Tag: ಕೋವಿಡ್ ಪಾಸಿಟಿವ್

  • ಕೋವಿಡ್ ಆತಂಕ – ಬೆಂಗಳೂರಿನ ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೊರೊನಾ ಪಾಸಿಟಿವ್

    ಕೋವಿಡ್ ಆತಂಕ – ಬೆಂಗಳೂರಿನ ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಮಹಾಮಾರಿ ಕೊರೊನಾ(Corona) ರಾಜ್ಯಕ್ಕೆ ಮತ್ತೆ ವಕ್ಕರಿಸಿಕೊಂಡಿದ್ದು, ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೋವಿಡ್ ಪಾಸಿಟಿವ್ ಕಾಣಿಸಿದೆ.

    ಮಲ್ಲೇಶ್ವರಂನ(Malleshwaram) 45 ವರ್ಷದ ವ್ಯಕ್ತಿಗೆ ಹಾಗೂ ರಾಜಾಜಿನಗರದ(Rajajinagara) 38 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೇ ಇವರಿಬ್ಬರಿಗೂ ಕೋವಿಡ್ ಕಾಣಸಿಕೊಂಡಿದ್ದು, ಇಬ್ಬರನ್ನು ಹೋಂ ಐಸೂಲೇಷನ್‌ನಲ್ಲಿ ಇರಿಸಲಾಗಿದೆ. ಇದನ್ನೂ ಓದಿ: 3 ವರ್ಷಗಳ ಬಳಿಕ ಮತ್ತೆ ವಕ್ಕರಿಸಿದ ಕೊರೊನಾ – ದೇಶದ ಹಲವು ರಾಜ್ಯಗಳಲ್ಲಿ JN1 ಎಂಟ್ರಿ

    ಬೆಂಗಳೂರಿನಲ್ಲಿ ವೈಟ್‌ಫೀಲ್ಡ್‌ನ(Whitefield) 84 ವರ್ಷದ ವೃದ್ಧ ಮೇ 17ರಂದು ಕೊರೊನಾಗೆ ಬಲಿಯಾಗಿದ್ದಾರೆ. ಮೇ 13ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕೊರೊನಾಗೆ ತುತ್ತಾಗಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಕೇಸ್ ಇವೆ. ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿ ಒಟ್ಟು ಮೂರು ಜನ ಮಕ್ಕಳಿಗೆ ಕೋವಿಡ್ ಪಾಸಿಟಿವ್(Covid Positive) ಬಂದಿದೆ. ಸದ್ಯ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕಾಲುಗಳಿಗೆ ಹಗ್ಗ ಕಟ್ಟಿ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ

    ಶನಿವಾರ ರಾಜ್ಯದಲ್ಲಿ 108 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ ಐವರಿಗೆ ಕೋವಿಡ್ ಬಂದಿದೆ. ಶನಿವಾರ ಬೆಂಗಳೂರಲ್ಲಿ 2, ಮೈಸೂರು 2 ಹಾಗೂ ವಿಜಯನಗರದಲ್ಲಿ ಒಂದು ಕೋವಿಡ್ ಕೇಸ್ ಪತ್ತೆಯಾಗಿತ್ತು.

