Tag: ಕ್ಯಾನ್ಬೆರಾ

  • ಹಮಾಸ್‌ ಥೀಮ್‌ ಕೇಕ್‌ನಲ್ಲಿ 4ರ ಬಾಲಕನ ಬರ್ತ್‌ ಡೇ ಸೆಲೆಬ್ರೇಶನ್‌- ಭಾರೀ ಆಕ್ರೋಶ

    ಹಮಾಸ್‌ ಥೀಮ್‌ ಕೇಕ್‌ನಲ್ಲಿ 4ರ ಬಾಲಕನ ಬರ್ತ್‌ ಡೇ ಸೆಲೆಬ್ರೇಶನ್‌- ಭಾರೀ ಆಕ್ರೋಶ

    ಕ್ಯಾನ್‌ಬೆರಾ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಹಮಾಸ್‌ (Hamas) ಉಗ್ರರ ಥೀಮ್‌ ನಲ್ಲಿ ಹುಟ್ಟುಹಬ್ಬ (Boy Birthday) ಆಚರಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಆಸ್ಟ್ರೇಲಿಯಾದಲ್ಲಿ 4 ವರ್ಷದ ಮಗುವಿನ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ವಿಭಿನ್ನವಾಗಿ ಕೇಕ್‌ ಮಾಡಲಾಗಿತ್ತು. ಅದರಲ್ಲಿ ಪ್ಯಾಲೆಸ್ತೀನ್ ಧ್ವಜಗಳಿಂದ ಸುತ್ತುವರಿದಿರುವ ಉಗ್ರಗಾಮಿಗಳನ್ನು ಬಿಂಬಿಸಲಾಗಿತ್ತು. ಇತ್ತ ಕೇಕ್ ತಯಾರಿಸುವ ಜವಾಬ್ದಾರಿಯುತ ಆಸ್ಟ್ರೇಲಿಯನ್ ಬೇಕರಿ ಅದರ ಫೋಟೋಗಳನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು. ಬಳಿಕ ಈ ಫೋಟೋಗಳು ಭಾರೀ ವೈರಲ್‌ ಆದವು. ಪರಿಣಾಮ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

    ಫೋಟೋ ವೈರಲ್‌ ಆಗುತ್ತಿದ್ದಂತೆಯೇ ಎಚ್ಚೆತ್ತ ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು ತನಿಖೆಗಿಳಿದಿದ್ದಾರೆ. ವರದಿಗಳ ಪ್ರಕಾರ, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಲಾಗಿದೆ.

    ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಫುಫು ಅವರ ಓವನ್ ಬೇಕರಿ ಮಂಗಳವಾರ ಪ್ಯಾಲೇಸ್ಟಿನಿಯನ್ ಧ್ವಜದಿಂದ ಅಲಂಕರಿಸಲ್ಪಟ್ಟ ದೊಡ್ಡ ಕೇಕ್ ಪಕ್ಕದಲ್ಲಿ ಬಾಲಕ ನಿಂತಿರುವ ಹಾಗೂ ಹಮಾಸ್‌ನ ವಕ್ತಾರ ಅಬು ಒಬೈದಾ ಅವರ ಬೆರಳನ್ನು ಮೇಲಕ್ಕೆತ್ತಿದ ಫೋಟೋಗಳನ್ನು ಪೋಸ್ಟ್ ಮಾಡಿದೆ. ಇತ್ತ ಬರ್ತ್‌ ಡೇ ಬಾಯ್‌ ಕೂಡ ತಲೆಗೆ ಸ್ಕಾರ್ಫ್ ಮತ್ತು ಕೇಕ್ ಮೇಲಿನ ಆಕೃತಿಯನ್ನು ಹೋಲುವ ಉಡುಪನ್ನು ಧರಿಸಿ ಫೋಟೋಗೆ ಪೋಸ್‌ ಕೊಟ್ಟಿದ್ದಾನೆ.

    ಫೋಟೋ ಸೋಶಿಯಲ್‌ ಮೀಡಿಯಾಗೆ ಅಪ್ಲೋಡ್‌ ಮಾಡುತ್ತಿದ್ದಂತೆಯೇ ಮೊದ ಮೊದಲು ಕೇಕ್‌ ಬಗ್ಗೆ ಪಾಸಿಟಿವ್‌ ಕಾಮೆಂಟ್‌ಗಳು ಬರತೊಡಗಿದರೆ ಆ ನಂತರ ಭಾರೀ ಟೀಕೆ ವ್ಯಕ್ತವಾಯಿತು. ಮಗುವನ್ನು ಭಯೋತ್ಪಾದಕನಂತೆ ಬಿಂಬಿಸುವುದು ಖಂಡನೀಯ ಎಂಬ ಆಕ್ರೋಶ ಹೊರಬಂದ ಬೆನ್ನಲ್ಲೇ ಫೋಟೋ ಅಪ್ಲೋಡ್‌ ಮಾಡಿದವರು ತಮ್ಮ Instagram ಮತ್ತು Facebook ಖಾತೆಗಳನ್ನೇ ಬ್ಲಾಕ್‌ ಮಾಡಿದ್ದಾರೆ.

    ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಪ್ರಧಾನಿ ಕ್ರಿಸ್ ಮಿನ್ಸ್ ಅವರು ಕೇಕ್ ಫೋಟೋಗಳನ್ನು ನೋಡಿ ಭಯಾನಕ ಬೆಳವಣಿಗೆ ಎಂದರು. ಹಮಾಸ್ ಒಂದು ದುಷ್ಟ ಭಯೋತ್ಪಾದಕ ಸಂಘಟನೆಯಾಗಿದೆ. ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳು ಮುಗ್ಧ ಮತ್ತು ವಿನೋದಮಯವಾಗಿರಬೇಕು. ಈ ರೀತಿ ದ್ವೇಷಪೂರಿತವಾಗಿರಬಾರದು ಎಂದು ಕಿಡಿಕಾರಿದರು.

