Tag: ಕೋವಿಡ್ ಬೂಸ್ಟರ್ ಹಗರಣ

  • ಕೋವಿಡ್ ಬೂಸ್ಟರ್ ಲಸಿಕೆ ಎಂಬುದು ಹಗರಣ: WHO ಮುಖ್ಯಸ್ಥ

    ಕೋವಿಡ್ ಬೂಸ್ಟರ್ ಲಸಿಕೆ ಎಂಬುದು ಹಗರಣ: WHO ಮುಖ್ಯಸ್ಥ

    ಜಿನೇವಾ: ಶ್ರೀಮಂತ ರಾಷ್ಟ್ರಗಳು ಕೋವಿಡ್ ಬೂಸ್ಟರ್ ಹೆಸರಿನಲ್ಲಿ ನಡೆಸುತ್ತಿರುವ ಲಸಿಕೆಯ ಅಸಮಾನ ಹಂಚಿಕೆ ಒಂದು ಹಗರಣವಾಗಿದೆ. ಅದು ನಿಲ್ಲಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ.

    ಬಡ ರಾಷ್ಟ್ರಗಳ ಜನರು ಒಂದು ಡೋಸ್ ಲಸಿಕೆ ಪಡೆಯಲು ಇನ್ನೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶ್ರೀಮಂತ ರಾಷ್ಟ್ರಗಳಲ್ಲಿ ಕೋವಿಡ್ ಬೂಸ್ಟರ್ ಹೆಸರಿನಲ್ಲಿ ಲಸಿಕೆ ಅಸಮಾನ ಹಂಚಿಕೆಯಾಗುತ್ತಿದೆ. ಇದು ಹಗರಣವಾಗಿದ್ದು, ಮೊದಲು ನಿಲ್ಲಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮರಿ ಖರ್ಗೆ ಹೆಸರು ಗಂಡೋ, ಹೆಣ್ಣೋ ಎಂಬ ಕ್ಲಾರಿಟಿ ಇಲ್ಲ: ಪ್ರತಾಪ್ ಸಿಂಹ

    ಕಡಿಮೆ ಆದಾಯದ ದೇಶಗಳಲ್ಲಿ ಇನ್ನು ಕೂಡಾ ಪ್ರಾಥಮಿಕ ಹಂತದಲ್ಲಿ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಅದಕ್ಕಿಂತಲೂ ಆರು ಪಟ್ಟು ಮಿಗಿಲಾಗಿ ಹಲವು ದೇಶಗಳಲ್ಲಿ ಕೋವಿಡ್ ಬೂಸ್ಟರ್ ಅಭಿಯಾನ ನಡೆಯುತ್ತಿದೆ. ನಿಜಕ್ಕೂ ಇದೊಂದು ಹಗರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಎಷ್ಟು ಜನರಿಗೆ ಲಸಿಕೆ ಹಾಕಲಾಗಿದೆ ಎಂಬುದಷ್ಟೇ ಅಲ್ಲ, ಯಾರು ಲಸಿಕೆ ಪಡೆದಿದ್ದಾರೆ ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆಗೆ ಸೋನು ಸೂದ್ ಸೋದರಿ ಸ್ಪರ್ಧೆ – ಪಕ್ಷ ಇನ್ನೂ ಸಸ್ಪೆನ್ಸ್!

    ಆರೋಗ್ಯವಂತ ವಯಸ್ಕರಿಗೆ ಬೂಸ್ಟರ್‌ಗಳನ್ನು ಹಾಗೂ ಮಕ್ಕಳಿಗೆ ಲಸಿಕೆ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ಪ್ರಪಂಚದಾದ್ಯಂತ ಆರೋಗ್ಯ ಕಾರ್ಯಕರ್ತರು, ವೃದ್ಧರು, ಸಂಕಷ್ಟದಲ್ಲಿರುವ ಹಲವು ಗುಂಪುಗಳು ಮೊದಲ ಡೋಸ್‍ಗಾಗಿ ಇನ್ನೂ ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.