Tag: ಕ್ಯಾಚ್

  • ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ಸರಿಗಟ್ಟಿದ ರಿಷಬ್ ಪಂತ್

    ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ಸರಿಗಟ್ಟಿದ ರಿಷಬ್ ಪಂತ್

    ಅಡಿಲೇಡ್: ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆಯುವ ಮೂಲಕ ವಿಶ್ವದಾಖಲೆ ಸರಿಗಟ್ಟಿದ್ದಾರೆ.

    21 ವರ್ಷದ ರಿಷಬ್ ಪಂತ್ ಅಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 11 ಕ್ಯಾಚ್ ಪಡೆದಿದ್ದಾರೆ. ಈ ಮೂಲಕ 2013 ರಲ್ಲಿ ದಕ್ಷಿಣ ಆಫ್ರಿಕಾ ಕೀಪರ್ ಎಬಿ ಡಿ ವಿಲಿಯರ್ಸ್ ಪಾಕಿಸ್ತಾನದ ವಿರುದ್ಧ ಹಾಗೂ 2013ರಲ್ಲಿ ಇಂಗ್ಲೆಂಡ್ ಆಟಗಾರ ಜಾಕ್ ರಸೆಲ್ ಆಫ್ರಿಕಾ ವಿರುದ್ಧ 11 ಕ್ಯಾಚ್ ಪಡೆದ ವಿಶ್ವದಾಖಲೆಯನ್ನು ಪಂತ್ ಸರಿಗಟ್ಟಿದ್ದಾರೆ.

    ಭಾರತದ ಪರ ಪಂದ್ಯವೊಂದರಲ್ಲಿ ವೃದ್ಧಿಮಾನ್ ಸಹಾ 10 ಕ್ಯಾಚ್ ಪಡೆದಿದ್ದರೆ, ಧೋನಿ 9 ಕ್ಯಾಚ್ ಪಡೆದಿದ್ದಾರೆ. ವೃದ್ಧಿಮಾನ್ ಸಹಾ 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ, ಧೋನಿ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್ ಟೆಸ್ಟ್ ನಲ್ಲಿ 9 ಕ್ಯಾಚ್ ಪಡೆದಿದ್ದರು.

    ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನಲ್ಲಿ 6 ಕ್ಯಾಚ್ ಪಡೆಯುವ ಮೂಲಕ ರಿಷಬ್ ಪಂತ್ ಭಾರತದ ಪರ ಧೋನಿ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದರು. ಈ ಹಿಂದೆ 2009 ರಲ್ಲಿ ಧೋನಿ ಇನ್ನಿಂಗ್ಸ್ ಒಂದರಲ್ಲಿ 6 ಕ್ಯಾಚ್ ಪಡೆದಿದ್ದರು. ಪಂತ್ ವೃತ್ತಿ ಜೀವನದ 6ನೇ ಟೆಸ್ಟ್ ಪಂದ್ಯವನ್ನ ಆಡುತ್ತಿದ್ದು, ಇದುವರೆಗೂ 43.25 ಸರಾಸರಿಯಲ್ಲಿ 346 ರನ್ ಸಿಡಿಸಿದ್ದಾರೆ.

    ಕ್ಯಾಚ್ ಮೂಲಕ 35 ವಿಕೆಟ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿಶೇಷ ದಾಖಲೆ ನಿರ್ಮಾಣವಾಗಿದ್ದು, ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಪಂದ್ಯವೊಂದರಲ್ಲಿ 35 ಆಟಗಾರರು ಕ್ಯಾಚ್ ಮೂಲಕವೇ ಔಟ್ ಆಗಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ನಲ್ಲಿ ಎಲ್ಲ 10 ಆಟಗಾರರು ಕ್ಯಾಚ್ ಮೂಲಕವೇ ಔಟ್ ಆಗಿದ್ದಾರೆ. ಇದನ್ನು ಓದಿ : ಆಸ್ಟ್ರೇಲಿಯಾ ನೆಲದಲ್ಲಿ ವಿಶಿಷ್ಟ ಸಾಧನೆ ನಿರ್ಮಿಸಿದ ವಿರಾಟ್ ಕೊಹ್ಲಿ! 

    ಈ ಹಿಂದೆ 2018ರ ಕೇಪ್ ಟೌನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ 34 ವಿಕೆಟ್ ಕ್ಯಾಚ್ ಮೂಲಕ ಪಡೆಯಲಾಗಿತ್ತು. 1992ರ ಪಾರ್ಥ್ ನಲ್ಲಿ ನಡೆದ ಆಸ್ಟ್ರೇಲಿಯಾ, ಟೀಂ ಇಂಡಿಯಾ ವಿರುದ್ಧ ಪಂದ್ಯದಲ್ಲಿ 33 ಮಂದಿ ಕ್ಯಾಚ್ ನೀಡಿ ಔಟಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧೋನಿ ದಾಖಲೆ  ಸರಿಗಟ್ಟಿದ ಯಂಗ್ ವಿಕೆಟ್ ಕೀಪರ್ ರಿಷಬ್ ಪಂತ್

