Tag: ಕ್ಯಾಚ್

  • ಪ್ರೊಫೆಷನಲ್ ಕ್ರಿಕೆಟರ್‌ಗಳು ಕ್ಯಾಚನ್ನು ನೋಟ್ ಮಾಡಿಕೊಳ್ಳಿ – ವಿಡಿಯೋ

    ಪ್ರೊಫೆಷನಲ್ ಕ್ರಿಕೆಟರ್‌ಗಳು ಕ್ಯಾಚನ್ನು ನೋಟ್ ಮಾಡಿಕೊಳ್ಳಿ – ವಿಡಿಯೋ

    ಮುಂಬೈ: 2019ರ ಐಪಿಎಲ್ ಟೂರ್ನಿ ಮುಕ್ತಾಯಗೊಂಡರೂ ಕೂಡ ರಾಜಸ್ಥಾನ್ ರಾಯಲ್ಸ್ ತಂಡ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಇದೇ ಸಂದರ್ಭದಲ್ಲಿ ವಿಡಿಯೋವೊಂದನ್ನು ಟ್ವೀಟ್ ಮಾಡಿ ಪ್ರೊಫೆಷನಲ್ ಕ್ರಿಕೆಟ್ ಆಟಗಾರರು ಈ ಕ್ಯಾಚನ್ನು ನೋಟ್ ಮಾಡಿಕೊಳ್ಳಿ ಎಂದು ಹೇಳಿದೆ.

    ಅದ್ಭುತ ಕ್ಯಾಚ್‍ವೊಂದರ ವಿಡಿಯೋವನ್ನು ರಾಜಸ್ಥಾನ್ ರಾಯಲ್ಸ್ ತಂಡ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಯುವಕನೊಬ್ಬ ಬೌಂಡರಿ ಗೆರೆ ದಾಟಿ ಹೋಗುತ್ತಿದ್ದ ಚೆಂಡನ್ನು ಗಾಳಿಯಲ್ಲಿ ಹಾರಿ ಹಿಡಿದು ಎಸೆದು ಬೌಂಡರಿ ಗೆರೆ ದಾಟಿ ಬೀಳುತ್ತದೆ. ಈ ಸಂದರ್ಭದಲ್ಲಿ ಚೆಂಡು ಮತ್ತೊಬ್ಬ ಆಟಗಾರನ ಕೈ ಸೇರುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಯುವಕನ ಕ್ಷೇತ್ರ ರಕ್ಷಣೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ದೃಶ್ಯಗಳನ್ನು ಸ್ಥಳದಲ್ಲಿ ಇದ್ದ ಯುವಕರು ಸೆರೆ ಹಿಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದ ರಾಜಸ್ಥಾನ ರಾಯಲ್ಸ್ ತಂಡ, ಪ್ರೊಫೆಷನಲ್ ಕ್ರಿಕೆಟ್ ಆಟಗಾರರು ನೋಟ್ ಮಾಡಿಕೊಳ್ಳಿ ಎಂಬ ಹಣೆ ಬರಹ ನೀಡಿ ಟ್ವೀಟ್ ಮಾಡಿದೆ. ಆದರೆ ಈ ವಿಡಿಯೋ ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ.

  • ಕ್ಯಾಚ್ ಹಿಡಿಯಲು ಹೋಗಿ ಕಾಂಪೌಂಡ್ ಹಾರಿ ಚರಂಡಿಗೆ ಬಿದ್ದ ಫೀಲ್ಡರ್

    ಕ್ಯಾಚ್ ಹಿಡಿಯಲು ಹೋಗಿ ಕಾಂಪೌಂಡ್ ಹಾರಿ ಚರಂಡಿಗೆ ಬಿದ್ದ ಫೀಲ್ಡರ್

    ಮಂಗಳೂರು: ಕ್ರಿಕೆಟ್ ಹುಚ್ಚಿನಲ್ಲಿ ಕೆಲವರು ಪ್ರಾಣದ ಹಂಗನ್ನೂ ತೊರೆದು ಆಟವಾಡೋರಿದ್ದಾರೆ. ಡೈ ಮಾಡಿ, ಕೈಕಾಲಿಗೆ ಗಾಯ ಮಾಡಿಕೊಳ್ಳೋರೂ ಇದ್ದಾರೆ. ಮಂಗಳೂರಿನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಯುವಕನೊಬ್ಬ ಕ್ಯಾಚ್ ಹಿಡಿಯಲೆಂದು ಓಡುತ್ತಾ ಹೋಗಿ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದಾನೆ.

    ಮಂಗಳೂರಿನ ಕದ್ರಿ ಮೈದಾನದಲ್ಲಿ ಕ್ರಿಕೆಟ್ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಚೆಂಡು ಬಾನೆತ್ತರಕ್ಕೆ ಸಾಗುತ್ತಿದ್ದಂತೆ ಕ್ಯಾಚ್ ಹಿಡಿಯಲು ಓಡಿದ ಫೀಲ್ಡರ್ ರಘುವೀರ್, ಹಿಂದಕ್ಕೆ ಓಡುತ್ತಾ ರಸ್ತೆ ಬದಿಯ ಗೋಡೆಗೆ ಬಡಿದು ಪಲ್ಟಿ ಹೊಡೆದು ಬಿದ್ದಿದ್ದಾನೆ.

    ಈ ಕ್ರಿಕೆಟ್ ಪಂದ್ಯಾಟ ಸ್ಥಳೀಯ ವಾಹಿನಿಯಲ್ಲಿ ಲೈವ್ ಆಗುತ್ತಿದ್ದುದರಿಂದ ಯುವಕ ಪಲ್ಟಿ ಹೊಡೆಯುವುದು ಲೈವ್ ಆಗಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವಕ ಮಾತ್ರ ಏನೂ ಆಗದಂತೆ ಪಲ್ಟಿ ಹೊಡೆದು ಬಿದ್ದರೂ, ಮತ್ತೆ ಫೀಲ್ಡಿಂಗಿನತ್ತ ಹಿಂದಿರುಗಿದ್ದು, ಆತನ ಗೇಮ್ ಸ್ಪಿರಿಟ್ ನ್ನು ಸ್ಥಳೀಯರು ಮೆಚ್ಚಿಕೊಂಡಿದ್ದಾರೆ.