    ಹಮಾಸ್ ನೇತೃತ್ವದ ಉಗ್ರರು ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯ ಮೂಲಕ 1,200 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಗಾಜಾದಲ್ಲಿ ಸುಮಾರು ಎಂಟು ತಿಂಗಳ ಸುದೀರ್ಘ ಯುದ್ಧವನ್ನು ಪ್ರಚೋದಿಸಿದರು. ಸುಮಾರು 250 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡರು.

  • ಆಸ್ಟ್ರೇಲಿಯಾದ ಲೆಜೆಂಡರಿ ವಿಕೆಟ್ ಕೀಪರ್ ರಾಡ್ ಮಾರ್ಷ್ ವಿಧಿವಶ

    ಆಸ್ಟ್ರೇಲಿಯಾದ ಲೆಜೆಂಡರಿ ವಿಕೆಟ್ ಕೀಪರ್ ರಾಡ್ ಮಾರ್ಷ್ ವಿಧಿವಶ

    ಕ್ಯಾನ್‍ಬೆರಾ: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಹಾಗೂ ಲೆಜೆಂಡರಿ ವಿಕೆಟ್ ಕೀಪರ್ ಆದಂತಹ ರಾಡ್ ಮಾರ್ಷ್ (74) ಪರಿಹಾರ ನಿಧಿ ಸಂಗ್ರಹಿಸುತ್ತಿರುವ ವೇಳೆ ಹೃದಯಾಘಾತವಾಗಿದ್ದು, ಅಡಿಲೇಡ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

    1970 ರಿಂದ 1984 ರವರೆಗೆ ಆಸ್ಟ್ರೇಲಿಯಾ ಪರ 96 ಟೆಸ್ಟ್ ಪಂದ್ಯಗಳನ್ನು ಆಡಿದ ಮಾರ್ಷ್ ಅವರು, ಅಡಿಲೇಡ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಸ್ಪೋರ್ಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್ ಶುಕ್ರವಾರ ದೃಢಪಡಿಸಿದೆ. ಇದನ್ನೂ ಓದಿ:  ಪಾಕ್ ಕ್ರಿಕೆಟ್ ಲೀಗ್‍ಗಿಂತ ಐಪಿಎಲ್ ದುಬಾರಿ – ಪ್ರಶಸ್ತಿ ಮೊತ್ತದಲ್ಲಿ ಭಾರಿ ವ್ಯತ್ಯಾಸ

    ಆಸ್ಟ್ರೇಲಿಯಾದ ಮಾಜಿ ಬೌಲರ್ ಡೇನಿಸ್ ಲಿಲ್ಲೀ ಬೌಲಿಂಗ್‍ನಲ್ಲಿ 95 ರನ್‍ಗಳನ್ನು ಒಳಗೊಂಡಂತೆ ತಮ್ಮ ವಿಕೆಟ್ ಕೀಪರ್ ಶೈಲಿಯಿಂದ 355 ಟೆಸ್ಟ್ ಕ್ಯಾಚ್‍ಗಳನ್ನು ಹಿಡಿದ ದಾಖಲೆಯನ್ನು ಮಾರ್ಷ್ ಹೊಂದಿದ್ದರು. ಅವರು 1984 ರ ಫೆಬ್ರವರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತರಾಗುವ ಮೊದಲು ತಂಡಕ್ಕಾಗಿ 92 ಏಕದಿನ ಪಂದ್ಯಗಳನ್ನು ಆಡಿದ್ದರು.

    ಎಡಗೈ ಬ್ಯಾಟಮ್ಯಾನ್ ಆಗಿರುವ ಅವರು ಟೆಸ್ಟ್ ಕ್ರಿಕೆಟ್‍ನಲ್ಲಿ ಶತಕ ಗಳಿಸಿದ ಮೊದಲ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಆಗಿದ್ದರು. ನಂತರ ಅವರು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‍ನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗಳನ್ನು ಮುನ್ನಡೆಸಿದ್ದರು. ದುಬೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‍ನ ವಿಶ್ವ ಕೋಚಿಂಗ್ ಅಕಾಡೆಮಿಯ ಉದ್ಘಾಟನಾ ಮುಖ್ಯಸ್ಥರಾಗಿದ್ದರು.

    ಈ ಕುರಿತು ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್‍ರವರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದು, ರಾಡ್ ಮಾರ್ಷ್ ನಿಧನರಾದ ಸುದ್ದಿ ಕೇಳಿ ಬೇಸರವಾಯಿತು. ಅವರು ನಮ್ಮ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಂತಕಥೆಯಾಗಿದ್ದರು. ಅವರು ಅನೇಕ ಜನರಿಗೆ ಸ್ಫೂರ್ತಿಯಾಗಿದ್ದರು. ರಾಡ್ ಕ್ರಿಕೆಟ್ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರು. ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರಿಗೆ ತುಂಬಾ ಕೊಡುಗೆ ನೀಡಿದ್ದಾರೆ. ರಾಡ್ ಅವರ ಅಗಲಿಕ್ಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

    2014 ರಲ್ಲಿ, ಅವರು ಆಸ್ಟ್ರೇಲಿಯಾದ ಆಯ್ಕೆಗಾರರ ಅಧ್ಯಕ್ಷರಾಗಿ ನೇಮಕಗೊಂಡು, ಎರಡು ವರ್ಷಗಳ ಕಾಲ ಸ್ಥಾನವನ್ನು ಹೊಂದಿದ್ದರು. ನಂತರ ಅವರನ್ನು 1985 ರಲ್ಲಿ ಸ್ಪೋರ್ಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್‍ಗೆ ಸೇರಿಸಲಾಯಿತು. ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡ ಶ್ರೀಶಾಂತ್ – ಮೂಲಬೆಲೆ ಎಷ್ಟು ಗೊತ್ತಾ?

    ಹಾಲ್ ಆಫ್ ಫೇಮ್‍ನ ಅಧ್ಯಕ್ಷ ಜಾನ್ ಬಟ್ರಾರ್ಂಡ್ ಅವರು ಮಾರ್ಷ್ ಅವರ ಬಗ್ಗೆ ಮಾತನಾಡಿ, ಮಾರ್ಷ್ ಯುದ್ಧತಂತ್ರದವರಾಗಿದ್ದರು, ಭಯವಿಲ್ಲದೆ ಮಾತನಾಡುತ್ತಿದ್ದರು. ಎಷ್ಟೋ ಯುವ ಕ್ರಿಕೆಟಿಗರ ಪ್ರತಿಭೆಯನ್ನು ಗುರುತಿಸಿದ್ದಾರೆ ಎಂದು ಹೇಳಿದರು.

  • ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ: ಪ್ರಧಾನಿ ಪತ್ರ ಸ್ವೀಕರಿಸಿದ ಬ್ರೆಟ್ ಲೀ

    ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ: ಪ್ರಧಾನಿ ಪತ್ರ ಸ್ವೀಕರಿಸಿದ ಬ್ರೆಟ್ ಲೀ

    ಕ್ಯಾನ್‍ಬೆರಾ: ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಸೋಶಿಯಲ್ ಮೀಡಿಯಾದಲ್ಲಿ ಭಾರತದ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ.

    ಪ್ರಧಾನಿ ಮೋದಿ ಭಾರತದ 73ನೇ ಗಣರಾಜ್ಯೋತ್ಸವದ ಅಂಗವಾಗಿ ಬ್ರೆಟ್ ಲೀ ಅವರಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಬ್ರೆಟ್ ಲೀ ಸ್ವೀಕರಿಸಿದ್ದು, ಪತ್ರದ ಫೋಟೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ನಲ್ಲಿ ಬ್ರೆಟ್ ಲೀ, ನಾನು ಭಾರತವನ್ನು ಮತ್ತು ಅಲ್ಲಿನ ಜನರನ್ನು ಎಷ್ಟು ಪ್ರೀತಿಸುತ್ತೇನೆ. ಈ ಸುಂದರವಾದ ದೇಶವನ್ನು ನಾನು ಆನಂದಿಸಿದ್ದೇನೆ. ಭಾರತ ಮತ್ತು ನನ್ನ ಸಂಬಂಧ ಇಷ್ಟು ವರ್ಷ ಕಳೆಯಲು ಸಾಧ್ಯವಾಗಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಾನು ಭಾರತವನ್ನು ಇಷ್ಟಪಡುತ್ತೇನೆ ಎಂಬುದು ರಹಸ್ಯವಲ್ಲ ಎಂದು ಬರೆದಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

    ಭಾರತದ 73ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ಪ್ರಪಂಚದಾದ್ಯಂತ ಪ್ರಮುಖ ಕ್ರಿಕೆಟ್ ಆಟಗಾರರಾದ ಮ್ಯಾಥ್ಯೂ ಹೇಡನ್, ಜಾಂಟಿ ರೋಡ್ಸ್, ಕ್ರಿಸ್ ಗೇಲ್ ಮತ್ತು ಕೆವಿನ್ ಪೀಟರ್ಸನ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಅವರೆಲ್ಲ ಸ್ವೀಕರಿಸಿದ್ದು, ಸಂತೋಷ ವ್ಯಕ್ತಪಡಿಸಿದ್ದಾರೆ.

    ಈ ದಿಗ್ಗಜರ ಪೈಕಿ, ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಕೂಡ ಮೋದಿ ಅವರಿಂದ ಅಭಿನಂದನಾ ಪತ್ರವನ್ನು ಸ್ವೀಕರಿಸಿದ್ದರು. ಈ ಪತ್ರ ಕಳಿಸಿದ್ದಕ್ಕೆ ಮೋದಿ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಅಣ್ಣಂದಿರ ಕೈ ಮೇಲೆ ಪಾದವಿಟ್ಟು ಮದುವೆ ಮಂಟಪಕ್ಕೆ ನಡೆದುಕೊಂಡು ಬಂದ ವಧು!

    ಬ್ರೆಟ್ ಲೀ ಅವರಿಗೆ ಬರೆದ ಪತ್ರದಲ್ಲಿ ಮೋದಿ ಅವರು, ಭಾರತದ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತವು ಈ ವರ್ಷ ಬ್ರಿಟಿಷ್ ಆಳ್ವಿಕೆಯಿಂದ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ ಎಂದು ತಿಳಿಸಿದ್ದು, ನಮ್ಮ ರಾಷ್ಟ್ರದ ಬಗೆಗಿನ ನಿಮ್ಮ ಪ್ರೀತಿಗಾಗಿ ಕೃತಜ್ಞತಾ ಭಾವದಿಂದ ಈ ಪತ್ರವನ್ನು ಬರೆಯಲು ನಿರ್ಧರಿಸಿದ್ದೇನೆ ಎಂದು ಬರೆದಿದ್ದಾರೆ.

  • 30 ನಿಮಿಷದಲ್ಲಿ 33 ಹಂತ, 768 ಮೆಟ್ಟಿಲು ಏರಿದ ಯುವಕ – ವೀಡಿಯೋ ವೈರಲ್

    30 ನಿಮಿಷದಲ್ಲಿ 33 ಹಂತ, 768 ಮೆಟ್ಟಿಲು ಏರಿದ ಯುವಕ – ವೀಡಿಯೋ ವೈರಲ್

    ಕ್ಯಾನ್ಬೆರಾ: ಒಬ್ಬ ಮನುಷ್ಯ 33 ಹಂತವನ್ನು ಏರಲು ಎಷ್ಟು ಸಮಯ ಬೇಕಾಗುತ್ತದೆ? ಅದರಲ್ಲೂ ಪಾದವನ್ನು ನೆಲಕ್ಕೆ ತಾಕಿಸದೆ ಬೈಸಿಕಲ್ ನಲ್ಲಿ ಮೆಟ್ಟಿಲು ಏರಲು ಸಾಧ್ಯವೇ ಇಲ್ಲ. ಆದರೆ ಫ್ರೆಂಚ್ ಮೂಲದ ಸೈಕಲಿಷ್ಟ್ ಮತ್ತು ಮೌಂಡೆನ್ ಬೈಕರ್ ಯುರೆಲಿಯನ್ ಫಾಂಟೆನಾಯ್ ಎಂಬವನು ಕೇವಲ 30 ನಿಮಿಷಗಳಲ್ಲಿ 768 ಮಟ್ಟಿಲುಗಳನ್ನು ಬೈಸಿಕಲ್ ಮೂಲಕ 33ನೇ ಹಂತ ಏರಿದ್ದಾನೆ. ಇದೀಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

