Tag: ಕ್ಯಾಚ್

  • ಕೊಹ್ಲಿ ಸೂಪರ್ ಕ್ಯಾಚ್ ಪಡೆದ ಯೂಸುಫ್- ಅಭಿಮಾನಿಗಳ ರಿಯಾಕ್ಷನ್ ಹೀಗಿದೆ

    ಕೊಹ್ಲಿ ಸೂಪರ್ ಕ್ಯಾಚ್ ಪಡೆದ ಯೂಸುಫ್- ಅಭಿಮಾನಿಗಳ ರಿಯಾಕ್ಷನ್ ಹೀಗಿದೆ

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ, ಹೈದರಾಬಾದ್ ನಡುವಿನ ಪಂದ್ಯದಲ್ಲಿ ಕೊಹ್ಲಿ ಸೂಪರ್ ಕ್ಯಾಚ್ ಪಡೆದ ಯೂಸುಫ್ ಪಠಾಣ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದ 9 ಓವರ್ ನಲ್ಲಿ ಸ್ಟೈಕ್ ನಲ್ಲಿದ್ದ ಕೊಹ್ಲಿ ಶಕೀಬ್ ಎಸೆತವನ್ನು ಬೌಂಡರಿಗಟ್ಟಲು ಯತ್ನಿಸಿದರು. ಈ ವೇಳೆ ಫೀಲ್ಡ್‍ನಲ್ಲಿದ್ದ 35 ವರ್ಷದ ಯೂಸುಫ್ ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ತಮ್ಮದೇ ಅಭಿಪ್ರಾಯ ತಿಳಿಸಿ ಟ್ವೀಟ್ ಮಾಡಿದ್ದಾರೆ.

    ಆರ್‌ಸಿಬಿ ವಿರುದ್ಧ ಪಂದ್ಯದ ಗೆಲುವಿನೊಂದಿಗೆ ಹೈದರಾಬಾದ್ ಐಪಿಎಲ್ 2018 ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಆಡಿರುವ 10 ಪಂದ್ಯಗಳಲ್ಲಿ 8 ರಲ್ಲಿ ಗೆಲುವು ಪಡೆದಿರುವ ಹೈದರಾಬಾದ್ 16 ಅಂಕಗಳನ್ನು ಪಡೆದಿದೆ. ಇನ್ನು ಹೈದರಾಬಾದ್ ವಿರುದ್ಧ ಸೋಲಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದು, ಆಡಿರುವ 10 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಗೆಲುವು ಪಡೆದು 6 ಅಂಕಗಳನ್ನು ಪಡೆದುಕೊಂಡಿದೆ.

  • ಉತ್ತಪ್ಪ ಕ್ಯಾಚ್ ಮಿಸ್ ಆಗಿದ್ದಕ್ಕೆ ಮಯಾಂಕ್ ಮೇಲೆ ಕೋಪಗೊಂಡ ಹಾರ್ದಿಕ್ – ವಿಡಿಯೋ

    ಉತ್ತಪ್ಪ ಕ್ಯಾಚ್ ಮಿಸ್ ಆಗಿದ್ದಕ್ಕೆ ಮಯಾಂಕ್ ಮೇಲೆ ಕೋಪಗೊಂಡ ಹಾರ್ದಿಕ್ – ವಿಡಿಯೋ

    ಮುಂಬೈ: ಕೊಲ್ಕತ್ತಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಕೆಕೆಆರ್ ಆಟಗಾರ ಉತ್ತಪ್ಪ ನೀಡಿದ್ದ ಕ್ಯಾಚ್ ಮುಂಬೈ ಯುವ ಆಟಗಾರ ಮಯಾಂಕ್ ಮಾರ್ಕಂಡೆ ಡ್ರಾಪ್ ಮಾಡಿದಕ್ಕೆ ಹಾರ್ದಿಕ್ ಪಾಂಡ್ಯ ಕೋಪ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದ 6ನೇ ಓವರ್ ವೇಳೆ 4 ರನ್ ಗಳಿಸಿದ್ದ ಉತ್ತಪ್ಪ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿದ್ದರು. ಆದರೆ ಈ ವೇಳೆ ಮಯಾಂಕ್ ಕೈಗೆ ಬಂದಿದ್ದ ಬಾಲನ್ನು ಹಿಡಿಯಲು ವಿಫಲರಾಗಿದ್ದರು. ಇದರಿಂದ ಕ್ಷಣ ಮಾತ್ರ ಶಾಕ್ ಗೆ ಒಳಗಾದ ಹಾರ್ದಿಕ್, ಮಾರ್ಕಂಡೆ ವಿರುದ್ಧ ಕೋಪ ಪ್ರದರ್ಶಿಸಿದರು. ಜೀವದಾನ ಪಡೆದ ಬಳಿಕ ಉತ್ತಪ್ಪ ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡಿದರು. ಕೇವಲ 35 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅರ್ಧ ಶತಕ (54 ರನ್) ಸಿಡಿಸಿದರು.