  • ಬೌಂಡರಿ ಗೆರೆ ಬಳಿ ಅದ್ಭುತ ಕ್ಯಾಚ್ – ಇನ್‍ಗ್ರಾಮ್, ಅಕ್ಷರ್ ಮೋಡಿಗೆ ಗೇಲ್ ಔಟ್ : ವಿಡಿಯೋ

    ಬೌಂಡರಿ ಗೆರೆ ಬಳಿ ಅದ್ಭುತ ಕ್ಯಾಚ್ – ಇನ್‍ಗ್ರಾಮ್, ಅಕ್ಷರ್ ಮೋಡಿಗೆ ಗೇಲ್ ಔಟ್ : ವಿಡಿಯೋ

    – ನಿಯಮ ಬದಲಿಸಿ ಎಂದ ನೆಟ್ಟಿಗರು

    ನವದೆಹಲಿ: ಕಿಂಗ್ಸ್ ಇಲೆವನ್ ವಿರುದ್ಧದ ಪಂದ್ಯವನ್ನು ದೆಹಲಿ ತಂಡ ಕೊನೆಯ ಎರಡು ಎಸೆತ ಬಾಕಿ ಇರುವಾಗ ಗೆದ್ದುಕೊಂಡರೂ ಈ ಪಂದ್ಯದಲ್ಲಿ ಕಾಲಿನ್ ಇನ್‍ಗ್ರಾಮ್ ಕ್ಯಾಚ್ ಹಿಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

    ಸದ್ಯ ಸೂಪರ್ ಫಿಟ್ ಫೀಲ್ಡರ್ ಗಳ ಸಂಖ್ಯೆ ಸದ್ಯ ಹೆಚ್ಚಾಗುತ್ತಲೇ ಇದ್ದು, ಪಂಜಾಬ್ ವಿರುದ್ಧ ಪಂದ್ಯದಲ್ಲೂ ಕಾಲಿನ್ ಇನ್‍ಗ್ರಾಮ್ ಸೂಪರ್ ಕ್ಯಾಚ್ ಪಡೆದಿದ್ದಾರೆ. ಕಾಲಿನ್, ಅಕ್ಷರ್ ಇಬ್ಬರ ಜೋಡಿ ಕ್ಯಾಚ್ ಪಡೆಯುವಲ್ಲಿ ಮೋಡಿ ಮಾಡಿದ್ದು, ಪಂದ್ಯದ 12ನೇ ಓವರಿನ 2ನೇ ಎಸೆತದಲ್ಲಿ ಗೇಲ್ ಬೀಸಿದ ಸಿಕ್ಸರ್ ರನ್ನು ಬೌಂಡರಿ ಗೆರೆ ಬಳಿ ಕ್ಯಾಚ್ ಪಡೆದ ಇನ್‍ಗ್ರಾಮ್ ನಾನು ಬೌಂಡರಿ ಗೆರೆ ದಾಟುತ್ತಿದ್ದೇನೆ ಎಂದು ಅರಿವಾಗುತ್ತಿದಂತೆ ಅಲ್ಪ ದೂರದಲ್ಲಿದ್ದ ಅಕ್ಷರ್ ಗೆ ಬಾಲ್ ಪಾಸ್ ಮಾಡಿ ಕ್ಯಾಚ್ ಪೂರ್ಣಗೊಳಿಸುವಂತೆ ಮಾಡಿದ್ರು.

    ಅಕ್ಷರ್ ಕ್ಯಾಚ್ ಪೂರ್ಣಗೊಳಿಸಿದ ಪರಿಣಾಮ 37 ಎಸೆತಗಳಲ್ಲಿ 69 ರನ್ ಗಳಿಸಿ ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಗೇಲ್ ಪೆವಿಲಿಯನ್ ಸೇರಿದರು. ಅಲ್ಲದೇ ಕ್ಯಾಚ್ ಪಡೆಯುವ ವೇಳೆ ಇನ್‍ಗ್ರಾಮ್ ತೋರಿದ ಸಮಯ ಪ್ರಜ್ಞೆಯ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕ್ಯಾಚ್ ಪಡೆಯಲು ಇನ್‍ಗ್ರಾಮ್ ಶ್ರಮವಹಿಸಿದ್ದರೂ ಕೂಡ ನಿಯಮಗಳಂತೆ ಈ ಕ್ಯಾಚ್ ಅಕ್ಷರ್ ಪಟೇಲ್ ಖಾತೆಗೆ ಸೇರಿತ್ತು. ಈ ನಿಯಮಗಳ ಬಗ್ಗೆಯೂ ಹಲವರು ಪ್ರಶ್ನೆ ಮಾಡಿದ್ದು, ನಿಯಮಗಳ ಬದಲಾವಣೆ ಅಗತ್ಯ ಇದೆ ಎಂದಿದ್ದಾರೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ ಗಳಲ್ಲಿ 163 ರನ್ ಸಿಡಿಸಿದ ಪಂಜಾಬ್ ಡೆಲ್ಲಿಗೆ 164 ರನ್ ಗಳ ಗುರಿ ನೀಡಿತು. ಸವಾಲಿನ ಗುರಿ ಬೆನ್ನತ್ತಿದ ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ 19.4 ಓವರಿನಲ್ಲೇ ಗೆಲುವಿನ ರನ್ ಗಳಿಸಿ 5 ವಿಕೆಟ್ ಜಯ ಪಡೆಯಿತು. ಪಂದ್ಯಲ್ಲಿ ಧವನ್ 56 ರನ್ (41 ಎಸೆತ, 7 ಬೌಂಡರಿ, 1 ಸಿಕ್ಸರ್), ಶ್ರೇಯಸ್ 58 ರನ್ (49 ಎಸೆತ, 5 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮುಂಬೈ 2ನೇ ಸ್ಥಾನದಲ್ಲಿದ್ದರೆ, ಅಷ್ಟೇ ಅಂಕ ಪಡೆದಿರುವ ಡೆಲ್ಲಿ ಕಡಿಮೆ ರನ್ ರೇಟ್ ಕಾರಣದಿಂದ 3ನೇ ಸ್ಥಾನ ಪಡೆದುಕೊಂಡಿದೆ.

  • ಕ್ಯಾಚ್ ಕೈ ಬಿಟ್ಟು ರಿವ್ಯೂ ಕೋರಿ ನಗೆಪಾಟಲಿಗೀಡಾದ ಪಾಕ್ ಕ್ರಿಕೆಟರ್! ವಿಡಿಯೋ

    ಕ್ಯಾಚ್ ಕೈ ಬಿಟ್ಟು ರಿವ್ಯೂ ಕೋರಿ ನಗೆಪಾಟಲಿಗೀಡಾದ ಪಾಕ್ ಕ್ರಿಕೆಟರ್! ವಿಡಿಯೋ

    ಲಾಹೋರ್: ಪಂದ್ಯವೊಂದಲ್ಲಿ ಕ್ಯಾಚ್ ಕೈ ಬಿಟ್ಟು ಬಳಿಕ ಅಂಪೈರ್ ಬಳಿ ರಿವ್ಯೂ ಕೇಳಿದ ಪಾಕ್ ಕ್ರಿಕೆಟರ್ ಅಹ್ಮದ್ ಶೆಹಜಾದ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