    ಧೋನಿ ದಾಖಲೆ ಸರಿಗಟ್ಟಿದ ಯಂಗ್ ವಿಕೆಟ್ ಕೀಪರ್ ರಿಷಬ್ ಪಂತ್

    ಅಡಿಲೇಡ್: ಟೀಂ ಇಂಡಿಯಾ ವಿಕೆಟ್ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಗಾಯಗೊಂಡ ಕಾರಣ ಆಸೀಸ್ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದ ಯಂಗ್ ವಿಕೆಟ್ ಕೀಪರ್ ರಿಷಬ್ ಪಂತ್ ತಮಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಕೆ ಮಾಡಿಕೊಂಡಿದ್ದಾರೆ.

    ಆಸ್ಟೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಬಿರುಸಿನ ಆಟವಾಡಿ 25 ರನ್ ಗಳಿಸಿದ್ದ ರಿಷಬ್ ವಿಕೆಟ್ ಹಿಂದೆ ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 6 ಕ್ಯಾಚ್ ಪಡೆದಿದ್ದಾರೆ. ಈ ಮೂಲಕ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದಿದ್ದ ಎಂಎಸ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ. 21 ವರ್ಷದ ರಿಷಬ್ 3ನೇ ದಿನದಾಟದ ವೇಳೆ ಜೋಶ್ ಹ್ಯಾಜಲ್‍ವುಡ್ ಕ್ಯಾಚ್ ಪಡೆದು 6 ಕ್ಯಾಚ್ ಪೂರ್ಣಗೊಳಿಸಿದರು. ಈ ಹಿಂದೆ 2009 ರಲ್ಲಿ ಧೋನಿ ಇನ್ನಿಂಗ್ಸ್ ಒಂದರಲ್ಲಿ 6 ವಿಕೆಟ್ ಪಡೆದು ಭಾರತದ ಪರ ದಾಖಲೆ ನಿರ್ಮಿಸಿದ್ದರು. ಇದನ್ನೂ ಓದಿ: ಆಸೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ

    ಪಂತ್ ವೃತ್ತಿ ಜೀವನದ 6ನೇ ಟೆಸ್ಟ್ ಪಂದ್ಯವನ್ನ ಆಡುತ್ತಿದ್ದು, ಇದುವರೆಗೂ 43.25 ಸರಾಸರಿಯಲ್ಲಿ 346 ರನ್ ಸಿಡಿಸಿದ್ದಾರೆ. ಉಳಿದಂತೆ ಸಹಾ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ತಂಡದಿಂದ ಹೊರಬಿದ್ದರು. 34 ವರ್ಷದ ಸಹಾ 32 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 1,164 ರನ್ ಗಳಿಸಿದ್ದಾರೆ. ಇನ್ನು 37 ವರ್ಷದ ಧೋನಿ 2014 ರಲ್ಲಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಲ್ಲಿಯಲ್ಲಿ ಉಸ್ಮಾನ್ ಖವಾಜ ಅತ್ಯುತ್ತಮ ಕ್ಯಾಚ್ – ಕೊಹ್ಲಿ ಔಟಾಗುತ್ತಿರೋ ವಿಡಿಯೋ ನೋಡಿ

    ಗಲ್ಲಿಯಲ್ಲಿ ಉಸ್ಮಾನ್ ಖವಾಜ ಅತ್ಯುತ್ತಮ ಕ್ಯಾಚ್ – ಕೊಹ್ಲಿ ಔಟಾಗುತ್ತಿರೋ ವಿಡಿಯೋ ನೋಡಿ

    ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಆರಂಭಿಕ ಹಿನ್ನಡೆಯನ್ನು ಅನುಭವಿಸಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಜೋಶ್ ಹೇಜಲ್‍ವುಡ್ 2 ವಿಕೆಟ್ ಕೀಳುವ ಮೂಲಕ ಆರಂಭದಲ್ಲೇ ಆಘಾತ ನೀಡಿದರು. ಉತ್ತಮ ಬ್ಯಾಟಿಂಗ್ ಲಯದಲ್ಲಿರುವ ವಿರಾಟ್ ಕೊಹ್ಲಿ 3 ರನ್ ಗಳಿಸಿ ಔಟಾದರು. ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಉಸ್ಮಾನ್ ಖವಾಜ ಗಲ್ಲಿಯಲ್ಲಿ ಹಾರಿ ಹಿಡಿದ ಅತ್ಯುತ್ತಮ ಕ್ಯಾಚ್ ಗೆ ಕೊಹ್ಲಿ ಪೆವಿಲಿಯನ್ ಸೇರಿದರು.

