Tag: ಕ್ಯಾಪ್ಟನ್

  • ಬಿಗ್ ಬಾಸ್ ಕನ್ನಡ: ವಿನಯ್ ಕೋಪಕ್ಕೆ ಜೈಲು ಪಾಲಾದ ಸಂಗೀತಾ

    ಬಿಗ್ ಬಾಸ್ ಕನ್ನಡ: ವಿನಯ್ ಕೋಪಕ್ಕೆ ಜೈಲು ಪಾಲಾದ ಸಂಗೀತಾ

    ವಿನಯ್ ಕೋಪಕ್ಕೆ ಬಲಿಯಾಗಿ ಒಂದು ದಿನ ಜೈಲುವಾಸ ಅನುಭವಿಸಿದ್ದಾರೆ ನಟಿ ಸಂಗೀತಾ ಶೃಂಗೇರಿ. ಟಾಸ್ಕ್ ವಿಚಾರದಲ್ಲಿ ವಿನಯ್ ಅವರನ್ನು ಎದುರು ಹಾಕಿಕೊಂಡಿದ್ದರು ಸಂಗೀತಾ. ಎರಡ್ಮೂರು ದಿನ ಸರಿಯಾಗಿಯೇ ಠಕ್ಕರ್ ಕೊಟ್ಟಿದ್ದರು. ಸಂಗೀತಾ ಹೆಚ್ಚೆಚ್ಚು ಬಲಶಾಲಿ ಆಗುತ್ತಿರುವುದು ವಿನಯ್ ಗೆ ಸಹಿಸಿಕೊ‍ಳ್ಳಲು ಆಗುತ್ತಿರಲಿಲ್ಲ. ಈ ಎಲ್ಲ ಕಾರಣವನ್ನಿಟ್ಟುಕೊಂಡು ಸಂಗೀತಾರನ್ನು ನಿನ್ನೆ ಜೈಲಿಗೆ ಕಳುಹಿಸಿದ್ದರು ವಿನಯ್.

    ಕೊನೆಗೂ ವಿನಯ್‌ ಬಿಗ್‌ಬಾಸ್‌ (Bigg Boss Kannada) ಮನೆಯಲ್ಲಿ ಕ್ಯಾಪ್ಟನ್ (Captain) ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲನೇ ವಾರದಿಂದಲೂ ಕ್ಯಾಪ್ಟನ್‌ ಆಗಲು ಒಂದಿಲ್ಲ ಒಂದು ಬಗೆಯಲ್ಲಿ ಪ್ರಯತ್ನಿಸುತ್ತಲೇ ಇದ್ದ ವಿನಯ್‌ಗೆ (Vinay Gowda) ನಾಲ್ಕನೇ ವಾರದಲ್ಲಿ ಯಶಸ್ಸು ದೊರಕಿದೆ. ಈ ಯಶಸ್ಸು ಇಡೀ ಮನೆಯ ಇಕ್ವೇಷನ್‌ ಅನ್ನೇ ಬದಲಿಸುವ ಹಾಗಿದೆ. ಬದಲಾಗಿ ತಮ್ಮ ಬದ್ದವೈರಿ ಎಂದೇ ಕರೆಯಲ್ಪಡುವ ಸಂಗೀತಾರನ್ನು ಕಳಪೆ ಎಂಬ ಕಾರಣಕ್ಕಾಗಿ ಜೈಲು ಪಾಲು ಮಾಡಲಾಗಿದೆ. ಸಂಗೀತ ನಿನ್ನೆಯಿಂದ ಜೈಲಿನಲ್ಲಿ ವಾಸ ಶುರು ಮಾಡಿದ್ದಾರೆ.

    ಹಳ್ಳಿಜೀವನದ ಟಾಸ್ಕ್‌ನಲ್ಲಿ ವಿನಯ್‌ ತಂಡ ಗೆದ್ದು ಬೀಗಿತ್ತು. ಸಂಗೀತಾ (Sangeetha Sringeri) ತಂಡ ಸೋತು ತಣ್ಣಗಾಗಿತ್ತು. ಹಾಗಾಗಿ ವಿನಯ್ ತಂಡದ ಎಲ್ಲರ ಜೊತೆ ತುಕಾಲಿ ಸಂತೋಷ್ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹರಾಗಿದ್ದರು. ಟಾಸ್ಕ್‌ನಲ್ಲಿ ಕೊನೆಗೆ ಉಳಿದಿದ್ದು ತುಕಾಲಿ ಮತ್ತು ವಿನಯ್ ಇಬ್ಬರೇ. ತುಕಾಲಿ ಅವರಿಗೆ ವಿನಯ್‌ ಅವರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗೆ ಹಾಕುವ ಅವಕಾಶವಿದ್ದಾಗಲೂ ಅವರು ಅದನ್ನು ಬಳಸಿಕೊಳ್ಳದೆ ಸಿರಿ ಅವರನ್ನು ಹೊರಗೆ ಹಾಕಿದ್ದರು. ಇದರ ಪರಿಣಾಮವಾಗಿ ತುಕಾಲಿ ತಾವೇ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೋತು ಕ್ಯಾಪ್ಟನ್‌ ಪಟ್ಟವನ್ನು ವಿನಯ್‌ ಅವರಿಗೆ ಬಿಟ್ಟುಕೊಡಬೇಕಾಗಿತ್ತು.

    ಬಿಗ್‌ಬಾಸ್‌ ಈ ಸೀಸನ್‌ನ ಪ್ರಾರಂಭದ ದಿನಂದಿಗಲೂ ಸಂಗೀತಾ ವರ್ಸಸ್ ವಿನಯ್‌ ಜಟಾಪಟಿ ನಡೆಯುತ್ತಲೇ ಇದೆ. ಹಳ್ಳಿಜೀವನದ ಟಾಸ್ಕ್‌ಗಳಲ್ಲಿಯಂತೂ ಅದು ಅತಿರೇಕಕ್ಕೇ ಹೋಗಿತ್ತು. ಸಂಗೀತಾ ಮತ್ತು ಅವರ ತಂಡದ ಎಲ್ಲ ಸದಸ್ಯರೂ ವಿನಯ್ ಅವರನ್ನು ಕೆಣಕಿ, ಅವರ ಮಾತಿಗೆ ನೇರವಾಗಿ ಕೌಂಟರ್ ಕೊಟ್ಟು ಸಾಕಷ್ಟು ಕೆರಳಿಸಿದ್ದರು. ಆದರೆ ಇದೀಗ ವಿನಯ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಯಾವ ಅಧಿಕಾರ ಇಲ್ಲದಿದ್ದಾಗಲೂ ವಿನಯ್ ಅವರನ್ನು ತಡೆಯುವುದು ಕಷ್ಟ. ಇನ್ನು ಅಧಿಕಾರ ಸಿಕ್ಕ ಮೇಲೆ ಕೇಳಬೇಕೆ?

