Tag: ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌

  • ಅಕ್ಷಯ್ ಕುಮಾರ್‌ಗೆ ಮತ್ತೆ ಕೊರೊನಾ ಸೋಂಕು: ಕಾನ್ ಫಿಲ್ಮ್ ಫೆಸ್ಟಿವಲ್‌ನಿಂದ ಔಟ್

    ಅಕ್ಷಯ್ ಕುಮಾರ್‌ಗೆ ಮತ್ತೆ ಕೊರೊನಾ ಸೋಂಕು: ಕಾನ್ ಫಿಲ್ಮ್ ಫೆಸ್ಟಿವಲ್‌ನಿಂದ ಔಟ್

    ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಎರಡನೇ ಬಾರಿ ಕೊರೊನಾ ಸೋಂಕು ತಗುಲಿದೆ. ಸೋಷಿಯಲ್ ಮೀಡಿಯಾ ಮೂಲಕ ಕೊರೋನಾ ಪಾಸಿಟಿವ್ ಕುರಿತು ವಿಚಾರ ಹಂಚಿಕೊಂಡ ನಟ ಅಕ್ಷಯ್, ಕಾನ್ ಫಿಲ್ಮ್ ಫೆಸ್ಟಿವಲ್ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ತಿಳಿಸಿದ್ದಾರೆ.

    ಬಿಟೌನ್ ಕಿಲಾಡಿ ಅಕ್ಷಯ್ ಕುಮಾರ್ ಮತ್ತೆ ಎರಡನೇ ಬಾರಿ ಕೊರೊನಾ ಸೋಂಕು ಧೃಡಪಟ್ಟಿದೆ. ಇನ್ನು 2022ರ ಕಾನ್ ಫಿಲ್ಮ್ ಫೆಸ್ಟಿವಲ್ ನೋಡಲು ಕಾತುರದಿಂದ ಕಾಯುತ್ತಿದ್ದೆ ಆದರೆ ಅಷ್ಟರಲ್ಲಿ ನನಗೆ ಕೊರೋನಾ ಸೋಂಕು ತಗುಲಿರುವುದು ತಿಳಿಯಿತು. ಹಾಗಾಗಿ ವಿಶ್ರಾಂತಿ ಪಡೆಯುವೆ. ನನ್ನ ಚಿತ್ರತಂಡಕ್ಕೆ ಶುಭವಾಗಲಿ, ಅನುರಾಗ್ ಠಾಕೂರ್ ಮತ್ತು ಇಡೀ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ತಿದ್ದೀನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.

    ಅಕ್ಷಯ್ ಕುಮಾರ್ ಸದ್ಯ ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪೃಥ್ವಿರಾಜ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಏಪ್ರಿಲ್ ತಿಂಗಳಿನಲ್ಲೂ ನಟ ಅಕ್ಷಯ್‌ಗೆ ಕೊರೊನಾ ತಗುಲಿತ್ತು. ಇದೀಗ ಮತ್ತೆ ಎರಡನೇ ಬಾರಿ ಕೊರೊನಾ ತಗುಲಿದೆ. ಇದನ್ನೂ ಓದಿ: ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆ

    `ಪೃಥ್ವಿರಾಜ್’ ಚಿತ್ರದಲ್ಲಿ ಅಕ್ಷಯ್‌ಗೆ ನಾಯಕಿಯಾಗಿ 2017 ಮಿಸ್‌ವರ್ಲ್ಡ್ ವಿಜೇತೆ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಚಂದ್ರಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಜೂನ್ 3ಕ್ಕೆ ತೆರೆಗೆ ಅಬ್ಬರಿಸಲಿದೆ.