    ಸದ್ಯದ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯದ ಮುಂಬೈ ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಕನಸನ್ನು ಉಳಿಸಿಕೊಳ್ಳುವ ಒತ್ತಡದಲ್ಲಿದೆ. ಅದ್ದರಿಂದ ಆನ್ ಫೀಲ್ಡ್ ನಲ್ಲಿ ಮಾಡುವ ಪ್ರತಿ ತಪ್ಪಿಗೂ ತಂಡ ಭಾರೀ ದಂಡ ತೆರಬೇಕಾಗುತ್ತದೆ. ಸದ್ಯ ಕೆಕೆಆರ್ ವಿರುದ್ಧ ಗೆಲುವು ಪಡೆದ ಮುಂಬೈ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡೆದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5 ನೇ ಸ್ಥಾನ ಪಡೆದಿದೆ.

    4 ಸಾವಿರ ರನ್: ಮುಂಬೈ ವಿರುದ್ಧ 54 ರನ್ ಗಳೊಂದಿಗೆ ರಾಬಿನ್ ಉತ್ತಪ್ಪ ಐಪಿಎಲ್ ನಲ್ಲಿ 4 ಸಾವಿರ ರನ್ ಪೂರೈಸಿ ಅತಿ ಹೆಚ್ಚು ರನ್ ಗಳಿಸಿದ 5ನೇ ಆಟಗಾರ ಎನಿಸಿಕೊಂಡರು. ಈ ಮೂಲಕ ಡೇವಿಡ್ ವಾರ್ನರ್ ರನ್ನು ಹಿಂದಿಕ್ಕಿದರು. ಒಟ್ಟು 159 ಪಂದ್ಯಗಳಲ್ಲಿ 29.25 ಸರಾಸರಿಯಲ್ಲಿ 4,37 ರನ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ರೈನಾ (4,801 ರನ್), ಕೊಹ್ಲಿ (4,775 ರನ್) ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದಿದ್ದಾರೆ.

  • ಸೋಲಿನ ಬಳಿಕ ಆರ್‌ಸಿಬಿ  ಆಟಗಾರರ ವಿರುದ್ಧ ಕೊಹ್ಲಿ ಗರಂ

    ಸೋಲಿನ ಬಳಿಕ ಆರ್‌ಸಿಬಿ ಆಟಗಾರರ ವಿರುದ್ಧ ಕೊಹ್ಲಿ ಗರಂ

    ಬೆಂಗಳೂರು: ಐಪಿಎಲ್ 11ನೇ ಆವೃತ್ತಿಯಲ್ಲಿ ಆರ್‌ಸಿಬಿ ಆಟಗಾರರ ಸೋಲಿನ ಸರಣಿ ಮುಂದುವರೆದಿದ್ದು, ಕೆಕೆಆರ್ ವಿರುದ್ಧ ಭಾನುವಾರ ನಡೆದ ಪಂದ್ಯವನ್ನು ಕೈಚೆಲ್ಲಿದ್ದ ಬಳಿಕ ತಂಡದ ಆಟಗಾರರ ವಿರುದ್ಧ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪಂದ್ಯದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕೊಹ್ಲಿ, ಇದೇ ರೀತಿ ಮುಂದಿನ ಪಂದ್ಯಗಳಲ್ಲಿ ತಂಡದ ಆಟಗಾರರು ಕಳಪೆ ಫೀಲ್ಡಿಂಗ್ ಪ್ರದರ್ಶನ ಮುಂದುವರೆಸಿದರೆ ಗೆಲುವು ಪಡೆಯಲು ಸಾಧ್ಯವಿಲ್ಲ. ನಾವು ಗೆಲುವಿಗಾಗಿ ಮತ್ತಷ್ಟು ಶ್ರಮವಹಿಸಬೇಕಿದೆ ಎಂದು ಹೇಳಿದ್ದಾರೆ.

