Tag: ಕ್ಯಾಂಡಿ

  • ಶ್ವಾನಕ್ಕಾಗಿ ಉಕ್ರೇನ್‍ನಲ್ಲಿ ಲಗೇಜ್ ಬಿಟ್ಟು ಬಂದ ವಿದ್ಯಾರ್ಥಿನಿ ಕೀರ್ತನಾ

    ಶ್ವಾನಕ್ಕಾಗಿ ಉಕ್ರೇನ್‍ನಲ್ಲಿ ಲಗೇಜ್ ಬಿಟ್ಟು ಬಂದ ವಿದ್ಯಾರ್ಥಿನಿ ಕೀರ್ತನಾ

    ಚೆನ್ನೈ: ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ ಅಂತ್ಯವಾಗುವ ಲಕ್ಷಣ ಕಾಣಿಸುತ್ತಿಲ್ಲ. ಈ ಮಧ್ಯೆ ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ತೆರಳಿರುವ ವಿದ್ಯಾರ್ಥಿಗಳು ವಾಪಸ್ ತಾಯ್ನಾಡಿಗೆ ಬರಲು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ತಾವು ಇಷ್ಟಪಟ್ಟು ಸಾಕಿರುವ ಶ್ವಾನಗಳನ್ನು ಕೂಡ ತಮ್ಮ ಜೊತೆ ಕರೆದುಕೊಂಡು ಬರಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಚೆನ್ನೈನ ವಿದ್ಯಾರ್ಥಿನಿಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ವಾಪಸ್ಸಾಗಿದ್ದಾರೆ.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಕೀರ್ತನಾ, ಸಾಕುಪ್ರಾಣಿಯನ್ನು ತರಲು ಅವಕಾಶ ನೀಡದ ಕಾರಣ ನಾನು ನಾಲ್ಕು ಬಾರಿ ವಿಮಾನ ರದ್ದುಗೊಳಿಸಬೇಕಾಯಿತು. ನಾನು ಎರಡು-ಮೂರು ದಿನಗಳವರೆಗೆ ಕಾದಿದ್ದೆ. ಕೊನೆಗೂ ರಾಯಭಾರ ಕಚೇರಿಯಿಂದ ನನಗೆ ಕರೆ ಬಂತು. ಅವರು ನನ್ನೊಂದಿಗೆ ಸಾಕುಪ್ರಾಣಿಯನ್ನು ಕರೆದೊಯ್ಯಲು ಅವಕಾಶ ನೀಡಿದರು ಎಂದು ತಿಳಿಸಿದರು. ಇದನ್ನೂ ಓದಿ: ಪರಮಾಣು ಘಟಕ ನಾಶಕ್ಕೆ ಉಕ್ರೇನ್‌ ಅಧ್ಯಕ್ಷರಿಂದ ರಷ್ಯಾ ಪ್ರಚೋದನೆ: ಉಕ್ರೇನ್‌ ಮಾಜಿ ಪಿಎಂ ಆರೋಪ

    ವಿಶೇಷ ಎಂದರೆ ಎರಡು ವರ್ಷದ ಪೆಕಿಂಗೀಸ್ ತಳಿಯ ನಾಯಿಮರಿ ಕ್ಯಾಂಡಿಯನ್ನು ತರುವುದಕ್ಕಾಗಿ ಕೀರ್ತನಾ ತಮ್ಮ ಲಗೇಜ್ ಗಳನ್ನು ಉಕ್ರೇನ್‍ನಲ್ಲಿಯೇ ಬಿಟ್ಟುಬಂದಿದ್ದಾರೆ. ಯಾಕೆಂದರೆ ನಾಯಿಮರಿ ಬೇಕಾದರೆ ಲಗೇಜ್ ಬಿಟ್ಟು ಬರಬೇಕಾಗಿತ್ತು. ಹೀಗಾಗಿ ಅಧಿಕಾರಿಗಳ ಷರತ್ತಿಗೆ ಒಪ್ಪಿದೆ. ನನಗೆ ಲಗೇಜ್‍ಗಿಂತ ನನ್ನ ಸಾಕುಪ್ರಾಣಿ ಮುಖ್ಯ ಎಂದು ಅದನ್ನೇ ಚೆನ್ನೈಗೆ ತಂದಿರುವೆ ಎಂದು ಕೀರ್ತನಾ ಹೇಳಿದರು. ಇದನ್ನೂ ಓದಿ: ನಿವಾಸದ ಮೇಲೆ ದಾಳಿ – ಉಕ್ರೇನ್ ಅಧ್ಯಕ್ಷ ಎಲ್ಲಿ ಅವಿತಿದ್ದಾರೆ?

