Tag: ಕ್ಯಾನ್ಬೆರಾ

  • ಗಿನ್ನಿಸ್ ರೆಕಾರ್ಡ್ ಬರೆದ ಡೈಮಂಡ್ ಲಿಪ್ ಆರ್ಟ್..!

    ಗಿನ್ನಿಸ್ ರೆಕಾರ್ಡ್ ಬರೆದ ಡೈಮಂಡ್ ಲಿಪ್ ಆರ್ಟ್..!

    – ಬರೋಬ್ಬರಿ 3.78 ಕೋಟಿ ರೂ. ವೆಚ್ಚ

    ಕ್ಯಾನ್ಬೆರಾ: ನೇಲ್ ಆರ್ಟ್, ಹೇರ್ ಆರ್ಟ್, ಐ ಆರ್ಟ್ ಹೀಗೆ ಅದೆಷ್ಟೋ ಆರ್ಟ್‍ಗಳು ಇವೆ. ಆದ್ರೆ ಆಸ್ಟ್ರೇಲಿಯಾದ ಜ್ಯುವೆಲ್ಲರಿ ಕಂಪನಿ ಬರೋಬ್ಬರಿ 3.78 ಕೋಟಿ ರೂ. ಮೌಲ್ಯದ ವಜ್ರಗಳನ್ನು ಬಳಸಿ ವಿಶ್ವದ ಅತ್ಯಂತ ದುಬಾರಿ ಲಿಪ್ ಆರ್ಟ್ ಎಂಬ ಗಿನ್ನಿಸ್ ಬುಕ್‍ನಲ್ಲಿ ರೆಕಾರ್ಡ್ ಮಾಡಿದೆ.

    ಆಸ್ಟ್ರೇಲಿಯಾದ ರೋಸೆನ್‍ಡ್ರಾಫ್ ಎಂಬ ಜ್ಯುವೆಲ್ಲರಿ ಕಂಪನಿ ಈ ಆರ್ಟ್ ತಯಾರಿಸುವ ಮೂಲಕ ಮೋಸ್ಟ್ ವ್ಯಾಲುವೆಬಲ್ ಲಿಪ್ ಆರ್ಟ್ ಎಂಬ ದಾಖಲೆ ಬರೆದಿದೆ. ಮಾಡೆಲ್ ಒಬ್ಬರ ತುಟಿ ಮೇಲೆ ಸುಮಾರು 3.78 ಕೋಟಿ ರೂ. ಮೌಲ್ಯದ ಓಟ್ಟು 126 ಡೈಮಂಡ್‍ನಿಂದ ಅಲಂಕಾರ ಮಾಡಿದೆ. ತನ್ನ 50 ವರ್ಷದ ವಾರ್ಷಿಕೋತ್ಸವಕ್ಕಾಗಿ ಕಂಪನಿ ಈ ದುಬಾರಿ ಲಿಪ್ ಆರ್ಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

    ರೋಸನ್ ಡ್ರಾಫ್ ಡೈಮಂಡ್ ಜ್ಯುವೆಲ್ಲರಿ ಕಂಪನಿ ಆಸ್ಟ್ರೇಲಿಯಾದಲ್ಲಿ ಹೆಸರಾಂತ ಜ್ಯುವೆಲ್ಲರಿ ಕಂಪನಿಗಳಲ್ಲಿ ಒಂದಾಗಿದೆ. ಈ ಜ್ಯುವೆಲ್ಲರಿ ಕಂಪನಿ 1963ರಲ್ಲಿ ಸ್ಥಾಪನೆಯಾಗಿದೆ. ರೋಸನ್ ಡ್ರಾಫ್ ವಿಶೇಷವಾಗಿ ವಜ್ರದ ಆಭರಣಗಳನ್ನು ತಯಾರಿಸುವಲ್ಲಿ ಹೆಸರುವಾಸಿ. ಈ ಬಾರಿ ಲಿಪ್ ಆರ್ಟ್ ತಯಾರಿಕೆ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿ ಸದ್ಯ ಸುದ್ದಿಯಲ್ಲಿದೆ.

