Tag: ಕೌಶಲ್ಯ

  • ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ ಶಿಫಾರಸು ಆಧಾರಿತ ವರ್ಗಾವಣೆ ಇನ್ಮುಂದೆ ಬಂದ್‌: ಶರಣ ಪ್ರಕಾಶ್ ಪಾಟೀಲ್

    ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ ಶಿಫಾರಸು ಆಧಾರಿತ ವರ್ಗಾವಣೆ ಇನ್ಮುಂದೆ ಬಂದ್‌: ಶರಣ ಪ್ರಕಾಶ್ ಪಾಟೀಲ್

    ಬೆಂಗಳೂರು: ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ (Skill Development Department) ಎಲ್ಲಾ ಸಾಮಾನ್ಯ ವರ್ಗಾವಣೆಗಳನ್ನು ಇನ್ನು ಮುಂದೆ ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ (Sharan Prakash Patil) ಘೋಷಿಸಿದರು.

    ವಿಕಾಸಸೌಧದಲ್ಲಿ ಗುರುವಾರ ಸಂಜೆ ನಡೆದ ಇಲಾಖಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದ, ಸಚಿವರು, ಹೊಸ ವ್ಯವಸ್ಥೆಗೆ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೌಶಲ್ಯ ಅಭಿವೃದ್ಧಿ ಕಾರ್ಯದರ್ಶಿ ಏಕ್ರೂಪ್ ಕೌರ್ ಅವರಿಗೆ ಸೂಚಿಸಿದರು.

    ಸಚಿವಾಲಯದ ಅಡಿಯಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ (ಡಿಇಟಿ) ಅತಿ ಹೆಚ್ಚು ಉದ್ಯೋಗಸ್ಥರನ್ನು ಹೊಂದಿದೆ. ಪ್ರಭಾವ ಮತ್ತು ಶಿಫಾರಸುಗಳ ಮೂಲಕ ಆಗುತ್ತಿದ್ದ ವರ್ಗಾವಣೆ ಪ್ರಕ್ರಿಯೆಗಳಿಗೆ ಕೊನೆ ಹಾಡಬೇಕಾಗಿದೆ. ಎಲ್ಲಾ ವರ್ಗಾವಣೆಗಳನ್ನು ಕೌನ್ಸಿಲಿಂಗ್‌ ಮೂಲಕ ಮಾಡಬೇಕು. ಇದು ಸಿಬ್ಬಂದಿಗೆ ಆದ್ಯತೆಯ ಸ್ಥಳಗಳಲ್ಲಿ ಹುದ್ದೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಡಾ. ಶರಣ್‌ ಪ್ರಕಾಶ್‌ ಪಾಟೀಲ್‌ ತಿಳಿಸಿದರು. ಇದನ್ನೂ ಓದಿ: ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮವಿವಾಹ – ರಕ್ಷಣೆ ಕೋರಿ ಪೊಲೀಸ್ ಮೊರೆ ಹೋದ ನವಜೋಡಿ

     

    ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳಿಗೆ ರಾಜ್ಯ ಸರ್ಕಾರವು ಜೂನ್ 16 ಗಡುವು ನಿಗದಿಪಡಿಸಿದೆ ಎಂದು ಸಚಿವರು ತಿಳಿಸಿದರು. ಸರ್ಕಾರಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿರುವ ಹಿರಿಯ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಲು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ವಿಳಂಬವಿಲ್ಲದೆ ವರ್ಗಾಯಿಸಲು ಇದೇ ಸಂದರ್ಭದಲ್ಲಿ ಇಲಾಖಾ ಕಾರ್ಯದರ್ಶಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್‌ನವ್ರಿಗೆ ಪಾಕ್‌ ಫ್ರೀ ವೀಸಾ ಕೊಡುತ್ತೆ, ಮಂಜುನಾಥ್ ನೋಡ್ಕೊಂಡು ಬರಲಿ: ಯತ್ನಾಳ್ ಕಿಡಿ

    ಯುವಜನರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಸಾಧಿಸಲು ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ (GTTC), ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (KGTTI) ಮತ್ತು ರಾಷ್ಟ್ರೀಯ ಜೀವನೋಪಾಯ ಮಿಷನ್ (NLM) ನಂತಹ ಸಂಸ್ಥೆಗಳಿಗೆ ಯುವನಿಧಿ ಯೋಜನೆ ಮತ್ತು ಉದ್ಯೋಗ ಮೇಳಗಳಿಗೆ ಅರ್ಜಿಗಳನ್ನು ಸಲ್ಲಿಸಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಅಳವಡಿಸಲು ಸಚಿವರು ನಿರ್ದೇಶಿಸಿದರು.

     

    ಪದವೀಧರರಾಗಿದ್ದರೂ, ಉದ್ಯೋಗ ಮೇಳಗಳಲ್ಲಿ ಅನೇಕ ಅಭ್ಯರ್ಥಿಗಳು ತಾಂತ್ರಿಕ ಕೌಶಲ್ಯಗಳ ಕೊರತೆಯಿಂದಾಗಿ ತಿರಸ್ಕರಿಸಲ್ಪಡುತ್ತಾರೆ. ಈ ಅಂತರವನ್ನು ತರಬೇತಿಯೊಂದಿಗೆ ಕಡಿಮೆಗೊಳಿಸಲು ನಾವು ಯುವನಿಧಿ ಆಕಾಂಕ್ಷಿಗಳು ಮತ್ತು ಉದ್ಯೋಗ ಮೇಳ ಅರ್ಜಿದಾರರ ವಿಶಾಲ ಡೇಟಾಬೇಸ್ ಅನ್ನು ಬಳಸಬೇಕು ಎಂದು ಶರಣ್‌ ಪ್ರಕಾಶ್‌ ಪಾಟೀಲ್‌ ತಿಳಿಸಿದರು.

  • ರನ್‌ವೇ ಸಿದ್ದವಾಗಿದೆ, ಕೌಶಲ್ಯಗಳನ್ನು ಕಲಿತು ಟೇಕಾಫ್‌ ಆಗಿ – ಯುವ ಜನತೆಗೆ ಮೋದಿ ಕರೆ

    ರನ್‌ವೇ ಸಿದ್ದವಾಗಿದೆ, ಕೌಶಲ್ಯಗಳನ್ನು ಕಲಿತು ಟೇಕಾಫ್‌ ಆಗಿ – ಯುವ ಜನತೆಗೆ ಮೋದಿ ಕರೆ

    ಹುಬ್ಬಳ್ಳಿ: ಈ ಶತಮಾನ ಭಾರತದ ಶತಮಾನ (India Century) ಎಂದು ಇಡೀ ವಿಶ್ವವೇ ಹೇಳುತ್ತಿದೆ. ಈ ಕಾರಣಕ್ಕೆ ರನ್‌ವೇ ಸಿದ್ದವಾಗಿದೆ. ಹೊಸ ಹೊಸ ಕೌಶಲ್ಯಗಳನ್ನು ಕಲಿತು ನೀವು ಟೇಕಾಫ್‌ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಯುವ ಜನತೆಗೆ ಕರೆ ನೀಡಿದ್ದಾರೆ.

    ರೈಲ್ವೇ ಮೈದಾನದಲ್ಲಿ (Hubballi Railway Ground) ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವ (Yuvajanotsava) ಕಾರ್ಯಕ್ರಮದಲ್ಲಿ ಆರಂಭದಲ್ಲಿ ಕನ್ನಡದಲ್ಲಿ ಮಾತನಾಡಿದ ಮೋದಿ ಮುರುಘಾ ಮಠ, ಸಿದ್ದರೂಢ ಮಠ, ಸಿದ್ದೇಶ್ವರ ಸ್ವಾಮೀಜಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಿಯಾಚಿನ್‌ನಲ್ಲಿ ಹೋರಾಡಿ ಹುತಾತ್ಮರಾದ ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ಕೊಪ್ಪದ್‌ ಅವರನ್ನು ಸ್ಮರಿಸಿಕೊಂಡರು.

