Tag: ಕೌಶಲ್ ಕಿಶೋರ್

  • ಕೌಶಲ್ ಕಿಶೋರ್ ಮನೆಯಲ್ಲಿ ಗುಂಡಿನ ದಾಳಿ- ಕೇಂದ್ರ ಸಚಿವರ ಮಗನ ಗೆಳೆಯನ ಕೊಲೆ

    ಕೌಶಲ್ ಕಿಶೋರ್ ಮನೆಯಲ್ಲಿ ಗುಂಡಿನ ದಾಳಿ- ಕೇಂದ್ರ ಸಚಿವರ ಮಗನ ಗೆಳೆಯನ ಕೊಲೆ

    ಲಕ್ನೋ: ಕೇಂದ್ರ ಸಚಿವ ಕೌಶಲ್ ಕಿಶೋರ್ (Union Minister Kaushal Kishore) ಮನೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತನನ್ನು ವಿಕಾಸ್ ಶ್ರೀವಾಸ್ತವ್ (Vikas Srivastava) ಎಂದು ಗುರುತಿಸಲಾಗಿದೆ. ಈತ ಸಚಿವರ ಮಗನ ಗೆಳೆಯ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಸಚಿವರ ಮಗನಿಂದ ಲೈಸೆನ್ಸ್ಡ್ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ವಿಕಾಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

    ಶುಕ್ರವಾರ ಬೆಳಗ್ಗಿನ ಜಾವ 4 ಗಂಟೆಗೆ ವಿನಯ್ ತಲೆಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಮೃತದೇಹ ಹಾಸಿಗೆ ಬಳಿ ನೆಲದ ಮೇಲೆ ಬಿದ್ದಿತ್ತು. ಈ ಸಂದರ್ಭದಲ್ಲಿ ಅಜಯ್ ರಾವತ್, ಅಂಕಿತ್ ಶರ್ಮಾ, ಶಮೀಮ್ ಬಾಬಾ, ಬಂಟಿ ಮತ್ತು ಇನ್ನಿಬ್ಬರು ಅಪರಿಚತರು ಸ್ಥಳದಲ್ಲಿದ್ದರು ಎಂಬುದಾಗಿ ವರದಿಯಾಗಿದೆ.

    ವಿನಯ್ ಶ್ರೀವಾಸ್ತವ್ ಅವರ ಕುಟುಂಬಸ್ಥರು ಕೊಲೆ ಆರೋಪದಡಿ ದೂರು ದಾಖಲಿಸಿದ್ದಾರೆ. ಪಶ್ಚಿಮ ಡಿಸಿಪಿ ರಾಹುಲ್ ರಾಜ್, ಎಡಿಸಿಪಿ ಚಿರಂಜೀವ್ ನಾಥ್ ಸಿನ್ಹಾ ಸೇರಿದಂತೆ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಯುರ್ವೇದ ಪಥ್ಯ; 22 ಕೆಜಿ ತೂಕ ಕಡಿಮೆ ಮಾಡಿಕೊಂಡ ಕೇಂದ್ರ ಸಚಿವ

    ಆಯುರ್ವೇದ ಪಥ್ಯ; 22 ಕೆಜಿ ತೂಕ ಕಡಿಮೆ ಮಾಡಿಕೊಂಡ ಕೇಂದ್ರ ಸಚಿವ

    ನವದೆಹಲಿ: ಆಯುರ್ವೇದ ಆಹಾರ ಪಥ್ಯದಿಂದಾಗಿ (Ayurvedic diet) ಕೇಂದ್ರ ಸಚಿವ (Union Minister) ಕೌಶಲ್ ಕಿಶೋರ್ (Kaushal Kishore) ಅವರು 22 ಕೆ.ಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.

    ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ತೂಕ ಕಡಿಮೆ (Weight Loss) ಮಾಡಿಕೊಂಡಿರುವ ವಿಷಯವನ್ನು ಖುದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಸಚಿವರು ತಮ್ಮ ಮೊದಲ ಹಾಗೂ ನಂತರದ ಫೋಟೋಗಳನ್ನು ಟ್ವೀಟ್ ಮಾಡಿದ್ದು, ತೂಕ ಇಳಿಸಲು 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ಪ್ರವೇಶ ಪಡೆದೆ. ಅದಾದ ಬಳಿಕ ಸಂಸ್ಥೆಯ ಸೂಚಿಸಿದ ಆಹಾರ ಕ್ರಮವನ್ನು ಅನುಸರಿಸಲು ಪ್ರಾರಂಭಿಸಿದೆ. ಇದರಿಂದಾಗಿ 2021ರ ಮೊದಲು 96 ಕೆಜಿ ಇದ್ದ ನಾನು, ಈಗ 22 ಕೆಜಿ ಕಳೆದುಕೊಂಡು 74 ತೂಕ ಹೊಂದಿದ್ದೇನೆ. ನಾನು ಮೊದಲಿಗಿಂತ ಫಿಟ್ ಆಗಿದ್ದೇನೆ ಎಂದು ಟ್ವೀಟ್‍ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಬುರುಡೆ, ಬೊಗಳೆ ಬಿಟ್ಕೊಂಡು ಓಡಾಡಿದವರಿಗೆ ಚಾಮುಂಡೇಶ್ವರಿ ಜನ ಪಾಠ ಕಲಿಸಿದ್ದಾರೆ: ಸಿದ್ದುಗೆ ಸಿಂಹ ತಿರುಗೇಟು

    ಆಯುರ್ವೇದದಿಂದ ತೂಕ ಇಳಿಕೆ: ಪ್ರಾಚೀನ ಭಾರತೀಯ ವಿಜ್ಞಾನದ ಪ್ರಕಾರ, ಅಧಿಕ ತೂಕ ಅಥವಾ ಬೊಜ್ಜು, ಅಧಿಕ ಕಫ ದೋಷದ ಕಾರಣದಿಂದ ಉಂಟಾಗುತ್ತದೆ. ಆದ್ದರಿಂದ ಕೆಲವು ಪಥ್ಯಗಳನ್ನು ಅನುಸರಿಸುವ ದೇಹದ ಬೊಜ್ಜನ್ನು ಕರಗಿಸಬಹುದು. ಆಯುರ್ವೇದ ತಜ್ಞರ ಪ್ರಕಾರ, ಕಫ ದೋಷವಿರುವ ಜನರು ಹಸಿವಿನಿಂದ ಬಳಲಬಾರದು ಬದಲಿಗೆ ಅವರ ದೇಹ ಪ್ರಕಾರ ಮತ್ತು ಅಗತ್ಯಗಳಿಗೆ ಅನುಗುಣವಾಗಿ ತಿನ್ನಬೇಕು. ಇದನ್ನೂ ಓದಿ: ಮಂಗಳೂರು ಕುಕ್ಕರ್‌ ಸ್ಫೋಟ ಕೇಸ್‌ – ಎರಡೂವರೆ ತಿಂಗಳ ಬಳಿಕ ಶಾರೀಕ್ ಡಿಸ್ಚಾರ್ಜ್‌

  • ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಎಳೆಯುವವನು ಉತ್ತಮ ವರನಾಗಬಹುದು: ಮಗನ ನೋವಿನ ಕಥೆ ವಿವರಿಸಿದ ಕೇಂದ್ರ ಸಚಿವ

    ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಎಳೆಯುವವನು ಉತ್ತಮ ವರನಾಗಬಹುದು: ಮಗನ ನೋವಿನ ಕಥೆ ವಿವರಿಸಿದ ಕೇಂದ್ರ ಸಚಿವ

    ಲಕ್ನೋ: ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಎಳೆಯುವವನು ಅಥವಾ ಕಾರ್ಮಿಕ ಉತ್ತಮ ವರನಾಗಬಹುದು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ, ಉತ್ತರ ಪ್ರದೇಶದ ಸುಲ್ತಾನ್‌ಪುರ ಕ್ಷೇತ್ರದ ಬಿಜೆಪಿ ಸಂಸದ ಕೌಶಲ್ ಕಿಶೋರ್(Kaushal Kishore) ಹೇಳಿದ್ದಾರೆ.

    ತಮ್ಮ ಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಮದ್ಯ ವರ್ಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೆಣ್ಣುಮಕ್ಕಳನ್ನು ಮದ್ಯವ್ಯಸನಿಗಳಿಗೆ(Alcoholics) ಮದುವೆ ಮಾಡಿಕೊಡಬೇಡಿ ಎಂದು ಪೋಷಕರಲ್ಲಿ ಮನವಿ ಮಾಡಿದರು. ಮದ್ಯವ್ಯಸನಿಗಳ ಜೀವಿತಾವಧಿ ತುಂಬಾ ಕಡಿಮೆ ಎಂದು ಹೇಳಿ ತಮ್ಮ ಮಗನ ಕಥೆಯನ್ನು ವಿವರಿಸಿ ತಮಗಾದ ನೋವನ್ನು ತೋಡಿಕೊಂಡರು.

