Tag: ಕ್ಯಾಪ್

  • ಮಹಿಳೆಯರು ಚಳಿಗಾಲದಲ್ಲಿ ಧರಿಸಬಹುದಾದ 5 ಸ್ಟೈಲಿಶ್ ಕ್ಯಾಪ್‍ಗಳು

    ಮಹಿಳೆಯರು ಚಳಿಗಾಲದಲ್ಲಿ ಧರಿಸಬಹುದಾದ 5 ಸ್ಟೈಲಿಶ್ ಕ್ಯಾಪ್‍ಗಳು

    ಳಿಗಾಲ ಪ್ರಾರಂಭವಾಗಿದ್ದು, ಜನ ಚಳಿಗೆ ಗಢ, ಗಢ ನಡುಗುವಂತಾಗಿದೆ. ಚಳಿಯಿಂದ ಬೆಚ್ಚಗಿರಲು ಸ್ವೆಟರ್, ಶಾಲು, ಜಾಕೆಟ್  ಉಡುಪನ್ನು ಧರಿಸಲು ಆರಂಭಿಸಿದ್ದಾರೆ. ಮೊದಲೆಲ್ಲಾ ತಂಪಾದ ಗಾಳಿಯಿಂದ ತಪ್ಪಿಸಿಕೊಳ್ಳಲು ಜನ ಕಿವಿಗೆ ಹತ್ತಿ ಇಟ್ಟುಕೊಳ್ಳುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ. ಜನ ಹತ್ತಿ ಬದಲಿಗೆ ಟೋಪಿ ಧರಿಸಲು ಶುರುಮಾಡಿದ್ದಾರೆ.

    ಅದರಲ್ಲಿಯೂ ಮಹಿಳೆಯರ ಡ್ರೆಸ್ ಸ್ಟೈಲ್ ಬದಲಾವಣೆಯತ್ತ ಸಾಗುತ್ತಿದ್ದು, ಅವರಿಗಾಗಿಯೇ ವಿಶೇಷವಾಗಿ ಹಲವಾರು ಸ್ಟೈಲಿಶ್ ಟೋಪಿಗಳು ಮಾರುಕಟ್ಟೆಗೆ ಬಂದಿದೆ. ಚಳಿಗಾಲದಲ್ಲಿಯೂ ಸುಂದರವಾಗಿ ಕಾಣಿಸಲು ಮತ್ತು ಬೆಚ್ಚಗಿರಲು ಬಯಸುವ ಮಹಿಳೆಯರಿಗೆ ಹೊಸ ಬಕೆಟ್ ಕ್ಯಾಪ್, ಶರ್ಲಿಂಗ್ ಕ್ಯಾಪ್, ಹೆಣೆದ ಕ್ಯಾಪ್ ಸೇರಿದಂತೆ ವಿವಿಧ ವೆರೈಟಿ ಕ್ಯಾಪ್‍ಗಳ ಕುರಿತು ಒಂದಷ್ಟು ಮಾಹಿತಿ ಈ ಕೆಳಗೆ ನೀಡಲಾಗಿದೆ. ಇವೆಲ್ಲವೂ ಕೈಗೆಟಕುವ ದರದಲ್ಲಿ ದೊರೆಯಲಿದ್ದು, ಇದು ನಿಮಗೆ ಟ್ರೆಂಡಿ ಲುಕ್ ಕೂಡ ನೀಡುತ್ತದೆ. ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್

    ಅನಿಮಲ್ ಪ್ರಿಂಟ್ ಫ್ಯೂರಿ ಬಕೆಟ್ ಹ್ಯಾಟ್
    ಈ ಹ್ಯಾಟ್ 30ಕ್ಕೂ ಹೆಚ್ಚು ವಿಭಿನ್ನ ಪ್ರಿಂಟ್‍ಗಳು ಮತ್ತು ಬಣ್ಣಗಳಲ್ಲಿ ಲಭ್ಯವಿದೆ. ಈ ಋತುವಿನಲ್ಲಿ ಪರಿಪೂರ್ಣವಾದ ಹೊಂದಾಣಿಕೆ ಇದೆ. ನೋಡಲು ಹುಲಿ ಚರ್ಮವನ್ನು ಹೋಲುವಂತಹ ಕ್ಯಾಪ್ ಇದಾಗಿದ್ದು, ಇದನ್ನು ನೀವು ಹಾಕಿಕೊಂಡರೆ ಪವರ್ ಫುಲ್ ಲೇಡಿಯಂತೆ ಕಾಣಿಸಿಕೊಳ್ಳುತ್ತೀರಾ.