     

    ಪ್ಯೂಟಾಕ್ಸ್ ಟವರ್ ನಲ್ಲಿ ಹೊಸದಾಗಿ ನಿರ್ಮಿಸಲಾದ ಗಗನವನ್ನೇ ಚುಂಬಿಸುವಂತಿರುವ ಟ್ರಿನಿಟಿ ಟವರ್ ಕಟ್ಟಡವನ್ನು ತನ್ನ ಪಾದಗಳನ್ನು ನೆಲಕ್ಕೆ ತಾಗಿಸದೇ 33ನೇ ಹಂತ ಬರುವವರೆಗೂ ಬೈಸಿಕಲ್ ನಲ್ಲಿಯೇ ಏರಿದ್ದಾನೆ. ಹೀಗೆ ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ್ದಾನೆ. ಈ ವೀಡಿಯೋ ಇದೀಗ ಟ್ವಿಟ್ಟರ್ ಮತ್ತು ಯುಟ್ಯೂಬ್ ಗಳಲ್ಲಿ ಹರಿದಾಡುತ್ತಿದೆ.

    ಈ ವೀಡಿಯೋದಲ್ಲಿ ಯುರೆಲಿಯನ್ ಸವಾಲನ್ನು ಮೊದಲ ಮೆಟ್ಟಿಲಿಂದ ಆರಂಭಿಸಿ, ಅಂಕು ಡೊಂಕಾಗಿರುವ ಮೆಟ್ಟಲಿನ ಮೇಲೆ ನಿಧಾನಗತಿಯಲ್ಲಿ ಬೈಸಿಕಲ್ ಮೂಲಕ 33 ಹಂತದ ಮೆಟ್ಟಿಲುಗಳನ್ನು ಏರುತ್ತಿರುವುದು ಕಂಡು ಬಂದಿದೆ. ಅಲ್ಲದೆ ಸಾರ್ವಜನಿಕರು ಆತನಿಗೆ ಹಿಂದಿನಿಂದ ಚಪ್ಪಾಳೆ ತಟ್ಟಿ ಪ್ರೇರೆಪಿಸುತ್ತಿರುವುದನ್ನು ಕಾಣಬಹುದಾಗಿದೆ.

  • ನಾವು ಬದುಕೋಣ, ಬೇರೆಯವ್ರನ್ನೂ ಬದುಕೋಕೆ ಬಿಡೋಣ

    ನಾವು ಬದುಕೋಣ, ಬೇರೆಯವ್ರನ್ನೂ ಬದುಕೋಕೆ ಬಿಡೋಣ

    – ಆಸ್ಟ್ರೇಲಿಯಾದಲ್ಲಿ ಕೊರೊನಾದ ಭೀಕರತೆ ಬಿಚ್ಚಿಟ್ಟ ಕನ್ನಡತಿ

    ಕ್ಯಾನ್ಬೆರಾ: ಕೊರೊನಾ ವೈರಸ್ ಇಡೀ ಜಗತ್ತಿನಾದ್ಯಂತ ದಿನೇ ದಿನೇ ಹೆಚ್ಚಾಗಿ ವ್ಯಾಪಿಸುತ್ತಿದೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಆಸ್ಟ್ರೇಲಿಯಾದಲ್ಲಿನ ಕೊರೊನಾದ ಭೀಕರತೆಯನ್ನ ಕನ್ನಡತಿಯೊಬ್ಬಳು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾಳೆ.

    ಶಿವಮೊಗ್ಗ ಮೂಲದ ಶುಭ್ರತಾ ವಿಡಿಯೋ ಮೂಲಕ ಆಸ್ಟ್ರೇಲಿಯಾದಲ್ಲಿನ ಕೊರೊನಾ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

    ಶುಭ್ರತಾ ಹೇಳಿದ್ದೇನು?
    ನಾನು ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದಲ್ಲಿ ಕಳೆದ 8 ವರ್ಷಗಳಿಂದ ನೆಲೆಸಿದ್ದೇನೆ. ಆಸ್ಟ್ರೇಲಿಯಾದಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ, ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಈ ವಿಡಿಯೋ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ಆಸ್ಟ್ರೇಲಿಯಾದಲ್ಲಿ ಜನವರಿ 25ರಂದು ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೆ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 3,800ಕ್ಕೂ ಅಧಿಕ ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದುವರೆಗೂ 14 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ 2ನೇ ಹಂತದ ಲಾಖ್‍ಡೌನ್‍ನಲ್ಲಿದೆ.

    ಅಂದರೆ ಸೂಪರ್ ಮಾರ್ಕೆಟ್, ಮೆಡಿಕಲ್ ಶಾಪ್, ದಿನಸಿ, ಪೆಟ್ರೋಲ್ ಬಂಕ್ ಓಪನ್ ಮಾತ್ರ ಇದೆ. ಬೇರೆ ಯಾವ ಅಂಗಡಿಗಳು ತೆರೆದಿಲ್ಲ. ಯಾರೂ ಮನೆಯಿಂದ ಹೊರಗೆ ಹೋಗುತ್ತಿಲ್ಲ. ಎಲ್ಲರೂ ಮನೆಯಲ್ಲಿ ಇದ್ದಾರೆ. ನಾವು ಕೂಡ ಮನೆಯಲ್ಲಿಯೇ ಇದ್ದೇವೆ. ಕೆಲವರು ಮನೆಯಲ್ಲಿಯೇ ಕುಳಿತು ಕೆಲಸ ಮಾಡುತ್ತಿದ್ದಾರೆ. ಆದರೆ ಕೊರೊನಾದಿಂದ ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದೆ. ಆದರೂ ಸರ್ಕಾರ ಕೆಲಸ ಕಳೆದುಕೊಂಡಿರುವ ಪ್ರತಿಯೊಬ್ಬರಿಗೂ ತಿಂಗಳಿಗೆ 1000 ರೂಪಾಯಿಯಂತೆ ಆರು ತಿಂಗಳು ಕೊಡಲು ನಿರ್ಧಾರ ಮಾಡಿದೆ. ಇದರಿಂದ ಅನೇಕರಿಗೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.