    ಪಾಕಿಸ್ತಾನ ಕ್ರಿಕೆಟ್ ಲಿಸ್ಟ್ ಟೂರ್ನಿಯ ಭಾಗವಾಗಿ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಫೆಡರಲ್ ಎರೆಯಾಸ್ ತಂಡದ ಪರ ಆಡುತ್ತಿದ್ದ ಅಹ್ಮದ್ ಶೆಹಜಾದ್, ಖೈಬರ್ ಪಖ್ತುಂಖ್ವಾ ತಂಡದ ವಿರುದ್ಧ ಕ್ಯಾಚ್ ಕೈ ಬಿಟ್ಟಿದ್ದರು.

    https://twitter.com/Saj_PakPassion/status/1113508978766512128

    ಪಂದ್ಯದಲ್ಲಿ ಖೈಬರ್ ತಂಡಕ್ಕೆ ಗೆಲ್ಲಲು ಅಂತಿಮ 4 ಎಸೆತಗಳಲ್ಲಿ 3 ರನ್ ಗಳ ಅಗತ್ಯವಿತ್ತು. ಈ ವೇಳೆ ಅಹ್ಮದ್ ಕ್ಯಾಚ್ ಕೈ ಬಿಟ್ಟು ಪ್ರಮಾದ ಎಸಗಿದ್ದರು. ಆದರೆ ಏನು ತಿಳಿಯದಂತೆ ಅಂಪೈರ್ ಬಳಿ ರಿವ್ಯೂ ಮನವಿ ಮಾಡಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಅಹ್ಮದ್ ನಡೆಗೆ ವ್ಯಂಗ್ಯವಾಡಿ ಕಾಲೆಳೆದಿದ್ದಾರೆ.

    ಪಾಕಿಸ್ತಾನದ ಆಟಗಾರರು ಮೊದಲೇ ಮೋಸದಾಟದಲ್ಲಿ ನಿಸ್ಸೀಮರು. ಈ ಹಿಂದೆ ಶ್ರೀಲಂಕಾ ವಿರುದ್ಧ ಪಂದ್ಯದಲ್ಲೂ ಅಹ್ಮದ್ ಇದೇ ರೀತಿ ಮಾಡಿದ್ದನ್ನ ಕೂಡ ಟ್ವಿಟ್ಟಗರು ಫೋಟೋ ಟ್ವೀಟ್ ಮಾಡಿದ್ದಾರೆ. ಕ್ಯಾಮೆರಾ ಇದ್ದಾಗಲೇ ಇಷ್ಟು ಮೋಸದಾಟ ಆಡಿದರೆ ಇನ್ನು ಕ್ಯಾಮೆರಾ ಇಲ್ಲದಿದ್ದರೆ ಏನು ಪರಿಸ್ಥಿತಿ ಎಂದು ಅಭಿಮಾನಿಗಳು ಪ್ರಶ್ನಿಸಿ ವ್ಯಂಗ್ಯವಾಡುತ್ತಿದ್ದಾರೆ.

    https://twitter.com/PrachiNotDesai/status/1113532320214966272?

    https://twitter.com/shalindesai2006/status/1113746219602456576

  • ಆನ್‍ಫೀಲ್ಡ್ ನಲ್ಲೇ ಕೃಣಾಲ್ ಪಾಂಡ್ಯ ಗರಂ – ವಿಡಿಯೋ ನೋಡಿ

    ಆನ್‍ಫೀಲ್ಡ್ ನಲ್ಲೇ ಕೃಣಾಲ್ ಪಾಂಡ್ಯ ಗರಂ – ವಿಡಿಯೋ ನೋಡಿ

    ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಕೃಣಾಲ್ ಪಾಂಡ್ಯ ಆನ್‍ಫೀಲ್ಡ್ ನಲ್ಲೇ ಗರಂ ಆಗಿದ್ದು, ಕ್ಯಾಚ್ ಪಡೆಯಲು ಅಡ್ಡ ಬಂದ ಬ್ಯಾಟ್ಸ್ ಮನ್ ವಿರುದ್ಧ ಅಂಪೈರ್ ಬಳಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.

    ಮೊದಲ ಟಿ20 ಪಂದ್ಯದ 8 ಓವರ್ ವೇಳೆ ಘಟನೆ ನಡೆದಿದ್ದು, ಕೃಣಾಲ್ ಪಾಂಡ್ಯ ಬೌಲಿಂಗ್ ಎದುರಿಸಿದ್ದ ವಿಲಿಯಮ್ಸನ್ ತಮ್ಮ ಮೊದಲ ಎಸೆತದಲ್ಲೇ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರು. ಈ ವೇಳೆ ಚೆಂಡು ಬ್ಯಾಟಿಗೆ ತಾಗಿ ನೇರ ಬೌಲರ್ ಬಲಗಡೆಗೆ ಚಿಮ್ಮಿತು. ಇತ್ತ ಕ್ಯಾಚ್ ಪಡೆಯಲು ಕೃಣಾಲ್ ಡೈವ್ ಮಾಡುವ ಪ್ರಯತ್ನ ಮಾಡಿದರು. ಆದರೆ ನಾನ್ ಸ್ಟ್ರೈಕ್ ನಲ್ಲಿದ್ದ ಸಿಫರ್ಟ್ ಪಾಂಡ್ಯಗೆ ಆಡ್ಡ ಬಂದಿದ್ದರು. ಇದರಿಂದ ಕ್ಷಣ ಕಾಲ ಗರಂ ಆದ ಕೃಣಾಲ್ ಅಂಪೈರ್ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

    https://twitter.com/WastingBalls/status/1093060649297629184

    ಈ ವೇಳೆ ಕೃಣಾಲ್ ರನ್ನು ಸಮಾಧಾನ ಪಡಿಸಲು ಯತ್ನಿಸಿದ ಅಂಪೈರ್ ತಾಳ್ಮೆ ಕಳೆದುಕೊಳ್ಳದಂತೆ ಸಲಹೆ ನೀಡಿದರು. ಬ್ಯಾಟ್ಸ್ ಮನ್ ವಿರುದ್ಧ ಅಸಮಾಧಾನದಿಂದಲೇ ಆಟ ಮುಂದುವರಿಸಿದ ಕೃಣಾಲ್ ತಮ್ಮ ಸ್ಪೆಲ್ ಪೂರ್ಣಗೊಳಿಸಿದರು. ಇದೇ ವೇಳೆ ನಾಯಕ ರೋಹಿತ್ ಶರ್ಮಾ ಕೂಡ ಅಂಪೈರ್ ಬಳಿ ಬಂದು ಮಾತುಕತೆ ನಡೆಸಿದರು. ಅಂತಿಮವಾಗಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿಲಿಯಮ್ಸನ್ 22 ಎಸೆತಗಳನ್ನು ಎದುರಿಸಿದ 3 ಸಿಕ್ಸರ್ ಗಳ ನೆರವಿನಿಂದ 34 ಗಳಿಸಿ ವಿಕೆಟ್ ಒಪ್ಪಿಸಿದರು. ಪಂದ್ಯದಲ್ಲಿ ನ್ಯೂಜಿಲೆಂಡ್ 80 ರನ್ ಅಂತರದ ಜಯ ಪಡೆಯಿತು. ಸ್ಫೋಟಕ ಪ್ರದರ್ಶನ ನೀಡಿದ ಸಿಫರ್ಟ್ ಪಂದ್ಯ ಶ್ರೇಷ್ಠ ಗೌರವ ಪಡೆದರು.