    ಈ ಸಂದರ್ಭದಲ್ಲಿ ಯಾವುದೇ ಆಟಗಾರನ್ನು ನಾನು ಗುರಿ ಮಾಡುವುದಿಲ್ಲ. ಈ ಆವೃತ್ತಿಯಲ್ಲಿ ಮುಂದಿನ ಹಂತಕ್ಕೆ ಆಯ್ಕೆ ಆಗಬೇಕಾದರೆ ಇನ್ನುಳಿದ 7 ಪಂದ್ಯದಲ್ಲಿ 6 ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆ ಇದೆ. ಅದ್ದರಿಂದ ಪ್ರತಿಯೊಂದು ಪಂದ್ಯವು ತಂಡಕ್ಕೆ ಸೆಮಿಫೈನಲ್ ಪಂದ್ಯ ಎಂದು ಭಾವಿಸಬೇಕಿದೆ ಎಂದರು. ಇದನ್ನು ಓದಿ: ರನ್ನಿಂಗ್ ಡೈವ್ ಮಾಡಿ ಕ್ಯಾಚ್ ಪಡೆದ ಕೊಹ್ಲಿ – ಅನುಷ್ಕಾ ಕೊಟ್ಟ ರಿಯಾಕ್ಷನ್ ಹೀಗಿದೆ!

    ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡಿದ್ದ ಕ್ರಿಸ್ ಲಿನ್ 52 ಎಸೆಗಳಲ್ಲಿ 62 ರನ್ ಸಿಡಿಸಿದ್ದರು. ಆದರೆ ಪಂದ್ಯದ ಆರಂಭದ ನಾಲ್ಕನೇ ಓವರ್ ವೇಳೆ 7 ರನ್ ಗಳಿಸಿದ್ದ ಲಿನ್ ಬಿರುಸಿನ ಹೊಡೆತಕ್ಕೆ ಕೈ ಹಾಕಿ ಕವರ್ ಫೀಲ್ಡ್ ನಲ್ಲಿದ್ದ ಆರ್‌ಸಿಬಿ ಯುವ ಆಟಗಾರ ಮುರುಗನ್ ಅಶ್ವಿನ್ ಗೆ ಕ್ಯಾಚ್ ನೀಡಿದ್ದರು. ಸುಲಭವಾಗಿದ್ದ ಈ ಕ್ಯಾಚನ್ನು ಅಶ್ವಿನ್ ಪಡೆಯದೇ ಕೈಚೆಲ್ಲಿದ್ದರು. ಈ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಈ ಹಿಂದೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲೂ ಆರ್‌ಸಿಬಿ ಬೌಲರ್ ಉಮೇಶ್ ಯಾದವ್ ರಾಯುಡು ಕ್ಯಾಚ್ ಪಡೆಯಲು ವಿಫಲರಾಗಿ ತಂಡ ಸೋಲುಂಡುವಂತೆ ಮಾಡಿದ್ದರು. ಈ ಪಂದ್ಯದಲ್ಲಿ ರಾಯುಡು 53 ಎಸೆತಗಳಲ್ಲಿ 82 ರನ್ ಗಳಿಸಿ ಮಿಂಚಿದ್ದರು. ಇದನ್ನು ಓದಿ: 8.90 ಸೆಕೆಂಡ್‍ಗೆ 3 ರನ್ ಓಡಿ ಮಂದೀಪ್ ಸಿಂಗ್‍ಗೆ ಕೊಹ್ಲಿ ಚಾಲೆಂಜ್!

    https://twitter.com/gnitin4450/status/989201701235179521?

     

  • ರನ್ನಿಂಗ್ ಡೈವ್ ಮಾಡಿ ಕ್ಯಾಚ್ ಪಡೆದ ಕೊಹ್ಲಿ – ಅನುಷ್ಕಾ ಕೊಟ್ಟ ರಿಯಾಕ್ಷನ್ ಹೀಗಿದೆ!

