Tag: ಕ್ಯಾಡ್ಬರಿಸ್‌ ಸಿನಿಮಾ

  • ‘ಕ್ಯಾಡ್ಬರಿಸ್’ ಸಿನಿಮಾದಲ್ಲಿ ಸೋನು ಗೌಡ- ಪೋಸ್ಟರ್ ಔಟ್

    ‘ಕ್ಯಾಡ್ಬರಿಸ್’ ಸಿನಿಮಾದಲ್ಲಿ ಸೋನು ಗೌಡ- ಪೋಸ್ಟರ್ ಔಟ್

    ‘ಬಿಗ್ ಬಾಸ್ ಖ್ಯಾತಿಯ ಸೋನು ಗೌಡ (Sonu Srinivas Gowda) ಇದೀಗ ಬಿಕಿನಿ ಫೋಟೋಗಳ ಮೂಲಕ ಸಖತ್ ಸುದ್ದಿಯಾದ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    ಧರ್ಮ ಕೀರ್ತಿರಾಜ್ & ಅದ್ವಿತಿ ಶೆಟ್ಟಿ ನಟನೆಯ ಕ್ಯಾಡ್ಬರಿಸ್ ಸಿನಿಮಾದಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಕ್ಯಾಡ್ಬರಿಸ್’ (Cadburys) ಸಿನಿಮಾದಲ್ಲಿನ ಸೋನು ಲುಕ್ ಕೂಡ ಚಿತ್ರತಂಡ ರಿವೀಲ್ ಮಾಡಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಚಿತ್ರತಂಡಕ್ಕೆ ಸೋನು ಧನ್ಯವಾದ ತಿಳಿಸಿದ್ದಾರೆ.

    ಕನಸು ಪ್ರೊಡಕ್ಷನ್ಸ್ ನಿರ್ಮಾಣದ ಕ್ಯಾಡ್ಬರಿಸ್ (Cadburys Film) ಚಿತ್ರದ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದೆ. ಈಗ ಆ ಮೂವಿಯ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಈ ವರ್ಷದ ಕೊನೆಯಲ್ಲಿ ನಿಮ್ಮ ಮುಂದೆ ಬರಲಿದ್ದೇವೆ. ಇಂದು ಈ ಚಿತ್ರದ ನನ್ನ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಹಾಗೂ ನಮ್ಮ ಚಿತ್ರತಂಡದ ಮೇಲೆ ಸದಾ ಇರಲಿ ಎಂದು ಕೇಳಿಕೊಳ್ಳುತ್ತೇವೆ.

    ಈ ಚಿತ್ರವು ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದ್ದು, ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್- ಅದ್ವಿತಿ ಶೆಟ್ಟಿ(Adhvithi Shetty) ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಇನ್ನು ಹಲವಾರು ದೊಡ್ಡ ದೊಡ್ಡ ನಟರು ನಟಿಸುತ್ತಿದ್ದಾರೆ. ಅವರೆಲ್ಲರ ಜೊತೆ ನಟಿಸಿದ್ದು ನನಗೆ ಸಂತಸ ತಂದಿದೆ. ನನಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ಈ ಚಿತ್ರದ ನಿರ್ಮಾಪಕರಿಗೂ ನಿರ್ದೇಶಕರಿಗೂ ಹಾಗೂ ಚಿತ್ರತಂಡದ ಎಲ್ಲರಿಗೂ ನನ್ನ ಧನ್ಯವಾದಗಳು ತಿಳಿಸುತ್ತಾ, ಸಮಸ್ತ ಕನ್ನಡ ನಾಡಿನ ಜನರ ಆಶೀರ್ವಾದ ಬಯಸುತ್ತಿರುವ ನಿಮ್ಮ ಪ್ರೀತಿಯ ಸೋನು ಶ್ರೀನಿವಾಸ್ ಗೌಡ ಎಂದು ಬರೆದುಕೊಂಡಿದ್ದಾರೆ.

    ಬಿಗ್ ಬಾಸ್ (Bigg Boss Kannada) ಶೋ ಬಳಿಕ ಇದೀಗ ಕ್ಯಾಡ್ಬರಿಸ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಸೋನು ಪಾದಾರ್ಪಣೆ ಮಾಡುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಿಲಿಯನ್ ಗಡಿ ದಾಟಿದ ಸೋನು ಬಿಕಿನಿ ವಿಡಿಯೋ

