Tag: ಕ್ಯಾಟರಿಂಗ್

  • ಕೇಟರಿಂಗ್‍ಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ

    ಕೇಟರಿಂಗ್‍ಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ

    ಬೆಂಗಳೂರು: ಕೇಟರಿಂಗ್ ಮತ್ತು ಊಟ ಬಡಿಸುವವರಿಗಾಗಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಕೇಟರಿಂಗ್ ನೀಡುವ ಸಿಬ್ಬಂದಿ ಕಡ್ಡಾಯವಾಗಿ 15 ದಿನಕ್ಕೊಮ್ಮೆ ಕೊರೊನಾ ಪರೀಕ್ಷೆಗೆ ಒಳಗಾಗಬೇಕೆಂದು ಸೂಚಿಸಿದೆ. ಇನ್ನುಳಿದಂತೆ ಕ್ಯಾಟರಿಂಗ್, ಅಡುಗೆ ಸ್ಥಳದಲ್ಲಿ ಮಾಸ್ಕ್, ಗ್ಲೌಸ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮಾರ್ಗಸೂಚಿಯಲ್ಲಿ ಹೇಳಿದೆ.

    ಮಾರ್ಗಸೂಚಿಗಳು:
    * ಅಡುಗೆ ತಯಾರಿಕಾ ಸ್ಥಳದಲ್ಲಿ ಉಗುಳುವುದು ನಿಷೇಧ.
    * ಕ್ಯಾಟರಿಂಗ್‍ನಲ್ಲಿ ಕೆಲಸ ಮಾಡುವ ಎಲ್ಲರೂ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಿಸಿಕೊಳ್ಳಬೇಕು.
    * ಹೈ ರಿಸ್ಕ್ ಇರುವ ವ್ಯಕ್ತಿಗಳು, ನಾನಾ ಖಾಯಿಲೆ ಬಳಲುವವರು, ಗರ್ಭಿಣಿ ಮಹಿಳೆಯರು ಇದ್ದರೆ ಹೆಚ್ಚು ನಿಗಾ ಇಡಬೇಕು
    * ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ
    * ಪ್ರವೇಶದ್ವಾರ, ನಿರ್ಗಮನ ದ್ವಾರದಲ್ಲಿ ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು
    * ಪಾರ್ಕಿಂಗ್ ಜಾಗ, ಹಾಲ್ ನಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ನಿಗಾವಹಿಸಬೇಕು
    * ಸಾಮಾಜಿಕ ಅಂತರಕ್ಕೆ ಸರ್ಕಲ್ ರಚನೆ ಮಾಡಬೇಕು

  • ವಾಹನದಲ್ಲಿ ಕೂರೋ ವಿಷ್ಯಕ್ಕೆ ವಾಗ್ವಾದ- ತಲೆಗೆ ಪಂಚ್ ಕೊಟ್ಟು ಯುವಕನ ಕೊಲೆ

    ವಾಹನದಲ್ಲಿ ಕೂರೋ ವಿಷ್ಯಕ್ಕೆ ವಾಗ್ವಾದ- ತಲೆಗೆ ಪಂಚ್ ಕೊಟ್ಟು ಯುವಕನ ಕೊಲೆ

    – ಕ್ಲುಲ್ಲಕ ವಿಚಾರಕ್ಕೆ ಕಾಶ್ಮೀರಿ ಯುವಕನ ಹತ್ಯೆ

    ಜೈಪುರ: ತಲೆಗೆ ಪಂಚ್ ಮಾಡುವ ಮೂಲಕ ಕಾಶ್ಮೀರಿ ಯುವಕನನ್ನು ಕೊಲೆ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ಬಾಸಿತ್ ಅಲಿಯಾಸ್ ಮೊಯ್ದಿನ್ ಖಾನ್ ಕೊಲೆಯಾದ ಯುವಕ. ಕ್ಷುಲ್ಲಕ ಕಾರಣಕ್ಕೆ ಬಾಸಿತ್ ಹಾಗೂ ಆತನ ಸಹದ್ಯೋಗಿ ಆದಿತ್ಯ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ಮಾಡಿದ್ದರು. ಹಲ್ಲೆ ಮಾಡುವ ವೇಳೆ ಬಾಸಿತ್ ತಲೆಗೆ ಆದಿತ್ಯ ಪಂಚ್ ಮಾಡಿದ್ದಾನೆ. ಪರಿಣಾಮ ಬಾಸಿತ್ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣ ಆತನನ್ನು ಸವಾಯು ಮಾನಸಿಂಗ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಸಿತ್ ಮೃತಪಟ್ಟಿದ್ದಾನೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮೀಶನರ್ ಅಶೋಕ್ ಕುಮಾರ್ ಗುಪ್ತಾ, ಬಾಸಿತ್ ಕಾಶ್ಮೀರದ ಕುಪ್ವಾಡಾ ಜಿಲ್ಲೆಯವನಾಗಿದ್ದು, ಜೈಪುರದಲ್ಲಿ ಬೇರೆ ಯುವಕರ ಜೊತೆ ಕ್ಯಾಟರಿಂಗ್ ಸ್ಟಾಫ್ ಕೆಲಸ ಮಾಡುತ್ತಿದ್ದನು. ಫೆ. 4ರಂದು ಹರ್‍ಮಾಡದ ಮೈರಿಜ್ ಗಾರ್ಡನ್‍ನಲ್ಲಿ ಕೆಲಸ ಮಾಡಲು ಬಾಸಿತ್ ಹಾಗೂ ಆದಿತ್ಯ ಹೋಗಿದ್ದರು. ಕೆಲಸ ಮುಗಿಸಿ ಹಿಂದಿರುಗುವಾಗ ವಾಹನದಲ್ಲಿ ಕೂರುವ ವಿಷಯಕ್ಕೆ ಸಂಬಂಧಿಸಿದಂತೆ ಬಾಸಿತ್ ಹಾಗೂ ಆದಿತ್ಯ ನಡುವೆ ವಾಗ್ವಾದ ನಡೆಯಿತು. ಬಳಿಕ ನೋಡನೋಡುತ್ತಿದ್ದಂತೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ ಎಂದರು.

    ಈ ಘಟನೆಯಲ್ಲಿ ಬಾಸಿತ್‍ಗೆ ಗಂಭೀರವಾಗಿ ಗಾಯಗೊಂಡ ಬಾಸಿತ್‍ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಬಾಸಿತ್ ಮೃತಪಟ್ಟಿದ್ದಾನೆ. ಹಲ್ಲೆ ನಡೆದ ನಂತರ ಬಾಸಿತ್ ಸ್ನೇಹಿತೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಆದಿತ್ಯನನ್ನು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದ ನಂತರ ಬಾಸಿತ್ ಮೃತದೇಹವನ್ನು ಕಾಶ್ಮೀರಕ್ಕೆ ರವಾನಿಸಲಾಯಿತು ಎಂದು ಪೊಲೀಸ್ ಕಮೀಶನರ್ ಅಶೋಕ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳದಲ್ಲಿದ್ದ ಜನರ ವಿಚಾರಣೆ ನಡೆಸಿದ್ದಾರೆ.