Tag: ಕೋವಿಡ್-19 ಕೊರೊನಾ ವ್ಯಾಕ್ಸಿನ್

  • ಲಸಿಕೆ ತೆಗೆದುಕೊಂಡಿದ್ದರಿಂದ ಸಿಎಂಗೆ ಸೋಂಕು ಜಾಸ್ತಿ ಉಲ್ಬಣವಾಗಲ್ಲ – ವೈದ್ಯರು

    ಲಸಿಕೆ ತೆಗೆದುಕೊಂಡಿದ್ದರಿಂದ ಸಿಎಂಗೆ ಸೋಂಕು ಜಾಸ್ತಿ ಉಲ್ಬಣವಾಗಲ್ಲ – ವೈದ್ಯರು

    ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನರಿಗೆ ಕೊರೊನಾ ಪಾಸಿಟಿವ್ ಬಂದರೂ ಈಗಾಗಲೇ ಲಸಿಕೆಯ ಮೊದಲ ಡೋಸ್ ಪಡೆದ ಕಾರಣ ಸೋಂಕು ಜಾಸ್ತಿ ಉಲ್ಬಣವಾಗುವುದಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

    ಮಣಿಪಾಲದ ವೈದ್ಯರ ತಂಡ ಸಿಎಂ ಯಡಿಯೂರಪ್ಪನವರಿಗೆ ಜ್ವರ ಮತ್ತು ಭುಜನೋವು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

    ಯಡಿಯೂರಪ್ಪ ಅವರು ಈಗಾಗಲೇ ಕೊರೊನಾ ಫಸ್ಟ್ ಡೋಸ್ ವ್ಯಾಕ್ಸಿನ್ ತೆಗೆದುಕೊಂಡಿರುವ ಪರಿಣಾಮ ಅವರಿಗೆ ಖಾಯಿಲೆ ಉಲ್ಬಣ ಆಗುವುದಿಲ್ಲ. ಅದರೂ ಅದು ಅಷ್ಟು ಎಫೆಕ್ಟ್ ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಲಸಿಕೆ ಪಡೆದುಕೊಂಡಿರುವುದರಿಂದಾಗಿ ಜ್ವರ, ಕೆಮ್ಮು, ಗಂಟಲು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹೊರತು ಶ್ವಾಸಕೋಶಕ್ಕೆ ಸೋಂಕು ತಗುಲುವುದಿಲ್ಲ. ಆದರೆ ಡಯಾಬಿಟಿಸ್ ಸಮಸ್ಯೆ ಇರುವುದರಿಂದಾಗಿ ಸಿಎಂ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ.

    ಸಿಟಿ ಸ್ಕ್ಯಾನ್ ನಾರ್ಮಲ್ ಆಗಿರುವುರಿಂದ ಶ್ವಾಸಕೋಶಕ್ಕೆ ಯಾವುದೇ ಸಮಸ್ಯೆ ಇಲ್ಲ ಅನ್ನೋದು ಪ್ರಾಥಮಿಕವಾಗಿ ಗೊತ್ತಾಗಿದೆ. ಹೀಗಾಗಿ ಸಿಎಂಗೆ ಐಸಿಯು ಚಿಕಿತ್ಸೆಯ ಬದಲಾಗಿ, ಸೆಮಿ ಐಸಿಯು ಮಾದರಿಯ ವಾರ್ಡ್‍ನಲ್ಲಿ ಅಥವಾ ನಾರ್ಮಲ್ ವಾರ್ಡ್ ನಲ್ಲಿಯೇ ಚಿಕಿತ್ಸೆ ನೀಡುವ ಸಾಧ್ಯತೆ ಇದೆ. ಮಣಿಪಾಲ ಆಸ್ಪತ್ರೆಯ ವೈದ್ಯರಾದ ಡಾ. ಸತ್ಯನಾರಾಯಣ್ ಮತ್ತು ತಂಡದವರಿಂದ ಸಿಎಂ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ.

    ಎರಡನೇ ಬಾರಿ ಕೊರೊನಾ ಬಂದಿರುವ ಕಾರಣ ಯಡಿಯೂರಪ್ಪ ಅವರು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎರಡು ವಾರಗಳ ನಂತರ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕಾಗುತ್ತದೆ.