    ಮೇಕಪ್ ಆರ್ಟಿಸ್ಟ್ ಕ್ಲೇರ್ ಮ್ಯಾಕ್ ಎಂಬವರು ಈ ಲಿಪ್ ಆರ್ಟ್ ಡಿಸೈನ್ ಮಾಡಿದ್ದು, ಮೊದಲು ಮಾಡೆಲ್ ತುಟಿಗಳ ಮೇಲೆ ಬ್ಲ್ಯಾಕ್ ಲೇಯರ್ ಲಿಪ್‍ಸ್ಟಿಕ್ ಹಾಕಿದ್ದಾರೆ. ಬಳಿಕ ಡೈಮಂಡ್ ಅಂಟಿಸಿದ್ದಾರೆ. ಈ ದುಬಾರಿ ಹಾಗೂ ಸುಂದರ ಅಲಂಕಾರ ಮಾಡಲು ಸುಮಾರು ಎರಡೂವರೆ ಗಂಟೆಗಳ ಕಾಲ ಶ್ರಮಪಟ್ಟಿದ್ದಾರೆ. 22.92 ಕ್ಯಾರೆಟ್‍ನ 126 ಡೈಮಂಡ್‍ಗಳಿಂದ ಈ ಲಿಪ್ ಆರ್ಟ್ ಅಲಂಕೃತಗೊಂಡಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಲಿಪ್ ಆರ್ಟ್ ಸುದ್ದಿಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ರೇಕಪ್ ಆಗಿದ್ದಕ್ಕೆ ಬಾಯ್‍ಫ್ರೆಂಡ್‍ನ 2.75 ಕೋಟಿ ರೂ. ಕಾರಿನ ಮೇಲೆ ಕೋಪ ತೋರಿದ್ಳು!

    ಬ್ರೇಕಪ್ ಆಗಿದ್ದಕ್ಕೆ ಬಾಯ್‍ಫ್ರೆಂಡ್‍ನ 2.75 ಕೋಟಿ ರೂ. ಕಾರಿನ ಮೇಲೆ ಕೋಪ ತೋರಿದ್ಳು!

    ಕ್ಯಾನ್ಬೆರಾ: ಲವ್ ಬ್ರೇಕಪ್ ಆಗಿದ್ದಕ್ಕೆ ಆಸ್ಟ್ರೇಲಿಯಾದ ಯುವತಿಯೊಬ್ಬಳು ಯುವಕನ 2.75 ಕೋಟಿ ರೂ. ವೆಚ್ಚದ ಮರ್ಸಿಡೀಸ್ ಬೆಂಜ್ ಎಸ್ 63 ಎಂಎಂಜಿ ಕೂಪ್ ಕಾರಿನ ಮೇಲೆ ಅಶ್ಲೀಲವಾಗಿ ಬರೆದು ಜಖಂಗೊಳಿಸಿದ್ದಾಳೆ.

    ಯುವಕ ತನ್ನ ಕಾರನ್ನು ಮನೆಯ ಹೊರಗಡೆ ಪಾರ್ಕ್ ಮಾಡಿದ್ದನು. ಮಧ್ಯಾಹ್ನದ ವೇಳೆ ಆಗಮಿಸಿದ ಯುವತಿ ಆತನ ಕಾರ್ ಪಕ್ಕದಲ್ಲೇ ತನ್ನ ಕಾರನ್ನು ನಿಲ್ಲಿಸಿದ್ದಾಳೆ. ಯುವತಿ 20 ವರ್ಷದವಳು ಎಂದು ಹೇಳಲಾಗಿದ್ದು, ಕಾರಿನಿಂದ ಇಳಿಯುವಾಗ ತನ್ನ ಕೈಯಲ್ಲಿ ಸ್ಪ್ರೇ ಪೇಂಟ್‍ನ ಕ್ಯಾನ್ ಹಿಡಿದಿದ್ದಳು.

