Tag: ಕೋವಿಡ್ ಕೇರ್ ಸೆಂಟರ್

  • ಸೋಂಕಿತರ ರಂಜನೆಗಾಗಿ ರಸಮಂಜರಿ-ಹಾಡಿಗೆ ತಲೆದೂಗಿದ ಸೋಂಕಿತರು

    ಸೋಂಕಿತರ ರಂಜನೆಗಾಗಿ ರಸಮಂಜರಿ-ಹಾಡಿಗೆ ತಲೆದೂಗಿದ ಸೋಂಕಿತರು

    ತುಮಕೂರು: ಕೋವಿಡ್ ಕೇರ್ ಸೆಂಟರಲ್ಲಿ ಸೋಂಕಿತರ ರಂಜನೆಗಾಗಿ ರಸಮಂಜರಿ ನಡೆಸಲಾಗಿದೆ. ಮಧುಗಿರಿ ತಾಲೂಕಿನ ಬಡವನಹಳ್ಳಿ ಕೇಂದ್ರದಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

    ರಿಯಾಲಿಟಿ ಶೋ ಗಾಯಕ ಕಂಬದ ರಂಗಯ್ಯ ಗೊಂಬೆ ಹೇಳತೈತೆ ಹಾಡು ಸೇರಿದಂತೆ ಹಲವು ಹಾಡು ಹಾಡಿ ಸೋಂಕಿತರಿಗೆ ರಂಜಿಸಿದ್ದಾರೆ. ಅದೇ ರೀತಿ ಮಧುಗಿರಿ ಎಸಿ ಸೋಮಪ್ಪ ಕೂಡ ಹಳೆ ಸಿನೆಮಾ ಹಾಡನ್ನು ಹಾಡಿ ತಲೆದೂಗುವಂತೆ ಮಾಡಿದ್ದಾರೆ.

    ಕೋವಿಡ್ ಕೇರ್ ಸೆಂಟರಲ್ಲಿ 80 ಕ್ಕೂ ಹೆಚ್ಚು ಸೋಂಕಿತರಿದ್ದು ಎಲ್ಲರ ಮಾನಸಿಕ ಆರೋಗ್ಯ ವೃದ್ದಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಧುಗಿರಿ ತಾಲೂಕಿನಲ್ಲಿ 04 ಕೋವಿಡ್ ಕೇರ್ ಸೆಂಟರ್ ಇದ್ದು ತಾಲೂಕು ಆಡಳಿತ ಸೋಂಕಿತರ ಮಾನಸಿಕ ಆರೋಗ್ಯ ವೃದ್ಧಿಗಾಗಿ ಈ ರೀತಿಯ ಕಾರ್ಯ ಕ್ರಮ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

    ಭಾರತದಲ್ಲಿ ದೈನಂದಿನ ಕೊರೊನಾ ವೈರಸ್ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1,20,529 ಕೇಸ್ ದಾಖಲಾಗಿವೆ. ಅಲ್ಲದೆ, 3,380 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

    ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,86,94,879ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 3,44,082ಕ್ಕೆ ತಲುಪಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15,55,248ಕ್ಕೆ ಏರಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 1,97,894 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 2,67,95,549ಕ್ಕೆ ತಲುಪಿದೆ.

  • ನಮ್ಮನ್ನ ಪ್ಲೀಸ್ ಮನೆಗೆ ಕಳಿಸಿ- ಕೋವಿಡ್ ಸೋಂಕಿತರ ಅಳಲು

    ನಮ್ಮನ್ನ ಪ್ಲೀಸ್ ಮನೆಗೆ ಕಳಿಸಿ- ಕೋವಿಡ್ ಸೋಂಕಿತರ ಅಳಲು

    ಮಂಡ್ಯ: ದಯವಿಟ್ಟು ನಮ್ಮನ್ನ ಮನೆಗೆ ಕಳುಹಿಸಿಕೊಟ್ಟು ಬಿಡಿ, ನಾವು ಮನೆಯಲ್ಲೇ ಚೆನ್ನಾಗಿ ಇರುತ್ತೇವೆ ಎಂದು ಕೋವಿಡ್ ಕೇರ್ ಸೆಂಟರ್‍ನಲ್ಲಿ ಇರುವ ಕೊರೊನಾ ಸೋಂಕಿತರು ಗೋಳಾಟ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಬದರಿಕೊಪ್ಪಲು ಗ್ರಾಮದಲ್ಲಿ ಜರುಗಿದೆ. ಇದನ್ನೂ ಓದಿ: 200 ಕುಟುಂಬಗಳಿಗೆ ತಲಾ 3000 ನೀಡಿದ ಅಮೆರಿಕದಲ್ಲಿ ನೆಲೆಸಿರೋ ಕನ್ನಡಿಗ