    ರನ್ನಿಂಗ್ ಡೈವ್ ಮಾಡಿ ಕ್ಯಾಚ್ ಪಡೆದ ಕೊಹ್ಲಿ – ಅನುಷ್ಕಾ ಕೊಟ್ಟ ರಿಯಾಕ್ಷನ್ ಹೀಗಿದೆ!

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ, ಕೆಕೆಆರ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಓಡಿ ಬಂದು ಡೈವ್ ಮಾಡಿ ಕ್ಯಾಚ್ ಪಡೆದುಕೊಂಡಿದ್ದನ್ನು ನೋಡಿ ಪತ್ನಿ ಅನುಷ್ಕಾ ಶರ್ಮಾ ಆಶ್ಚರ್ಯಗೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆರ್‌ಸಿಬಿ ನೀಡಿದ 175 ರನ್ ಗಳ ಗುರಿ ಬೆನ್ನತ್ತಿದ್ದ ಕೆಕೆಆರ್ ತಂಡದ ಆಟಗಾರರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪಂದ್ಯ 19ನೇ ಓವರ್ ನಲ್ಲಿ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ (10 ಎಸೆತ, 23 ರನ್) ಭಾರೀ ಹೊಡೆತಕ್ಕೆ ಕೈ ಹಾಕಿದರು. ಈ ವೇಳೆ ಬೌಂಡರಿ ಬಳಿ ಇದ್ದ ಕೊಹ್ಲಿ ರನ್ನಿಂಗ್ ಡೈವ್ ಮಾಡುವ ಮೂಲಕ ಕ್ಯಾಚ್ ಪಡೆದರು.  ಆರ್‌ಸಿಬಿ ಪರ ಬೆಂಬಲಿಸಲು ಆಗಮಿಸಿದ್ದ ಅನುಷ್ಕಾ ಶರ್ಮಾ, ಕೊಹ್ಲಿ ಪಡೆದ ಕ್ಯಾಚ್ ನೋಡಿ ಅಚ್ಚರಿ ವ್ಯಕ್ತಪಡಿಸಿದರು.

    ಕೊಹ್ಲಿ ಈ ವೇಳೆ ಉತ್ತಮ ಕ್ಯಾಚ್ ಪಡೆದರೂ ಸಹ ಯಾವುದೇ ಸಂಭ್ರಮ ವ್ಯಕ್ತಪಡಿಸಲಿಲ್ಲ. ಕೊಹ್ಲಿ ಪಂದ್ಯದಲ್ಲಿ 33ನೇ ಅರ್ಧಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರೂ ಬೌಲಿಂಗ್ ವೈಫಲ್ಯದಿಂದಾಗಿ ಆರ್‌ಸಿಬಿ ಸೋಲುಂಡಿತು.

    ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡಿದ ಕ್ರಿಸ್ ಲಿನ್ ಔಟಾಗದೇ 62 ರನ್ ಸಿಡಿಸಿದರು. ಉಳಿದಂತೆ ರಾಬಿನ್ ಉತ್ತಪ್ಪ (21 ಎಸೆತ 36 ರನ್), ನರೈನ್ (19 ಎಸೆತ 27 ರನ್) ಬಿರುಸಿನ ಆಟ ಪ್ರದರ್ಶಿಸಿ ತಂಡದ ಗೆಲುವಿಗೆ ಕಾರಣರಾದರು. ಈ ಆವೃತ್ತಿಯಲ್ಲಿ ಇದುವರೆಗೂ 7 ಪಂದ್ಯಗಳನ್ನು ಆಡಿರುವ ಆರ್ ಸಿಬಿ 2 ರಲ್ಲಿ ಮಾತ್ರ ಜಯಗಳಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ.

  • ಅಣ್ಣನ ಬೌಲಿಂಗ್‍ನಲ್ಲಿ ಸೂಪರ್ ಕ್ಯಾಚ್ ಹಿಡಿದ ಹಾರ್ದಿಕ್ ಪಾಂಡ್ಯ: ವಿಡಿಯೋ ನೋಡಿ

    ಅಣ್ಣನ ಬೌಲಿಂಗ್‍ನಲ್ಲಿ ಸೂಪರ್ ಕ್ಯಾಚ್ ಹಿಡಿದ ಹಾರ್ದಿಕ್ ಪಾಂಡ್ಯ: ವಿಡಿಯೋ ನೋಡಿ

    ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್, ಕೃನಾಲ್ ಎಸೆತದಲ್ಲಿ ಸಿಡಿಸಿದ ಚೆಂಡನ್ನು ಡೈವ್ ಮಾಡಿ ಹಿಡಿಯುವ ಮೂಲಕ ಹಾರ್ದಿಕ್ ಪಾಂಡ್ಯ ಸೂಪರ್ ಕ್ಯಾಚ್ ಹಿಡೆದಿದ್ದಾರೆ. ಈ ಮೂಲಕ ಪಾಂಡ್ಯ ಸಹೋದರರು ಮೋಡಿ ಮಾಡಿದ್ದಾರೆ.

