Tag: ಕ್ಯಾಂಡಲ್

  • ರೊಮ್ಯಾಂಟಿಕ್ ಪ್ರಪೋಸ್‍ಗಾಗಿ 100 ಮೊಂಬತ್ತಿ ಹಚ್ಚಿದ- ಗೆಳತಿ ಬರೋಷ್ಟರಲ್ಲಿ ಸುಟ್ಟು ಕರಕಲಾಯ್ತು ಮನೆ

    ರೊಮ್ಯಾಂಟಿಕ್ ಪ್ರಪೋಸ್‍ಗಾಗಿ 100 ಮೊಂಬತ್ತಿ ಹಚ್ಚಿದ- ಗೆಳತಿ ಬರೋಷ್ಟರಲ್ಲಿ ಸುಟ್ಟು ಕರಕಲಾಯ್ತು ಮನೆ

    – ಭಯಾನಕ ಪ್ರಪೋಸ್ ಎಂದ ನೆಟ್ಟಿಗರು

    ಲಂಡನ್: ಪ್ರೇಮಿಯೊಬ್ಬ ಪ್ರಪೋಸ್ ಮಾಡಲು ನೂರಕ್ಕೂ ಅಧಿಕ ಮೊಂಬತ್ತಿ ಬೆಳಗಿದ್ದರಿಂದ ಮನೆಯೇ ಸುಟ್ಟು ಕರಕಲಾಗಿರುವ ಘಟನೆ ಸೌಥ್ ಯಾರ್ಕಶೈರ್ ನಲ್ಲಿ ನಡೆದಿದೆ. ಮನೆಯಲ್ಲಿರುವ ವಸ್ತುಗಳು ಸುಟ್ಟು ಕರಕಲಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರು ಭಯಾನಕ ಮದುವೆ ಪ್ರಪೋಸ್ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಯಾರ್ಕಶೈರ್ ನ ಯುವಕನೋರ್ವ ಗೆಳತಿಗೆ ಪ್ರಪೋಸ್ ಮಾಡಲು ಮನೆಯನ್ನ ನೂರಕ್ಕೂ ಅಧಿಕ ಟೀ ಲೈಟ್ಸ್ ಮತ್ತು ಕ್ಯಾಂಡಲ್ ಗಳಿಂದ ಅಲಂಕರಿಸಿದ್ದಾನೆ. ಕ್ಯಾಂಡಲ್ ಜೊತೆ ಬಣ್ಣ ಬಣ್ಣದ ಬಲೂನ್ ಸಹ ಜೋಡಿಸಿದ್ದಾನೆ. ಮನೆಯ ಕೋಣೆ ಸಿದ್ಧಗೊಳ್ಳುತ್ತಿದ್ದಂತೆ ಗೆಳತಿಯನ್ನು ಕರೆತರಲು ತೆರಳಿದ್ದಾನೆ.

    ಇತ್ತ ಯುವಕ ಹೋಗ್ತಿದ್ದಂತೆ ರೊಮ್ಯಾಂಟಿಕ್ ಪ್ರಪೋಸ್ ಗಾಗಿ ತಯಾರಾಗಿದ್ದ ಕೋಣೆ ಬೆಂಕಿಗಾಹುತಿಯಾಗಿದೆ. ಕೋಣೆಯಲ್ಲಿ ಟೀ ಲೈಟ್ಸ್ ಮತ್ತು ಮೇಣದ ಬತ್ತಿ ಪಕ್ಕದಲ್ಲಿರಿಸಿದ್ದರಿಂದ ಬೆಂಕಿ ಹತ್ತಿಕೊಂಡಿದೆ ಎಂದು ವರದಿಯಾಗಿದೆ.

