Tag: ಕೋವಿಡ್ ಮಾರ್ಗಸೂಚಿ

  • ಕೋವಿಡ್‌ ಕೇಸ್‌ ಹೆಚ್ಚಳ ಬೆನ್ನಲ್ಲೇ ಶಾಲೆಗಳಿಗೆ ಹೊಸ ಮಾರ್ಗಸೂಚಿ ರಿಲೀಸ್‌

    ಕೋವಿಡ್‌ ಕೇಸ್‌ ಹೆಚ್ಚಳ ಬೆನ್ನಲ್ಲೇ ಶಾಲೆಗಳಿಗೆ ಹೊಸ ಮಾರ್ಗಸೂಚಿ ರಿಲೀಸ್‌

    ಬೆಂಗಳೂರು: ಕೊರೊನಾ (Corona) ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್‌ ಆಗಿದ್ದು, ಶಾಲೆಗಳಿಗೆ ಹೊಸ ಮಾರ್ಗಸೂಚಿ (Covid Guidelines For Schools) ಬಿಡುಗಡೆ ಮಾಡಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.

    ಶಾಲೆಗಳಿಗೆ ಹೊಸ ಮಾರ್ಗಸೂಚಿಯಲ್ಲಿ ಏನಿದೆ?
    * ಮಕ್ಕಳಿಗೆ ನೆಗಡಿ, ಜ್ವರ, ಕೆಮ್ಮು ಇದ್ರೆ ಶಾಲೆಗೆ ಕಳುಹಿಸದೇ ವೈದ್ಯರ ಸಲಹೆ ಪಡೆದುಕೊಂಡು ಸೂಕ್ತ ಚಿಕಿತ್ಸೆ, ಆರೈಕೆ ನೀಡಬೇಕು
    * ಜ್ವರ ಸಂಪೂರ್ಣ ಗುಣಮುಖವಾದ ಬಳಿಕ ಮಕ್ಕಳನ್ನ ಶಾಲೆಗೆ ಕಳಿಸಬೇಕು
    * ಶಾಲೆಗೆ ಬಂದ ನಂತ್ರ ಮಕ್ಕಳಲ್ಲಿ ಜ್ವರ ಶೀತ ಗುಣಲಕ್ಷಣಗಳು ಕಂಡುಬಂದ್ರೇ ತಕ್ಷಣ ಪೋಷಕರ ಗಮನಕ್ಕೆ ತಂದು ಮನೆಗೆ ಕಳುಹಿಸಬೇಕು
    * ಶಾಲಾ ಶಿಕ್ಷಕರಿಗೆ ಸಿಬ್ಬಂದಿಗೆ ಜ್ವರ, ಶೀತದಂತಹ ಲಕ್ಷಣ ಕಂಡುಬಂದ್ರೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
    * ಸ್ಯಾನಿಟೈಸ್ ಬಳಕೆ, ಕೈಗಳ ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು ಸೇರಿದಂತೆ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನ ಶಾಲೆಯಲ್ಲಿ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