    ಮುಂಬೈ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಡೆಲ್ಲಿ ತಂಡದ ಪರ ಬಿರುಸಿನ ಬ್ಯಾಟಿಂಗ್ ನಡೆಸಿದ್ದ ಮ್ಯಾಕ್ಸ್ ವೆಲ್ ಕೇವಲ 6 ಎಸೆತಗಳಲ್ಲಿ 13 ರನ್ ಸಿಡಿಸಿದ್ದರು. ಈ ವೇಳೆ ಬೌಲಿಂಗ್ ಮಾಡುತ್ತಿದ್ದ ಕೃನಾಲ್ ಪಾಂಡ್ಯ ಮ್ಯಾಕ್ಸ್ ವೆಲ್ ರನ್ನು ಔಟ್ ಮಾಡಿದರು. ಕೃನಾಲ್ ೆಸೆತದಲ್ಲಿ  13 ಓವರ್ 2ನೇ ಬಾರಿ ಹೊಡೆತಕ್ಕೆ ಮುಂದಾದ ಮಾಕ್ಸ್ ವೆಲ್ ಬೌಂಡರಿಯತ್ತ ಬಾಲ್ ಸಿಡಿಸಿದರು. ಈ ವೇಳೆ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ರನ್ನಿಂಗ್ ಡೈವ್ ಹೊಡೆದು ಕ್ಯಾಚ್ ಹಿಡಿದರು.

    ಇದಕ್ಕೂ ಮುನ್ನ ಕೇವಲ 25 ರನ್ ಎಸೆತಗಳಿಂದ 47 ಸಿಡಿಸಿದ್ದ ರಿಷಭ್ ಪಂತ್ ರ ವಿಕೆಟನ್ನು ಕೃನಾಲ್ ಪಾಂಡ್ಯ ಪಡೆದಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದ್ದು, ಪಾಂಡ್ಯ ಸಹೋದರರಿಗೆ ಅಭಿಮಾನಿಗಳು ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

    ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಮುಂಬೈ ಉತ್ತಮ ಪ್ರದರ್ಶನ ನೀಡಿದ ಬಳಿಕವೂ ಸೋಲುವ ಮೂಲಕ ಟೂರ್ನಿಯಲ್ಲಿ ಸತತ 3 ಪಂದ್ಯಗಳಲ್ಲಿ ಸೋತಿದೆ. ಮತ್ತೊಂದೆಡೆ ಮುಂಬೈ ವಿರುದ್ಧದ ಗೆಲುವಿನ ಸವಿ ಪಡೆದ ಡೆಲ್ಲಿ  7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಜಯದ ಖಾತೆ ತೆರೆದಿದೆ.

