Tag: ಕೋವಿ

  • ಕೇರಳದಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ: ಗನ್ ಹಿಡಿದು ಮಕ್ಕಳನ್ನು ಮದರಸಾಗೆ ಕಳುಹಿಸಿದ ವ್ಯಕ್ತಿ

    ಕೇರಳದಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ: ಗನ್ ಹಿಡಿದು ಮಕ್ಕಳನ್ನು ಮದರಸಾಗೆ ಕಳುಹಿಸಿದ ವ್ಯಕ್ತಿ

    ತಿರುವನಂತಪುರಂ: ಕೇರಳದಲ್ಲಿ(Kerala) ಬೀದಿ ನಾಯಿಗಳ(Stray Dog) ಹಾವಳಿ ಹೆಚ್ಚುತ್ತಿರುವುದರೊಂದಿಗೆ ಅವುಗಳಿಂದ ಜನರ ಮೇಲೆ ದಾಳಿ ನಡೆಯುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಇದರ ಹಿನ್ನೆಲೆ ವ್ಯಕ್ತಿಯೊಬ್ಬರು ಮಕ್ಕಳ ಮೇಲೆ ನಾಯಿಗಳಿಂದ ಯಾವುದೇ ದಾಳಿಯಾಗಬಾರದು ಎಂಬ ಕಾರಣಕ್ಕೆ ಕೋವಿ(Gun) ಹಿಡಿದು ಅವರನ್ನು ಮದರಸಾಗೆ ಕಳುಹಿಸಿದ ಘಟನೆ ನಡೆದಿದೆ.

    ಕಾಸರಗೋಡಿನ(Kasaragod) ವ್ಯಕ್ತಿ ಸಮೀರ್ ನಾಯಿಗಳಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂಬ ಕಾರಣಕ್ಕೆ ಕೋವಿ ಹಿಡಿದು, ಮಕ್ಕಳನ್ನು ಮದರಸಾಗಳಿಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಪಾಳು ಬಾವಿಗೆ ಎಸೆದಿದ್ದ ಹಸುಗೂಸಿಗೆ ಹಾಲುಣಿಸಿ ವಾತ್ಸಲ್ಯ ಮೆರೆದ ಗ್ರಾಮದ ಮಹಿಳೆ

    dog

    ಬೀದಿ ನಾಯಿಗಳ ಕಾಟದಿಂದಾಗಿ ಜನರು ರಸ್ತೆಗಳಲ್ಲಿ ಓಡಾಡಲು ಕಷ್ಟಪಡುವಂತಾಗಿದೆ. ಕಾಸರಗೋಡಿನ ಬೇಕಲ ಪ್ರದೇಶದಲ್ಲಿಯೇ ಕಳೆದ 1 ವಾರದಲ್ಲಿ 10 ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ. ಕೇರಳದಲ್ಲಿ ಈ ವರ್ಷ ಬೀದಿ ನಾಯಿ ದಾಳಿ ಪ್ರಕರಣಗಳು ಏರಿಕೆಯಾಗಿವೆ. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ

    Live Tv
    [brid partner=56869869 player=32851 video=960834 autoplay=true]

  • ಜಮ್ಮಾ ಹಿಡುವಳಿದಾರರು ಕೋವಿ ಹೊಂದುವುದು ಸಂವಿಧಾನಬದ್ಧ ಹಕ್ಕು – ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

    ಜಮ್ಮಾ ಹಿಡುವಳಿದಾರರು ಕೋವಿ ಹೊಂದುವುದು ಸಂವಿಧಾನಬದ್ಧ ಹಕ್ಕು – ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

    – ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ಕೊಡಗಿನ ಜನತೆ
    – ಕ್ಯಾ.ಚೇತನ್ ಸಲ್ಲಿಸಿದ್ದ ಪಿಐಎಲ್ ವಜಾ

    ಮಡಿಕೇರಿ: ಜುಮ್ಮಾ ಹಿಡುವಳಿದಾರರಿಗೆ ಸರ್ಕಾರ ನೀಡಿರುವ ಕೋವಿಯ ವಿಶೇಷ ಹಕ್ಕನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

    ಕೊಡಗಿನಲ್ಲಿ ಜಮ್ಮಾ ಹಿಡುವಳಿದಾರರು ಕೋವಿ ಹೊಂದುವುದು ವಿಶೇಷವಾದ ಹಕ್ಕು. ಆದರೆ ಆದರೆ ಜಮ್ಮಾ ಹಿಡುವಳಿದಾರರಿಗೆ ಸರ್ಕಾರ ನೀಡಿರುವ ಈ ವಿಶೇಷ ಹಕ್ಕನ್ನು ಪ್ರಶ್ನಿಸಿ ಕೊಡಗಿನವರೇ ಆದ ಕ್ಯಾಪ್ಟನ್ ಚೇತನ್ ಅವರು ಪಿಐಎಲ್ ಸಲ್ಲಿಸಿದ್ದರು. ಇದನ್ನೂ ಓದಿ: ಫೋಟೋ ಪಾಲಿಟಿಕ್ಸ್-ಮೋದಿ ಭಾವಚಿತ್ರ ಅಳವಡಿಕೆಗೆ ಜೆಡಿಎಸ್ ವಿರೋಧ

