Tag: ಕೋವಿಡ್-19 ಮಾತ್ರೆ

  • ಅಭಿವೃದ್ಧಿಯಾಯ್ತು ಕೋವಿಡ್-19 ಮಾತ್ರೆ; ಮೊದಲ ರಾಷ್ಟ್ರವಾಗಿ ಯುಕೆ ಅನುಮೋದನೆ

    ಅಭಿವೃದ್ಧಿಯಾಯ್ತು ಕೋವಿಡ್-19 ಮಾತ್ರೆ; ಮೊದಲ ರಾಷ್ಟ್ರವಾಗಿ ಯುಕೆ ಅನುಮೋದನೆ

    ಬ್ರಿಟನ್: ಅಮೆರಿಕದ ಮೆರ್ಕ್ಸ್‌ ಮತ್ತು ರಿಡ್ಜ್‌ಬ್ಯಾಕ್‌ ಬಯೋಥೆರಪಿಟಿಕ್ಸ್‌ ಅಭಿವೃದ್ಧಿಪಡಿಸಿರುವ ಕೋವಿಡ್‌-19 ಆ್ಯಂಟಿವೈರಲ್‌ ಮಾತ್ರೆಗೆ ಬ್ರಿಟನ್‌ ಅನುಮೋದನೆ ನೀಡಿದೆ. ವಿಶ್ವದಲ್ಲೇ ಕೋವಿಡ್‌ ಮಾತ್ರೆಗೆ ಅನುಮೋದನೆ ನೀಡಿದ ಮೊದಲ ದೇಶ ಇದಾಗಿದೆ.

    ಮೊಲ್ನುಪಿರವಿರ್‌ (molnupiravir) ಎಂಬ ಔಷಧಿಯನ್ನು ಕೋವಿಡ್‌-19 ಪಾಸಿಟಿವ್‌ ದೃಢಪಟ್ಟ ನಂತರ ಸಾಧ್ಯವಾದಷ್ಟು ಬೇಗ ಅಥವಾ ರೋಗಲಕ್ಷಣಗಳು ಆರಂಭವಾದ ಐದು ದಿನಗಳ ಒಳಗೆ ವೈದ್ಯಕೀಯ ದತ್ತಾಂಶ ಆಧರಿಸಿ ಬಳಸಬಹುದು ಎಂದು ಉಲ್ಲೇಖಿಸಿ ಶಿಫಾರಸು ಮಾಡಿದೆ. ಇದನ್ನೂ ಓದಿ: ಬಿಹಾರ್‌: ನಕಲಿ ಮದ್ಯ ಸೇವಿಸಿ 24 ಮಂದಿ ಸಾವು!

    ವಿಶ್ವಾದ್ಯಂತ 5.2 ಮಿಲಿಯನ್‌ಗಿಂತಲೂ ಹೆಚ್ಚು ಜನರ ಸಾವಿಗೆ ಕಾರಣವಾಗಿರುವ ಕೋವಿಡ್‌ ಸಾಂಕ್ರಾಮಿಕ ನಿಯಂತ್ರಣ ಚಿಕಿತ್ಸೆಯು ಮುಖ್ಯವಾಗಿ ಲಸಿಕೆಗಳ ಮೇಲಷ್ಟೇ ಕೇಂದ್ರೀಕೃತವಾಗಿತ್ತು. ರೆಮ್‌ಡಿಸಿವಿರ್‌, ಜೆನೆರಿಕ್‌ ಸ್ಟಿರಾಯಿಡ್‌ ಅನ್ನು ರೋಗಿ ಆಸ್ಪತ್ರೆಗೆ ಸೇರಿದ ನಂತರ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕೋವಿಡ್‌ ವಿರುದ್ಧ ಹೋರಾಟಕ್ಕೆ ಮಾತ್ರೆ ಬಳಕೆಗೆ ವೇದಿಕೆ ಸಜ್ಜಾಗಿದೆ. ಇದನ್ನೂ ಓದಿ: ರೋಡ್, ಪಾರ್ಕ್, ಮೆಟ್ರೋ, ಬಸ್ ನಿಲ್ದಾಣಕ್ಕೆ ಪುನೀತ್ ಹೆಸರು?

    COVID

    ರೋಗಿಗಳಿಗೆ ಮೊಲ್ನುಪಿರಾವಿರ್‌ ಅನ್ನು ಒದಗಿಸಲು ಪೂರಕ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರ ಮತ್ತು ಎನ್‌ಎಚ್‌ಎಸ್‌ನೊಂದಿಗೆ ತ್ವರಿತವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಆರೋಗ್ಯ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ತಿಳಿಸಿದ್ದಾರೆ.