಡಿಸಿದ ಪರಿ.

    ಇಂದು ಸಂಜೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಯಾಬಿನೆಟ್‌ ಸಭೆ ನಡೆಯಿತು. ಈ ವೇಳೆ ಲಿಂಗಾಯತ ಶಾಸಕರು ಜಾತಿ ಜನಗಣತಿಗೆ ಭಾರೀ ವಿರೋಧ ವ್ಯಕ್ತಪಡಿಸಿದರು.

    ಸಚಿವ ಎಂಬಿ ಪಾಟೀಲ್‌ ಅಂತೂ ಎದ್ದು ನಿಂತು ಟೇಬಲ್‌ ಕುಟ್ಟಿ ಕೂಗಾಡಿದ್ದಾರೆ. ನಮ್ಮ ಸಮಾಜವನ್ನು ತುಂಡು ತುಂಡು ಮಾಡ್ತಾ ಇದ್ದೀರಿ? ತುಂಡು ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿ ಪೇಪರ್‌ಗಳನ್ನು ಎಸೆದು ಹಾಕಿದ್ದಾರೆ. ಎಂಬಿಪಿ ಆಕ್ರೋಶಕ್ಕೆ ಸಭೆಯಲ್ಲಿದ್ದ ಸಚಿವರು, ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.

    ಇಲ್ಲಿಯವರೆಗೆ ಕ್ಯಾಬಿನೆಟ್‌ ಸಭೆ ಸಾಮಾನ್ಯ ಸಭೆಯಾಗಿ ನಡೆಯುತ್ತಿತ್ತು. ಆದರೆ ಇಂದಿನ ಸಭೆ ವಿಧಾನಸಭೆಯಲ್ಲಿ ಹೇಗೆ ವಿರೋಧ ಪಕ್ಷಗಳು ಮತ್ತು ಪ್ರತಿ ಪಕ್ಷಗಳ ಸದಸ್ಯರು ಕಿತ್ತಾಡುತ್ತಾರೋ ಅದೇ ರೀತಿಯಾಗಿ ಸಚಿವರು ಕಿತ್ತಾಡಿದ್ದಾರೆ ಎಂದು ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ.

    ಈಶ್ವರ್ ಖಂಡ್ರೆ ಅವರು ಯಾವ ಆಧಾರದ ಮೇಲೆ ಹೊಸ ಜಾತಿಗಳನ್ನು ಸೃಷ್ಟಿ ಮಾಡಿದ್ದೀರಿ ಎಂದು ಆಕ್ರೋಶ ಹೊರಹಾಕಿದರೆ ನಮ್ಮ ಜಾತಿ ಬಗ್ಗೆ ನಿಮಗೆ ಏನು ಗೊತ್ತು ಎಂದು ಎಸ್‌ಎಸ್‌ ಮಲ್ಲಿಕಾರ್ಜುನ ಸಿಟ್ಟು ಹೊರ ಹಾಕಿದರು. ಸಚಿವರ ಮಾತಿಗೆ ಧ್ವನಿಗೂಡಿಸಿದ ಹೆಚ್‌ಕೆ ಪಾಟೀಲ್‌ ಈ ಜಾತಿಗಳನ್ನು ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ ಎಂದು ಗರಂ ಆಗಿಯೇ ಮಾತನಾಡಿದರು.

  • ಕಾಲ್ತುಳಿತ ತಡೆಗೆ ಹೊಸ ಕಾನೂನು – 3 ವರ್ಷ ಜೈಲು, 5 ಲಕ್ಷ ದಂಡ

    ಕಾಲ್ತುಳಿತ ತಡೆಗೆ ಹೊಸ ಕಾನೂನು – 3 ವರ್ಷ ಜೈಲು, 5 ಲಕ್ಷ ದಂಡ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ (Chinnaswamy Stampede) ಪ್ರಕರಣದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಹೊಸ ಕಾನೂನು ತರಲು ಹೊರಟಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜನಸಂದಣಿ ನಿಯಂತ್ರಣ ಮಸೂದೆ (Crowd Control Bill) ಮಂಡಿಸಿದ್ದು ಮುಂದಿನ ಕ್ಯಾಬಿನೆಟ್‌ನಲ್ಲಿ (Cabinet) ವಿಸ್ತಾರವಾಗಿ ಚರ್ಚೆ ನಡೆಸಲಿದೆ.