    ಹೊಸ ಸಂಕಲ್ಪದತ್ತ ಭಾರತ ಮುನ್ನಡೆಯುತ್ತಿದೆ. ಯುವ ಶಕ್ತಿಯಿಂದ ರಾಷ್ಟ್ರ ನಿರ್ಮಾಣ ಆಗುತ್ತದೆ ಎಂದು ವಿವೇಕಾನಂದರು ಹೇಳಿದ್ದಾರೆ. ಇಡೀ ವಿಶ್ವವೇ ಭಾರತವನ್ನು ಈಗ ನೋಡುತ್ತಿದೆ. ನಮ್ಮದು ಯುವ ದೇಶವಾಗಿದ್ದು ಮುಂದಿನ 25 ವರ್ಷದಲ್ಲಿ ಭಾರತವನ್ನು ಕಟ್ಟಬೇಕು. ವಿಶ್ವದ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ನಿಮ್ಮ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ವಿವಿಧ ಕೌಶಲ್ಯಗಳನ್ನು ಕಲಿತು ನೀವು ಟೇಕಾಫ್‌ ಆಗಬೇಕು ಎಂದರು. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ – ಬ್ಯಾರಿಕೇಡ್ ಹಾರಿ ಕಾರಿನತ್ತ ನುಗ್ಗಿದ ಯುವಕ

    ಡಿಫೆನ್ಸ್‌ನಿಂದ ಡಿಜಿಟಲ್‌ ಇಂಡಿಯಾದವರೆಗೆ, ಆಟಿಕೆಯಿಂದ ಹಿಡಿದು ಪ್ರವಾಸದೋದ್ಯಮದವರೆಗೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಅವಕಾಶ, ಅಶಾವಾದ ಎರಡೂ ಜೊತೆಯಾಗಿ ಬರುತ್ತಿದೆ. ಈ ಅವಕಾಶಗಳನ್ನು ಬಳಸಿ ಭಾರತವನ್ನು ವಿಶ್ವದ ಟಾಪ್‌ 3 ಆರ್ಥಿಕತೆಯನ್ನು ಹೊಂದಿದ ದೇಶವನ್ನಾಗಿ ರೂಪಿಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ ಎಂದು ಹೇಳಿದರು.

    ವಿಶ್ವ ಈಗ ಬದಲಾಗುತ್ತಿದ್ದು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌, ವಿಆರ್‌ ಟೆಕ್ನಾಲಜಿ, ಡೇಟಾ ಸೈನ್ಸ್‌, ಸೈಬರ್‌ ಸೆಕ್ಯೂರಿಟಿಯಂತಹ ಹೊಸ ಹೊಸ ವಿಷಯಗಳು ಬರುತ್ತಿವೆ. ಈಗ ಇರುವ ಉದ್ಯೋಗಗಳು ಮುಂದೆ ಇರುವುದಿಲ್ಲ. ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ನಾವು ಬದಲಾಗಬೇಕು. ಹೊಸ ಕೌಶಲ್ಯಗಳನ್ನು ನಾವು ಕಲಿತುಕೊಳ್ಳಬೇಕು. ಹೇಗೆ ಬದಲಾಗಬೇಕು ಎಂದರೆ ಮುಂದುವರಿದ ದೇಶಗಳಿಗಿಂತ 10 ಹೆಜ್ಜೆ ಮುಂದೆ ನಾವಿರಬೇಕು. ಈ ಕಾರಣಕ್ಕೆ ಪ್ರಾಯೋಗಿಕ ಮತ್ತು ಭವಿಷ್ಯದ ದೃಷ್ಟಿಯನ್ನು ನೋಡಿಕೊಂಡು ಹೊಸ ಶಿಕ್ಷಣ ನೀತಿಯನ್ನು (NEP) ನಾವು ತಂದಿದ್ದೇವೆ ಎಂದು ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