    ಇಲ್ಲಿನ ಸಾರ್ವಜನಿಕರು, ಡಾಕ್ಟರ್‌ಗಳಿಗೆ ವಿಡಿಯೋ ಕಾಲ್ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಆಸ್ಪತ್ರೆಗಳಿಗೆ ನೇರವಾಗಿ ಹೋಗಲು ಆಗುತ್ತಿಲ್ಲ. ಒಂದು ವೇಳೆ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಬಂದರೆ ಆಸ್ಪತ್ರೆಯ ಮುಂದೆ ಕಾರಿನಲ್ಲಿಯೇ ಕೂರಬೇಕು. ಆಸ್ಪತ್ರೆಯ ಸಿಬ್ಬಂದಿ ಸ್ಯಾನಿಟೈಸರ್ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಇಷ್ಟೆಲ್ಲಾ ಮುಂಜಾಗ್ರತಾ ಕ್ರಮವನ್ನು ಕೈಗೊಂಡರೂ ಸಹ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

    ಆಸ್ಟ್ರೇಲಿಯಾದಲ್ಲಿ ಒಟ್ಟು ಸಂಖ್ಯೆ 2.5 ಕೋಟಿ, ಕರ್ನಾಟಕ ಒಂದು ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆ ಇದೆ. ಕರ್ನಾಟಕದ ಅರ್ಧದಷ್ಟು ಜನಸಂಖ್ಯೆ ಆಸ್ಟೇಲಿಯಾದಲ್ಲಿ ಇಲ್ಲ. ಆದರೂ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಇನ್ನೂ ಭಾರತದ ಜನಸಂಖ್ಯೆಯನ್ನು ಪರಿಗಣಿಸಿದರೆ ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಹೀಗಾಗಿ ದಯವಿಟ್ಟು ದಯವಿಟ್ಟು ಮನೆಯಲ್ಲಿರಿ ಪೊಲೀಸ್, ವೈದ್ಯರು, ಬ್ಯಾಂಕ್ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಮಗಾಗಿ, ಸಮಾಜಕ್ಕಾಗಿ ಅವರು ಕೆಲಸ ಮಾಡುವಾಗ ನಾವು ಅವರಿಗಾಗಿ ಮನೆಯಲ್ಲಿರಬೇಕು ಅಷ್ಟೆ. ದಯವಿಟ್ಟು ಮನೆಯಲ್ಲಿರಿ. ಅನವಶ್ಯಕವಾಗಿ ಯಾರೂ ಹೊರ ಬರಬೇಡಿ. ಅನಿವಾರ್ಯತೆ ಇದ್ದರೆ ಎಲ್ಲಾ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡು ಬನ್ನಿ, ನಾವು ಬದುಕೋಣ, ಬೇರೆಯವರನ್ನೂ ಬದುಕೋಕೆ ಬಿಡೋಣ ಎಂದು ಶೂಭ್ರತಾ ಮನವಿ ಮಾಡಿಕೊಂಡರು.

  • 2 ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿ ಅಪಘಾತಕ್ಕೆ ಬಲಿ

    2 ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿ ಅಪಘಾತಕ್ಕೆ ಬಲಿ

    ಕ್ಯಾನ್ಬೆರಾ: ಕೇರಳ ಮೂಲದ ನವವಿವಾಹಿತ ದಂಪತಿ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    ಮೃತರನ್ನು ಎರ್ನಾಕುಲಂನ ವೆಂಗೋಲಾ ಮೂಲದ ಅಲ್ಬಿನ್ ಟಿ ಮ್ಯಾಥ್ಯೂ (30) ಮತ್ತು ಪತ್ನಿ ನಿನು ಸುಸೆನ್ ಎಲ್ಧೋ (28) ಎಂದು ಗುರುತಿಸಲಾಗಿದೆ. ಮೃತ ಅಲ್ಬಿನ್ ಮತ್ತು ನಿನು ಜೊತೆ ಕಳೆದ ಅಕ್ಟೋಬರ್ 28 ರಂದು ಮದುವೆಯಾಗಿದ್ದರು.

    ಮದುವೆಯಾದ ಸ್ವಲ್ಪ ದಿನಗಳ ನಂತರ ಅಂದರೆ ನವೆಂಬರ್ 20 ರಂದು ಈ ನವ ದಂಪತಿ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ನಿನು ಆಸ್ಟ್ರೇಲಿಯಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಬಳಿ ಎರಡು ದಿನಗಳ ಹಿಂದೆ ಕಾರು ಅಪಘಾತ ಸಂಭವಿಸಿದೆ. ಪರಿಣಾಮ ಅಲ್ವಿನ್ ಮತ್ತು ನಿನು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಅಲ್ಬಿನ್ ನಿವೃತ್ತ ಎಸ್‍ಐ ಮಗನಾಗಿದ್ದು, ನಿನು ನಿವೃತ್ತ ಎಲ್‍ಐಸಿ ಅಧಿಕಾರಿಯ ಪುತ್ರಿ ಎಂದು ತಿಳಿದು ಬಂದಿದೆ. ಈ ದಂಪತಿ ಪ್ರಯಾಣಿಸುತ್ತಿದ್ದ ಕಾರು ರಸ್ತೆಯಿಂದ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ ಈಗ ತಾನೇ ಮದುವೆಯಾಗಿದ್ದ ಮಕ್ಕಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಮೂರು ಕಣ್ಣಿನ ಹಾವು ನೋಡಿ ದಂಗಾದ್ರು ನೆಟ್ಟಿಗರು!

    ಮೂರು ಕಣ್ಣಿನ ಹಾವು ನೋಡಿ ದಂಗಾದ್ರು ನೆಟ್ಟಿಗರು!