  • ನಟ ವಿಜಯಕಾಂತ್ ನಿಧನ: ಅನಾರೋಗ್ಯದ ಜೊತೆ ಕೊರೋನಾ ಪಾಸಿಟಿವ್

    ನಟ ವಿಜಯಕಾಂತ್ ನಿಧನ: ಅನಾರೋಗ್ಯದ ಜೊತೆ ಕೊರೋನಾ ಪಾಸಿಟಿವ್

    ಮಿಳಿನ (Tamil Nadu) ಹೆಸರಾಂತ ನಟ, ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದವರು. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಇತ್ತೀಚೆಗಷ್ಟೇ ಅವರಿಗೆ ಕೋವಿಡ್ ಪಾಸಿಟಿವ್ (Covid positive) ಆಗಿದ್ದು, ನಂತರ ತತಕ್ಷಣವೇ ಅವರನ್ನು ಐಸಿಯೂಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ತಮಿಳು ನಾಡಿನ ಡಿಎಂಡಿಕೆ (DMDK) ಮುಖ್ಯಸ್ಥರೂ ಆಗಿರುವ ಕ್ಯಾಪ್ಟನ್ ವಿಜಯಕಾಂತ್ ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದವು. ಕ್ಯಾಪ್ಟನ್ ವಿಜಯಕಾಂತ್ (Vijayakanth) ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿದರೆ, ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷ ಅದನ್ನು ನಿರಾಕರಿಸಿತ್ತು. ಮಾಧ್ಯಮಗಳು ಪ್ರಸಾರ ಮಾಡುವಂತೆ ಕ್ಯಾಪ್ಟನ್ ಅವರ ಆರೋಗ್ಯ ತೀರಾ ಹದಗೆಟ್ಟಿಲ್ಲ. ಜ್ವರ ಮತ್ತು ಶೀತದಿಂದ ಅವರು ಬಳಲುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಮನೆಗೆ ಬರಲಿದ್ದಾರೆ ಎಂದು ಹೇಳಿದ್ದರು.ಆದರೆ, ಮನೆಗೆ ಬಾರದೇ, ಬಾರದ ಲೋಕಕ್ಕೆ ಹೋಗಿದ್ಧಾರೆ ಕ್ಯಾಪ್ಟನ್ ವಿಜಯಕಾಂತ್.

    ಹಲವಾರು ವರ್ಷಗಳ ಕಾಲ ನಟರಾಗಿ ಚಿತ್ರೋದ್ಯಮಕ್ಕೆ ಸೇವೆ ಸಲ್ಲಿಸಿರುವ ಕ್ಯಾಪ್ಟನ್ ವಿಜಯಕಾಂತ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಗಳು ಅವರನ್ನೂ ಕಾಡುತ್ತಿದ್ದವು. ರೆಗ್ಯುಲರ್ ತಪಾಸಣೆಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲೆಯಾಗಿದ್ದಾರೆ ಎಂದು ಹೇಳುವ ಮೂಲಕ ಗೊಂದಲದ ಹೇಳಿಕೆಗಳನ್ನೂ ಪಕ್ಷ ಕೊಟ್ಟಿತ್ತು.

     

    ತಮಿಳುನಾಡು ಆರೋಗ್ಯ ಸಚಿವರು ನೀಡಿದ ಮತ್ತೊಂದು ಹೇಳಿಕೆ ಅಭಿಮಾನಿಗಳನ್ನು ಆತಂಕಕ್ಕೆ ದೂಡಿದ್ದರು. ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತನಾಡಿದ್ದೇನೆ. ಐಸಿಯುನಲ್ಲಿ (ICU) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಹಾಗಾಗಿ ಸಹಜವಾಗಿಯೇ ವಿಜಯಕಾಂತ್ ಆರೋಗ್ಯದ ಬಗ್ಗೆ ಗೊಂದಲ ಮೂಡಿತ್ತು. ಈಗ ಎಲ್ಲದಕ್ಕೂ ತೆರೆ ಎಳೆಯಲಾಗಿದೆ.

  • ಚುನಾವಣಾ ಕರ್ತವ್ಯದಿಂದ ಎಸ್ಕೇಪ್ ಆಗಲು ನಕಲಿ ಕೋವಿಡ್ ರಿಪೋರ್ಟ್ – ಶಿಕ್ಷಕಿ ವಿರುದ್ಧ ಎಫ್‌ಐಆರ್

    ಚುನಾವಣಾ ಕರ್ತವ್ಯದಿಂದ ಎಸ್ಕೇಪ್ ಆಗಲು ನಕಲಿ ಕೋವಿಡ್ ರಿಪೋರ್ಟ್ – ಶಿಕ್ಷಕಿ ವಿರುದ್ಧ ಎಫ್‌ಐಆರ್

    (ಸಾಂದರ್ಭಿಕ ಚಿತ್ರ)

    ಲಕ್ನೋ: ಮುನ್ಸಿಪಾಲ್ ಚುನಾವಣೆಯಲ್ಲಿ (Municipal Election) ಮತದಾನ ಕರ್ತವ್ಯದಿಂದ ವಿನಾಯಿತಿ ಪಡೆಯುವ ಸಲುವಾಗಿ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ನಕಲಿ ಕೋವಿಡ್-19 ಪಾಸಿಟಿವ್ ರಿಪೋರ್ಟ್ ನೀಡಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಪಿಲಿಭಿತ್‌ನ (Pilibhit) ಪುರನ್‌ಪುರ ಪ್ರದೇಶದಲ್ಲಿ ನಡೆದಿದೆ.

