Tag: ಕ್ಯಾಪ್ಟನ್ ಗೋಪಿನಾಥ್

  • ಕನ್ನಡಿಗ ಸಾಹಸಿಯ ಲೈಫ್ ಸ್ಟೋರಿ ಚಿತ್ರಕ್ಕೆ ಅಕ್ಷಯ್ ಕುಮಾರ್ ಹೀರೋ

    ಕನ್ನಡಿಗ ಸಾಹಸಿಯ ಲೈಫ್ ಸ್ಟೋರಿ ಚಿತ್ರಕ್ಕೆ ಅಕ್ಷಯ್ ಕುಮಾರ್ ಹೀರೋ

    ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಈ ಚಿತ್ರಕ್ಕೆ ಕನ್ನಡ ಸಾಹಸಿಗರೊಬ್ಬರ ಲೈಫ್‍ ಯೊಂದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಸಾಹಸಿಗ ಬೇರೆ ಯಾರೂ ಅಲ್ಲ ಕರ್ನಾಟಕದ ಖ್ಯಾತ ಉದ್ಯಮಿ ಕ್ಯಾಪ್ಟನ್ ಗೋಪಿನಾಥ್ ಎನ್ನುವುದು ವಿಶೇಷ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

    ಈ ಹಿಂದೆ ಕ್ಯಾಪ್ಟನ್ ಗೋಪಿನಾಥ್ ಅವರ ಬದುಕನ್ನು ಆಧಿರಿಸಿ ಸುರರೈ ಪೊಟ್ರು ಸಿನಿಮಾವನ್ನು ತಮಿಳಿನಲ್ಲಿ ಮಾಡಲಾಗಿತ್ತು. ಗೋಪಿನಾಥ್ ಪಾತ್ರವನ್ನು ತಮಿಳಿನ ಖ್ಯಾತ ನಟ ಸೂರ್ಯ ನಿರ್ವಹಿಸಿದ್ದರು. ಇದೇ ಚಿತ್ರವನ್ನು ಹಿಂದಿಕೆ ರಿಮೇಕ್ ಮಾಡಲಾಗುತ್ತಿದೆ. ಸೂರ್ಯ ನಟಿಸಿದ್ದ ಪಾತ್ರವನ್ನೇ ಅಕ್ಷಯ್ ಇಲ್ಲಿ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

    ಗೋಪಿನಾಥ್ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡುತ್ತಿದ್ದರೆ, ನಾಯಕಿಯಾಗಿ ರಾಧಿಕಾ ಮದನ್ ನಟಿಸುತ್ತಿದ್ದಾರೆ. ತಮಿಳಿನ ಸುರರೈ ಪೊಟ್ರು ಸಿನಿಮಾವನ್ನು ನಿರ್ದೇಶನದ ಮಾಡಿದ್ದ ಸುಧಾ ಕೊಂಗರ ಅವರೇ ಹಿಂದಿ ಚಿತ್ರವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಇಂದಿನಿಂದ ಸಿನಿಮಾದ ಶೂಟಿಂಗ್ ನಡೆದಿದ್ದು, ಅದ್ಧೂರಿಯಾಗಿಯೇ ಈ ಸಿನಿಮಾ ಕೂಡ ಮೂಡಿ ಬರಲಿದೆಯಂತೆ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

    ಇಂದಿನಿಂದ ಶೂಟಿಂಗ್ ಶುರು ಮಾಡಿರುವ ವಿಷಯವನ್ನು ಸ್ವತಃ ಅಕ್ಷಯ್ ಕುಮಾರ್ ಅವರೇ ಬಹಿರಂಗ ಪಡಿಸಿದ್ದು, ಚಿತ್ರೀಕರಣಕ್ಕೂ ಮುನ್ನ ತೆಂಗಿನ ಕಾಯಿ ಒಡೆಯುವ  ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಯಶ್ ಮೇನಿಯಾ: 300 ಕೋಟಿ ಬಾಚಿದ `ಕೆಜಿಎಫ್ 2′

    ಗೋಪಿನಾಥ್ ಅವರ ಬದುಕಿನ ಕುರಿತಾಗಿ ಬಿಡುಗಡೆ ಆಗಿರುವ ಸಿಂಪ್ಲಿ ಫೈ ಕೃತಿಯಿಂದ ಪ್ರೇರಣೆಗೊಂಡು ಈ ಸಿನಿಮಾ ಮಾಡುತ್ತಿದ್ದು, ಭಾರತದ ವಾಯುಸೇನೆಯಲ್ಲಿ ಕ್ಯಾಪ್ಟನ್ ಆಗಿ ಕೆಲಸ ಮಾಡಿದ್ದ ಹಾಸನದ ಮೂಲದವರಾದ ಗೋಪಿನಾಥ್ ನ ಬದುಕನ್ನು ಈ ಸಿನಿಮಾದ ಮೂಲಕ ತೆರೆದಿಟ್ಟಿದ್ದರು ನಿರ್ದೇಶಕಿ ಸುಧಾ. ತಮಿಳಿನಲ್ಲಿ ಈ ಸಿನಿಮಾದ ಅದ್ಭುತ ಯಶಸ್ಸು ಕಂಡಿತ್ತು. ಹೀಗಾಗಿ ಹಿಂದಿ ಸಿನಿಮಾದ ಬಗ್ಗೆಯೂ ಈಗಿನಿಂದಲೇ ನಿರೀಕ್ಷೆ ಮೂಡಿದೆ.