    Hat

    ಡೈಟ್ರಿಚ್ ರೈನ್ ಹ್ಯಾಟ್
    ಮಳೆಯಲ್ಲಿ ನೀವು ಬೆಳಗ್ಗೆ ಎಲ್ಲಿಗಾದರೂ ಹೋಗುತ್ತೀರಾ ಎಂದಾದರೆ ಇದನ್ನು ಧರಿಸಿ ಹೋಗಬಹುದು. ಇದು ವಾಟರ್ ಪ್ರೂಫ್ ಟೋಪಿಯಾಗಿದ್ದು, ಈ ಉದ್ದನೆಯ ಟೋಪಿ ನಿಮ್ಮನ್ನು ಬೆಚ್ಚಗಿರಿಸುತ್ತದೆ. ಮತ್ತು ಇದರೊಲ್ಲೊಂದು ಖುಷಿಯ ವಿಚಾರವೆಂದರೆ ನೀವು ಯಾರೆಂದು ಯಾರಿಗೂ ತಿಳಿಯದು. ಇದನ್ನೂ ಓದಿ: ರವಿಶಾಸ್ತ್ರಿ ಹೇಳಿಕೆ ನನ್ನನ್ನು ಟೀಂ ಇಂಡಿಯಾದ ಬಸ್‍ನಿಂದ ತಳ್ಳಿದಂತಾಗಿತ್ತು: ಅಶ್ವಿನ್

     ಫಾಕ್ಸ್ ಲೆದರ್ ಬೇಸ್ ಬಾಲ್ ಹ್ಯಾಟ್
    ಇದು ಲೆದರ್‌ನಿಂದ ಸಿದ್ಧಪಡಿಸಿದ ಟೋಪಿ ಆಗಿದ್ದು, ಇದು ನಿಮಗೆ ಕೆಲಸ ಮಾಡುವ ವೇಳೆ ಕಂಫರ್ಟ್ ಫೀಲ್ ನೀಡುತ್ತದೆ. ಅಲ್ಲದೇ ನಿಮಗೆ ಈ ಕ್ಯಾಪ್ ಕೂಲ್ ಲುಕ್ ನೀಡುತ್ತದೆ. ಇದೊಂದು ಸ್ಪೋರ್ಟ್ಸ್‌ ಮಾದರಿಯ ಕ್ಯಾಪ್ ಆಗಿದ್ದು, ಕಪ್ಪು ಹಾಗೂ ಇನ್ನಿತರ ಬಣ್ಣಗಳಲ್ಲಿ ನಿಮಗೆ ಸಿಗುತ್ತದೆ.

    ಫಾಕ್ಸ್ ಫರ್ ಬೀನಿ ಹ್ಯಾಟ್
    ಇದು ತುಂಬಾ ಮೃದುವಾಗಿರುವ ಕ್ಯಾಪ್ ಆಗಿದ್ದು, ಇದನ್ನು ಯುವತಿಯರು ಅಂದವಾಗಿ ಕಾಣಿಸಲು ಸಹಾಯಕವಾಗಿದೆ. ಈ ಕ್ಯಾಪ್ ಧರಿಸಿ ಹೊರಗಡೆ ಹೋದರೆ ಎಲ್ಲರ ಗಮನ ನಿಮ್ಮ ಮೇಲೆ ಇರುವುದಂತು ನಿಜ. ಇದು ನಿಮಗೆ ಚಳಿಯಿಂದ ಬೆಚ್ಚಗಿರಿಸುವುದರ ಜೊತೆಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.  ಇದನ್ನೂ ಓದಿ: ಯೇಸು ಕ್ರಿಸ್ತರ ಉದಾತ್ತ ಸಂದೇಶಗಳನ್ನು ಸ್ಮರಿಸೋಣ: ಮೋದಿ ಕ್ರಿಸ್‌ಮಸ್‌ ಶುಭಾಶಯ