    ಈ ಹಕ್ಕಿನ ಪರವಾಗಿ ಎ. ಎಸ್ ಪೊನ್ನಣ್ಣ, ಸಜನ್ ಪೂವಯ್ಯ ವಾದ ಮಂಡಿಸಿ, ಕೋವಿ ಕೊಡಗಿನವರ ಆಯುಧ ಅಷ್ಟೇ ಅಲ್ಲ. ಅದೊಂದು ಭಾವನಾತ್ಮಕ ವಿಷಯ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು. ಇದನ್ನೂ ಓದಿ: ಮಾರಾಟವಾಗಿದ್ದ 2 ತಿಂಗಳ ಗಂಡು ಮಗು ಪತ್ತೆ- 6 ಸಾವಿರಕ್ಕೆ ತಾಯಿಯಿಂದಲೇ ಕಂದಮ್ಮನ ಮಾರಾಟ

    ಸ್ವತಂತ್ರ ಪೂರ್ವದಿಂದಲೂ ಕೊಡಗಿನವರ ಬಳಿ ಕೋವಿ ಇದ್ದರೂ ಅದನ್ನು ಇದುವರೆಗೆ ಎಂತಹದ್ದೇ ಸಂದರ್ಭದಲ್ಲೂ ದುರ್ಬಳಕೆ ಮಾಡಿಲ್ಲ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಎರಡು ಕಡೆಯ ವಾದ ಆಲಿಸಿದ ನ್ಯಾಯಾಲಯ ಪಿಐಎಲ್ ವಜಾಗೊಳಿಸಿ ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದುವುದು ಸಂವಿಧಾನಬ್ಧವಾಗಿದೆ ಎಂದು ಹೇಳಿ ಈ ವಿಶೇಷ ಹಕ್ಕನ್ನು ಮುಂದುವರೆಸುವಂತೆ ಮಹತ್ವದ ಆದೇಶ ಪ್ರಕಟಿಸಿದೆ.

    ಈ ತೀರ್ಪು ನೀಡುತ್ತಿದ್ದಂತೆ ಕೊಡಗಿನ ಹಲವೆಡೆ ಜಮ್ಮಾ ಹಿಡುವಳಿದಾರರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ. ಕ್ಯಾಪ್ಟನ್ ಚೇತನ್ ಅವರು ಕೂಡ ಲೈಸೆನ್ಸ್ ಪಡೆದು ಕೋವಿ ಹೊಂದಬಹುದು. ಆದರೆ ತನಗೆ ಕೋವಿ ಹಕ್ಕಿನ ವಿನಾಯ್ತಿ ಇಲ್ಲವೆಂದು ಕೋರ್ಟ್ ಮೆಟ್ಟಿಲೇರಿರುವುದು ಸರಿಯಲ್ಲ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    1959 ರ ಸಶಸ್ತ್ರ ಕಾಯ್ದೆ ಸೆಕ್ಷನ್ 3 ಮತ್ತು 4 ರ ಅನ್ವಯ ಕೂರ್ಗ್ ಬೈರೇಸ್ ಮತ್ತು ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದುವುದಕ್ಕೆ ದೇಶದ ಸಂವಿಧಾನದಲ್ಲೇ ವಿನಾಯ್ತಿ ನೀಡಲಾಗಿದೆ. ಈ ಹಕ್ಕನ್ನು ಯಥವತ್ತಾಗಿ ಮುಂದುವರೆಸಬಹುದು ಎಂದು 1963 ರಲ್ಲಿ ಕೇಂದ್ರ ಸರ್ಕಾರ ಹೇಳಿತ್ತು.

    ಕೊಡಗಿನಲ್ಲಿ ಕೋವಿ ಅಂದರೆ ಅದೊಂದು ಬರೀ ಆಯುಧವಲ್ಲ. ಬದಲಾಗಿ ಅದಕ್ಕೆ ಮಹತ್ವದ ಮತ್ತು ಪೂಜನೀಯ ಸ್ಥಾನವಿದೆ. ಇಲ್ಲಿ ಗಂಡುಮಗುವೊಂದು ಹುಟ್ಟಿದರೆ ಯಾರಾದರೂ ಸತ್ತರು ಗಾಳಿಯಲ್ಲಿ ಗುಂಡು ಹಾರಿಸಲಾಗುತ್ತದೆ. ಅಷ್ಟೇ ಯಾಕೆ ಕೊಡಗಿನ ಸುಗ್ಗಿ ಹಬ್ಬವಾಗಿರುವ ಪುತ್ತರಿಯಲ್ಲೂ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವಾಗಲೂ ಗುಂಡು ಹಾರಿಸಿ, ಧಾನ್ಯ ಲಕ್ಷ್ಮಿಗೆ ಗೌರವ ಸಲ್ಲಿಸಿ, ಬಳಿಕ ಮೆರವಣಿಗೆ ಮೂಲಕ ತಂದು ಮನೆ ತುಂಬಿಸಿಕೊಳ್ಳಲಾಗುತ್ತದೆ.