    ಇನ್ನು ಗೆಳತಿಯನ್ನ ಕರೆದುಕೊಂಡು ಬರುವಷ್ಟರಲ್ಲಿ ಮನೆಯ ಬೆಂಕಿಗಾಹುತಿಯಾಗಿದ್ದನು ಕಂಡು ಯುವಕ ಶಾಕ್ ಆಗಿದ್ದಾನೆ. ಗೆಳೆಯನ ಪ್ರಪೋಸಲ್ ಯುವತಿ ಒಪ್ಪಿಕೊಂಡಿದ್ದು, ಜೋಡಿ ಮದುವೆಯ ಸಿದ್ಧತೆಯಲ್ಲಿದ್ದಾರೆ. ಮನೆಯನ್ನು ಕ್ಯಾಂಡಲ್ ಬಳಸಿ ಅಲಂಕರಿಸುವಾಗ ಎಚ್ಚರದಿಂದ ಇರಬೇಕೆಂದು ಯಾರ್ಕಶೈರ್ ಅಗ್ನಿಶಾಮಕದ ದಳ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದೆ.

  • ಬಿಜೆಪಿ ಯುವ ಮೋರ್ಚಾದಿಂದ ರೇವಣ್ಣಗೆ ಕ್ಯಾಂಡಲ್ ರವಾನೆ

    ಬಿಜೆಪಿ ಯುವ ಮೋರ್ಚಾದಿಂದ ರೇವಣ್ಣಗೆ ಕ್ಯಾಂಡಲ್ ರವಾನೆ

    – ಹೊಳೆನರಸೀಪುರ ವಿಳಾಸಕ್ಕೆ ಸ್ಪೀಡ್ ಪೋಸ್ಟ್

    ದಾವಣಗೆರೆ: ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಗಡಿಯಾರ ಕಂಬದ ಬಳಿಯಿರುವ ಪ್ರಧಾನ ಅಂಚೆ ಕಚೇರಿಯಿಂದ ಶಾಸಕರಾದ ಹೆಚ್.ಡಿ ರೇವಣ್ಣ ಅವರ ವಿಳಾಸಕ್ಕೆ ಕ್ಯಾಂಡಲ್ ಬಾಕ್ಸನ್ನು ಸ್ಪೀಡ್ ಪೋಸ್ಟ್ ಮಾಡಿದ್ದಾರೆ.

    ಈ ವೇಳೆ ಮಾತನಾಡಿದ ಯುವಮೋರ್ಚಾ ಅಧ್ಯಕ್ಷ ಶಿವನಗೌಡ ಪಾಟೀಲ್, ಪ್ರಧಾನಿ ಮೋದಿ ಅವರ ದೀಪದ ಕರೆಗೆ ಪರೋಕ್ಷವಾಗಿ ಓಗೊಟ್ಟಿರುವ ರೇವಣ್ಣ ಅವರಿಗೆ ನಮ್ಮ ಧನ್ಯವಾದಗಳು. ದೇಶ ವ್ಯಾಪ್ತಿ ಲಾಕ್‍ಡೌನ್ ಇರುವುದರಿಂದ ಮೇಣದ ಬತ್ತಿ ತರಲು ಹೊರಗೆ ಹೋದರೆ ಲಾಠಿ ಚಾರ್ಜ್ ಮಾಡುತ್ತಾರೆ ಎಂದು ಅಸಹಾಯಕತೆ ತೋರಿರುವುದು ನಮಗೆ ಗೊತ್ತಾಯಿತು ಎಂದು ಹೇಳಿದರು.