  • ಡೈವ್ ಮಾಡಿ ಸೂಪರ್ ಕ್ಯಾಚ್ – ಆಫ್ರಿಕಾದ ಡೀನ್ ಎಲ್ಗನ್ ವಿಡಿಯೋ ವೈರಲ್

    ಡೈವ್ ಮಾಡಿ ಸೂಪರ್ ಕ್ಯಾಚ್ – ಆಫ್ರಿಕಾದ ಡೀನ್ ಎಲ್ಗನ್ ವಿಡಿಯೋ ವೈರಲ್

    ಜೋಹನ್ಸ್ ಬರ್ಗ್: ಕ್ರಿಕೆಟ್ ನಲ್ಲಿ ಹಲವರು ಕ್ಯಾಚ್‍ಗಳನ್ನು ನೀವು ನೋಡಿರುತ್ತೀರಿ. ಕೆಲವು ಸಾಮಾನ್ಯ ಕ್ಯಾಚ್ ಗಳಾದರೆ ಕೆಲವು ಮರೆಯಲಾಗದಂತಹವು. ಇಂತಹದ್ದೇ ಸರ್ವಶ್ರೇಷ್ಠ ಎನ್ನಬಹುದಾದ ಕ್ಯಾಚ್ ಆಸೀಸ್ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ದಾಖಲಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜೋಹನ್ಸ್ ಬರ್ಗ್ ನಡೆಯುತ್ತಿರುವ ನಾಲ್ಕು ಮತ್ತು ಕೊನೆಯ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ – ದಕ್ಷಿಣ ಆಫ್ರಿಕಾದ ನಡುವಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ ಪಡೆದ ಕ್ಯಾಚ್ ಇದೀಗ ಕ್ರಿಕೆಟ್ ಪ್ರೇಮಿಗಳನ್ನು ನಿಬ್ಬೆರಗಾಗುವಂತೆ ಮಾಡಿದೆ.

    ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 488 ರನ್ ಗಳಿದ ವೇಳೆ ಅಲೌಟ್ ಆಗಿತ್ತು, ಬಳಿಕ ಆಸ್ಟ್ರೇಲಿಯಾ 288 ರನ್ ಗಳಿಗೆ 9 ವಿಕೆಟ್ ಕಳೆದು ಕೊಂಡಿತ್ತು. ಈ ವೇಳೆ ಅಸೀಸ್ ನಾಯಕ ಟೀಮ್ ಪೈನೆ (62), ರಬಡ ಬೌಲಿಂಗ್ ವೇಳೆ ಸಿಡಿಸಿದ ಚೆಂಡನ್ನು ಎಲ್ಗರ್ ಚಿರತೆಯಂತೆ ಜಂಪ್ ಮಾಡಿ ಕ್ಯಾಚ್ ಪಡೆದರು.

    ಇದೇ ವೇಳೆ ವಿಕ್ಷಕ ವಿವರಣೆ ನೀಡುತ್ತಿದ್ದ ಆಫ್ರಿಕಾ ತಂಡದ ಮಾಜಿ ಸ್ಮಿತ್ ಸಹ ಅಚ್ಚರಿಗೊಂಡರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

    https://www.youtube.com/watch?v=iM_dQb-q_9U&utm_source=inshorts&utm_medium=referral&utm_campaign=fullarticle

  • ಮೊದಲ ಟಿ-20ಯಲ್ಲಿ ಧೋನಿಯಿಂದ ವಿಶ್ವದಾಖಲೆ

    ಮೊದಲ ಟಿ-20ಯಲ್ಲಿ ಧೋನಿಯಿಂದ ವಿಶ್ವದಾಖಲೆ

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಕ್ಯಾಚ್ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಒಟ್ಟು 134 ಕ್ಯಾಚ್ ಪಡೆಯುವ ಮೂಲಕ ಟಿ20ಯಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. 275 ಪಂದ್ಯದಲ್ಲಿ ಧೋನಿ ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಹೆಂಡ್ರಿಕ್ಸ್ ಕ್ಯಾಚ್ ಪಡೆಯುವ ಮೂಲಕ ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.

    ಸಂಗಕ್ಕಾರ ಅವರು 254 ಪಂದ್ಯಗಳಿಂದ 133 ಕ್ಯಾಚ್ ಪಡೆದಿದ್ದರೆ, ದಿನೇಶ್ ಕಾರ್ತಿಕ್ 227 ಪಂದ್ಯಗಳಿಂದ 123 ಕ್ಯಾಚ್ ಪಡೆದಿದ್ದಾರೆ. ಪಾಕಿಸ್ತಾನದ  ಕಮ್ರಾನ್  ಅಕ್ಮಲ್ 211 ಪಂದ್ಯಗಳಿಂದ 115 ಕ್ಯಾಚ್ ಪಡೆದಿದ್ದರೆ, ವೆಸ್ಟ್ ಇಂಡೀಸ್ ನ ದಿನೇಶ್ ರಾಮ್‍ದಿನ್ 168 ಪಂದ್ಯಗಳಿಂದ 108 ಕ್ಯಾಚ್ ಪಡೆದಿದ್ದಾರೆ.