    ಯುವತಿ ಸ್ಪ್ರೇ ಪೇಂಟ್‍ಯಿಂದ ಕಾರಿನ ಮೇಲೆ ಮೋಸಗಾರ ಹಾಗೂ ಕೆಲವು ಅಶ್ಲೀಲ ಪದಗಳನ್ನು ಬರೆದಿದ್ದಾಳೆ. ಅಲ್ಲದೇ ಕಾರಿನ ಕೆಲ ಭಾಗಗಳಲ್ಲಿ ಕಪ್ಪು ಬಣ್ಣ ಹಚ್ಚಿ ಕಾರನ್ನು ಹಾಳು ಮಾಡಿದ್ದಾಳೆ. ಅಷ್ಟಕ್ಕೂ ಸಮಧಾನ ಆಗದ ಯುವತಿ ಬೇಸ್‍ಬಾಲ್ ಬ್ಯಾಟ್‍ನಿಂದ ಕಾರಿನ ಕಿಟಕಿಯನ್ನು ಒಡೆದಿದ್ದಾಳೆ.

    ಯುವಕ ಈ ಕಾರನ್ನು ಕೆಲವು ದಿನಗಳ ಹಿಂದೆಯಷ್ಟೇ ಖರೀದಿ ಮಾಡಿದ್ದ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಆಹಾರ ಹಾಕುತ್ತಿದ್ದ ಮಹಿಳೆಯನ್ನೇ ತಿನ್ನಲು ಮುಂದಾದ ಶಾರ್ಕ್: ವೈರಲ್ ವಿಡಿಯೋ ನೋಡಿ

    ಆಹಾರ ಹಾಕುತ್ತಿದ್ದ ಮಹಿಳೆಯನ್ನೇ ತಿನ್ನಲು ಮುಂದಾದ ಶಾರ್ಕ್: ವೈರಲ್ ವಿಡಿಯೋ ನೋಡಿ

    ಕ್ಯಾನ್ಬೆರಾ: ಶಾರ್ಕ್‍ಗೆ ಆಹಾರ ಹಾಕುವಾಗ ಅದು ಮಹಿಳೆಯನ್ನು ಎಳೆಯಲು ಪ್ರಯತ್ನಿಸಿದ್ದು, ಮಹಿಳೆ ಸ್ವಲ್ಪದರಲ್ಲೇ ಪಾರಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಮೆಲ್ಸಿನಾ(34) ಶಾರ್ಕ್ ದಾಳಿಯಿಂದ ಪಾರಾದ ಮಹಿಳೆ. ಮೆಲ್ಸಿನಾ ರಜೆ ಕಳೆಯಲು ದುಗಾಂಗ್ ಬೇಗೆ ಬಂದಿದ್ದಳು. ಆಗ ಅಲ್ಲಿ ಟ್ವಾನಿ ನರ್ಸ್ ಶಾರ್ಕ್‍ಗೆ ಮೆಲ್ಸಿನಾ ತನ್ನ ನಾಲ್ಕು ಜನ ಸ್ನೇಹಿತರ ಜೊತೆ ಸೇರಿ ತನ್ನ ಕೈಯಾರೆ ಆಹಾರ ಹಾಕುತ್ತಿದ್ದಳು.

    ಮಲ್ಸಿನಾ ಹಾಗೂ ಆಕೆಯ ಸ್ನೇಹಿತರು ಆಹಾರ ನೀಡುವಾಗ ಶಾರ್ಕ್‍ಗಳು ಅವರ ವಿಹಾರ ನೌಕೆ ಹತ್ತಿರ ಬಂದಿದೆ. ಆ ವೇಳೆ ಮಲ್ಸಿನಾ ತನ್ನ ಕೈಯಾರೇ ಆಹಾರ ಹಾಕುವಾಗ ಶಾರ್ಕ್‍ವೊಂದು ತಕ್ಷಣ ಆಕೆ ಕೈ ಬೆರಳನ್ನು ಹಿಡಿದು ನೀರಿನೊಳಗೆ ಎಳೆಯಲು ಪ್ರಯತ್ನಿಸಿತ್ತು. ಆಗ ಸ್ನೇಹಿತರು ಆಕೆಯನ್ನು ಮೇಲೆಳೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

    ಶಾರ್ಕ್ ನನ್ನ ಬೆರಳನ್ನು ಹಿಡಿದಾಗ ಆ ಅಪಾರ ಒತ್ತಡದಿಂದ ಬೆರಳಿನ ಮೂಳೆ ಚೂರು ಚೂರು ಆಯ್ತು ಎಂದುಕೊಂಡೆ. ಆದರೆ ಯಾವುದೇ ಹಾನಿ ಆಗಿಲ್ಲ ಎಂದು ಮೆಲ್ಸಿನಾ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾಳೆ.