    ಪ್ರತಾಪ್‌ ಅವರು ‘ವಿನಯ್ ಅವರು ಈ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ’ ಎಂದು ಘೋಷಿಸಿದ ಗಳಿಗೆಯಲ್ಲಿ ಸಂಗೀತಾ ಗ್ಯಾಂಗ್‌ ಪೂರ್ತಿ ಮೌನವಾಗಿ ಕೂತುಬಿಟ್ಟಿತ್ತು. ವಿನಯ್‌, ತಮ್ಮದೇ ಸ್ಟೈಲ್‌ನಲ್ಲಿ, ‘ಆನೆ ಬಂತೊಂದಾನೆ…’ ಎಂದು ಸಂಭ್ರಮಿಸುತ್ತಿರುವಾಗ ಕಾರ್ತಿಕ್ ಮುಖದಲ್ಲಿ ಆತಂಕ ಎದ್ದು ಕಾಣಿಸುವಂತಿತ್ತು.

     

    ಡ್ರೆಸ್ಸಿಂಗ್ ರೂಮಿನಲ್ಲಿ ಸಂಗೀತಾ ಕನ್ನಡಿ ಮುಂದೆ ನಿಂತು, ‘ನಾವು ಆನೆ ವಿರೋಧಿಗಳಲ್ಲ; ನಾವು ಆನೆಗೆ ಹೆದರೋದೂ ಇಲ್ಲ’ ಎಂದು ಡೈಲಾಗ್ ಹೊಡೆದಿರುವುದು ಮುಂದಿನ ವಾರ ಇನ್ನಷ್ಟು ಹಗ್ಗ ಜಗ್ಗಾಟ ನಡೆಯುವ ಸ್ಪಷ್ಟ ಸೂಚನೆಯನ್ನಂತೂ ಅದಕ್ಕೂ ಮೊದಲ ಸಂಗೀತಾರನ್ನು ಜೈಲಿಗೆ ತಳ್ಳುವ ಮೂಲಕ ಮೊದಲ ಶೇಡ್ ತೀರಿಸಿಕೊಂಡಿದ್ದಾರೆ ವಿನಯ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಗೀತಾ ಗ್ಯಾಂಗ್ ಗೆ ನಡುಕ ಹುಟ್ಟಿಸಿದ ವಿನಯ್ ಕ್ಯಾಪ್ಟೆನ್ಸಿ

    ಸಂಗೀತಾ ಗ್ಯಾಂಗ್ ಗೆ ನಡುಕ ಹುಟ್ಟಿಸಿದ ವಿನಯ್ ಕ್ಯಾಪ್ಟೆನ್ಸಿ

    ಕೊನೆಗೂ ವಿನಯ್‌ ಬಿಗ್‌ಬಾಸ್‌ (Bigg Boss Kannada) ಮನೆಯಲ್ಲಿ ಕ್ಯಾಪ್ಟನ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲನೇ ವಾರದಿಂದಲೂ ಕ್ಯಾಪ್ಟನ್‌ (Captain) ಆಗಲು ಒಂದಿಲ್ಲ ಒಂದು ಬಗೆಯಲ್ಲಿ ಪ್ರಯತ್ನಿಸುತ್ತಲೇ ಇದ್ದ ವಿನಯ್‌ಗೆ ನಾಲ್ಕನೇ ವಾರದಲ್ಲಿ ಯಶಸ್ಸು ದೊರಕಿದೆ. ಈ ಯಶಸ್ಸು ಇಡೀ ಮನೆಯ ಇಕ್ವೇಷನ್‌ ಅನ್ನೇ ಬದಲಿಸುವ ಹಾಗಿದೆ. JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿ ಕ್ಯಾಪ್ಟನ್‌ ವಿನಯ್ ಅವರ ಝಲಕ್‌ಗಳಿವೆ.

    ಹಳ್ಳಿಜೀವನದ ಟಾಸ್ಕ್‌ನಲ್ಲಿ ವಿನಯ್‌ ತಂಡ ಗೆದ್ದು ಬೀಗಿತ್ತು. ಸಂಗೀತಾ ತಂಡ ಸೋತು ತಣ್ಣಗಾಗಿತ್ತು. ಹಾಗಾಗಿ ವಿನಯ್ (Vinay Gowda) ತಂಡದ ಎಲ್ಲರ ಜೊತೆ ತುಕಾಲಿ ಸಂತೋಷ್ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹರಾಗಿದ್ದರು. ಟಾಸ್ಕ್‌ನಲ್ಲಿ ಕೊನೆಗೆ ಉಳಿದಿದ್ದು ತುಕಾಲಿ ಮತ್ತು ವಿನಯ್ ಇಬ್ಬರೇ. ತುಕಾಲಿ ಅವರಿಗೆ ವಿನಯ್‌ ಅವರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗೆ ಹಾಕುವ ಅವಕಾಶವಿದ್ದಾಗಲೂ ಅವರು ಅದನ್ನು ಬಳಸಿಕೊಳ್ಳದೆ ಸಿರಿ ಅವರನ್ನು ಹೊರಗೆ ಹಾಕಿದ್ದರು. ಇದರ ಪರಿಣಾಮವಾಗಿ ತುಕಾಲಿ ತಾವೇ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೋತು ಕ್ಯಾಪ್ಟನ್‌ ಪಟ್ಟವನ್ನು ವಿನಯ್‌ ಅವರಿಗೆ ಬಿಟ್ಟುಕೊಡಬೇಕಾಗಿತ್ತು.

    ಬಿಗ್‌ಬಾಸ್‌ ಈ ಸೀಸನ್‌ನ ಪ್ರಾರಂಭದ ದಿನಂದಿಗಲೂ ಸಂಗೀತಾ (Sangeetha Sringeri) ವರ್ಸಸ್ ವಿನಯ್‌ ಜಟಾಪಟಿ ನಡೆಯುತ್ತಲೇ ಇದೆ. ಹಳ್ಳಿಜೀವನದ ಟಾಸ್ಕ್‌ಗಳಲ್ಲಿಯಂತೂ ಅದು ಅತಿರೇಕಕ್ಕೇ ಹೋಗಿತ್ತು. ಸಂಗೀತಾ ಮತ್ತು ಅವರ ತಂಡದ ಎಲ್ಲ ಸದಸ್ಯರೂ ವಿನಯ್ ಅವರನ್ನು ಕೆಣಕಿ, ಅವರ ಮಾತಿಗೆ ನೇರವಾಗಿ ಕೌಂಟರ್ ಕೊಟ್ಟು ಸಾಕಷ್ಟು ಕೆರಳಿಸಿದ್ದರು. ಆದರೆ ಇದೀಗ ವಿನಯ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಯಾವ ಅಧಿಕಾರ ಇಲ್ಲದಿದ್ದಾಗಲೂ ವಿನಯ್ ಅವರನ್ನು ತಡೆಯುವುದು ಕಷ್ಟ. ಇನ್ನು ಅಧಿಕಾರ ಸಿಕ್ಕ ಮೇಲೆ ಕೇಳಬೇಕೆ?

    ಪ್ರತಾಪ್‌ ಅವರು ‘ವಿನಯ್ ಅವರು ಈ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ’ ಎಂದು ಘೋಷಿಸಿದ ಗಳಿಗೆಯಲ್ಲಿ ಸಂಗೀತಾ ಗ್ಯಾಂಗ್‌ ಪೂರ್ತಿ ಮೌನವಾಗಿ ಕೂತುಬಿಟ್ಟಿತ್ತು. ವಿನಯ್‌, ತಮ್ಮದೇ ಸ್ಟೈಲ್‌ನಲ್ಲಿ, ‘ಆನೆ ಬಂತೊಂದಾನೆ…’ ಎಂದು ಸಂಭ್ರಮಿಸುತ್ತಿರುವಾಗ ಕಾರ್ತಿಕ್ ಮುಖದಲ್ಲಿ ಆತಂಕ ಎದ್ದು ಕಾಣಿಸುವಂತಿತ್ತು.