    ಆಶಾವಾದಿಯಾಗಿ, ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ದೇಶವನ್ನು ಮುನ್ನಡೆಸಲು ಯುವಶಕ್ತಿ ನಿರ್ಣಾಯಕ. ಯುವ ಶಕ್ತಿ ನಮ್ಮ ಚಾಲನಾ ಶಕ್ತಿ. ಡಿಜಿಟಲ್‌ ಪೇಮೆಂಟ್‌, ಸ್ವಚ್ಚ ಭಾರತ, ಜನ ಧನ್‌ ಬಂದಾಗ ಲೇವಡಿ ಮಾಡಿದರು. ಕೋವಿಡ್‌ ಬಂದಾಗ ನಮ್ಮ ಲಸಿಕೆಯನ್ನು ವ್ಯಂಗ್ಯವಾಡಿದರು. ಆದರೆ ಡಿಜಿಟಲ್‌ ಪೇಮೆಂಟ್‌ನಲ್ಲಿ ನಾವು ನಮ್ಮ ಶಕ್ತಿಯನ್ನು ವಿಶ್ವಕ್ಕೆ ತೋರಿಸಿದ್ದೇವೆ. ನಿಶ್ಚಿತ ಭಾರತ, ಸಶಕ್ತ ಭಾರತ ಲಕ್ಷ್ಯವನ್ನು ಇಟ್ಟುಕೊಂಡು ನಾವು ಮುನ್ನಡೆಯುತ್ತಿದ್ದೇವೆ. ತಮ್ಮ ಕನಸನ್ನು ಯುವ ಜನತೆ ನನಸು ಮಾಡುತ್ತಾರೆ ಎಂಂದು ವಿಶ್ವಾಸ ವ್ಯಕ್ತಪಡಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟೆಕ್ಕಿಗಳನ್ನು ಮನೆಗೆ ಕಳುಹಿಸಬೇಡಿ, ಸಮಸ್ಯೆಗೆ ಪರಿಹಾರವಿದೆ: ಕಂಪೆನಿಗಳಿಗೆ ಇನ್ಫಿ ಮೂರ್ತಿ ಸಲಹೆ

    ಟೆಕ್ಕಿಗಳನ್ನು ಮನೆಗೆ ಕಳುಹಿಸಬೇಡಿ, ಸಮಸ್ಯೆಗೆ ಪರಿಹಾರವಿದೆ: ಕಂಪೆನಿಗಳಿಗೆ ಇನ್ಫಿ ಮೂರ್ತಿ ಸಲಹೆ

    ಬೆಂಗಳೂರು: ಲಕ್ಷಾಂತರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಐಟಿ ಕಂಪೆನಿಗಳು ಮುಂದಾಗುತ್ತಿದ್ದಂತೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಹಿರಿಯ ಅಧಿಕಾರಿಗಳ ಸಂಬಳವನ್ನು ಕಡಿತಗೊಳಿಸಿ ಈ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

    ಹೊಸದಾಗಿ ಸೇರ್ಪಡೆಯಾಗಿರುವ ಯುವ ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರ ಅಲ್ಲ. ಇದರ ಬದಲಾಗಿ ಹಿರಿಯ ಮ್ಯಾನೇಜ್‍ಮೆಂಟ್ ಹಂತದಲ್ಲಿರುವ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸುವುದು ಉತ್ತಮ ಎಂದಿದ್ದಾರೆ.

    ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ನಮ್ಮ ಇನ್ಫೋಸಿಸ್ ಉದಾಹರಣೆ ತೆಗೆದುಕೊಳ್ಳಿ. 2011ರ ವೇಳೆ ಸಾಫ್ಟ್ ವೇರ್ ಉದ್ಯಮಕ್ಕೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಹಿರಿಯ ಹಂತದ ಮ್ಯಾನೇಜ್‍ಮೆಂಟ್ ನಲ್ಲಿರುವ ವ್ಯಕ್ತಿಗಳೆಲ್ಲ ಸಭೆ ನಡೆಸಿದೆವು. ಸಭೆಯಲ್ಲಿ ಸಂಬಳವನ್ನು ಕಡಿತಗೊಳಿಸುವ ತೀರ್ಮಾನವನ್ನು ಮಾಡಿದೆವು. ಯುವ ಟೆಕ್ಕಿಗಳಿಗೆ ಜಾಬ್ ನೀಡಲು ಮತ್ತು ಅವರನ್ನು ರಕ್ಷಿಸಲು ಹಿರಿಯ ಸಿಬ್ಬಂದಿ ಈ ತ್ಯಾಗದ ನಿರ್ಧಾರವನ್ನು ಈಗ ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಸುಮ್ಮನೆ ಉದ್ಯೋಗಿಯನ್ನು ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರ ಅಲ್ಲ. ಯಾಕೆಂದರೆ ಅವರನ್ನು ನಂಬಿಕೊಂಡ ಕುಟುಂಬವು ಇದೆ ಎಂದು ಎಂದು ತಿಳಿಸಿದರು.

    2008, 2011ರಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಹೀಗಾಗಿ ಸಮಸ್ಯೆ ನಮಗೆ ಹೊಸದೆನಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಸೃಷ್ಟಿಯಾಗದೇ ಇರಲು ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ನಾರಾಯಣ ಮೂರ್ತಿ ಹೇಳಿದರು.

    ಎಷ್ಟು ಜನ ಮನೆಗೆ?
    ಮುಂದಿನ ಮೂರು ವರ್ಷದಲ್ಲಿ ಐಟಿ ವಲಯದಲ್ಲಿ 1.75 ಲಕ್ಷದಿಂದ 2 ಲಕ್ಷ ಎಂಜಿನಿಯರ್‍ಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಉದ್ಯೋಗ ವಲಯದ ಪ್ರಮುಖ ಸಂಸ್ಥೆಯಾದ ಹೆಡ್ ಹಂಟರ್ಸ್ ಇಂಡಿಯಾ ಹೇಳಿದೆ. ಮ್ಯಾಕ್‍ಕಿನ್ಸ್ ಆಂಡ್ ಕಂಪೆನಿ ಮುಂದಿನ ಮೂರು ವರ್ಷದಲ್ಲಿ 3-4 ವರ್ಷದಲ್ಲಿ ಐಟಿ ವಲಯದ ಅರ್ಧದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದೆ.

    ಮನೆಗೆ ಕಳುಹಿಸುತ್ತಿರುವುದು ಯಾಕೆ?
    ಕೌಶಲ್ಯ ಹೊಂದಿರುವ ಎಂಜಿನಿಯರ್‍ಗಳ ಸಂಖ್ಯೆ ಕಡಿಮೆಯಾಗಿದ್ದು, ಅಟೋಮೇಶನ್ ಹೆಚ್ಚಾಗುತ್ತಿರುವುದರಿಂದ ಕಂಪೆನಿಗಳು ಈಗ ಐಟಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗುತ್ತಿವೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ನೇಮಕವಾದ ಬಳಿಕ ವೀಸಾ ನಿಯಮವನ್ನು ಬಿಗಿಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಅಮೆರಿಕದ ಜನರಿಗೆ ಕಂಪೆನಿಗಳು ಉದ್ಯೋಗ ನೀಡಬೇಕು ಎಂದು ಹೇಳಿರುವುದರಿಂದ ಭಾರತೀಯ ಐಟಿ ಕಂಪೆನಿಗಳ ಮಾರುಕಟ್ಟೆಯ ಮೇಲೆ ಭಾರೀ ಹೊಡೆತ ಬಿದ್ದಿದೆ.

    ಇದನ್ನೂ ಓದಿ:ಇನ್ಫಿ ಸಿಒಒಗೆ ಭಾರೀ ಪ್ರಮಾಣದ ಸಂಬಳ ಏರಿಸಿದ್ದಕ್ಕೆ ನಾರಾಯಣ ಮೂರ್ತಿ ಆಕ್ಷೇಪ

    ಇದನ್ನೂ ಓದಿ: ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?