    ಕ್ರೀಡೆ, ಸರ್ಕಸ್ ಇತರೇ ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳಿಗೆ ಸರ್ಕಾರ ಬಿಗಿ ನಿಯಮ ಜಾರಿಗೆ ಮುಂದಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಅಥವಾ ಕಾರ್ಯಕ್ರಮ ನಡೆಯುವಾಗ ಜನರನ್ನು ನಿಯಂತ್ರಿಸಲಾಗದಿದ್ದರೆ ಆಯೋಜಕರಿಗೆ 3 ವರ್ಷದ ತನಕ ಜೈಲು, 5 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ.

    ಕಾರ್ಯಕ್ರಮದ ಆಯೋಜಕರು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮತಿಗೆ ಅರ್ಜಿ ಹಾಕಬೇಕು. ಅಲ್ಲಿಯೇ ಸ್ಥಳ, ಸಮಯ ಎಲ್ಲವೂ ನಿರ್ಧಾರ ಮಾಡಬೇಕಾಗುತ್ತದೆ. ಇದನ್ನೂ ಓದಿ: ಗುತ್ತಿಗೆ ಆಯ್ತು ಈಗ ವಸತಿ ಯೋಜನೆಯಲ್ಲೂ ಮುಸ್ಲಿಮ್‌ ಮೀಸಲಾತಿ ಶೇ.15ಕ್ಕೆ ಹೆಚ್ಚಳ

     

    ಜಾತ್ರೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ತೆಪ್ಪದ ತೇರು, ಉರುಸ್ ಅಥವಾ ಯಾವುದೇ ಧರ್ಮ, ಜಾತಿ ಅಥವಾ ಪಂಥಕ್ಕೆ ಸಂಬಂಧಿಸಿದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಕಾನೂನು ಅನ್ವಯ ಆಗುವುದಿಲ್ಲ.

    ಮಸೂದೆಯಲ್ಲಿ ಏನಿದೆ?
    ಕ್ರೀಡೆ, ಸರ್ಕಸ್, ಪ್ರಾಯೋಜಿತ ಕಾರ್ಯಕ್ರಮಗಳು, ರಾಜಕೀಯ ರ್‍ಯಾಲಿ ಸೇರಿದಂತೆ ಇತರೇ ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳು ಈ ಮಸೂದೆ ವ್ಯಾಪ್ತಿಯಲ್ಲಿ ಬರುತ್ತದೆ. ಕಾರ್ಯಕ್ರಮಗಳಲ್ಲಿ ಗಲಾಟೆ, ಅಹಿತಕರ ಘಟನೆ, ದೇಹ ಹಾನಿ, ಸಾವು ನೋವಿಗೆ ಕಾರ್ಯಕ್ರಮ ಆಯೋಜಕರೇ ಜವಾಬ್ದಾರಿಯಾಗುತ್ತಾರೆ.

    ಗಾಯಾಳುಗಳಿಗೆ, ಮೃತ ಕುಟುಂಬಗಳಿಗೆ ಪರಿಹಾರ ನೀಡದಿದ್ದರೆ ಕಾರ್ಯಕ್ರಮ ಆಯೋಜಕರ ಆಸ್ತಿ ಹರಾಜು ಮೂಲಕ ಪರಿಹಾರ ವಸೂಲಿ ಮಾಡಲಾಗುತ್ತದೆ.

    ಶಾಂತಿ ಭಂಗ ತರುವ ಮುನ್ಸೂಚನೆ ಇದ್ದರೆ, ಗಲಾಟೆ, ಅಹಿತಕರ ಘಟನೆ ನಡೆದರೆ ಅನುಮತಿ ಇದ್ದರೂ ಅಹಿತಕರ ಘಟನೆ ನಡೆದರೆ ಕಾರ್ಯಕ್ರಮ ನಿಷೇಧಿಸುವ ಅಧಿಕಾರವನ್ನು ನೀಡಲಾಗಿದೆ.