    ಬೆಂಗಳೂರಿನಲ್ಲಿ 150ರ ಗಡಿ ದಾಟಿದ ಕೊರೊನಾ ಪ್ರಕರಣ
    ರಾಜ್ಯದಲ್ಲಿ ಕೋವಿಡ್ ಕೇಸ್ ಗಣನೀಯವಾಗಿ ಏರಿಕೆ ಕಂಡಿದೆ. ರಾಜ್ಯದ ಒಟ್ಟು ಆಕ್ಟೀವ್ ಕೇಸ್ 234 ಇದ್ದು, ಅದರಲ್ಲಿ ಬೆಂಗಳೂರು ಒಂದರಲ್ಲೇ ಬರೋಬ್ಬರಿ 150ಕ್ಕೂ ಹೆಚ್ಚು ಆಕ್ಟೀವ್ ಕೇಸ್‌ಗಳು ದಾಖಲಾಗಿದೆ. ಬೆಂಗಳೂರು ಮತ್ತೆ ಕೊರೊನಾ ಹಾಟ್‌ಸ್ಪಾಟ್ ಆಗುತ್ತಿದೆ. ಐಎಲ್ ಮತ್ತು ಸಾರಿ ಕೇಸ್‌ಗಳಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಲು ಸರ್ಕಾರ ಸೂಚಿಸಿದೆ. ಇನ್ನು ಬೆಂಗಳೂರಿನಲ್ಲಿ ಕೇಸ್ ಏರಿಕೆ ಆಗುತ್ತಿದ್ದು, ಕೋವಿಡ್ ನಿಯಂತ್ರಣ ಜೊತೆಗೆ ಡೆಂಗ್ಯೂ ಕಾಪಾಡಿಕೊಳ್ಳೋದು ಸವಾಲಾಗಿದೆ. ಮಳೆಗಾಲ ಆಗಿರುವುದರಿಂದ ಬಿಬಿಎಂಪಿ ಆರೋಗ್ಯ ವಿಭಾಗ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

    ಬೆಂಗಳೂರಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ವು ಐಎಲ್‌ಐ, ಸಾರಿ ಕೇಸ್‌ಗಳು ಇವೆ ಎಂಬ ಮಾಹಿತಿ ಇದೆ. ಬಿಬಿಎಂಪಿಯ ಎಂಟು ವಲಯ ಮಹಾದೇವಪುರ, ಯಲಹಂಕ, ಪೂರ್ವ ವಲಯ, ಪಶ್ಚಿಮ ವಲಯ ಮತ್ತು ಬೆಂಗಳೂರು ದಕ್ಷಿಣದಲ್ಲೂ ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ಮತ್ತು ಬೇರೆ ಬೇರೆ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಅಂತಹವರ ಬಗ್ಗೆ ನಿಗಾವಹಿಸಲು ಪಾಲಿಕೆ ಮುಂದಾಗಿದೆ. ಆದರೆ ಮಹಾದೇವಪುರ ಬೆಂಗಳೂರು ದಕ್ಷಿಣ ವಲಯ ಜೊತೆಗೆ ಪೂರ್ವ ವಲಯದಲ್ಲಿ ಕೇಸ್ ಏರಿಕೆ ಆಗುತ್ತಿದೆ. ಪೂರ್ವ ವಲಯದಲ್ಲಿ 30ರ ಗಡಿ ದಾಟಿದೆ. ಮಹಾದೇವಪುರದಲ್ಲಿ ಆಕ್ಟೀವ್ ಕೇಸ್ 30ರ ಗಡಿ ದಾಟಿದೆ ಜೊತೆಗೆ ದಕ್ಷಿಣ ವಲಯದಲ್ಲೂ ಕೇಸ್ ಏರಿಕೆ ಆಗಿದೆ.

    ಇನ್ನೂ ಡೆಂಗ್ಯೂ ಜೊತೆಗೆ ಕೋವಿಡ್ ಕಂಟ್ರೋಲ್ ಮಾಡಲು ಬಿಬಿಎಂಪಿ ಹಲವು ಕ್ರಮ ವಹಿಸುತ್ತಿದೆ. ಐಎಲ್‌ಐ ಮತ್ತು ಸಾರಿ ಕೇಸ್‌ಗಳ ಬಗ್ಗೆ ಎಚ್ಚರಿಕೆ ವಹಿಸುತ್ತಿದೆ.