    ಇಲ್ಲಿಯ ಮಣ್ಣಿನ ಕಣಕಣದಲ್ಲೂ ದೈವ ಸಾಕ್ಷಾತ್ಕಾರದ ಶಕ್ತಿ ಇದೆ. ಇಂತಹ ಪಾವನ ಮಣ್ಣಿನಲ್ಲಿ ಮನಃಪೂರ್ವಕವಾಗಿ ದೀಪ ಬೆಳಗುವ ಪ್ರಕ್ರಿಯೇ ನಿಜಕ್ಕೂ ದೈವ ಸಾಕ್ಷಾತ್ಕಾರದ ಸಮಾನ. ಸ್ವಾತಂತ್ರ್ಯ ಭಾರತದ ನಂತರ ಭಾರತೀಯರೆಲ್ಲರೂ ದೇಶದ ಒಳತಿಗಾಗಿ, ದೇಶದ ಜನರ ಪ್ರಾಣ ರಕ್ಷಣೆಗಾಗಿ ಪ್ರಧಾನಿಯವರ ಕರೆ ಯಶಸ್ವಿಯಾಗಬೇಕಾದರೆ ರೇವಣ್ಣರ ದೈವ ಭಕ್ತರ ಸಹಕಾರವೂ ಅತ್ಯವಶ್ಯಕ. ಆದ್ದರಿಂದ ಅವರ ಅಸಾಹಯಕತೆಯನ್ನು ಮನಗಂಡು ಹೊಳೆನರಸೀಪುರ ಮನೆಯ ವಿಳಾಸಕ್ಕೆ ಮೇಣದ ಬತ್ತಿ ಪ್ಯಾಕೆಟ್‍ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುತ್ತಿದ್ದೇವೆ ಎಂದಿದ್ದಾರೆ.

    ತಾವು ಕುಟುಂಬ ಪರಿವಾರ ಸಮೇತರಾಗಿ ನಿರ್ಮಲ ಮನಸ್ಸಿನಿಂದ ದೇಶಕ್ಕೆ ಬಂದ ಕೊರೊನಾ ಕಂಟಕ ಹೊಡೆದೊಡಿಸಲು ನಮ್ಮ ಪ್ರಧಾನಿ ಅವರ ದೀಪ ಪ್ರಜ್ವಲನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಅಲ್ಲದೇ ತಮ್ಮ ಪಕ್ಷದ ಯಾವುದಾದರೂ ಶಾಸಕರುಗಳು ಈ ಅಸಹಾಯಕತೆಯ ಅಳಲನ್ನು ತಮ್ಮ ಮುಂದೆ ತೋಡಿಕೊಂಡಿದ್ದರೆ ನಮಗೆ ತಿಳಿಸಿ. ನಾವು ಅವರಿಗೂ ಕಳುಹಿಸಿ ಕೊಡಲು ಸಿದ್ಧರಿದ್ದೇವೆ ಎಂದು ಯುವಮೋರ್ಚಾ ಕಾರ್ಯಕರ್ತರು ತಿಳಿಸಿದ್ದಾರೆ.

  • ಸ್ಟೈಫಂಡ್‍ಗಾಗಿ ಕ್ಯಾಂಡಲ್ ಹಿಡಿದು ಪ್ರತಿಭಟಿಸಿದ ವೈದ್ಯಕೀಯ ವಿದ್ಯಾರ್ಥಿಗಳು

    ಸ್ಟೈಫಂಡ್‍ಗಾಗಿ ಕ್ಯಾಂಡಲ್ ಹಿಡಿದು ಪ್ರತಿಭಟಿಸಿದ ವೈದ್ಯಕೀಯ ವಿದ್ಯಾರ್ಥಿಗಳು

    ದಾವಣಗೆರೆ: ಜಿಲ್ಲಾಸ್ಪತ್ರೆಯ ವೈದ್ಯ ವಿದ್ಯಾರ್ಥಿಗಳು ಶಿಷ್ಯ ವೇತನಕ್ಕಾಗಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ವಿದ್ಯಾರ್ಥಿಗಳು ಕ್ಯಾಂಡಲ್ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

    ರಾಜ್ಯ ಸರ್ಕಾರ 8 ತಿಂಗಳ ಶಿಷ್ಯ ವೇತನವನ್ನು ನೀಡದ್ದರಿಂದ ಕಳೆದ ಎರಡು ದಿನಗಳಿಂದ 235 ವೈದ್ಯ ವಿದ್ಯಾರ್ಥಿಗಳು ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಮುಂಭಾಗ ಪೆಂಡಲ್ ಹಾಕಿ ಪ್ರತಿಭಟನೆ ನಡೆಸುತ್ತಿದ್ದರು. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೂ, ರಾಜ್ಯ ಸರ್ಕಾರ ಇದಕ್ಕೂ ನಮಗೂ, ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿ ಕುಳಿತುಕೊಂಡಿದೆ.