    ತಂಡದ ಮೊತ್ತ 3 ಆಗಿದ್ದಾಗ 2 ರನ್ ಗಳಿಸಿದ್ದ ರಾಹುಲ್ ಔಟಾದರೆ 11 ರನ್ ಗಳಿಸಿ ಮುರಳಿ ವಿಜಯ್ ಔಟಾದರು. ಅಜಿಂಕ್ಯಾ ರೆಹಾನೆ 13 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. ಬಿರುಸಿನ ಆಟವಾಡಿದ ರೋಹಿತ್ ಶರ್ಮಾ 37 ರನ್(61 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿ ಲಿಯಾನ್ ಗೆ ವಿಕೆಟ್ ಒಪ್ಪಿಸಿದರು.

    ಇತ್ತೀಚಿನ ವರದಿ ಬಂದಾಗ 39 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಭಾರತ 88 ರನ್ ಗಳಿಸಿದೆ. ಚೇತೇಶ್ವರ ಪೂಜಾ 19 ರನ್ ಗಳಿಸಿದ್ದರೆ, ರಿಷಬ್ ಪಂತ್ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಆಸೀಸ್ ಬೌಲರ್‌ಗಳು ತಡೆಯದಿದ್ದರೂ ಕೊಹ್ಲಿ ಕ್ಯಾಚ್ ಹಿಡಿದು ಸಂಭ್ರಮಿಸಿದ ಭದ್ರತಾ ಸಿಬ್ಬಂದಿ!

    ಆಸೀಸ್ ಬೌಲರ್‌ಗಳು ತಡೆಯದಿದ್ದರೂ ಕೊಹ್ಲಿ ಕ್ಯಾಚ್ ಹಿಡಿದು ಸಂಭ್ರಮಿಸಿದ ಭದ್ರತಾ ಸಿಬ್ಬಂದಿ!

    ಸಿಡ್ನಿ: ಮೂರನೇ ಟಿ 20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಟವನ್ನು ಆಸ್ಟ್ರೇಲಿಯಾ ಬೌಲರ್ ಗಳು ನಿಲ್ಲಿಸದೇ ಇದ್ದರೂ ಗ್ರೌಂಡ್ ನಲ್ಲಿದ್ದ ಭದ್ರತಾ ಸಿಬ್ಬಂದಿ ಕ್ಯಾಚ್ ಹಿಡಿದು ಸಂಭ್ರಮಿಸಿದ್ದಾರೆ.

    ಮ್ಯಾಕ್ಸ್ ವೆಲ್ ಎಸೆದ 17ನೇ ಓವರಿನ 3ನೇ ಎಸೆತವನ್ನು ಕೊಹ್ಲಿ ಸಿಕ್ಸರ್ ಗೆ ಅಟ್ಟಿದ್ದರು. ಈ ವೇಳೆ ಬೌಂಡರಿ ಲೈನಿನಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಸಿಕ್ಸ್ ಕ್ಯಾಚ್ ಪಡೆದು ಸಂಭ್ರಮಿಸಿದ್ದರು. ಭದ್ರತಾ ಸಿಬ್ಬಂದಿ ಸಂಭ್ರಮಿಸಿ ಪ್ರೇಕ್ಷಕರ ಗ್ಯಾಲರಿ ಬಳಿ ಹೋದಾಗ ಅಲ್ಲಿದ್ದ ಪ್ರೇಕ್ಷಕರು ತಲೆಯನ್ನು ಸವರಿ ಮೆಚ್ಚುಗೆ ಸೂಚಿಸಿದರು.

    165 ರನ್ ಗಳ ಗುರಿ ಪಡೆದ ಭಾರತ 19.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 6 ವಿಕೆಟ್‍ಗಳ ಜಯಗಳಿಸಿತು. ವಿರಾಟ್ ಕೊಹ್ಲಿ ಔಟಾಗದೇ 61 ರನ್(41 ಎಸೆತ, 4 ಬೌಂಡರಿ, 2 ಸಿಕ್ಸರ್), ದಿನೇಶ್ ಕಾರ್ತಿಕ್ ಔಟಾಗದೇ 22 ರನ್(18 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಭಾರತಕ್ಕೆ ವಿಜಯವನ್ನು ತಂದಿಟ್ಟರು. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಗೆದ್ದು ಸರಣಿ ಸಮ ಮಾಡಿಕೊಂಡ ಟೀಂ ಇಂಡಿಯಾ!

    ಶಿಖರ್ ಧವನ್ 41 ರನ್(22 ಎಸೆತ, 6 ಬೌಂಡರಿ, 2 ಸಿಕ್ಸರ್), ರೋಹಿತ್ ಶರ್ಮಾ 23 ರನ್(16 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದರು. 4 ಓವರ್ ಎಸೆದು 36 ರನ್ ನೀಡಿ 4 ವಿಕೆಟ್ ಕಿತ್ತ ಕೃನಾಲ್ ಪಾಂಡ್ಯ ಅರ್ಹವಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೋಲಾರ್ಡ್ ಆನ್‍ಫೀಲ್ಡ್ ವರ್ತನೆಗೆ ಕೋಪಗೊಂಡ ಬೂಮ್ರಾ – ವಿಡಿಯೋ

