Tag: ಕೋವಿಡ್ ಆಂಟಿವೈರಲ್ ಡ್ರಗ್

  • 35 ರೂ. ಬೆಲೆ ಬಾಳುವ ಕೋವಿಡ್ ಆಂಟಿವೈರಲ್ ಡ್ರಗ್ ಮುಂದಿನ ವಾರ ಮಾರುಕಟ್ಟೆಗೆ

    35 ರೂ. ಬೆಲೆ ಬಾಳುವ ಕೋವಿಡ್ ಆಂಟಿವೈರಲ್ ಡ್ರಗ್ ಮುಂದಿನ ವಾರ ಮಾರುಕಟ್ಟೆಗೆ

    ನವದೆಹಲಿ: 35 ರೂಪಾಯಿ ಬೆಲೆಯ ಕೋವಿಡ್ -19 ಆಂಟಿವೈರಲ್ ಡ್ರಗ್ ಮೊಲ್ನುಪಿರಾವಿರ್ ಮುಂದಿನ ವಾರ ಬಿಡುಗಡೆ ಮಾಡಲಾಗುವುದು ಎಂದು ಮ್ಯಾನ್‍ಕೈಂಡ್ ಫಾರ್ಮಾ ಕಂಪನಿ ಮುಖ್ಯಸ್ಥರಾದ ಆರ್ ಸಿ ನುನೇಜಾ ಹೇಳಿದ್ದಾರೆ.

    ಕೊರೊನಾ ಸೋಂಕಿರುವವರ ಸಂಪೂರ್ಣ ಚಿಕಿತ್ಸೆಗೆ 1,400 ರೂ. ಐದು ದಿನಗಳವರೆಗೆ ದಿನಕ್ಕೆ ಎರಡು ಬಾರಿ ಮೊಲ್ನುಪಿರವಿರ್ 800 ಎಂಜಿ ತಗೆದುಕೊಳ್ಳಬಹುದು. ರೋಗಿಯು 200 ಎಂಜಿ ಹೊಂದಿರುವ 40 ಕ್ಯಾಪ್ಸುಲ್‍ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

    ಸಿಪ್ಲಾ ಮೊಲ್ನುಪಿರವಿರ್ ಅವನ್ನು ಸಿಪ್ಮೋಲ್ನು ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.  200mg ಕ್ಯಾಪ್ಸುಲ್‍ಗಳು ಮುಂದಿನ ದಿನಗಳಲ್ಲಿ ದೇಶಾದ್ಯಂತದ ಪ್ರಮುಖ ಔಷಧಾಲಯಗಳು ಮತ್ತು ಕೊವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಲಭ್ಯವಿರುತ್ತವೆ.

    ಎಂಎಸ್‍ಡಿ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪ್ಯೂಟಿಕ್ಸ್ ಅಭಿವೃದ್ಧಿಪಡಿಸಿದ ಮೊಲ್ನುಪಿರಾವನ್ನು ಕೊರೊನಾ ಲಕ್ಷಣ ಇರುವ ರೋಗಿಗಳ ಚಿಕಿತ್ಸೆಗಾಗಿ ಯುಕೆ ಮೆಡಿಸಿನ್ಸ್ ಮತ್ತು ಹೆಲ್ತ್‍ಕೇರ್ ಉತ್ಪನ್ನಗಳ ನಿಯಂತ್ರಣ ಸಂಸ್ಥೆ ಮತ್ತು ಯುಎಸ್ ಆಹಾರ ಮತ್ತು ಔಷಧ ಆಡಳಿತದಿಂದ ಅನುಮೋದಿಸಲಾಗಿದೆ. ಕೋವಿಡ್ ಸೋಂಕಿಗೆ ಒಳಗಾಗಿರುವ ವಯಸ್ಕ ರೋಗಿಗಳ ತುರ್ತು ಚಿಕಿತ್ಸೆಯ ಸೀಮಿತ ಬಳಕೆಗಾಗಿ ಡ್ರಗ್ ತೆಗೆದುಕೊಳ್ಳಬಹುದು ಎಂದು ಶಿಫಾರಸು ಮಾಡಲಾಗಿದೆ.

    ಸಿಪ್ಲಾ, ಸನ್ ಫಾರ್ಮಾ ಮತ್ತು ಡಾ ರೆಡ್ಡೀಸ್ ಲ್ಯಾಬೋರೇಟರೀಸ್ ಕೂಡ ಮುಂಬರುವ ವಾರಗಳಲ್ಲಿ ಮೊಲ್ನುಪಿರವಿರ್ ಕ್ಯಾಪ್ಸುಲ್‍ಗಳನ್ನು ಬಿಡುಗಡೆ ಮಾಡಲಿದೆ. ಇತರ ಕಂಪನಿಗಳ ಔಷಧದ ಸಂಪೂರ್ಣ ಚಿಕಿತ್ಸೆಗೆ ರೂ. 2,000 ರಿಂದ 3,000 ರೂಪಾಯಿ ವೆಚ್ಚವಾಗಲಿದೆ ಎಂದು ವರದಿಗಳು ತಿಳಿಸಿವೆ. ಬಹುಪಾಲು ಕಂಪನಿಗಳು ಭಾರತದಲ್ಲಿ ಮತ್ತು 100 ಕ್ಕೂ ಹೆಚ್ಚು ದೇಶಗಳಲ್ಲಿ ಮೊಲ್ನುಪಿರವಿರ್ ತಯಾರಿಸಲು ಮತ್ತು ಪೂರೈಸಲು ಮೆರ್ಕ್ ಶಾರ್ಪ್ ಡೋಹ್ಮ್‍ನೊಂದಿಗೆ ಸ್ವಯಂಪ್ರೇರಿತ ಪರವಾನಗಿ ಒಪ್ಪಂದವನ್ನು ಮಾಡಿಕೊಂಡಿವೆ.

    ಟೊರೆಂಟ್, ಸಿಪ್ಲಾ, ಸನ್ ಫಾರ್ಮಾ, ಡಾ ರೆಡ್ಡೀಸ್, ನ್ಯಾಟ್ಕೊ, ಮೈಲಾನ್ ಮತ್ತು ಹೆಟೆರೊ ಸೇರಿದಂತೆ 13 ಭಾರತೀಯ ಔಷಧೀಯ ಕಂಪನಿಗಳು ಬಾಯಿ ಮೂಲಕ ಸೇವಿಸುವ ಮಾತ್ರೆಯನ್ನು ಉತ್ಪಾದಿಸಲಿದೆ.