    ಉಳಿದಂತೆ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಹಾಗೂ ಹಾರ್ದಿಕ್ ಪಾಂಡ್ಯ ಸಹೋದರು ಆಡಿದ್ದರು. ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಈ ಇಬ್ಬರು ಒಂದೇ ಪಂದ್ಯದಲ್ಲಿ ಆಡಿದ್ದರು ಕೂಡ, ಟೀಂ ಇಂಡಿಯಾ ಪರ ಟಿ20 ಪಂದ್ಯದಲ್ಲಿ ಆಡಿದ್ದು ಮೊದಲ ಬಾರಿ ಆಗಿದೆ. ಪಂದ್ಯದಲ್ಲಿ ಕೃಣಾಲ್ 37 ರನ್ ನೀಡಿ 1 ವಿಕೆಟ್ ಪಡೆದರೆ, ಹಾರ್ದಿಕ್ 51 ರನ್ ನೀಡಿ 2 ವಿಕೆಟ್ ಪಡೆದರು. ಅಂತರಾಷ್ಟ್ರಿಯ ಕ್ರಿಕೆಟ್ ಪಂದ್ಯದಲ್ಲಿ ಭಾರತ ಪರ ಒಟ್ಟಿಗೆ ಆಡುತ್ತಿರುವ 3ನೇ ಜೋಡಿ ಇದಾಗಿದ್ದು, ಈ ಹಿಂದೆ ಸುರೀಂದರ್, ಮೊಹಿಂದರ್ ಅಮರನಾಥ್ ಹಾಗು ಯೂಸುಫ್, ಇಫಾರ್ನ್ ಪಠಾಣ್ ಸಹೋದರು ಒಂದೇ ಪಂದ್ಯದಲ್ಲಿ ಆಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೌಂಡರಿ ಗೆರೆಯ ಬಳಿ ಅತ್ಯುತ್ತಮ ಕ್ಯಾಚ್ ಹಿಡಿದ ಕಾರ್ತಿಕ್!- ವಿಡಿಯೋ ನೋಡಿ

    ಬೌಂಡರಿ ಗೆರೆಯ ಬಳಿ ಅತ್ಯುತ್ತಮ ಕ್ಯಾಚ್ ಹಿಡಿದ ಕಾರ್ತಿಕ್!- ವಿಡಿಯೋ ನೋಡಿ

    ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಅತ್ಯುತ್ತಮ ರೀತಿಯಲ್ಲಿ ಕ್ಯಾಚ್ ಪಡೆದಿದ್ದು, ಕಾರ್ತಿಕ್ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

    ಪಂದ್ಯದಲ್ಲಿ ಕಿವೀಸ್ ತಂಡದ ವಿಕೆಟ್ ಕೀಪರ್ ಸಿಫರ್ಟ್ ನೀಡಿದ ಕ್ಯಾಚ್ ಕೈ ಚೆಲ್ಲಿದ್ದ ದಿನೇಶ್, ಮಿಚೆಲ್ ನೀಡಿದ ಕ್ಯಾಚ್ ಪಡೆದು ಸರಿದೂಗಿಸಿದಂತೆ ಕಂಡು ಬಂತು. ಕೃಣಾಲ್ ಪಾಂಡ್ಯ ಎಸೆದ 14 ಓವರಿನ 2ನೇ ಎಸೆತವನ್ನು ಸಿಕ್ಸರ್ ಗಟ್ಟಲು ಮಿಚೆಲ್ ಪ್ರಯತ್ನಿಸಿದ್ದರು. ಆದರೆ ಬೌಂಡರಿ ಗೆರೆಯ ಬಳಿ ದಿನೇಶ್ ಕಾರ್ತಿಕ್ ಕ್ಯಾಚ್ ಪಡೆದರು. ಆ ವೇಳೆಗೆ ಬೌಡರಿ ಗೆರೆ ದಾಟುವುದನ್ನು ಮನಗಂಡ ದಿನೇಶ್ ಚೆಂಡನ್ನು ಮೇಲಕ್ಕೆ ಎಸೆದು ಮತ್ತೆ ಫಿಲ್ಡ್ ಒಳಗೆ ಡೈವ್ ಮಾಡಿ ಕ್ಯಾಚ್ ಪಡೆದರು. ಪರಿಣಾಮ 6 ಎಸೆತಗಳಲ್ಲಿ 8 ರನ್ ಗಳಿಸಿದ್ದ ಮಿಚೆಲ್ ಪೆವಿಲಿಯನ್‍ಗೆ ನಡೆದರು.

    ಕಿವೀಸ್ ತಂಡ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿದೆ. ಸೋಲಿಲ್ಲದ ಸರದಾರನಂತೆ ಸಾಗುತ್ತಿರುವ ಟೀಂ ಇಂಡಿಯಾ ಗೆಲ್ಲಲು 220 ರನ್ ಗುರಿ ಪಡೆದಿದೆ.

    ಟಾಸ್ ಸೋತು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಕಿವೀಸ್ ತಂಡದ ಆಟಗಾರರು ಏಕದಿನ ಸರಣಿಯ ಸೋಲಿನ ಸೇಡು ತೀರಿಸುವಂತೆ ಬಿರುಸಿನ ಬ್ಯಾಟಿಂಗ್ ನಡೆಸಿದರು. ಕಿವೀಸ್ ಪರ ಆರಂಭಿಕ ಸಿಫರ್ಟ್ ಕೇವಲ 30 ಎಸೆತಗಳಲ್ಲೇ ಅರ್ಧ ಶತಕ ಸಿಡಿದರೆ, ತಲಾ 34 ರನ್ ಗಳಿಸಿದ ಮ್ರನೋ ಹಾಗೂ ವಿಲಿಯಮ್ಸನ್ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡ ಸ್ಕೋರ್ ಹೆಚ್ಚಾಗಲು ಕಾರಣರಾದರು. 4.4 ಓವರ್ ಗಳಲ್ಲಿ ಕಿವೀಸ್ ತಂಡ 50 ರನ್ ಗಡಿದಾಟಿದರೆ, 10.2 ಓವರ್ ಗಳಲ್ಲಿ ಶತಕ ಗಳಿಸಿತು.

    ಸ್ಫೋಟಕ ಬ್ಯಾಟಿಂಗ್ ನಿಂದ ಶತಕದತ್ತ ಮುನ್ನುಗುತ್ತಿದ್ದ ಸಿಫರ್ಟ್ ವಿಕೆಟ್ ಪಡೆಯಲು ಖಲೀಲ್ ಅಹ್ಮದ್ ಯಶಸ್ವಿಯಾದರೆ, 34 ರನ್ ಗಳಿಸಿದ್ದ ಮನ್ರೋ ವಿಕೆಟನ್ನು ಕೃಣಾಲ್ ಪಾಂಡ್ಯ ಪಡೆದರು. ಸಿಫರ್ಟ್ 7 ಬೌಂಡರಿ ಹಾಗೂ 6 ಸಿಕ್ಸರ್ ನೊಂದಿಗೆ 84 ರನ್ ಗಳಿಸಿ ನಿರ್ಗಮಿಸಿದರು.