    ಪೋಲಾರ್ಡ್ ಆನ್‍ಫೀಲ್ಡ್ ವರ್ತನೆಗೆ ಕೋಪಗೊಂಡ ಬೂಮ್ರಾ – ವಿಡಿಯೋ

    ಲಕ್ನೋ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪೋಲಾರ್ಡ್ ಉದ್ದೇಶ ಪೂರ್ವಕವಾಗಿಯೇ ಬೂಮ್ರಾಗೆ ಅಡ್ಡಪಡಿಸಿದ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

    ಪಂದ್ಯದ 11ನೇ ಓವರ್ ಬೌಲ್ ಮಾಡಿದ್ದ ಜಸ್‍ಪ್ರೀತ್ ಬೂಮ್ರಾ ಬೌಲಿಂಗ್ ನಲ್ಲಿ ಪೋಲಾರ್ಡ್ ಕ್ಯಾಚ್ ನೀಡಿ ಔಟಾದರು. ಆದರೆ  ಬೂಮ್ರಾ ಕ್ಯಾಚ್ ಪಡೆಯುವ ವೇಳೆ ಪೋಲಾರ್ಡ್ ಉದ್ದೇಶ ಪೂರ್ವಕವಾಗಿ ಬೂಮ್ರಾಗೆ ಅಡ್ಡ ಬಂದಿದ್ದರು. ಓವರಿನ ನಾಲ್ಕನೇ ಎಸೆತ ಎದುರಿಸಿದ ಪೋಲಾರ್ಡ್ ಬ್ಯಾಟ್‍ಗೆ ತಾಗಿದ ಚೆಂಡು ನೇರ ಮೇಲಕ್ಕೆ ಚಿಮ್ಮಿತ್ತು.

    https://twitter.com/NaaginDance/status/1059844978665381888

    ಚೆಂಡು ಕೆಳಗಡೆ ಬೀಳುತ್ತಿರುವುದನ್ನು ನೋಡಿ ತಾನು ಔಟಾಗುವುದು ಖಾತ್ರಿ ಎಂದು ತಿಳಿದ ಪೋಲಾರ್ಡ್, ಕ್ಯಾಚ್ ಪಡೆಯಲು ಆಗಮಿಸುತ್ತಿದ್ದ ಬೂಮ್ರಾಗೆ ಎದುರು ಬಂದು ಅಡ್ಡಿಪಡಿಸಿದ್ದರು. ಆದರೆ ಇದರಿಂದ ವಿಚಲಿತರಾಗದ ಬೂಮ್ರಾ ಕ್ಯಾಚ್ ಪಡೆದು ಬಳಿಕ ಪೋಲಾರ್ಡ್ ವರ್ತನೆಗೆ ಗರಂ ಆದರು. ಈ ವೇಳೆ ಮಧ್ಯ ಪ್ರವೇಶಿಸಿದ ನಾಯಕ ರೋಹಿತ್ ಶಮಾ ಆನ್‍ಫೀಲ್ಡ್ ಅಂಪೈರ್ ಬಳಿಯೂ ತಮ್ಮ ಈ ಕುರಿತು ಚರ್ಚೆ ನಡೆಸಿದ್ದರು.

    ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಡೆಸಿದ ರೋಹಿತ್ ಶರ್ಮಾ 61 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಪಂದ್ಯದಲ್ಲಿ 11 ರನ್ ಗಳಿಸಿದ ರೋಹಿತ್ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ ಹೆಚ್ಚು ರನ್ ಗಳಿಸಿದ ಆಟಗಾರ ಹಾಗೂ ವಿಶ್ವ ಟಿ20 ಕ್ರಿಕೆಟ್‍ನಲ್ಲಿ ಹೆಚ್ಚು ಶತಕ ಸಿಡಿಸಿದ ಸಾಧನೆ ಮಾಡಿದರು. 2ನೇ ಪಂದ್ಯವನ್ನು ಗೆಲ್ಲುವ ಮೂಲಕ 2-0 ಅಂತರದಲ್ಲಿ ಮುನ್ನಡೆ ಪಡೆದು ಇಂಡಿಯಾ ಸರಣಿಯನ್ನು ಗೆದ್ದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಧೋನಿ ಸೂಪರ್ ಕ್ಯಾಚ್‍ಗೆ ನೆಟ್ಟಿಗರು ಫಿದಾ – ವೈರಲ್ ವಿಡಿಯೋ