    ಮೇ 11ರಂದು ನಡೆಯಲಿರುವ ಪುರಸಭಾ ಚುನಾವಣೆಗೆ ಆಯೋಜಿಸಿದ್ದ ಪಿಂಕ್ ಮತಗಟ್ಟೆಯ ಮತಗಟ್ಟೆ ಸಂಖ್ಯೆ 3ರಲ್ಲಿ ರಿತು ತೋಮರ್ ಅವರನ್ನು ಮತಗಟ್ಟೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶಿಕ್ಷಕಿ ಕೋವಿಡ್ ಪಾಸಿಟಿವ್ (Covid Positive) ಎಂಬ ನಕಲಿ ದಾಖಲೆಯನ್ನು ತೋರಿಸಿ, ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ದಾಖಲೆಯನ್ನು ಪರಿಶೀಲಿಸಿದಾಗ ಅದು ಇನ್ನೊಬ್ಬ ವ್ಯಕ್ತಿಯ ದಾಖಲೆಗಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

    ನಕಲಿ ದಾಖಲೆ ನೀಡಿದ ಶಿಕ್ಷಕಿ ಚುನಾವಣಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಇವರ ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ಮೂಲ ಶಿಕ್ಷಾ ಅಧಿಕಾರಿ (BSA) ಅಮಿತ್ ಕುಮಾರ್ ಸಿಂಗ್ ಅವರಿಗೆ ಮಂಗಳವಾರ ಆದೇಶ ನೀಡಿದ್ದಾರೆ. ಇದನ್ನೂ ಓದಿ: 105ರ ಇಳಿವಯಸ್ಸಿನಲ್ಲೂ ಹುರುಪಿನಿಂದ ಮತ ಚಲಾಯಿಸಿದ ಶತಾಯುಷಿ

  • ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೊನಾ ನೆಗೆಟಿವ್: ವೈದ್ಯರ ಸ್ಪಷ್ಟನೆ

    ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೊನಾ ನೆಗೆಟಿವ್: ವೈದ್ಯರ ಸ್ಪಷ್ಟನೆ

    – ಪತ್ನಿ ಚೆನ್ನಮ್ಮಗೆ ಮಾತ್ರ ಪಾಸಿಟಿವ್

    ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕೋವಿಡ್ ಆರ್‍ಟಿಪಿಸಿಆರ್ ಟೆಸ್ಟ್ ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಅವರು ಸ್ಪಷ್ಟನೆ ನೀಡಿದ್ದಾರೆ.

    ಇಂದು ಬೆಳಗ್ಗೆ ನನಗೆ ಹಾಗೂ ಪತ್ನಿ ಚೆನ್ನಮ್ಮಗೆ ಕೋವಿಡ್ ಪಾಸಿಟಿವ್ ಎಂದು ಮಾಜಿ ಪ್ರಧಾನಿ ದೇವೇಗೌಡರು ಟ್ವೀಟ್ ಮಾಡಿದ್ದರು. ಜೊತೆಗೆ ನಮ್ಮ ಸಂಪರ್ಕಕ್ಕೆ ಬಂದವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿಯನ್ನೂ ಮಾಡಿದ್ದರು.

    ಈ ಬಗ್ಗೆ ಸಂಜೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ. ಸುದರ್ಶನ್ ಬಲ್ಲಾಳ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಕೊರೊನಾ ನೆಗೆಟಿವ್ ಇದೆ. ಜ್ವರ ಇರುವುದಕ್ಕೆ ಮಾತ್ರ ಅಡ್ಮಿಟ್ ಆಗಿದ್ದಾರೆ. ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಮಾತ್ರ ಪಾಸಿಟಿವ್ ಇದೆ. ಮಣಿಪಾಲ್ ಆಸ್ಪತ್ರೆಯಲ್ಲೇ ಹೆಚ್‍ಡಿಡಿ, ಚೆನ್ನಮ್ಮ ಅವರಿಗೆ ಚಿಕಿತ್ಸೆ ನೀಡಲಾಗುವುದು. ಜ್ವರದಿಂದ ಬಳಲುತ್ತಿರುವ ಹೆಚ್‍ಡಿಡಿ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

    ದೇವೇಗೌಡರ ಆರ್ ಟಿಪಿಸಿಆರ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದ್ದು, ಸಿಟಿ ಸ್ಕ್ಯಾನ್‍ನಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ಸಿಟಿ ಸ್ಕ್ಯಾನಿಂಗ್‍ನಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಕೋವಿಡ್ ಚಿಕಿತ್ಸೆ ಕೊಡಬೇಕಾಗುತ್ತದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.