    ಸದ್ಯ ಮಲ್ಸಿನಾಗೆ ಫ್ರಾಕ್ಚರ್ ಹಾಗೂ ಟೋರ್ನ್ ಲಿಗಾಮೆಂಟ್ ಆಗಿದ್ದು, ತನ್ನ ರಜೆಯನ್ನು ಪೂರ್ಣಗೊಳಿಸಿ ಪರ್ತ್ ಹಿಂತಿರುಗುವುದಾಗಿ ಹೇಳಿದ್ದಾಳೆ. ಅಲ್ಲದೇ ತನ್ನ ಬೆರಳು ಶೀಘ್ರದಲ್ಲೇ ಸರಿ ಹೋಗುವುದಾಗಿ ಹೇಳಿಕೊಂಡಿದ್ದಾಳೆ.

    ಶಾರ್ಕ್ ನನ್ನ ಮೇಲೆ ದಾಳಿ ನಡೆಸಿಲ್ಲ. ನನ್ನ ಚಿಕ್ಕ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಮೆಲ್ಸಿನಾ ತಿಳಿಸಿದ್ದಾಳೆ. ಸದ್ಯ ಶಾರ್ಕ್ ಮೆಲ್ಸಿನಾ ಮೇಲೆ ದಾಳಿ ಮಾಡಿರುವ ವಿಡಿಯೋವನ್ನು ಆಕೆಯ ಸ್ನೇಹಿತರು ಸೆರೆ ಹಿಡಿದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

  • ಕಡಲ ತೀರದಲ್ಲಿ 100ಕ್ಕೂ ಹೆಚ್ಚು ತಿಮಿಂಗಿಲಗಳ ಮಾರಣಹೋಮ

    ಕಡಲ ತೀರದಲ್ಲಿ 100ಕ್ಕೂ ಹೆಚ್ಚು ತಿಮಿಂಗಿಲಗಳ ಮಾರಣಹೋಮ

    ಕ್ಯಾನ್ಬೆರಾ: 150ಕ್ಕೂ ಅಧಿಕ ತಿಮಿಂಗಿಲಗಳು ಕಡಲತೀರಕ್ಕೆ ಬಂದು ಬಿದ್ದಿರುವ ಘಟನೆ ಪಶ್ಚಿಮ ಆಸ್ಟ್ರೇಲಿಯಾದ ಹಮೆಲಿನ್ ಬೇ ನಲ್ಲಿ ನಡೆದಿದೆ. ಸಮುದ್ರ ತೀರದಲ್ಲಿರುವ ತಿಮಿಂಗಿಲಗಳಲ್ಲಿ ಕೇವಲ 15 ತಿಮಿಂಗಿಲಗಳು ಮಾತ್ರ ಬದುಕುಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇವು ಶಾರ್ಟ್ ಫಿನ್ನ್ಡ್ ಪೈಲಟ್ ವೇಲ್ ಜಾತಿಗೆ ಸೇರಿದ ತಿಮಿಂಗಿಲಗಳು ಎಂದು ಗುರುತಿಸಲಾಗಿದೆ. ಕಡಲ ತೀರದಲ್ಲಿ ತಿಮಿಂಗಿಲಗಳು ಬಿದ್ದಿರುವುದನ್ನ ಶುಕ್ರವಾರ ಬೆಳಗ್ಗೆ ಇಲ್ಲಿನ ಮೀನುಗಾರರೊಬ್ಬರು ನೋಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