    ಧೋನಿ ಸೂಪರ್ ಕ್ಯಾಚ್‍ಗೆ ನೆಟ್ಟಿಗರು ಫಿದಾ – ವೈರಲ್ ವಿಡಿಯೋ

    ಪುಣೆ: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ಆಟಗಾರ ಹೇಮರಾಜ್ ನೀಡಿದ ಕ್ಯಾಚ್ ಪಡೆದ ಟೀಂ ಇಂಡಿಯಾ ವಿಕೆಟ್ ಕೀಪರ್ ಎಂಎಸ್ ಧೋನಿ ಅವರಿಗೆ ನೆಟ್ಟಿಗರು ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಂದ್ಯದ 6ನೇ ಓವರ್ ಬೂಮ್ರಾ ಬೌಲಿಂಗ್ ವೇಳೆ ವಿಂಡಿಸ್ ಆಟಗಾರ ಹೇಮರಾಜ್ ಭಾರೀ ಹೊಡೆತಕ್ಕೆ ಕೈ ಹಾಕಿದ್ದರು. ಆದರೆ ಬ್ಯಾಟಿಗೆ ತಾಗಿದ ಚೆಂಡು ನೇರ ವಿಕೆಟ್ ಕೀಪರ್ ಎಡಭಾಗಕ್ಕೆ ಚಿಮ್ಮಿತು. ಈ ವೇಳೆ ಧೋನಿ ಡೈವ್ ಮಾಡಿ ಕ್ಯಾಚ್ ಪಡೆದರು. ಸದ್ಯ ಧೋನಿ ಕ್ಯಾಚ್ ಪಡೆಯುತ್ತಿರುವ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿ ಡೈವ್ ಮಾಡಿ ಎಂಎಸ್‍ಡಿ ಪಡೆದ ಕ್ಯಾಚ್ ಎಷ್ಟು ಉತ್ತಮವಾಗಿದೆ ಎಂದು ಪ್ರಶ್ನೆ ಮಾಡಿದೆ.

    ಧೋನಿ ಕ್ಯಾಚ್ ಕಂಡ ಅಭಿಮಾನಿಗಳು ಫಿದಾ ಆಗಿದ್ದು, ವಿಡಿಯೋ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ಶುಕ್ರವಾರ ಬಿಸಿಸಿಐ ಧೋನಿ ಅವರಿಗೆ ಮುಂದಿನ ವಿಂಡೀಸ್ ಹಾಗೂ ಆಸೀಸ್ ಟೂರ್ನಿಗೆ ವಿಶ್ರಾಂತಿ ನೀಡಿ ತಂಡವನ್ನು ಪ್ರಕಟಿಸಿತ್ತು. ಆದರೆ ಆಯ್ಕೆ ಸಮಿತಿ ತೀರ್ಮಾನಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿ ಟೀಕೆ ಮಾಡಿದ್ದರು.

    ಟೂರ್ನಿಯಲ್ಲಿ ಧೋನಿ ಬದಲಾಗಿ ಯುವ ಆಟಗಾರ ರಿಷಭ್ ಪಂತ್, ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್, ಧೋನಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, 2ನೇ ವಿಕೆಟ್ ಕೀಪರ್ ಆಯ್ಕೆಗೆ ಅವಕಾಶ ನೀಡಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

    ಸೂಪರ್ ಸ್ಟಂಪಿಂಗ್:

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/IHitManOfficial/status/1056114400338305026

    https://twitter.com/kavitweetzzz/status/1056112554152316928

  • ದ್ರಾವಿಡ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

    ದ್ರಾವಿಡ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

    ಲಂಡನ್: ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅಪರೂಪದ ಸಾಧನೆ ಮಾಡಿದ್ದು, ಟೂರ್ನಿಯಲ್ಲಿ 13 ಕ್ಯಾಚ್ ಪಡೆಯುವ ಮೂಲಕ ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ್ದಾರೆ.

    ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ರಾಹುಲ್, ಸ್ಟುವರ್ಟ್ ಬ್ರಾಡ್ (98) ಕ್ಯಾಚ್ ಪಡೆಯುವ ಮೂಲಕ ಈ ಸಾಧನೆ ಮಾಡಿದರು. ಈ ಹಿಂದೆ ಟೀಂ ಇಂಡಿಯಾದ ರಾಹುಲ್ ದ್ರಾವಿಡ್ 2004-05 ರಲ್ಲಿ ನಡೆದ ಆಸೀಸ್ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೂರ್ನಿಯಲ್ಲಿ 13 ಕ್ಯಾಚ್ ಪಡೆದಿದ್ದರು. ಈ ಪಟ್ಟಿಯಲ್ಲಿ ಆಸೀಸ್ ಆಟಗಾರ ಜಾಕ್ ಗ್ರೆಗೊರಿ 1920-21ರಲ್ಲಿ ನಡೆದ ಆಸಿಸ್ ಟೆಸ್ಟ್ ಟೂರ್ನಿಯಲ್ಲಿ 15 ಕ್ಯಾಚ್ ಪಡೆದು ದಾಖಲೆ ನಿರ್ಮಿಸಿದ್ದರು.

    ವಿಶೇಷವಾಗಿ ಇಂಗ್ಲೆಂಡ್ ನೆಲದಲ್ಲಿ ನಡೆದ ಟೂರ್ನಿಯಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ದಾಖಲೆಯನ್ನು ಕೆಎಲ್ ರಾಹುಲ್ ಪಡೆದಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಜಾನ್ ಇಕಿನ್ 1951 ರಲ್ಲಿ 12 ಕ್ಯಾಚ್ ಪಡೆದಿದ್ದರು. ಉಳಿದಂತೆ ಮೂರನೇ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ 7 ಕ್ಯಾಚ್ ಹಿಡಿದಿದ್ದ ಕೆಎಲ್ ರಾಹುಲ್ ಟೆಸ್ಟ್ ನಲ್ಲಿ ವಿಕೆಟ್ ಕೀಪರ್ ಹೊರತು ಪಡಿಸಿ ಅತೀ ಹೆಚ್ಚು ಕ್ಯಾಚ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು.