     

    ಡ್ರೆಸ್ಸಿಂಗ್ ರೂಮಿನಲ್ಲಿ ಸಂಗೀತಾ ಕನ್ನಡಿ ಮುಂದೆ ನಿಂತು, ‘ನಾವು ಆನೆ ವಿರೋಧಿಗಳಲ್ಲ; ನಾವು ಆನೆಗೆ ಹೆದರೋದೂ ಇಲ್ಲ’ ಎಂದು ಡೈಲಾಗ್ ಹೊಡೆದಿರುವುದು ಮುಂದಿನ ವಾರ ಇನ್ನಷ್ಟು ಹಗ್ಗ ಜಗ್ಗಾಟ ನಡೆಯುವ ಸ್ಪಷ್ಟ ಸೂಚನೆಯನ್ನಂತೂ ನೀಡಿದೆ. ಹಾಗಾದರೆ ಈಗ ಸ್ಪಷ್ಟವಾಗಿ ಗುಂಪಾಗಿರುವ ಎರಡು ಗ್ಯಾಂಗಿನ ಮುಂದಿನ ವಾರ ಹೇಗಿರಲಿದೆ? ಕ್ಯಾಪ್ಟನ್‌ ಅಧಿಕಾರವನ್ನು ವಿನಯ್ ತಮ್ಮ ವಿರೋಧಿಗಳ ಮೇಲೆ ಸೇಡು ತೀರಿಕೊಳ್ಳಲು ಬಳಸಿಕೊಳ್ಳುತ್ತಾರಾ? ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾಪ್ಟನ್ ಸೋಲಿಸಿ ಕ್ಯಾಪ್ಟನ್ ಆದ ‘ಬಿ ಬಾಸ್’ ರಕ್ಷಕ್

    ಕ್ಯಾಪ್ಟನ್ ಸೋಲಿಸಿ ಕ್ಯಾಪ್ಟನ್ ಆದ ‘ಬಿ ಬಾಸ್’ ರಕ್ಷಕ್

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಇದೀಗ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಗಳ ಮಧ್ಯೆ ಹಣಾಹಣಿ ನಡೆದಿದೆ. ನಮ್ಮನೆ ಯುವರಾಣಿ ಖ್ಯಾತಿಯ ಸ್ನೇಹಿತ್‌ಗೆ ಠಕ್ಕರ್ ಕೊಟ್ಟು ಮನೆಯ ಕ್ಯಾಪ್ಟನ್ (Captain) ಆಗಿ ರಕ್ಷಕ್ ಬುಲೆಟ್ (Bullet Rakshak)  ಆಯ್ಕೆಯಾಗಿದ್ದಾರೆ. ನಡೆದ ಟಾಸ್ಕ್ ನಲ್ಲಿ ಗಟ್ಟಿ ಪೈಪೋಟಿ ನೀಡಿದ್ದಾರೆ.

    ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಮೊದಲನೇ ವಾರ ಸ್ನೇಹಿತ್ ಕ್ಯಾಪ್ಟನ್ ಆಗಿ ಮನೆಯ ಸ್ಪರ್ಧಿಗಳ ಮನಗೆದ್ದರು. ಅದರಂತೆ 2ನೇ ವಾರದ ಕ್ಯಾಪ್ಟನ್ ಆಗಲು ಕೂಡ ರಕ್ಷಕ್ ಬುಲೆಟ್ ಜೊತೆ ಮತ್ತೆ ಸ್ನೇಹಿತ್ ಪೈಪೋಟಿ ನೀಡಿದರು. ಚೆಂಡನ್ನು ಪಿರಾಮಿಡ್ ಆಕಾರದಲ್ಲಿ ಜೋಡಿಸುವ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಸ್ನೇಹಿತ್‌ಗೆ ಠಕ್ಕರ್ ಕೊಟ್ಟು ರಕ್ಷಕ್ ಗೆದ್ದು ಬೀಗಿದ್ದಾರೆ.

    ರಕ್ಷಕ್ ಗೆಲುವಿಗೆ ಬಿಗ್ ಬಾಸ್ ಅಭಿನಂದನೆ ತಿಳಿಸಿ ಸ್ಪೆಷಲ್ ಉಡುಗೊರೆಯೊಂದನ್ನ ಕಳುಹಿಸಿದ್ದಾರೆ. ರಕ್ಷಕ್ ಅವರು ಮನೆಯವರ ಫೋಟೋ ಕಳುಹಿಸಲು ಕೇಳಿಕೊಂಡಿದ್ದರು. ಅದರಂತೆ ಕ್ಯಾಪ್ಟನ್ ಆದ ಬಳಿಕ ಕುಟುಂಬದ ಫೋಟೋವನ್ನೇ ಗಿಫ್ಟ್ ಆಗಿ ನೀಡಿದ್ದಾರೆ. ರಕ್ಷಕ್ ಕೂಡ ನೋಡಿ ಖುಷಿಪಟ್ಟಿದ್ದಾರೆ.

    `ಗುರುಶಿಷ್ಯರು’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ರಕ್ಷಕ್ ಬುಲೆಟ್ ಎಂಟ್ರಿ ಕೊಟ್ಟರು. ಡಿ ಬಾಸ್ ಅಭಿಮಾನಿ ಆಗಿರುವ ರಕ್ಷಕ್ ಈಗ ದೊಡ್ಮನೆಯಲ್ಲಿ ಕಮಾಲ್ ಮಾಡ್ತಿದ್ದಾರೆ. ಸದಾ ಟ್ರೋಲ್ ಮೂಲಕ ಸದ್ದು ಮಾಡಿರುವ ರಕ್ಷಕ್, ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದು ಗೆದ್ದು ಬೀಗುತ್ತಾರಾ ಎಂದು ಕಾಯಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಅಂದ್ರೆ ಸುಮ್ನೆನಾ?: ಕ್ಯಾಪ್ಟನ್‌ಗೇ ಪನಿಶ್‌ಮೆಂಟ್

    ಬಿಗ್ ಬಾಸ್ ಅಂದ್ರೆ ಸುಮ್ನೆನಾ?: ಕ್ಯಾಪ್ಟನ್‌ಗೇ ಪನಿಶ್‌ಮೆಂಟ್

    ಬಿಗ್‌ಬಾಸ್‌ ಕನ್ನಡದ ಹತ್ತನೇ (Bigg Boss Kannada) ಸೀಸನ್‌ನ ಮೊದಲನೇ ನಾಯಕನಾಗಿ (Captain) ಸ್ನೇಹಿತ್ ಆಯ್ಕೆಯಾಗಿದ್ದರು. ನಾಯಕನಾದ ಮೇಲೆ ಅವರ ವರ್ತನೆಯೇ ಬದಲಾಗಿದೆ ಎಂದು ಆರಂಭದಲ್ಲಿ ಉಳಿದ ಸ್ಪರ್ಧಿಗಳು ಮಾತಾಡಿಕೊಂಡಿದ್ದರು. ನಂತರ ಅವರು ತಮ್ಮ ವರ್ತನೆಯನ್ನು ತಿದ್ದಿಕೊಂಡಿದ್ದಾರೆ ಎಂಬ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ವಾರವಿಡೀ ಹಲವು ಸಂದರ್ಭಗಳಲ್ಲಿ ಅವರು ಕ್ಯಾಪ್ಟನ್‌ ಪಾತ್ರವನ್ನು ನಿರ್ವಹಿಸಿದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