    ಕೀರ್ತನಾ ತಮಿಳುನಾಡಿನ ಮೈಲಾಡುತುರೈ ನಿವಾಸಿಯಾಗಿದ್ದು, ಉಕ್ರೇನ್‍ನ ಉಜ್ಹೋರೋಡ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ 5ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ. ಈ ಹಿಂದೆ ಕೀರ್ತನಾ ಅವರು, ಕ್ಯಾಂಡಿಯನ್ನು ಬಿಟ್ಟು ಬರಲು ಒಪ್ಪಿರಲಿಲ್ಲ. ಇದೀಗ ಭಾರತೀಯ ರಾಯಭಾರ ಕಚೇರಿಯು ಕ್ಯಾಂಡಿಯನ್ನು ಕರೆದೊಯ್ಯಲು ಅವಕಾಶ ನೀಡುವವರೆಗೆ ತಾನು ತಯ್ನಾಡಿಗೆ ತೆರಳಲ್ಲ ಎಂದು ಪಟ್ಟು ಹಿಡಿದಿದ್ದರು.

    ಇತ್ತ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ‘ಆಪರೇಷನ್ ಗಂಗಾ’ ಭಾಗವಾಗಿ ಸರ್ಕಾರವು ಹಲವಾರು ವಿಶೇಷ ವಿಮಾನಯಾನ ಸಂಸ್ಥೆಗಳನ್ನು ಸೇವೆಗೆ ನಿಯೋಜಿಸಿವೆ. ಅಂತೆಯೇ ಶನಿವಾರ ಕೀರ್ತನಾ ‘ಕ್ಯಾಂಡಿ’ ಜೊತೆಗೆ ಚೆನ್ನೈ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಆ ವೇಳೆ ತಮ್ಮ ಕುಟುಂಬ ಸದಸ್ಯರಿಂದ ಭಾವನಾತ್ಮಕ ಸ್ವಾಗತ ಪಡೆದರು.

  • ಕ್ಯಾಂಡಿ ತಿನ್ನೋ ಸ್ಪರ್ಧೆಯಲ್ಲಿ  ಸಖತ್ ಟ್ರಿಕ್ ಬಳಸಿ ಎದುರಾಳಿಯನ್ನ ಸೋಲಿಸಿದ್ಳು- ವೈರಲ್ ವಿಡಿಯೋ

    ಕ್ಯಾಂಡಿ ತಿನ್ನೋ ಸ್ಪರ್ಧೆಯಲ್ಲಿ ಸಖತ್ ಟ್ರಿಕ್ ಬಳಸಿ ಎದುರಾಳಿಯನ್ನ ಸೋಲಿಸಿದ್ಳು- ವೈರಲ್ ವಿಡಿಯೋ

    ನವದೆಹಲಿ: ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದ ಬಳಿಕ ದೇಶ ವಿದೇಶಗಳಲ್ಲಿ ನಡೆಯುವ ಸಣ್ಣ ಘಟನೆಗಳನ್ನು ಎಲ್ಲರೂ ಗಮಸಿಲು ಆರಂಭಿಸಿದ್ದಾರೆ. ಇಂತಹ ಘಟನೆಗಳಲ್ಲಿ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತದೆ. ಇತಂಹದ್ದೇ ವಿಡಿಯೋ ಇಲ್ಲಿದೆ.

    `ಐ ಆಮ್ ದಿ ವಿನ್ನರ್’ ಎಂಬ ಟಿವಿ ಕಾರ್ಯಕ್ರಮವೊಂದರ ನಿರೂಪಕರ ಮಧ್ಯೆ ಕ್ಯಾಂಡಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಬ್ಬರು ಕ್ಯಾಂಡಿ ತಿನ್ನಲು ಸಿದ್ಧರಾಗಿದ್ದರು. ಆದರೆ ಸ್ಪರ್ಧೆಯಲ್ಲಿ ಗೆಲುವು ಪಡೆಯಲು ಆ್ಯಂಕರ್ ಕ್ಯಾಂಡಿಯನ್ನು ಒಂದೇ ಬಾರಿಗೆ ಸಣ್ಣ ಉಂಡೆ ಮಾಡಿ ಬಾಯಿಗೆ ತುರುಕಿಕೊಂಡರು.

    ಈ ವೇಳೆ ಆ್ಯಂಕರ್ ಸಮಯ ಪ್ರಜ್ಞೆಯನ್ನು ಕಂಡ ಎಲ್ಲರು ಪ್ರಶಂಸೆ ವ್ಯಕ್ತಪಡಿಸಿರು. ಆದರೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಮಾತ್ರ ಅಚ್ಚರ್ಯದಿಂದ ನಿಂತು ಬಿಟ್ಟ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ಪರ್ಧೆಯಲ್ಲಿ ಆ್ಯಂಕರ್ ಕ್ರಿಯೇಟಿವಿಟಿ ಹಾಗೂ ಜಾಣ್ಮೆ ನೋಡಿದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=u_V8i428LY8

  • ಭಾರತಕ್ಕೆ ಸರಣಿ: ಲಂಕಾ ಆಟಗಾರರ ವಿರುದ್ಧ ರೊಚ್ಚಿಗೆದ್ದ ಪ್ರೇಕ್ಷಕರು

    ಭಾರತಕ್ಕೆ ಸರಣಿ: ಲಂಕಾ ಆಟಗಾರರ ವಿರುದ್ಧ ರೊಚ್ಚಿಗೆದ್ದ ಪ್ರೇಕ್ಷಕರು

    ಕ್ಯಾಂಡಿ: ಶ್ರೀಲಂಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಜಯಗಳಿಸುವ ಮೂಲಕ ಇನ್ನು 2 ಪಂದ್ಯ ಬಾಕಿ ಇರುವಂತೆಯೇ ಮೈಕ್ರೋಮ್ಯಾಕ್ಸ್ ಸರಣಿಯನ್ನು ಜಯಗಳಿಸಿದೆ.