    ಬದರಿಕೊಪ್ಪಲು ಗ್ರಾಮದಲ್ಲಿರುವ ಕೋವಿಡ್ ಸೆಂಟರ್‌ನಲ್ಲಿ ಸೋಂಕಿರತರಿಗೆ ಸರಿಯಾದ ಸೌಲಭ್ಯಗಳನ್ನು ನೀಡುತ್ತಿಲ್ಲ. ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಕುಡಿಯುವ ನೀರು ಮುಗಿದು ಎರಡು ದಿನವಾದರು ನೀರು ಕೊಟ್ಟಿಲ್ಲ. ಎಲ್ಲಾ ಸವಲತ್ತು ಕೊಡುತ್ತೇವೆ ಎಂದು ನರಕದಲ್ಲಿ ತಂದು ಹಾಕಿದ್ದಾರೆ ಎಂದು ಕೋವಿಡ್ ಸೋಂಕಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ:  ಆಕ್ಸಿಜನ್ ಆಯ್ತು, ಈಗ ಮಂಡ್ಯದಲ್ಲಿ ಶುರುವಾಗಿದೆ ಅಂಬುಲೆನ್ಸ್ ಪಾಲಿಟಿಕ್ಸ್

    ನನ್ನ ಮಗುವಿಗೆ ಮೂರು ದಿನದಿಂದ ಕೆಮ್ಮು ಇದೆ. ಔಷಧಿ ಕೇಳಿದ್ರೆ ಕೊಡುತ್ತಿಲ್ಲ. ಕೊಡುವ ಊಟ ತಣ್ಣಗೆ ಇರುತ್ತೆ, ಊಟವನ್ನು ಮಾಡಲು ಆಗುವುದಿಲ್ಲ. ದಯವಿಟ್ಟು ನಮ್ಮನ್ನ ಬಿಟ್ಟು ಬಿಡಿ ನಾವು ಮನೆಗೆ ಹೋಗಿ ಔಷಧಿ ಹಾಗೂ ಒಳ್ಳೆಯ ಊಟ ಮಾಡಿಕೊಂಡು ಗುಣಮುಖರಾಗುತ್ತೇವೆ ಎಂದು ಮಹಿಳೆಯೊಬ್ಬರು ಅಳಲು ತೊಡಿಕೊಂಡಿದ್ದಾರೆ.  ಇದನ್ನೂ ಓದಿ:  ಮಂಡ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಮುಗಿ ಬಿದ್ದ ಜನ

  • ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಜಿಲ್ಲಾಡಳಿತ – ಕೋವಿಡ್ ಕೇರ್ ಸೆಂಟರ್ ಗೆ ಜಿಲ್ಲಾಧಿಕಾರಿ ಭೇಟಿ

    ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಜಿಲ್ಲಾಡಳಿತ – ಕೋವಿಡ್ ಕೇರ್ ಸೆಂಟರ್ ಗೆ ಜಿಲ್ಲಾಧಿಕಾರಿ ಭೇಟಿ

    ಬಳ್ಳಾರಿ: ಪಬ್ಲಿಕ್ ಟಿವಿ ವರದಿ ಬಳಿಕ ಬಳ್ಳಾರಿ ಜಿಲ್ಲಾಧಿಕಾರಿಗಳು ಕೋವಿಡ್ ಕೇರ್ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

    ಕಳೆದ ಎರಡು ದಿನಗಳ ಹಿಂದ ಕೋವಿಡ್ ಕೇರ್ ಸೆಂಟರ್ ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳು ಊಟ ಮಾಡದೆ ಪ್ರತಿಭಟನೆ ಮಾಡಿದ್ದರು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಸರಿಯಾದ ಊಟ ನೀಡದ ಕಾರಣ ಅಲ್ಲಿನ ಸುಮಾರು 60 ಜನ ರೋಗಿಗಳು ಊಟ ಮಾಡದೇ ಪ್ರತಿಭಟನೆ ಮಾಡಿದ್ದರು.

    ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿಗೆ ಎಚ್ಚೆತ್ತ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಸೇರಿದಂತೆ ಜಿಲ್ಲಾ ಪಂಚಾಯತ್ ಸಿಇಒ ನಂದಿನಿ ಅವರು ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ್ದಾರೆ. ಅಲ್ಲಿ ದಾಖಲಾಗಿರುವ 60ಕ್ಕೂ ಹೆಚ್ಚು ಜನರ ಯೋಗಕ್ಷೇಮ ವಿಚಾರ ನಡೆಸಿ, ಸರಿಯಾದ ರೀತಿಯಲ್ಲಿ ಊಟ ನೀಡುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬೆಡ್ ಕಡಿಮೆ ಇರುವ ಕಾರಣ ರೋಗ ಲಕ್ಷಣಗಳು ಇಲ್ಲದವರನ್ನು ಮನೆಯಲ್ಲಿರಿಸಿ ಚಿಕಿತ್ಸೆ ನೀಡಲು ಸರ್ಕಾರ ಮುಂದಾಗಿತ್ತು, ಆದ್ರೆ ಹೋಮ್ ಐಸೋಲೇಶನ್ ನಿಂದಾಗಿ ಸೋಂಕು ಹೆಚ್ಚಾದ ಕಾರಣ ಜಿಲ್ಲಾಡಳಿತ ಪ್ರತಿ ತಾಲೂಕಿನ ಕೋವಿಡ್ ಕೇರ್ ಸೆಂಟರ್ ತೆರೆದು ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಕೇರ್ ಸೆಂಟರ್ ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳು ಪ್ರತಿಭಟನೆ ಮಾಡಿದ್ದರು.

  • ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದ ತಹಶೀಲ್ದಾರ್

    ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದ ತಹಶೀಲ್ದಾರ್

    ಬೆಂಗಳೂರು: ಇಂದು ನೆಲಮಂಗಲ ತಹಶೀಲ್ದಾರ್ ಮಂಜುನಾಥ್ ಆರೋಗ್ಯಾಧಿಕಾರಿಗಳ ಜೊತೆಗೆ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದರು.

    ಎರಡನೇ ಅಲೆಯ ಮಹಾಮಾರಿ ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈ ನಡುವೆ ಜನಸಾಮಾನ್ಯರ ಚಿಕಿತ್ಸೆಗೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಟಿಬೆಟಿಯನ್ ವಸತಿ ಗೃಹದಲ್ಲಿ 120 ಹಾಸಿಗೆಯ ವ್ಯವಸ್ಥೆಯನ್ನ ನೆಲಮಂಗಲ ತಾಲೂಕು ಆಡಳಿತದಿಂದ ಕೊವೀಡ್ ಕೇರ್ ಸೆಂಟರ್ ತೆರೆಯಲಾಗಿತ್ತು. ಈಗಾಗಲೇ ಕೊವೀಡ್ ಕೇರ್ ಸೆಂಟರ್ ನಲ್ಲಿ ಪ್ರತ್ಯೇಕವಾಗಿ ಪುರುಷ ಹಾಗೂ ಮಹಿಳೆಯರಿಗೆ ಕೊಠಡಿ ವ್ಯವಸ್ಥೆಯನ್ನ ಮಾಡಲಾಗಿದೆ.

    ಹಳ್ಳಿಗಾಡಿನ ಕೊರೊನ ಸೋಂಕಿತರ ಆರೋಗ್ಯ ವಿಚಾರಿಸಿದ ತಹಶೀಲ್ದಾರ್ ಮಂಜುನಾಥ್, ಕೇರ್ ಸೆಂಟರ್ ನಲ್ಲಿನ ಚಿಕಿತ್ಸೆ, ಶೌಚಾಲಯ, ಸ್ವಚ್ಛತೆ ಹಾಗೂ ಉತ್ತಮ ಗುಣಮಟ್ಟದ ಊಟ ಉಪಚಾರದ ಬಗ್ಗೆ ಸೋಂಕಿತರಿಂದಲೇ ಮಾಹಿತಿ ಪಡೆದರು. ಜೊತೆಗೆ ಸೋಂಕಿತರಿಗೆ ಕೊರೋನ ಜಾಗೃತಿ ಮೂಡಿಸಿ ಆತಂಕ ಪಡದಂತೆ ಧೈರ್ಯ ತುಂಬಿದ್ದಾರೆ.

  • ಸಚಿವ ಮಾಧುಸ್ವಾಮಿ ಸ್ವಕ್ಷೇತ್ರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಅವ್ಯವಸ್ಥೆ

    ಸಚಿವ ಮಾಧುಸ್ವಾಮಿ ಸ್ವಕ್ಷೇತ್ರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಅವ್ಯವಸ್ಥೆ

    ತುಮಕೂರು: ಸಚಿವ ಮಾಧುಸ್ವಾಮಿ ತವರು ಕ್ಷೇತ್ರ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.

    ಈ ಅವ್ಯವಸ್ಥೆ ಖಂಡಿಸಿ ಕೋವಿಡ್ ಸೋಂಕಿತರು ಕೇಂದ್ರದಿಂದ ಹೊರಗೆ ಬಂದು ಪ್ರತಿಭಟಿಸಿದ್ದಾರೆ. ಇಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಕೇಂದ್ರ ತೆರೆಯಲಾಗಿದ್ದು, ಸುಮಾರು 80 ಸೋಂಕಿತರಿದ್ದಾರೆ. ಸರಿಯಾದ ಊಟ ತಿಂಡಿ ಇವರಿಗೆ ಸಿಗುತ್ತಿಲ್ಲ. ಚಿಕಿತ್ಸೆಯಂತೂ ಇಲ್ಲವೇ ಇಲ್ಲ, ನರ್ಸ್, ಡಾಕ್ಟರ್ ಗಳು ಕೂಗಿ ಕರೆದರೂ ಬರುತ್ತಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ. ಬಹುತೇಕ ವೃದ್ಧರೇ ಇಲ್ಲಿ ಇರೋದ್ರಿಂದ ನಮ್ಮನ್ನು ಸಾಯಿಸಲು ಇಲ್ಲಿಗೆ ತಂದು ಕೂಡಿ ಹಾಕಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಇನ್ನೊಂದೆಡೆ ಮಧುಗಿರಿ ಪಟ್ಟಣದ ಸಮಾಜ ಕಲ್ಯಾಣ ಇಲಾಯ ಹಾಸ್ಟೆಲ್ ನಲ್ಲಿ ತೆರೆದ ಕೋವಿಡ್ ಕೇರ್ ಸೆಂಟರಲ್ಲೂ ಅವ್ಯವಸ್ಥೆ ಉಂಟಾಗಿದೆ. ಇದರಿಂದ ಬೇಸತ್ತ ಸೋಂಕಿತ ವೃದ್ಧ ರಂಗಪ್ಪ ಕೇರ್ ಸೆಂಟರ್ ನಿಂದ ತಪ್ಪಿಸಿಕೊಂಡು ಬಂದು ಪಟ್ಟಣ ತುಂಬಾ ಓಡಾಡಿದ್ದಾರೆ. ಸೋಂಕಿತ ವೃದ್ಧನ ಓಡಾಟ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

  • ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ – ನಮ್ಮನ್ನ ಮನೆಗೆ ಕಳುಹಿಸಿ ಎನ್ನುತ್ತಿರೋ ಸೋಂಕಿತರು

    ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ – ನಮ್ಮನ್ನ ಮನೆಗೆ ಕಳುಹಿಸಿ ಎನ್ನುತ್ತಿರೋ ಸೋಂಕಿತರು

    ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಕ್ವಾರಂಟೈನ್ ಆಗಿರುವ ಸೋಂಕಿತರ ಗೋಳು ಕೇಳೋರೆ ಇಲ್ಲ ಎನ್ನುವಂತಾಗಿದೆ.

    ಕೇರ್ ಸೆಂಟರ್ ನಲ್ಲಿ 40 ಜನರಿಗೆ ಮೂರು ಬಾತ್ ರೂಮ್, ಶೌಚಾಲಯಗಳಿವೆ. ಜೊತೆಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಸ್ನಾನಕ್ಕೆ ಕೇವಲ ನಾಲ್ಕು ಬಕೆಟ್ ಗಳು ಮಾತ್ರ ನೀಡಲಾಗಿದೆ. ಹಾಗಾಗಿ ಸೋಂಕಿತರು ಶೌಚಾಲಯ ಹಾಗೂ ಸ್ನಾನಕ್ಕಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಮಕ್ಕಳಿಗೆ ಹಾಲು ವಿತರಣೆ ಮಾಡದ ಹಿನ್ನೆಲೆ ಕಂದಮ್ಮಗಳ ಆಕ್ರಂದನ ಹೆತ್ತವರ ನಿದ್ದೆಗೆಡಿಸಿದೆ.

    ಮತ್ತೊಂದೆಡೆ ಕೋವಿಡ್ ಸೋಂಕಿತರು ಬಳಸಿದ ಬೆಡ್ ಸ್ಯಾನಿಟೈಸ್ ಮಾಡುತ್ತಿಲ್ಲ. ನಂತರ ಬರುವ ಸೋಂಕಿತರಿಗೆ ಅದೇ ಬೆಡ್ ನೀಡಲಾಗುತ್ತಿದೆ. ಸಮರ್ಪಕ ಊಟ ಸಿಗುತ್ತಿಲ್ಲ ಎಂದು ಕ್ವಾರಂಟೈನ್ ಆಗಿರುವ ಸೋಂಕಿತರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಲ್ಲದೆ ನಮ್ಮನ್ನು ಮನೆಗೆ ಕಳುಹಿಸಿ. ನಾವು ಅಲ್ಲೇ ಕ್ವಾರಂಟೈನ್ ಆಗುತ್ತೇವೆ ಎಂದು ಹೇಳುತ್ತಿದ್ದಾರೆ.

  • ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕರೆತರಲು ಅಧಿಕಾರಿಗಳ ಹರಸಾಹಸ

    ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕರೆತರಲು ಅಧಿಕಾರಿಗಳ ಹರಸಾಹಸ

    – ದೇವದುರ್ಗದ ಜಾಲಹಳ್ಳಿಯಲ್ಲಿ 105 ಜನಕ್ಕೆ ಸೋಂಕು

    ರಾಯಚೂರು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ದೇವದುರ್ಗದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಆದರೆ ಸೋಂಕಿತರು ಮಾತ್ರ ಕೋವಿಡ್ ಆರೈಕೆ ಕೇಂದ್ರಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಸೋಂಕಿತರು, ಮನೆಯಲ್ಲೇ ಉಳಿಯುತ್ತಿದ್ದಾರೆ. ಹೀಗಾಗಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಕರೆತರಲು ದೇವದುರ್ಗ ತಹಶೀಲ್ದಾರ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

    ಎರಡನೇ ಅಲೆಯಲ್ಲಿ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮವೊಂದರಲ್ಲೇ 105 ಜನಕ್ಕೆ ಕೊರೊನಾ ಸೋಂಕು ಧೃಡವಾಗಿದೆ. ಇದುವರೆಗೆ 8ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಜಾಲಹಳ್ಳಿ ಗ್ರಾಮದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ದೇವದುರ್ಗ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸೋಂಕಿತರನ್ನ ಕರೆತರುವ ಯತ್ನ ನಡೆದಿದೆ. ಸೋಂಕಿತರ ಮನೆ ಮನೆಗೆ ಹೋಗಿ ತಹಶೀಲ್ದಾರ್ ಕರೆದರೂ ಕೇರ್ ಸೆಂಟರ್ ಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ.

    ಕೇವಲ ದೇವದುರ್ಗ ತಾಲೂಕು ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆ ತೆರೆಯಲಾದ ಒಟ್ಟು 7 ಕೋವಿಡ್ ಸೆಂಟರ್ ಗಳಿಗೆ ದಾಖಲಾಗಲು ಸೋಂಕಿತರು ಮುಂದೆ ಬರುತ್ತಿಲ್ಲ. ಇನ್ನೊಂದೆಡೆ ಗ್ರಾಮೀಣ ಭಾಗದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

  • ಕೊರೊನಾ ಸೋಂಕಿತರ ಊಟಕ್ಕಾಗಿ ಚಪಾತಿ ಮಾಡಿದ ಗವಿ ಶ್ರೀ

    ಕೊರೊನಾ ಸೋಂಕಿತರ ಊಟಕ್ಕಾಗಿ ಚಪಾತಿ ಮಾಡಿದ ಗವಿ ಶ್ರೀ

    ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಆರೈಕೆಗೆ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ ಗವಿಮಠದ ಶ್ರೀಗಳು, ಇದೀಗ ಸೋಂಕಿತರ ಊಟಕ್ಕಾಗಿ ದಾಸೋಹ ಭವನದಲ್ಲಿ ತಾವೇ ಚಪಾತಿ ಮಾಡುವ ಮೂಲಕ ಇತರರಿಗೂ ಸ್ಫೂರ್ತಿ ತುಂಬಿ ಗಮನ ಸೆಳೆದಿದ್ದಾರೆ.

    ಗವಿಸಿದ್ದೇಶ್ವರ ಸ್ವಾಮೀಜಿ ಸರಳತೆಗೆ ಸಾಕ್ಷಿಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಮಠದ ಯಾವ ಕೆಲಸವನ್ನೂ ಇತರೆ ಜನರಿಗೆ ಹೇಳದೇ ತಾವೇ ಮುಂದೆ ನಿಂತು ಮಾಡಿದ್ದಾರೆ. ಇದನ್ನು ನೋಡುವ ಭಕ್ತಗಣವು ಶ್ರೀಗಳೇ ಕೆಲಸಕ್ಕೆ ಸಜ್ಜಾಗಿದ್ದಾರೆ, ನಾವೇಕೆ ಸುಮ್ಮನೆ ನಿಲ್ಲಬೇಕೆಂದು ಕಾಯಕದಲ್ಲಿ ತೊಡಗುತ್ತಿದ್ದಾರೆ. ಹೀಗೆ ಕಾಯಕಕ್ಕೆ ಇತರರಿಗೆ ಪ್ರೇರಣೆಯಾಗುವ ಶ್ರೀಗಳು, ಇದೀಗ ತಾವೇ ಚಪಾತಿ ಮಾಡಿದ್ದಾರೆ.

    ಇತ್ತೀಚೆಗೆ ಗವಿಮಠದ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಿಗೆ ಮಠದಿಂದಲೇ ಅಡುಗೆಯನ್ನು ಸಿದ್ಧಪಡಿಸಿ ಪ್ಯಾಕೆಟ್ ರೂಪದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಈ ವೇಳೆ ದಾಸೋಹ ಭವನದ ಮಹಿಳೆಯರಿಗೆ ಸ್ಫೂರ್ತಿ ತುಂಬಲು ತಾವೇ ದಾಸೋಹದ ಅಡುಗೆ ಕೋಣೆಗೆ ತೆರಳಿ ಅವರೊಟ್ಟಿಗೆ ಕುಳಿತು ಚಪಾತಿ ಮಾಡಿದ್ದಾರೆ.

    ಅಭಿನವ ಶ್ರೀಗಳು ಈ ಹಿಂದೆಯೂ ಜಾತ್ರೆಯ ಸಂದರ್ಭದಲ್ಲಿ ಮಠದ ಆವರಣದಲ್ಲಿ ಕಸ ಗುಡಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು ಸೇರಿದಂತೆ ಇತರೆ ಕಾರ್ಯದಲ್ಲಿ ತೊಡಗಿ ಸ್ಫೂರ್ತಿಯಾಗಿದ್ದರು. ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಮಿಕರೊಂದಿಗೆ ಸರಳತೆಯಿಂದ ಬೆರೆತು ಕಸ ಗುಡಿಸಿದ್ದರು. ಇದೀಗ ಸೋಂಕಿತರ ಊಟಕ್ಕಾಗಿ ದಾಸೋಹ ಭವನದಲ್ಲಿ ಚಪಾತಿ ಮಾಡುವ ಮೂಲಕ ಬಾಣಸಿಗರಿಗೆ ಕೋವಿಡ್ ವೇಳೆ ಸ್ಫೂರ್ತಿ ತುಂಬಿದ್ದಾರೆ.

  • ಆರ್‌ಆರ್‌ ನಗರದಲ್ಲಿ 400 ಹಾಸಿಗೆಗಳ ಸುಸಜ್ಜಿತ ಕೋವಿಡ್ ಆಸ್ಪತ್ರೆ ನಿರ್ಮಾಣ: ಶಾಸಕ ಮುನಿರತ್ನ

    ಆರ್‌ಆರ್‌ ನಗರದಲ್ಲಿ 400 ಹಾಸಿಗೆಗಳ ಸುಸಜ್ಜಿತ ಕೋವಿಡ್ ಆಸ್ಪತ್ರೆ ನಿರ್ಮಾಣ: ಶಾಸಕ ಮುನಿರತ್ನ

    ಬೆಂಗಳೂರು: ಆರ್.ಆರ್.ನಗರ ಕ್ಷೇತ್ರದ ಶಾಸಕ ಮುನಿರತ್ನ ಜನಪ್ರತಿನಿಧಿಗಳಿಗೆ ಮಾದರಿಯಾಗುವ ಕೆಲಸ ಮಾಡಿದ್ದಾರೆ. ಆರ್.ಆರ್.ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಆಕ್ಸಿಜನ್, ಐಸಿಯು ಹಾಗೂ ವೆಂಟಿಲೇಟರ್ ಸಹಿತ 400 ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನು ಸದ್ಯದಲ್ಲೇ ಆರಂಭಿಸುತ್ತಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ ಅವರು, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ, ದೂರ ದೃಷ್ಟಿಯಿಂದ ಸುಮಾರು 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ನಡೆಯುತ್ತಿದೆ. ಕೇವಲ 40 ದಿನಗಳಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಇದು ಕೋವಿಡ್ ಕೇರ್ ಸೆಂಟರ್ ಅಲ್ಲ, ಆಸ್ಪತ್ರೆ. 200 ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಪ್ರತ್ಯೇಕವಾಗಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

    ಒಟ್ಟು 400 ಹಾಸಿಗೆಗಳ ಆಸ್ಪತ್ರೆ 75 ಐಸಿಯು ಬೆಡ್, 300 ಆಕ್ಸಿಜನ್ ಬೆಡ್, 25-30 ಹೈ ಫ್ಲೋ ಆಕ್ಸಿಜನ್ ಬೆಡ್ ಒಳಗೊಂಡಿದೆ. ಅಲ್ಲದೆ ನಮ್ಮ ಕ್ಷೇತ್ರದಲ್ಲಿ 10 ಸಾವಿರ ಲೀಟರ್ ಆಕ್ಸಿಜನ್ ಸ್ಟೋರ್ ಮಾಡಿಕೊಳ್ಳುವ ಟ್ಯಾಂಕ್ ನಿರ್ಮಿಸಲಾಗುತ್ತಿದೆ ಎಂದು ಮುನಿರತ್ನ ಅವರು ವಿವರಿಸಿದರು.

    ಈ ಬಾರಿ ಅತೀ ಹೆಚ್ಚು ಸಾವು ಸಂಭವಿಸಿರುವುದು ನೋವು ತಂದಿದೆ. 5 ಲಕ್ಷ ಮತದಾರರಿರುವ ನಮ್ಮ ಆರ್.ಆರ್ ನಗರ ಕ್ಷೇತ್ರದಲ್ಲಿ ಸಹ ಹೆಚ್ಚು ಸಾವು ಸಂಭವಿಸಿವೆ. ಹೀಗಾಗಿ ಆರ್.ಆರ್.ನಗರದಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ. ಗಂಭೀರ ಸ್ವರೂಪದ ಸೋಂಕಿತರಿಗೆ ಇದರಿಂದ ಸಹಾಯವಾಗಲಿದ್ದು, ಐಸಿಯು ಬೆಡ್ ಸಮಸ್ಯೆ ನೀಗಲಿದೆ ಎಂದರು.

    ಕೊರೊನಾ ಮೊದಲ ಅಲೆ ಮಾರ್ಚ್‍ನಲ್ಲಿ ಆರಂಭವಾಗಿ, ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಇಳಿಕೆಯಾಗಿತ್ತು. ಈ ವರ್ಷ ಸಹ ಮಾರ್ಚ್‍ನಲ್ಲಿ 2ನೇ ಅಲೆ ಆರಂಭವಾಗಿದೆ. ಮಾರ್ಚ್, ಏಪ್ರಿಲ್‍ನಲ್ಲಿ ಅತೀ ಹೆಚ್ಚು ಸಾವು ಸಂಭವಿಸಿವೆ. ನಮ್ಮ ಸರ್ಕಾರ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ನಾಯಕರು, ಉಸ್ತುವಾರಿ ಸಚಿವರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಾವು ಸಂಭವಿಸಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದರು.

    ಮುನಿರತ್ನ ಅವರ ಕಾರ್ಯವೈಖರಿಗೆ ವಾರ್ ರೂಂ ಮುಖ್ಯಸ್ಥರೂ ಆಗಿರುವ ಸಚಿವ ಅರವಿಂದ ಲಿಂಬಾವಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಎಲ್ಲ ಜನಪ್ರತಿನಿಧಿಗಳು ಕೈ ಜೋಡಿಸಿ ಕೊರೊನಾ ತೊಲಗಿಸಬೇಕಿದೆ. ಕೊರೊನಾ ಯುದ್ಧದಲ್ಲಿ ಮುನಿರತ್ನ ಕೈಜೋಡಿಸಿರುವುದು ಖುಷಿ ತಂದಿದೆ. ಆಕ್ಸಿಜನ್, ಐಸಿಯು, ವೆಂಟಿಲೇಟರ್ ಸೌಲಭ್ಯ ಹೊಂದಿರುವ ಚಿಕಿತ್ಸಾ ಕೇಂದ್ರವನ್ನು ಆರಂಭಿಸುವ ಮೂಲಕ ಮಾದರಿಯಾಗಿದ್ದಾರೆ ಎಂದಿದ್ದಾರೆ.

  • ಕೋವಿಡ್ ಕೇರ್ ಸೆಂಟರ್‍ ಗೆ ಕನ್ನ ಹಾಕಿದ ಕಳ್ಳ – ಸಿಸಿಟಿವಿಯಲ್ಲಿ ಸೆರೆ

    ಕೋವಿಡ್ ಕೇರ್ ಸೆಂಟರ್‍ ಗೆ ಕನ್ನ ಹಾಕಿದ ಕಳ್ಳ – ಸಿಸಿಟಿವಿಯಲ್ಲಿ ಸೆರೆ

    ಹುಬ್ಬಳ್ಳಿ: ಕೋವಿಡ್ ಕೇರ್ ಸೆಂಟರ್‍ ನಲ್ಲಿ ಕರ್ತವ್ಯ ನಿರತ ವೈದ್ಯರ ಮೊಬೈಲ್‍ನ್ನು ಕಳ್ಳತನ ಮಾಡಿರುವ ಘಟನೆಯೊಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ನಡೆದಿದೆ. ಕಳ್ಳನ ಕೈಚಳಕ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರೊಬ್ಬರು ತನ್ನ ಮೇಜಿನ ಮೇಲೆ ಮೊಬೈಲ್‍ನ್ನು ಇಟ್ಟು ರೋಗಿಗಳನ್ನು ವಿಚಾರಿಸುತ್ತಿದ್ದರು. ಈ ಸಮಯವನ್ನು ಬಳಸಿಕೊಂಡ ವ್ಯಕ್ತಿಯೋರ್ವ ಐವತ್ತು ಸಾವಿರ ಬೆಲೆಯುಳ್ಳ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಕಳ್ಳತನ ಮಾಡಿರುವ ದೃಶ್ಯ ಹಾಗೂ ಕಳ್ಳನ ಸಂಪೂರ್ಣ ಚಲನವಲನ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಾಕಿ ಕಳ್ಳ ಅಟೆಂಡರ್ ಸೋಗಿನಲ್ಲಿ ಬಂದು ಮೊಬೈಲ್ ಕಳ್ಳತನ ಮಾಡಿರುವುದು ವರದಿಯಾಗಿದೆ.

    ಆಸ್ಪತ್ರೆಗೆ ಬಂದಂತಹ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದಾಗ ಮೊಬೈಲ್ ಎಗರಿಸಿದ ಕಳ್ಳನ ವಿರುದ್ಧ ವೈದ್ಯರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.