    ನಾನು ಸಂಸದನಾಗಿಯೂ, ನನ್ನ ಪತ್ನಿ ಶಾಸಕಿಯಾಗಿದ್ದರೂ ನಮಗೆ ನಮ್ಮ ಮಗನ ಜೀವ ಉಳಿಸಲು ಸಾಧ್ಯವಾಗದೇ ಇರುವಾಗ ಸಾಮಾನ್ಯ ಜನರಿಗೆ ಸಾಧ್ಯವೇ ಎಂದು ಪ್ರಶ್ನಿಸಿದರು.

    ನನ್ನ ಮಗ ಆಕಾಶ್ ಸ್ನೇಹಿತರೊಂದಿಗೆ ಮದ್ಯ ಸೇವಿಸುವ ಅಭ್ಯಾಸವನ್ನು ಬೆಳೆಸಿದ್ದ. ಈ ವಿಚಾರ ತಿಳಿದು ಆತನನ್ನು ಮದ್ಯ ವರ್ಜನ ಶಿಬಿರಕ್ಕೆ ಸೇರಿಸಲಾಯಿತು. ಅವನು ಕೆಟ್ಟ ಚಟವನ್ನು ಬಿಟ್ಟಿರಬಹುದು ಎಂದು ಭಾವಿಸಿ ಆರು ತಿಂಗಳ ಬಳಿಕ ಮದುವೆ ಮಾಡಿಸಿದ್ದೆವು. ಆದರೆ ಅವನು ಮತ್ತೆ ಕುಡಿಯಲು ಪ್ರಾರಂಭಿಸಿದ್ದ. ಅಂತಿಮವಾಗಿ ಅವನ ಸಾವಿಗೆ ಮದ್ಯವೇ ಕಾರಣವಾಯಿತು. ಎರಡು ವರ್ಷಗಳ ಹಿಂದೆ ಅಕ್ಟೋಬರ್ 19 ರಂದು ಆಕಾಶ್ ಮೃತಪಟ್ಟಾಗ ಆತನ ಮಗನಿಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು ಎಂದು ತಮ್ಮ ನೋವಿನ ಕಥೆಯನ್ನು ವಿವರಿಸಿದರು. ಇದನ್ನೂ ಓದಿ: 2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು

    ನನ್ನ ಮಗನನ್ನು ಉಳಿಸಲು ನನಗೆ ಸಾಧ್ಯವಾಗಲಿಲ್ಲ. ಮಗ ಮೃತಪಟ್ಟಿದ್ದರಿಂದ ಹೆಂಡತಿ ವಿಧವೆಯಾದಳು. ಈ ಕಾರಣಕ್ಕೆ ಹೆಣ್ಣುಮಕ್ಕಳನ್ನು ಮತ್ತು ಸಹೋದರಿಯರನ್ನು ನೀವು ರಕ್ಷಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.

    ಸ್ವಾತಂತ್ರ್ಯ ಚಳವಳಿಯ 90 ವರ್ಷಗಳ ಅವಧಿಯಲ್ಲಿ 6.32 ಲಕ್ಷ ಜನರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಆದರೆ ವ್ಯಸನದಿಂದಾಗಿ ಪ್ರತಿ ವರ್ಷ ದೇಶದಲ್ಲಿ ಸುಮಾರು 20 ಲಕ್ಷ ಜನರು ಸಾಯುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರವನ್ನು ತಿಳಿಸಿದರು.

    ಜಿಲ್ಲೆಯನ್ನು ವ್ಯಸನಮುಕ್ತಗೊಳಿಸಲು ಎಲ್ಲಾ ಶಾಲೆಗಳಿಗೆ ವ್ಯಸನಮುಕ್ತ ಅಭಿಯಾನವನ್ನು ಕೊಂಡೊಯ್ಯಬೇಕು ಮತ್ತು ಬೆಳಗ್ಗಿನ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಸಚಿವರು ಹೇಳಿದರು.

    Live Tv
    [brid partner=56869869 player=32851 video=960834 autoplay=true]