    ಶುಕ್ರವಾರದ ಮಧ್ಯಾಹ್ನದ ಹೊತ್ತಿಗೆ 15 ತಿಮಿಂಗಿಲಗಳನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯ ಮುಂದುವರಿಸಿದ್ದು, ಬದುಕುಳಿದ ತಿಮಿಂಗಿಲಗಳಿಗೆ ಆರೈಕೆ ಮಾಡಿ ಪುನಃ ಕಡಲಿಗೆ ಬಿಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    “ಇದು ನಿಜಕ್ಕೂ ನಂಬಲಾಗದ ವಿಷಯ, ಈ ರೀತಿ ಆಗಿರುವುದನ್ನ ಹಿಂದೆಂದೂ ನೋಡಿಲ್ಲ. ಇಷ್ಟೊಂದು ಸಂಖ್ಯೆಯ ತಿಮಿಂಗಿಲಗಳು ಸಮುದ್ರ ತೀರಕ್ಕೆ ಬಂದು ಬಿದ್ದಿರೋದನ್ನ ಎಂದೂ ಕಂಡಿರಲಿಲ್ಲ” ಎಂದು ಸ್ಥಳಕ್ಕೆ ಭೇಟಿ ನೀಡಿದ ಪ್ರವಾಸಿಗ ಬ್ಯಾರಿ ಬ್ರಿಕೆಲ್ ಹೇಳಿದ್ದಾರೆ.

    ದುರದೃಷ್ಟಕರ ಸಂಗತಿಯೆಂದರೆ ಸುಮಾರು ತಿಮಿಂಗಿಲಗಳು ಕಳೆದ ರಾತ್ರಿಯೇ ಕಡಲ ತೀರದ ಒಣ ಪ್ರದೇಶಗಳಿಗೆ ಬಂದು ಸಾವನ್ನಪ್ಪಿವೆ ಎಂದು ರಕ್ಷಣಾ ತಂಡದ ಮುಖ್ಯಸ್ಥ ಜೆರೆಮಿ ಚಿಕ್ ತಿಳಿಸಿದ್ದಾರೆ. ಹವಾಮಾನ ವೈಪರಿತ್ಯದ ಕಾರಣ ರಕ್ಷಣಾಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ತಿಮಿಂಗಿಲಗಳನ್ನು ಕಡಲಿಗೆ ಬಿಡುವ ಮುಂಚೆ ನಾವು ಎಲ್ಲರ ಸುರಕ್ಷತೆ ಕಡೆಗೆ ಗಮನ ಕೊಡಬೇಕು ಎಂದು ಹೇಳಿದ್ದಾರೆ.

    ಉದ್ಯಾನ ಮತ್ತು ವನ್ಯಜೀವಿ ಸೇವಾ ಅಧಿಕಾರಿಗಳು ತಿಮಿಂಗಿಲಗಳ ಮೃತದೇಹಗಳನ್ನು ಕಡಲ ತೀರದಿಂದ ಹೊರತೆಗೆದಿದ್ದಾರೆ ಮತ್ತು ತಿಮಿಂಗಿಲಗಳು ಕಡಲ ತೀರಕ್ಕೆ ಬಂದು ಬಿದ್ದಿರುವುದಕ್ಕೆ ಕಾರಣವೇನೆಂದು ತಿಳಿಯಲು ಅದರ ಡಿಎನ್‍ಎ ಮಾದರಿಯನ್ನು ಸಂಗ್ರಹಿಸಿದ್ದಾರೆ.

    2009ರಲ್ಲಿ ಇದೇ ಹಮೆಲಿನ್ ಬೇ ಪ್ರದೇಶದಲ್ಲಿ 80ಕ್ಕೂ ಅಧಿಕ ತಿಮಿಂಗಿಲಗಳು ಹಾಗು ಡಾಲ್ಫಿನ್‍ಗಳು ಕಡಲ ತೀರದಲ್ಲಿ ಸಾವನಪ್ಪಿದ್ದವು ಮತ್ತು 1996ರಲ್ಲಿ 320ಕ್ಕೂ ಅಧಿಕ ಲಾಂಗ್ ಫಿನ್ನ್ಡ್ ತಿಮಿಂಗಿಲಗಳು ಕಡಲ ತೀರದಲ್ಲಿ ಬಂದು ಬಿದ್ದಿದ್ದವು ಎಂದು ವರದಿಗಳು ಹೇಳುತ್ತವೆ.