    218 ರನ್‍ಗಳ ಸುಲಭ ಸವಾಲನ್ನು ಪಡೆದ ಭಾರತ ರೋಹಿತ್ ಶರ್ಮಾ ಅವರ ಆಕರ್ಷಕ ಶತಕ, ಧೋನಿ ಅರ್ಧಶತಕ ದಿಂದಾಗಿ ಜಯಗಳಿಸಿತು.

    44 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದ್ದಾಗ ಶ್ರೀಲಂಕಾ ಆಟಗಾರರ ಕಳಪೆ ಪ್ರದರ್ಶನಕ್ಕೆ ರೊಚ್ಚಿಗೆದ್ದ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಾಟಲಿಗಳನ್ನು ಎಸೆದು ಆಕ್ರೋಶವನ್ನು ವ್ಯಕ್ತಪಡಿಸಿದರು. ಬೌಂಡರಿ ಗೆರೆಯ ಬಳಿ ಬಾಟಲಿಗಳನ್ನು ಎಸೆದ ಹಿನ್ನೆಲೆಯಲ್ಲಿ ರೆಫ್ರಿ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದರು.

    ಈ ವೇಳೆ ಬಾಟಲಿಗಳನ್ನು ಎಸೆದ ಸ್ಥಳದಲ್ಲಿದ್ದ ಪ್ರೇಕ್ಷಕರನ್ನು ಖಾಲಿ ಮಾಡಿದ ನಂತರ ಪಂದ್ಯ ಮತ್ತೆ 35 ನಿಮಿಷದ ಬಳಿಕ ಆರಂಭವಾಯಿತು. ಅಂತಿಮವಾಗಿ 45.1 ಓವರ್ ಗಳಲ್ಲಿ 218 ರನ್ ಹೊಡೆಯುವ ಮೂಲಕ ಭಾರತ ಪಂದ್ಯವನ್ನು ಗೆದ್ದುಕೊಂಡಿತು.

    15.1 ಓವರ್ ಗಳಲ್ಲಿ 61 ರನ್ ಗಳಿಸಿದ್ದಾಗ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ರೋಹಿತ್ ಶರ್ಮಾ ಮತ್ತು ಧೋನಿ ಮುರಿಯದ 5ನೇ ವಿಕೆಟ್‍ಗೆ 157 ರನ್ ಜೊತೆಯಾಟವಾಡುವ ಮೂಲಕ ಭಾರತಕ್ಕೆ ವಿಜಯವನ್ನು ತಂದಿಟ್ಟರು.

    50 ಎಸೆತದಲ್ಲಿ ಅರ್ಧಶತಕ ಹೊಡೆದ ರೋಹಿತ್ 118 ಎಸೆತದಲ್ಲಿ ಕ್ರಿಕೆಟ್ ಬಾಳ್ವೆಯ 12 ನೇ ಶತಕ ಹೊಡೆದರು. ಅಂತಿಮವಾಗಿ ರೋಹಿತ್ ಶರ್ಮಾ 124 ರನ್(145 ಎಸೆತ, 16 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೇ ಉಳಿದರು. 74 ಎಸೆತದಲ್ಲಿ ಅರ್ಧಶತ ಹೊಡೆದ ಧೋನಿ ಅಂತಿಮವಾಗಿ 67ರನ್(86 ಎಸೆತ, 4 ಬೌಂಡರಿ, 1ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಲಂಕಾವನ್ನು ಬೂಮ್ರಾ ಕಟ್ಟಿ ಹಾಕಿದ್ದ ಪರಿಣಾಮ 9 ವಿಕೆಟ್ ನಷ್ಟಕ್ಕೆ 217 ರನ್‍ಗಳಿಸಿತು. ಲಂಕಾ ಪರ ತಿರಮಣೆ 80 ರನ್(105 ಎಸೆತ, 5 ಬೌಂಡರಿ, 1 ಸಿಕ್ಸರ್) ಆರಂಭಿಕ ಆಟಗಾರ ದಿನೇಶ್ ಚಾಂಡಿಮಲ್ 36 ರನ್, ಶ್ರೀವರ್ಧನ 29 ರನ್ ಹೊಡೆದರು.

    ಭಾರತದ ಪರ ಜಸ್‍ಪ್ರಿತ್ ಬುಮ್ರಾ 27 ರನ್ ನೀಡಿ 5 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯಾ, ಅಕ್ಷರ್ ಪಟೇಲ್, ಕೇದಾರ್ ಜಾದವ್ ತಲಾ ಒಂದೊಂದು ವಿಕೆಟ್ ಪಡೆದರು.

     

    https://twitter.com/i_m_odd/status/901849873892261888

     

    https://twitter.com/Priya0304/status/901854358366707713