    ಕೋವಿಡ್ ಲಕ್ಷಣಗಳಿದ್ದರೆ ಏನು ಮಾಡಬೇಕು?
    * ಐಎಲ್‌ಐ, ಸಾರಿ ರೋಗಲಕ್ಷಣಗಳಿದ್ದರೆ ಟೆಸ್ಟ್ ಮಾಡಿಸಬೇಕು.
    * ಆರೋಗ್ಯದಲ್ಲಿ ಏರುಪೇರಾದ್ರೆ ವೈದ್ಯರನ್ನ ಭೇಟಿ ಮಾಡಬೇಕು.
    * ಸಭೆ, ಸಮಾರಂಭಗಳಲ್ಲಿ ಕೊರೊನಾ ನಿಯಮಾವಳಿ ಪಾಲಿಸಬೇಕು.
    * ಮಾಸ್ಕ್ ಹಾಕಬೇಕು, ಸ್ಯಾನಿಟೈಸೇಷನ್ ಮಾಡಿಕೊಳ್ಳಬೇಕು.
    * ಬೇರೆ ಬೇರೆ ಖಾಯಿಲೆಯಿಂದ ಬಳಲುತ್ತಿದ್ದರೆ ಚಿಕಿತ್ಸೆ ಅಗತ್ಯ.

  • ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಭಾರೀ ದಂಡ – ಯಾವ ರಾಜ್ಯದಲ್ಲಿ ಎಷ್ಟಿದೆ ಗೊತ್ತಾ?

    ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಭಾರೀ ದಂಡ – ಯಾವ ರಾಜ್ಯದಲ್ಲಿ ಎಷ್ಟಿದೆ ಗೊತ್ತಾ?

    ನವದೆಹಲಿ: ದೆಹಲಿ, ಗುಜರಾತ್, ಉತ್ತರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಿಯಂತ್ರಿಸಲು ಅಧಿಕಾರಿಗಳು ನಾನಾ ರೀತಿಯ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಕಠಿಣ ನಿಯಮಗಳಿಗೂ ಬಗ್ಗದ ಜನರಿಗೆ ಪೊಲೀಸರು ಹಾಗೂ ಅಧಿಕಾರಿಗಳು ದಂಡದ ಮೂಲಕ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

    Chitradurga mask Awareness

    ಕೊರೊನಾ ನಿಯಂತ್ರಿಸುವ ಸಲುವಾಗಿ ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಮಾಸ್ಕ್, ಸಾರ್ವಜನಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕ, ಚಂಡೀಗಢ ಮೊದಲಾದ ರಾಜ್ಯಗಳಲ್ಲೂ ಇಂದಿನಿಂದ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸದಿದ್ದರೆ, ಸಂಚಾರದ ವೇಳೆ ಉಗುಳುವುದು ಕಂಡು ಬಂದರೆ ಅಂಥವರಿಗೆ ದಂಡದ ಬಿಸಿ ಮುಟ್ಟಿಸುವಂತೆಯೂ ಸರ್ಕಾರ ಸೂಚನೆ ನೀಡಿದೆ. ಅದರಂತೆ ಹಲವು ರಾಜ್ಯಗಳು ಹಲವು ರೀತಿಯಲ್ಲಿ ದಂಡ ಶುಲ್ಕವನ್ನು ನಿಗದಿಮಾಡಿವೆ. ಇದನ್ನೂ ಓದಿ: ಉಕ್ರೇನ್ ರಿಟರ್ನ್ ವಿದ್ಯಾರ್ಥಿಗಳು ಶೀಘ್ರವೇ ಗುಡ್ ನ್ಯೂಸ್: ಸುಧಾಕರ್

    mask Awareness

    ನಿಯಮ ಉಲ್ಲಂಘಿಸುವವರಿಗೆ ಕರ್ನಾಟಕದಲ್ಲಿ ಪ್ರತಿ ಅಪರಾಧಕ್ಕೆ 250 ರೂ., ಗೋವಾದಲ್ಲಿ 200 ರೂ., ಆಂಧ್ರಪ್ರದೇಶದಲ್ಲಿ 100 ರೂ. ಇದ್ದರೆ, ಒಡಿಶಾ, ಗುಜರಾತ್, ಉತ್ತರಖಾಂಡ, ತಮಿಳುನಾಡು, ತೆಲಂಗಾಣ ಮೊದಲಾದ ರಾಜ್ಯಗಳಲ್ಲಿ 500 ರಿಂದ 5 ಸಾವಿರ ರೂ. ವರೆಗೂ ದಂಡದ ಮೊತ್ತವನ್ನು ನಿಗದಿ ಮಾಡಲಾಗಿದೆ. ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಇದನ್ನೂ ಓದಿ:  ಆನೆ ದಂತದಲ್ಲಿ ಚೆಸ್ ಪಾನ್ ಕೆತ್ತನೆ – ಮಾರಾಟ ಮಾಡುವಾಗ ಸಿಕ್ಕಿಬಿದ್ದ 

