Tag: ಕೌನ್ಸಿಲ್

  • UAE ಅಧ್ಯಕ್ಷ ಸ್ಥಾನಕ್ಕೆ ಮಹಮ್ಮದ್ ಬಿನ್ ಝಾಯೆದ್ ಆಯ್ಕೆ

    UAE ಅಧ್ಯಕ್ಷ ಸ್ಥಾನಕ್ಕೆ ಮಹಮ್ಮದ್ ಬಿನ್ ಝಾಯೆದ್ ಆಯ್ಕೆ

    ದುಬೈ: 31 ವರ್ಷದ ಶೇಖ್ ಮಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಸಂಯುಕ್ತ ಅರಬ್ ಒಕ್ಕೂಟ (ಯುಎಇ)ದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಯುಎಇ ಸುಪ್ರೀಂ ಕೌನ್ಸಿಲ್ ಘೋಷಿಸಿದೆ.

    ಫೆಡರಲ್ ಸುಪ್ರೀಂ ಕೌನ್ಸಿಲ್ ಇಂದು ನಡೆಸಿದ ಸಭೆಯಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದೆ. ಹಿಂದಿನ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್(73) ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಝಾಯೆದ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮುಂದಿನ 5 ವರ್ಷಗಳ ಬಳಿಕ ಇವರು ಅಧಿಕಾರದಲ್ಲಿರಲಿದ್ದಾರೆ. ಇದನ್ನೂ ಓದಿ: ಕಳ್ಳರಿಗೆ ಅಧಿಕಾರ ನೀಡುವುದಕ್ಕಿಂತ, ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಹಾಕೋದು ಒಳ್ಳೆಯದು: ಇಮ್ರಾನ್ ಖಾನ್

    UAE 02

    ನವೆಂಬರ್ 2004ರಿಂದ ಅಬುಧಾಬಿಯ ರಾಜಕುಮಾರನಾಗಿರುವ ಶೇಖ್ ಮಹಮ್ಮದ್ ಬಿನ್ ಝಾಯೆದ್, ಅಬುಧಾಬಿಯ 17ನೇ ದೊರೆಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಹಿಂದಿ ಅಥವಾ ಯಾವುದೋ ಭಾಷೆಯನ್ನು ಹೇರುವ ಪ್ರಶ್ನೆಯೇ ಇಲ್ಲ: TN ರಾಜ್ಯಪಾಲ ಆರ್.ಎನ್.ರವಿ

    ಶೇಖ್ ಮಹಮ್ಮದ್ ಅವರು ಯುಎಇ ಸೇನಾ ಪಡೆಗಳ ಉಪ ಮುಖ್ಯ ಕಮಾಂಡರ್ ಆಗಿ ಜನವರಿ 2005ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಂಯುಕ್ತ ಅರಬ್ ಒಕ್ಕೂಟದ ಸೇನಾ ಪಡೆಗಳ ತಂತ್ರಗಾರಿಕೆ, ತರಬೇತಿ ಮತ್ತು ಸಂಘಟನಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

    ಅಧ್ಯಕ್ಷರಾಗಿದ್ದ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ನಿನ್ನೆ ನಿಧನರಾದ ಹಿನ್ನೆಲೆಯಲ್ಲಿ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

  • ಜಿಎಸ್‍ಟಿಯಿಂದ ಸ್ಯಾನಿಟರಿ ನ್ಯಾಪ್‍ಕಿನ್ ಹೊರಕ್ಕೆ – ಯಾವುದರ ಮೇಲೆ ಎಷ್ಟು ತೆರಿಗೆ – ಇಲ್ಲಿದೆ ಮಾಹಿತಿ

    ಜಿಎಸ್‍ಟಿಯಿಂದ ಸ್ಯಾನಿಟರಿ ನ್ಯಾಪ್‍ಕಿನ್ ಹೊರಕ್ಕೆ – ಯಾವುದರ ಮೇಲೆ ಎಷ್ಟು ತೆರಿಗೆ – ಇಲ್ಲಿದೆ ಮಾಹಿತಿ

    ನವದೆಹಲಿ: ದೇಶಾದ್ಯಂತ ಸ್ಯಾನಿಟರಿ ನ್ಯಾಪ್‍ಕಿನ್ ಮೇಲಿನ ತೆರಿಗೆ ವಿಧಿಸಿರುವ ಕುರಿತು ವ್ಯಾಪಕ ಟೀಕೆ ಕೇಳಿ ಬಂದ ಬೆನ್ನಲ್ಲಿ ಜಿಎಸ್‍ಟಿ ತೆರಿಗೆಯಿಂದ ಸ್ಯಾನಿಟರಿ ನ್ಯಾಪ್‍ಕಿನನ್ನು ಹೊರಗಿಡಲಾಗಿದೆ.