  • ನಾಳೆಯೇ ಯುದ್ಧಕ್ಕೆ ಒಪ್ಪಿಗೆ ಪಡೀತಾರಾ ಮೋದಿ? – ನಾಳೆ ಪ್ರಧಾನಿ ನೇತೃತ್ವದಲ್ಲಿ ಕ್ಯಾಬಿನೆಟ್ ಮೀಟಿಂಗ್

    ನಾಳೆಯೇ ಯುದ್ಧಕ್ಕೆ ಒಪ್ಪಿಗೆ ಪಡೀತಾರಾ ಮೋದಿ? – ನಾಳೆ ಪ್ರಧಾನಿ ನೇತೃತ್ವದಲ್ಲಿ ಕ್ಯಾಬಿನೆಟ್ ಮೀಟಿಂಗ್

    ನವದೆಹಲಿ: ನಾಳೆ ಮಾಕ್ ಡ್ರಿಲ್ ಸಿದ್ಧತೆ ಒಂದ್ಕಡೆಯಾದರೆ, ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿ (PM Modi) ಬೆಳಗ್ಗೆ 11 ಗಂಟೆಗೆ ಮಹತ್ವದ ಸಂಪುಟ ಸಭೆ ಕರೆದಿದ್ದಾರೆ.

    ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಸರಣಿ ಸಭೆ ನಡೆಸಿರುವ ಪ್ರಧಾನಿ, ನಾಳಿನ ಸಂಪುಟ ಸಭೆಯಲ್ಲಿ (Cabinet Meeting) ಯುದ್ಧಕ್ಕೆ ಒಪ್ಪಿಗೆ ಪಡೆಯೋ ಸಾಧ್ಯತೆಗಳಿವೆ. ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ನಾಳೆ ಹಾಗೂ ನಾಡಿದ್ದು ವಾಯುಪಡೆ ಹೈ ಅಲರ್ಟ್ ಘೋಷಣೆ ಮಾಡಿದೆ. ಪಾಕ್ ಗಡಿಭಾಗದಲ್ಲಿ ವಾಯುಪಡೆ ತಾಲೀಮು ನಡೆಸಲಿದೆ. ಹೀಗಾಗಿ, ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಉಗ್ರರ ದಾಳಿ ಬಗ್ಗೆ ಮೋದಿಗೆ ಮೊದಲೇ ಮಾಹಿತಿ ಇತ್ತು, ಅದಕ್ಕೆ ಕಾಶ್ಮೀರ ಭೇಟಿ ರದ್ದು ಮಾಡಿದ್ದರು: ಖರ್ಗೆ ಆರೋಪ

    ಯುದ್ಧದ ಉದ್ವಿಗ್ನತೆ ಇರುವ ಹಿನ್ನೆಲೆ ದೇಶದ ಪ್ರಮುಖ ದೇವಸ್ಥಾನಗಳ ಭದ್ರತೆ ಹೇಗಿದೆ ಎಂದು ಎನ್‌ಎಸ್‌ಜಿ ಕಮಾಂಡೋಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇವತ್ತು ಪುರಿ ಜಗನ್ನಾಥ ದೇವಸ್ಥಾನದ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಎಲ್‌ಒಸಿ ಉದ್ದಕ್ಕೂ ಬಂಕರ್‌ಗಳನ್ನ ಸಿದ್ಧಗೊಳಿಸಲಾಗ್ತಿದೆ. ಉರಿಯಿಂದ ನೌಶೇರಾ ವಲಯವರೆಗೂ ಬಂಕರ್ ಸಿದ್ಧಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ ನಿವಾಸಿಗಳು ಬಂಕರ್ ಆಶ್ರಯ ಪಡೆಯಲು ಬಂಕರ್ ವ್ಯವಸ್ಥೆ ಮಾಡಲಾಗಿದೆ.

    ಪಂಜಾಬ್‌ನ ಅಮೃತಸರ ಬಳಿ ಭಯೋತ್ಪಾದಕ ಕೃತ್ಯಕ್ಕೆ ಬಳಸುತ್ತಿದ್ದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ರಾಕೆಟ್ ಚಾಲಿತ ಗ್ರೆನೇಡ್, ವೈಯರ್ ಲೆಸ್ ಟೆಲಿ ಕಮ್ಯೂನಿಕೇಷನ್ ಸೆಟ್, ಹ್ಯಾಂಡ್ ಗ್ರೆನೇಡ್ ವಶಕ್ಕೆ ಪಡೆಯಲಾಗಿದೆ. ಇನ್ನು ಕಾಶ್ಮೀರದಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರು ಮತ್ತು ಒಬ್ಬ ಪಾಕ್ ನಾಗರಿಕನನ್ನ ಬಂಧಿಸಲಾಗಿದೆ. ಇದನ್ನೂ ಓದಿ: ನಗದು, ಟಾರ್ಚ್, ವೈದ್ಯಕೀಯ ಕಿಟ್ ಕೈಲ್ಲಿಟ್ಟುಕೊಳ್ಳಿ – ನಾಳೆ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಹೇಗಿರಲಿದೆ?

    ಶಂಕಿತ ಉಗ್ರರಿಂದ ಪಿಸ್ತೂಲ್, ಗ್ರೆನೇಡ್ ಮತ್ತು 15 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜಸ್ತಾನದಲ್ಲಿ ಪಾಕ್ ಗೂಢಚಾರನನ್ನು ಬಂಧಿಸಲಾಗಿದೆ. ಯುದ್ಧದ ಕಾರ್ಮೋಡ ತೀವ್ರಗೊಳ್ಳುತ್ತಿದ್ದಂತೆ ಜಮ್ಮು-ಕಾಶ್ಮೀರದಲ್ಲಿ ಭದ್ರತೆ ಹೆಚ್ಚಳ ಜೊತೆಗೆ ವಾಹನ ತಪಾಸಣೆ ತೀವ್ರಗೊಳಿಸಲಾಗಿದೆ. ಈ ನಡುವೆ ಭಾರತದ ಬೆನ್ನಿಗೆ ಅಮೆರಿಕ ನಿಂತಿದೆ. ಅಮೆರಿಕ ಸಂಸತ್‌ನ ಸ್ಪೀಕರ್ ಜಾನ್ಸನ್, ಉಗ್ರರ ವಿರುದ್ಧ ಹೋರಾಡಲು ಟ್ರಂಪ್ ಸರ್ಕಾರ ಭಾರತಕ್ಕೆ ಶಕ್ತಿ ಮತ್ತು ಸಂಪನ್ಮೂಲಗಳೊಂದಿಗೆ ಸಹಾಯ ಮಾಡುತ್ತೆ ಎಂದಿದ್ದಾರೆ.

  • ನಾನ್ಯಾಕೆ ರಾಜೀನಾಮೆ ನೀಡಲಿ? ರಾಜ್ಯಪಾಲರೇ ರಾಜೀನಾಮೆ ನೀಡಬೇಕು: ಸಿಎಂ

    ನಾನ್ಯಾಕೆ ರಾಜೀನಾಮೆ ನೀಡಲಿ? ರಾಜ್ಯಪಾಲರೇ ರಾಜೀನಾಮೆ ನೀಡಬೇಕು: ಸಿಎಂ

    ಬೆಂಗಳೂರು: ನಾನು ಯಾಕೆ ರಾಜೀನಾಮೆ ನೀಡಲಿ? ನಡೆದುಕೊಂಡ ನಿರ್ಧಾರಕ್ಕೆ ರಾಜ್ಯಪಾಲರೇ ರಾಜೀನಾಮೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ತುರ್ತು ಕ್ಯಾಬಿನೆಟ್‌ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಹೀಗೆ ಮಾಡುತ್ತಾರೆ ಎನ್ನುವುದು ನಮಗೆ ಮೊದಲೇ ಗೊತ್ತಿತ್ತು. ರಾಜಕೀಯವಾಗಿ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ರಾಜಕೀಯವಾಗಿ ನಮಗೆ ಯಾಕೆ ಹಿನ್ನಡೆ ಆಗುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: MUDA Scam| ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿಗೆ `ಸುಪ್ರೀಂ ತೀರ್ಪು’ ಆಧಾರ – ರಾಜ್ಯಪಾಲರ ಆದೇಶದಲ್ಲಿ ಏನಿದೆ?

    ಜನರ ಮುಂದೆ ಅವರೇ ಎಕ್ಸ್‌ಪೋಸ್‌ ಆಗಿದ್ದಾರೆ. ರಾಜ್ಯಪಾಲರ ವಿರುದ್ದ ರಾಷ್ಟ್ರಪತಿಗಳಿಗೆ ದೂರು ಕೊಡುವ ಬಗ್ಗೆ ನಾವು ಇಂದು ಚರ್ಚೆ ಮಾಡಿಲ್ಲ. INDIA ಒಕ್ಕೂಟದ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್‌ – ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಬೆಳಕಿಗೆ ಬಂದಿದ್ದು ಹೇಗೆ?

    ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ನಿರಾಣಿ ಹಾಗೂ ಜನಾರ್ದನ ರೆಡ್ಡಿ ವಿರುದ್ದ ಇಲ್ಲಿಯವರೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ. ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ಲೂಟಿಯಲ್ಲಿ ಇವರ ಪಾತ್ರ ಇದೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

    ದೂರುದಾರ ಪ್ರದೀಪ್ ಕುಮಾರ್ ಜೆಡಿಎಸ್ ಲೀಗಲ್ ಸೆಲ್‌ ಅಧ್ಯಕ್ಷರು. ಕಾನೂನು ಸ್ವರೂಪ ಈಗ ಹೇಳುವುದಿಲ್ಲ, ಮಾಡುವಾಗ ಹೇಳುತ್ತೇನೆ. 7 ಕೋಟಿ ಜನರ ಬೆಂಬಲದಿಂದ ಸರ್ಕಾರ ರಚನೆಯಾಗಿದೆ. 135+1 ಸ್ಥಾನ ಗೆದ್ದಿದ್ದು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.

     

  • ರಾಜ್ಯ 7ನೇ ವೇತನ ಆಯೋಗ ಜಾರಿ ವಿಚಾರ- ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್!

    ರಾಜ್ಯ 7ನೇ ವೇತನ ಆಯೋಗ ಜಾರಿ ವಿಚಾರ- ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್!

    ಬೆಂಗಳೂರು: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಬಹುತೇಕ ಖಚಿತವಾಗಿದ್ದು, 7ನೇ ವೇತನ ಆಯೋಗದ (7th Pay Commission) ಶಿಫಾರಸು ಜಾರಿಗೆ ಸರ್ಕಾರ ಮುಂದಾಗಿದೆ. ವೇತನ ಆಯೋಗ ಜಾರಿ ಮಾಡಲು ಕ್ಯಾಬಿನೆಟ್ ಸಭೆಯಲ್ಲಿ (Cabinet Meeting) ಚರ್ಚೆ ನಡೆದಿದೆ ಎಂಬುದು ಮೂಲಗಳ ಮಾಹಿತಿ.

    25% ರಷ್ಟು ವೇತನ ಹೆಚ್ಚಳಕ್ಕೆ ಕೆಲ ಸಚಿವರು ಸಲಹೆ ನೀಡಿದರೆ, 27% ವೇತನ ಹೆಚ್ಚಳಕ್ಕೆ ಕೆಲ ಸಚಿವರು ಸಲಹೆ ನೀಡಿದ್ದು, 27% ವೇತನ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಒಲವು ತೋರಿದ್ದಾರೆ ಎನ್ನಲಾಗಿದೆ. ಆದರೆ ಅಂತಿಮವಾಗಿ ವೇತನ ಆಯೋಗ ಜಾರಿ ಜವಾಬ್ದಾರಿಯನ್ನು ಸಿಎಂಗೆ ನೀಡಿದ್ದು, ಈ ತಿಂಗಳ ಅಂತ್ಯದೊಳಗೆ ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಗ್ಯಾರಂಟಿಗಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ಪೆಟ್ರೋಲ್-ಡೀಸೆಲ್ ದರ ಏರಿಕೆ: ಸಿಎಂ

    ಅಂದಹಾಗೆ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ನೇತೃತ್ವದ ಏಳನೇ ವೇತನ ಆಯೋಗ ಮಾರ್ಚ್ 16 ರಂದು ಅಂತಿಮ ವರದಿ ಸಲ್ಲಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಅಂತಿಮ ವರದಿ ಸಲ್ಲಿಸಿದ್ದ ಆಯೋಗ, ಕರ್ನಾಟಕ ಸರ್ಕಾರಿ ನೌಕರರಿಗೆ 27.5% ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿತ್ತು. ಒಂದು ವೇಳೆ ಸರ್ಕಾರ ಅಂತಿಮ ವರದಿಯನ್ನೇ ಯಥಾವತ್ತಾಗಿ ಜಾರಿಗೊಳಿಸಿದರೆ ಮಾತ್ರ ಸರ್ಕಾರಿ ನೌಕರರ ಕನಿಷ್ಠ ವೇತನವು ತಿಂಗಳಿಗೆ 17,000 ರಿಂದ 27,000ಕ್ಕೆ ಏರುತ್ತದೆ. ಇದನ್ನೂ ಓದಿ: ರಾಹುಲ್ ಗಾಂಧಿ ಬಿಳಿ ಬಣ್ಣದ ಟೀ ಶರ್ಟ್ ಧರಿಸೋ ಹಿಂದಿನ ಸೀಕ್ರೆಟ್ ರಿವೀಲ್