    ಎಲ್ಲ ಮಾದರಿಯ ಕ್ರಿಕೆಟ್ ನ ಒಟ್ಟು 495 ಪಂದ್ಯಗಳಲ್ಲಿ 775 ಬಲಿಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಜನರನ್ನು ಔಟ್ ಮಾಡಿದ ಮೂರನೇ ವಿಕೆಟ್ ಕೀಪರ್ ಧೋನಿ ಆಗಿದ್ದಾರೆ. ಇದನ್ನೂ ಓದಿ: ಕೊಹ್ಲಿ 35ನೇ ಶತಕದೊಂದಿಗೆ ಒಂದೇ ಪಂದ್ಯದಲ್ಲಿ ಮೂರು ವಿಶ್ವ ದಾಖಲೆ!

  • ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಕ್ಯಾಚ್ – ವಿಡಿಯೋ ನೋಡಿ

    ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಕ್ಯಾಚ್ – ವಿಡಿಯೋ ನೋಡಿ

    ಮೆಲ್ಬರ್ನ್: ಕ್ರಿಕೆಟ್‍ನಲ್ಲಿ ಎಂತೆಂಥಾ ಕ್ಯಾಚ್‍ಗಳನ್ನು ನೀವು ನೋಡಿರುತ್ತೀರಿ. ಆದ್ರೆ ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಎನ್ನಬಹುದಾದ ಕ್ಯಾಚ್ ಒಂದು ಬಿಗ್ ಬ್ಯಾಷ್‍ನಲ್ಲಿ ದಾಖಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಐಪಿಎಲ್ ಮಾದರಿಯಲ್ಲೇ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ಟೂರ್ನಿ ಬಿಗ್‍ಬ್ಯಾಷ್‍ನ 35ನೇ ಪಂದ್ಯದ ಒಂದು ಕ್ಯಾಚ್ ಇದೀಗ ಕ್ರಿಕೆಟ್ ಪ್ರೇಮಿಗಳನ್ನು ನಿಬ್ಬೆರಗಾಗುವಂತೆ ಮಾಡಿದೆ. ಅತೀಥೇಯ ಮೆಲ್ಬರ್ನ್ ರೆನಗೇಡ್ಸ್ ಹಾಗೂ ಅಡಿಲೇಡ್ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸ್ಟ್ರೈಕರ್ಸ್, ರೆನಗೇಡ್ಸ್ ಗೆಲುವಿಗೆ 174 ರನ್‍ಗಳ ಗುರಿ ನೀಡಿತ್ತು.

    ಚೇಸಿಂಗ್ ವೇಳೆ 15 ಓವರ್  ಗಳಲ್ಲಿ ರೆನಗೇಡ್ಸ್ 100 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಸ್ಟ್ರೈಕರ್ಸ್ ಪರ 15ನೇ ಓವರ್ ಎಸೆಯಲು ಬಂದ ರಶೀದ್ ಖಾನ್ ಅವರ ಮೊದಲನೇ ಎಸೆತವನ್ನು ಕ್ರೀಸ್‍ನಲ್ಲಿದ್ದ ಡ್ವೈನ್ ಬ್ರಾವೋ ಸಿಕ್ಸರ್ ಗೆ  ಅಟ್ಟಲು ಬಲವಾಗಿಯೇ ಬಾರಿಸಿದ್ದರು.

    ಇನ್ನೇನು ಬಾಲ್ ಬೌಂಡರಿ ಗೆರೆ ದಾಟಿತು ಎನ್ನುವಷ್ಟರಲ್ಲಿಯೇ ಅಲ್ಲೊಂದು ಮಹಾ ಮ್ಯಾಜಿಕ್ ನಡೆಯಿತು. ಬೌಂಡರಿ ಲೈನ್ ಬಳಿ ಕ್ಷೇತ್ರರಕ್ಷಣೆಯಲ್ಲಿದ್ದ ಬೆನ್ ಲಾಫ್ಲಿನ್ ದೂರದಿಂದ ಓಡಿ ಬಂದು ಚಿರತೆಯಂತೆ ಜಂಪ್ ಮಾಡಿ ಸಿಕ್ಸರ್ ತಡೆದು ಚೆಂಡನ್ನು ಮತ್ತೆ ಮೈದಾನಕ್ಕೆ ವಾಪಸ್ ಎಸೆದರು.