    ಅಸಮಾಧಾನಗೊಂಡಿದ್ದ ವಿದ್ಯಾರ್ಥಿಗಳು ಇಂದು ಕ್ಯಾಂಡಲ್ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ, ನಗರದ ಪ್ರಮುಖ ಬೀದಿಗಳಲ್ಲಿ ಕ್ಯಾಂಡಲ್ ಹಿಡಿದು ಪ್ರತಿಭಟನೆಯನ್ನು ನಡೆಸಿದವು. ಕೂಡಲೇ ಸರ್ಕಾರ ಸಮಸ್ಯೆಯನ್ನು ಬಗೆಹರಿಸಿ, ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನ ನೀಡುವವರೆಗೂ, ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲವೆಂದು ಇದೇ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇಕ್ ಕಟ್ ಮಾಡಿ ಜೈಲಿನಲ್ಲೇ ಅದ್ಧೂರಿಯಾಗಿ ಬರ್ತ್ ಡೇ ಆಚರಣೆ- ವಿಡಿಯೋ ನೋಡಿ

    ಕೇಕ್ ಕಟ್ ಮಾಡಿ ಜೈಲಿನಲ್ಲೇ ಅದ್ಧೂರಿಯಾಗಿ ಬರ್ತ್ ಡೇ ಆಚರಣೆ- ವಿಡಿಯೋ ನೋಡಿ

    ಲಕ್ನೋ: ವಿಚಾರಣಾಧೀನ ಕೈದಿಯೊಬ್ಬ ಉತ್ತರಪ್ರದೇಶದ ಜೈಲಿನಲ್ಲಿಯೇ ಕ್ಯಾಂಡಲ್ ಉರಿಸಿ, ಕೇಕ್ ಕಟ್ ಮಾಡುವ ಮೂಲಕ ಅದ್ಧೂರಿಯಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ.

    ಶಿವೇಂದ್ರ ಸಿಂಗ್ ಹುಟ್ಟು ಹಬ್ಬ ಆಚರಿಸಿಕೊಂಡ ಕೈದಿಯಾಗಿದ್ದು, ಈತ ಕೊಲೆ ಪ್ರಕರಣದ ಆರೋಪದಲ್ಲಿ ಉತ್ತರ ಪ್ರದೇಶದ ಜೈಲಿಗೆ ಸೇರಿದ್ದಾನೆ. ಇದೇ ಜುಲೈ 23ರಂದು ಈತನ ಹುಟ್ಟಿದ ದಿನವಾಗಿದ್ದು, ಅಂದು ಕೇಕ್ ಮಾಡಿ ಇತರರಿಗೆ ತಿನ್ನಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಲೆ ಪ್ರಕರಣ ಸಂಬಂಧ ಕೋರ್ಟ್ ಗೆ ಹೋಗೋದಕ್ಕೂ ಮೊದಲು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಿವೇಂದ್ರ, ಹುಟ್ಟು ಹಬ್ಬ ಆಚರಣೆ ಮಾಡಲು ಜೈಲಿನಲ್ಲಿರೋ ವಿನಯ್ ಕುಮಾರ್ ನನಗೆ ಅವಕಾಶ ಮಾಡಿಕೊಟ್ಟರು. ಅಲ್ಲದೇ ವಿನಯ್ ಸಿಬ್ಬಂದಿಯೇ ವಿಡಿಯೋ ಮಾಡಿದ್ದಾರೆ. ಆದ್ರೆ ಬೇರೆ ಸಿಬ್ಬಂದಿ ಈ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಸದ್ಯ ಹುಟ್ಟುಹಬ್ಬ ಆಚರಣೆ ಮಾಡಿದ್ದಕ್ಕಾಗಿ 1 ಲಕ್ಷ ರೂ. ನನ್ನಿಂದ ಪಡೆದಿದ್ದಾರೆ. ಅಲ್ಲದೇ ಆ ಬಳಿಕ ಜೈಲಿನಲ್ಲಿ ನನಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಅಂತ ಹೇಳಿದ್ದಾನೆ.