    ನ್ಯೂಜಿಲೆಂಡ್ ಬ್ಯಾಟಿಂಗ್ ವೇಗಕ್ಕೆ ಹಾರ್ದಿಕ್ ಪಾಂಡ್ಯ ಬ್ರೇಕ್ ಹಾಕಲು ಯತ್ನಿಸಿ ಪ್ರಮುಖ ವಿಕೆಟ್ ಪಡೆದರು. 164 ರನ್ ಗಳಿಸಿದ್ದ ವೇಳೆ ಕಿವೀಸ್ ತಂಡ 1 ರನ್ ಅಂತರದಲ್ಲಿ 2 ವಿಕೆಟ್ ಕಳೆದುಕೊಂಡಿತು. ಉಳಿದಂತೆ ಸ್ಲಾಗ್ ಓವರ್ ಗಳಲ್ಲಿ ರಾಸ್ ಟೇಲರ್ 23 ರನ್, ಸ್ಕಾಟ್ ಕುಗ್ಗೆಲಿಜೆನ್ 20 ರನ್ ಸಿಡಿಸಿ ತಂಡದ ಮೊತ್ತ 200 ರನ್ ಗಡಿದಾಟುವಂತೆ ಮಾಡಿದರು. ಅಂತಿಮವಾಗಿ ನಿಗದಿತ 20 ಓವರ ಗಳಲ್ಲಿ ಕಿವೀಸ್ ತಂಡ 6 ವಿಕೆಟ್ ಕಳೆದುಕೊಂಡು 219 ರನ್ ಗಳಸಿತು.

    ಪಂದ್ಯದಲ್ಲಿ ದುಬಾರಿಯಾದ ಟೀಂ ಇಂಡಿಯಾ ಬೌಲರ್ ಗಳಲ್ಲಿ ಹಾರ್ದಿಕ್ ಪಾಂಡ್ಯ 51 ರನ್ ನೀಡಿ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಕೃಣಾಲ್ ಪಾಂಡ್ಯ, ಚಹಲ್ ತಲಾ ಒಂದೊಂದು ವಿಕೆಟ್ ಪಡೆದರು.

    https://twitter.com/SanjeevAaspal/status/1093063304480780288

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಫ್ಲೈಯಿಂಗ್ ಕ್ಯಾಚ್ ಮೂಲಕ ಹಾರ್ದಿಕ್ ಪಾಂಡ್ಯ ಕಮ್ ಬ್ಯಾಕ್ – ವಿಡಿಯೋ

    ಫ್ಲೈಯಿಂಗ್ ಕ್ಯಾಚ್ ಮೂಲಕ ಹಾರ್ದಿಕ್ ಪಾಂಡ್ಯ ಕಮ್ ಬ್ಯಾಕ್ – ವಿಡಿಯೋ

    ಮೌಂಟ್ ಮೌಂಗಾನೆ: ಕಳೆದ ಕೆಲ ವಾರಗಳಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ, ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಾಗೂ 2 ವಿಕೆಟ್ ಪಡೆಯುವ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.

    ಪಂದ್ಯದಲ್ಲಿ 10 ಓವರ್ ಬೌಲ್ ಮಾಡಿದ ಪಾಂಡ್ಯ 45 ರನ್ ನೀಡಿ 2 ವಿಕೆಟ್ ಪಡೆದಿದ್ದು, ಪಂದ್ಯದಲ್ಲಿ ಹೆಚ್ಚು ರನ್ ಬಿಟ್ಟುಕೊಡದೆ ಉತ್ತಮ ಬೌಲಿಂಗ್ ದಾಳಿ ನಡೆಸಿದರು. ಅಲ್ಲದೇ ನಾಯಕ ವಿಲಿಯಮ್ಸನ್ ಅವರ ಕ್ಯಾಚ್ ಪಡೆಯುವ ಮೂಲಕ ನ್ಯೂಜಿಲೆಂಡ್ ರನ್‍ಗಳಿಗೆ ನಿಯಂತ್ರಣ ಹೇರಿದರು.

    17ನೇ ಓವರ್ ನಲ್ಲಿ ಯಜುವೇಂದ್ರ ಚಹಲ್ ಎಸೆತದಲ್ಲಿ ರನ್ ಪಡೆಯಲು ಯತ್ನಿಸಿದ ವಿಲಿಯಮ್ಸನ್ ಮಿಡ್ ವಿಕೆಟ್‍ನತ್ತ ಚೆಂಡನ್ನು ಬಾರಿಸಿದರು. ಆದರೆ ಕ್ಷಣ ಮಾತ್ರದಲ್ಲಿ ಪಾಂಡ್ಯ ಡೈವ್ ಮಾಡಿ ಕ್ಯಾಚ್ ಪಡೆದು ಮಿಂಚಿದರು.

    ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಎಲ್ ರಾಹುಲ್ ಮತ್ತು ಪಾಂಡ್ಯ ಮಹಿಳೆಯರು ಹಾಗೂ ಸೆಕ್ಸ್ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಕಾಮೆಂಟ್ ಮಾಡಿ ಸಾರ್ವಜನಿಕರ ಕೈಗಣ್ಣಿಗೆ ಗುರಿಯಾಗಿ ಟೀಕೆ ಎದುರಿಸಿದ್ದರು. ಪರಿಣಾಮ ಬಿಸಿಸಿಐ ಅಮಾನತು ಮಾಡಿತ್ತು. ಇದರಿಂದ ಆಸೀಸ್ ಟೂರ್ನಿಯಿಂದ ಹೊರಬಿದ್ದಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಬಿಸಿಸಿಐ ಇಬ್ಬರ ಮೇಲಿನ ಅಮಾನತನ್ನು ತೆರವುಗೊಳಿಸಿತ್ತು.

    https://twitter.com/KanaiKumar9/status/1089738535958003713?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬಾರ್ಡರ್ – ಗವಾಸ್ಕರ್ ಟೂರ್ನಿಯ ಟಾಪ್ 5 ಕ್ಯಾಚ್ – ವಿಡಿಯೋ

    ಬಾರ್ಡರ್ – ಗವಾಸ್ಕರ್ ಟೂರ್ನಿಯ ಟಾಪ್ 5 ಕ್ಯಾಚ್ – ವಿಡಿಯೋ

    ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಇತಿಹಾಸ ಸೃಷ್ಟಿ ಮಾಡಿದೆ. ಇದೇ ವೇಳೆ ನಾಯಕ ವಿರಾಟ್ ಕೊಹ್ಲಿ ಸರಣಿ ಗೆಲುವಿಗೆ ತಂಡದ ಆಟಗಾರ ಸಂಘಟಿತ ಹೋರಾಟ ಕಾರಣ ಎಂದು ತಿಳಿಸಿದ್ದು, ಈ ಸರಣಿಯಲ್ಲಿ ದಾಖಲಾದ ಐದು ಅತ್ಯುತ್ತಮ ಕ್ಯಾಚ್ ಗಳ ಮಾಹಿತಿ ಇಲ್ಲಿದೆ.