    Social distance

    ಯಾವ ರಾಜ್ಯದಲ್ಲಿ ಎಷ್ಟು ಶುಲ್ಕ? (ರೂಪಾಯಿಗಳಲ್ಲಿ)
    ಕರ್ನಾಟಕ- 250
    ಒಡಿಶಾ- 2 ರಿಂದ 5 ಸಾವಿರ
    ಉತ್ತರಖಾಂಡ್- 100 ರಿಂದ 1000
    ದೆಹಲಿ- 500 (ಪ್ರತಿ ಅಪರಾಧಕ್ಕೆ)
    ತೆಲಂಗಾಣ- 1000
    ತಮಿಳುನಾಡು- 500
    ಮಧ್ಯಪ್ರದೇಶ – 500
    ರಾಜಾಸ್ಥಾನ- 500
    ಗೋವಾ – 200
    ಗುಜರಾತ್- 1000
    ಆಂಧ್ರಪ್ರದೇಶ- 100
    ಚಂಡೀಗಢ- 500
    ಛತ್ತಿಸ್‌ಗಢ- 500
    ಹರಿಯಾಣ- 500

  • ಸಂಚಾರದ ವೇಳೆ ಉಗುಳಿದರೂ ಬೀಳುತ್ತೆ ದಂಡ: ಕೋವಿಡ್ ಹೊಸ ಮಾರ್ಗಸೂಚಿಯಲ್ಲಿ ಏನಿದೆ?

    ಸಂಚಾರದ ವೇಳೆ ಉಗುಳಿದರೂ ಬೀಳುತ್ತೆ ದಂಡ: ಕೋವಿಡ್ ಹೊಸ ಮಾರ್ಗಸೂಚಿಯಲ್ಲಿ ಏನಿದೆ?

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರಾಥಮಿಕ ಹಂತದಲ್ಲೇ ಕಡಿವಾಣ ಹಾಕುವ ಸಲುವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಕೋವಿಡ್ ನೂತನ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.

    covid guidelines

    ರಾಜ್ಯದಲ್ಲಿ ಫೆ.28 ರಿಂದ ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಲಾಗಿತ್ತು. ಕೋವಿಡ್ ಕಡಿಮೆಯಾದ ಹಿನ್ನೆಲೆಯಲ್ಲಿ, ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಪ್ರಸ್ತುತ ಕರ್ನಾಟಕ, ದೆಹಲಿ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಕೋವಿಡ್ ನೂತನ ಮಾರ್ಗಸೂಚಿಯನ್ನು ಪಾಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ದೆಹಲಿ ಶಾಲೆಯ ತರಗತಿಯಲ್ಲಿ ಹಾಜರಾಗಿ ಪಾಠ ಕೇಳಿದ ಕೇಜ್ರಿವಾಲ್, ಭಗವಂತ್ ಮಾನ್

    covid

    ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಸಲಹೆ ಆದೇಶ ಹೊರಡಿಸಲಾಗಿದ್ದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾರ್ವಜನಿಕ ಅಂತರ ಪಾಲನೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ, ಸಂಚಾರದ ವೇಳೆ ಉಗುಳುವುದನ್ನು ನಿರ್ಬಂಧಿಸಬೇಕು. ಒಂದು ವೇಳೆ ಉಗುಳುವುದು ಕಂಡರೆ ಸ್ಥಳೀಯ ಆಡಳಿತಾಧಿಕಾರಿಗಳು ದಂಡ ವಿಧಿಸುವಂತೆ ನಿಯಮ ಜಾರಿಗೊಳಿಸಬೇಕು ಎಂದು ಪಿ.ರವಿ ಕುಮಾರ್ ಆದೇಶ ಹೊರಡಿಸಿದ್ದಾರೆ.