  • 2021ರ ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು

    2021ರ ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು

    ಚೆನ್ನೈ: ಇತ್ತೀಚೆಗೆ ಬಿಡುಗಡೆಗೊಂಡ ಸೂರ್ಯ ನಟನೆಯ ಸೂರರೈ ಪೊಟ್ರು ಬಯೋಪಿಕ್ ಚಿತ್ರಪ್ರೇಮಿಗಳ ಮನಗೆದ್ದಿತ್ತು. ಇದೀಗ ಈ ಚಿತ್ರ 2021 ಆಸ್ಕರ್ ರೇಸ್ ಎಂಟ್ರಿ ಪಡೆದುಕೊಂಡಿದೆ.

    ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆಫ್ ಆರ್ಟ್ ಆ್ಯಂಡ್ ಸೈನ್ಸ್ ಬಿತ್ತರಿಸಿರುವ ಮಾಹಿತಿ ಪ್ರಕಾರ 366 ಚಲನಚಿತ್ರಗಳನ್ನು 93ನೇ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು. ಇದರಲ್ಲಿ ಸೂರ್ಯ ನಟನೆಯ ಸೂರರೈ ಪೊಟ್ರು ಸಿನಿಮಾ ಕೂಡ ಒಂದಾಗಿದೆ.

    ಕನ್ನಡಿಗ ಜಿ.ಆರ್ ಗೋಪಿನಾಥ್ ಅವರ ಕಥೆಯನ್ನಾಧರಿಸಿಕೊಂಡು ಮಾಡಿರುವ ಚಿತ್ರ ಸೂರರೈ ಪೊಟ್ರು. ಕ್ಯಾಪ್ಟನ್ ಗೋಪಿನಾಥ್ ದೇಶಕ್ಕಾಗಿ ಕೊಟ್ಟ ಕೊಡುಗೆಯನ್ನು ತಿಳಿಸುವ ಪ್ರಯತ್ನ ಮಾಡಿರುವ ಚಿತ್ರತಂಡ ಸಿನಿಪ್ರಿಯರ ಮನಗೆದ್ದಿತ್ತು.

    ಅತೀ ಮನೋಜ್ಞವಾಗಿ ನಟಿಸಿರುವ ಸೂರ್ಯ ಅವರ ನಟನೆ ಹಾಗೂ ಅವರ ಪತ್ನಿ ಪಾತ್ರಧಾರಿಯಾಗಿ ಮಿಂಚಿರುವ ಅರ್ಪಣ ಬಾಲಮುರಳಿ ಅವರು ಸಿನಿಮಾದುದ್ದಕ್ಕೂ ಕೌಟುಂಬಿಕ ಸನ್ನಿವೇಶವನ್ನು ಉತ್ತಮವಾಗಿ ಅಭಿನಯದ ಮೂಲಕ ಸಿನಿರಸಿಕರಿಗೆ ಉಣಬಡಿಸಿದ್ದಾರೆ.

    ಸೂರರೈ ಪೊಟ್ರು ಚಿತ್ರವನ್ನು ಸುಧಾ ಕೊಂಗರಾ ನಿರ್ದೇಶನ ಮಾಡಿದ್ದು, ಸೂರ್ಯ ಅವರ ಹೋಮ್ ಬ್ಯಾನರ್ 2ಡಿ ಎಂಟಟೈನ್ಮೆಂಟ್‍ನಲ್ಲಿ ನಿರ್ಮಾಣಮಾಡಲಾಗಿದೆ. ಚಿತ್ರದಲ್ಲಿ ಸಂಗೀತವನ್ನು ಜಿ.ವಿ ಪ್ರಕಾಶ್ ನೀಡಿ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

    ಇದೀಗ ಸೂರರೈ ಪೊಟ್ರು ಸಿನಿಮಾ 2021ರ ಆಸ್ಕರ್ ಪ್ರಶಸ್ತಿ ಸುತ್ತಿನಲ್ಲಿ ಉತ್ತಮ ನಟ, ಉತ್ತಮ ನಟಿ, ಉತ್ತಮ ಡೈರೆಕ್ಟರ್ ಮತ್ತು ಇತರ ವಿಭಾಗಗಳಲ್ಲಿ ಸ್ವರ್ಧೆಗೆ ತಯಾರಾಗಿದೆ. ಅಕಾಡೆಮಿಯ ವೋಟಿಂಗ್ ಮಾರ್ಚ್ 5 ರಿಂದ 10 ವರೆಗೆ ನಡೆಯಲಿದ್ದು, ನಾಮಿನೇಶನ್ ಅಂತಿಮವಾಗಿ ಮಾರ್ಚ್ 15 ರಂದು ಹೊರಬೀಳಲಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದೆ.

    ಕೋವಿಡ್- 19ನಿಂದಾಗಿ ಈಬಾರಿಯ ಆಸ್ಕರ್ ಪ್ರಶಸ್ತಿಯಲ್ಲಿ ಹಲವು ಬದಲಾವಣೆ ಮಾಡಲಾಗಿದ್ದು, ಈ ಬಾರಿ ಒಟಿಟಿಗಳಲ್ಲಿ ಬಿಡುಗಡೆಗೊಂಡ ಚಿತ್ರಗಳನ್ನು ಪ್ರಶಸ್ತಿ ಸುತ್ತಿಗೆ ನಾಮನಿರ್ದೇಶನ ಮಾಡುವ ನಿಯಮವನ್ನು ಜಾರಿಗೆ ತರಲಾಗಿದೆ.