    ಕ್ಯಾನ್ಬೆರಾ: ಸಾಮಾನ್ಯವಾಗಿ ಎರಡು ಕಣ್ಣಿನ ಹಾವನ್ನ ನೋಡಿರುತ್ತೀರಾ. ಅದ್ರೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೂರು ಕಣ್ಣಿನ ಹಾವೊಂದು ಸಖತ್ ಸದ್ದು ಮಾಡುತ್ತಿದೆ.

    ಹೌದು. ಸಹಜವಾಗಿ ಹಾವುಗಳೆಂದರೆ ಎರಡು ಕಣ್ಣು ಇರುತ್ತೆ. ಆದರೆ ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ಮೂರು ಕಣ್ಣಿನ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋ ಸಖತ್ ವೈರಲ್ ಆಗಿದೆ. ಬುಧವಾರ ಈ ಬಗ್ಗೆ ಆಸ್ಟ್ರೇಲಿಯಾ ಉತ್ತರ ಭಾಗದ ಅರಣ್ಯ ಇಲಾಖೆ ತಮ್ಮ ಫೇಸ್‍ಬುಕ್ ಫೇಜ್‍ನಲ್ಲಿ ಮೂರು ಕಣ್ಣಿನ ಹಾವಿನ ಫೋಟೋ ಜೊತೆಗೆ ಅದರ ವಿಶೇಷತೆಯನ್ನು ಶೇರ್ ಮಾಡಿದೆ. ಈ ಮೂರು ಕಣ್ಣಿನ ಹಾವಿನ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಅರ್ನ್ ಹೆಮ್ ಹೆದ್ದಾರಿಯಲ್ಲಿ ಸಿಕ್ಕಿರುವ ಈ ಹಾವು ಕಾರ್ಪೆಟ್ ಪೈತಾನ್ ಪ್ರಜಾತಿಗೆ ಸೇರಿದ್ದು, ಇದಕ್ಕೆ `ಮಾಂಟಿ ಪೈತಾನ್’ ಎಂದು ಹೆಸರಿಡಲಾಗಿದೆ. ಮಾರ್ಚ್ ನಲ್ಲಿ ಈ ವಿಚಿತ್ರ ಹಾವು ಪತ್ತೆಯಾಗಿತ್ತು. ಆದ್ರೆ ಹುಟ್ಟಿದ ಕೇವಲ ಮೂರೇ ತಿಂಗಳಲ್ಲಿ ಅದು ಸತ್ತು ಹೋಗಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, ಆರೋಗ್ಯದ ಸಮಸ್ಯೆ ನಡುವೆಯೂ ಅದು ಮೂರು ತಿಂಗಳ ಕಾಲ ಬದುಕಿದ್ದೇ ಅಚ್ಚರಿಯ ಸಂಗತಿ. ಈ ಮೂರು ಕಣ್ಣಿನ ಹಾವು ಸುಮಾರು 40 ಸೆ.ಮಿ ಉದ್ದವಿತ್ತು ಎಂದಿದ್ದಾರೆ. ಹಾಗೆಯೇ ಈ ಹಾವಿನ ಎಕ್ಸ್-ರೆ ಮಾಡಿ ನೋಡಿದಾಗ ಹಾವಿಗೆ ಎರಡು ತಲೆಯಿಲ್ಲ ಎಂಬುದು ತಿಳಿದುಬಂದಿದೆ. ಆದ್ರೆ ಒಂದೇ ತಲೆಬುರುಡೆಯಲ್ಲಿ ಮೂರನೇ ಕಣ್ಣಿಗೆ ಜಾಗವಿದ್ದು, ಮೂರು ಕಣ್ಣು ಕೂಡ ಕಾರ್ಯ ನಿರ್ವಹಿಸುತ್ತಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

    https://www.facebook.com/ParksandWildlifeNT/posts/2284844224909161

  • ವಾರದಲ್ಲಿ ಏಳು ಪುರುಷರ ಜೊತೆ ಸೆಕ್ಸ್ – ಸ್ವಾತಂತ್ರ್ಯದ ಅನುಭವವಾಯ್ತು ಎಂದ ಮಹಿಳೆ

    ವಾರದಲ್ಲಿ ಏಳು ಪುರುಷರ ಜೊತೆ ಸೆಕ್ಸ್ – ಸ್ವಾತಂತ್ರ್ಯದ ಅನುಭವವಾಯ್ತು ಎಂದ ಮಹಿಳೆ

    ಕ್ಯಾನ್ಬೆರಾ: ಆಸ್ಟ್ರೇಲಿಯಾ ಮಹಿಳೆಯೊಬ್ಬಳು ವಿಚ್ಛೇದನದ ನಂತರ ಒಂದು ವಾರದಲ್ಲಿ ಏಳು ಪುರುಷರೊಂದಿಗೆ ಮಲಗಿದ್ದು, ಇದರಿಂದ ಏನು ಕಲಿತೆ ಎಂಬುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

    ನಾದಿಯಾ ಬೊಕಾಡಿ ಎಂಬಾಕೆ ತನ್ನ ಏಳು ವರ್ಷಗಳ ಕಾಲದ ನಂತರ ಪತಿಯಿಂದ ಬೇರೆಯಾಗಿದ್ದರು. ನಂತರ ಈಕೆ ದಿನಕ್ಕೆ ಪರಪುರುಷರೊಂದಿಗೆ ಏಳು ಬಾರಿ ಸೆಕ್ಸ್ ಮಾಡಿದ್ದಾರೆ. ಈ ಬಗ್ಗೆ ಇತ್ತೇಚೆಗಷ್ಟೇ ತನ್ನ ಬಾಯ್‍ಫ್ರೆಂಡ್ ಕಿನನ್ ಜೊತೆ ಇದ್ದಾಗ ಸುಮಾರು ಒಂದು ದಶಕದ ಕಾಲ ಪತ್ನಿಯಾಗುವ ಮೂಲಕ ತನ್ನ ಲೈಂಗಿಕತೆ ಜೀವಂತವಾಗಿರುವಂತೆ ಮಾಡಿವೆ ಎಂದು ಹೇಳಿಕೊಂಡಿದ್ದಾರೆ.

