Tag: ಕ್ಯಾನ್ಸರ್ ಕಾಯಿಲೆ

  • ಪಾಂಡ್ಯ ಪಡೆ ಲ್ಯಾವೆಂಡರ್‌ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದು ಏಕೆ? – ಗೊತ್ತಾದ್ರೆ ನೀವೂ ಬೇಷ್ ಅಂತೀರಾ

    ಪಾಂಡ್ಯ ಪಡೆ ಲ್ಯಾವೆಂಡರ್‌ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದು ಏಕೆ? – ಗೊತ್ತಾದ್ರೆ ನೀವೂ ಬೇಷ್ ಅಂತೀರಾ

    ಅಹಮದಾಬಾದ್‌: 2023ರ ಐಪಿಎಲ್‌ ಆವೃತ್ತಿಯಲ್ಲಿ (IPL 2023) ಗುಜರಾತ್‌ ಟೈಟಾನ್ಸ್‌ (Gujarat Titans) ತಂಡವು ತವರಿನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೈದರಾಬಾದ್‌ ವಿರುದ್ಧ ಕೊನೆಯ ಪಂದ್ಯನ್ನಾಡುತ್ತಿದೆ. ಒಂದು ವೇಳೆ ಪ್ಲೆ ಆಫ್‌ನ ಮೊದಲ ಪಂದ್ಯದಲ್ಲೇ ಗೆದ್ದರೇ ತವರಿನಲ್ಲಿ ಮತ್ತೊಮ್ಮೆ ಫೈನಲ್‌ ಪಂದ್ಯವನ್ನಾಡುವ ಅವಕಾಶ ಪಡೆದುಕೊಳ್ಳಲಿದೆ.

    ಸೋಮವಾರದ ಪಂದ್ಯವು ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಪಡೆಗೆ ಮಹತ್ವದ್ದಾಗಿದೆ. ಏಕೆಂದರೆ ಟೈಟಾನ್ಸ್‌ ತಂಡವು ತಮ್ಮ ಸಾಂಪ್ರದಾಯಿಕ ಕಡು ನೀಲಿ ಜೆರ್ಸಿ ಬದಲಿಗೆ ವಿಶೇಷ ಲ್ಯಾವೆಂಡರ್ ಬಣ್ಣದ ಜೆರ್ಸಿ ಧರಿಸಿ ಕಣಕ್ಕಿಳಿದಿದೆ. ಇದಕ್ಕೆ ಕಾರಣವೇನೆಂಬುದನ್ನೂ ಪಾಂಡ್ಯ ಸ್ಪಷ್ಟಪಡಿಸಿದ್ದಾರೆ.

    ಟಾಸ್‌ ಬಳಿಕ ಮಾತನಾಡಿದ ಪಾಂಡ್ಯ, ಲ್ಯಾವೆಂಡರ್ (Lavender Jersey) ಸಾಮಾನ್ಯವಾಗಿ ಅನ್ನನಾಳದ ಕ್ಯಾನ್ಸರ್‌ಗೆ ಸಂಬಂಧಿಸಿದ್ದಾಗಿದೆ. ಇದು ಎಲ್ಲಾ ರೀತಿಯ ಕ್ಯಾನ್ಸರ್ (Cancer) ಅನ್ನು ಪ್ರತಿನಿಧಿಸುತ್ತದೆ. ಈ ವಿನಾಶಕಾರಿ ರೋಗದ ಬಗ್ಗೆ ಜಾಗೃತಿ (Cancer Awareness) ಮೂಡಿಸುವಲ್ಲಿ ತಂಡದ ಜವಾಬ್ದಾರಿಯುತ ಪ್ರಜ್ಞೆಯನ್ನು ಪಾಂಡ್ಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ ವಿಶ್ವವ್ಯಾಪಿಯಾಗಿಸಲು ಚಿಂತನೆ – ಬ್ರಿಜ್‌ ಭೂಷಣ್‌ ಬಂಧನಕ್ಕೆ ಮೇ 21 ಗಡುವು

    ಲ್ಯಾವೆಂಡರ್ ಜೆರ್ಸಿ ಧರಿಸುವ ಮೂಲಕ, ನಾವು ಕ್ಯಾನ್ಸರ್ ರೋಗಿಗಳು ಹಾಗೂ ಕ್ಯಾನ್ಸರ್‌ನಿಂದ ಬದುಕುಳಿದವರು ಮತ್ತು ಅವರ ಕುಟುಂಬಗಳಿಗೆ ಬೆಂಬಲ ಸೂಚಿಸಬಹುದು ಎಂದು ತಂಡ ಭಾವಿಸುತ್ತದೆ. ಅಲ್ಲದೆ ಅವರು ತಡೆಗಟ್ಟುವ ಕ್ರಮಗಳನ್ನ ತೆಗೆದುಕೊಳ್ಳಲು ಮತ್ತು ಕ್ಯಾನ್ಸರ್ ವಿರುದ್ಧದ ಯುದ್ಧದಲ್ಲಿ ತೊಡಗಿರುವವರಿಗೆ ಸಹಾಯ ನೀಡಲು ಇತರರನ್ನು ಪ್ರೇರೇಪಿಸಲು ಇಂದಿನ ಪಂದ್ಯದಲ್ಲಿ ಲ್ಯಾವೆಂಡರ್‌ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದೇವೆ ಎಂದು ಪಾಂಡ್ಯ ಹೇಳಿಕೊಂಡಿದ್ದಾರೆ.