  • ಸ್ಪಂದಿಸುವುದು ನಿಮ್ಮ ಕರ್ತವ್ಯ, ಎಷ್ಟು ಸಾಧ್ಯವೋ ಅಷ್ಟು ಶಾಸಕರ ಕೆಲಸ ಮಾಡಿಕೊಡಿ: ಸಿದ್ದರಾಮಯ್ಯ

    ಸ್ಪಂದಿಸುವುದು ನಿಮ್ಮ ಕರ್ತವ್ಯ, ಎಷ್ಟು ಸಾಧ್ಯವೋ ಅಷ್ಟು ಶಾಸಕರ ಕೆಲಸ ಮಾಡಿಕೊಡಿ: ಸಿದ್ದರಾಮಯ್ಯ

    ಬೆಂಗಳೂರು: ಸ್ಪಂದಿಸುವುದು ನಿಮ್ಮ ಕರ್ತವ್ಯ. ಎಷ್ಟು ಸಾಧ್ಯವೋ ಅಷ್ಟು ಪಕ್ಷದ ಶಾಸಕರ ಕೆಲಸ ಮಾಡಿಕೊಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ಸಂಪುಟದ ಸದಸ್ಯರಿಗೆ ಹೇಳಿದ್ದಾರೆ.

    ಗುರುವಾರ ನಡೆದ ಸಂಪುಟ ಸಭೆ (Cabinet Meeting) ಬಳಿಕ ನಡೆದ ಅನೌಪಚಾರಿಕ ಸಭೆಯಲ್ಲಿ ಪತ್ರದ ಬಗ್ಗೆ ವಿಸ್ತ್ರತ ಚರ್ಚೆ ನಡೆದಿದೆ. ಈ ವಿಚಾರದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಹೆಚ್‌ಡಿಕೆಗೆ ನಾಯಕತ್ವ ನೀಡೋ ದಾರಿದ್ರ್ಯ ಬಿಜೆಪಿಗಿಲ್ಲ: ಸುನೀಲ್‌ ಕುಮಾರ್‌

    ಶಾಸಕರು ಬಹಿರಂಗವಾಗಿ ಪತ್ರ ಬರೆಯಬಾರದಿತ್ತು. ಬರೆದಿದ್ದು ತಪ್ಪು. ಇನ್ನು ಮುಂದೆ ಹಾಗೆ ನಡೆದುಕೊಳ್ಳದಂತೆ ಸೂಚನೆ ನೀಡುತ್ತೇನೆ. ಆದರೆ ಶಾಸಕರುಗಳಿಗೆ ಸಾಕಷ್ಟು ನಿರೀಕ್ಷೆ ಇದೆ ಅದು ತಪ್ಪಲ್ಲ. ಅವರಿಂದಲೇ ನಾನು ಮುಖ್ಯಮಂತ್ರಿ ಆಗಿ ನೀವು ಸಚಿವರಾಗಿದ್ದೀರಿ. ಅವರಿಗೆ ಸ್ಪಂದಿಸುವುದು ನಿಮ್ಮ ಕರ್ತವ್ಯ. ಎಷ್ಟು ಸಾಧ್ಯವೋ ಅಷ್ಟು ಪಕ್ಷದ ಶಾಸಕರ ಕೆಲಸ ಮಾಡಿಕೊಡಿ. ಕೆಲಸ ಆಗದಿದ್ದರೆ ಮನವರಿಕೆ ಮಾಡಿಕೊಡಿ ಎಂದು ಸಿಎಂ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

    ಹೆಚ್ಚು ಅನುದಾನ ಇಲ್ಲ ಎನ್ನುವುದನ್ನು ಎಲ್ಲಾ ಶಾಸಕರಿಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡುತ್ತೇನೆ. ಜಿಲ್ಲಾ ಸಚಿವರುಗಳೇ ಆಯಾ ಜಿಲ್ಲೆಗಳ ಸಮಸ್ಯೆ ಬಗೆಹರಿಸಿದರೆ ಅರ್ಧ ಸಮಸ್ಯೆಯೇ ಬಗೆ ಹರಿಯಲಿದೆ ಎಂದು ಸೂಕ್ಷ್ಮವಾಗಿ ಸಚಿವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

     

    ಈ ನಡುವೆ ಕೆಲ ಹಿರಿಯ ಶಾಸಕರ ನಡೆ ಬಗ್ಗೆ ಸಚಿವರಿಂದಲೇ ಅಸಮಧಾನ ವ್ಯಕ್ತವಾಗಿದೆ. ಸಚಿವ ಸ್ಥಾನ ವಂಚಿತ ಕೆಲವರು ಹೀಗೆ ಮಾಡಿರಬಹುದಾ ಎಂಬ ಶಂಕೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಆಗ ಸಂಪುಟ ಸಹುದ್ಯೋಗಿಗಳನ್ನ ಸಮಾಧಾನ ಪಡಿಸಿದ ಸಿಎಂ, ನಿರೀಕ್ಷೆ ಜಾಸ್ತಿ ಇದ್ದಾಗ ಇವೆಲ್ಲಾ ಆಗುತ್ತವೆ. ನೀವುಗಳು ಶಾಸಕರನ್ನ ವಿಶ್ವಾಸದಿಂದ ಮಾತನಾಡಿಸಿ ಎಂದು ಸಿಎಂ ಸಮಧಾನಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾಬಿನೆಟ್ ಸಭೆಯ ತಿರುಚಿದ ವಿಡಿಯೋ ಅಪ್ಲೋಡ್ ಮಾಡಿದ ಖಾತೆಗಳು ಬ್ಲಾಕ್

    ಕ್ಯಾಬಿನೆಟ್ ಸಭೆಯ ತಿರುಚಿದ ವಿಡಿಯೋ ಅಪ್ಲೋಡ್ ಮಾಡಿದ ಖಾತೆಗಳು ಬ್ಲಾಕ್

    ನವದೆಹಲಿ: ಕೇಂದ್ರ ಕ್ಯಾಬಿನೆಟ್ ಸಭೆಯ ತಿರುಚಿದ ವಿಡಿಯೋಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ಟ್ವಿಟ್ಟರ್, ಫೇಸ್‌ಬುಕ್ ಹಾಗೂ ಟೆಲಿಗ್ರಾಮ್‌ನ ಹಲವಾರು ಖಾತೆಗಳ ವಿರುದ್ಧ ಕ್ರಮ ಕೈಗೊಂಡಿದೆ.

    ಕೆಲವು ಸಾಮಾಜಿಕ ಮಾದ್ಯಮದ ಬಳಕೆದಾರರು ಮಾರ್ಫಿಂಗ್ ಮೂಲಕ ವಿಷಯಗಳನ್ನು ದೋಷಪೂರಿತವಾಗಿ ತೋರಿಸುವ ಹಾಗೂ ಸಮುದಾಯಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡುತ್ತಾರೆ. ಹೀಗೆ ಹಲವಾರು ಮಾರ್ಫ್ ಮಾಡಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಇದನ್ನೂ ಓದಿ: ಸಶಸ್ತ್ರಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ಹೆಚ್ಚಿಸಲು ನೂರು ಸೈನಿಕ ಶಾಲೆಗಳ ಸ್ಥಾಪನೆ: ರಾಜನಾಥ್ ಸಿಂಗ್

    ಇತ್ತೀಚೆಗೆ ಮಾರ್ಫ್ ಮಾಡಿದ ಕ್ಯಾಬಿನೆಟ್‌ನ ವೀಡಿಯೋವೊಂದು ಬೇರೊಂದು ಆಡಿಯೋದೊಂದಿಗೆ ತೋರಿಸಲಾಗಿತ್ತು. ಈ ಕಾರಣಕ್ಕೆ ಟ್ವಿಟ್ಟರ್‌ನ 73 ಹ್ಯಾಂಡಲ್‌ಗಳು, ನಾಲ್ಕು ಯೂಟ್ಯೂಬ್ ವೀಡಿಯೋಗಳು, ಹಾಗೂ ಒಂದು ಇನ್‌ಸ್ಟಾಗ್ರಾಂ ಪೋಸ್ಟ್ ಅನ್ನು ತೆಗೆದು ಹಾಕಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನದ ಮಂತ್ರಿ ರಾಜೀವ್ ಚಂದ್ರಶೇಖರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: BJP ಶಾಸಕ ಪಂಕಜ್ ಗುಪ್ತಗೆ ಕಪಾಳಮೋಕ್ಷ ಮಾಡಿದ ರೈತ