    ನಾದಿಯಾ ಬೊಕಾಡಿ ದಾಪಂತ್ಯ ಜೀವನದಲ್ಲಿ ಸಾಕಷ್ಟು ನೊಂದಿದ್ದು, ಸೆಕ್ಸ್ ಗಾಗಿ ಪುರುಷರ ಜೊತೆ ಮಲಗುವ ಉದ್ದೇಶ ನನಗಿರಲಿಲ್ಲ. ಆದರೆ ಈ ವೇಳೆ ಸ್ವಾತಂತ್ರ್ಯದ ಅನುಭವವಾಯಿತು. ಏಳು ವರ್ಷಗಳ ದಾಂಪತ್ಯದಲ್ಲಿ ಭಾವನಾತ್ಮಕವಾಗಿ ಕಷ್ಟಪಟ್ಟಿದ್ದು, ಏಳು ದಿನಗಳ ಕಾಲ ನಾನು ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಯಿತು ಎಂದು ತಿಳಿಸಿದ್ದಾರೆ.

    ಆಸ್ಟ್ರೇಲಿಯನ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಒಂದು ದಿನದಲ್ಲಿ ಅತಿ ಹೆಚ್ಚು ಅಂದರೆ ಒಂದು ದಿನದಲ್ಲಿ ಆರು ಅಥವಾ ಏಳು ಬಾರಿ ಸೆಕ್ಸ್ ಮಾಡಿರುವುದಾಗಿ ಬಹಿರಂಗಪಡಿಸಿದ್ದಾರೆ. ಜೊತೆಗೆ ನಾನು ಒಂದು ದಿನದಲ್ಲಿ ಒಬ್ಬ ಪುರುಷನ ಜೊತೆ ಮಾತ್ರ ಸಂಬಂಧ ಹೊಂದಿದ್ದೇನೆ. ಬೇರೆ ಪುರುಷರ ಜೊತೆ ಸಂಬಂಧ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

    ನಾದಿಯಾ ಒಮ್ಮೆ ತಮ್ಮ ಸಹೋದ್ಯೋಗಿ ಜೊತೆ ಬೇಸರವನ್ನು ಹಂಚಿಕೊಂಡಿದ್ದಾರೆ. ಆಗ ಆಕೆಯ ಪುರುಷರಿಗೆ ಮೆಸೇಜ್ ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ಅವರು ಹಾಗೆ ಮೆಸೇಜ್ ಮಾಡುತ್ತಾರೆ. ಅವರು ಫೋನ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. 7 ದಿನಗಳ ಕಾಲ ಬೇರೆ ಬೇರೆ ಪುರುಷನ ಜೊತೆ ಮಲಗಿದ್ದ ನನಗೆ ಒತ್ತಡ ಕಡಿಮೆಯಾಗಿ, ನಾನಿನ್ನೂ ಜೀವಂತವಿದ್ದೇನೆ ಎಂಬ ಭಾವ ಬಂದಿದೆ ಎಂದು ನಾದಿಯಾ ಹೇಳಿಕೊಂಡಿದ್ದಾರೆ.

    ಕೊನೆಗೆ ನನಗೆ ಲೈಂಗಿಕ ವ್ಯಸನವಿದೆ ಎನ್ನುವುದು ಗೊತ್ತಾಯಿತು. ನನ್ನ ಈ ವರ್ತನೆ ಜೀವನದಲ್ಲಿ ನಕಾರಾತ್ಮಕ ಪ್ರಭಾವವನ್ನೂ ಬೀರಿದೆ ಎಂದು ನಾದಿಯಾ ಮಾಧ್ಯಮಗಳಿಗೆ ನೀಡಿದ ಸಂದರ್ಶನಲ್ಲಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.