    ಅಂತಿಮ ಟೆಸ್ಟ್ ಪಂದ್ಯದ 2ನೇ ದಿನದಾಟವನ್ನು 198/7 ರನ್‍ಗಳಿಂದ ಮುಂದುವರೆಸಿದ ಇಂಗ್ಲೆಂಡ್ ಬಾಲಂಗೋಚಿಗಳು ಟೀಂ ಇಂಡಿಯಾ ಬೌಲರ್ ಗಳನ್ನು ಕೆಲ ಕಾಲ ಕಾಡಿದರು. ಈ ನಡುವೆ ಅರ್ಧ ಶತಕ ಸಿಡಿದ ಬಟ್ಲರ್ ತಂಡದ ಸ್ಕೋರ್ 300 ಗಡಿ ದಾಟಲು ನೆರವಾದರು. ಬಟ್ಲರ್ ಗೆ ಇತರೇ ಆಟಗಾರರು ಉತ್ತಮ ಬೆಂಬಲ ನೀಡಿದರು. ಈ ವೇಳೆ ಬಿರುಸಿನ ಆಟಕ್ಕೆ ಮುಂದಾದ ಬಟ್ಲರ್ 89 ರನ್ ಗಳಸಿ ವಿಕೆಟ್ ಒಪ್ಪಿಸಿದರು. ಅದಾಗಲೇ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತ (332 ರನ್) ಕಲೆಹಾಕಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾದಾರ್ಪಣೆ ಪಂದ್ಯದಲ್ಲೇ ಮತ್ತೊಂದು ಸಾಧನೆ ಮಾಡಿದ ರಿಷಭ್ ಪಂತ್

    ಪಾದಾರ್ಪಣೆ ಪಂದ್ಯದಲ್ಲೇ ಮತ್ತೊಂದು ಸಾಧನೆ ಮಾಡಿದ ರಿಷಭ್ ಪಂತ್

    ಲಂಡನ್: ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ್ದ ರಿಷಭ್ ಪಂತ್ ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ 5 ಕ್ಯಾಚ್ ಪಡೆದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ರಿಷಭ್ ಪಂತ್ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಕುಕ್, ಕೀಟನ್ ಜೆನ್ನಿಂಗ್ಸ್, ಒಲೀ ಪೋಪ್, ಕ್ರಿಸ್ ವೋಕ್ಸ್ ಮತ್ತು ಅದಿಲ್ ರಶೀದ್ ಕ್ಯಾಚ್ ಪಡೆದು ಮಿಂಚಿದರು. ಈ ಹಿಂದೆ ಟೀಂ ಇಂಡಿಯಾದ ನರೇನ್ ತಮ್ಹಾನೆ (1955), ಕಿರಣ್ ಮೋರೆ (1986), ನಮನ್ ಓಜಾ (2015) ತಂಡದ ಪರ ಈ ಸಾಧನೆ ಮಾಡಿದ್ದರು. ಉಳಿದಂತೆ ನಾನಾ ಜೋಶಿ (1951), ಚಂದ್ರಕಾಂತ್ ಪಟಾನ್ಕರ್ (1955) ಪಾದಾರ್ಪಣೆ ಪಂದ್ಯದಲ್ಲಿ 4 ಕ್ಯಾಚ್ ಪಡೆದಿದ್ದರು.

    ವಿಶೇಷವೆಂದರೆ ಪಾದಾರ್ಪಣೆ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ 5 ಕ್ಯಾಚ್ ಪಡೆದ ಮೊದಲ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಯನ್ನು ರಿಷಭ್ ಪಂತ್ ಪಡೆದಿದ್ದಾರೆ. ಇದಕ್ಕೂ ಮುನ್ನ ಪಂದ್ಯದಲ್ಲಿ ರಿಷಭ್ ಎದುರಿಸಿದ 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ರನ್ ಖಾತೆ ತೆರೆದಿದ್ದರು. ಅಲ್ಲದೇ ಸಿಕ್ಸರ್ ಮೂಲಕ ರನ್ ಖಾತೆ ತೆರೆದ ಟೀಂ ಇಂಡಿಯಾ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 51 ಎಸೆತ ಎದುರಿಸಿದ ರಿಷಭ್ ಪಂತ್ 24 ರನ್ ಗಳಿಸಿ ಔಟಾಗಿದ್ದರು.

    ಪಾಂಡ್ಯ 5 ವಿಕೆಟ್: ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಮೊದಲ ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕೇವಲ 29 ಎಸೆತಗಳನ್ನು ಎಸೆದು 5 ವಿಕೆಟ್ ಪಡೆದ ಹಾರ್ದಿಕ್, ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಟೀಂ ಇಂಡಿಯಾ 2ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. 2006 ಹಭರ್ಜನ್ ಸಿಂಗ್ ಸಿಂಗ್ ಕೇವಲ 27 ಎಸೆತಗಳನ್ನು ಹಾಕಿ 5 ವಿಕೆಟ್ ಪಡೆದಿದ್ದರು.

    ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ ಪಾಂಡ್ಯ ಹಲವು ವಿಮರ್ಶೆಗಳನ್ನು ಎದುರಿಸಿದ್ದರು. ಸದ್ಯ ಪಾಂಡ್ಯ ತಮ್ಮ ಬೌಲಿಂಗ್ ಮೂಲಕ ವಿಮರ್ಶಕರಿಗೆ ತಿರುಗೇಟು ನೀಡಿದ್ದಾರೆ. ಪಾಂಡ್ಯ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 161 ರನ್ ಗಳಿಗೆ ಅಲೌಟ್ ಆಯಿತು. ಉಳಿದಂತೆ ಟೀಂ ಇಂಡಿಯಾ ಪರ ಜಸ್‍ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ತಲಾ 2 ವಿಕೆಟ್ ಪಡೆದರು. 2ನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದ್ದು, 292 ರನ್ ಮುನ್ನಡೆ ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ದಾಖಲೆ ಬರೆದ ಧೋನಿ

    ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ದಾಖಲೆ ಬರೆದ ಧೋನಿ

    ಲಂಡನ್: ಕ್ರಿಕೆಟ್ ಕಾಶಿ ಎಂದೇ ಹೆಸರು ಪಡೆದಿರುವ ಲಾರ್ಡ್ಸ್ ಅಂಗಳದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಭಾರತ ಪರ 300 ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದ ವೇಳೆ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಜೋಸ್ ಬಟ್ಲರ್ ಕ್ಯಾಚ್ ಪಡೆಯುವ ಮೂಲ ಧೋನಿ ಸಾಧನೆ ಮಾಡಿದರು. ವಿಶ್ವ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ 4 ನೇ ಆಟಗಾರ ಎನಿಸಿಕೊಂಡರು.

    ಆಸ್ಟ್ರೇಲಿಯಾದ ಆ್ಯಡಂ ಗಿಲ್‍ಕ್ರಿಸ್ಟ್ (417), ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ (402), ಶ್ರೀಲಂಕಾದ ಕುಮಾರ ಸಂಗಕ್ಕರ (383), ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್ (262) ಕ್ಯಾಚ್ ಪಡೆದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಟಿ20 ಟೂರ್ನಿಯ ಪಂದ್ಯದ ವೇಳೆ 50 ಕ್ಯಾಚ್ ಪೂರ್ಣಗೊಳಿಸಿದ್ದರು. ಮೂಲಕ ಟಿ20 ನಾದರಿಯಲ್ಲಿ 50 ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು. ಅಲ್ಲದೇ ಟಿ20 ಮಾದರಿಯ ಇನ್ನಿಂಗ್ಸ್‍ವೊಂದರಲ್ಲಿ 5 ಕ್ಯಾಚ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಯನ್ನು ಧೋನಿ ಪಡೆದಿದ್ದಾರೆ.

    ಧೋನಿ ಇದುವರೆಗೂ ಆಡಿರುವ 320 ಏಕದಿನ ಪಂದ್ಯಗಳಲ್ಲಿ 107 ಸ್ಟಪ್ ಮಾಡಿದ್ದು, ಇದರಲ್ಲೂ ದಾಖಲೆ ಬರೆದಿದ್ದಾರೆ. ಅಲ್ಲದೇ ಏಕದಿನ ಮಾದರಿಯಲ್ಲಿ ಇದುವರೆಗೂ 407 ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿ ಭಾರತದ ಮೊದಲ, ವಿಶ್ವದ 4ನೇ ಕೀಪರ್ ಎಂಬ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್ ಗಳಿಂದ ಜಯಗಳಿಸಿತ್ತು.

  • ಎಬಿಡಿ, ಕ್ಯಾಚ್ ಆಫ್ ದಿ ಟೂರ್ನಿಮೆಂಟ್ – `ಸೂಪರ್ ಮ್ಯಾನ್’ ಎಂದ್ರು ವಿರಾಟ್

    ಎಬಿಡಿ, ಕ್ಯಾಚ್ ಆಫ್ ದಿ ಟೂರ್ನಿಮೆಂಟ್ – `ಸೂಪರ್ ಮ್ಯಾನ್’ ಎಂದ್ರು ವಿರಾಟ್

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್, ಆರ್ ಸಿಬಿ ನಡುವಿನ ಪಂದ್ಯದಲ್ಲಿ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಹಾರಿ ಕ್ಯಾಚ್ ಹಿಡಿದಿದ್ದನ್ನು ನೋಡಿ ಕೊಹ್ಲಿ ಎಬಿಡಿಯನ್ನು ಸೂಪರ್ ಮ್ಯಾನ್‍ಗೆ ಹೋಲಿಕೆ ಮಾಡಿದ್ದಾರೆ.

