Tag: ಕೋವಿನ್ ಪೋರ್ಟಲ್

  • ಕೋವಿನ್ ಪೋರ್ಟಲ್ ಸಂಪೂರ್ಣ ಸುರಕ್ಷಿತವಾಗಿದೆ: ಕೇಂದ್ರ ಸರ್ಕಾರ

    ಕೋವಿನ್ ಪೋರ್ಟಲ್ ಸಂಪೂರ್ಣ ಸುರಕ್ಷಿತವಾಗಿದೆ: ಕೇಂದ್ರ ಸರ್ಕಾರ

    ನವದೆಹಲಿ: ಕೋವಿನ್ ಪೋರ್ಟಲ್‍ (CoWin Portal) ನಿಂದ ಅತ್ಯಂತ ಸೂಕ್ಷ್ಮ ದತ್ತಾಂಶ ಸೋರಿಕೆ ಆಗಿವೆ ಎಂಬ ಸುದ್ದಿಯನ್ನು ಕೇಂದ್ರ ಸರ್ಕಾರ (Central Govt) ತಳ್ಳಿ ಹಾಕಿದೆ.

    ಯಾವುದೇ ಆಧಾರಗಳು ಇಲ್ಲದೇ ಡಾಟಾ ಲೀಕ್ ಆಗಿದೆ ಎಂದು ಹೇಳುವುದು ಸರಿಯಲ್ಲ. ಒಟಿಪಿ (OTP) ಇಲ್ಲದೆ ಡೇಟಾವನ್ನು ಹೊರಗೆಳೆಯುವ ಯಾವುದೇ ಸಾರ್ವಜನಿಕ ಅಪ್ಲಿಕೇಶನ್‍ಗಳಿಲ್ಲ. ಕೋವಿನ್ ಪೋರ್ಟಲ್‍ನಲ್ಲಿ ಎಲ್ಲಾ ದತ್ತಾಂಶಗಳು ಅತ್ಯಂತ ಸೇಫ್ ಆಗಿವೆ. ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಬಗ್ಗೆ ವರದಿ ಸಲ್ಲಿಸುವಂತೆ ಸಿಇಆರ್ ಟಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಎರಡು ತಿಂಗಳ GST ಪಾಲು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ- ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

    ಕೋವಿಡ್ ವ್ಯಾಕ್ಸಿನ್ (Covid Vaccine) ಹಾಕಿಸಿಕೊಂಡವರ ಆಧಾರ್ ಕಾರ್ಡ್, ಫೋನ್ ನಂಬರ್ ಗಳು, ಎಲ್ಲೆಲ್ಲಿ ಎಷ್ಟು ಬಾರಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಟೆಲಿಗ್ರಾಮ್‍ನಲ್ಲಿ ಲೀಕ್ ಆಗಿದೆ. ಯಾವುದೇ ವ್ಯಕ್ತಿಯ ಫೋನ್ ನಂಬರ್ ಇಲ್ಲವೇ ಆಧಾರ್ ನಂಬರ್ ನಮೂದಿಸಿದ್ರೆ ಅವರ ಎಲ್ಲಾ ಮಾಹಿತಿ ಲಭ್ಯವಾಗುತ್ತಿದೆ ಎಂದು ವರದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವಾಲಯ, ಈ ವರದಿ ಆಧಾರರಹಿತ. ಜನರನ್ನು ತಪ್ಪಿಸುವುದಾಗಿದೆ ಎಂದಿದೆ. ಈ ಹಿಂದೆಯೂ ದತ್ತಾಂಶ ಸೋರಿಕೆ ಆಪಾದನೆ ಕೇಳಿಬಂದಿತ್ತು.

    ಡೇಟಾ ಗೌಪ್ಯತೆಗಾಗಿ ಸಾಕಷ್ಟು ಸುರಕ್ಷತೆಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡುತ್ತಾ, ಕೋವಿನ್ ಪೋರ್ಟಲ್‍ಗಾಗಿ ತೆಗೆದುಕೊಂಡ ಭದ್ರತಾ ಕ್ರಮಗಳ ಬಗ್ಗೆಯೂ ಆರೋಗ್ಯ ಸಚಿವಾಲಯ ವಿವರಣೆ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಕೋವಿನ್ ಪೋರ್ಟಲ್ ಕೋವಿಡ್ 19 ವಿರುದ್ಧ ಲಸಿಕೆಯನ್ನು ಪಡೆದ ಫಲಾನುಭವಿಗಳ ಎಲ್ಲಾ ಡೇಟಾದ ಭಂಡಾರವಾಗಿದೆ. ಈ ಸಮಸ್ಯೆಯನ್ನು ಪರಿಶೀಲಿಸಲು ಮತ್ತು ವರದಿಯನ್ನು ಸಲ್ಲಿಸಲು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಕ್ಕೆ (CERT-In) ತಿಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