    ಈಗ ಮನೆಮಂದಿಯೆಲ್ಲ ಸೇರಿ ಸ್ನೇಹಿತ್‌ (Snehith) ಕ್ಯಾಪ್ಟನ್ಸಿಗೆ ಅಂಕಗಳನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸಕಾರಣ ನೀಡಿ ಅವರನ್ನು ಬಿಗ್‌ಬಾಸ್‌ ಮನೆಯ ಈಜುಕೊಳದಲ್ಲಿ ನೂಕಿದ್ದಾರೆ ಕೂಡ.  ಪ್ರತಿಯೊಬ್ಬರು ನೂಕಿದಾಗಲೂ ನೀರೊಳಗೆ ಬಿದ್ದ ಸ್ನೇಹಿತ್, ಮತ್ತೆ ಎದ್ದುಬಂದು ನಡುಗುತ್ತ ನಿಂತಿದ್ದಾರೆ. ಅವರ ಮೈಯಲ್ಲಿ ನಡುಕವಿದ್ದರೆ ಕಣ್ಣೊಳಗೆ ಅಗ್ರೆಸಿವ್‌ನೆಸ್‌ ಕಾಣಿಸುತ್ತಿದೆ.

    ಸ್ನೇಹಿತ್‌ ಕ್ಯಾಪ್ಟನ್ಸಿ ಬಗ್ಗೆ ಯಾವ್ಯಾವ ಸ್ಪರ್ಧಿಗಳು ಎಷ್ಟೆಷ್ಟು ಮಾರ್ಕ್ಸ್‌ ಕೊಟ್ಟಿದ್ದಾರಾ? ಓವರಾಲ್ ಆಗಿ ಕ್ಯಾಪ್ಟನ್‌ ಆಗಿ ಸ್ನೆಹಿತ್ ಗೆದ್ದಿದ್ದಾರಾ? ಸೋತಿದ್ದಾರಾ? ಸ್ನೇಹಿತ್ ಅದರಿಂದ ಕಲಿತದ್ದು ಏನು? ಇದೆಲ್ಲವೂ ಸದ್ಯ JioCinemaದಲ್ಲಿ ಮಾತ್ರ ಲಭ್ಯವಿದೆ. ಸ್ನೇಹಿತ್ ನೀರಿಗೆ ಬಿದ್ದಾಗೊಮ್ಮೆ ಎದ್ದು ಬರುವ ದೃಶ್ಯ ಮಾತ್ರ ಪಾಪ ಅನಿಸುವಂತಿದೆ.

     

    ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ ಕ್ಯಾಪ್ಟನ್ ಆಗಿ ಸ್ನೇಹಿತ್ ತಕ್ಕ ಮಟ್ಟಿಗೆ ಹುದ್ದೆಯನ್ನು ನಿಭಾಯಿಸಿದ್ದಾರೆ. ಕೆಲವು ತಪ್ಪುಗಳನ್ನು ಮಾಡಿರಬಹುದು. ಆದರೆ, ತೀರಾ ಕಳಪೆ ಎನ್ನುವ ರೀತಿಯಲ್ಲಂತೂ ವರ್ತಿಸಿಲ್ಲ. ಹೀಗಾಗಿ ಸ್ನೇಹಿತ್ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಇರಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • BBK 10- ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಸ್ನೇಹಿತ್: ಕಣ್ಣೀರಿಟ್ಟ ನಮ್ರತಾ

    BBK 10- ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಸ್ನೇಹಿತ್: ಕಣ್ಣೀರಿಟ್ಟ ನಮ್ರತಾ

    ಬಿಗ್ ಬಾಸ್ (Bigg Boss Kannada) ಮನೆಯ ಮೊದಲ ಕ್ಯಾಪ್ಟನ್ ಆಗಬೇಕು ಎನ್ನುವ ಕನಸು ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ, ಬಿಗ್ ಬಾಸ್ ಆಡಿಸುವ ಆಟದಲ್ಲಿ ಅವರು ಗೆಲ್ಲಬೇಕು. ಟಾಸ್ಕ್ ಗೆಲ್ಲದೇ ಕ್ಯಾಪ್ಟನ್ ಆಗುವುದಕ್ಕೆ ಸಾಧ್ಯವೇ ಇಲ್ಲ. ನೆನ್ನೆಯೂ ಕ್ಯಾಪ್ಟನ್ (Captain) ಗಾಗಿ ಹಲವರು ಟಾಸ್ಕ್ ಗಳು ನಡೆದವು. ಅಂತಿಮವಾಗಿ ಬಿಗ್ ಬಾಸ್ ಮನೆಗೆ ಮೊದಲ ಕ್ಯಾಪ್ಟನ್ ಆಗಹಿ ಸ್ನೇಹಿತ್ (Snehith) ಆಯ್ಕೆಯಾಗಿದ್ದಾರೆ.

    ತುಕಾಲಿ ಸಂತು ಮತ್ತು ನಮ್ರತಾ ಗೌಡ (Namrata Gowda) ಕ್ಯಾಪ್ಟನ್ ಆಟದಲ್ಲಿ ಪ್ರತಿಸ್ಪರ್ಧಿಯಾಗಿದ್ದರು. ಈ ಇಬ್ಬರೂ ಕ್ಯಾಪ್ಟನ್ ಶಿಪ್ ಗೆಲ್ಲುವನ್ನು ವಿಫಲರಾದರು. ಹಾಗಾಗಿ ಮೊದಲ ಕ್ಯಾಪ್ಟನ್ ಪಟ್ಟವನ್ನು ಸ್ನೇಹಿತ್ ಮುಡಿಗೇರಿಸಿಕೊಂಡರು. ಕ್ಯಾಪ್ಟನ್ ಆಗುತ್ತಿದ್ದಂತೆಯೇ ಮನೆಯಲ್ಲಿ ನಿರಾಸೆ ಕಾದಿತ್ತು. ಯಾಕೆಂದರೆ, ಕ್ಯಾಪ್ಟನ್ ಮೀರಿಸುವಂತಹ ವ್ಯಕ್ತಿಯೊಬ್ಬರು ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಮಾಡಿದ್ದಾರೆ.