  • ಪಕ್ಷಿ ನುಂಗಿ ಟಿವಿ ಆ್ಯಂಟೆನಾ ಮೇಲೆ ಪರದಾಡಿದ ಹೆಬ್ಬಾವು- ವಿಡಿಯೋ ನೋಡಿ

    ಪಕ್ಷಿ ನುಂಗಿ ಟಿವಿ ಆ್ಯಂಟೆನಾ ಮೇಲೆ ಪರದಾಡಿದ ಹೆಬ್ಬಾವು- ವಿಡಿಯೋ ನೋಡಿ

    ಕ್ಯಾನ್ಬೆರಾ: ಟಿವಿ ಆ್ಯಂಟೆನಾ ಸುತ್ತಲೂ ಸುತ್ತುವರಿದಿದ್ದ ಬೃಹತ್ ಗಾತ್ರದ ಹೆಬ್ಬಾವೊಂದು ಪಕ್ಷಿಯನ್ನು ನುಂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಕ್ಯಾಥಿ ಗಾಲ್ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ಘಟನೆ ಬುಧವಾರ ಆಸ್ಟ್ರೇಲಿಯಾದಲ್ಲಿ ಕಿಂಗ್ ಸ್ಕ್ಲಿಫ್ ನಲ್ಲಿ ನಡೆದಿದ್ದು, ಕ್ಯಾಥಿ ಗಾಲ್ ತಮ್ಮ ಮನೆಯ ಛಾವಣಿಯ ಮೇಲೆ ನಿಂತು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಹೆಬ್ಬಾವು ಪಕ್ಷಿ ತಿನ್ನುತ್ತಿರುವ ವಿಡಿಯೋವನ್ನು ಕಿಂಗ್ ಸ್ಕ್ಲಿಫ್ ಹ್ಯಾಪನಿಂಗ್ಸ್ ಎಂಬ ಫೇಸ್‍ಬುಕ್‍ ಗುಂಪಿನಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ನಾನು ಮನೆ ಮೇಲೆ ಹೋಗಿ ನೋಡಿದಾಗ ಹೆಬ್ಬಾವು ನೇತಾಡುತ್ತಿರುವುದನ್ನು ಕಂಡು ಗಾಬರಿಯಾದೆ. ಹೆಬ್ಬಾವು ಆ ಪಕ್ಷಿಯನ್ನು ತಿನ್ನಲು ಒಂದೂವರೆ ಗಂಟೆಯಷ್ಟು ಸಮಯ ತೆಗೆದುಕೊಂಡಿದೆ ಎಂದು ಕ್ಯಾಥಿ ಗಾಲ್ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ವಿಡಿಯೋವನ್ನು ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದು, ಅಪಾರ ಜನರು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಮನೆಯ ಸಮೀಪದ ಟಿವಿ ಆ್ಯಂಟೆನಾದ ಮೇಲೇರಿದ ಬೃಹತ್ ಗಾತ್ರದ ಹೆಬ್ಬಾವು, ಪಕ್ಷಿಯನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡಿದೆ. ಅಲ್ಲದೆ ತಿನ್ನಲು ಪ್ರಯತ್ನ ಪಡುತ್ತಿದೆ. ಈ ವೇಳೆ ಹೆಬ್ಬಾವು ಆ್ಯಂಟೆನಾದಿಂದ ಕೆಳಗೆ ನೇತಾಡಲು ಆರಂಭಿಸುತ್ತಿದೆ. ಹೀಗೆ ಕಷ್ಟಪಟ್ಟು ನೇತಾಡುತ್ತಿದ್ದರೂ ಹೆಬ್ಬಾವು ಮಾತ್ರ ಪಕ್ಷಿಯನ್ನು ಕೆಳಗೆ ಹಾಕದೇ ಹೇಗಾದ್ರೂ ಮಾಡಿ ತಿನ್ನಲೇ ಬೇಕೆಂದು ಹಠಹಿಡಿದಿದೆ. ಪಕ್ಷಿಯ ಕುತ್ತಿಗೆಯನ್ನೇ ಹೆಬ್ಬಾವು ಕಚ್ಚಿದೆ. ಹೀಗಾಗಿ ಪಕ್ಷಿ ಸತ್ತಿದೆ ಎಂದನಿಸುತ್ತಿದೆ.

    ಒಟ್ಟಿನಲ್ಲಿ ಈ ಕಡೆ ಕೆಳಗೆ ಬೀಳಲು ಸಾಧ್ಯವಾಗದೆ ಕಚ್ಚಿಕೊಂಡಿರುವ ಪಕ್ಷಿಯನ್ನು ಮೇಲಕ್ಕೆ ಎತ್ತಲೂ ಆಗದೆ ಹೆಬ್ಬಾವು ಪರದಾಡುತ್ತಿರುವುದನ್ನು ನಾವು ವಿಡಿಯೋದಲ್ಲಿ ಗಮನಿಸಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಾಯ್ಲೆಟ್ ಕಮೋಡ್ ನಲ್ಲಿ ಅಡಗಿ ಕೂತಿತ್ತು 5 ಅಡಿ ಉದ್ದದ ಹೆಬ್ಬಾವು..!

    ಟಾಯ್ಲೆಟ್ ಕಮೋಡ್ ನಲ್ಲಿ ಅಡಗಿ ಕೂತಿತ್ತು 5 ಅಡಿ ಉದ್ದದ ಹೆಬ್ಬಾವು..!

    ಕ್ಯಾನ್ಬೆರಾ: ಬರೋಬ್ಬರಿ 5 ಅಡಿ ಉದ್ದದ ಹೊಬ್ಬಾವೊಂದು ಟಾಯ್ಲೆಟ್  ಕಮೋಡ್ ನಲ್ಲಿ  ಅಡಗಿ ಕೂತಿದ್ದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಕಳೆದ ಮಂಗಳವಾರ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರ ನಿವಾಸಯಾದ ಹೆಲೆನ್ ರಿಚಾರ್ಡ್(59) ಅವರ ಮನೆಯ ಟಾಯ್ಲೆಟ್‍ನಲ್ಲಿ ಬಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿತ್ತು. ಮಹಿಳೆ ಶೌಚಾಲಯಕ್ಕೆ ಹೋಗಿದ್ದಾಗ ಟಾಯ್ಲೆಟ್  ಕಮೋಡ್ ನಲ್ಲಿ ಅಡಗಿದ್ದ ಹೆಬ್ಬಾವು ಕಚ್ಚಿತ್ತು. ಈ ವೇಳೆ ಮಹಿಳೆ ಎನಪ್ಪಾ ಇದು ಎಂದು ಶೌಚಾಲಯದ ಲೈಟ್ ಹಾಕಿ ನೋಡಿದಾಗ  ಕಮೋಡ್ ನಲ್ಲಿದ್ದ ಹಾವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

    ಬಳಿಕ ಗಾಬರಿಯಿಂದ ಮಹಿಳೆ ಉರಗ ತಜ್ಞರಿಗೆ ಕರೆಮಾಡಿ ಮಾಹಿತಿ ತಿಳಿಸಿದ್ದಾರೆ. ಹಾಗೆಯೇ ಟಾಯ್ಲೆಟ್ ಕಮೋಡ್ ನಲ್ಲಿದ್ದ ಹೆಬ್ಬಾವಿನ ಫೋಟೋವನ್ನು ಮೊಬೈಲ್‍ನಲ್ಲಿ ಸೆರೆಹಿಡಿದು “ಟಾಯ್ಲೆಟ್‍ಗೆ ಹೋದಾಗ ಎಚ್ಚರ” ಅಂತ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಸದ್ಯ ಎಲ್ಲಡೆ ವೈರಲ್ ಆಗಿದ್ದು, ನೋಡಿದವರು ಅಚ್ಚರಿ ಪಟ್ಟಿದ್ದಾರೆ.

    ಸ್ಥಳಕ್ಕೆ ಬಂದ ಉರಗ ತಜ್ಞರು ಟಾಯ್ಲೆಟ್‍ಯಿಂದ ಸುರಕ್ಷಿತವಾಗಿ 5 ಅಡಿ ಉದ್ದದ ಹೆಬ್ಬಾವನ್ನು ಹೊರೆಗೆದು ರಕ್ಷಣೆ ಮಾಡಿದ್ದಾರೆ.

    https://www.facebook.com/www.snakecatchers.com.au/photos/a.185721661616455/947707375417876/?type=3

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv