Tag: ಕೋವಿಡ್ ನಿಯಮ

  • ಕೊರೊನಾ 4ನೇ ಅಲೆ ಕಂಟ್ರೋಲ್‌ಗೆ ತಜ್ಞರ ವರದಿ ಕೇಳಿದ ಸರ್ಕಾರ

    ಕೊರೊನಾ 4ನೇ ಅಲೆ ಕಂಟ್ರೋಲ್‌ಗೆ ತಜ್ಞರ ವರದಿ ಕೇಳಿದ ಸರ್ಕಾರ

    ಬೆಂಗಳೂರು: ಕೊರೊನಾ 4ನೇ ಅಲೆಯ ಭೀತಿ ರಾಜ್ಯದಲ್ಲಿ ಪ್ರಾರಂಭವಾಗಿದೆ. ನಿಧಾನಗತಿಯಲ್ಲಿ ಕೊರೊನಾ ಕೇಸ್ ಹೆಚ್ಚಳ ಆಗುತ್ತಿದೆ. ಕೊರೊನಾ 4ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ, ನಾಲ್ಕನೇ ಅಲೆ ತಡೆಗೆ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ನೀಡುವಂತೆ ಸೂಚನೆ ನೀಡಿದೆ.

    ನಿನ್ನೆಯಷ್ಟೆ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದಿತ್ತು. ಸಭೆಯಲ್ಲಿ ಅನಗತ್ಯವಾಗಿ ಯಾವುದೇ ನಿರ್ಬಂಧ ಹಾಕಬೇಡಿ ಅಂತ ಪ್ರಧಾನಿಗಳು ಸೂಚನೆ ನೀಡಿದ್ದರು. ಟೆಸ್ಟಿಂಗ್, ಟ್ರೇಸಿಂಗ್, ಟ್ರಿಟ್‌ಮೆಂಟ್ ಸೂತ್ರ ಅನುಷ್ಠಾನ ಮಾಡಿ ಅಂತ ಸಲಹೆ ಕೊಟ್ಟಿದ್ದರು. ಪ್ರಧಾನಿಗಳ ಸಲಹೆ ಮೇರೆಗೆ ರಾಜ್ಯ ಸರ್ಕಾರವೂ ಕೂಡಾ ಯಾವುದೇ ಟಫ್ ರೂಲ್ಸ್ ಜಾರಿ ಮಾಡದೇ ಕೆಲವೊಂದು ನಿರ್ಧಾರಗಳನ್ನ ಮಾತ್ರ ಘೋಷಣೆ ಮಾಡಿದೆ. ಇದನ್ನೂ ಓದಿ: 24 ಗಂಟೆಯಲ್ಲಿ 3,303 ಮಂದಿಗೆ ಸೋಂಕು – ಹೆಚ್ಚಿದ ಪಾಸಿಟಿವಿಟಿ ದರ

    VIDHAN SHOUDHA

    ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೆಲ ಪ್ರಾರಂಭಿಕ ನಿಯಮಗಳನ್ನು ಸರ್ಕಾರ ಜಾರಿ ಮಾಡಿದೆ. ಅದನ್ನ ಹೊರತುಪಡಿಸಿ ಕೆಲವು ಕ್ರಮಗಳನ್ನು ಸರ್ಕಾರ ಜಾರಿ ಮಾಡಿದೆ.

    ರಾಜ್ಯದಲ್ಲಿ ಜೂನ್ ವೇಳೆಗೆ 4ನೇ ಅಲೆ ಬರುವ ನಿರೀಕ್ಷೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ವರದಿ ನೀಡುವಂತೆ ತಾಂತ್ರಿಕ ಸಲಹಾ ಸಮಿತಿಗೆ ಸರ್ಕಾರ ಸೂಚನೆ ನೀಡಿದೆ. ರಾಜ್ಯಕ್ಕೆ 4ನೇ ಅಲೆ ವೈಜ್ಞಾನಿಕವಾಗಿ ಯಾವಾಗ ಪ್ರಾರಂಭ ಆಗಬಹುದು. ನಾಲ್ಕನೇ ಅಲೆ ಅಂತ್ಯ ಯಾವಾಗ ಆಗಬಹುದು? ಅನ್ನೋ ಮಾಹಿತಿ ನೀಡಲು ತಜ್ಞರಿಗೆ ಮನವಿ ಮಾಡಲಾಗಿದೆ. 4ನೇ ಅಲೆಯ ತೀವ್ರತೆ ಹೇಗೆ ಇರಲಿದೆ? ಬೇರೆ ಬೇರೆ ದೇಶಗಳು, ರಾಜ್ಯಗಳ ವರದಿ ಪರಾಮರ್ಶಿಸಿ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕುಡಿಯಲು ಮಾತ್ರ ನೀರು ಕೊಡ್ತೀವಿ, ಬೆಳೆಗಳಿಗೆ ಕೊಡಲು ಆಗಲ್ಲ: ಗೋವಿಂದ್ ಕಾರಜೋಳ

    COVID HIKE 2

    4ನೇ ಅಲೆ ನಿಯಂತ್ರಣಕ್ಕೆ ಪ್ರಾರಂಭಿಕ ಹಂತಗಳಲ್ಲಿ ಯಾವ ನಿಯಮಗಳನ್ನ ಅನುಷ್ಠಾನ ಮಾಡಬೇಕು. ಸಾವು-ನೋವು, ಕೋವಿಡ್ ಹರಡುವಿಕೆಯ ವೇಗ, ಚಿಕಿತ್ಸಾ ವಿಧಾನಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. 4ನೇ ಅಲೆ ಯಾವ ವಯೋಮಾನದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅದನ್ನ ನಿಯಂತ್ರಣ ಮಾಡೋದು ಹೇಗೆ? ಅಂತರರಾಜ್ಯ ಗಡಿಗಳು, ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಯಾವ ನಿಯಮ ಜಾರಿ ಮಾಡಬೇಕು. ಬೆಂಗಳೂರಿನಲ್ಲಿ ಕೊರೊ‌ನಾ ಹಾಟ್‌ಸ್ಪಾಟ್ ತಡೆಗೆ ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಮೊದಲ ಹಂತದ ನಿಯಮಗಳು ಹೇಗೆ ಜಾರಿ ಮಾಡಬೇಕು. ಮಾಲ್, ಮಾರುಕಟ್ಟೆ, ಸಮಾರಂಭಗಳು, ಜಾತ್ರೆ, ಹಬ್ಬಗಳು, ಪ್ರಾರ್ಥನಾ ಮಂದಿರಗಳು, ಸಿನಿಮಾ ಹಾಲ್‌ಗಳು, ಕ್ರೀಡಾ ಸಂಕೀರ್ಣಗಳಲ್ಲಿ ಯಾವ ನಿಯಮ ಜಾರಿ ಮಾಡಬೇಕು ಅನ್ನೋ ಮಾಹಿತಿಯನ್ನು ಸರ್ಕಾರ ಕೇಳಿದೆ.

    ಹೊಟೇಲ್, ಬಾರ್, ಪಬ್, ದೇವಾಲಯ, ಮಸೀದಿ, ಚರ್ಚ್, ಪ್ರಾರ್ಥನಾ ಮಂದಿರಗಳಿಗೆ ಯಾವ ನಿಯಮ ಜಾರಿ ಮಾಡಬೇಕು. ಸಾರ್ವಜನಿಕ ಸಾರಿಗೆಗಳಲ್ಲಿ ಯಾವ ನಿಯಮಗಳು ಜಾರಿ ಮಾಡಬೇಕು ಅನ್ನೋ ಮಾಹಿತಿ. ಶಾಲಾ-ಕಾಲೇಜುಗಳಲ್ಲಿ ಕೊರೊನಾ ಕಂಟ್ರೋಲ್‌ಗೆ ಯಾವ ನಿಯಮ ಅನುಷ್ಠಾನ ಮಾಡಬೇಕು ಅನ್ನೋ ವರದಿ ಕೊಡುವಂತೆ ತಜ್ಞರಿಗೆ ಸರ್ಕಾರದ ಸೂಚನೆ‌ ನೀಡಿದೆ.

  • ಕೋವಿಡ್ ಟಫ್‌ ರೂಲ್ಸ್‌ ಜಾರಿಯಾದ್ರೂ ಪಾದಯಾತ್ರೆ ಮಾಡೇ ಮಾಡ್ತೀವಿ: ಸಿದ್ದರಾಮಯ್ಯ

    ಕೋವಿಡ್ ಟಫ್‌ ರೂಲ್ಸ್‌ ಜಾರಿಯಾದ್ರೂ ಪಾದಯಾತ್ರೆ ಮಾಡೇ ಮಾಡ್ತೀವಿ: ಸಿದ್ದರಾಮಯ್ಯ

    ಬೆಂಗಳೂರು: ಮಕ್ಕಿಕಾಮಕ್ಕಿ ಕೊರೊನಾ ಟಫ್‌ ರೂಲ್ಸ್‌ ಜಾರಿಯಾದರೂ ನಾವು ಪಾದಯಾತ್ರೆ ಮಾಡೇ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ. ನಾವು ಜನರನ್ನು ಉಳಿಸುವ ಕೆಲಸವನ್ನೂ ಮಾಡುತ್ತೇವೆ. ಪಾದಯಾತ್ರೆಯಿಂದ ಯಾರಿಗೂ ತೊಂದರೆಯಾಗಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಾಪ್‌ ದುಬಾರಿ ಬಜೆಟ್‌ ಸಿನಿಮಾಗಳಿಗೆ ಕೋವಿಡ್‌ ಶಾಕ್‌ – ರಿಲೀಸ್‌ ಡೇಟ್‌ ಮುಂದಕ್ಕೆ

    ಪಾದಯಾತ್ರೆ ನಿಲ್ಲಿಸಲು ಟಫ್ ರೂಲ್ಸ್ ತಂದಿದ್ದಾರಾ? ಅದೆಲ್ಲ ನನಗೆ ಗೊತ್ತಿಲ್ಲ. ಆದರೆ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.

    144 ಸೆಕ್ಷನ್ ಜಾರಿಯಿದ್ದರೆ 5ಕ್ಕೂ ಹೆಚ್ಚು ಜನ ಸೇರುವಂತಿಲ್ಲ. ನಾವು ನಾಲ್ಕು ಜನ ನಡೆಯುತ್ತೇವೆ. ಜನರಿಗೆ ಪಾದಯಾತ್ರೆಗೆ ಬರಲು ಮನವಿ ಮಾಡಿದ್ದೇವೆ. ಬಂದವರಿಗೆ ಮಾಸ್ಕ್, ಸ್ಯಾನಿಟೈಸ್, ಗ್ಲೌಸ್ ಹಾಕಿಸುತ್ತೇವೆ. ನಿಯಮಮಾನುಸಾರ ಮಾಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕೊರೊನಾ ಸೋಂಕಿತ ಆಸ್ಪತ್ರೆಯಿಂದ ಎಸ್ಕೇಪ್

  • ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಟೀಲ್

    ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಟೀಲ್

    ಧಾರವಾಡ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಧಾರವಾಡದಲ್ಲಿ ಪಾಲಿಕೆ ಚುನಾವಣೆ ಪ್ರಚಾರದ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ.

    ಬಿಜೆಪಿ ಮುಖಂಡರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಇಂದು ನಳಿನ್‍ಕುಮಾರ್ ಕಟೀಲ್ ಧಾರವಾಡದ ಹಲವು ವಾರ್ಡ್ ಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಈ ವೇಳೆ ಕಟೀಲ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪಾದಯಾತ್ರೆ ಮೂಲಕ ಪ್ರಚಾರ ಮಾಡಿದ್ದಾರೆ.ಇದನ್ನೂ ಓದಿ:ಕೇರಳದ 32 ಮಂದಿಗೆ ಸೋಂಕು, ಕೋಲಾರದ ನರ್ಸಿಂಗ್ ಕಾಲೇಜು ವಿರುದ್ಧ ಕಠಿಣ ಕ್ರಮ: ಸುಧಾಕರ್

    ಕೋವಿಡ್ ನಿಯಮದಂತೆ ಪ್ರಚಾರದಲ್ಲಿ ಕೇವಲ 5 ಜನ ಭಾಗವಹಿಸಬೇಕು ಎಂದು ಸೂಚನೆ ಇದ್ದರೂ ನೂರಾರು ಕಾರ್ಯಕರ್ತರ ಜೊತೆಯಲ್ಲಿ ಕಟೀಲ್ ಪ್ರಚಾರ ಕೈಗೊಂಡಿದ್ದಾರೆ. ಈ ಪ್ರಚಾರದಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಮಾಸ್ಕ್ ಕೂಡಾ ಇಲ್ಲದೆ ಬಂದಿದ್ದರು. ಪ್ರಚಾರಕ್ಕೂ ಮುನ್ನ ಕಟೀಲ್ ಅವರು ಧಾರವಾಡ ಮುರುಘಾಮಠಕ್ಕೆ ಭೇಟಿ ನೀಡಿದ್ದು, ಅವರಿಗೆ ಬಿಜೆಪಿ ಕಾರ್ಯಕರ್ತರು ಆರತಿ ಬೆಳಗುವುದರ ಮೂಲಕ ಸ್ವಾಗತಿಸಿದರು.ಇದನ್ನೂ ಓದಿ:ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