Tag: ಕ್ಯಾನ್ಸರ್‌ ಕಾರಕ ಅಂಶ

  • ಬಟಾಣಿ ಪ್ರಿಯರೇ ಎಚ್ಚರ – ಹಸಿರು ಬಟಾಣಿಯಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ!

    ಬಟಾಣಿ ಪ್ರಿಯರೇ ಎಚ್ಚರ – ಹಸಿರು ಬಟಾಣಿಯಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ!

    – ಆಹಾರ ಸುರಕ್ಷತಾ ಇಲಾಖೆಯಿಂದ ರಿಪೋರ್ಟ್

    ಬೆಂಗಳೂರು: ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಿಂದ ಕ್ಯಾನ್ಸರ್ ಕಾರಕ ಅಂಶ (Carcinogenicity element) ಪತ್ತೆಯಾದ ಬೆನ್ನಲ್ಲೇ ಈಗ ಹಸಿರು ಬಟಾಣಿ ಬಗ್ಗೆ ವರದಿ ಬಂದಿದೆ. ಹಸಿರು ಬಟಾಣಿಯಲ್ಲೂ ಕ್ಯಾನ್ಸರ್ ಕಾರಕ ಪತ್ತೆಯಾಗಿರುವ ಬಗ್ಗೆ ಆಹಾರ ಸುರಕ್ಷತಾ ಇಲಾಖೆ (Food Safety Department) ವರದಿ ನೀಡಿದೆ.

    ಹೌದು.. ಈಗ ಹಸಿರು ಬಟಾಣಿಗೆ ನಿಷೇಧ ಕಲ್ಲರ್‌ಗಳನ್ನ ಬಳಕೆ ಮಾಡ್ತಿರೋದು ಪತ್ತೆಯಾಗಿದೆ. ಈಗಾಗಲೇ ರಾಜ್ಯಾದ್ಯಂತ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ 8 ರಿಂದ 10 ಕಡೆ ಕ್ಯಾನ್ಸರ್ ಕಾರಕ ಬಣ್ಣ ಬಳಕೆ ಮಾಡ್ತಿರೋದು ಪತ್ತೆಯಾಗಿದೆ. ಇದನ್ನೂ ಓದಿ: ನೇಪಾಳದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪನ – ಭಾರತ, ಚೀನಾ ಗಡಿಯಲ್ಲೂ ಕಂಪಿಸಿದ ಭೂಮಿ

    ಇನ್ನೂ ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿರೋ ಹಿನ್ನೆಲೆ ಸಚಿವ ದಿನೇಶ್ ಗುಂಡೂರಾವ್ ಇವತ್ತು ಮಹತ್ವದ ಸುದ್ದಿಗೋಷ್ಠಿ ಮಾಡಲಿದ್ದಾರೆ. ಆಹಾರ ತಯಾರಿಕೆ ಮತ್ತು ಆಹಾರ ಪಾರ್ಸೆಲ್ ಕೊಡೋದಕ್ಕೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅಧಿಕೃತ ಆದೇಶ ಮಾಡುವ ಸಾಧ್ಯತೆ ಇದೆ. ಇದರ ಜೊತೆ ಹಸಿರು ಬಟಾಣಿಗೆ ಕಲರ್ ಲೇಪನ ಸಂಬಂಧ ಕ್ರಮದ ಬಗ್ಗೆ ಅನೌನ್ಸ್ ಮಾಡುವ ಸಾಧ್ಯತೆ ಇದೆ.

    ಇನ್ನೂ ಹಸಿರು ಬಟಾಣಿಗೆ ನಿಷೇಧಿತ ಕಲರ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆಯಂತೆ. ಕೆಮಿಕಲ್‌ನಿಂದ ಸಾಕಷ್ಟು ಎಫೆಕ್ಟ್ ಆಗುತ್ತೆ ಅಂತ ಆಹಾರ ತಙ್ಞರು ಹೇಳ್ತಾರೆ. ಇದನ್ನೂ ಓದಿ: ಪುಣೆ ಅತ್ಯಾಚಾರ ಕೇಸ್‌ – 75 ಗಂಟೆಗಳ ಬಳಿಕ ಕಾಮುಕ ಅರೆಸ್ಟ್‌

    ಯಾವುದು ಹಾನಿಕಾರಕ? – ಯಾವುದು ಹಾನಿಕಾರಕವಲ್ಲ?
    * ಹಸಿ ಬಟಾಣಿ ಸಿಪ್ಪೆ ಬಿಡಿಸಿ ಬಳಸಿದ್ರೆ ಹಾನಿಕಾರಕ ಅಲ್ಲ
    * ಶೇಖರಿಸಿ ಇಟ್ಟ ಹಸಿರು ಬಟಾಣಿ ಬಳಸಬಾರದು
    * ಬಣ್ಣ ಬಳಸಿದ ಹಸಿರು ಬಟಾಣಿ ಬಳಸಬಾರದು
    * ಗ್ರಾಹಕರನ್ನ ಆಕರ್ಷಿಸಲು ಫುಡ್ ಕಲರ್ ಬಳಕೆ
    * ಶೇಖರಿಸಿ ಮಾರುವ ಬಟಾಣಿಗೆ ಫುಡ್ ಕಲರ್ ಬಳಕೆ
    * ಫುಡ್ ಕಲರ್ ದೇಹಕ್ಕೆ ಹೆಚ್ಚು ಪ್ರಮಾಣ ಸೇರಿದ್ರೆ ಹಾನಿಕಾರಕ
    * ಕಿಡ್ನಿ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆ
    * ಯೂರಿನ್ ಉತ್ಪತ್ತಿ ಪ್ರಮಾಣ ಕಡಿಮೆ ಆಗುತ್ತೆ
    * ಹೃದಯ ಸಂಬಂಧಿ ಖಾಯಿಲೆ ಬರುವ ಸಾಧ್ಯತೆ
    * ಫುಡ್ ಕಲರ್‌ನಿಂದ ಕ್ಯಾನ್ಸರ್ ಬರುವ ಸಂಭವ ಇದೆ ಎಂದು ಆಹಾರ ಇಲಾಖೆ ತಜ್ಞರು ಹೇಳಿದ್ದಾರೆ.