    ನನ್ನ ಹುಟ್ಟು ಹಬ್ಬ ಆಚರಿಸಲು ಚಾಕು, ಲೈಟರ್ ಮತ್ತು ಕ್ಯಾಂಡಲ್ಸ್ ಮುಂತಾದ ವಸ್ತುಗಳು ಕೂಡ ಲಭ್ಯವಿದ್ದವು ಅಂತ ಆತ ಬಾಯ್ಬಿಟ್ಟಿದ್ದಾನೆ. ಆಚರಣೆಯ 5 ನಿಮಿಷದ ಬಳಿಕ ಫಯಾಜಾಬಾದ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಹಾಗೂ ಪೊಲೀಸರು ಜೈಲಿಗೆ ದಾಳಿ ಮಾಡಿದ್ದರು. ಆದ್ರೆ ಅದಾಗಲೇ ಕೈದಿಗಳ ಮೂಲಕ ಜೈಲು ಸಿಬ್ಬಂದಿ ಎಲ್ಲಾ ವಸ್ತುಗಳನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಹಣ ಕೊಟ್ರೆ ಮೊಬೈಲ್ ಕೂಡ ಜೈಲಿನೊಳಗೆ ತೆರಲುಅ ನುಮತಿ ನೀಡುತ್ತಾರೆ ಅಂತ ಇದೇ ವೇಳೆ ಶಿವೇಂದ್ರ ಆರೋಪಿಸಿದ್ದಾನೆ.

    ವಕೀಲ ಮರ್ತಾಂಡ ಪ್ರತಾಪ್ ಸಿಂಗ್ ಘಟನೆಯ ಬಳಿಕ ಜೈಲಿನ ಹೊರಗೆ ಸಿಪಾಯಿಗಳ ಮನೆಯಲ್ಲಿ ಬರ್ತ್ ಡೇ ಆರಣೆ ನಡೆದಿದೆ ಅಂತ ಖಚಿತಪಡಿಸಿಕೊಂಡಿದ್ದಾರೆ. ಅಲ್ಲದೇ ಪ್ರತೀ ತಿಂಗಳು ಇಂತಹ ಸೌಲಭ್ಯಗಳನ್ನು ಕಲ್ಪಿಸಲು ಜೈಲಿನವರು 1 ಲಕ್ಷ ರೂ. ಬೇಡಿಕೆಯಿಡುತ್ತಾರೆ. ಆದ್ರೆ ಇಷ್ಟೊಂದು ಹಣ ನಿಡಲು ಶಿವೇಂದ್ರ ನಿರಾಕರಿಸಿದ್ದಾನೆ. ಹೀಗಾಗಿ ಆತನಿಗೆ ಬೆದರಿಕೆ ಹಾಕಿ ಘಟನೆಯನ್ನು ಹರಿದಾಡಿಸುವ ಮೂಲಕ ಕೇಸ್ ದಾಖಲಿಸಿದ್ದಾರೆ ಅಂತ ಅವರು ತಿಳಿಸಿದ್ದಾರೆ.

  • 1 ನಿಮಿಷದಲ್ಲಿ 20 ಉರಿಯುವ ಕ್ಯಾಂಡಲ್ ಬಾಯಲ್ಲಿ ಇಟ್ಟುಕೊಂಡ್ರು!

    1 ನಿಮಿಷದಲ್ಲಿ 20 ಉರಿಯುವ ಕ್ಯಾಂಡಲ್ ಬಾಯಲ್ಲಿ ಇಟ್ಟುಕೊಂಡ್ರು!

    ಮೈಸೂರು: ಒಂದು ನಿಮಿಷದಲ್ಲಿ 20 ಉರಿಯುವ ಕ್ಯಾಂಡಲ್ ಬಾಯಲ್ಲಿ ಇಟ್ಟುಕೊಂಡು ಲಿಮ್ಕಾ ಹಾಗೂ ಗಿನ್ನಿಸ್ ದಾಖಲೆಗೆ ಸೇರುವ ಯತ್ನ ನಗರದಲ್ಲಿ ನಡೆದಿದೆ.