    ಅಡಿಸನ್ ಫಾಕ್ಸ್ ಶಿಯರ್ಲಿಂಗ್ ಬೇಸ್ ಬಾಲ್ ಕ್ಯಾಪ್
    ಇದು ಒಂದು ಸ್ಪೋರ್ಟ್ಸ್‌ ಕ್ಯಾಪ್ ಆಗಿದ್ದು, ಇದನ್ನು ಧರಿಸಿ ಓಡುವಾಗ ಈ ಬಾರಿ ಗೆಲುವು ನಿಮ್ಮದೇ ಎಂಬುವ ಫೀಲ್ ನೀಡುತ್ತದೆ. ಅಲ್ಲದೇ ಇದು ನಿಮಗೆ ಒಬ್ಬ ಅತ್ಯುನ್ನತ ಕ್ರೀಡಾ ಪಟುವಿನ ಕಳೆಯನ್ನು ನೀಡುತ್ತದೆ.

  • ವೀಡಿಯೋ: ಶೂ ಲೇಸ್‍ನಿಂದ ಬಿಯರ್ ಬಾಟಲ್ ಓಪನ್ ಮಾಡಿದ ವ್ಯಕ್ತಿ

    ವೀಡಿಯೋ: ಶೂ ಲೇಸ್‍ನಿಂದ ಬಿಯರ್ ಬಾಟಲ್ ಓಪನ್ ಮಾಡಿದ ವ್ಯಕ್ತಿ

    ಪನರ್ ಬಳಸದೇ ಬಿಯರ್ ಬಾಟಲ್‍ನನ್ನು ಹೇಗೆ ತೆಗೆಯಬೇಕೆಂಬುವುದನ್ನು ವ್ಯಕ್ತಿಯೊಬ್ಬ ತನ್ನ ಚಾಣಾಕ್ಷತನದಿಂದ ತೋರಿಸಿದ್ದಾನೆ. ಸದ್ಯ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ಸಾಮಾನ್ಯವಾಗಿ ಹಲ್ಲಿನ ಸಹಾಯದಿಂದ ಅಥವಾ ಮೇಜಿನ ತುದಿಯ ಭಾಗದಿಂದ ಬಿಯರ್ ಬಾಟಲ್‍ನ ಮುಚ್ಚಳವನ್ನು ತೆರೆಯುವುದನ್ನು ನೋಡಿರುತ್ತೇವೆ. ಆದರೆ ಈ ವ್ಯಕ್ತಿ ತನ್ನ ಶೂ ಲೇಸ್‍ನನ್ನು ಬಳಸಿಕೊಂಡು ಬಿಯರ್ ಬಾಟಲ್ ಮುಚ್ಚಳವನ್ನು ಓಪನ್ ಮಾಡಿದ್ದಾನೆ. ಬಿಯರ್ ಪ್ರಿಯರು ಬಾಟಲ್ ಮುಚ್ಚಳ ತೆಗೆಯಲು ಈ ಟ್ರಿಕ್ಸ್‍ನನ್ನು ಬಳಸಬಹುದಾಗಿದೆ. ಈ ವೀಡಿಯೋವನ್ನು ‘ಹೋಲ್ಡ್ ಮೈ ಬಿಯರ್’ ಎಂಬ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇಚ್ಛಾ ಶಕ್ತಿ ಹೊಂದಿದ್ದರೆ, ಒಂದು ದಾರಿ ಇರುತ್ತದೆ’ ಎಂದು ಕ್ಯಾಪ್ಷನ್ ಬರೆಯಲಾಗಿದೆ.

    ವೀಡಿಯೋದಲ್ಲಿ ವ್ಯಕ್ತಿ ಮೇಜಿನ ಮೇಲೆ ಕಾಲು ಇರಿಸಿಕೊಂಡು, ಶೂ ಲೇಸ್‍ನನ್ನು ಬಿಯರ್ ಬಾಟಲ್ ಸುತ್ತಲೂ ಸುತ್ತುತ್ತಾನೆ. ಬಳಿಕ ಜೋರಾಗಿ ಶೂ ಲೇಸ್‍ನನ್ನು ಮೇಲಕ್ಕೆ ಎಳೆಯುತ್ತಾನೆ. ಆಗ ಬಾಟಲ್ ಕ್ಯಾಪ್ ಓಪನ್ ಆಗುತ್ತದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 37,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 600ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಹಲವು ನೆಟ್ಟಿಗರು ಕಾಮೆಂಟ್ ನೀಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.