Tag: ಕೌಶಿಕ್

  • ಕೆಜಿಎಫ್ 2 ಸಿನಿಮಾದ ನ್ಯೂ ಅಪ್‍ಡೇಟ್ ರಿವೀಲ್ – ರಿಲೀಸ್ ಯಾವಾಗ?

    ಕೆಜಿಎಫ್ 2 ಸಿನಿಮಾದ ನ್ಯೂ ಅಪ್‍ಡೇಟ್ ರಿವೀಲ್ – ರಿಲೀಸ್ ಯಾವಾಗ?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್-2 ಕುರಿತ ಹೊಸ ಅಪ್‍ಡೇಟ್‍ವೊಂದು ರಿವೀಲ್ ಆಗಿದೆ.

    2018ರಲ್ಲಿ ಬೆಳ್ಳಿ ಪರದೆ ಮೇಲೆ ತರೆಕಂಡು ಧೂಳ್ ಎಬ್ಬಿಸಿದ ಕೆಜಿಎಫ್ ಸಿನಿಮಾ ಬಾಹುಬಲಿಯಷ್ಟೇ ದೊಡ್ಡ ಮಟ್ಟದ ಸಕ್ಸಸ್ ಕಂಡಿತು. ಜೊತೆಗೆ ರಾಕಿಂಗ್ ಸ್ಟಾರ್ ಯಶ್‍ಗೆ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಟ್ಟಿತು.

    ಸದ್ಯ ಕೆಜಿಎಫ್-2 ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಂಪ್ಲೀಟ್ ಆಗಿದೆ ಎಂಬ ವಿಚಾರ ಬಹಿರಂಗಗೊಂಡಿದ್ದು, ಈ ಕುರಿತಂತೆ ಸೌತ್ ಇಂಡಸ್ಟ್ರಿ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವ ಚಿತ್ರ ವಿಶ್ಲೇಷಕ ಕೌಶಿಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಲಾಕ್‍ಡೌನ್ ನಂತರ ದೇಶಾದ್ಯಂತ ಸಿನಿಮಾ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಂತಿಮಗೊಳಿಸಲಿದೆ. ಇದು ಪ್ಯಾನ್ ಇಂಡಿಯಾನ್ ಸಿನಿಮಾವಾದರಿಂದ ಬಿಡುಗಡೆಗೆ ಭಾರತಾದ್ಯಂತ ಪರಿಸ್ಥಿತಿ ಅನುಕೂಲಕರವಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆದರೆ ಜುಲೈ 16ಕ್ಕೆ ರಿಲೀಸ್ ಆಗಬೇಕಾಗಿರುವ ಕೆಜಿಎಫ್-2 ಸಿನಿಮಾ ಕೊರೊನಾ ಎರಡನೇ ಅಲೆಯಿಂದಾಗಿ ಮುಂದುಡೂವ ಸಾಧ್ಯತೆಗಳು ಕೂಡ ಇರುವುದರಿಂದ ಅಭಿಮಾನಿಗಳಲ್ಲಿ ಬೇಸರವನ್ನು ಕೂಡ ತರಿಸಿದೆ.

    ಒಟ್ಟಾರೆ ಕೆಜಿಎಫ್-2 ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದ್ದರೆ, ಮತ್ತೊದೆಡೆ ಸಿನಿಮಾ ಬಿಡುಗಡೆ ಕುರಿತು ಗೊಂದಲ ಶುರುವಾಗಿದೆ.

  • ಕಾಲಿನಿಂದಲೇ ಕಡುಬು ತಯಾರಿಸಿದ ಬಂಟ್ವಾಳದ ಕೌಶಿಕ್

    ಕಾಲಿನಿಂದಲೇ ಕಡುಬು ತಯಾರಿಸಿದ ಬಂಟ್ವಾಳದ ಕೌಶಿಕ್

    ಮಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಕಾಲಿನಲ್ಲೇ ಬರೆದು ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ವಿದ್ಯಾರ್ಥಿ ಇದೀಗ ಮತ್ತೆ ಸುದ್ದಿಯಾಗಿದ್ದಾನೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೌಶಿಕ್ ಗಣೇಶ ಚತುರ್ಥಿ ದಿನ ತುಳುನಾಡಿನ ವಿಶಿಷ್ಟ ಮತ್ತು ಪ್ರಸಿದ್ಧ ತಿಂಡಿಯಾದ ಕೊಟ್ಟಿಗೆ (ಕಡುಬು) ತಯಾರಿಸಲು ಹಲಸಿನ ಮರದ ಎಲೆಯನ್ನು ಮನೆಯಲ್ಲಿ ತನ್ನ ಕಾಲ ಸಹಾಯದಿಂದಲೇ ಕಟ್ಟಿದ್ದಾನೆ. ಇದೀಗ ಈತನ ಪರಿಶ್ರಮದ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

    ಈತ ಪ್ರತಿ ವರ್ಷ ಅಷ್ಟಮಿ ಹಾಗೂ ಗಣೇಶ ಚತುರ್ಥಿಗೆ ಇದೇ ರೀತಿ ಕಡುಬು ಕಟ್ಟಿತ್ತಿದ್ದ. ಈ ಬಾರಿ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ತನ್ನ ಕಾಲಿನ ಮೂಲಕವೇ ಬರೆದು, ರಾಜ್ಯಾದ್ಯಂತ ಎಲ್ಲರ ಗಮನ ಸೆಳೆದಿದ್ದು ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೌಶಿಕ್ ನನ್ನು ಮನೆಗೆ ಬಂದು ಭೇಟಿ ಮಾಡಿ ಪ್ರಶಂಸಿದ್ದರು. ಮಾತ್ರವಲ್ಲ ಪ್ರಥಮ ಶ್ರೇಣಿಯಲ್ಲಿ ಎಸ್‍ಎಸ್‍ಎಲ್‍ಸಿ ಪಾಸ್ ಆಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದ.

    ಇದೀಗ ಕಾಲಿನಿಂದಲೇ ಕಡುಬು ತಯಾರಿಸಿಯೂ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾನೆ.ಸಾಂಸ್ಕೃತಿಕ, ಕ್ರೀಡೆಗಳಲ್ಲೂ ಮುಂದಿರುವ ಕೌಶಿಕ್ ಎಲ್ಲರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದಾನೆ.