ಕೋಲ್ಕತ್ತಾ: ಲಕ್ನೋ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ವನಿಂದು ಹಸರಂಗ ಕ್ಯಾಚ್ ಹಿಡಿದು ಬಿಟ್ಟ ಬಳಿಕ ಈ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ.

ತೀವ್ರ ಪೈಪೋಟಿಯಿಂದ ಕೂಡಿದ್ದ ಬೆಂಗಳೂರು ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 207 ರನ್ ಪೇರಿಸಿತು. ಬಳಿಕ 208 ರನ್‍ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡದ ರಾಹುಲ್ ಮತ್ತು ದೀಪಕ್ ಹೂಡಾ ತಂಡದ ಗೆಲುವಿಗಾಗಿ ಭರ್ಜರಿ ಬ್ಯಾಟಿಂಗ್‍ಗೆ ಮುಂದಾದರು. ಈ ವೇಳೆ 10ನೇ ಓವರ್‌ನ 3ನೇ ಎಸೆತದಲ್ಲಿ ಹೂಡಾ ದೊಡ್ಡ ಹೊಡೆತಕ್ಕೆ ಮುಂದಾದರು. ಈ ವೇಳೆ ಬೌಂಡರಿ ಲೈನ್ ಪಕ್ಕದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹಸರಂಗ ಕ್ಯಾಚ್ ಹಿಡಿದು ನಿಯಂತ್ರಣ ಕಳೆದುಕೊಂಡು ಬಳಿಕ ಬಾಲ್ ಎಸೆದರು. ಆದರೆ ಬಾಲ್ ಹಸರಂಗ ಕೈನಲ್ಲಿ ಸೆಕೆಂಡ್‍ಗಳ ಕಾಲ ಹೋಲ್ಡ್ ಆಗಿತ್ತು. ಆದರೆ ಅಂಪೈರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ. ಇದನ್ನೂ ಓದಿ: ಸೋಲಿನ ಬಳಿಕ ನಾಯಕ ರಾಹುಲ್‌ನನ್ನು ದಿಟ್ಟಿಸಿದ ಗಂಭೀರ್ – ನೆಟ್ಟಿಗರಿಂದ ಟ್ರೋಲ್

ಇತ್ತ ಆರ್‌ಸಿಬಿ ಆಟಗಾರರು ಕೂಡ ಈ ಬಗ್ಗೆ ಹೆಜ್ಜೆ ಗಮನಹರಿಸಲಿಲ್ಲ. ಆದರೆ ಹಸರಂಗ ಕೈನಲ್ಲಿ ಬಾಲ್ ಕೆಲ ಸೆಕೆಂಡ್‍ಗಳ ಕಾಲ ಹೋಲ್ಡ್ ಆಗಿದ್ದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ನಾವು ಸೋಲಲು ಇದೇ ಕಾರಣ – ಬೇಸರ ವ್ಯಕ್ತಪಡಿಸಿದ ಕೆ.ಎಲ್ ರಾಹುಲ್
https://twitter.com/Indrabeing/status/1529518913352273921
ಐಸಿಸಿ ನಿಯಮವೇನು?
ಐಸಿಸಿ ನಿಯಮ 33.3 ಪ್ರಕಾರ ಕ್ಯಾಚ್ ಪ್ರಕ್ರಿಯೆಯು ಬಾಲ್ ಮೊದಲ ಬಾರಿಗೆ ಫೀಲ್ಡರ್ ಸಂಪರ್ಕಕ್ಕೆ ಬಂದಾಗಿನಿಂದ ಪ್ರಾರಂಭವಾಗುತ್ತದೆ. ಬಾಲ್ ಮತ್ತು ಫೀಲ್ಡರ್ ಸ್ವಂತ ಚಲನೆ ಮತ್ತು ಬಾಲ್ ಎರಡರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆದಾಗ ಕೊನೆಗೊಳ್ಳುತ್ತದೆ. ಈ ವೇಳೆ ಸ್ವಂತ ಚಲನೆ ಅಥವಾ ಬಾಲ್ ಮೇಲಿನ ನಿಯಂತ್ರಣ ಕಳೆದುಕೊಂಡರೇ ಇದು ಕ್ಯಾಚ್ ಎಂದು ಪರಿಗಣಿಸಲಾಗುವುದಿಲ್ಲ.

ಈ ನಿಯಮದ ಪ್ರಕಾರ ಹಸರಂಗ ಹಿಡಿದ ಕ್ಯಾಚ್ ನಾಟೌಟ್ ಎಂಬ ತೀರ್ಮಾನಕ್ಕೆ ಬಂತು. ಇತ್ತ ಫೀಲ್ಡಿಂಗ್‌ನಲ್ಲಿ ಮಿಂಚಿದ ಹಸರಂಗ 5 ರನ್‌ಗಳನ್ನು ಸೇವ್ ಮಾಡಿ ತಂಡದ ಗೆಲುವಿಗೆ ನೆರವಾದರು.
