    ಇದಕ್ಕೂ ಮುನ್ನ ದೇವೇಗೌಡರು ಹಾಗೂ ಚೆನ್ನಮ್ಮ ಅವರಿಗೆ ಪಾಸಿಟಿವ್ ಬಂದಿದೆ ಎಂಬ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿ ನಾಲ್ವರು, ದ್ವಿತೀಯ ಸಂಪರ್ಕದಲ್ಲಿ 21 ಜನರು ಇದ್ದು, ಒಟ್ಟು 25 ಜನರ ಗಂಟಲು ದ್ರವದ ಮಾದರಿಯನ್ನು ಪಾಲಿಕೆಯ ಆರೋಗ್ಯಾಧಿಕಾರಿಗಳು ಸಂಗ್ರಹಿಸಿದ್ದಾರೆ. ಇವರ ಟ್ರಾವೆಲ್ ಹಿಸ್ಟರಿ ದೆಹಲಿ ಎಂದು ತಿಳಿದು ಬಂದಿದೆ.

  • ಪಿಪಿಇ ಕಿಟ್ ಧರಿಸಿ ಟೆಕ್ಕಿ ಪ್ರಿಯತಮೆಯನ್ನೇ ಕರೆದೊಯ್ದ ಪ್ರಿಯಕರ

    ಪಿಪಿಇ ಕಿಟ್ ಧರಿಸಿ ಟೆಕ್ಕಿ ಪ್ರಿಯತಮೆಯನ್ನೇ ಕರೆದೊಯ್ದ ಪ್ರಿಯಕರ

    – ಕೊರೊನಾ ಪಾಸಿಟಿವ್ ಡ್ರಾಮಾ ಮಾಡಿ ಪ್ರಿಯಕರನೊಂದಿಗೆ ಎಸ್ಕೇಪ್
    – ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ ಪತಿ

    ಬೆಂಗಳೂರು: ಪ್ರಿಯಕರನ ಜೊತೆ ಓಡಿಹೋಗಲು ಕೊರೊನಾ ಪಾಸಿಟಿವ್ ಡ್ರಾಮಾ ಮಾಡಿದ ಮಹಿಳೆ ಗೆಳೆಯನೊಂದಿಗೆ ಎಸ್ಕೇಪ್ ಆಗಿರುವ ಘಟನೆ ನಗರದ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

    ಬೊಮ್ಮನಹಳ್ಳಿಯಲ್ಲಿ ರುಚಿಕುಮಾರಿ (28) ಮತ್ತು ವಿಕ್ಕಿ ಕುಮಾರ್ (30) ದಂಪತಿ ವಾಸಿಸುತ್ತಿದ್ದರು. ಇಬ್ಬರೂ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‍ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮನೆಯಲ್ಲೇ ಇಬ್ಬರು ಕೆಲಸ ಮಾಡುತ್ತಿದ್ದರು. ಈ ವೇಳೆ ಗಂಡ, ಹೆಂಡತಿ ನಡುವೆ ಜಗಳ ಆರಂಭವಾಗಿತ್ತು. ಲಾಕ್‍ಡೌನ್ ಇದ್ದ ಕಾರಣದಿಂದ ಪತಿ, ಪತ್ನಿಗೆ ಹೊರ ಹೋಗದಂತೆ ತಾಕೀತು ಮಾಡಿದ್ದ. ಈ ನಡುವೆ ಗಂಡನ ಜೊತೆ ಕಿರಿಕ್ ಮಾಡಿಕೊಂಡಿದ್ದ ಮಹಿಳೆ ಮನೆಯಿಂದ ಹೊರ ಹೋಗಲು ಪ್ಲಾನ್ ಮಾಡಿದ್ದಳು.