    ಆರೋಗ್ಯದ ಮೇಲೆ ಪರಿಣಾಮ ಏನು?
    ಹಸಿರು ಬಟಾಣಿಗೆ ನಿಷೇಧಿತ ಬಣ್ಣ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ರಿಟೆಕ್ಷನ್ ಆಫ್ ಟಾಕ್ಸಿನ್ ಪ್ರಮಾಣ ಏರಿಕೆಯಾಗುತ್ತದೆ. ಇದರಿಂದ ಕಿಡ್ನಿ ಸಮಸ್ಯೆ, ಮೂತ್ರ ಉತ್ಪತ್ತಿ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್‌ ರೋಗ ಬರುವ ಸಂಭವ ಹೆಚ್ಚಾಗಿರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯಪುರ- ಬೆಳಗಾವಿ, ವಿಜಯಪುರ – ಹುಬ್ಬಳ್ಳಿ ಷಟ್ಪಥ ರಸ್ತೆಗೆ ಗಡ್ಕರಿ ಸಹಮತ – ಎಂಎಲ್‌ಸಿ ಸುನೀಲಗೌಡ 

  • ಆಹಾರ ಪ್ರಿಯರಿಗೆ ಶಾಕ್‌ – ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ

    ಆಹಾರ ಪ್ರಿಯರಿಗೆ ಶಾಕ್‌ – ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ

    ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯ ಇಡ್ಲಿಯನ್ನ ಎಲ್ಲೆಡೆ ತಯಾರಿಸಲಾಗುತ್ತದೆ. ಬಹುತೇಕ ನಗರವಾಸಿಗಳಿಗೆ ಇಡ್ಲಿಯೇ (Idli) ಬೆಳಗ್ಗಿನ ಉಪಾಹಾರ. ಆದ್ರೆ ಈ ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ ಕಾರಕ ಅಂಶ (Carcinogenicity) ಪತ್ತೆಯಾಗಿದೆ ಎಂದು ಖುದ್ದು ಆಹಾರ ಇಲಾಖೆಯ ವರದಿಯೇ ಬಹಿರಂಗಪಡಿಸಿರುವುದು ಜನರ ನಿದ್ದೆಗೆಡಿಸಿದೆ.

    ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ (Food Safety Department) ನಡೆಸಿದ ಪರೀಕ್ಷೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಟ್ರಾಫಿಕ್‌ಗೆ ಮುಕ್ತಿ ಹಾಡಲು ಮುಂದಾದ ಬಿಬಿಎಂಪಿ – 10,000 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ

    ಹೌದು. ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದಿದ್ದವು. ದೂರು ಬಂದ ಹಿನ್ನೆಲೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಸುಮಾರು 500 ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ 35 ಕಡೆ ಪ್ಲಾಸ್ಟಿಕ್‌ ಬಳಕೆ ಮಾಡಿರುವುದು ಪತ್ತೆಯಾಗಿತ್ತು. ಈ ಬೆನ್ನಲ್ಲೇ 35 ಮಳಿಗೆದಾರರಿಗೆ ನೋಟಿಸ್‌ ನೀಡಲಾಗಿತ್ತು.

    ಅಲ್ಲದೇ 500 ಕಡೆಗಳಲ್ಲಿ ಕಡೆಗಳಲ್ಲಿ ಸಂಗ್ರಹಿಸಿದ್ದ ಮಾದರಿಗಳನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ 35 ಡೇಂಜರ್‌ ಅಂತ ವರದಿ ಬಂದಿದೆ. ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಶಾಖ ಹೆಚ್ಚಾದಂತೆ ಪಿಎಫ್‌ಎಎಸ್ ಕೆಮಿಕಲ್ ಎಂಬ ಹಾನಿಕಾರಕ ಅಂಶ ಹೊರ ಸೂಸುತ್ತದೆ ಅಂತ ವರದಿ ಬಂದಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.

    ಈ ಹಿನ್ನೆಲೆ ಆಹಾರ ತಯಾರಿಕೆಗೆ ಬಳಸುವ ಈ ಪ್ಲಾಸ್ಟಿಕ್ ಬಳಕೆಯನ್ನ ನಿಷೇಧ ಮಾಡೋದಕ್ಕೆ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಬೆಂಗಳೂರು | ಚಲಿಸುತ್ತಿದ್ದ ಬೈಕ್ ಮೇಲೆ ಸಿನಿಮಾ ಸ್ಟೈಲ್‍ನಲ್ಲಿ ರೊಮ್ಯಾನ್ಸ್ – ವಿಡಿಯೋ ವೈರಲ್