Tag: ಕೌಲಾಲಂಪುರ್

  • ಮಲೇಷ್ಯಾದಲ್ಲಿ ಭೂಕುಸಿತ – 8 ಸಾವು, 50ಕ್ಕೂ ಅಧಿಕ ಮಂದಿ ನಾಪತ್ತೆ

    ಮಲೇಷ್ಯಾದಲ್ಲಿ ಭೂಕುಸಿತ – 8 ಸಾವು, 50ಕ್ಕೂ ಅಧಿಕ ಮಂದಿ ನಾಪತ್ತೆ

    ಕೌಲಾಲಂಪುರ್: ನಗರದ ಕ್ಯಾಂಪ್ ಪ್ರದೇಶದ ಬಳಿ ಬೆಳಗ್ಗಿನ ಜಾವ ಸಂಭವಿಸಿದ ಭೂಕುಸಿತಕ್ಕೆ (Landslide) 8 ಮಂದಿ ಬಲಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

    ಮಲೇಷ್ಯಾದ (Malaysia) ರಾಜಧಾನಿ ಕೌಲಾಲಂಪುರ್‌ನ (KualaLumpur) ಕ್ಯಾಂಪ್ ಪ್ರದೇಶದಲ್ಲಿ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಕ್ಯಾಂಪಿಂಗ್ ಪ್ರದೇಶವಾಗಿರುವ ಸೆಲಂಗೋರ್‌ನಲ್ಲಿ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಈಗಾಗಲೇ 8 ಮಂದಿಯ ಮೃತ ದೇಹ ಸಿಕ್ಕಿದೆ. 50ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಹೆಚ್ಚಿನ ಸಮಯ ಫಿಕ್ಸ್? – ಮಧ್ಯರಾತ್ರಿ 2 ಗಂಟೆವರೆಗೂ ಅವಕಾಶ ಸಾಧ್ಯತೆ

    ಕ್ಯಾಂಪ್ ಪ್ರದೇಶದ 30 ಮೀಟರ್ ಎತ್ತರದಿಂದ ಭೂಕುಸಿತ ಸಂಭವಿಸಿದ್ದು, ಒಂದು ಎಕರೆಯಷ್ಟು ಪ್ರದೇಶದಲ್ಲಿ ಮಣ್ಣು ಆವರಿಸಿದೆ. 79ಕ್ಕೂ ಅಧಿಕ ಮಂದಿ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು. ಈವರೆಗೆ 23ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು ಸರ್ಕಾರಿ ಹಾಸ್ಟೆಲ್‌ನಲ್ಲಿ PUC ವಿದ್ಯಾರ್ಥಿನಿಗೆ ಹೆರಿಗೆ

    Live Tv
    [brid partner=56869869 player=32851 video=960834 autoplay=true]

  • ವಿಡಿಯೋ: ಚಾಕು ಹಿಡಿದು ಚೆಫ್ ಗೆ ಚಮಕ್ ಕೊಟ್ಟ ಏಡಿ!

    ವಿಡಿಯೋ: ಚಾಕು ಹಿಡಿದು ಚೆಫ್ ಗೆ ಚಮಕ್ ಕೊಟ್ಟ ಏಡಿ!

    ಕೌಲಾಲಂಪುರ್: ಬಾಣಸಿಗನ ಜೊತೆ ಅಡುಗೆಮನೆಯಲ್ಲಿ ಏಡಿಯೊಂದು ಚಾಕು ಹಿಡಿದು ಕಾಳಗ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಏಡಿ ತನ್ನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಬಾಣಸಿಗನ ಜೊತೆ ಹೋರಾಡಲು ಚಾಕು ಹಿಡಿದಿರೋದನ್ನ ಕಾಣಬಹುದು. ಏಡಿ ಕೆಚ್ಚೆದೆಯಿಂದ ತನ್ನ ಬಲ ಮತ್ತು ಎಡ ಉಗುರುಗಳ ನಡುವೆ ಆ ಕಡೆಯಿಂದ ಈಕಡೆಗೆ ಚಾಕುವನ್ನ ಬದಲಾಯಿಸುತ್ತದೆ.

    ಏಡಿ ಅಡುಗೆಮನೆ ತೊಟ್ಟಿಯ ಮೂಲೆಯಲ್ಲಿದ್ದು, ಶಸ್ತ್ರಾಸ್ತ್ರವನ್ನು ಹಿಡಿದು ತನ್ನ ರಕ್ಷಣೆಯನ್ನು ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಾಣಸಿಗ ಇನ್ನೊಂದು ಚಾಕು ಹಿಡಿದು ಅದಕ್ಕೆ ತಿವಿದರೂ ಏಡಿ ಹೋರಾಡುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಏಡಿ ಶರಣಾಗತಿಯಾಗುವಂತೆ ಕೈಚೆಲ್ಲುತ್ತದೆ.

    ಈ ವಿಡಿಯೋ ಕಳೆದ ವಾರ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು, ಈಗಾಗಲೇ ಸುಮಾರು 2 ಲಕ್ಷ ಕ್ಕೂ ಹೆಚ್ಚಿನ ವೀವ್ಸ್ ಕಂಡಿದೆ. ಕೊನೆಗೆ ಏಡಿಯ ಗತಿ ಏನಾಯಿತು ಎಂಬ ಬಗ್ಗೆ ವರದಿಯಗಿಲ್ಲ.

    https://www.youtube.com/watch?v=r7cO0Nl5zBQ