    ಈ ಕುರಿತು ಪಂದ್ಯದ ಮುಕ್ತಾಯ ಬಳಿಕ ಎಬಿ ಡಿವಿಲಿಯರ್ಸ್ ಫೋಟೋ ಟ್ವೀಟ್ ಮಾಡಿರುವ ಕೊಹ್ಲಿ ಸೂಪರ್ ಮ್ಯಾನ್ ಲೈವ್ ಟು ಡೇ ಎಂದು ಬರೆದುಕೊಂಡಿದ್ದಾರೆ.

    ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿರುವ ಎಬಿ ಡಿವಿಲಿಯರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಕ್ಯಾಚ್ ಪಡೆಯುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇದಕ್ಕೂ ಮುನ್ನ ಪಂದ್ಯದಲ್ಲಿ ಎಬಿಡಿ ಅರ್ಧ ಶತಕ (69 ರನ್, 39 ಎಸೆತ, 12 ಬೌಂಡರಿ, 1 ಸಿಕ್ಸರ್) ಸಿಡಿಸಿ ಮಿಂಚಿದ್ದರು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿ 218 ರನ್ ಗಳ ಬೃಹತ್ ಮೊತ್ತ ಗಳಿಸಿತ್ತು, ಆದರೆ ಫೀಲ್ಡಿಂಗ್ ನಲ್ಲಿ ಹಲವು ಬಾರಿ ಎಡವಿತ್ತು. ನಾಯಕ ವಿರಾಟ್ ಕೊಹ್ಲಿ ಎರಡು ಕ್ಯಾಚ್ ಕೈ ಚೆಲ್ಲಿದರೆ, ಹಲವು ಆಟಗಾರರು ಕಳಪೆ ಫೀಲ್ಡಿಂಗ್ ನಡೆಸಿದರು. ಇದರ ನಡುವೆಯೂ ಎಬಿಡಿ ಪಡೆದ ಕ್ಯಾಚ್ ಕ್ರಿಕೆಟ್ ಆರ್ ಸಿಬಿ ಅಭಿಮಾನಿಗಳ ಮನ ಗೆದ್ದಿದೆ.

    ಆರ್ ಸಿಬಿ ಬೃಹತ್ ಮೊತ್ತವನ್ನು ಬೆನ್ನತ್ತಿದ ಹೈದರಾಬಾದ್ ತಂಡದ ವಿಲಿಯಮ್ಸ್(42 ಎಸೆತ, 81 ರನ್) ಮತ್ತು ಅಲೆಕ್ಸ್ ಹೇಲ್ಸ್(35) ಉತ್ತಮ ಆರಂಭ ನೀಡಿದರು. ಪಂದ್ಯದ 8 ನೇ ಓವರ್ ಬೌಲ್ ಮಾಡುತ್ತಿದ್ದ ವೇಳೆ ಮೊಯೆನ್ ಅಲಿ ಎಸೆತದಲ್ಲಿ ಹೇಲ್ಸ್ ಭಾರೀ ಹೊಡೆತಕ್ಕೆ ಮುಂದಾದರು. ಈ ವೇಳೆ ಬೌಂಡರಿ ಬಳಿಯಿದ್ದ ಡಿವಿಲಿಯರ್ಸ್ ಗಾಳಿಯಲ್ಲಿ ಹಾರಿ ಒಂದೇ ಕೈಲಿ ಕ್ಯಾಚ್ ಪಡೆದರು. ಪಂದ್ಯದ ಬಳಿಕ ಮಾತನಾಡಿದ ಎಬಿಡಿ ಆ ವೇಳೆ ಚೆಂಡು ತನ್ನ ಬಳಿಯಿಂದ ದೂರ ಬರುವುದನ್ನು ಕಂಡು ಕ್ಯಾಚ್ ಪಡೆಯಲು ಯತ್ನಿಸಿದೆ. ಅದೃಷ್ಟವಶಾತ್ ಚೆಂಡು ನನ್ನ ಕೈ ಸೇರಿತ್ತು. ಪ್ರತಿ ಬಾರಿ ನಾನು ನನ್ನನ್ನು ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

    ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಲು ಆರ್ ಸಿಬಿ ಗೆ ಹೈದರಾಬಾದ್ ವಿರುದ್ಧ ಗೆಲುವು ಪಡೆಯುವುದು ಅನಿವಾರ್ಯವಾಗಿತ್ತು. ಈ ಪಂದ್ಯದಲ್ಲಿ 14 ರನ್ ಗಳ ಅಂತರದಲ್ಲಿ ಗೆಲ್ಲುವ ಮೂಲಕ 12 ಅಂಕಗಳೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದೆ. ಶನಿವಾರ ರಾಜಸ್ಥಾನ ರಾಯಲ್ಸ್ ತಂಡವನ್ನು ಆರ್ ಸಿಬಿ ಎದುರಿಸಲಿದ್ದು, ಗೆಲ್ಲುವ ಒತ್ತಡದಲ್ಲಿದೆ.