    ಮಹಿಳೆ ಪ್ಲಾನ್ ಮಾಡಿದಂತೆ ರಾಂಚಿಯ ಗೆಳೆಯ ಮೊಹಮ್ಮದ್ ಗೆ ಕರೆ ಮಾಡಿ ಮನೆಯಿಂದ ಹೊರಗೆ ಕರೆದುಕೊಂಡು ಹೋಗಲು ಹೇಳಿದ್ದಳು. ರಾಂಚಿಯಿಂದ ಬಂದ ಮೊಹಮ್ಮದ್, ಸೆಪ್ಟೆಂಬರ್ 1 ರಂದು ಆಂಬುಲೆನ್ಸ್ ಬಾಡಿಗೆಗೆ ತಂದು ಪಿಪಿಇ ಕಿಟ್ ಧರಿಸಿಕೊಂಡು ಬಿಬಿಎಂಪಿ ಆರೋಗ್ಯ ಅಧಿಕಾರಿ ಎಂದು ಹೇಳಿ ಗಂಡ, ಹೆಂಡತಿ ಇಬ್ಬರ ಸ್ವಾಬ್ ಸಂಗ್ರಹಿಸಿದ್ದ. ಬಳಿಕ 3 ದಿನ ಬಿಟ್ಟು ಪತ್ನಿಗೆ ಮಾತ್ರ ಪಾಸಿಟಿವ್ ಬಂದಿದೆ ಎಂದು ಮೊಬೈಲ್‍ಗೆ ಸಂದೇಶ ಕಳುಹಿಸಿದ್ದ. ಅದೇ ದಿನ ಮನೆಯ ಬಳಿ ಬಂದು ಆಕೆಯನ್ನು ಮನೆಯಿಂದ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದ. ಈ ವೇಳೆ ಪತ್ನಿಯ ಪಾಸಿಟಿವ್ ಬಂದಿದ್ದ ಬಗ್ಗೆ ಬಿಯು ನಂಬರ್ ಕೇಳಿದ್ದರೆ ಈಗ ಇಲ್ಲ ಎಂದು ತಿಳಿಸಿ ಅಲ್ಲಿಂದ ತೆರಳಿದ್ದ.

    ಮನೆಯಿಂದ ಕರೆದುಕೊಂಡು ಹೋಗುವ ವೇಳೆ ಯಾವ ಆಸ್ಪತ್ರೆ ಎಂದು ಪ್ರಶ್ನೆ ಮಾಡಿದ್ದ ಪ್ರಭುಗೆ ಸ್ಥಳೀಯ ಪ್ರಶಾಂತ್ ಆಸ್ಪತ್ರೆ ಎಂದು ಮೊಹಮ್ಮದ್ ಹೇಳಿದ್ದ. ಅಲ್ಲದೇ ಪತ್ನಿಗೆ ಪಾಸಿಟಿವ್ ಬಂದ ಕಾರಣ ಮೂರು ದಿನ ಮನೆಯಲ್ಲೇ ಕ್ವಾರಂಟೈನ್ ಆಗುವಂತೆ ಸೂಚಿಸಿದ್ದ. ಬಳಿಕ ಮೂರು ದಿನ ಆದರೂ ಪತ್ನಿಯಿಂದ ಫೋನ್ ಕರೆ ಬಂದಿರಲಿಲ್ಲ. ಅಲ್ಲದೇ ಆಕೆಯ ನಂಬರಿಗೆ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಅನುಮಾನಗೊಂಡ ಪತಿ ಆಸ್ಪತ್ರೆಯ ಬಳಿ ತೆರಳಿ ಪತ್ನಿಗಾಗಿ ಹುಡುಕಾಟ ನಡೆಸಿದ್ದ.