  • ಕೋವಿಡ್ ಮಾರ್ಗಸೂಚಿಯನ್ನೇ ತೆಗೆದ ನಾರ್ವೆ

    ಕೋವಿಡ್ ಮಾರ್ಗಸೂಚಿಯನ್ನೇ ತೆಗೆದ ನಾರ್ವೆ

    ಓಸ್ಲೊ: ಪ್ರಪಂಚದಾದ್ಯಂತ ಕೋವಿಡ್ ರೂಪಾಂತರಿ ಓಮಿಕ್ರಾನ್ ಉಲ್ಬಣಗೊಳ್ಳುತ್ತಿದ್ದರೂ ನಾರ್ವೆ ದೇಶದಲ್ಲಿ ಮಾತ್ರ ಕೋವಿಡ್ ಕಟ್ಟು ನಿಟ್ಟಿನ ಮಾರ್ಗಸೂಚಿಗಳನ್ನು ತೆಗೆದು ಹಾಕಿದೆ.

    ನಾರ್ವೆ ಸರ್ಕಾರ ಕೋವಿಡ್-19 ತಡೆಗಟ್ಟಲು ವಿಧಿಸಿದ್ದ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದು ಹಾಕಿದೆ. ಇದರ ಪ್ರಕಾರ ಅಲ್ಲಿನ ಜನರು ಇನ್ನು ಮುಂದೆ ಸಾಮಾಜಿಕ ಅಂತರ ಹಾಗೂ ಮಾಸ್ಕ್‌ಗಳನ್ನು ಧರಿಸುವ ಅಗತ್ಯ ಇರುವುದಿಲ್ಲ. ಇದನ್ನೂ ಓದಿ: ಒಟ್ಟು 3,202, ಬೆಂಗ್ಳೂರಲ್ಲಿ 1,293 ಕೇಸ್ – ಪಾಸಿಟಿವಿಟಿ ರೇಟ್ ಶೇ.2.95ಕ್ಕೆ ಇಳಿಕೆ

    ಸಾಮಾಜಿಕ ಅಂತರದ ನಿಯಮವನ್ನು ನಾವು ತೆಗೆದು ಹಾಕುತ್ತಿದ್ದೇವೆ. ಇನ್ನು ಮುಂದೆ ನಾವು ಮೊದಲಿನಂತೆ ಜೀವಿಸಬಹುದು. ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಾವಿನ್ನು ಬೆರೆಯಬಹುದು. ಬಸ್ಸು, ರೈಲು ಹಾಗೂ ದೋಣಿಯಲ್ಲಿ ನಿಶ್ಚಿಂತರಾಗಿ ಪ್ರಯಾಣಿಸಬಹುದು ಎಂದು ನಾರ್ವೆ ಪ್ರಧಾನ ಮಂತ್ರಿ ಜೊನಾಸ್ ಗಹರ್ ಸ್ಟೋರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿ ಜಿಲ್ಲೆಗಳಲ್ಲೂ ಮಹಿಳಾ ಪೊಲೀಸ್ ಠಾಣೆ ಇರಬೇಕು – ಸಂಸದೀಯ ಸಮಿತಿ

    ಕೋವಿಡ್ ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ. ಲಸಿಕೆ ಹಾಕಿಸಿಕೊಳ್ಳದವರು ಸಾಮಾಜಿಕ ಅಂತರ ಪಾಲಿಸುವುದನ್ನು ಮುಂದುವರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಸಾಧ್ಯವಾದಾಗ ಮಾಸ್ಕ್ ಧರಿಸುವುದು ಅಗತ್ಯ ಎಂದು ಒತ್ತಿ ಹೇಳಿದ್ದಾರೆ.