    ಪ್ರತಿ ಸೀಸನ್‌ನಲ್ಲೂ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸುತ್ತಿದ್ದ ಆರ್‌ಸಿಬಿ ಪರಿಸರದ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿತ್ತು. ತನ್ನ 2ನೇ ಆವೃತ್ತಿಯಲ್ಲಿ ಗುಜರಾತ್‌ ಟೈಟಾನ್ಸ್‌ ತಂಡ ಕ್ಯಾನ್ಸರ್‌ ಮಾರಣಾಂತಿಕ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವುದು ಕ್ರಿಕೆಟ್‌ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

  • ಫುಟ್ಬಾಲ್ ಲೆಜೆಂಡ್ ಪೀಲೆ ಇನ್ನಿಲ್ಲ

    ಫುಟ್ಬಾಲ್ ಲೆಜೆಂಡ್ ಪೀಲೆ ಇನ್ನಿಲ್ಲ

    ಬ್ರೆಸಿಲಿಯಾ: ಕ್ಯಾನ್ಸರ್ ಕಾಯಿಲೆ, ಮೂತ್ರಪಿಂಡ (ಕಿಡ್ನಿ) ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಫುಟ್ಬಾಲ್ ದಂತಕತೆ (Football Legendary), ಸಾರ್ವಕಾಲಿಕ ಶ್ರೇಷ್ಠ ಆಟಗಾರ ಬ್ರೆಜಿಲ್‌ನ (Brazil) ಪೀಲೆ (82) (Pele) ನಿಧನರಾಗಿದ್ದಾರೆ.

    ಮೂರು ಬಾರಿ ಫಿಫಾ ವಿಶ್ವಕಪ್ (FIFA World Cup) ವಿಜೇತ ಪೀಲೆ ಅವರು, ನ.29ರಂದು ಆಸ್ಪತ್ರೆಗೆ (Hospital) ದಾಖಲಾಗಿದ್ದರು. ಇತ್ತೀಚೆಗೆ ಅವರಿಗೆ ಕೋವಿಡ್-19 (Covid) ಸೋಂಕು ತಗಲಿತ್ತು. ಇದನ್ನೂ ಓದಿ: ರಣಜಿಯಲ್ಲಿ ಬ್ಯಾಟಿಂಗ್ ಅಬ್ಬರ- ಮನೀಷ್ ದ್ವಿಶತಕ ಮಿಂಚಿಂಗ್, ಸೂರ್ಯನಿಗೆ ಶತಕ ಮಿಸ್ಸಿಂಗ್

    ತನ್ನ 16ನೇ ವಯಸ್ಸಿನಲ್ಲಿ ಬ್ರೆಜಿಲ್ ರಾಷ್ಟ್ರೀಯ ತಂಡದ ಪರ ಆಡಲು ಆರಂಭಿಸಿದ ಪೀಲೆ 1958, 1962 ಹಾಗೂ 1970ರಲ್ಲಿ ಬ್ರೆಜಿಲ್ ಫಿಫಾ ವಿಶ್ವಕಪ್ (FIFA World Cup) ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. ಈ ಸಾಧನೆ ಮಾಡಿದ ಏಕೈಕ ಆಟಗಾರನಾಗಿದ್ದಾರೆ. ಬ್ರೆಜಿಲ್ ಪರ 95 ಪಂದ್ಯಗಳಲ್ಲಿ ಅತಿಹೆಚ್ಚು 77 ಗೋಲುಗಳನ್ನು ಗಳಿಸಿರುವ ಸಾಧನೆ ಮಾಡಿದ್ದರು. ಆದ್ರೆ ಇತ್ತೀಚಿನ ವಿಶ್ವಕಪ್ ಟೂರ್ನಿಯಲ್ಲಿ ನೇಮ 124 ಪಂದ್ಯಗಳಲ್ಲಿ 77 ಗೋಲುಗಳನ್ನು ಬಾರಿಸುವ ಮೂಲಕ ಸಾಧನೆ ಸಮಬಲ ಸಾಧಿಸಿದ್ದಾರೆ.

    2021ರ ಸೆಪ್ಟೆಂಬರ್‌ನಲ್ಲಿ ಪೀಲೆ ಅವರಿಗೆ ಶ‌ಸ್ತ್ರಚಿಕಿತ್ಸೆ ಮಾಡಿ ದೊಡ್ಡ ಕರುಳಿನ ಕ್ಯಾನ್ಸರ್ ಗೆಡ್ಡೆಯನ್ನು ತೆಗೆಯಲಾಗಿತ್ತು. ಆದರೆ ಇತ್ತೀಚೆಗೆ ಅವರು ಕೋವಿಡ್‌ಗೆ ತುತ್ತಾಗಿದ್ದರಿಂದ ಮತ್ತೆ ಕ್ಯಾನ್ಸರ್ ಸಮಸ್ಯೆ ಕೂಡ ಮರುಕಳಿಸಿತ್ತು. ಮೂರು ಬಾರಿ ಮದುವೆಯಾಗಿರುವ ಪೀಲೆ ಅವರಿಗೆ 7 ಮಕ್ಕಳಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?

    Live Tv
    [brid partner=56869869 player=32851 video=960834 autoplay=true]