    ಕಳೆದ ಒಂದು ವರ್ಷದಿಂದಲೂ ಸ್ಯಾನಿಟಿರಿ ನ್ಯಾಪ್‍ಕಿನ್ ಮೇಲಿನ ತೆರವು ಮಾಡಲು ಹಲವರು ಆಗ್ರಹಿಸಿದ್ದರು. ಅದ್ದರಿಂದ ಈ ಹಿಂದೆ ವಿಧಿಸಲಾಗಿದ್ದ ಸ್ಯಾನಿಟರಿ ನ್ಯಾಪ್‍ಕಿನ್ಸ್ ಮೇಲಿನ ಶೇ.12ರಷ್ಟು ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಇದರೊಂದಿಗೆ ರಾಖಿ, ಪಾಶ್ಚರೀಕರಿಸಿದ ಹಾಲು, ಮಾರ್ಬಲ್ಸ್, ಕಟ್ಟಡ ಕಲ್ಲು & ಮರಮಟ್ಟುಗಳು ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರ ನೇತೃತ್ವದಲ್ಲಿ ನಡೆದ 28ನೇ ಜಿಎಸ್‍ಟಿ ಕೌನ್ಸಿಲ್ ಮಂಡಳಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಇನ್ನು 5% ರಷ್ಟು ತೆರಿಗೆಯನ್ನು 1 ಸಾವಿರ ರೂ.ವರೆಗಿನ ಪಾದರಕ್ಷೆ, ಆಮದಿತ ಯೂರಿಯಾ ಮೇಲೆ ವಿಧಿಸಲಾಗಿದೆ. ಬಿದಿರು, ಕರಕುಶಲ ವಸ್ತುಗಳು, ಹ್ಯಾಂಡ್ ಬ್ಯಾಗ್, ಕೈಯಿಂದ ಮಾಡಲಾದ ಲ್ಯಾಂಪ್‍ಗಳು, ಜ್ಯುವೆಲ್ಲರಿ ಬ್ಯಾಗ್ಸ್, ಬಣ್ಣಲೇಪಿತ ಮರದ ಬಾಕ್ಸ್ ಗಳು, ಗಾಜಿನ ಕಲಾಕೃತಿಗಳು, ಕಲ್ಲಿನ ಶಿಲೆಗಳು, ಅಲಂಕಾರಿಕ ಚೌಕಟ್ಟಿನ ಕನ್ನಡಿಗಳು ಇವುಗಳ ಮೇಲೆ ವಿಧಿಸಲಾಗಿದ್ದ 28% ರಷ್ಟು ತೆರಿಯನ್ನು 12% ಕ್ಕೆ ಇಳಿಕೆ ಮಾಡಲಾಗಿದೆ.

    ಟಿವಿ, ಎಸಿ, ವಾಷಿಂಗ್ ಮಷೀನ್, ರೆಫ್ರಿಜಿರೇಟರ್, ವೀಡಿಯೋ ಗೇಮ್ಸ್, ವ್ಯಾಕ್ಯೂಮ್ ಕ್ಲೀನರ್ಸ್, ಜ್ಯೂಸ್ ಮಿಕ್ಸರ್, ಗ್ರೈಂಡರ್ಸ್, ಶೇವರ್& ಹೇರ್ ಡ್ರೈಯರ್ಸ್, ವಾಟರ್ ಕೂಲರ್ಸ್-ಹೀಟರ್ಸ್, ಲಿಥಿಯಂ ಬ್ಯಾಟರಿಗಳು, ಸೆಂಟ್, ಟಾಯ್ಲೆಟ್ ಸ್ಪ್ರೇ, ಚರ್ಮೋತ್ಪನ್ನಗಳು, ಪೇಂಟ್ಸ್, ವಾಲ್‍ಪುಟ್ಟಿ, ವಿಶೇಷ ಉದ್ದೇಶದ ವಾಹನಗಳು, ಟ್ರಕ್, ಟ್ರೈಲರ್ಸ್ ವಸುಗಳ ಮೇಲೆ 18% ರಷ್ಟು ತೆರಿಗೆಯನ್ನು ವಿಧಿಸಲಾಗಿದೆ. ಇನ್ನು 68 ಸೆಂಟಿ ಮೀಟರ್ ಅಂದರೆ 27 ಇಂಚಿನ ಟಿವಿ ಮೇಲೆ ವಿಧಿಸಲಾಗಿದ್ದ 28% ತೆರಿಗೆಯನ್ನು 18 % ಗೆ ಇಳಿಕೆ ಮಾಡಲಾಗಿದೆ.

    ಮುಂದಿನ ಜಿಎಸ್‍ಟಿ ಕೌನ್ಸಿಲ್ ಸಭೆ ಆಗಸ್ಟ್ 4 ರಂದು ನಡೆಯಲಿದ್ದು, ಸಕ್ಕರೆ ಮೇಲಿನ ಸೆಸ್ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧಾರವಾರುವ ಇದೆ ಎನ್ನಲಾಗಿದೆ.