    ದೊಡ್ಮನೆಗೆ ಮತ್ತೊಂದು ಸಲ ಒಳ್ಳೆಯ ಹುಡುಗ ಪ್ರಥಮ್ (Pratham) ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 4ರಲ್ಲಿ ಕಂಟೆಸ್ಟೆಂಟ್ ಆಗಿ ಹೋದವರು, ಟ್ರೋಫಿ ಗೆದ್ದುಕೊಂಡು ಹೊರ ಬಂದರು. ಇದೀಗ ಪ್ರಥಮ್ ಟಾಸ್ಕ್ ಆಡಿಸುವುದಕ್ಕಾಗಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಲಾರ್ಡ್ ಪ್ರಥಮ್ ಹೆಸರಿನಲ್ಲಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಲೇ ಗತ್ತಿನ ಮಾತುಗಳಿಂದ ಒಂದು ರೀತಿಯಲ್ಲಿ ಕುತೂಹಲ ಮೂಡಿಸಿದ್ದಾರೆ.

    ಪ್ರಥಮ್ ಗಿಂತ ಮೊದಲು ಗನ್ ಮ್ಯಾನ್ ಎಂಟ್ರಿ

    ದೊಡ್ಮನೆಯ ಆಟ ಜೋರಾಗಿದೆ. ದಿನದಿಂದ ದಿನಕ್ಕೆ ಮನೆಯ ರಂಗು ಬದಲಾಗುತ್ತಿದೆ. ಈಗ ಮನೆಯ ಅಸಲಿ ಆಟ ಶುರುವಾಗಿದೆ. ಬಿಗ್ ಮನೆಗೆ ಗನ್‌ಮ್ಯಾನ್‌ಗಳು ದಿಢೀರ್ ಎಂದು ಎಂಟ್ರಿ ಕೊಟ್ಟಿದ್ದಾರೆ. ಗನ್ ಮ್ಯಾನ್‌ಗಳ ಎಂಟ್ರಿ ನೋಡಿ ಮನೆಮಂದಿ ಶಾಕ್ ಆಗಿದ್ದಾರೆ.

    ಬಿಗ್ ಬಾಸ್ ಮನೆಗೆ(Bigg Boss House) 8 ಜನ ಗನ್ ಮ್ಯಾನ್‌ಗಳ (Gun Man) ಆಗಮನವಾಗಿದೆ. ಸಡನ್ ಆಗಿ ಗನ್ ಮ್ಯಾನ್‌ಗಳು ಎಂಟ್ರಿ ಕೊಟ್ಟಿರೋದು ನೋಡಿ ಮನೆ ಮಂದಿ ಒಮ್ಮೆ ಸೈಲೆಂಟ್ ಆಗಿದ್ದಾರೆ. ಬಳಿಕ ಚಪ್ಪಾಳೆ ಹೊಡೆದು ಸ್ಪರ್ಧಿಗಳು ಸ್ವಾಗತ ಕೋರಿದ್ದಾರೆ. ಅವರ ಮುಖದಲ್ಲಿರೋ ಮಂದಹಾಸ ನೋಡಿ ಮನೆಗೆ ಹೊಸ ಸೆಲೆಬ್ರಿಟಿ ಎಂಟ್ರಿ ಕೊಡ್ತಿದ್ದಾರಾ ಎಂಬ ಅನುಮಾನ ಮೂಡಿದೆ.

     

    ಅಕ್ಟೋಬರ್ 9ರ ಎಪಿಸೋಡ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಆಗಮಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಬಿಗ್ ಮನೆಯಲ್ಲಿ 3 ಗಂಟೆಗಳ ಕಾಲ ಕಳೆಯುವ ಮೂಲಕ ಸ್ಪರ್ಧಿಗಳಿಗೆ ಸ್ಪೂರ್ತಿ ತುಂಬಿದ್ದರು. ಪ್ರದೀಪ್ ಈಶ್ವರ್ ಅವರ ಎಂಟ್ರಿಗೆ ರಾಜಕೀಯ ರಂಗದಲ್ಲಿ (Politics) ಕೋಲಾಹಲ ಎಬ್ಬಿಸಿದ್ದರೂ ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ : ರೂಪೇಶ್ ರಾಜಣ್ಣ ಕಳಪೆ, ಕಾವ್ಯಶ್ರೀ ಗೌಡ ಕ್ಯಾಪ್ಟನ್

    ಬಿಗ್ ಬಾಸ್ : ರೂಪೇಶ್ ರಾಜಣ್ಣ ಕಳಪೆ, ಕಾವ್ಯಶ್ರೀ ಗೌಡ ಕ್ಯಾಪ್ಟನ್

    ಬಿಗ್ ಬಾಸ್ (Bigg Boss) ಸೀಸನ್ 9 ಕಾರ್ಯಕ್ರಮ ಇದೀಗ ಏಳನೇ ವಾರದಲ್ಲಿ ಮುನ್ನುಗ್ಗುತ್ತಿದೆ. ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ವಿಚಾರದಲ್ಲಿ ನಾನಾ ರೀತಿಯ ವಾಗ್ವಾದಗಳೇ ನಡೆದಿದ್ದರೂ, ಕೊನೆಗೂ ಕ್ಯಾಪ್ಟನ್ ಆಗಿ ಕಾವ್ಯಶ್ರೀ ಗೌಡ (Kavyashree Gowda) ಆಯ್ಕೆಯಾಗಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಕ್ಯಾಪ್ಟನ್ ಆಗಲು ನಾನಾ ಕಸರತ್ತುಗಳನ್ನು ಮಾಡಿದ್ದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ (Rupesh Rajanna), ಕಳಪೆ ಹಣೆಪಟ್ಟಿ ಪಡೆದಿದ್ದಾರೆ.

    ರೂಪೇಶ್ ರಾಜಣ್ಣಗೆ ಕಳಪೆ ಹಣೆಪಟ್ಟಿ ಕಟ್ಟಲು ಕಾರಣ, ಅವರು ಈ ವಾರ ಮನೆಯಲ್ಲಿ ಆಡಿದ ಮಾತು. ತೀರಾ ಒರಟು ಒರಟಾಗಿ ಎಲ್ಲರೊಂದಿಗೆ ಮಾತನಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಇಂಥದ್ದೊಂದು ಸ್ಥಾನ ಅವರಿಗೆ ಸಿಕ್ಕಿದೆ. ಕಳಪೆ ಸಿಕ್ಕ ಕಾರಣಕ್ಕಾಗಿ ಜೈಲಿಗೂ ಕಳುಹಿಸಲಾಗಿದೆ. ವಿನೋದ್ ಗೊಬ್ಬರಗಾಲ, ಅರುಣ್ ಸಾಗರ್, ಅನುಪಮಾ ಗೌಡ, ಕಾವ್ಯಶ್ರೀ ಗೌಡ, ದಿವ್ಯಾ, ದೀಪಿಕಾ ದಾಸ್, ರಾಕೇಶ್ ಅಡಿಗ ಸೇರಿದಂತೆ ಬಹುತೇಕರು ರೂಪೇಶ್ ರಾಜಣ್ಣನ ಕುರಿತಾದ ಮಾತಿನಲ್ಲೇ ಇದನ್ನೇ ವಿವರಿಸಿದರು. ಇದನ್ನೂ ಓದಿ: ವ್ಯಾಯಾಮ ಮಾಡುತ್ತಿದ್ದಾಗ ಜಿಮ್ ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ

    ದಿವ್ಯಾ ಉರುಡುಗ ಅಂತೂ ರೂಪೇಶ್ ರಾಜಣ್ಣನ ಮೇಲೆ ಆರೋಪಗಳ ಸುರಿಮಳೆಯನ್ನೂ ಸುರಿಸಿದರು. ನನ್ನೊಂದಿಗೆ ರೂಪೇಶ್ ರಾಜಣ್ಣ ಫೇಕ್ ರೀತಿಯಲ್ಲಿ ನಡೆದುಕೊಂಡರು. ಹಾಗಾಗಿ ನಾನು ಕಳಪೆ ಕೊಡುತ್ತಿದ್ದೇನೆ ಎಂದು ನೇರವಾಗಿಯೇ ತಿಳಿಸಿದರು. ಈ ಎಲ್ಲರ ಮಾತಿಗೆ ಪ್ರತಿಕ್ರಿಯೆ ನೀಡಿರುವ ರೂಪೇಶ್ ರಾಜಣ್ಣ, ‘ಈ ಮನೆಯಲ್ಲಿ ಯಾವ ರೀತಿ ಮಾತನಾಡಬೇಕು, ಎಷ್ಟು ಟೋನ್ ನಲ್ಲಿ ಮಾತನಾಡಬೇಕು ಎಂದು ಯಾವ ರೂಲ್ಸೂ ಇಲ್ಲ. ನನ್ನ ಸ್ಟೈಲ್ ನಲ್ಲೇ ನಾನು ಮಾತನಾಡಿದ್ದೇನೆ ಎಂದು ಸಮಜಾಯಿಸಿ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ನಟಿ, ನಿರೂಪಕಿ ಅನುಪಮಾ ಗೌಡಗೆ ಕಳಪೆ ಹಣೆಪಟ್ಟಿ: ಜೈಲು ಸೇರಿದ ಬೆಡಗಿ

    ನಟಿ, ನಿರೂಪಕಿ ಅನುಪಮಾ ಗೌಡಗೆ ಕಳಪೆ ಹಣೆಪಟ್ಟಿ: ಜೈಲು ಸೇರಿದ ಬೆಡಗಿ

    ಕಿರುತೆರೆಯ ಖ್ಯಾತ ಕಲಾವಿದೆ, ನಿರೂಪಕಿ ಅನುಪಮಾ ಗೌಡ (Anupama Gowda) ಕಳಪೆ ಹಣೆಪಟ್ಟಿ ಕಟ್ಟಿಕೊಂಡು ಜೈಲು ಸೇರಿದ್ದಾರೆ. ಮನೆಯ ಬಹುತೇಕ ಸದಸ್ಯರೇ ಇವರ ವಿರುದ್ಧ ತಿರುಗಿ ಬಿದ್ದಿದ್ದರಿಂದ ಕಳಪೆ ಹಣೆಪಟ್ಟಿಯ ಜೊತೆಗೆ ಜೈಲು ಸೇರುವುದು ಅನಿವಾರ್ಯವಾಗಿದೆ. ಹಾಗಂತ ಅವರೇನು ನೊಂದುಕೊಂಡಿಲ್ಲ. ಬಂದಿರುವ ಸ್ಥಿತಿಯನ್ನು ಅನುಭವಿಸಬೇಕಾಗಿದೆ. ಹಾಗಾಗಿ ಈ ವಾರದಲ್ಲಿ ಅವರು ಎಷ್ಟು ದಿನಗಳ ಕಾಲ ಜೈಲಿನಲ್ಲಿ ಇರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    ಅಂದಹಾಗೆ, ಅನುಪಮಾ ಗೌಡ ಈ ವಾರ ಬಿಗ್ ಬಾಸ್ (Big Boss) ಮನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಅನುಪಮಾ ಕ್ಯಾಪ್ಟನ್ (Captain) ಆಗುತ್ತಿದ್ದಂತೆಯೇ ಎಲ್ಲವನ್ನೂ ಅವರು ಸರಿಯಾದ ರೀತಿಯಲ್ಲೇ ನಿಭಾಯಿಸುತ್ತಾರೆ ಅಂದುಕೊಳ್ಳಲಾಗಿತ್ತು. ಆದರೆ, ಅನುಪಮಾ ಮನೆಯಲ್ಲಿದ್ದವರ ಮನಸ್ಸನ್ನು ಕದಿಯುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ, ಇವರ ಕ್ಯಾಪ್ಟೆನ್ಸಿಯಲ್ಲಿ ಸಾಕಷ್ಟು ಗಲಾಟೆಗಳು ಆಗಿದ್ದರಿಂದ, ಟಾಸ್ಕ್ ಅನ್ನು ಸರಿಯಾದ ರೀತಿಯಲ್ಲಿ ನಿಭಾಯಿಸದೇ ಇರುವ ಕಾರಣಕ್ಕಾಗಿ ಅವರು ಕಳಪೆ (Poor) ಹಣೆಪಟ್ಟಿಯನ್ನು ಕಟ್ಟಿಕೊಳ್ಳಬೇಕಾಯಿತು. ಇದನ್ನೂ ಓದಿ:`ಅವತಾರ್ 2′ ಟ್ರೈಲರ್‌ ಟ್ರೆಂಡಿಂಗ್‌ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಕನ್ನಡಿಗರು ಗರಂ

     

    ಈ ವಾರ  ಅನುಪಮಾ ಮತ್ತು ರೂಪೇಶ್ ರಾಜಣ್ಣ (Rupesh Rajanna) ನಡುವೆ ದೊಡ್ಡದೊಂದು ಗಲಾಟೆಯೇ ನಡೆದು ಹೋಯಿತು. ತಾವು ಈ ಮನೆಯಲ್ಲಿ ಇರುವುದಕ್ಕೆ ಸಾಧ್ಯವೇ ಇಲ್ಲವೆಂದು ಬ್ಯಾಗ್ ತಗೆದುಕೊಂಡು ಮನೆಯಿಂದ ಹೊರಹೋಗುವ ಪ್ರಯತ್ನ ಮಾಡಿದರು ರೂಪೇಶ್. ಬಿಗ್ ಬಾಸ್ ಮನೆಯ ಇತರ ಸದಸ್ಯರು ಸಮಾಧಾನ ಮಾಡಿದ್ದರಿಂದ ಮತ್ತೆ ಅವರು ಬಿಗ್ ಬಾಸ್ ಮನೆಯಲ್ಲೇ ಉಳಿದುಕೊಂಡರು. ಅದರಂತೆ, ಅನುಪಮಾ ತಮಗೆ ಬೇಕಾದವರಿಗೆ ಮಾತ್ರ ಸಪೋರ್ಟ್ ಮಾಡುತ್ತಾರೆ ಎಂದು ಹೇಳಲಾಯಿತು. ಅದನ್ನು ಅವರು ನಿರಾಕರಿಸಿದರು.