  • 15 ರಿಂದ 18 ವರ್ಷದವರು ಜ. 1ರಿಂದ ಕೋವಿನ್‌ನಲ್ಲಿ ಲಸಿಕೆಗೆ ಹೆಸರು ನೋಂದಾಯಿಸಬಹುದು

    15 ರಿಂದ 18 ವರ್ಷದವರು ಜ. 1ರಿಂದ ಕೋವಿನ್‌ನಲ್ಲಿ ಲಸಿಕೆಗೆ ಹೆಸರು ನೋಂದಾಯಿಸಬಹುದು

    ನವದೆಹಲಿ: ಭಾರತದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನವರಿ 3 ರಿಂದ 15ರಿಂದ 18 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆಯನ್ನು ನೀಡುವುದಾಗಿ ಸರ್ಕಾರ ಯೋಜಿಸಿದೆ. ಇದಕ್ಕಾಗಿ ಕೋವಿನ್ ಪೋರ್ಟಲ್‌ನಲ್ಲಿ ಜನವರಿ 1ರಿಂದ ನೋಂದಾಯಿಸಿಕೊಳ್ಳಬಹುದು ಎಂದು ಕೋವಿನ್ ಪ್ಲಾಟ್‌ಫಾರ್ಮ್ ಮುಖ್ಯಸ್ಥ ಡಾ. ಆರ್‌ಎಸ್ ಶರ್ಮಾ ತಿಳಿಸಿದ್ದಾರೆ.

    ಜನವರಿ 1ರಿಂದ ಕೋವಿನ್‌ನಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳು ನೋಂದಾಯಿಸಿಕೊಳ್ಳಲು ಸಾಧ್ಯವಾಗಲಿದೆ. ಕೆಲವು ವಿದ್ಯಾರ್ಥಿಗಳಲ್ಲಿ ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿಗಳು ಇಲ್ಲದಿರುವುದರಿಂದ ಲಸಿಕೆಗೆ 10ನೇ ತರಗತಿಯ ಐಡಿ ಕಾರ್ಡ್ ಅಗತ್ಯ ಬೀಳಲಿದೆ. ಇದನ್ನೂ ಓದಿ: ಸಿಎಂ ಕಾರ್ಯಕ್ರಮಕ್ಕೆ ಇಲ್ಲ ಕೊರೊನಾ ರೂಲ್ಸ್ – ಬಸ್‍ಗಳಲ್ಲಿ ಜನರನ್ನು ತುಂಬಿಸಿಕೊಂಡು ಬಂದ ಸರ್ಕಾರ

    15ರಿಂದ 18 ವರ್ಷ ವಯಸ್ಸಿನವರಿಗೆ 2022ರ ಜನವರಿ 3ರಂದು ಲಸಿಕೆಗಳನ್ನು ನೀಡಲು ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ಮೋದಿಯವರು ಶನಿವಾರ ಘೋಷಿಸಿದ್ದರು. 60 ವರ್ಷ ಮೇಲ್ಪಟ್ಟವರು ಜನವರಿ 10ರಿಂದ ವೈದ್ಯರ ಶಿಫಾರಸಿನ ಮೇರೆಗೆ ಬೂಸ್ಟರ್ ಡೋಸ್ ಕೂಡಾ ಪಡೆಯಬಹುದು ಎಂದು ಹೇಳಿದ್ದರು.

    ದೇಶದಲ್ಲಿ 18 ವರ್ಷ ಮೇಲ್ಪಟ್ಟ ಜನಸಂಖ್ಯೆಯಲ್ಲಿ 61% ಜನರು ಎರಡು ಡೋಸ್ ಪಡೆದಿದ್ದಾರೆ ಹಾಗೂ 90% ಜನರು 1 ಡೋಸ್ ಪಡೆದಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದರು. ಇದನ್ನೂ ಓದಿ: ಓಮಿಕ್ರಾನ್ ವೈರಸ್‍ಗೆ ಬೆಚ್ಚಿಬಿದ್ದ ಜನ – ಡಿಸೆಂಬರ್‌ನಲ್ಲಿ ಹೆಚ್ಚು ವ್ಯಾಕ್ಸಿನೇಷನ್