    ರಹಾನೆ: ಟೀಂ ಇಂಡಿಯಾ ಉಪ ನಾಯಕ ಸಿಡ್ನಿ ಟೆಸ್ಟ್ ಪಂದ್ಯ ವೇಳೆ ಮೊದಲ ಇನ್ನಿಂಗ್ಸ್ ನ ಶಮಿ ಎಸೆದ 52ನೇ ಓವರಿನ ನಾಲ್ಕನೇಯ ಎಸೆತದಲ್ಲಿ ಮಾರ್ನಸ್ ಲ್ಯಾಬುಶಾನೆ ಕ್ಯಾಚ್ ಪಡೆದು ಗಮನ ಸೆಳೆದರು. ಶಾರ್ಟ್ ಮಿಡ್ ವಿಕೆಟ್‍ನತ್ತ ಸಿಡಿದ ಚೆಂಡನ್ನು ರಹಾನೆ ಅತ್ಯುತ್ತಮವಾಗಿ ಕ್ಯಾಚ್ ಹಿಡಿದು ಆಸ್ಟ್ರೇಲಿಯಾದ ಹಿನ್ನಡೆಗೆ ಕಾರಣರಾಗಿದ್ದರು. ಈ ವೇಳೆ 38 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಮಾರ್ನಸ್ ಲ್ಯಾಬುಶಾನೆ ಪೆವಿಲಿಯನ್ ಸೇರಿದರು.

    ಮಯಾಂಕ್ ಅಗರ್ವಾಲ್: ಆಸೀಸ್ ಟೆಸ್ಟ್ ಸರಣಿಗೆ ಆಯ್ಕೆ ಆಗಿ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್‍ನಲ್ಲೂ ಕಮಲ್ ಮಾಡಿದ್ದರು. 3ನೇ ಟೆಸ್ಟ್ ಪಂದ್ಯದ ಆಸೀಸ್ ಇನ್ನಿಂಗ್ಸ್ ವೇಳೆ 11ನೇ ಓವರ್ ಎಸೆದಿದ್ದ ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ 8 ರನ್ ಗಳಿಸಿದ್ದ ಫಿಂಚ್, ಶಾರ್ಟ್ ಮಿಡ್‍ವಿಕೆಟ್ ನತ್ತ ಸಿಡಿಸಿದ್ದ ಚೆಂಡನ್ನು ಮಯಾಂಕ್ ಡೈವ್ ಮಾಡಿ ಕ್ಯಾಚ್ ಪಡೆದಿದ್ದರು.

    https://twitter.com/telegraph_sport/status/1078441138674167809?

    ವಿರಾಟ್ ಕೊಹ್ಲಿ: ಟೆಸ್ಟ್ ಸರಣಿಯ ಉದ್ದಕ್ಕೂ ಆಕ್ರಮಣಕಾರಿ ಪ್ರವೃತ್ತಿಯಿಂದೇ ಆಸೀಸ್ ವಿರುದ್ಧ ಸವಾರಿ ಮಾಡಿದ್ದ ನಾಯಕ ವಿರಾಟ್ ಕೊಹ್ಲಿ, 2ನೇ ಟೆಸ್ಟ್ ಪಂದ್ಯದ ವೇಳೆ ಹ್ಯಾಡ್ಸ್‍ಕಾಂಬ್ ಕ್ಯಾಚ್ ಪಡೆದು ಮಿಂಚಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್ ನ ಇಶಾಂತ್ ಶರ್ಮಾ ಎಸೆದ 54ನೇ ಓವರ್ ನಲ್ಲಿ 7 ರನ್ ಗಳಿಸಿದ್ದ ಹ್ಯಾಡ್ಸ್ ಕಾಂಬ್ ಸ್ಲಿಪ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ದರು.

    ಹ್ಯಾಂಡ್ಸ್ ಕಾಂಬ್: ಯುವ ವಿಕೆಟ್ ಕೀಪರ್ ರಿಷಬ್ ಪಂತ್ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ನಾಥನ್ ಲಯನ್ ಬ್ಯಾಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ದರು. 54ನೇ ಓವರ್ ನ 3ನೇ ಎಸೆತದಲ್ಲಿ ನಾಥನ್ ಲಯನ್ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ ಪಂತ್‍ರನ್ನು ಹ್ಯಾಂಡ್ಸ್ ಕಾಂಬ್ ಉತ್ತಮವಾಗಿ ಕ್ಯಾಚ್ ಹಿಡಿದು ಔಟ್ ಮಾಡಿಸಿದರು.

    ಖವಾಜಾ: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ನಾಯಕ ವಿರಾಟ್ ಕೊಹ್ಲಿ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸಿದ್ದ ಆಸೀಸ್ ಬೌಲರ್ ಗಳು ಕೊಹ್ಲಿ ವಿಕೆಟ್ ಪಡೆಯಲು ಪೈಪೋಟಿ ನಡೆಸಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪಡೆದ ಕಮ್ಮಿನ್ಸ್ ಸಾಧನೆಗೆ ಗಲ್ಲಿಯಲ್ಲಿ ನಿಂತಿದ್ದ ಖವಾಜಾ ಕಾರಣರಾಗಿದ್ದರು. 10ನೇ ಓವರ್ ನ 3ನೇ ಎಸೆತದಲ್ಲಿ ಡ್ರೈವ್ ಮಾಡಲು ಕೊಹ್ಲಿ ಯತ್ನಿಸುತ್ತಿದ್ದಂತೆ ಸಿಡಿದ ಚೆಂಡನ್ನು ಖವಾಜಾ ಒಂದೇ ಕೈಯಲ್ಲಿ ಹಿಡಿದಿದ್ದರು.

