Tag: ಕೋವಿಡ್-19 ಪರೀಕ್ಷಾ ಕೇಂದ್ರ

  • ದೇಶದಲ್ಲಿ ಮೊದಲು – ದೆಹಲಿಯಲ್ಲಿ ಮೊಬೈಲ್ ಕೋವಿಡ್-19 ಪರೀಕ್ಷಾ ಕೇಂದ್ರ

    ದೇಶದಲ್ಲಿ ಮೊದಲು – ದೆಹಲಿಯಲ್ಲಿ ಮೊಬೈಲ್ ಕೋವಿಡ್-19 ಪರೀಕ್ಷಾ ಕೇಂದ್ರ

    ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವಿಕೆ ಕಡಿವಾಣ ಹಾಕಲು ದೆಹಲಿ ಸರ್ಕಾರ ವಿನೂತನ ಪ್ರಯತ್ನ ಆರಂಭಿಸಿದೆ. ದೇಶದಲ್ಲಿ ಮೊದಲ ಬಾರಿಗೆ ಮೊಬೈಲ್ ಕೋವಿಡ್ 19 ಪರೀಕ್ಷಾ ಕೇಂದ್ರ ಆರಂಭಿಸಿದೆ.

    ಇಂದು ದೆಹಲಿಯ ಚಾಂದನಿ ಮಹಲ್ ಪ್ರದೇಶದಲ್ಲಿ ಈ ಪ್ರಯೋಗ ಆರಂಭವಾಗಿದ್ದು ದೆಹಲಿಯ ಎಲ್ಲ ಪ್ರದೇಶಗಳಲ್ಲಿ ಈ ರೀತಿಯ ಪರೀಕ್ಷಾ ವಾಹನಗಳು ಸಂಚರಿಸಲಿದೆ. ರೋಗದ ಲಕ್ಷಣಗಳು ಇರುವ ಜನರು ಖುದ್ದು ಹೋಗಿ ಪರೀಕ್ಷಾ ಮಾಡಿಸಿಕೊಳ್ಳಬಹುದಾಗಿದೆ.

    ಪ್ರತಿ ಪ್ರದೇಶದಲ್ಲಿ ಆಗಮಿಸಲಿರುವ ಈ ವಾಹನ ಅನುಮಾನಸ್ಪದ ವ್ಯಕ್ತಿಗಳ ಸ್ಯಾಂಪಲ್ ಪಡೆದು ಲ್ಯಾಬ್ ಗಳಿಗೆ ಕಳುಹಿಸಲಿದೆ. ಬಳಿಕ ಲ್ಯಾಬ್ ನೀಡಿದ ವರದಿಯನ್ನು ಆಯಾ ವ್ಯಕ್ತಿಗಳ ಮನೆಗೆ ತಲುಪಿಸುವ ಕಾರ್ಯ ಮಾಡಲಿದೆ. ದೆಹಲಿಯಲ್ಲಿ ಈವರೆಗೂ 2003 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 45 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 80 ಹಾಟ್‍ಸ್ಪಾಟ್ ಗಳನ್ನು ಗುರುತಿಸಿದ್ದು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.