    ಅನುಪಮಾ ಗೌಡ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗುತ್ತಿದ್ದಂತೆಯೇ ಮನೆಯಲ್ಲಿ ಹೊಸ ವಾತಾವರಣ ಸಿಗಲಿದೆ ಎಂದೇ ಹೇಳಲಾಗಿತ್ತು. ಈಗಾಗಲೇ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದು, ಇದು ಎರಡನೇ ಬಾರಿಯ ಪಯಣವಾಗಿದ್ದರಿಂದ, ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಆಟವಾಡಲಿದ್ದಾರೆ ಎಂದೂ ನಂಬಲಾಗಿತ್ತು. ಆದರೆ, ಕ್ಯಾಪ್ಟನ್ ವಿಷಯದಲ್ಲಿ ಅವರು ಎಡವಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಳ್ಳುವಲ್ಲಿ ಸೋತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವ ಕನಸನ್ನು ಕೊನೆಗೂ ನನಸು ಮಾಡಿಕೊಂಡಿದ್ದಾರೆ ನಟಿ ದೀಪಿಕಾ ದಾಸ್ (Deepika Das). ಇಂಥದ್ದೊಂದು ಅವಕಾಶ ಸಿಕ್ಕಿದ್ದಕ್ಕೆ ಮನೆಯ ಅಷ್ಟೂ ಸದಸ್ಯರಿಗೆ ಅವರು ಧನ್ಯವಾದ ಹೇಳಿದ್ದಾರೆ. ನಾನು ಕ್ಯಾಪ್ಟನ್ ಆಗುತ್ತೇನೆ ಎಂದು ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ, ಕ್ಯಾಪ್ಟನ್ (Captain) ಆಗಬೇಕು ಎನ್ನುವ ಹಠ ನನ್ನಲ್ಲಿತ್ತು ಎಂದು ಅವರು ಹೇಳಿದ್ದಾರೆ.

    ಇತ್ತ ಮಗಳು ಬಿಗ್ ಬಾಸ್ ಮನೆಯಲ್ಲಿ ಮೂರನೇ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಿದ್ದಂತೆಯೇ ದೀಪಿಕಾ ದಾಸ್ ತಾಯಿಯು ಮಗಳಿಗೆ ವಾಯ್ಸ್ ನೋಟ್ಸ್ ಕಳುಹಿಸಿ ಅಭಿನಂದಿಸಿದ್ದಾರೆ. ‘ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ನೀನು ಕ್ಯಾಪ್ಟನ್ ಆಗಿದ್ದಕ್ಕೆ ಎಲ್ಲರಿಗೂ ಖುಷಿಯಾಗಿದೆ. ಆರಾಮಾಗಿ ಆಟವಾಡು. ಎಲ್ಲರೊಂದಿಗೆ ಹೊಂದಿಕೊಂಡಿರು. ಜಾಸ್ತಿ ಮಾತಾಡು, ಜಾಸ್ತಿ ಆಡು’ ಎಂದು ಮಗಳಿಗೆ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದಾರೆ.

    ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 7ರಲ್ಲಿಯೂ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದರು. 16 ವಾರಗಳ ಕಾಲ ಅವರು ಮನೆಯಲ್ಲಿದ್ದರು. ಆದರೆ, ಒಂದು ಬಾರಿಯೂ ಅವರಿಗೆ ಕ್ಯಾಪ್ಟನ್ ಆಗುವಂತಹ ಅವಕಾಶ ಸಿಕ್ಕಿರಲಿಲ್ಲ. ಸೀಸನ್ 9ಕ್ಕೂ (Bigg Boss Season 9) ಅವರು ಮರು ಆಯ್ಕೆಯಾಗಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಮೂರನೇ ವಾರಕ್ಕೆ ಅವರು ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ. ಸೀಸನ್ 9ರಲ್ಲಿ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಹೆಮ್ಮೆ ಅವರದ್ದು.

    ಕ್ಯಾಪ್ಟೆನ್ಸಿ ಆಯ್ಕೆಯಾಗಿ ಹಲವು ಟಾಸ್ಕ್ ಗಳನ್ನು ಸ್ಪರ್ಧಿಗಳು ಆಡಬೇಕಿತ್ತು. ಕ್ಯಾಪ್ಟೆನ್ಸಿಗಾಗಿಯೇ ಟಾಸ್ಕ್ ಗಳು ಸಿದ್ಧವಾಗಿದ್ದವು. ಗೋಲ್ಡ್ ಮೈನ್  ಟಾಸ್ಕ್ ನಲ್ಲಿ ಔಟ್ ಆಗಿದ್ದ ದೀಪಿಕಾ ದಾಸ್ ನಂತರ ನಾಲಿಗೆ ನುಲಿ ಚಟುವಟಿಕೆಯಲ್ಲಿ ಗೆಲುವು ಸಾಧಿಸಿ ಮತ್ತೆ ಆಟಕ್ಕೆ ಹಿಂದಿರುಗಿದರು. ಆಕೃತಿ ಹುಡುಕಾಟದಲ್ಲಿ ದೀಪಿಕಾ ದಾಸ್ ಗೆಲ್ಲುವ ಮೂಲಕ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಈ ಪಟ್ಟಕ್ಕಾಗಿ ಅನುಪಮಾ ಗೌಡ (Anupama Gowda) ಹಾಗೂ ರೂಪೇಶ್ ಶೆಟ್ಟಿ (Rupesh Shetty) ಕೂಡ ರೇಸ್ ನಲ್ಲಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕನಸು ನನಸು ಮಾಡಿಕೊಂಡ ದಿವ್ಯಾ ಸುರೇಶ್

    ಕನಸು ನನಸು ಮಾಡಿಕೊಂಡ ದಿವ್ಯಾ ಸುರೇಶ್

    ಬಿಗ್‍ಬಾಸ್ ಮನೆಯ ಪ್ರತಿಯೊಬ್ಬ ಸ್ಪರ್ಧಿಗಳಿಗೂ ಒಮ್ಮೆಯಾದರೂ ಕ್ಯಾಪ್ಟನ್ ಆಗಬೇಕು ಎಂಬ ಆಸೆ ಇರುತ್ತದೆ. ಅದರಂತೆ ಕ್ಯಾಪ್ಟನ್ ಆಗಬೇಕೆಂದು ಹಲವು ದಿನಗಳಿಂದ ಕಾಯುತ್ತಿದ್ದ ದಿವ್ಯಾ ಸುರೇಶ್ ಕನಸು ಇದೀಗ ನನಸಾಗಿದೆ.

    ಮೇಕಪ್ ರೂಮಿನಲ್ಲಿ ಕುಳಿತುಕೊಂಡು ದಿವ್ಯಾ ಸುರೇಶ್, ಮೇಕಪ್ ಮಾಡಿಕೊಳ್ಳುತ್ತಿರುತ್ತಾರೆ. ಈ ವೇಳೆ ಇದು ಬಿಗ್‍ಬಾಸ್ ಈ ವಾರದ ಕ್ಯಾಪ್ಟನ್ ಆಗಿ ದಿವ್ಯಾ ಸುರೇಶ್ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಅಂತ ಹೇಳಿ ಬಿಗ್‍ಬಾಸ್, ದಿವ್ಯಾ ಸುರೇಶ್ ನಿಮ್ಮ ಬಳಿ ಒಂದು ಸ್ಪೆಷಲ್ ಅಧಿಕಾರವಿದೆ ಅದನ್ನು ಈಗಲೇ ಬಳಸಿಕೊಳ್ಳಿ ಅದು ಒಂದು ದಿನಕ್ಕೆ ಮಾತ್ರ ಸೀಮಿತ ಅಂತ ಹೇಳಿ ಬಿಗ್‍ಬಾಸ್ ಎಂದು ಮೀರರ್ ನೋಡುತ್ತಾ ಕೇಳಿಕೊಂಡಿದ್ದಾರೆ.