    ಸರಣಿಯಲ್ಲಿ ಟೀಂ ಇಂಡಿಯಾ ತಂಡವನ್ನು ಆಕ್ರಮಣಕಾರಿಯಾಗಿ ಮುನ್ನಡೆಸಿದ್ದ ಕೊಹ್ಲಿ ಫಿಲ್ಡಿಂಗ್ ನಲ್ಲೂ ಇದೇ ತಂತ್ರವನ್ನು ಬಳಸಿದ್ದರು. ಎದುರಾಳಿ ಆಟಗಾರರಿಗೆ ಬ್ಯಾಟ್ ಬೀಸಲು ಅವಕಾಶ ನೀಡಿ ಕ್ಯಾಚ್ ಆಗುವಂತಹ ಸನ್ನಿವೇಶ ಸೃಷ್ಟಿಸಿ ವಿಕೆಟ್ ಪಡೆಯುತ್ತಿದ್ದರು. ಹಲವು ಬಾರಿ ಪಂದ್ಯದ ನಡುವೆ ಕೊಹ್ಲಿ ಫಿಲ್ಡಿಂಗ್ ನಲ್ಲಿ ಮಾಡಿದ್ದ ಬದಲಾವಣೆಗಳು ತಂಡಕ್ಕೆ ವರವಾಗಿ ಪರಿಣಮಿಸಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅತ್ಯುತ್ತಮವಾಗಿ ಕ್ಯಾಚ್ ಹಿಡಿದು ಆಸ್ಟ್ರೇಲಿಯಾಗೆ ಬ್ರೇಕ್ ಕೊಟ್ಟ ರಹಾನೆ

    ಅತ್ಯುತ್ತಮವಾಗಿ ಕ್ಯಾಚ್ ಹಿಡಿದು ಆಸ್ಟ್ರೇಲಿಯಾಗೆ ಬ್ರೇಕ್ ಕೊಟ್ಟ ರಹಾನೆ

    ಸಿಡ್ನಿ: ನಾಲ್ಕನೆ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ತಂಡದ ಉಪನಾಯಕ ಅಜಿಂಕ್ಯ ರಹಾನೆ ಉತ್ತಮವಾಗಿ ಕ್ಯಾಚ್ ಹಿಡಿಯುವ ಮೂಲಕ ಟೀಂ ಇಂಡಿಯಾದ ಮೇಲುಗೈಗೆ ಕಾರಣರಾಗಿದ್ದಾರೆ.

    ಆಸ್ಟ್ರೇಲಿಯಾ ಇನ್ನಿಂಗ್ಸ್ ನ ಶಮಿ ಎಸೆದ 52ನೇ ಓವರಿನ ನಾಲ್ಕನೇಯ ಎಸೆತವನ್ನು ಮಾರ್ನಸ್ ಲ್ಯಾಬುಶಾನೆ ಶಾರ್ಟ್ ಮಿಡ್‍ವಿಕೆಟ್ ನತ್ತ ಹೊಡೆದಿದ್ದರು. ಈ ವೇಳೆ ಅಲ್ಲಿದ್ದ ರಹಾನೆ ಅತ್ಯುತ್ತಮವಾಗಿ ಕ್ಯಾಚ್ ಹಿಡಿದು ಆಸ್ಟ್ರೇಲಿಯಾದ ಹಿನ್ನಡೆಗೆ ಕಾರಣರಾದರು.

    ರಹಾನೆ ಈ ಕ್ಯಾಚ್ ಹಿಡಿಯಲು ಕಾರಣವಾಗಿದ್ದು ಕೊಹ್ಲಿಯ ಫೀಲ್ಡಿಂಗ್ ಪ್ಲಾನ್. ಬಲಗೈ ಬ್ಯಾಟ್ಸ್ ಮನ್ ಲ್ಯಾಬುಶಾನೆ ಎಡಭಾಗದಲ್ಲಿ ಎರಡು ಫೀಲ್ಡರ್ ಗಳ ಮಧ್ಯೆ ಬೌಂಡರಿ ಹೊಡೆದಿದ್ದರು. ಲ್ಯಾಬುಶಾನೆ ಎಡಭಾಗದಲ್ಲೇ ಹೆಚ್ಚು ಬ್ಯಾಟ್ ಬೀಸುತ್ತಿದ್ದಾರೆ ಎನ್ನುವುದನ್ನು ಅರಿತ ಕೊಹ್ಲಿ ಶಾರ್ಟ್ ಮಿಡ್ ವಿಕೆಟ್ ಬಳಿ ರಹಾನೆ ಅವರನ್ನು ನಿಲ್ಲಲು ಸೂಚಿಸಿದ್ದರು. ಶಮಿ ಅವರ ಮತ್ತೊಂದು ಎಸೆತದಲ್ಲಿ 38 ರನ್ ಗಳಿಸಿದ್ದ ಲ್ಯಾಬುಶಾನೆ ಅಂತಹದ್ದೆ ಹೊಡೆತ ಹೊಡೆಯಲು ಹೋಗಿ ರಹಾನೆಗೆ ಕ್ಯಾಚ್ ನೀಡಿ ಔಟಾದರು.

    ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 83.3 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿದೆ. ಹ್ಯಾರಿಸ್ 79 ರನ್, ಉಸ್ಮಾನ್ ಖವಾಜ 27 ರನ್, ಹೆಡ್ 20, ಹ್ಯಾಂಡ್ಸ್ ಕಾಂಬ್ ಔಟಾಗದೇ 28 ರನ್, ಪ್ಯಾಟ್ ಕಮ್ಮಿನ್ಸ್ ಔಟಾಗದೇ 25 ರನ್ ಗಳಿಸಿದ್ದಾರೆ.

    ಸಿಡ್ನಿ ಪಿಚ್ ಸ್ಪಿನ್ನರ್ ಗಳಿಗೆ ನೆರವಾಗಲಿದೆ ಎಂದು ಊಹಿಸಿದಂತೆ ಇಂದು ಕುಲ್‍ದೀಪ್ ಯಾದವ್ ವಿಕೆಟ್ ಪಡೆದರೆ, ಜಡೇಜಾ 2 ವಿಕೆಟ್ ಪಡೆದರು. ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗು ನೋಡ್ಕೊ ಅಂದ ಪೈನೆಗೆ ‘ಟೆಂಪರರಿ ಕ್ಯಾಪ್ಟನ್’ ಎಂದು ಟಾಂಗ್ ಕೊಟ್ಟ ರಿಷಬ್

    ಮಗು ನೋಡ್ಕೊ ಅಂದ ಪೈನೆಗೆ ‘ಟೆಂಪರರಿ ಕ್ಯಾಪ್ಟನ್’ ಎಂದು ಟಾಂಗ್ ಕೊಟ್ಟ ರಿಷಬ್

    – ಸೈಯದ್ ಕಿರ್ಮಾನಿ, ತಮ್ಹಾನೆ ದಾಖಲೆ ಸರಿಗಟ್ಟಿದ ಪಂತ್

    ಮೆಲ್ಬರ್ನ್: ಆಸೀಸ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಇತ್ತಂಡಗಳ ನಡುವಿನ ಆಟಗಾರರ ನಡುವಿನ ಸ್ಲೆಡ್ಜಿಂಗ್ ಮುಂದುವರೆದಿದ್ದು, 3ನೇ ದಿನದಾಟದ ವೇಳೆ ನನ್ನ ಮಕ್ಕಳನ್ನು ನೀಡ್ಕೊ ಎಂದು ಕಾಲೆಳೆದಿದ್ದ ಆಸೀಸ್ ನಾಯಕ ಟಿಮ್ ಪೈನೆರನ್ನು ತಾತ್ಕಾಲಿಕ ಕ್ಯಾಪ್ಟನ್ ಎಂದು ಕರೆಯುವ ಮೂಲಕ ಪಂತ್ ತಿರುಗೇಟು ನೀಡಿದ್ದಾರೆ.