    ಕೊನೆಗೆ ಆಸ್ಪತ್ರೆಯಲ್ಲಿ ಪತ್ನಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡಿದ್ದ ಪತಿ ಕೂಡಲೇ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿದ್ದ ಮಹಿಳೆಗಾಗಿ ಹುಡುಕಾಟ ಆರಂಭಿಸಿದ್ದರು. ಈ ವೇಳೆ ರುಚಿಕುಮಾರಿ ಹಾಗೂ ಪಿಪಿಇ ಕಿಟ್ ಧರಿಸಿ ಬಂದಿದ್ದ ಇಬ್ಬರ ಮೊಬೈಲ್ ನೆಟ್‍ವರ್ಕ್ ಟ್ರ್ಯಾಕ್ ಮಾಡಿದ್ದರು. ಆಗ ಮಹಿಳೆ ದೆಹಲಿಯಲ್ಲಿರುವುದು ಖಚಿತವಾಗಿತ್ತು. ಈ ವೇಳೆ ಆಕೆಯನ್ನು ಸಂಪರ್ಕಿಸಿದ್ದ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದ ಆಕೆ, ನಾನೇ ಸ್ನೇಹಿತನ ಜೊತೆ ಬಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಳು. ಪ್ರಕರಣದ ಸಂಬಂಧ ಸದ್ಯ ಪತಿ, ಪತ್ನಿ ಹಾಗೂ ಸ್ನೇಹಿತ ಮೊಹಮ್ಮದ್ ಹೇಳಿಕೆ ದಾಖಲು ಮಾಡಿಕೊಂಡು ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದ್ದಾರೆ.

  • ಐಪಿಎಲ್‍ನಲ್ಲಿ ಮತ್ತೆ ಕೊರೊನಾ ಕೋಲಾಹಲ- ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪಾಸಿಟಿವ್

    ಐಪಿಎಲ್‍ನಲ್ಲಿ ಮತ್ತೆ ಕೊರೊನಾ ಕೋಲಾಹಲ- ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪಾಸಿಟಿವ್

    ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಮತ್ತೆ ಕೊರೊನಾ ವೈರಸ್ ಕೋಲಾಹಲವನ್ನು ಉಂಟು ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮೊದಲ ಕೊರೊನಾ ಪ್ರಕರಣ ದೃಢಪಟ್ಟಿದೆ.

    ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ 13 ಮಂದಿ ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದರು. ಇದರ ನಡುವೆಯೇ ಬಿಸಿಸಿಐ ಐಪಿಎಲ್ ಶೆಡ್ಯೂಲನ್ನು ಬಿಡುಗಡೆ ಮಾಡಿತ್ತು. ಆದರೆ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಸಿಸ್ಟೆಂಟ್ ಫಿಜಿಯೋಥೆರಪಿಸ್ಟ್ ಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.

    ಯುಎಇನಲ್ಲಿ ಸೆ.19 ರಿಂದ ನ.10 ರವರೆಗೂ ಐಪಿಎಲ್ 2020ರ ಆವೃತ್ತಿ ನಡೆಯಲಿದೆ. ಆಗಸ್ಟ್ 20ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಯುಎಇಗೆ ಪ್ರಯಾಣಿಸಿತ್ತು. ಆ ಬಳಿಕ ತಂಡದ ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಸದ್ಯ ತಂಡದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ ಎಂದು ತಂಡ ಖಚಿತ ಪಡಿಸಿದೆ.

    ಯುಎಇಗೆ ತೆರಳಿದ ಬಳಿಕ ನಡೆಸಿದ 2 ಕೊರೊನಾ ಪರೀಕ್ಷೆಗಳಲ್ಲಿ ಆತನ ವರದಿ ನೆಗೆಟಿವ್ ಬಂದಿತ್ತು. ಆದರೆ ಸದ್ಯ 3ನೇ ವರದಿಯಲ್ಲಿ ಪಾಸಿಟಿವ್ ಬಂದಿದೆ. ಪರಿಣಾಮ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಯುಎಇ ತೆರಳಿದ ಬಳಿಕ ಯಾವುದೇ ಆಟಗಾರ, ತಂಡದ ಸದಸ್ಯರು ಆತನನ್ನು ಭೇಟಿ ಮಾಡಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಸ್ಪಷ್ಟಪಡಿಸಿದೆ. 14 ದಿನಗಳ ಬಳಿಕ ನಡೆಯುವ ಪರೀಕ್ಷೆಯಲ್ಲಿ ನೆಗೆಟಿವ್ ವರಿದ ಬಂದರೇ ಮಾತ್ರ ಆತನಿಗೆ ತಂಡದೊಂದಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದಿದೆ. ಇತ್ತ 2020ರ ಐಪಿಎಲ್ ಶೆಡ್ಯೂಲನ್ನು ಬಿಸಿಸಿಐ ಭಾನುವಾರವಷ್ಟೇ ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ಚೆನ್ನೈ ಜೊತೆ ಮೊದಲ ಪಂದ್ಯ, ಮೂರನೇ ದಿನ ಬೆಂಗಳೂರು ಮ್ಯಾಚ್