    ಜಿಲ್ಲೆಯ ವಿದ್ಯಾರಣ್ಯಪುರಂ ನಿವಾಸಿ ಶಿವಕುಮಾರ್ ಅವರು ಲಿಮ್ಕಾ ಮತ್ತು ಗಿನ್ನಿಸ್ ದಾಖಲೆ ಸೇರುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಗೋರೆಗಾಂವ್ ನ ದಿನೇಶ್ ಶಿವನಾಥ್ ಉಪಾಧ್ಯಾಯರವರ ದಾಖಲೆ ಮುರಿಯಲು ಮುಂದಾಗಿದ್ದಾರೆ.

    ಮೈಸೂರಿನ ಪತ್ರಕರ್ತರ ಭವನದಲ್ಲಿ ಶಿವಕುಮಾರ್ ಈ ಸಾಹಸವನ್ನು ಪ್ರದರ್ಶಿಸಿದ್ದಾರೆ. 2008 ರಲ್ಲಿ ಅಂಗೈಯಲ್ಲಿ 24 ಕೋಳಿ ಮೊಟ್ಟೆಗಳನ್ನು ಇಟ್ಟುಕೊಂಡು ಲಿಮ್ಕಾ ದಾಖಲೆಗೆ ಸೇರಿದ್ದ ಶಿವಕುಮಾರ್, 2009 ರಲ್ಲಿ ಬಾಯಲ್ಲಿ 280 ಸ್ಟ್ರಾಗಳನ್ನು ಹಾಗೂ 2011 ರಲ್ಲಿ ಬಾಯಲ್ಲಿ 145 ಸಿಗರೇಟ್ ಗಳನ್ನು ಇಟ್ಟುಕೊಂಡು ಲಿಮ್ಕಾ ದಾಖಲೆ ಮಾಡಲು ಯತ್ನಿಸಿದ್ದರು.

    ಇದೀಗ 20 ಕ್ಯಾಂಡಲ್ ಗಳನ್ನು ಬಾಯಲ್ಲಿ ಇಟ್ಟುಕೊಂಡು ದಾಖಲೆ ಬರೆಯಲು ಮುಂದಾಗಿದ್ದಾರೆ. 15 ಕ್ಯಾಂಡಲ್ ಗಳನ್ನು 30 ಸೆಕೆಂಡ್ ಗಳ ಕಾಲ ಇಟ್ಟುಕೊಂಡು ಗಿನ್ನೆಸ್ ದಾಖಲೆ ನಿರ್ಮಿಸಿರುವ ಮುಂಬಯಿಯ ದಿನೇಶ್ ಶಿವನಾಥ್ ಉಪಾಧ್ಯಾಯ ಅವರ ದಾಖಲೆ ಮುರಿಯಲು ಶಿವಕುಮಾರ್ ಸಿದ್ಧರಾಗಿದ್ದಾರೆ.

  • ನೀವೆಂದೂ ನೋಡಿರದ ಕ್ಯಾಂಡಲ್‍ಗಳು, ಒಮ್ಮೆ ನೋಡಿದರೆ ನೀವೇ ತೆಗೆದುಕೊಳ್ಳೋಕೆ ಹೋಗ್ತಿರಾ !

    ನೀವೆಂದೂ ನೋಡಿರದ ಕ್ಯಾಂಡಲ್‍ಗಳು, ಒಮ್ಮೆ ನೋಡಿದರೆ ನೀವೇ ತೆಗೆದುಕೊಳ್ಳೋಕೆ ಹೋಗ್ತಿರಾ !

    ಮಡಿಕೇರಿ: ಎಲ್ಲೆಲ್ಲೂ ದೀಪಾವಳಿ ಸಂಭ್ರಮ ಮನೆಮಾಡಿದೆ. ದೀಪಗಳನ್ನು ಬೆಳಗಿಸೋ ಮೂಲಕ ಸಂಭ್ರಮಿಸುತ್ತಿರೋರಿಗೆ ಕ್ಯಾಂಡಲ್ ದೀಪಗಳೂ ಕೈಬೀಸಿ ಕರೆಯುತ್ತಿವೆ. ಬಣ್ಣ ಬಣ್ಣದ ವೆರೈಟಿ ವೆರೈಟಿ ಕ್ಯಾಂಡಲ್ ಗಳೂ ದೀಪಾವಳಿಗಾಗಿ ಸಿದ್ದಗೊಂಡಿದ್ದು ಗ್ರಾಹಕರ ಮನಸ್ಸಿಗೆ ಇಷ್ಟವಾಗೂ ಎಲ್ಲ ರೀತಿಯ ಮೊಂಬತ್ತಿಗಳು ಒಮ್ಮೆ ನೋಡಿದರೆ ಬಿಟ್ಟು ಹೋಗೊ ಮನಸ್ಸಾಗುವುದಿಲ್ಲ.

    ಹೌದು, ಕೊಡಗು ಜಿಲ್ಲೆ ವಿರಾಜಪೇಟೆಯಿಂದ ಗೋಣಿಕೊಪ್ಪಾಗೆ ಹೋಗೋ ರಸ್ತೆಯಲ್ಲಿ ಸಿಗುವ ಈ ಕ್ಯಾಂಡಲ್ ಶಾಪ್ ಪ್ರವಾಸಿಗರ ನೆಚ್ಚಿನ ಶಾಪಿಂಗ್ ಸ್ಥಳ. ಪುಟ್ಟ ಪುಟ್ಟ ಬಣ್ಣ ಬಣ್ಣದ ಕ್ಯಾಂಡಲ್ ಗಳಿಂದ ಹಿಡಿದು ಗೊಂಬೆ, ಹಕ್ಕಿ, ಹೂ, ಬಾಲ್, ಹೃದಯ, ಹಕ್ಕಿ, ಮರಗಿಡ, ಹೀಗೆ ನಾನಾ ಬಗೆಯ ಸುಮಾರು 70 ವೆರೈಟಿ ಕ್ಯಾಂಡಲ್ ಇಲ್ಲಿ ತಯಾರಾಗುತ್ತಿದ್ದು, ಮನೆಯ ಅಂದ ಹೆಚ್ಚಿಸೋ ತರಹೇವರಿ ಕ್ಯಾಂಡಲ್ ಗಳು ಎಲ್ಲರ ಗಮನ ಸೆಳೆಯುತ್ತಿವೆ.

    ಕೊಡಗಿನ ಶ್ರೀನಿವಾಸ ಪ್ರಸಾದ್ ದಂಪತಿ ಕೇವಲ ಬೆಳಕು ನೀಡೋ ಕ್ಯಾಂಡಲ್ ತಯಾರಿಸಿದ್ರೆ ಗ್ರಾಹಕರನ್ನು ಸೆಳೆಯೋದು ಕಷ್ಟ ಎಂಬುದರಿತು ಸುಮಾರು 70 ಬಗೆಯ ವಿವಿಧ ವಿನ್ಯಾಸದ ಕ್ಯಾಂಡಲ್‍ಗಳನ್ನು ತಯಾರಿಸುತ್ತಿದ್ದಾರೆ. ಒಂದೊಂದು ಕ್ಯಾಂಡಲ್ ಗಳು ಒಂದೊಂದು ಆಕಾರದಲ್ಲಿ ಕಂಗೊಳಿಸುತ್ತಾ ನೋಡುಗರನ್ನು ಆಕರ್ಷಿಸುತ್ತವೆ. ವಿಶೇಷವಾಗಿ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಬಣ್ಣ ಬಣ್ಣದ ಕ್ಯಾಂಡಲ್ ಗಳಿಗೆ ಬೇಡಿಕೆ ಬಂದಿದ್ದು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

    10 ರೂಪಾಯಿಂದ ಪ್ರಾರಂಭಗೊಂಡು ಎರಡು ಸಾವಿರದ ವರೆಗಿನ ಮೌಲ್ಯದ ಕ್ಯಾಂಡಲ್ ಗಳು ಇಲ್ಲಿ ಸಿಗುತ್ತವೆ.