Tag: ಕ್ಯಾಬಿನಟ್‌

  • ಜೂನ್‌ 1ಕ್ಕೆ ನಡೆಯಬೇಕಿದ್ದ ಕ್ಯಾಬಿನೆಟ್‌ ಸಭೆ ಶುಕ್ರವಾರಕ್ಕೆ ಹೋಗಿದ್ದು ಯಾಕೆ?

    ಜೂನ್‌ 1ಕ್ಕೆ ನಡೆಯಬೇಕಿದ್ದ ಕ್ಯಾಬಿನೆಟ್‌ ಸಭೆ ಶುಕ್ರವಾರಕ್ಕೆ ಹೋಗಿದ್ದು ಯಾಕೆ?

    ಬೆಂಗಳೂರು: ಗುರುವಾರ ನಡೆಯಬೇಕಿದ್ದ ಕ್ಯಾಬಿನೆಟ್‌ ಸಭೆ (Cabinet Meeting) ಶುಕ್ರವಾರಕ್ಕೆ ಹೋಗಿದ್ದು ಯಾಕೆ ಎನ್ನುವುದು ಈಗ ಗೊತ್ತಾಗಿದೆ.

    ಕಾಂಗ್ರೆಸ್‌ ನೀಡಿದ ಗ್ಯಾರಂಟಿ (Congress Guarantee) ಜಾರಿ ಸಂಬಂಧ ಸಚಿವರ ಸಭೆಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು (Finance Department Officers) ವಿರೋಧ ವ್ಯಕ್ತಪಡಿಸಿದ್ದಾರೆ.

    ಎಲ್ಲಾ ಐದೂ ಗ್ಯಾರಂಟಿಗಳ ಜಾರಿ‌ ಸದ್ಯಕ್ಕೆ ಕಷ್ಟ. ಬಜೆಟ್ ನಲ್ಲಿ ಅನುದಾನ ಹಂಚಿಕೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಉತ್ತರಕ್ಕೆ ಸಚಿವರುಗಳು, ನಾವು ಗ್ಯಾರಂಟಿ ಜಾರಿ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಯಾರಿಗೆ ಅಂತ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ: ಹೆಬ್ಬಾಳ್ಕರ್ ಹೇಳಿಕೆ ಒಪ್ಪದ ಡಿಕೆಶಿ

     

    ಸಚಿವರು ಜಾರಿಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ಒಂದು ದಿನ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಗುರುವಾರ ನಡೆಯಬೇಕಿದ್ದ ಸಂಪುಟ ಸಭೆ ಶುಕ್ರವಾರಕ್ಕೆ ಮುಂದೂಡಿಕೆಯಾಗಿದೆ.

    ಕಾಂಗ್ರೆಸ್‌ ನಾಯಕರು ಚುನಾವಣಾ ಪ್ರಚಾರದಲ್ಲಿ ಐದು ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್‌ನಲ್ಲೇ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಮೊದಲ ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿ ಜಾರಿ ಸಂಬಂಧ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.

    5 ಗ್ಯಾರಂಟಿ ಯೋಜನೆಗಳು ಯಾವುದು?
    ಗೃಹಜ್ಯೋತಿ : ಎಲ್ಲಾ ಮನೆಗಳಿಗೂ 200 ಯೂನಿಟ್‌ ಉಚಿತ ವಿದ್ಯುತ್‌
    ಗೃಹಲಕ್ಷ್ಮಿ : ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ರೂ.
    ಅನ್ನಭಾಗ್ಯ : ಬಿಪಿಎಲ್‌ ಕುಟುಂಬಗಳಿಗೆ 10 ಕೆಜಿ ಆಹಾರ ಧಾನ್ಯ
    ಯುವನಿಧಿ : ಎರಡು ವರ್ಷಗಳ ಕಾಲಕ್ಕೆ ನಿರುದ್ಯೋಗಿ ಭತ್ಯೆ – ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ಡಿಪ್ಲೋಮಾ ಮಾಡಿದವರಿಗೆ ತಿಂಗಳಿಗೆ 1,500 ರೂ.
    ಉಚಿತ ಪ್ರಯಾಣ: ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