  • ರಜೆಯಲ್ಲಿದ್ದ ಬೆಂಗ್ಳೂರಿನ ಪೇದೆಗೆ ಕೋವಿಡ್ ಪಾಸಿಟಿವ್

    ರಜೆಯಲ್ಲಿದ್ದ ಬೆಂಗ್ಳೂರಿನ ಪೇದೆಗೆ ಕೋವಿಡ್ ಪಾಸಿಟಿವ್

    ಬೆಂಗಳೂರು: ನಗರದ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಬೆಚ್ಚಿ ಬಿದ್ದಿದೆ.

    ಚೆಕ್ ಪೋಸ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಸೇರಿದಂತೆ 50 ವರ್ಷ ಮೇಲ್ಪಟ್ಟ ಸಿಬ್ಬಂದಿಯನ್ನು ರ್‍ಯಾಂಡಮ್ ಆಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಬೇಗೂರಿನ ಪೇದೆಗೆ ಪಾಸಿಟಿವ್ ಬಂದಿದೆ.

    ಈ ಹೆಡ್ ಕಾನ್ ಸ್ಟೇಬಲ್ ಕೊರೊನಾ ಆರಂಭದ 15 ದಿನ ಚೆಕ್ ಪೋಸ್ಟ್ ಗಳಲ್ಲಿ ಕೆಲಸ ಮಾಡಿದ್ದಾರೆ. 15 ದಿನ ಹಿಂದೆ ಮಳವಳ್ಳಿಗೆ ಹೋಗಿದ್ದಾಗ ಅಪಘಾತವಾಗಿದ್ದು ತಲೆಗೆ ಮತ್ತು ಕಾಲಿಗೆ ಪೆಟ್ಟು ಬಿದ್ದಿದೆ. ಅಪಘಾತವಾದ ಬಳಿಕ ಪೇದೆ ರಜೆಯಲ್ಲಿದ್ದರು.

    ರಜಾ ಅವಧಿಯಲ್ಲಿ ಪೇದೆ ಮಳವಳ್ಳಿಗೆ ತೆರಳಿದ್ದರಿಂದ ಕೊರೊನಾ ಬಂದಿರಬಹುದೇ? ಕೋವಿಡ್ ಆಸ್ಪತ್ರೆಯಲ್ಲಿ ಅಣ್ಣನ ಪತ್ನಿ ನರ್ಸ್ ಆಗಿರುವ ಕಾರಣ ಆಕೆಯ ಕಡೆಯಿಂದ ಬಂದಿರಬಹುದೇ? ಆರಂಭದ ದಿನದಲ್ಲಿ ಚೆಕ್ ಪೋಸ್ಟ್ ಡ್ಯೂಟಿ ಮಾಡಿದಾಗ ತಗುಲಿರಬಹುದೇ ಈ ಎಲ್ಲ ಕೋನದಿಂದ ಈಗ ಮೂಲವನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದೆ.

    ಪೇದೆಗೆ ಇಬ್ಬರು ಅಣ್ಣಂದಿರಿದ್ದು ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಮೊದಲೇ ಅಣ್ಣ ವೈದ್ಯರಾಗಿದ್ದು, ಅಣ್ಣನ ಪತ್ನಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡನೇ ಅಣ್ಣ ಪ್ರಸಿದ್ಧ ಫಾರ್ಮಾ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.

    ಪೇದೆಯ ಪತ್ನಿಯೂ ನರ್ಸ್ ಆಗಿ ಉದ್ಯೋಗ ಮಾಡಿಕೊಂಡಿದ್ದಾರೆ. ಈಗ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರ ಫಲಿತಾಂಶ ಬರಬೇಕಿದೆ. 9 ಮಂದಿ ಪ್ರಾಥಮಿಕ ಸಂಪರ್ಕ, 45 ಮಂದಿ ದ್ವಿತೀಯ ಸಂಪರ್ಕಕ್ಕೆ ಬಂದಿದ್ದು ಅವರನೆಲ್ಲ ಕ್ವಾರಂಟೈನ್ ಮಾಡಲಾಗಿದೆ.