    ಈ ಖಾತೆಯ ನಿರ್ವಾಹಕರನ್ನು ಗುರುತಿಸಲಾಗಿದೆ. ಅವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಮಹಿಳೆಯರ ವಿರುದ್ಧ ಅವಹೇಳನಕಾರಿ ವಿಷಯಗಳನ್ನು ಹಂಚುವ ಟೆಲಿಗ್ರಾಂ ಹಾಗೂ ಫೇಸ್‌ಬುಕ್ ಖಾತೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

  • ಕೆಲ ಸಚಿವರ ಪಾಲಿಗೆ ಇದೆ ಕೊನೆಯ ಕ್ಯಾಬಿನೆಟ್ – ಸಭೆಯ ಇನ್‍ಸೈಡ್ ಸ್ಟೋರಿ

    ಕೆಲ ಸಚಿವರ ಪಾಲಿಗೆ ಇದೆ ಕೊನೆಯ ಕ್ಯಾಬಿನೆಟ್ – ಸಭೆಯ ಇನ್‍ಸೈಡ್ ಸ್ಟೋರಿ

    ಬೆಂಗಳೂರು: ಸಂಪುಟ ವಿಸ್ತರಣೆ ಸಂಬಂಧ ಸಿಎಂ ಯಡಿಯೂರಪ್ಪ ಇಂದು ದೆಹಲಿಗೆ ತೆರಳುವ ಮೊದಲು ಕ್ಯಾಬಿನೆಟ್ ಸಭೆ ನಡೆಸಿದರು.

    ಕೇವಲ 15 ನಿಮಿಷದಲ್ಲೇ ಮುಗಿದ ಸಭೆಯಲ್ಲಿ ಸಚಿವರ ಜೊತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಂಪುಟ ವಿಸ್ತರಣೆ ಬದಲು ಪುನಾರಚನೆ ಆಗಬಹುದು. 8 ರಿಂದ 9 ಮಂದಿ ಹೊಸಬರು ಸಂಪುಟ ಸೇರಬಹುದು ಎಂಬುದಾಗಿ  ಹೇಳಿರುವುದಾಗಿ ಮೂಲಗಳು ತಿಳಿಸಿವೆ.

    ಸಿಎಂ ಹೇಳಿದ್ದೇನು?
    ಕೆಲ ಸಚಿವರ ಪಾಲಿಗೆ ಇದೇ ಕೊನೆ ಕ್ಯಾಬಿನೆಟ್ ಆಗಬಹುದು. ಯಾರಿಗೆ ಕೊಕ್ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್ ನಿರ್ಧಾರದಂತೆ ನಾನು ಸಂಪುಟ ಸರ್ಜರಿ ಮಾಡುತ್ತೇನೆ. ಸಂಪುಟದಿಂದ ಯಾರನ್ನಾದ್ರೂ ಕೈಬಿಟ್ಟರೆ ಬೇಸರ ಮಾಡಿಕೊಳ್ಳಬೇಡಿ. ಇದನ್ನೂ ಓದಿ: ಹೈಕಮಾಂಡ್ ಒಪ್ಪಿದ್ರೆ 6+3 ಫಾರ್ಮುಲಾ ಫೈನಲ್ – ಗೇಟ್‌ಪಾಸ್‌ ಯಾರಿಗೆ?

    ಇಷ್ಟು ದಿನ ಸಚಿವರಾಗಿ ಸಹಕಾರ ನೀಡಿದ್ದಕ್ಕೆ ಧನ್ಯವಾದ. ಹೈಕಮಾಂಡ್ ಒಪ್ಪಿದ್ರೆ ಶುಕ್ರವಾರ/ಸೋಮವಾರ ಪ್ರತಿಜ್ಞಾವಿಧಿ ನಡೆಯಬಹುದು.