    ಮಿಲಿಯನ್ ಗಡಿ ದಾಟಿದ ಸೋನು ಬಿಕಿನಿ ವಿಡಿಯೋ

    ಬಿಗ್ ಬಾಸ್ (Bigg Boss Kannada) ಬೆಡಗಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಇದೀಗ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಬಿಕಿನಿ ವಿಡಿಯೋ ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದ ಸೋನು ಮತ್ತೆ ಸುದ್ದಿಯಲ್ಲಿದ್ದಾರೆ. ಸೋನು ಬಿಕಿನಿ ವಿಡಿಯೋಸ್ ಮಿಲಿಯನ್‌ಗಟ್ಟಲೇ ವಿವ್ ಪಡೆದುಕೊಳ್ಳುತ್ತಿದೆ. ಇದನ್ನೂ ಓದಿ:ರಚಿತಾ ರಾಮ್ ತರ ಹುಡುಗಿ ಸಿಗಬೇಕು- ಮದುವೆ ಬಗ್ಗೆ ಹನುಮಂತ ಪ್ರತಿಕ್ರಿಯೆ

    ಸದಾ ಸುದ್ದಿಯಲ್ಲಿರುವ ನಟಿ ಸೋನು ಬಿಕಿನಿ ಅವತಾರ ತೋರಿಸಿದ ಮೇಲೆ ಪಡ್ಡೆಹುಡುಗರಿಗೆ ಇಷ್ಟದೇವತೆಯಾಗಿ ಬಿಟ್ಟಿದ್ದಾರೆ. ಬಿಕಿನಿ ಲುಕ್‌ನಲ್ಲಿ ನಟಿ ಎರಡು ವಿಡಿಯೋಗಳನ್ನ ಹಂಚಿಕೊಂಡಿದ್ದರು. ಶರ್ಟ್ ಗುಂಡಿ ಬಿಚ್ಚಿದ ಮೊದಲ ಬೋಲ್ಡ್ ವಿಡಿಯೋ 17 ಮಿಲಿಯನ್‌ಗಿಂತ ಅಧಿಕ ವಿವ್ ಪಡೆದಿದೆ. ಅಂದರೆ 1 ಕೋಟಿ 70 ಲಕ್ಷಕ್ಕೂ ಅಧಿಕ ವಿವ್ ಪಡೆಯುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇದನ್ನೂ ಓದಿ:ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ನಟಿ ರಚನಾ ದಶರಥ್

    ಮತ್ತೊಂದು ಕೆಂಪು ಬಣ್ಣದ ಬಿಕಿನಿಯಲ್ಲಿ ಧರಿಸಿ ಮೆಟ್ಟಿಲು ಹತ್ತುತ್ತಿರುವ ಸೋನು ವಿಡಿಯೋ 2 ಮಿಲಿಯನ್ ಸಮೀಪಿಸುತ್ತಿದೆ. ಟ್ರೋಲಿಗರು ಅದೆಷ್ಟೇ ಟ್ರೋಲ್ ಮಾಡಲಿ, ಕ್ಯಾರೆ ಎನ್ನದೇ ಸೋನು ಎಂದಿನಂತೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ.

    ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ.

    ಈ ಹಿಂದೆ ಇವರ ಕೆಲ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಜೊತೆಗೆ ಮೊನ್ನೆಯಷ್ಟೇ ಸೋನು ಹೊಸ ವೀಡಿಯೋವೊಂದನ್ನು ಶೇರ್ ಮಾಡಿದ್ದರು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡ ಎಂದು ಹಾಕಿ ಕುತೂಹಲ ಹೆಚ್ಚಿಸಿದ್ದರು.

    ಕಂಪನಿಯೊಂದರ ಜಾಹೀರಾತಿಗೆ ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವೀಡಿಯೋ ಮಾಡಿದ್ದರು. ಹೆಣ್ಣುಮಕ್ಕಳು ಹೇಗೆ ಬ್ರಾ ಹಾಕಬೇಕು, ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಸೂಚಿಸಿದ್ದರು. ಜೊತೆಗೆ ಅದನ್ನು ಯಾವ ರೀತಿ ಹಾಕಬೇಕು ಎಂಬುವುದರ ಬಗ್ಗೆ ಕೂಡ ವೀಡಿಯೋ ಮೂಲಕ ತಿಳಿಸಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.

    ಟಿಕ್ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು.

    ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ (Roopesh Shetty), ಸಾನ್ಯ ಅಯ್ಯರ್ (Saanya Iyer) ಜೊತೆ ಸೋನು ಮಿಂಚಿದ್ದರು. ದೊಡ್ಮನೆ ಆಟ ಮುಗಿದ ಮೇಲೆ ತಮ್ಮ ಯುಟ್ಯೂಬ್‌ನಲ್ಲಿ ಒಂದಲ್ಲಾ ಒಂದು ವಿಚಾರದೊಂದಿಗೆ ಚರ್ಚೆ ಮಾಡುತ್ತಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]