    ಇದೇ ವೇಳೆ ಮೈದಾನದಲ್ಲಿದ್ದ ಮತ್ತೋರ್ವ ಫೀಲ್ಡರ್ ಜಾಕ್ ವೆರರಾಲ್ಡ್ ಮಿಂಚಿನ ವೇಗದಲ್ಲಿ ಬಹುದೂರ ಹಾರಿ ಅತ್ಯದ್ಭುತ ರೀತಿಯಲ್ಲಿ ಕ್ಯಾಚ್ ಪಡೆದು ಎಲ್ಲರನ್ನೂ ನಿಬ್ಬೆರಗಾಗಿಸಿದ್ರು. ಅಂತಿಮವಾಗಿ ಅಡಿಲೇಡ್ ಸ್ಟ್ರೈಕರ್ಸ್ 26 ರನ್‍ಗಳಿಂದ ಪಂದ್ಯವನ್ನು ಗೆದ್ದು ಬೀಗಿತು.

    https://twitter.com/haceeb/status/955465784121286656

  • ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್- ಸೊನ್ನೆ ಸುತ್ತಿದ ವೇಡ್

    ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್- ಸೊನ್ನೆ ಸುತ್ತಿದ ವೇಡ್

    ಬೆಂಗಳೂರು: ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಳ್ಳುವ ಮೂಲಕ ಭಾರತ 5 ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಸ್ಪಿನ್ನರ್ ಆರ್ ಅಶ್ವಿನ್ 6 ವಿಕೆಟ್ ಪಡೆದರೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅತ್ಯುತ್ತಮವಾದ ಕ್ಯಾಚನ್ನು ಹಿಡಿಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದಾರೆ.

    28 ನೇ ಓವರ್ ಆರಂಭದಲ್ಲಿ ಆಸ್ಟ್ರೇಲಿಯಾ 101 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಮ್ಯಾಥ್ಯೂ ವೇಡ್ ಕ್ರೀಸ್‍ನಲ್ಲಿದ್ದರು. ಅಶ್ವಿನ್ ಎಸೆದ 5 ಎಸೆತ ಬ್ಯಾಟ್‍ಗೆ ಬಡಿದು ಪ್ಯಾಡ್‍ಗೆ ತಾಗಿ ಮೇಲಕ್ಕೆ ಹಾರಿತು. ಬಾಲ್ ಮೇಲಕ್ಕೆ ಚಿಮ್ಮಿದ ಕೂಡಲೇ ವೃದ್ಧಿಮಾನ್ ಸಹಾ ಡೈವ್ ಹೊಡೆದು ಯಾರೂ ನಿರೀಕ್ಷಿಸದ ಕ್ಯಾಚನ್ನು ಹಿಡಿದೇ ಬಿಟ್ಟಿದ್ದರು.

    ಈ ಸೂಪರ್ ಕ್ಯಾಚ್ ಪರಿಣಾಮ ಮ್ಯಾಥ್ಯೂ ವೇಡ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಕಡೆಗೆ ನಿರಾಸೆಯಿಂದ ಹೆಜ್ಜೆ ಹಾಕಿದರೆ, ಕೊಹ್ಲಿ ಪಡೆ ಸಹಾ ಮತ್ತು ಅಶ್ವಿನ್ ರನ್ನು ಅಭಿನಂದಿಸತೊಡಗಿತು.

    2010ರಲ್ಲಿ ನಾಗ್ಪುರದಲ್ಲಿ ದಕ್ಷಿಣ ಆಫ್ರಿಕಾದದ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ ಸಹಾ ಇದೂವರೆಗೆ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 43 ಕ್ಯಾಚ್, 8 ಮಂದಿಯನ್ನು ಸ್ಟಂಪ್ ಔಟ್ ಮಾಡಿದ್ದಾರೆ. ಬೆಂಗಳೂರು ಟೆಸ್ಟ್  ಎರಡು ಇನ್ನಿಂಗ್ಸ್ ಗಳಲ್ಲಿ ವೃದ್ಧಿಮಾನ್ ಸಹಾ 1 ಸ್ಟಂಪ್ ಮತ್ತು 4 ಕ್ಯಾಚ್ ಹಿಡಿದಿದ್ದಾರೆ.

    ಇದನ್ನೂ ಓದಿ: 11 ರನ್‍ಗಳಿಗೆ 6 ವಿಕೆಟ್ ಪತನ: ಭಾರತಕ್ಕೆ 75 ರನ್ ಗಳ ಜಯ