    ಪಂದ್ಯದ 4ನೇ ದಿನದಾಟದ ವೇಳೆ ಬ್ಯಾಟಿಂಗ್ ಮಾಡಲು ಪೈನೆ ಆಗಮಿಸುತ್ತಿದಂತೆ ಮಯಾಂಕ್‍ರೊಂದಿಗೆ ಸಂಭಾಷಣೆ ಆರಂಭಿಸಿ ಕಾಲೆಳೆಯಲು ಮುಂದಾದ ಪಂತ್, ಇಂದು ನಮಗೇ ವಿಶೇಷ ದಿನವಾಗಿದ್ದು, ಆಸೀಸ್ ತಾತ್ಕಾಲಿಕ ಕ್ಯಾಪ್ಟನ್ ಬ್ಯಾಟಿಂಗ್‍ಗೆ ಆಗಮಿಸಿದ್ದಾರೆ. ಜವಾಬ್ದಾರಿ ರಹಿತ ನಾಯಕ ಎಂದು ಹೇಳುವ ಮೂಲಕ ಟಾಂಗ್ ನೀಡಿದರು.

    ಸತತವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಚೇತರಿಕೆ ನೀಡಲು ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಪೈನೆ ರನ್ನು ನಿರಂತರವಾಗಿ ಕಾಲೆಳೆಯುವುದನ್ನು ಮುಂದುವರೆಸಿದ ಪಂತ್, ತಾತ್ಕಾಲಿಕ ಕ್ಯಾಪ್ಟನ್ ಎಂಬುದನ್ನ ಕೇಳಿದ್ದೀರಾ? ತಾತ್ಕಾಲಿಕ ಕ್ಯಾಪ್ಟನ್ ಬಗ್ಗೆ ತಿಳಿದಿದ್ದೆಯಾ ಎಂದು ನಿರಂತರವಾಗಿ ಪ್ರಶ್ನೆ ಮಾಡುತ್ತಿದ್ದರು. ತಾತ್ಕಾಲಿಕ ಕ್ಯಾಪ್ಟನ್ ಕೇವಲ ಮಾತನಾಡಲು ಮಾತ್ರ ಬಯಸುತ್ತಾನೆ. ಅದನ್ನ ಮಾತ್ರ ಆತ ಮಾಡಲ್ಲ. ಕೇವಲ ಮಾತು ಮಾತು ಅಷ್ಟೇ ಎಂದು ಕಿಚಾಯಿಸಿದರು. ಪಂತ್ ನಿರಂತರ ಮಾತನ್ನು ಕಂಡ ಅಂಪೈರ್ ಓವರ್ ಮುಕ್ತಾಯದ ಬಳಿಕ ಪಂತ್ ರೊಂದಿಗೆ ಚರ್ಚೆ ನಡೆಸಿದರು.

    ಪಂದ್ಯದ 3ನೇ ದಿನದಾಟದ ವೇಳೆ ಧೋನಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿರುವುದನ್ನು ಪ್ರಸ್ತಾಪಿಸಿ ಕಾಲೆಳೆದಿದ್ದ ಪೈನೆ, ಬಿಗ್ ಬ್ಯಾಸ್ ಲೀಗ್ ಆಡುವಂತೆ ಸಲಹೆ ನೀಡಿದ್ದರು. ಅಲ್ಲದೇ ನಾನು ಪತ್ನಿಯೊಂದಿಗೆ ಸಿನಿಮಾಗೆ ತೆರಳಿದ ವೇಳೆ ತನ್ನ ಮಕ್ಕಳನ್ನು ನೋಡಿಕೋ ಎಂದು ಹೇಳಿದ್ದರು. ಇತ್ತ ಪಂತ್ ಮಾತುಗಳನ್ನೇ ಕೇಳುತ್ತಾ ಕುಳಿತಿದ್ದ ಪಂದ್ಯದ ವೀಕ್ಷಕ ವಿವರಣೆಗಾರರು ಏನು ಮಾತನಾಡದೆ ಸುಮ್ಮನೆ ಸಂಭಾಷಣೆಯನ್ನು ಕೇಳುತ್ತಿದ್ದರು. ಟೂರ್ನಿಯ ಆರಂಭಕ್ಕೂ ಮುನ್ನ ಸ್ಲೆಡ್ಜಿಂಗ್ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದ ಇತ್ತಂಡಗಳ ಆಟಗಾರರು ಸದ್ಯ ಪರಸ್ಪರ ಸ್ಲೆಡ್ಜಿಂಗ್ ಮಾಡುವುದಲ್ಲಿ ನಿರತರಾಗಿದ್ದಾರೆ.

    https://twitter.com/Karen_noronha09/status/1078892674462015488

    ಕಿರ್ಮಾನಿ, ನರೇನ್ ತಮ್ಹಾನೆ ದಾಖಲೆ: ಇತ್ತ ಪಂದ್ಯದಲ್ಲಿ ಪೈನೆ ಕ್ಯಾಚ್ ಪಡೆದ ರಿಷಬ್ ಪಂತ್ ಮತ್ತಷ್ಟು ಸಂಭ್ರಮ ಪಟ್ಟರು. ಒಟ್ಟಾರೆ ಟೂರ್ನಿಯಲ್ಲಿ ಇದುವರೆಗೂ 19 ಕ್ಯಾಚ್‍ಗಳನ್ನು ಪಡೆದಿರುವ ರಿಷಬ್ ಪಂತ್ ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮನಿ ಹಾಗೂ ನರೇನ್ ತಮ್ಹಾನೆ ದಾಖಲೆಯನ್ನು ಸರಿಗಟ್ಟಿದರು. ಈ ಹಿಂದೆ ಕಿರ್ಮಾನಿ, ತಮ್ಹಾನೆ ಅವರು ಟೆಸ್ಟ್ ಸರಣಿಯೊಂದರಲ್ಲಿ 19 ಕ್ಯಾಚ್ ಪಡೆದು ದಾಖಲೆ ಬರೆದಿದ್ದರು. ಇದರೊಂದಿಗೆ ಪಂತ್ 6 ಇನ್ನಿಂಗ್ಸ್ ಗಳಿಂದ 191 ರನ್ ಗಳಿಸಿದ್ದು, ಟೀಂ ಇಂಡಿಯಾದಲ್ಲಿ ಧೋನಿ ಬಳಿಕ ವಿಕೆಟ್ ಕೀಪರ್ ಸ್ಥಾನವನ್ನು ತುಂಬುವ ಸಮರ್ಥ ಆಟಗಾರ ಎಂಬ ಭರವಸೆಯನ್ನು ಮೂಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv