Tag: ಕ್ಯಾಂಟಿನ್

  • ಕಲಬುರಗಿ ಕರ್ನಾಟಕ ಕೇಂದ್ರಿಯ ವಿವಿ ವಿದ್ಯಾರ್ಥಿನಿ ಕೆನ್ನೆಗೆ ಮುತ್ತಿಟ್ಟ ಕ್ಯಾಂಟೀನ್ ಓನರ್

    ಕಲಬುರಗಿ ಕರ್ನಾಟಕ ಕೇಂದ್ರಿಯ ವಿವಿ ವಿದ್ಯಾರ್ಥಿನಿ ಕೆನ್ನೆಗೆ ಮುತ್ತಿಟ್ಟ ಕ್ಯಾಂಟೀನ್ ಓನರ್

    ಕಲಬುರಗಿ: ದೇಶದ ಪ್ರಸಿದ್ಧ ಕೇಂದ್ರಿಯ ವಿಶ್ವವಿದ್ಯಾಲಯವಾಗಿರುವ ಕಲಬುರಗಿಯ (Central University Kalaburagi) ಅಳಂದ ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರಿಯ ವಿವಿಯು ದಿನೇದಿನೇ ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುತ್ತಿದೆ. ಇತ್ತೀಚಿಗೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮುನ್ನವೇ ಈಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

    ವಿದ್ಯಾರ್ಥಿನಿ ಮೇಲೆ ವಿಶ್ವವಿದ್ಯಾಲಯ ಕ್ಯಾಂಟಿನ್ ಓನರ್‌ನಿಂದ (Canteen Owner) ಲೈಂಗಿಕ ದೌರ್ಜನ್ಯ ಕೃತ್ಯ ನಡೆದಿದೆ ಎನ್ನುವ ಆರೋಪ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕೇಳಿಬಂದಿದೆ. ಸಂತ್ರಸ್ತ ವಿದ್ಯಾರ್ಥಿನಿ ಇಮೇಲ್ ಮೂಲಕ ವಿವಿಯ ಆಡಳಿತ ಮಂಡಳಿಗೆ ದೂರು ನೀಡಿದ್ದಾಳೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದನ್ನೂ ಓದಿ: ಪತ್ನಿಗೆ ಅಕ್ರಮ ಸಂಬಂಧ – ಎರಡು ಮಕ್ಕಳಿಗೆ ವಿಷವುಣಿಸಿ ಪತಿ ಆತ್ಮಹತ್ಯೆ

    ಎಂ.ಎ ಎಕಾನಾಮಿಕ್ಸ್ ವಿದ್ಯಾರ್ಥಿನಿ ಮೇಲೆ ಆಂಧ್ರಪ್ರದೇಶದ ಮೂಲದ ಕ್ಯಾಂಟಿನ್ ಮಾಲೀಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದು, ಯಾವುದೋ ವಿಚಾರದ ಬಗ್ಗೆ ಕ್ಯಾಂಟಿನ್ ಗುತ್ತಿಗೆ ಪಡೆದ ಅಂಕಲ್‌ನೊಂದಿಗೆ ಮಾತನಾಡಲು ವಿವಿ ಆವರಣದ ಕ್ಯಾಂಟಿನ್‌ಗೆ ಹೋಗಿದ್ದೆ. ಕ್ಯಾಂಟೀನ್ ಜನರಿಂದ ತುಂಬಿತ್ತು. ಆಗ ಅಂಕಲ್ ನನ್ನ ರೂಮ್ ಒಳಗೆ ಮಾತಾಡೋಣ ಬಾ ಎಂದು ಒಳಗಡೆ ಇರುವ ರೂಮ್‌ಗೆ ಕರೆದುಕೊಂಡು ಹೋಗಿ ನನ್ನ ಮುಖ ಹಿಡಿದು, ನನ್ನ ಕೆನ್ನೆಗೆ ಮುತ್ತಿಟ್ಟಿದ್ದಾನೆ. ಏಕೆ ಕಿಸ್ ಮಾಡಿದ್ದೀರಿ ಎಂದು ಪ್ರಶ್ನಿಸಿದರೆ ‘ನೀನು ನನ್ನ ಮಗಳ ಸಮಾನ’ ಎಂದು ಹೇಳಿ ಪದೇಪದೇ ಮುತ್ತಿಡಲು ಯತ್ನಿಸಿದ್ದಾರೆ’ ಎಂದು ವಿದ್ಯಾರ್ಥಿನಿ ಮೇಲ್ ಮೂಲಕ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ವರ್ತೂರ್‌ ಪ್ರಕಾಶ್‌ ಕಿಡ್ನ್ಯಾಪ್‌ ಕೇಸಲ್ಲಿ ಆರೋಪಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರ ಬಂಧನ

    ವಿದ್ಯಾರ್ಥಿನಿ ಏಕೆ ಕಿಸ್ ಮಾಡಿದ್ದೀರಿ ಎನ್ನುವ ಪ್ರಶ್ನೆಗೆ ಕ್ಯಾಂಟಿನ್ ಮಾಲೀಕ ಉತ್ತರಿಸದೆ, (ಐ ವಿಲ್ ಕಾಲ್ ಯು ಬೇಟಾ) ನಾನು ನಿನ್ನನ್ನು ಮಗಳು ಎಂದು ಕರೆಯುತ್ತೇನೆ ಎಂದು ಹೇಳಿ ಮುತ್ತಿಟ್ಟ ವಿಚಾರವನ್ನು ಮರೆಮಾಚಲು ಯತ್ನಿಸಿದ್ದಾನೆ. ಆದರೆ, ಆತ ನನ್ನನ್ನು ಒಳ್ಳೆಯ ರೀತಿಯಲ್ಲಿ ಮುಟ್ಟದೆ ಕೆಟ್ಟ ರೀತಿಯಲ್ಲಿ ಮುಟ್ಟಿದಂತೆ ಭಾಸವಾಗಿದೆ ಎಂದು ವಿದ್ಯಾರ್ಥಿನಿ ಕ್ಯಾಂಟಿನ್ ಓನರ್ ವಿರುದ್ಧ ಆರೋಪಿಸಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗೆ ಕಳೆದ ಜುಲೈ 16ರಂದೇ ದೂರು ಸಲ್ಲಿಸಿದ್ದಾಳೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸಲ್ಲಿ ತೀರ್ಪು ವಿಳಂಬಕ್ಕೆ ಶತಪ್ರಯತ್ನ ನಡೆದಿತ್ತು: ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್

    ಕಳೆದ ಏಪ್ರಿಲ್ 16ರಂದು ಘಟನೆ ನಡೆದರು, ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಬಳಿಕ ಎಚ್ಚೆತ್ತುಕೊಂಡ ಸಿಯುಕೆ ಆಡಳಿತ ಮಂಡಳಿ ಕೂಡಲೇ, ಕ್ಯಾಂಟಿನ್ ಗುತ್ತಿಗೆ ರದ್ದುಗೊಳಿಸಿ, ಆಂಧ್ರ ಮೂಲದ ಕ್ಯಾಂಟಿನ್ ಮಾಲಿಕನನ್ನು ಕ್ಯಾಂಪಸ್‌ನಿಂದ ಹೊರಹಾಕಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ದೊಡ್ಡಗಾಜನೂರಿನಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಿದ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ

  • ರಸ್ತೆಯ ಬದಿಯ ಕ್ಯಾಂಟಿನ್‌ಗೆ ನುಗ್ಗಿದ ಲಾರಿ – ಇಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಚಿಂತಾಜನಕ

    ರಸ್ತೆಯ ಬದಿಯ ಕ್ಯಾಂಟಿನ್‌ಗೆ ನುಗ್ಗಿದ ಲಾರಿ – ಇಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಚಿಂತಾಜನಕ

    ಹಾಸನ: ಚಾಲಕನ ನಿಯಂತ್ರಣ ತಪ್ಪಿ ಹತ್ತು ಚಕ್ರದ ಲಾರಿಯೊಂದು (Lorry) ರಸ್ತೆ ಬದಿಯ ಕ್ಯಾಂಟಿನ್‌ಗೆ (Canteen) ನುಗ್ಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆ ಸಕಲೇಶಪುರ (Sakleshpur) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಗುಳಗಳಲೆ ಸಮೀಪ ನಡೆದಿದೆ.

    ಬಾಳ್ಳುಪೇಟೆಯ ತೌಫಿಕ್ (27) ಹಾಗೂ ಚಿತ್ರದುರ್ಗ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಬಗ್ನಾರೆಡ್ಡಿ ಗ್ರಾಮದ ಈರೇಶ್ (60) ಮೃತ ದುರ್ದೈವಿಗಳು. ಹಾಸನದಿಂದ ಮಂಗಳೂರಿಗೆ ಗೂಡ್ಸ್ ತುಂಬಿಕೊಂಡು ತೆರಳುತ್ತಿದ್ದ ವಿಆರ್‌ಎಲ್ ಲಾಜಿಸ್ಟಿಕ್ಸ್ ಲಾರಿ ಅತಿ ವೇಗವಾಗಿ ಚಲಿಸುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮಹಮದ್ ಖಾದರ್ ಎಂಬವರ ಕ್ಯಾಂಟಿನ್‌ಗೆ ನುಗ್ಗಿದೆ. ಇದನ್ನೂ ಓದಿ: ಉತ್ತರ ಕನ್ನಡ ಸಂಸದ ಕಾಗೇರಿ ಮನೆಯಲ್ಲಿ ಚಿರತೆ ಪ್ರತ್ಯಕ್ಷ!

    ಕ್ಯಾಂಟಿನ್ ಬಳಿ ಹತ್ತಾರು ಮಂದಿ ಟೀ ಕುಡಿಯುತ್ತಿದ್ದು, ಇವರಲ್ಲಿ ಜೆಜೆಎಂ ಕೆಲಸ ಮಾಡಲು ಬಂದಿದ್ದ ವೀರೇಶ್ ಹಾಗೂ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ತೌಫಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರವಾದ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟೀ ಅಂಗಡಿ ಮುಂದೆ ನಿಲ್ಲಿಸಿದ್ದ 2 ಬೈಕ್‌ಗಳು ಸಂಪೂರ್ಣ ಜಖಂಗೊಂಡಿವೆ. ಡಿಕ್ಕಿ ರಭಸಕ್ಕೆ ಕ್ಯಾಂಟಿನ್ ಸಂಪೂರ್ಣ ನೆಲಸಮವಾಗಿದೆ. ಇದನ್ನೂ ಓದಿ: ತ.ನಾಡಲ್ಲಿ ಜಲ್ಲಿಕಟ್ಟುಗೆ ಚಾಲನೆ; 1,100 ಹೋರಿಗಳು ಭಾಗಿ – ಕಾರು ಬಂಪರ್‌ ಬಹುಮಾನ

    ಇಂದು ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದು ಮಕ್ಕಳು ಅಪಘಾತ ನಡೆದ ಸಮೀಪವೇ ಆಟವಾಡುತ್ತಿದ್ದರು. ಅಲ್ಲದೇ ಕ್ಯಾಂಟಿನ್ ಅಕ್ಕಪಕ್ಕದಲ್ಲೇ ವಾಸದ ಮನೆಗಳಿದ್ದು, ಕ್ಯಾಂಟಿನ್ ಡಿಕ್ಕಿ ಹೊಡೆದು ಲಾರಿ ಮಗುಚಿ ಬಿದ್ದಿದ್ದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್‌, ಸಹೋದರ ಶೀಘ್ರ ಗುಣಮುಖರಾಗಲಿ: ಸಿ.ಟಿ.ರವಿ ಪ್ರಾರ್ಥನೆ

  • ಊಟಕ್ಕಾಗಿ 24 ವರ್ಷದ ಹಿಂದೆ ಗಲಾಟೆ – 17 ವರ್ಷಗಳ ಬಳಿಕ ಆರೋಪಿ ಸೆರೆ

    ಊಟಕ್ಕಾಗಿ 24 ವರ್ಷದ ಹಿಂದೆ ಗಲಾಟೆ – 17 ವರ್ಷಗಳ ಬಳಿಕ ಆರೋಪಿ ಸೆರೆ

    ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಮುಖ ಅದಿರು ಕಂಪನಿ ಉತ್ತುಂಗದ ಸ್ಥಿತಿಯಲ್ಲಿದ್ದಾಗ ಮೆಸ್‍ನಲ್ಲಿ ನಡೆದಿದ್ದ ಗಲಾಟೆ ಸಂಬಂಧ 24 ವರ್ಷಗಳ ಬಳಿಕ ಆರೋಪಿಯನ್ನು ಕೇರಳದ ಅಲೆಪ್ಪಿಯಲ್ಲಿ ಬಂಧಿಸಿ ಕರೆತರಲಾಗಿದೆ.

    ಬಂಧಿತನನ್ನು ಅಲೆಕ್ಸಾಂಡರ್ ಎಂದು ಗುರುತಿಸಲಾಗಿದೆ. ಬಂಧಿತ ಅಲೆಕ್ಸಾಂಡರ್ ಕುದುರೆಮುಖ ಕಂಪನಿಯಲ್ಲಿ ಕಾರ್ಮಿಕನಾಗಿದ್ದ. ಕ್ಷುಲ್ಲಕ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿತ್ತು. ಗಲಾಟೆ ವೇಳೆ ಚಾಕು ಹಾಕಿದ್ದ ಆರೋಪಿ ಅಲೆಕ್ಸಾಂಡರ್ 2004ರಲ್ಲಿ ಎಸ್ಕೇಪ್ ಆಗಿ ಕೇರಳಕ್ಕೆ ಪರಾರಿಯಾಗಿದ್ದ.

    1997ರಲ್ಲಿ ನಡೆದ ಗಲಾಟೆ ಕೇಸ್ 2004 ರವರೆಗೂ ನ್ಯಾಯಾಲಯದಲ್ಲಿತ್ತು. ಘಟನೆ ನಡೆದು ಹಲವು ವರ್ಷವಾದರೂ ಪೊಲೀಸರು ಹೋಗದ ಕಾರಣ ನಾನು ಬಚಾವ್ ಆದೆ ಎಂದು ಭಾವಿಸಿದ್ದ. ಆದರೆ, 17 ವರ್ಷಗಳ ಬಳಿಕ ಮಾಹಿತಿ ಕಲೆ ಹಾಕಿದ ಚಿಕ್ಕಮಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಈ ಮೂಲಕ ಖಾಕಿ ರೆಕಾರ್ಡಲ್ಲಿ ಎಂಟ್ರಿಯಾದರೆ ಪಾತಾಳದಲ್ಲಿದ್ದರೂ ಬಿಡಲ್ಲ ಅನ್ನೋದಕ್ಕೆ ಕಾಫಿನಾಡ ಪೊಲೀಸರು ಸಾಕ್ಷಿಯಾಗಿದ್ದಾರೆ. ಯಾಕೆಂದರೆ, ಅದು 1997ರ ಜೂನ್ ತಿಂಗಳಲ್ಲಿ ನಡೆದ ಗಲಾಟೆ. ಸುಮಾರು 25 ವರ್ಷಗಳ ಸಮೀಪ. ಕುದುರೆಮುಖ ಸಂಸ್ಥೆಯ ಕ್ಯಾಂಟೀನಲ್ಲಿ ಊಟದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಇಬ್ಬರಿಗೆ ಚಾಕು ಹಾಕಿದ್ದರು. ಕುದುರೆಮುಖ ಠಾಣೆಯಲ್ಲಿ ಕೇಸ್ ದಾಖಲಾಗಿ, ನಾಲ್ವರು ಮೇಲೆ ಎಫ್‍ಐಆರ್ ಆಗಿತ್ತು.

    2004ರಲ್ಲಿ ಅಲೆಕ್ಸಾಂಡರ್ ಎಸ್ಕೇಪ್ ಆಗಿದ್ದ. ಬಳಿಕ ಕುದುರೆಮುಖ ಕಂಪನಿ ಬಾಗಿಲು ಹಾಕಿತು. ಆದರೆ, ಪೊಲೀಸರು ಆರೋಪಿಗಾಗಿ ಹುಡುಕೋದನ್ನು ಬಿಡಲಿಲ್ಲ. 17 ವರ್ಷಗಳ ಕಾಲ ಎಲ್ಲಿದ್ದಾನೆ ಅಂತಾನೆ ಗೊತ್ತಾಗಲಿಲ್ಲ. 17 ವರ್ಷಗಳೇ ಕಳೆದು ಹೋದವು. ಪೊಲೀಸರು ಕೇಸನ್ನು ಮರೆತಿರುತ್ತಾರೆ ನಾನು ಬಚಾವ್ ಅಂತ ಅಂದುಕೊಂಡಿದ್ದ ಆರೋಪಿಗೆ ಕಾಫಿನಾಡ ಪೊಲೀಸರು ಅನ್‍ಎಕ್ಸ್ ಪೆಕ್ಟೆಡ್ ಶಾಕ್ ನೀಡಿ ಕರೆತಂದು ಕೋರ್ಟಿಗೆ ಹಾಜರು ಪಡಿಸಿದ್ದಾರೆ.

    ಕುದುರೆಮುಖ ಠಾಣೆಗೆ ಇತ್ತೀಚೆಗೆ ಪಿ.ಎಸ್.ಐ. ಆಗಿ ಕುಮಾರ್ ಚಾರ್ಜ್ ತೆಗೆದುಕೊಂಡು ಈ ಹಳೇ ಕೇಸಿನ ಬೆನ್ನು ಬಿದ್ದಿದ್ದರು. ಸ್ನೇಹಿತನ ಮೂಲಕ ಆರೋಪಿ ಕೇರಳದಲ್ಲಿ ಇರೋದನ್ನು ಖಚಿತಪಡಿಸಿಕೊಂಡು ಪೊಲೀಸ್ ಸಿಬ್ಬಂದಿಯಾದ ಸುರೇಶ್ ರಾವ್, ಯುವರಾಜ್, ಶ್ರೀಧರ್ ಎಂಬುವರನ್ನು ಕಳುಹಿಸಿ ಲಾಕ್ ಮಾಡಿಸಿದ್ದಾರೆ. ಇಬ್ಬರಿಗೆ ಚಾಕು ಹಾಕಿ 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. 17 ವರ್ಷಗಳ ಹಿಂದಿನ ಕೇಸು. ಬೇಲ್ ಸಿಗುತ್ತೆ ಎಂದು ಆರೋಪಿ ಅಲೆಕ್ಸಾಂಡರ್ ಕೂಡ ಭಾವಿಸಿದ್ದ. ಆದರೆ, ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  • ಗ್ರಾಮ ಪಂಚಾಯ್ತಿ ಚುನಾವಣೆ ವೈಷಮ್ಯ – ಕಣ್ಣಿಗೆ ಖಾರದ ಪುಡಿ ಎರಚಿ ಗಲಾಟೆ

    ಗ್ರಾಮ ಪಂಚಾಯ್ತಿ ಚುನಾವಣೆ ವೈಷಮ್ಯ – ಕಣ್ಣಿಗೆ ಖಾರದ ಪುಡಿ ಎರಚಿ ಗಲಾಟೆ

    – 12 ಯುವಕರು ಕ್ಯಾಂಟಿನ್‍ಗೆ ನುಗ್ಗಿ ಗಲಾಟೆ

    ಮಡಿಕೇರಿ: ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆಂದು, ಯುವಕರ ಗುಂಪೊಂದು ಕ್ಯಾಂಟೀನ್‍ಗೆ ನುಗ್ಗಿ ದಾಂಧಲೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಬೈಲುಕುಪ್ಪೆಯಲ್ಲಿ ನಡೆದಿದೆ.

    ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದರೂ ವೈಷಮ್ಯ ಮುಂದುವರಿದಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದಾರೆ. ಹೀಗಾಗಿ 12 ಯುವಕರು ಸೇರಿ ಕ್ಯಾಂಟೀನ್‍ಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಕ್ಯಾಂಟೀನ್ ಮಾಲೀಕ ಅಸ್ಕರ್ ಅಲಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

    ಜನವರಿ 3 ರಂದು ಕೊಡಗು ಜಿಲ್ಲೆ ಕುಶಾಲನಗರ ಸಮೀಪದ, ಬೈಲುಕುಪ್ಪೆಯ ಕ್ಯಾಂಟೀನ್‍ಗೆ ಏಕಾಏಕಿ ಬಂದು ನುಗ್ಗಿದ 12 ಜನ ಯುವಕರ ಗುಂಪು, ಗಲಾಟೆ ಮಾಡಿದೆ. ಈ ವೇಳೆ ಕ್ಯಾಂಟೀನ್ ಮಾಲೀಕ ಅಸ್ಕರ್ ಅಲಿ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ.

     

    ಈ ಗಲಾಟೆಯಲ್ಲಿ ಕ್ಯಾಂಟೀನ್‍ನಲ್ಲಿ ಟೀ ಕಡಿಯುತ್ತಿದ್ದ ಗ್ರಾಹಕನ ತಲೆಗೂ ಗಂಭೀರ ಗಾಯಗಳಾಗಿವೆ. ಬಳಿಕ ಕಿಡಿಗೇಡಿಗಳು ರಸ್ತೆಗೆ ಬಡಿಗೆಗಳಿಂದ ಹೊಡೆದು ಕ್ರೌರ್ಯ ಮೆರೆದಿದ್ದಾರೆ. ಈ ಹೊಡೆದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಲಾಟೆಗೆ ಸಹಕರಿಸಿದ ಇಬ್ಬರ ಬಂಧಿಸಲಾಗಿದೆ.