    ಬಳಿಕ ಬಿಗ್‍ಬಾಸ್ ನೀಡಿದ್ದ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ನೀಡಿದ್ದರು. ಅದರಂತೆ ಈ ಆಟದಲ್ಲಿ ದಿವ್ಯಾ ಸುರೇಶ್ ಗೆದ್ದು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಬಳಿಕ ಬಿಗ್‍ಬಾಸ್ ದಿವ್ಯಾ ಸುರೇಶ್‍ರನ್ನು ಕ್ಯಾಪ್ಟನ್ ಆಗಿ ಘೋಷಿಸಿದ ನಂತರ ಫುಲ್ ಖುಷ್ ಆಗಿದ್ದಾರೆ.

    ನಂತರ ಮನೆಯ ಸ್ಪರ್ಧಿಗಳಿಗೆ ನಾನು ಇಂದು ಬೆಳಗ್ಗೆ ಪೌಡರ್ ರೂಮ್‍ನಲ್ಲೆ ಮೇಕಪ್ ಮಾಡಿಕೊಳ್ಳುತ್ತಿದ್ದೆ. ಈ ವೇಳೆ ಕ್ಯಾಮೆರಾ ನನಗೆ ಫೋಕಸ್ ಆಗಿತ್ತು. ಆಗ ಇದು ಬಿಗ್‍ಬಾಸ್ ಈ ವಾರದ ಕ್ಯಾಪ್ಟನ್ ಆಗಿ ದಿವ್ಯಾ ಸುರೇಶ್ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಅಂತ ಹೇಳಿ ಬಿಗ್‍ಬಾಸ್ ಎಂದು ಕೇಳಿಕೊಂಡೆ ಇದು ನಿಜವಾಯ್ತು ಎಂದು ಸಂತಸಗೊಂಡಿದ್ದಾರೆ. ಇದನ್ನೂ ಓದಿ:ಎಷ್ಟು ದಿನ ಫ್ರೆಂಡ್ ನೀವು ನನಗೆ: ಚಕ್ರವರ್ತಿ ವಿರುದ್ಧ ರೊಚ್ಚಿಗೆದ್ದ ಶಮಂತ್

  • ಮೊದಲ ಮಹಿಳಾ ಕ್ಯಾಪ್ಟನ್ ಡಿಯುಗೆ ಫುಲ್ ಸರ್ಪ್ರೈಸ್

    ಮೊದಲ ಮಹಿಳಾ ಕ್ಯಾಪ್ಟನ್ ಡಿಯುಗೆ ಫುಲ್ ಸರ್ಪ್ರೈಸ್

    ಬಿಗ್ ಬಾಸ್ ಸೀಸನ್ 8ರ ಮೊದಲ ಮಹಿಳಾ ಸ್ಪರ್ಧಿಯಾಗಿ ದಿವ್ಯಾ ಉರುಡುಗ ಆಯ್ಕೆಯಾಗುತ್ತಿದ್ದಂತೆ ಮನೆಯಲ್ಲಿ ಸಂತಸ ಹರಿದಿದೆ. ಕಿಚ್ಚ ಸುದೀಪ್ ಸಹ ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇದೆಲ್ಲರ ಜೊತೆಗೆ ಡಿಯುಗೆ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ.

    ಹೌದು ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಕ್ಕೆ ದಿವ್ಯಾ ಅವರ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದು, ಶುಭ ಕೋರಿದ್ದಾರೆ, ಜೊತೆಗೆ ಕಿವಿ ಮಾತನ್ನು ಹೇಳಿದ್ದಾರೆ. ತುಂಬಾ ಸಂತೋಷ ಆಗ್ತಿದೆ ಕಣೆ ನಿನ್ನ ಮಾತನ್ನು ನೀನು ಇಂದು ಉಳಿಸಿಕೊಂಡೆ, ಫಸ್ಟ್ ಫೀಮೇಲ್ ಕ್ಯಾಪ್ಟನ್ ನಾನಾಗಬೇಕು ಎಂದು ಯಾವಾಗಲೂ ಹೇಳುತ್ತಿರುತ್ತಿದ್ದೆ. ಆ ಮಾತನ್ನು ಇಂದು ಉಳಿಸಿಕೊಂಡಿದ್ದೀಯಾ. ಎಲ್ಲರಿಗೂ ತುಂಬಾ ಖುಷಿಯಾಗಿದೆ. ನೀನು ಕ್ಯಾಪ್ಟನ್ಸಿ ಟಾಸ್ಕ್ ವಿನ್ ಆಗಿ ಕ್ಯಾಪ್ಟನ್ ಆಗಬೇಕೆಂಬುದು ತುಂಬಾ ದಿನದ ಬಯಕೆಯಾಗಿತ್ತು. ಇಂದು ಈಡೇರಿದೆ ಎಂದಿದಾರೆ. ಇದನ್ನೂ ಓದಿ: ‘ಪತ್ರವಳ್ಳಿ’ ಪದಕ್ಕೆ ನಮಗೆ ಅರ್ಥವೇ ಸಿಗಲಿಲ್ಲ- ಚಕ್ರವರ್ತಿಗೆ ಸುದೀಪ್ ಕ್ಲಾಸ್

    ಕ್ಯಾಪ್ಟೆನ್ಸಿಯನ್ನು ಚೆನ್ನಾಗಿ ನಿಭಾಯಿಸು, ಚೆನ್ನಾಗಿ ಆಡು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊ. ಕ್ಯಾಪ್ಟೆನ್ಸಿ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುದು ನಮ್ಮ ಆಶಯ. ಚೆನ್ನಾಗಿರು ಮಗಳೇ, ಚೆನ್ನಾಗಿ ಆಡು. ಆರೋಗ್ಯವನ್ನು ಚೆನ್ನಾಗಿ ನೋಡಿಕೋ, ಹೆಚ್ಚು ನೀರು ಕುಡಿ, ಚೆನ್ನಾಗಿರು ಎಂದು ಸಲಹೆ ನೀಡಿದ್ದಾರೆ. ಈ ಮೂಲಕ ಮಗಳಿಗೆ ಶುಭ ಹಾರೈಸಿದ್ದಾರೆ.

    ಬಿಗ್ ಬಾಸ್ ಸೀಸನ್ 8ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿದ್ದಕ್ಕೆ ದಿವ್ಯಾ ಉರುಡುಗ ಸಹ ತುಂಬಾ ಖುಷಿಯಾಗಿದ್ದು, ಇದು ನನ್ನ ಕನಸಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಎಲ್ಲ ಮಹಿಳಾ ಸ್ಪರ್ಧಿಗಳಿಂದಲೇ ಇದು ಸಾಧ್ಯವಾಗಿದೆ. ನಿಮ್ಮ ಕಷ್ಟಗಳನ್ನು ಫುಲ್ ಫಿಲ್ ಮಾಡುತ್ತೇನೆ. ನೆಕ್ಸ್ಟ್ ಎಲ್ಲ ಹುಡುಗಿಯರೇ ನಿಂತುಕೊಳ್ಳಬೇಕೆಂಬ ಆಸೆಯಿದೆ ಎಂದಿದ್ದಾರೆ.